Difference between revisions of "Arduino/C3/Digital-Logic-Design-with-Arduino/Kannada"
From Script | Spoken-Tutorial
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊ ಜೊತೆಗಿನ ಡಿಜಿಟಲ್ ಲಾಜಿಕ್ ಡಿಸೈನ್ ಕು...") |
Melkamiyar (Talk | contribs) |
||
Line 9: | Line 9: | ||
|- | |- | ||
||00:07 | ||00:07 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು: '''assembly''' ಯಲ್ಲಿ '''AND, OR''' ಮತ್ತು '''XOR''' ಅಪರೇಶನ್ ಗಳನ್ನು | + | || ಈ ಟ್ಯುಟೋರಿಯಲ್ ನಲ್ಲಿ ನಾವು: '''assembly''' ಯಲ್ಲಿ '''AND, OR''' ಮತ್ತು '''XOR''' ಅಪರೇಶನ್ ಗಳನ್ನು ಕಾರ್ಯಗತಗೊಳಿಸಿ ಪರಿಶೀಲಿಸಲು, |
|- | |- | ||
Line 17: | Line 17: | ||
|- | |- | ||
||00:21 | ||00:21 | ||
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು '''Assembly''' ಲ್ಯಾಂಗ್ವೇಜ್ ನ | + | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು '''Assembly''' ಲ್ಯಾಂಗ್ವೇಜ್ ನ ಮೂಲಜ್ಞಾನ ಹೊಂದಿರಬೇಕು. |
|- | |- |
Revision as of 13:16, 10 May 2020
Time | Narration |
00:01 | ಆರ್ಡುಯಿನೊ ಜೊತೆಗಿನ ಡಿಜಿಟಲ್ ಲಾಜಿಕ್ ಡಿಸೈನ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: assembly ಯಲ್ಲಿ AND, OR ಮತ್ತು XOR ಅಪರೇಶನ್ ಗಳನ್ನು ಕಾರ್ಯಗತಗೊಳಿಸಿ ಪರಿಶೀಲಿಸಲು, |
00:17 | ಸರಳ ಕಾಂಬಿನೇಶನಲ್ ಲಾಜಿಕ್ ಕಾರ್ಯಗತಗೊಳಿಸಿ ಪರಿಶೀಲಿಸಲು ಕಲಿಯಲಿದ್ದೇವೆ. |
00:21 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು Assembly ಲ್ಯಾಂಗ್ವೇಜ್ ನ ಮೂಲಜ್ಞಾನ ಹೊಂದಿರಬೇಕು. |
00:31 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು |
00:38 | ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ. |
00:44 | ನಮಗೆ ಈ ಬಾಹ್ಯ ಸಾಧನಗಳು ಬೇಕು:
ಅವೆಂದರೆ ಬ್ರೆಡ್ ಬೋರ್ಡ್, |
00:51 | ಆರ್ಡುಯಿನೊ ಯು.ಎನ್.ಒ ಬೋರ್ಡ್, |
00:54 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, |
