Difference between revisions of "Moodle-Learning-Management-System/C2/Question-bank-in-Moodle/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 178: | Line 178: | ||
|- | |- | ||
| 05:53 | | 05:53 | ||
− | | ನಾನು ಇಲ್ಲಿ ಮಾಡಿರುವಂತೆ, ಉಳಿದ ''' | + | | ನಾನು ಇಲ್ಲಿ ಮಾಡಿರುವಂತೆ, ಉಳಿದ '''choice''' ಮತ್ತು '''grade''' ಗಳನ್ನು ಭರ್ತಿಮಾಡಿ. |
|- | |- | ||
| 06:01 | | 06:01 |
Latest revision as of 12:49, 27 January 2020
Time | Narration |
00:01 | ಮೂಡಲ್ ನಲ್ಲಿ Question bank ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank, |
00:12 | ಪ್ರಶ್ನೆಗಳ ವಿಧಗಳು (Categories) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:26 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:34 | Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:44 | Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:52 | ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ ಮತ್ತು |
01:03 | ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿದ್ದೀರಿ ಎಂದು ಭಾವಿಸುತ್ತೇನೆ. |
01:09 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:16 | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ. |
01:24 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಹೊಂದಿರುವ ಒಂದು ಟೆಕ್ಸ್ಟ್ ಫೈಲ್ ಅನ್ನು ನಾನು Code files ಲಿಂಕ್ ನಲ್ಲಿ ಒದಗಿಸಿದ್ದೇನೆ.
“Mytextfile.txt” ಎಂಬ ಫೈಲ್ ಅನ್ನು ನಿಮ್ಮ ಮಶಿನ್ ನಲ್ಲಿ ಡೌನ್ಲೋಡ್ ಮಾಡಿ, ಅದನ್ನು ತೆರೆಯಿರಿ. |
01:40 | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
01:45 | ಈಗ ಕ್ವಶ್ಚನ್ ಬ್ಯಾಂಕ್ ಗಳ ಬಗ್ಗೆ ತಿಳಿದುಕೊಳ್ಳೋಣ. |
01:49 | Question bank (ಕ್ವಶ್ಚನ್ ಬ್ಯಾಂಕ್), ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹವಾಗಿದೆ. |
01:55 | ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಮತ್ತೆ ಮತ್ತೆ ಬಳಸಬಹುದು. |
02:01 | ಪ್ರತಿಯೊಂದು ಶೈಕ್ಷಣಿಕ ವರ್ಷಕ್ಕಾಗಿ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗಾಗಿ, ವಿಭಿನ್ನವಾದ ಕ್ವಿಝ್ ಗಳನ್ನು ತಯಾರಿಸಲು ಇದು ಸಹಾಯಕವಾಗಿದೆ. |
02:09 | ಬ್ರೌಸರ್ ಗೆ ಹಿಂದಿರುಗಿ. |
02:11 | ಮೇಲೆ ಬಲಗಡೆಯಿರುವ ಗೇರ್ ಐಕಾನ್ ಮೇಲೆ, ಆನಂತರ ಕೊನೆಯಲ್ಲಿರುವ More… ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
02:18 | ನಾವು ಈಗ Course Administration ಪೇಜ್ ಗೆ ಬಂದಿದ್ದೇವೆ. |
02:22 | ಕೆಳಕ್ಕೆ ಸ್ಕ್ರೋಲ್ ಮಾಡಿ, Question bank ವಿಭಾಗವನ್ನು ಗುರುತಿಸಿ. |
02:27 | ಈ ವಿಭಾಗದಲ್ಲಿ, Categories ಲಿಂಕ್ ಅನ್ನು ಕ್ಲಿಕ್ ಮಾಡಿ. |
02:30 | Add category ವಿಭಾಗವನ್ನು ನೋಡಿ. |
02:34 | Parent category ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. |
02:37 | Top ಇಲ್ಲಿ, ಈ ಕೋರ್ಸ್ ಗಾಗಿ ಮೇಲ್ಮಟ್ಟದ ಕ್ಯಾಟೆಗರಿ (top level category) ಆಗಿದೆ. |
02:42 | ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆ ಆಗಿರದಿದ್ದರೆ, Default for Calculus ಅನ್ನು ಆಯ್ಕೆಮಾಡಿ. |
02:49 | Name ಫೀಲ್ಡ್ ನಲ್ಲಿ Basic Calculus ಎಂದು ಟೈಪ್ ಮಾಡಿ. |
02:54 | ಪೇಜ್ ನ ಕೆಳಗೆ ಇರುವ Add Category ಬಟನ್ ಅನ್ನು ಕ್ಲಿಕ್ ಮಾಡಿ.
ಹೀಗೆಯೇ, ನಾವು ಇನ್ನೂ ಹೆಚ್ಚು ಕ್ಯಾಟೆಗರಿ ಗಳನ್ನು ಸೇರಿಸಬಹುದು. |
03:04 | ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗಾಗಿ ಕ್ಯಾಟೆಗರಿ ಗಳ ಒಂದು ಶ್ರೇಣಿಯನ್ನು (hierarchy) ರಚಿಸಿ. |
03:11 | Questions ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ತಯಾರಿಸುವ ಪೇಜ್ ಗೆ ಹೋಗಿ. |
03:17 | ಕೆಳಗಿರುವ Create a new question ಬಟನ್ ಅನ್ನು ಕ್ಲಿಕ್ ಮಾಡಿ. |
03:22 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
03:25 | ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ. |
03:29 | ಬಲಭಾಗದಲ್ಲಿ, ಪ್ರಶ್ನೆಯ ವಿಧದ ಕುರಿತು ವಿಸ್ತಾರವಾದ ವಿವರಣೆ ಕಾಣಿಸುತ್ತದೆ. |
03:35 | ನಾನು Multiple choice ಅನ್ನು ಆಯ್ಕೆಮಾಡುವೆನು. |
03:39 | ಪಾಪ್-ಅಪ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
03:43 | ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ category ಯನ್ನು ಆಯ್ಕೆ ಮಾಡಿ.
