Difference between revisions of "Linux/C2/General-Purpose-Utilities-in-Linux/Kannada"

From Script | Spoken-Tutorial
Jump to: navigation, search
Line 58: Line 58:
 
|-
 
|-
 
|2:32
 
|2:32
|<b>ನಾವು ಪ್ರಾಂಪ್ಟಿನಲ್ಲಿ ಅ ಮುದ್ರಣ ಒಂದೇ ಸಾಲಿನಲ್ಲಿ ಒಂದು ಕಮಂಡ್ ನಮೂದಿಸಿ ನಂತರ ತೋರಿಸಲ್ಪಡುತ್ತದೆ ಎಂದು ನೋಡಬಹುದು.</b>
+
|ಇಲ್ಲಿ Enter a command ಎಂದಿರುವ ಸಾಲಿನಲ್ಲೇ ಪ್ರಾಂಪ್ಟ್ ಇರುವುದನ್ನು ನೀವು ಗಮನಿಸಬಹುದು.
 
|-
 
|-
 
|2:38
 
|2:38

Revision as of 16:39, 5 March 2014

Time Narration
0:00 ಹಾಯ್, ಜನರಲ್ ಪರ್ಪಸ್ ಯುಟಿಲಿಟೀಸ್ ಇನ್ ಲಿನಕ್ಸ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
0:06 ಈ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ನ ಮೂಲಭೂತ ಹಾಗೂ ಹೆಚ್ಚಾಗಿ ಉಪಯೋಗಿಸುವ ಕಮಾಂಡ್ ಗಳ ಬಗ್ಗೆ ಪರಿಚಿತರಾಗೋಣ.
0:14 ಲಿನಕ್ಸ್ ನ ಜೊತೆ ನೀವು ಕಾರ್ಯಾರಂಭ ಮಾಡಬೇಕೆನ್ನುವುದೇ ಈ ಟ್ಯುಟೋರಿಯಲ್ ನ ಮುಖ್ಯ ಉದ್ದೇಶ.
0:21 ನಾವು ನೋಡುತ್ತಿರುವ ಮೊದಲ ಕಮಾಂಡ್ echo ಕಮಾಂಡ್ ಆಗಿದೆ. ಇಲ್ಲಿ ಗಮನಿಸಿ, ಲಿನಕ್ಸ್ ನ ಕಮಾಂಡ್ ಗಳು ಕೇಸ್ ಸೆನ್ಸಿಟಿವ್ ಆಗಿವೆ.
0:29 ಇಲ್ಲಿ ಎಲ್ಲಾ ಕಮಾಂಡ್ ಗಳು ಮತ್ತು ಅವುಗಳ ವಿಕಲ್ಪಗಳು ಸಣ್ಣ ಅಕ್ಷರದಲ್ಲಿವೆ, ಅಥವಾ ಇಲ್ಲದಿದ್ದಲ್ಲಿ ಅವನ್ನು ಉಲ್ಲೇಖಿಸಲಾಗಿದೆ.
0:36 ಈ ಕಮಾಂಡ್ ಅನ್ನು ಪರದೆಯ ಮೇಲೆ ಕೆಲವು ಸಂದೇಶವನ್ನು ತೋರಿಸಲು ಬಳಸಲಾಗುತ್ತದೆ. ಟರ್ಮಿನಲ್ ಅನ್ನು ಬದಲಾಯಿಸಿ.
0:43 ಉಬಂಟುವಿನಲ್ಲಿ ಟರ್ಮಿನಲ್ ಅನ್ನು ಆರಂಭಿಸಲು Ctrl Alt t ಸಹಾಯ ಮಾಡುತ್ತದೆ.
0:48 ಈ ಆದೇಶವು ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತದೆ ಎಂದೇನೂ ಇಲ್ಲ.