00:57 | 220-ohm ರೆಸಿಸ್ಟರ್, |
01:00 | ಡಿಕೋಡರ್ (7447 IC) ಮತ್ತು
ಜಂಪರ್ ವೈರ್ ಗಳು. |
01:07 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಡಿಕೋಡರ್ ಗೆ ಬಳಸಿದ ಸರ್ಕಿಟ್ ಸೆಟಪ್ ಅನ್ನೇ ಈಗ ಬಳಸಲಿದ್ದೇವೆ. |
01:14 | ನಾವು ಲೈವ್ ಕನೆಕ್ಷನ್ ಸೆಟಪ್ ನೋಡೋಣ. |
01:17 | ಲಾಜಿಕಲ್ AND ಅಪರೇಶನ್ ಗಳನ್ನು ದೃಢೀಕರಿಸಲು ನಾವೀಗ assembly ಪ್ರೋಗ್ರಾಂ ಬರೆಯಲಿದ್ದೇವೆ. |
01:24 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಈ ಪ್ರೋಗ್ರಾಂ ಟೈಪ್ ಮಾಡಿ. |
01:29 | ಈ ಟ್ಯುಟೋರಿಯಲ್ ನ code files ಲಿಂಕ್ ನಲ್ಲಿ m328Pdef.inc ಮತ್ತು ಸೋರ್ಸ್ ಕೋಡ್ ಲಭ್ಯ. |
01:38 | ನೀವಿದನ್ನು ಡೌನ್ ಲೋಡ್ ಮಾಡಿ ಬಳಸಬಹುದು. |
01:41 | ಹೈಲೈಟ್ ಮಾಡಿದ ಕೋಡ್, ಆರ್ಡುಯಿನೊವಿನ 2, 3, 4 ಮತ್ತು 5 ಪಿನ್ ಗಳನ್ನು ಔಟ್ಪುಟ್ ಪಿನ್ ಗಳಾಗಿ ಕಾನ್ಫಿಗರ್ ಮಾಡುತ್ತದೆ. |
01:49 | ಇಲ್ಲಿ ನಾವು ನಮ್ಮ ಬೂಲಿಯನ್ ಅಪರೇಶನ್ ಗಳಿಗೆ r16 ಮತ್ತು r17 ನ ಮೊದಲ ಬಿಟ್ ಮಾತ್ರ ಪರಿಗಣಿಸುತ್ತಿದ್ದೇವೆ. ಇಲ್ಲಿ ಇವೆರಡೂ 1 ಆಗಿವೆ. |
02:00 | ಈ ಸಾಲು, r16 ಮತ್ತು r17 ರ ಬಿಟ್ ಗಳಲ್ಲಿ ಬಿಟ್ ವೈಸ್ AND ಅಪರೇಶನ್ ನಡೆಸುತ್ತದೆ. ಫಲಿತಾಂಶವನ್ನು r16 ರಲ್ಲಿ ಶೇಖರಿಸಲಾಗುತ್ತದೆ. |
02:12 | ಉಳಿದ ಪ್ರೋಗ್ರಾಂ, ಈ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡುವುದನ್ನು ನೋಡಿಕೊಳ್ಳುತ್ತದೆ. |
02:17 | r16 ರ LSB ಯು ನಮ್ಮ ಫಲಿತಾಂಶವನ್ನು ಹೊಂದಿದೆ. ಇದನ್ನು ಎಡಕ್ಕೆ ಎರಡು ಸ್ಥಾನಗಳಷ್ಟು ಸ್ಥಳಾಂತರಿಸಬೇಕು. |
02:26 | ಕೋಡ್ ನ ಈ ಸಾಲು, ಲೂಪ್ ಅನ್ನು loopw ಎಂದು ಕರೆಯುತ್ತದೆ. |
02:31 | ಈ ಲೂಪ್, r16 ರ LSB ಯನ್ನು ಸ್ಥಳಾಂತರಿಸುವುದನ್ನು ನೋಡಿಕೊಳ್ಳುತ್ತದೆ. |
02:38 | r16 ರಲ್ಲಿ ಮೌಲ್ಯವನ್ನು PORTD ಗೆ ಕಳುಹಿಸಲಾಗುತ್ತದೆ. ಇದು, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಅಥವಾ 1 ಅನ್ನು ಡಿಸ್ಪ್ಲೇ ಮಾಡುತ್ತದೆ. |
02:48 | ಇಲ್ಲಿ r16 ರ ಅಂಶಗಳನ್ನು ಒಮ್ಮೆ ಎಡಕ್ಕೆ ಸ್ಥಳಾಂತರಿಸಲಾಗುತ್ತದೆ. ನಂತರ r20 ರ ಮೌಲ್ಯವನ್ನು 1 ರಷ್ಟು ಇಳಿಸಲಾಗುತ್ತದೆ. |
