|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− | |-
| |
− | ||00:01
| |
− | || ಸ್ಟಾಟಿಕ್ ಬ್ಲಾಕ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
| |
− |
| |
− | |-
| |
− | ||00:06
| |
− | || ಈ ಟ್ಯುಟೋರಿಯಲ್ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ಗಳು ಎಂದರೇನು, ಸ್ಟಾಟಿಕ್ ಬ್ಲಾಕ್ಗಳನ್ನು
| |
− |
| |
− | |-
| |
− | ||00:10
| |
− | || ಹೇಗೆ ಘೋಷಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ಗಳನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯಲಿದ್ದೇವೆ.
| |
− |
| |
− | |-
| |
− | ||00:16
| |
− | || ಇಲ್ಲಿ ನಾವು ಉಬಂಟು 14.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
| |
− |
| |
− | |-
| |
− | ||00:26
| |
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
| |
− |
| |
− | |-
| |
− | ||00:34
| |
− | || ನೀವು ಜಾವಾದಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳು, ಸ್ಟಾಟಿಕ್ ವೇರಿಯೇಬಲ್ ಗಳು ಮತ್ತು ಸ್ಟಾಟಿಕ್ ಮೆಥಡ್ಗಳ ಜ್ಞಾನವನ್ನು ಹೊಂದಿರಬೇಕು.
| |
− |
| |
− | |-
| |
− | ||00:43
| |
− | || ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
| |
− |
| |
− | |-
| |
− | ||00:48
| |
− | || ನಾವೀಗ ಸ್ಟಾಟಿಕ್ ಬ್ಲಾಕ್ಗಳ ಕುರಿತು ಕಲಿಯೋಣ.
| |
− |
| |
− | |-
| |
− | ||00:52
| |
− | || ಸ್ಟಾಟಿಕ್ ಬ್ಲಾಕ್ಅನ್ನು ಹೆಚ್ಚಿನದಾಗಿ ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡುವುದಕ್ಕೆ ಬಳಸಲಾಗುತ್ತದೆ.
| |
− |
| |
− | |-
| |
− | ||00:59
| |
− | || ಸ್ಟಾಟಿಕ್ ಬ್ಲಾಕ್ಅನ್ನು static ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
| |
− |
| |
− | |-
| |
− | ||01:03
| |
− | || ಮೆಮೊರಿಯಲ್ಲಿ ಕ್ಲಾಸ್ ಅನ್ನು ಲೋಡ್ ಮಾಡಿದಾಗ ಸ್ಟಾಟಿಕ್ ಬ್ಲಾಕ್ಗಳನ್ನು ಎಕ್ಸಿಕ್ಯೂಟ್ (ಕಾರ್ಯಗತ) ಮಾಡಲಾಗುತ್ತದೆ.
| |
− |
| |
− | |-
| |
− | ||01:08
| |
− | || ಪ್ರೋಗ್ರಾಂನಲ್ಲಿ ಸ್ಟಾಟಿಕ್ ಬ್ಲಾಕ್ಗಳಿದ್ದರೆ, ಕನ್ಸ್ಟ್ರಕ್ಟರ್ಗಳ ಮೊದಲು ಅವುಗಳನ್ನು ಇನ್ವೋಕ್ (ಜಾರಿಗೊಳಿಸು) ಮಾಡಲಾಗುತ್ತದೆ.
| |
− |
| |
− | |-
| |
− | ||01:14
| |
− | || ನಾವು ಸ್ಟಾಟಿಕ್ ಬ್ಲಾಕ್ನ ಒಳಗೆ ಇನ್ಸ್ಟೆನ್ಸ್ ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಲಾಗದು.
| |
− |
| |
− | |-
| |
− | ||01:19
| |
− | ||ಈಗ ನಾವು ಎಕ್ಲಿಪ್ಸ್ನತ್ತ ಸಾಗೋಣ ಮತ್ತು StaticBlockDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
| |
− |
| |
− | |-
| |
− | ||01:26
| |
− | || ಈ ಪ್ರಾಜೆಕ್ಟ್ ನ ಒಳಗೆ, ಸ್ಟಾಟಿಕ್ ಬ್ಲಾಕ್ಗಳ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ.
| |
− |
| |
− | |-
| |
− | ||01:33
| |
− | || src ಫೋಲ್ಡರ್ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New-> Class ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:38
| |
− | || ಕ್ಲಾಸ್ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
| |
− |
| |
− | |-
| |
− | ||01:44
| |
− | || ಈಗ, StudentEnroll ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||01:49
| |
− | || ಇಲ್ಲಿ ಕೌಂಟ್ ಮತ್ತು orgname ಎಂಬ ಎರಡು ಸ್ಟಾಟಿಕ್ ವೇರಿಯೇಬಲ್ಗಳು ಇವೆ ಎಂಬುದನ್ನು ಗಮನಿಸಿ.