0:52 ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
0:58 ಪ್ರಾಂಪ್ಟ್ ನಲ್ಲಿ echo ಸ್ಪೇಸ್ Hello World ಎಂದು ಟೈಪ್ ಮಾಡಿ ಎಂಟರ್ ಕೀ ಒತ್ತಿ
1:08 ಇದು ಪರದೆಯ ಮೇಲೆ ಸಾಮನ್ಯವಾಗಿ Hello World ಎಂಬ ಸಂದೇಶವನ್ನು ಮುದ್ರಿಸುತ್ತದೆ.
1:14 ನಾವು ವೇರಿಯೇಬಲ್ ಮೌಲ್ಯವನ್ನು ಪ್ರದರ್ಶಿಸಲು echo ಕಮಾಂಡ್ ಅನ್ನು ಸಹ ಬಳಸಬಹುದು.
1:19 ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ದೊಡ್ಡ ಅಕ್ಷರಗಳಲ್ಲಿ SHELL ಎಂದು ಟೈಪ್ ಮಾಡಿ ಎಂಟರ್ ಅನ್ನು ಒತ್ತಿ.
1:30 ಇದು ಪ್ರಸ್ತುತ ಉಪಯೋಗಿಸುತ್ತಿರುವ ಶೆಲ್ ಅನ್ನು ಫಲಿತ ರೂಪದಲ್ಲಿ ತೋರಿಸುತ್ತದೆ.
1:36 ನಾವು echo ಅದೇಶದೊಂದಿಗೆ ಎಸ್ಕೇಪ್ ಸೀಕ್ವೆನ್ಸೀಸ್ ಅನ್ನೂ ಬಳಸಬಹುದು.
1:42 ಲಿನಕ್ಸ್ ನಲ್ಲಿ ಇದಕ್ಕಾಗಿ ನಾವು -e (ಹೈಫನ್ e)ಆಯ್ಕೆಯನ್ನು ಬಳಸಬೇಕಾಗುತ್ತದೆ.
1.46 ಸಾಮಾನ್ಯವಾದ ಎಸ್ಕೇಪ್ ಸೀಕ್ವೆನ್ಸ್ ಗಳೆಂದರೆ, ಟ್ಯಾಬ್ ಗೆ \t (backslash t) ಎಂದು, ಹೊಸ ಸಾಲಿಗಾಗಿ \n ಎಂದು ಮತ್ತು \c ಇದು ಬಳಸಿದಾಗ ಪ್ರಾಂಪ್ಟ್ ಅನ್ನು ಒಂದೇ ಸಾಲಿನಲ್ಲಿ ತೋರಿಸಲು \c ಎಂದು ಆಗಿವೆ.
2:03 ಈದು, ಏನಾದರೂ ಎಂಟರ್ ಮಾಡುವ ಮೊದಲು ನಮಗೆ ಪ್ರಾಂಪ್ಟ್ ಸಂದೇಶವು ಬೇಕೆನಿಸಿದಲ್ಲಿ ಉಪಯೋಗಕರವಾಗಿದೆ. ಪ್ರಾಂಪ್ಟಿನಲ್ಲಿ echo ಸ್ಪೇಸ್ ಮೈನಸ್ e, ಮತ್ತು ಸಿಂಗಲ್ ಕೋಟ್ ನ ಮಧ್ಯದಲ್ಲಿ Enter a command \c ಎಂದು ಟೈಪ್ ಮಾಡಿ ಎಂಟರ್ ಒತ್ತಿ.
2:32 ಇಲ್ಲಿ Enter a command ಎಂದಿರುವ ಸಾಲಿನಲ್ಲೇ ಪ್ರಾಂಪ್ಟ್ ಇರುವುದನ್ನು ನೀವು ಗಮನಿಸಬಹುದು.
2:38 ನೀವು ಉಪಯೋಗಿಸುತ್ತಿರುವ ಲಿನಕ್ಸ್ ಕರ್ನಲ್ ಯಾವ ಆವೃತ್ತಿಯದೆಂದು ತಿಳಿಯಬಯಸಬಹುದು.