02:58 | r20 ರಮೌಲ್ಯ ಶೂನ್ಯಕ್ಕೆ ಸಮನಾಗಿರದೆ ಇದ್ದಲ್ಲಿ ಲೂಪ್ ಅನ್ನು ಇನ್ನೊಮ್ಮೆ ಪುನರಾವರ್ತಿಸಲಾಗುತ್ತದೆ. |
03:05 | ನಾನು ಕೋಡ್ ಅನ್ನು home slash spoken slash Assembly ಫೋಲ್ಡರ್ ನಲ್ಲಿ boolean.asm ಆಗಿ ಸೇವ್ ಮಾಡುತ್ತೇನೆ. |
03:15 | terminal ಗೆ ಮರಳಿ. |
03:18 | boolean.asm ಸೇವ್ ಮಾಡಿರುವ ಫೋಲ್ಡರ್ ಗೆ ಹೋಗಿ. avra space boolean.asm ಎಂದು ಟೈಪ್ ಮಾಡಿ Enter ಒತ್ತಿ. |
03:29 | ಇದು ಕೋಡ್ ಅನ್ನು ಸೇರಿಸುತ್ತದೆ ಮತ್ತು boolean.hex ಫೈಲ್ ಅನ್ನು ರಚಿಸುತ್ತದೆ. |
03:34 | ಸ್ಕ್ರೀನ್ ಅನ್ನು ತೆರವುಗೊಳಿಸೋಣ. |
03:36 | ನಂತರ ನಾವು ಕೋಡ್ ಅನ್ನು ಆರ್ಡುಯಿನೊ ಗೆ ಅಪ್ ಲೋಡ್ ಮಾಡಬೇಕು. |
03:41 | ಇದಕ್ಕಾಗಿ avrdude space hyphen p space atmega328p space hyphen c space arduino space hyphen b space 115200 space hyphen capital P space forward slash dev forward slash ttyACM0 space hyphen capital U space flash colon w colon boolean dot hex ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
04:17 | ಈಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಒಂದು ಅಂಕಿಯು ಮಿನುಗುತ್ತಿರುವುದನ್ನು ನೀವು ನೋಡಬಹುದು. |
04:23 | ಕೆಳಗಿನ ಅಸೈನ್ ಮೆಂಟ್ ಮಾಡಲು ಟ್ಯುಟೋರಿಯಲ್ ಅನ್ನು ಪಾಸ್ (Pause) ಮಾಡಿ. |
04:27 | AND ನ ಉಳಿತ ಟ್ರುತ್ ಟೇಬಲ್ ದೃಢೀಕರಿಸಲು r16 ಮತ್ತು r17 ಮೌಲ್ಯಗಳನ್ನು ಮಾರ್ಪಡಿಸಿ. |
04:35 | ಲಾಜಿಕಲ್ OR ಅಪರೇಶನ್ ನೆರವೇರಿಸಲು, ಪ್ರೋಗ್ರಾಂ ನ and ಕೀವರ್ಡ್ ಅನ್ನು or ಜೊತೆ ಬದಲಾಯಿಸಿ. |
04:42 | ಲಾಜಿಕಲ್ XOR ಅಪರೇಶನ್ ನೆರವೇರಿಸಲು, ಪ್ರೋಗ್ರಾಂ ನ and ಕೀವರ್ಡ್ ಅನ್ನು xor ಜೊತೆ ಬದಲಾಯಿಸಿ. |
04:49 | ನಂತರ ನಾವು ಕೆಲವು ಸರಳ ಕಾಂಬಿನೇಶನಲ್ ಲಾಜಿಕ್ ಗಳನ್ನು ಕಾರ್ಯಗತಗೊಳಿಸಿ ಪರಿಶೀಲಿಸಲಿದ್ದೇವೆ. |
04:55 | ನಾವೀಗ ಲೈವ್ ಕನೆಕ್ಷನ್ ಸೆಟಪ್ ನೋಡೋಣ. ಇದು ಹಿಂದಿನ ಸೆಟಪ್ ನಂತೆಯೇ ಆಗಿರುತ್ತದೆ. |
05:02 | ನಾವು ಈ ಸಮೀಕರಣಗಳನ್ನು ನಮ್ಮ ಪ್ರೋಗ್ರಾಂ ನಲ್ಲಿ ಕಾರ್ಯಗತಗೊಳಿಸಲಿದ್ದೇವೆ ಮತ್ತು ಅವುಗಳ ಟ್ರುತ್ ಟೇಬಲ್ ದೃಢೀಕರಿಸಲಿದ್ದೇವೆ. |
