Difference between revisions of "Java/C3/Static-Blocks/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಸ್ಟಾಟಿಕ್ ಬ್ಲಾಕ್ಗಳ ಕುರಿತ ಸ್ಪೋಕನ್ ಟ್ಯುಟೋರಿಯ...")
 
Line 282: Line 282:
 
||06:12
 
||06:12
 
|| ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ.
 
|| ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ.
 
+
|-
 
||06:19
 
||06:19
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.  
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.  

Revision as of 18:20, 5 April 2020

Time Narration
00:01 ಸ್ಟಾಟಿಕ್ ಬ್ಲಾಕ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ಗಳು ಎಂದರೇನು, ಸ್ಟಾಟಿಕ್ ಬ್ಲಾಕ್ಗಳನ್ನು
00:10 ಹೇಗೆ ಘೋಷಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ಗಳನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯಲಿದ್ದೇವೆ.
00:16 ಇಲ್ಲಿ ನಾವು ಉಬಂಟು 14.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
00:26 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:34 ನೀವು ಜಾವಾದಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳು, ಸ್ಟಾಟಿಕ್ ವೇರಿಯೇಬಲ್ ಗಳು ಮತ್ತು ಸ್ಟಾಟಿಕ್ ಮೆಥಡ್ಗಳ ಜ್ಞಾನವನ್ನು ಹೊಂದಿರಬೇಕು.
00:43 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:48 ನಾವೀಗ ಸ್ಟಾಟಿಕ್ ಬ್ಲಾಕ್ಗಳ ಕುರಿತು ಕಲಿಯೋಣ.
00:52 ಸ್ಟಾಟಿಕ್ ಬ್ಲಾಕ್ಅನ್ನು ಹೆಚ್ಚಿನದಾಗಿ ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡುವುದಕ್ಕೆ ಬಳಸಲಾಗುತ್ತದೆ.
00:59 ಸ್ಟಾಟಿಕ್ ಬ್ಲಾಕ್ಅನ್ನು static ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
01:03 ಮೆಮೊರಿಯಲ್ಲಿ ಕ್ಲಾಸ್ ಅನ್ನು ಲೋಡ್ ಮಾಡಿದಾಗ ಸ್ಟಾಟಿಕ್ ಬ್ಲಾಕ್ಗಳನ್ನು ಎಕ್ಸಿಕ್ಯೂಟ್ (ಕಾರ್ಯಗತ) ಮಾಡಲಾಗುತ್ತದೆ.
01:08 ಪ್ರೋಗ್ರಾಂನಲ್ಲಿ ಸ್ಟಾಟಿಕ್ ಬ್ಲಾಕ್ಗಳಿದ್ದರೆ, ಕನ್ಸ್ಟ್ರಕ್ಟರ್ಗಳ ಮೊದಲು ಅವುಗಳನ್ನು ಇನ್ವೋಕ್ (ಜಾರಿಗೊಳಿಸು) ಮಾಡಲಾಗುತ್ತದೆ.
01:14 ನಾವು ಸ್ಟಾಟಿಕ್ ಬ್ಲಾಕ್ನ ಒಳಗೆ ಇನ್ಸ್ಟೆನ್ಸ್ ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಲಾಗದು.
01:19 ಈಗ ನಾವು ಎಕ್ಲಿಪ್ಸ್ನತ್ತ ಸಾಗೋಣ ಮತ್ತು StaticBlockDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
01:26 ಈ ಪ್ರಾಜೆಕ್ಟ್ ನ ಒಳಗೆ, ಸ್ಟಾಟಿಕ್ ಬ್ಲಾಕ್ಗಳ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ.
01:33 src ಫೋಲ್ಡರ್ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New-> Class ಮೇಲೆ ಕ್ಲಿಕ್ ಮಾಡಿ.
01:38 ಕ್ಲಾಸ್ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:44 ಈಗ, StudentEnroll ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
01:49 ಇಲ್ಲಿ ಕೌಂಟ್ ಮತ್ತು orgname ಎಂಬ ಎರಡು ಸ್ಟಾಟಿಕ್ ವೇರಿಯೇಬಲ್ಗಳು ಇವೆ ಎಂಬುದನ್ನು ಗಮನಿಸಿ.
01:54 ಈಗ Source -> ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ.