2:43 ಇದರ ಬಗ್ಗೆ ಹಾಗೂ ಯಂತ್ರದ ಅನ್ಯ ವಿಶೇಷತೆಗಳ ಬಗ್ಗೆ ತಿಳಿಯಲು ನಮ್ಮಲ್ಲಿ uname ಎಂಬ ಕಮಾಂಡ್ ಇದೆ. ಪ್ರಾಂಪ್ಟಿನಲ್ಲಿ uname ಸ್ಪೇಸ್ - (Hyphen) r ಎಂದು ಟೈಪ್ ಮಾಡಿ ಎಂಟರ್ ಒತ್ತಿ.
2:58 ನಿಮ್ಮ ಯೂಸರ್ ನೇಮ್ ಅನ್ನು ತಿಳಿದುಕೊಳ್ಳಲು, ಪ್ರಾಂಪ್ಟ್ ನಲ್ಲಿ who ಸ್ಪೇಸ್ am ಸ್ಪೇಸ್ I ಎಂದು ಟೈಪ್ ಮಾಡಿ ಎಂಟರ್ ಒತ್ತಿ.
3:11 ನಿಜವಾಗಿ ಇದು who ಆದೇಶದಿಂದ ಬಂದಿದ್ದು, ಒಂದು ವೇಳೆ ನಮ್ಮ ಸಿಸ್ಟಮ್ ಮಲ್ಟಿ ಯೂಸರ್ ಸಿಸ್ಟಮ್ ಆಗಿದ್ದರೆ, ಇದು ಪ್ರಸ್ತುತ ಸಿಸ್ಟಮ್ ನಲ್ಲಿ ಲಾಗ್-ಇನ್ ಆಗಿರುವ ಎಲ್ಲಾ ಯೂಸರ್ ಗಳನ್ನು ಲಿಸ್ಟ್ ಮಾಡುತ್ತದೆ.
3:21 ಕೆಲವೊಮ್ಮೆ ನಿಮ್ಮ ಲಾಗಿನ್ ನ ಪಾಸ್ವರ್ಡ್ ಅಸುರಕ್ಷಿತತೆಯನ್ನು ಹೊಂದಬಹುದು ಅಥವಾ ನೀವು ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಲಿ ಬಯಸಬಹುದು.
3:28 ಇದಕ್ಕಾಗಿ ನಾವು passwd ಆದೇಶವನ್ನು ಹೊಂದಿದ್ದೇವೆ. ಪ್ರಾಂಪ್ಟಿನಲ್ಲಿ p-a-s-s-w-d ಎಂದು ಟೈಪ್ ಮಾಡಿ ಎಂಟರ್ ಒತ್ತಿ.
3:37 ನೀವು ಈ ಆದೇಶವನ್ನು ಕೊಟ್ಟ ನಂತರ ಇದು ನಿಮ್ಮ ಪ್ರಸ್ತುತ ಪಾಸ್ವರ್ಡ್ ಅನ್ನು ಟೈಪ್ ಮಾಡಲು ಕೇಳುತ್ತದೆ.
3:43 ಇಲ್ಲಿ ನಾನು ನನ್ನ ಸಿಸ್ಟಮ್ ನ ಪ್ರಸ್ತುತ ಪಾಸ್ವರ್ಡ್ ಟೈಪ್ ಮಾಡುತ್ತೇನೆ.
3:48 ಅದು ಸರಿಯಾಗಿ ದಾಖಾಲಾಗಿದ್ದಲ್ಲಿ, ನೀವು ನಿಮ್ಮ ಹೊಸ ಪಾಸ್ವರ್ಡ್ ನಮೂದಿಸಿ ಮತ್ತು ದೃಢೀಕರಿಸಲು ಪುನಃ ಟೈಪ್ ಮಾಡಿ.
4:02 ಆದರೆ ನೀವು ನಿಮ್ಮ ಪ್ರಸ್ತುತ ಪಾಸ್ವರ್ಡ್ ಮರೆತಲ್ಲಿ ಏನು ಮಾಡುವಿರಿ?