05:09 | ಮೇಲೆ ತೋರಿಸಿರುವ ಸಮೀಕರಣಗಳಿಗೆ ಇದು ಟ್ರುತ್ ಟೇಬಲ್ ಆಗಿದೆ. |
05:14 | ಇಲ್ಲಿ W, X, Y ಮತ್ತು Z ಗಳು ಇನ್ಪುಟ್ ಗಳಾಗಿವೆ. |
05:19 | A, B, C ಮತ್ತು D ಗಳು ಔಟ್ಪುಟ್ ಗಳು. ನಾವು ಟ್ರುತ್ ಟೇಬಲ್ ನ ಮೊದಲ ಸಾಲನ್ನು ಪರಿಗಣಿಸೋಣ. ಹೀಗೆ, ಎಲ್ಲಾ ಇನ್ಪುಟ್ ಗಳು ಶೂನ್ಯ ಆಗಿರುತ್ತವೆ. |
05:31 | ಟ್ರುತ್ ಟೇಬಲ್ ಪ್ರಕಾರ, ನಾವು 1 ಔಟ್ಪುಟ್ ಅನ್ನು ನಿರೀಕ್ಷಿಸಬಹುದು. |
05:36 | ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡುತ್ತೇವೆ. |
05:40 | ಈ ಸಮೀಕರಣಗಳನ್ನು ಕಾರ್ಯಗತಗೊಳಿಸಲು ಮತ್ತು ದೃಢೀಕರಿಸಲು ನಾವು assembly ಪ್ರೋಗ್ರಾಂ ಅನ್ನು ಬರೆಯೋಣ. |
05:46 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಈ ಕೆಳಗಿನ ಪ್ರೋಗ್ರಾಂ ಅನ್ನು ಟೈಪ್ ಮಾಡಿ. |
05:50 | ನಾನು ಪ್ರೋಗ್ರಾಂ ಅನ್ನು ಟೈಪ್ ಮಾಡುತ್ತೇನೆ. |
05:53 | ಈ ಸಾಲು, ಆರ್ಡುಯಿನೊವಿನ 2, 3, 4 ಮತ್ತು 5 ಪಿನ್ ಗಳನ್ನು ಔಟ್ಪುಟ್ ಪಿನ್ ಗಳಾಗಿ ಕಾನ್ಫಿಗರ್ ಮಾಡುತ್ತದೆ. |
06:00 | r30, ಔಟ್ಪುಟ್ ಅನ್ನು ಶೇಖರಿಸಲು ಡಮ್ಮಿ ವೇರಿಯೇಬಲ್ ಆಗಿದೆ. |
06:05 | W, X, Y ಮತ್ತು Z ಇನ್ಪುಟ್ ವೇರಿಯೇಬಲ್ ಗಳ ಮೌಲ್ಯಗಳನ್ನು ಕ್ರಮವಾಗಿ r17, r18, r19 ಮತ್ತು r20 ರಿಜಿಸ್ಟರ್ ಗಳಲ್ಲಿ ಶೇಖರಿಸಲಾಗುತ್ತದೆ. |
06:16 | r17, r18, r19 ಮತ್ತು r20 ಮೌಲ್ಯಗಳನ್ನು r0, r1, r2 ಮತ್ತು r3 ಡಮ್ಮಿ ವೇರಿಯೇಬಲ್ ಗಳಲ್ಲಿ ಶೇಖರಿಸಲಾಗುತ್ತದೆ. |
06:27 | ಈ ಮೌಲ್ಯಗಳನ್ನು, ಅಪರೇಶನ್ ಗಳನ್ನು ನಿರ್ವಹಿಸಿದ ನಂತರ ಮೂಲ ರಿಜಿಸ್ಟರ್ ಗಳನ್ನು ಪೂರ್ವಸ್ಥಿತಿಗೆ ತರಲು ಬಳಸಲಾಗುತ್ತದೆ. |
06:35 | ವೇರಿಯೇಬಲ್ ನ ಕಾಂಪ್ಲಿಮೆಂಟ್ ಅನ್ನು ಕಂಡುಹಿಡಿಯಲು 'comp' ಸಬ್ ರೂಟಿನ್ ಅನ್ನು ಬಳಸಲಾಗುತ್ತದೆ. |
06:41 | W, X, Y ಮತ್ತು Z ನ ಕಾಂಪ್ಲಿಮೆಂಟ್ ಅನ್ನು ಕ್ರಮವಾಗಿ r21, r22, r23 ಮತ್ತು r24 ರಲ್ಲಿ ಲೆಕ್ಕ ಹಾಕಲಾಗುತ್ತದೆ ಮತ್ತು ಶೇಖರಿಸಲಾಗುತ್ತದೆ. |
06:52 | r21, r22, r23 ಮತ್ತು r24 ರ ಮೌಲ್ಯಗಳನ್ನು r4, r5, r6 ಮತ್ತು r7 ರ ಡಮ್ಮಿ ವೇರಿಯೇಬಲ್ ಗಳಲ್ಲಿ ಶೇಖರಿಸಲಾಗುತ್ತದೆ. |
07:04 | A ಯು W ನ ಕಾಂಪ್ಲಿಮೆಂಟ್ ಆಗಿದೆ ಎಂಬುದನ್ನು ಗಮನಿಸಿ.