02:00 ರಚಿಸಿದ ಕೋಡ್ನಿಂದ super ಕೀವರ್ಡ್ ಅನ್ನು ಅಳಿಸಿ.
02:04 ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡಿದಾಗಲೆಲ್ಲ ಸಂದೇಶವೊಂದು ಪ್ರಿಂಟ್ (ಮುದ್ರಣ) ಆಗಲು ನಾವು ಇಷ್ಟಪಡುತ್ತೇವೆ.
02:09 “Constructor invoked” ಎಂದು ಪ್ರಿಂಟ್ ಮಾಡುವುದಕ್ಕಾಗಿ ಕನ್ಸ್ಟ್ರಕ್ಟರ್ ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ.
02:15 ಈಗ ವೇರಿಯೇಬಲ್ಗಳ ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ ನಾವು ಈ ಕ್ಲಾಸಿಗೆ showData( ) ವಿಧಾನವನ್ನು ಸೇರಿಸಲಿದ್ದೇವೆ.
02:21 ಇದಕ್ಕಾಗಿ ಈ ಕೋಡ್‌ ಅನ್ನು ಟೈಪ್‌ ಮಾಡಿ.
02:23 ಈಗ, ಕೌಂಟ್‌ ಮತ್ತು orgname ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡುವುದಕ್ಕಾಗಿ ನಾವು ಸ್ಟಾಟಿಕ್‌ ಬ್ಲಾಕ್‌ ಅನ್ನು ಸೇರಿಸಲಿದ್ದೇವೆ.
02:29 ಈ ಕೋಡ್‌ ಅನ್ನು ಟೈಪ್‌ ಮಾಡಿ.
02:32 orgname ಮತ್ತು ಕೌಂಟ್‌ ವೇರಿಯೇಬಲ್‌ ಗಳು ಸ್ಟಾಟಿಕ್‌ ವೇರಿಯೇಬಲ್‌ ಗಳಾಗಿವೆ.
02:36 ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಇದ್ದು static ಕೀವರ್ಡ್ ನ ಉಪಸರ್ಗ ಹೊಂದಿರುವ ಕೋಡ್ಗಳ ಬ್ಲಾಕ್ ಸ್ಟಾಟಿಕ್ ಬ್ಲಾಕ್ ಆಗಿದೆ.
02:42 ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ನ ಮೌಲ್ಯಗಳನ್ನು 100 ಮತ್ತು IITM ಆಗಿ ಇನಿಶಿಯಲೈಸ್ ಮಾಡುತ್ತದೆ.
02:51 ಈ ಸ್ಟಾಟಿಕ್ ಬ್ಲಾಕ್ ಒಳಗೆ, “static block-1 is invoked” ಎಂದು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
02:58 ಈಗ ನಾವು ಮೇನ್ ಮೆಥಡ್ ಅನ್ನು ಹೊಂದಿರುವ ಇನ್ನೊಂದು ಕ್ಲಾಸ್ ಅನ್ನು ಸೇರಿಸಲಿದ್ದೇವೆ.
03:03 ಇದಕ್ಕಾಗಿ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
03:11 ಈ ಕ್ಲಾಸ್ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
03:15 main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು Ctrl+space ಒತ್ತಿ.
03:21 ನಾವೀಗ StudentEnroll ಕ್ಲಾಸ್ನ ಅಬ್ಜೆಕ್ಟ್ ಅನ್ನು ರಚಿಸಲಿದ್ದೇವೆ.
03:25 s1 ಅಬ್ಜೆಕ್ಟ್ ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
03:29 ಈಗ ಮೌಲ್ಯಗಳನ್ನು ಪ್ರಿಂಟ್ ಮಾಡಲು showData ವಿಧಾನವನ್ನು ಇನ್ವೋಕ್ ಮಾಡೋಣ.
03:33 s1.showData() semicolon ಎಂದು ಟೈಪ್ ಮಾಡಿ.
03:38 ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
03:41 ಕನ್ಸ್ಟ್ರಕ್ಟರ್ನ ಮೊದಲು ಸ್ಟಾಟಿಕ್ ಬ್ಲಾಕ್ ಅನ್ನು ಇನ್ವೋಕ್ ಮಾಡಿರುವುದನ್ನು ನಾವು ಗಮನಿಸಬಹುದು.
03:46 count ಮತ್ತು orgname ನ ಮೌಲ್ಯಗಳು, ಸ್ಟಾಟಿಕ್ ಬ್ಲಾಕ್ನಲ್ಲಿ ನಿರೂಪಿಸಿರುವಂತೆ ಇನಿಶಿಯಲೈಸ್ ಆಗುತ್ತವೆ.
03:53 ನಾವೀಗ StudentEnroll ಕ್ಲಾಸಿಗೆ ಹಿಂತಿರುಗೋಣ.
03:57 ಸ್ಟಾಟಿಕ್ ಬ್ಲಾಕ್ನ ಒಳಗೆ id ಯ ಮೌಲ್ಯವನ್ನು ಇನಿಶಿಯಲೈಸ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನೋಡೋಣ.
04:03 ಸ್ಟಾಟಿಕ್ ಬ್ಲಾಕ್ ಒಳಗೆ id equals IT01 semicolon ಎಂದು ಟೈಪ್ ಮಾಡಿ.
04:10 ಇಲ್ಲಿ ಎರರ್ (ದೋಷ) ಉಂಟಾಗಿರುವುದನ್ನು ನಾವು ನೋಡಬಹುದು.
04:13 ಇನ್ಸ್ಟೆನ್ಸ್ ವೇರಿಯೇಬಲ್ ಅನ್ನು ಸ್ಟಾಟಿಕ್ ಬ್ಲಾಕ್ ಒಳಗೆ ಆಕ್ಸೆಸ್ ಮಾಡಲಾಗದು ಎಂಬುದನ್ನು ಇದು ತೋರಿಸುತ್ತದೆ.
04:19 ನಾವೀಗ ಈ ಸಾಲನ್ನು ಕಮೆಂಟ್ ಮಾಡೋಣ ಮತ್ತು ಮುಂದುವರಿಯೋಣ.