4:06 ಪ್ರಸ್ತುತ ಪಾಸ್ವರ್ಡ್ ಮರೆತರೂ ಸಹ ಪಾಸ್ವರಡ್ ಅನ್ನು ಬದಲಾಯಿಸಬಹುದು, ಆದರೆ ಅದು ಕೇವಲ ರೂಟ್ ಯೂಸರ್ ಇಂದ ಮಾತ್ರ ಸಾಧ್ಯ.
4:14 ಹಾಗಾದರೆ ಈ ರೂಟ್ ಯೂಸರ್ ಯಾರು?
4:18 ಅವನು ಒಬ್ಬ ವಿಶೇಷ ಸೌಲಭ್ಯಗಳನ್ನು ಹೊಂದಿದ ಯೂಸರ್ ವ್ಯಕ್ತಿ ಆಗಿದ್ಧು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತಾನೆ.
4:22 ಯಾರಿಗಾದರೂ ಹೋಲಿಸಬಯಸಿದಲ್ಲಿ, ರೂಟ್ ಯೂಸರ್ ನನ್ನು ವಿಂಡೋಸ್ ನ ಎಡ್ಮಿನ್ ಯೂಸರ್ ಗೆ ಹೋಲಿಸಬಹುದು.
4:30 ನಿಮಗೆ ಸಿಸ್ಟಮ್ ನ ದಿನಾಂಕ ಮತ್ತು ಸಮಯವನ್ನು ತಿಳಿಯುವ ಆಸಕ್ತಿ ಇರಬಹುದು. ಇದಕ್ಕಾಗಿ ನಮ್ಮಲ್ಲಿ date ಎಂಬ ಕಮಾಂಡ್ ಇದೆ.
4:42 ಇದು ಸಿಸ್ಟಮ್ ನ ವರ್ತಮಾನ ಸಮಯ ಹಾಗೂ ದಿನಾಂಕವನ್ನು ತೋರಿಸುತ್ತದೆ.
4:45 ಇಲ್ಲಿ ನಾವು date ಎಂಬ ಕಮಾಂಡ್ ದಿನಾಂಕ ಜೊತೆಗೆ ಸಮಯವನ್ನೂ ತೋರಿಸಿತು ಎಂಬುದನ್ನು ಗಮನಿಸಬಹುದು. ಹಾಗಾಗಿ ಇದು ಒಂದು ಬಹೂಪಯೋಗೀ ಕಮಾಂಡ್ ಆಗಿದೆ.
4:54 ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಕ್ಯಾಪಿಟಲ್ T ಬರೆದು ಎಂಟರ್ ಒತ್ತಿ.
5:07 ಇದರಿಂದಾಗಿ ನಮಗೆ ಗಂಟೆ, ನಿಮಿಷಗಳು ಮತ್ತು ಸೆಕೆಂಡುಗಳು (hh:mm:ss) ಎಂಬ್ ಈ ಪ್ರಾರೂಪದಲ್ಲಿ ಕೇವಲ ಸಮಯವು ಕಾಣುತ್ತದೆ.
5:12 ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ h ಬರೆದು ಎಂಟರ್ ಒತ್ತಿ.
5:23 ಇದು ತಿಂಗಳ ಹೆಸರನ್ನು ನೀಡುತ್ತದೆ.
5:25 ಪ್ರಾಂಪ್ಟ್ ನಲ್ಲಿ, date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ m ಬರೆದು ಎಂಟರ್ ಒತ್ತಿ.
5:38 ಇದು ತಿಂಗಳ ಹೆಸರನ್ನು ಸಂಖ್ಯಾ ರೂಪದಲ್ಲಿ ನೀಡುತ್ತದೆ. ಇಲ್ಲಿ 02 ಎಂಬುದು ಫೆಬ್ರವರಿ ತಿಂಗಳಾಗಿದೆ. ನಿಮಗೆ ಸಿಕ್ಕ ಔಟ್-ಪುಟ್ ಜೊತೆ ಇದನ್ನು ಹೋಲಿಸಿ.
5:50 ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ y ಬರೆದು ಎಂಟರ್ ಒತ್ತಿ.