ನಾವೀಗ ಮೊದಲ ಸಮೀಕರಣವನ್ನು ಕಾರ್ಯಗತಗೊಳಿಸಿದ್ದೇವೆ. |
07:12 | ನಂತರ ನಾವು ಎರಡು ಲೆಫ್ಟ್ ಶಿಫ್ಟ್ ಅಪರೇಶನ್ ಗಳನ್ನು ಮಾಡಿ ಮೌಲ್ಯವನ್ನು r30 ರಲ್ಲಿ ಶೇಖರಿಸಲಿದ್ದೇವೆ.
ಹೀಗೆ, r30 ರ ಮೂರನೇ ಬಿಟ್, A ಯ ಮೌಲ್ಯವನ್ನು ಹೊಂದಿದೆ. |
07:24 | 'reload' ಸಬ್ ರೂಟೀನ್, r0, r1, r2, r3, r4, r5, r6 ಮತ್ತು r7 ಮೌಲ್ಯಗಳನ್ನು ಇದರ ಕಾಪಿಗಳಿಂದ ರೀಲೋಡ್ ಮಾಡುತ್ತದೆ. |
07:36 | ಹಿಂದಿನ ಅಪರೇಶನ್ ಗಳ ವೇಳೆ ಅವು ಬದಲಾಗಿರಬಹುದು. |
07:41 | B ಗೆ ಲಾಜಿಕ್ ಅನ್ನು ಕಾರ್ಯಗತಗೊಳಿಸಲಾಗಿದೆ ಮತ್ತು ಫಲಿತಾಂಶವನ್ನು r0 ಯಲ್ಲಿ ಶೇಖರಿಸಲಾಗಿದೆ. |
07:47 | r0 ಯಲ್ಲಿ ಮೌಲ್ಯವನ್ನು ಮೂರು ಬಾರಿ ಲೆಫ್ಟ್ ಶಿಫ್ಟ್ ಮಾಡಿ r30 ರಲ್ಲಿ ಶೇಖರಿಸಲಾಗಿದೆ. |
07:54 | ಈಗ, r30 ರ ನಾಲ್ಕನೇ ಬಿಟ್, B ಯ ಫಲಿತಾಂಶವನ್ನು ಹಿಡಿದಿಡುತ್ತದೆ. |
08:00 | C ಗೆ ಲಾಜಿಕ್ ಅನ್ನು ಕಾರ್ಯಗತಗೊಳಿಸಲಾಗಿದೆ ಮತ್ತು r0 ಯಲ್ಲಿ ಫಲಿತಾಂಶವನ್ನು ಶೇಖರಿಸಲಾಗಿದೆ. |
08:06 | r0 ರಲ್ಲಿ ಮೌಲ್ಯವನ್ನು ನಾಲ್ಕು ಬಾರಿ ಲೆಫ್ಟ್ ಶಿಫ್ಟ್ ಮಾಡಲಾಗಿದೆ ಮತ್ತು ಫಲಿತಾಂಶವನ್ನು r30 ರಲ್ಲಿ ಶೇಖರಿಸಲಾಗಿದೆ. |
08:13 | ಈಗ r30 ರ ಐದನೇ ಬಿಟ್, C ಯ ಫಲಿತಾಂಶವನ್ನು ಹಿಡಿದಿಡುತ್ತದೆ. |
08:19 | D ಗೆ ಲಾಜಿಕ್ ಅನ್ನು ಕಾರ್ಯಗತಗೊಳಿಸಲಾಗಿದೆ ಮತ್ತು r0 ನಲ್ಲಿ ಶೇಖರಿಸಲಾಗಿದೆ. |
08:25 | r0 ಯಲ್ಲಿ ಮೌಲ್ಯವನ್ನು ಐದು ಬಾರಿ ಲೆಫ್ಟ್ ಶಿಫ್ಟ್ ಮಾಡಲಾಗಿದೆ ಮತ್ತು r30 ರಲ್ಲಿ ಶೇಖರಿಸಲಾಗಿದೆ. |
08:32 | ಈಗ r30 ರ ಆರನೇ ಬಿಟ್, D ಯ ಫಲಿತಾಂಶವನ್ನು ಹಿಡಿದಿಡುತ್ತದೆ. |
08:38 | ಅಂತಿಮವಾಗಿ, r30 ರಲ್ಲಿ ಶೇಖರಿಸಲಾಗಿರುವ ಮೌಲ್ಯವನ್ನು ಡಿಸ್ಪ್ಲೇಗಾಗಿ PORTD ಗೆ ಕಳುಹಿಸಲಾಗುತ್ತದೆ. |
08:46 | ಕೋಡ್ ಅನ್ನು home slash spoken slash Assembly ಫೋಲ್ಡರ್ ನಲ್ಲಿ combination.asm ಆಗಿ ಸೇವ್ ಮಾಡಿ. |