| |
− |
| |
− | |-
| |
− | ||01:54
| |
− | || ಈಗ Source -> ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ.
| |
− |
| |
− | |-
| |
− | ||02:00
| |
− | || ರಚಿಸಿದ ಕೋಡ್ನಿಂದ super ಕೀವರ್ಡ್ ಅನ್ನು ಅಳಿಸಿ.
| |
− |
| |
− | |-
| |
− | ||02:04
| |
− | || ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡಿದಾಗಲೆಲ್ಲ ಸಂದೇಶವೊಂದು ಪ್ರಿಂಟ್ (ಮುದ್ರಣ) ಆಗಲು ನಾವು ಇಷ್ಟಪಡುತ್ತೇವೆ.
| |
− |
| |
− | |-
| |
− | ||02:09
| |
− | || “Constructor invoked” ಎಂದು ಪ್ರಿಂಟ್ ಮಾಡುವುದಕ್ಕಾಗಿ ಕನ್ಸ್ಟ್ರಕ್ಟರ್ ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||02:15
| |
− | || ಈಗ ವೇರಿಯೇಬಲ್ಗಳ ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ ನಾವು ಈ ಕ್ಲಾಸಿಗೆ showData( ) ವಿಧಾನವನ್ನು ಸೇರಿಸಲಿದ್ದೇವೆ.
| |
− |
| |
− | |-
| |
− | ||02:21
| |
− | || ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||02:23
| |
− | || ಈಗ, ಕೌಂಟ್ ಮತ್ತು orgname ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡುವುದಕ್ಕಾಗಿ ನಾವು ಸ್ಟಾಟಿಕ್ ಬ್ಲಾಕ್ ಅನ್ನು ಸೇರಿಸಲಿದ್ದೇವೆ.
| |
− |
| |
− | |-
| |
− | ||02:29
| |
− | || ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||02:32
| |
− | || orgname ಮತ್ತು ಕೌಂಟ್ ವೇರಿಯೇಬಲ್ ಗಳು ಸ್ಟಾಟಿಕ್ ವೇರಿಯೇಬಲ್ ಗಳಾಗಿವೆ.
| |
− |
| |
− | |-
| |
− | ||02:36
| |
− | || ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಇದ್ದು static ಕೀವರ್ಡ್ ನ ಉಪಸರ್ಗ ಹೊಂದಿರುವ ಕೋಡ್ಗಳ ಬ್ಲಾಕ್ ಸ್ಟಾಟಿಕ್ ಬ್ಲಾಕ್ ಆಗಿದೆ.
| |
− |
| |
− | |-
| |
− | ||02:42
| |
− | || ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ನ ಮೌಲ್ಯಗಳನ್ನು 100 ಮತ್ತು IITM ಆಗಿ ಇನಿಶಿಯಲೈಸ್ ಮಾಡುತ್ತದೆ.
| |
− |
| |
− | |-
| |
− | ||02:51
| |
− | || ಈ ಸ್ಟಾಟಿಕ್ ಬ್ಲಾಕ್ ಒಳಗೆ, “static block-1 is invoked” ಎಂದು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||02:58
| |
− | || ಈಗ ನಾವು ಮೇನ್ ಮೆಥಡ್ ಅನ್ನು ಹೊಂದಿರುವ ಇನ್ನೊಂದು ಕ್ಲಾಸ್ ಅನ್ನು ಸೇರಿಸಲಿದ್ದೇವೆ.
| |
− |
| |
− | |-
| |
− | ||03:03
| |
− | || ಇದಕ್ಕಾಗಿ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
| |
− |
| |
− | |-
| |
− | ||03:11
| |
− | || ಈ ಕ್ಲಾಸ್ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
| |
− |
| |
− | |-
| |
− | ||03:15
| |
− | || main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು Ctrl+space ಒತ್ತಿ.
| |
− |
| |
− | |-
| |
− | ||03:21
| |
− | || ನಾವೀಗ StudentEnroll ಕ್ಲಾಸ್ನ ಅಬ್ಜೆಕ್ಟ್ ಅನ್ನು ರಚಿಸಲಿದ್ದೇವೆ.
| |
− |
| |
− | |-
| |
− | ||03:25
| |
− | || s1 ಅಬ್ಜೆಕ್ಟ್ ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||03:29
| |
− | || ಈಗ ಮೌಲ್ಯಗಳನ್ನು ಪ್ರಿಂಟ್ ಮಾಡಲು showData ವಿಧಾನವನ್ನು ಇನ್ವೋಕ್ ಮಾಡೋಣ.