6.01 ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ.
6.05 ಈಗ ಹೇಳಿದ ಕಮಾಂಡ್ ಗಳೆರಡನ್ನೂ ಸೇರಿಸಿ ಬರೆಯಬಹುದು. ಉದಾಹರಣೆಗೆ ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್), ಎರಡು ಕೋಟ್ ನ ಮಧ್ಯದಲ್ಲಿ % (ಶೇಕಡ ಚಿಹ್ನೆ) ಸ್ಮಾಲ್ h % (ಶೇಕಡ ಚಿಹ್ನೆ) ಸ್ಮಾಲ್ y ಬರೆದು ಎಂಟರ್ ಒತ್ತಿ.
6:34 ಈಗ ಇದು ಫೆಬ್ರವರಿ 11 ಎಂದು ತೋರಿಸುತ್ತಾ ಇದೆ.
6:39 cal ಎಂಬುದು ಇದಕ್ಕೆ ಸಂಬಂಧಿಸಿದ ಮತ್ತೊಂದು ಆದೇಶವಾಗಿದೆ. ಇದು ಸಾಮಾನ್ಯವಾದ ಆದೇಶವಲ್ಲ, ಇದು ಯಾವುದೇ ವರ್ಷದ ಅಥವಾ ತಿಂಗಳ ಕ್ಯಾಲೆಂಡರ್ ನೋಡಲು ನಮಗೆ ಸಹಾಯ ಮಾಡುತ್ತದೆ.
6:48 ವರ್ತಮಾನ ತಿಂಗಳ ಕ್ಯಾಲೆಂಡರ್ ನೋಡಲು ಪ್ರಾಂಪ್ಟ್ ನಲ್ಲಿ cal ಎಂದು ಬರೆದು ಎಂಟರ್ ಒತ್ತಿ.
6:56 ಯಾವುದಾದರೂ ನಿರ್ದಿಷ್ಟ ತಿಂಗಳ ಕ್ಯಾಲೆಂಡರ್ ನೋಡಲು, ಉದಾಹರೆಣೆಗೆ ೨೦೭೦ ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೋಡಲು , ಪ್ರಾಂಪ್ಟ್ ನಲ್ಲಿ cal ಸ್ಪೇಸ್ 12 ಸ್ಪೇಸ್ 2070 ಎಂದು ಬರೆದು ಎಂಟರ್ ಒತ್ತಿ.
7:13 ಇದು 2070 ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೀಡುತ್ತದೆ.
7:19 ಮುಂದೆ ಹೋಗುವ ಮೊದಲು ಫೈಲ್ಸ್ ಮತ್ತು ಡೈರಕ್ಟರೀಸ್ ಗಳ ಬಗ್ಗೆ ಸ್ವಲ್ಪ ಚರ್ಚಿಸೋಣ.
7:26 ಲಿನಕ್ಸ್ ನಲ್ಲಿ ಬಹುತೇಕ ಎಲ್ಲವೂ ಫೈಲ್ ರೂಪದಲ್ಲಿರುತ್ತದೆ. ಈಗ ಪ್ರಶ್ನೆ, ಫೈಲ್ ಎಂದರೇನು?
7:34 ನಿಜವಾದ ಅರ್ಥದಲ್ಲಿ ಫೈಲ್ ಎಂದರೆ ಅಲ್ಲಿ ನಾವು ನಮ್ಮ ದಾಖಲೆಗಳನ್ನು ಮತ್ತು ಪತ್ರಗಳನ್ನು ಸಂಗ್ರಹಿಸಿಡುತ್ತೇವೆ. ಅದೇ ರೀತಿ ಲಿನಕ್ಸ್ ಫೈಲ್ ಕೂಡಾ ಮಾಹಿತಿಯನ್ನು ಸಂಗ್ರಹಿಸುವ ಒಂದು ಧಾರಕವಾಗಿದೆ.
7:48 ನಂತರ, ಡೈರಕ್ಟರಿ ಎಂದರೇನು?