08:55 | terminal ಗೆ ಮರಳಿ. |
08:58 | avra space combination.asm ಎಂದು ಟೈಪ್ ಮಾಡಿ Enter ಒತ್ತಿ. |
09:05 | ಇದು ಕೋಡ್ ಅನ್ನು ಸೇರಿಸುತ್ತದೆ ಮತ್ತು combination.hex ಫೈಲ್ ಅನ್ನು ರಚಿಸುತ್ತದೆ.
ನಾವು ಟರ್ಮಿನಲ್ ಅನ್ನು ತೆರವುಗೊಳಿಸೋಣ. |
09:14 | ಅಪ್ ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯುವುದಕ್ಕಾಗಿ ಅಪ್ ಆರೋ ಒತ್ತಿ. |
09:19 | ಈಗ, ಇಲ್ಲಿ ತೋರಿಸಿರುವಂತೆ ಫೈಲ್ ಹೆಸರನ್ನು ಬದಲಾಯಿಸಿ ಮತ್ತು Enter ಒತ್ತಿ. |
09:26 | ನೀವು ಟ್ರುತ್ ಟೇಬಲ್ ಅನ್ನು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ ತೋರಿಸಿರುವ ಔಟ್ಪುಟ್ ಜೊತೆ ಪರಿಶೀಲಿಸಬಹುದು. |
09:34 | ಟ್ಯುಟೋರಿಯಲ್ ಅನ್ನು ಪಾಸ್ (Pause) ಮಾಡಿ ಮತ್ತು ಕೆಳಗಿನ ಅಸೈನ್ ಮೆಂಟ್ ಮಾಡಿ. |
09:38 | W, X, Y ಮತ್ತು Z ನ ಮೌಲ್ಯಗಳನ್ನು ಬದಲಾಯಿಸಿ ಮತ್ತು ಟ್ರುತ್ ಟೇಬಲ್ ನಲ್ಲಿ ವಿವಿಧ ಸಾಲುಗಳನ್ನು ಪರಿಶೀಲಿಸಿ. |
09:46 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
09:52 | ಈ ಟ್ಯುಟೋರಿಯಲ್ ನಲ್ಲಿ ನಾವು: assembly ಯಲ್ಲಿ AND, OR ಮತ್ತು XOR ಅಪರೇಶನ್ ಗಳನ್ನು ಕಾರ್ಯಗತಗೊಳಿಸಲು ಮತ್ತು ಪರಿಶೀಲಿಸಲು, |
10:01 | ಸರಳ ಕಾಂಬಿನೇಶನಲ್ ಲಾಜಿಕ್ ಅನ್ನು ಕಾರ್ಯಗತಗೊಳಿಸಲು ಮತ್ತು ಪರಿಶೀಲಿಸಲು ಕಲಿತೆವು. |
10:05 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:13 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಪತ್ರ ಬರೆಯಿರಿ. |
10:23 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
10:27 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ. |
10.38 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
ಧನ್ಯವಾದಗಳು. |