04:25 ಈಗ ಸ್ಲೈಡ್ಗಳಿಗೆ ಮರಳೋಣ.
04:27 ಕ್ಲಾಸ್ ಒಂದು ಅನೇಕ ಸ್ಟಾಟಿಕ್ ಬ್ಲಾಕ್ಗಳನ್ನು ಹೊಂದಿರಬಹುದು.
04:30 ಇಂತಹ ಸಂದರ್ಭದಲ್ಲಿ, ಅವು ಮೂಲ ಕೋಡ್ನಲ್ಲಿ ಕಾಣಿಸಿಕೊಳ್ಳುವ ಕ್ರಮಾಂಕದಲ್ಲಿ ಒಮ್ಮೆ ಮಾತ್ರ ಕರೆಯಲಾಗುತ್ತದೆ.
04:37 ಇದನ್ನು ದೃಢೀಕರಿಸಲು ಎಕ್ಲಿಪ್ಸ್ ಗೆ ಸಾಗೋಣ.
04:40 ಈಗ ಇರುವುದರ ಜೊತೆಗೆ ಇನ್ನೊಂದು ಸ್ಟಾಟಿಕ್ ಬ್ಲಾಕ್ ಅನ್ನು ಸೇರಿಸೋಣ.
04:45 ಈ ಕೋಡ್ ಅನ್ನು ಟೈಪ್ ಮಾಡಿ.
04:47 ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ಗಳ ಮೌಲ್ಯವನ್ನು ಕ್ರಮವಾಗಿ 200 ಮತ್ತು IITB ಆಗಿ ಇನಿಶಿಯಲೈಸ್ ಮಾಡುತ್ತದೆ.
04:57 ಈ ಸ್ಟಾಟಿಕ್ ಬ್ಲಾಕ್ ಒಳಗೆ, ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
05:01 ನಾವೀಗ Demo ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
05:04 ಈ ಔಟ್ಪುಟ್ನಿಂದ, ಎರಡನೇ ಸ್ಟಾಟಿಕ್ ಬ್ಲಾಕ್ ಅನ್ನು ಮೊದಲಿನ ನಂತರ ಇನ್ವೋಕ್ ಮಾಡಲಾಗಿದೆ ಎಂದು ನಾವು ದೃಢಪಡಿಸಬಹುದು.
05:10 count ಮತ್ತು orgname ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಎರಡನೇ ಸ್ಟಾಟಿಕ್ ಬ್ಲಾಕ್ನ ಮೂಲಕ ಪರಿಷ್ಕರಿಸಬಹುದು.
05:18 ಅವೆಂದರೆ ಕ್ರಮವಾಗಿ 200 ಮತ್ತು IITB.
05:22 ಈಗ ಸಂಕ್ಷೇಪಿಸೋಣ.
05:24 ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ ಎಂದರೇನು, ಸ್ಟಾಟಿಕ್ ಬ್ಲಾಕ್ ಅನ್ನು ಹೇಗೆ ಘೋಷಿಸುವುದು ಮತ್ತು ನಿರೂಪಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ ಗಳನ್ನು ಹೇಗೆ ಇನ್ವೋಕ್ ಮಾಡಲಾಗುತ್ತದೆ ಮತ್ತು ಎಕ್ಸಿಕ್ಯೂಟ್ ಮಾಡಲಾಗುತ್ತದೆ ಎಂಬುದನ್ನು ಕಲಿತೆವು.
05:37 ಅಸೈನ್ಮೆಂಟ್ಗಾಗಿ, ಈ ಅಸೈನ್ಮೆಂಟ್, ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
05:44 ನೀವು ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿ.
05:48 ಈ ಹಿಂದಿನಂತೆಯೇ, ಈ ಸ್ಲೈಡ್ನಲ್ಲಿ ಸೂಚಿಸಿರುವಂತೆ CarService ಕ್ಲಾಸ್ ಅನ್ನು ವಿನ್ಯಾಸಗೊಳಿಸಿ.
05:54 ಇನ್ಸ್ಟೆನ್ಸ್ ವೇರಿಯೇಬಲ್ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ಗಳನ್ನು ಗುರುತಿಸಿ.
05:58 ಇನ್ಸ್ಟೆನ್ಸ್ ವೇರಿಯೇಬಲ್ಗಳಿಗೆ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಒಂದನ್ನು ನಿರೂಪಿಸಿ.
06:03 ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಸ್ಟಾಟಿಕ್ ಬ್ಲಾಕ್ ಅನ್ನು ನಿರೂಪಿಸಿ.
06:08 ಜೊತೆಗೆ ಮೇನ್ ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ.
06:12 ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ.
06:19 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.
06:24 ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
06:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
06:35 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
06:39 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
06:46 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
06:50 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
06:58 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14