7:52 ಎಲ್ಲಿ ಫೈಲ್ ಗಳು ಮತ್ತು ಸಬ್ ಡೈರಕ್ಟರಿ ಗಳು ಇಡಲ್ಪಡುತ್ತವೆಯೋ ಅದುವೇ ಡೈರಕ್ಟರಿ ಆಗಿರುತ್ತದೆ.
7:58 ಇದು ಫೈಲ್ ಗಳನ್ನು ವ್ಯವಸ್ಥಿತರೂಪದಲ್ಲಿರಿಸಲು ಸಹಾಯ ಮಾಡುತ್ತದೆ.
8:04 ಇದನ್ನೇ ನಾವು ವಿಂಡೊಸ್ ನಲ್ಲಿ ಫೋಲ್ಡರ್ ಎಂದು ಕರೆಯುತ್ತೇವೆ.
8;08 ನಾವು ಯಾವಾಗ ಲಿನಕ್ಸ್ ಗೆ ಲಾಗ್ ಇನ್ ಆಗುತ್ತೇವೆಯೋ ಆಗ ಸಾಮಾನ್ಯವಾಗಿ ಹೋಂ ಡೈರಕ್ಟರಿಯಲ್ಲಿ ಇರುತ್ತೇವೆ. ಹೋಂ ಡೈರಕ್ಟರಿಯನ್ನು ನೋಡಲು ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ಕ್ಯಾಪಿಟಲ್ ನಲ್ಲಿ HOME ಎಂದು ಬರೆದು ಎಂಟರ್ ಕೀ ಒತ್ತಿ.
8:27 ಮುಂದಿನ ಕಮಾಂಡ್ ನಮಗೆ ಪ್ರಸ್ತುತ ಡೈರಕ್ಟರಿಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಇದು pwd ಎಂಬ ಕಮಾಂಡ್ ಆಗಿದೆ, ಅಂದರೆ present working directory ಎಂದರ್ಥ. ಪ್ರಾಂಪ್ಟ್ ನಲ್ಲಿ pwd ಎಂದು ಬರೆದು ಎಂಟರ್ ಒತ್ತಿ.
8:42 ಒಮ್ಮೆ ನಾವು ಡೈರಕ್ಟರಿಗಳ ಬಗ್ಗೆ ತಿಳಿದಾಗ ನಾವು ಅದರಲ್ಲಿನ ಫೈಲ್ ಗಳ ಮತ್ತು ಸಬ್ ಡೈರಕ್ಟರಿ ಗಳ ಬಗ್ಗೂ ತಿಳಿಯಲಿಚ್ಛಿಸುವೆವು. ಇದಕ್ಕಾಗಿ ls ಎಂಬ ಕಮಾಂಡ್ ಅನ್ನುಉಪಯೋಗಿಸೋಣ. ಇದನ್ನು Linux ಮತ್ತು Unix ನಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ.
8:56 ls ಎಂದು ಕಮಾಂಡ್ ಅನ್ನು ಬರೆದು ಎಂಟರ್ ಒತ್ತಿ.
9.01 ಈಗ ಔಟ್ ಪುಟ್ ಅನ್ನು ನೋಡಿ.
9:04 ಫೈಲ್ಸ್ ಮತ್ತು ಸಬ್ ಡೈರಕ್ಟರಿ ಗಳು ಸಾಮಾನ್ಯವಾಗಿ ವಿವಿಧ ಬಣ್ಣಗಳಿಂದ ತೋರಲ್ಪಡುತ್ತವೆ.
9:08 ls ಎಂಬ ಕಮಾಂಡ್ ಒಂದು ಬಹುಮುಖಿ ಕಮಾಂಡ್ ಮತ್ತು ಅನೇಕ ಆಯ್ಕೆಗಳುಳ್ಳ ಕಮಾಂಡ್ ಆಗಿದೆ. ಅವುಗಳಲ್ಲಿ ಕೆಲವನ್ನು ನೋಡೋಣ. ಪ್ರಾಂಪ್ಟ್ ನಲ್ಲಿ ls ಸ್ಪೇಸ್ - - (ಮೈನಸ್ ಮೈನಸ್) all ಎಂದು ಬರೆದು ಎಂಟರ್ ಒತ್ತಿ.