| |
− |
| |
− | |-
| |
− | ||03:33
| |
− | || s1.showData() semicolon ಎಂದು ಟೈಪ್ ಮಾಡಿ.
| |
− |
| |
− | |-
| |
− | ||03:38
| |
− | || ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
| |
− |
| |
− | |-
| |
− | ||03:41
| |
− | || ಕನ್ಸ್ಟ್ರಕ್ಟರ್ನ ಮೊದಲು ಸ್ಟಾಟಿಕ್ ಬ್ಲಾಕ್ ಅನ್ನು ಇನ್ವೋಕ್ ಮಾಡಿರುವುದನ್ನು ನಾವು ಗಮನಿಸಬಹುದು.
| |
− |
| |
− | |-
| |
− | ||03:46
| |
− | || count ಮತ್ತು orgname ನ ಮೌಲ್ಯಗಳು, ಸ್ಟಾಟಿಕ್ ಬ್ಲಾಕ್ನಲ್ಲಿ ನಿರೂಪಿಸಿರುವಂತೆ ಇನಿಶಿಯಲೈಸ್ ಆಗುತ್ತವೆ.
| |
− |
| |
− | |-
| |
− | ||03:53
| |
− | || ನಾವೀಗ StudentEnroll ಕ್ಲಾಸಿಗೆ ಹಿಂತಿರುಗೋಣ.
| |
− |
| |
− | |-
| |
− | ||03:57
| |
− | || ಸ್ಟಾಟಿಕ್ ಬ್ಲಾಕ್ನ ಒಳಗೆ id ಯ ಮೌಲ್ಯವನ್ನು ಇನಿಶಿಯಲೈಸ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನೋಡೋಣ.
| |
− |
| |
− | |-
| |
− | ||04:03
| |
− | || ಸ್ಟಾಟಿಕ್ ಬ್ಲಾಕ್ ಒಳಗೆ id equals IT01 semicolon ಎಂದು ಟೈಪ್ ಮಾಡಿ.
| |
− |
| |
− | |-
| |
− | ||04:10
| |
− | || ಇಲ್ಲಿ ಎರರ್ (ದೋಷ) ಉಂಟಾಗಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||04:13
| |
− | || ಇನ್ಸ್ಟೆನ್ಸ್ ವೇರಿಯೇಬಲ್ ಅನ್ನು ಸ್ಟಾಟಿಕ್ ಬ್ಲಾಕ್ ಒಳಗೆ ಆಕ್ಸೆಸ್ ಮಾಡಲಾಗದು ಎಂಬುದನ್ನು ಇದು ತೋರಿಸುತ್ತದೆ.
| |
− |
| |
− | |-
| |
− | ||04:19
| |
− | || ನಾವೀಗ ಈ ಸಾಲನ್ನು ಕಮೆಂಟ್ ಮಾಡೋಣ ಮತ್ತು ಮುಂದುವರಿಯೋಣ.
| |
− |
| |
− | |-
| |
− | ||04:25
| |
− | || ಈಗ ಸ್ಲೈಡ್ಗಳಿಗೆ ಮರಳೋಣ.
| |
− |
| |
− | |-
| |
− | ||04:27
| |
− | || ಕ್ಲಾಸ್ ಒಂದು ಅನೇಕ ಸ್ಟಾಟಿಕ್ ಬ್ಲಾಕ್ಗಳನ್ನು ಹೊಂದಿರಬಹುದು.
| |
− |
| |
− | |-
| |
− | ||04:30
| |
− | || ಇಂತಹ ಸಂದರ್ಭದಲ್ಲಿ, ಅವು ಮೂಲ ಕೋಡ್ನಲ್ಲಿ ಕಾಣಿಸಿಕೊಳ್ಳುವ ಕ್ರಮಾಂಕದಲ್ಲಿ ಒಮ್ಮೆ ಮಾತ್ರ ಕರೆಯಲಾಗುತ್ತದೆ.
| |
− |
| |
− | |-
| |
− | ||04:37
| |
− | || ಇದನ್ನು ದೃಢೀಕರಿಸಲು ಎಕ್ಲಿಪ್ಸ್ ಗೆ ಸಾಗೋಣ.
| |
− |
| |
− | |-
| |
− | ||04:40
| |
− | || ಈಗ ಇರುವುದರ ಜೊತೆಗೆ ಇನ್ನೊಂದು ಸ್ಟಾಟಿಕ್ ಬ್ಲಾಕ್ ಅನ್ನು ಸೇರಿಸೋಣ.