9:24 ಇದು ಗುಪ್ತ ಫೈಲ್ ಗಳನ್ನೂ ಒಳಗೊಂಡಂತೆ ಎಲ್ಲಾ ಫೈಲ್ ಗಳನ್ನೂ ತೋರಿಸುತ್ತದೆ. ಗುಪ್ತ ಫೈಲ್ ಗಳ ಹೆಸರು . (ಡಾಟ್) ನಿಂದ ಶುರುವಾಗುತ್ತವೆ.
9:33 ನಾವು ಕೇವಲ ಫೈಲ್ ಗಳನ್ನಷ್ಟೇ ಅಲ್ಲದೆ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದರೆ, ಅದನ್ನು - (ಮೈನಸ್) l ಎಂಬ ಕಮಾಂಡ್ ನಿಂದ ಪಡೆಯಬಹುದು.
9:50 ಇದು ನಮಗೆ ಫೈಲ್ ನ ಅನುಮತಿ, ಫೈಲ್ ಮಾಲೀಕನ ಹೆಸರು, ಬೈಟ್ ನಲ್ಲಿ ಇದರ ಪರಿಮಾಣ, ಕೊನೆಯ ಬದಲಾವಣೆ ಸಮಯ ಹೀಗೆ ಮುಂತಾದ ಫಲಿತಾಂಶಗಳನ್ನು ನೀಡುತದೆ. ಈ ವಿಕಲ್ಪಗಳ ವಿವರಣೆಯು ಈ ಟ್ಯುಟೋರಿಯಲ್ ನ ವ್ಯಾಪ್ತಿಯ ಹೊರಗಿದೆ.
10:06 ls ಎಂಬ ಕಮಾಂಡ್ ಅನ್ನು ತುಂಬಾ ವಿಕಲ್ಪಗಳ ಜೊತೆಗೆ ಉಪಯೋಗಿಸಬಹುದು. ಇದನ್ನು ನಾವು ನಂತರ ನೋಡೋಣ.
10:11 ಈ ವಿವರಣೆಗಳನ್ನು ಕೇವಲ ಸ್ಕ್ರೀನ್ ನಲ್ಲಿ ತೋರಿಸುವ ಬದಲು ಇವನ್ನು ಫೈಲ್ ನಲ್ಲಿ ಸಂಗ್ರಹಿಸೋಣ. ವಾಸ್ತವವಾಗಿ ನಾವು ಈ ರೀತಿಯಲ್ಲಿ ಒಂದು ಕಮಾಂಡ್ ನ ಫಲಿತಾಂಶವನ್ನು ಫೈಲ್ ನಲ್ಲಿ ಸಂಗ್ರಹಿಸಿಡಬಹುದು.
10:23 ಈಗ right angle bracket ನ ಜೊತೆಗೆ ಫೈಲ್ ನ ಹೆಸರನ್ನು ಬರೆಯೋಣ. ಅಂದರೆ, ls ಸ್ಪೇಸ್ - (ಮೈನಸ್) ಸ್ಮಾಲ್ i ಸ್ಪೇಸ್ > (right angle bracket) ಸ್ಪೇಸ್ fileinfo ಎಂದು ಬರೆದು ಎಂಟ್ರ್ ಒತ್ತಿ.
10:46 ಈಗ ಎಲ್ಲಾ ಫೈಲ್ ಗಳ ಮತ್ತು ಡೈರಕ್ಟರಿ ಗಳ ಮಾಹಿತಿಯು fileinfo ಹೆಸರಿನ ಫೈಲ್ ನಲ್ಲಿ ಸೇರುತ್ತವೆ.
10:54 ಆದರೆ ಫೈಲ್ ನ ಒಳಗೆ ಇರುವ ಮಾಹಿತಿಗಳನ್ನು ಹೇಗೆ ನೋಡುವುದು? ಇದಕ್ಕಾಗೇ ಇರುವುದು cat ಕಮಾಂಡ್. ಈಗ cat ಸ್ಪೇಸ್ ಫೈಲ್ ನ ಹೆಸರು ಅಂದರೆ ಇಲ್ಲಿ fileinfo ಎಂದು ಬರೆದು ಎಂಟರ್ ಒತ್ತಿ.
11:12 ಈಗ ನೀವು ಅದರ ಒಳಗಿರುವ ಮಾಹಿತಿಗಳನ್ನು ನೋಡಬಹುದು. ವಾಸ್ತವವಾಗಿ, ಫೈಲ್ ಅನ್ನು ರಚಿಸುವುದು cat ಕಮಾಂಡ್ ನ ಮುಖ್ಯ ಕೆಲಸವಾಗಿದೆ. ಅದಕ್ಕಾಗಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ > (right angle bracket) ಸ್ಪೇಸ್ ಮತ್ತು ಫೈಲ್ ನ ಹೆಸರು ಅಂದರೆ file 1 ಎಂದು ಬರೆದು ಎಂಟರ್ ಒತ್ತಿ.
11:36 ಎಂಟರ್ ಒತ್ತಿದಾಗ ಕಮಾಂಡ್ ಇನ್ಪುಟ್ ಗಾಗಿ ಕಾಯುತ್ತದೆ.
11.42 ನಾವು ಇನ್ಪುಟ್ ರೂಪದಲ್ಲಿ ಏನೇ ಬರೆದರೂ ಅದು file ಎಂಬಲ್ಲಿ ಬರೆಯಲ್ಪಡುತ್ತದೆ. ಹಾಗಾಗಿ ಏನಾದರೂ ಬರೆಯಿರಿ.
11.50 ಈಗ ಇನ್ಪುಟ್ ನ ಸಮಾಪ್ತಿಗಾಗಿ ಎಂಟರ್ ಒತ್ತಿ.
11.56 ಈಗ ಒಟ್ಟಿಗೆ Ctrl ಮತ್ತು D ಕೀ ಗಳನ್ನು ಒತ್ತಿ.
12.05 ಫೈಲ್ ನ ಹೆಸರು ಅಂದರೆ file1 ಎಂಬುದು ಈಗಾಗಲೇ ಅಸ್ತಿತ್ವದಲ್ಲಿದ್ದರೆ ಇನ್ಪುಟ್ ಆ ಫೈಲ್ ನ ಮೇಲೆ ಓವರ್ ರೈಟ್ ಆಗುತ್ತದೆ.
12.13 ನೀವು ಇದನ್ನು ಈ ಮೊದಲೇ ಇರುವ file 1 ಎಂಬ ಫೈಲ್ ನಲ್ಲಿ ಕೊನೆಗೆ ಜೋಡಿಸಲಿ ಇಚ್ಛಿಸಿದಲ್ಲಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ >> (double right angle bracket) ಸ್ಪೇಸ್ file 1 ಎಂದು ಬರೆದು ಎಂಟರ್ ಒತ್ತಿ.
12.36 ಇಲ್ಲಿ ಚರ್ಚಿಸಲು ಇನ್ನೂ ತುಂಬಾ ಕಮಾಂಡ್ ಗಳಿವೆ, ಆದರೆ ಇದನ್ನು ಇಲ್ಲಿಗೇ ಸೀಮಿತಗೊಳಿಸೋಣ. ವಾಸ್ತವವಾಗಿ ಈಗ ಹೇಳಿದ ಕಮಾಂಡ್ ಗಳಲ್ಲೇ ಇನ್ನೂ ಬಹಳ ವಿಕಲ್ಪಗಳಿವೆ. ಅವುಗಳನ್ನು ನಾವಿಲ್ಲಿ ಚರ್ಚಿಸಿಲ್ಲ.
12.50 ಈಗ ನಾವು ಎ ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13.02 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
13.10 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Vasudeva ahitanal