| |
− |
| |
− | |-
| |
− | ||04:45
| |
− | || ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||04:47
| |
− | || ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ಗಳ ಮೌಲ್ಯವನ್ನು ಕ್ರಮವಾಗಿ 200 ಮತ್ತು IITB ಆಗಿ ಇನಿಶಿಯಲೈಸ್ ಮಾಡುತ್ತದೆ.
| |
− |
| |
− | |-
| |
− | ||04:57
| |
− | || ಈ ಸ್ಟಾಟಿಕ್ ಬ್ಲಾಕ್ ಒಳಗೆ, ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||05:01
| |
− | || ನಾವೀಗ Demo ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
| |
− |
| |
− | |-
| |
− | ||05:04
| |
− | || ಈ ಔಟ್ಪುಟ್ನಿಂದ, ಎರಡನೇ ಸ್ಟಾಟಿಕ್ ಬ್ಲಾಕ್ ಅನ್ನು ಮೊದಲಿನ ನಂತರ ಇನ್ವೋಕ್ ಮಾಡಲಾಗಿದೆ ಎಂದು ನಾವು ದೃಢಪಡಿಸಬಹುದು.
| |
− |
| |
− | |-
| |
− | ||05:10
| |
− | || count ಮತ್ತು orgname ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಎರಡನೇ ಸ್ಟಾಟಿಕ್ ಬ್ಲಾಕ್ನ ಮೂಲಕ ಪರಿಷ್ಕರಿಸಬಹುದು.
| |
− |
| |
− | |-
| |
− | ||05:18
| |
− | || ಅವೆಂದರೆ ಕ್ರಮವಾಗಿ 200 ಮತ್ತು IITB.
| |
− |
| |
− | |-
| |
− | ||05:22
| |
− | || ಈಗ ಸಂಕ್ಷೇಪಿಸೋಣ.
| |
− |
| |
− | |-
| |
− | ||05:24
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ ಎಂದರೇನು, ಸ್ಟಾಟಿಕ್ ಬ್ಲಾಕ್ ಅನ್ನು ಹೇಗೆ ಘೋಷಿಸುವುದು ಮತ್ತು ನಿರೂಪಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ ಗಳನ್ನು ಹೇಗೆ ಇನ್ವೋಕ್ ಮಾಡಲಾಗುತ್ತದೆ ಮತ್ತು ಎಕ್ಸಿಕ್ಯೂಟ್ ಮಾಡಲಾಗುತ್ತದೆ ಎಂಬುದನ್ನು ಕಲಿತೆವು.
| |
− |
| |
− | |-
| |
− | ||05:37
| |
− | || ಅಸೈನ್ಮೆಂಟ್ಗಾಗಿ, ಈ ಅಸೈನ್ಮೆಂಟ್, ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
| |
− |
| |
− | |-
| |
− | ||05:44
| |
− | || ನೀವು ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿ.
| |
− |
| |
− | |-
| |
− | ||05:48
| |
− | || ಈ ಹಿಂದಿನಂತೆಯೇ, ಈ ಸ್ಲೈಡ್ನಲ್ಲಿ ಸೂಚಿಸಿರುವಂತೆ CarService ಕ್ಲಾಸ್ ಅನ್ನು ವಿನ್ಯಾಸಗೊಳಿಸಿ.
| |
− |
| |
− | |-
| |
− | ||05:54
| |
− | || ಇನ್ಸ್ಟೆನ್ಸ್ ವೇರಿಯೇಬಲ್ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ಗಳನ್ನು ಗುರುತಿಸಿ.
| |
− |
| |
− | |-
| |
− | ||05:58
| |
− | || ಇನ್ಸ್ಟೆನ್ಸ್ ವೇರಿಯೇಬಲ್ಗಳಿಗೆ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಒಂದನ್ನು ನಿರೂಪಿಸಿ.
| |
− |
| |
− | |-
| |
− | ||06:03
| |
− | || ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಸ್ಟಾಟಿಕ್ ಬ್ಲಾಕ್ ಅನ್ನು ನಿರೂಪಿಸಿ.
| |
− |
| |
− | |-
| |
− | ||06:08
| |
− | || ಜೊತೆಗೆ ಮೇನ್ ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ.
| |
− |
| |
− | |-
| |
− | ||06:12
| |
− | || ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ.
| |
− | |-
| |
− | ||06:19
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.
| |
− |
| |
− | |-
| |
− | ||06:24
| |
− | || ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||06:27
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
| |
− |
| |
− | |-
| |
− | ||06:35
| |
− | || ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||06:39
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− |
| |
− | |-
| |
− | ||06:46
| |
− | || ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
| |
− |
| |
− | |-
| |
− | ||06:50
| |
− | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
| |
− | |-
| |
− | ||06:58
| |
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | ಧನ್ಯವಾದಗಳು.
| |
− | |-
| |