ನಾನು Evolutes ಅನ್ನುಆಯ್ಕೆಮಾಡುವೆನು. |
03:51 | Question name ಫೀಲ್ಡ್ ನಲ್ಲಿ, MCQ with single correct answer ಎಂದು ಟೈಪ್ ಮಾಡಿ. |
03:57 | Question text ಜಾಗದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.
Mytextfile.txt ಫೈಲ್ ನಿಂದ ನೀವು ಕಾಪಿ ಮಾಡಿ, ಪೇಸ್ಟ್ ಮಾಡಬಹುದು. |
04:07 | Default Mark ಅನ್ನು 1 ಎಂದು ಸೆಟ್ ಮಾಡಲಾಗಿದೆ. ನಾನು ಇದನ್ನು ಹಾಗೇ ಇಡುವೆನು. |
04:12 | ಮುಂದಿನ ಆಯ್ಕೆ General feedback ಆಗಿದೆ. ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ, ಇಲ್ಲಿಯ ಟೆಕ್ಸ್ಟ್ಅನ್ನು ವಿದ್ಯಾರ್ಥಿಗೆ ತೋರಿಸಲಾಗುತ್ತದೆ. |
04:23 | ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಇದನ್ನು ಬಳಸಬಹುದು.
ನಾನು ಇಲ್ಲಿ ಮಾಡಿರುವಂತೆ, ಟೆಕ್ಸ್ಟ್ ಅನ್ನು ಟೈಪ್ ಮಾಡಿ ಅಥವಾ ಕಾಪಿ-ಪೇಸ್ಟ್ ಮಾಡಿ. |
04:34 | ಈಗ One or multiple answers ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ. |
04:39 | ಇಲ್ಲಿ ನಾವು Multiple answers allowed ಮತ್ತು
One answer only ಎಂಬ ಎರಡು ಆಯ್ಕೆಗಳನ್ನು ನೋಡಬಹುದು. |
04:46 | ಈ ಆಯ್ಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ನಾನು ತೋರಿಸುವೆನು. |
04:49 | ಮೊದಲಿಗೆ ನಾನು One answer only ಅನ್ನು ಆಯ್ಕೆಮಾಡುತ್ತೇನೆ. |
04:53 | ಡಿಫಾಲ್ಟ್ ಆಗಿ, Shuffle the choices ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿದೆ. ಪ್ರತಿ ಬಾರಿಯ ಕ್ವಿಝ್ ನಲ್ಲಿ, ಪ್ರಶ್ನೆಯ ಉತ್ತರದ ಆಯ್ಕೆಗಳ ಸ್ಥಾನವು ಬದಲಾಗಿರುವುದನ್ನು ಇದು ಖಚಿತ ಪಡಿಸುತ್ತದೆ. |
05:06 | Answers ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. |
05:10 | ಗಮನಿಸಿ, ಇಲ್ಲಿಯ ಪ್ರತಿಯೊಂದು ಆಯ್ಕೆಯು ಒಂದು grade ಮತ್ತು feedback ಗಳಿಗೆ ಸಂಬಂಧಿಸಿದೆ. |
05:17 | ಇಲ್ಲಿ ತೋರಿಸಿರುವಂತೆ Choice 1 ಎಂದು ಟೈಪ್ ಮಾಡಿ. |
05:20 | ಈ ಪ್ರಶ್ನೆಗೆ , Choice 1 ಸರಿಯಾದ ಉತ್ತರವಾಗಿದೆ. |
05:25 | ಆದ್ದರಿಂದ ನಾನು Grade ನಲ್ಲಿ 100% ಅನ್ನು ಆಯ್ಕೆಮಾಡುವೆನು. |
05:30 | Grade ಡ್ರಾಪ್-ಡೌನ್ ನಲ್ಲಿ, ಪ್ರತಿಯೊಂದು ಆಯ್ಕೆಗೆ ನಾವು ಭಾಗಶಃ ಅಂಕ ಅಥವಾ ಋಣಾತ್ಮಕ ಅಂಕವನ್ನು ಕೊಡಬಹುದು. |
05:38 | ಮೂಡಲ್ ಅನ್ನು ಚೆನ್ನಾಗಿ ಕಲಿತ ನಂತರ ನೀವು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು. |
05:43 | ಈ ಉತ್ತರವನ್ನು ಆಯ್ಕೆಮಾಡಿದ ವಿದ್ಯಾರ್ಥಿಗಳಿಗಾಗಿ, ಫೀಡ್-ಬ್ಯಾಕ್ ಅನ್ನು Feedback ಟೆಕ್ಸ್ಟ್- ಏರಿಯಾದಲ್ಲಿ ಬರೆಯಬಹುದು. ನಾನು “Correct” ಎಂದು ಟೈಪ್ ಮಾಡುವೆನು. |
05:53 | ನಾನು ಇಲ್ಲಿ ಮಾಡಿರುವಂತೆ, ಉಳಿದ choice ಮತ್ತು grade ಗಳನ್ನು ಭರ್ತಿಮಾಡಿ. |
06:01 | ಈಗ ಕೆಳಗೆ ಸ್ಕ್ರೋಲ್ ಮಾಡಿ. Multiple Tries ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ. |
06:08 | ಗಮನಿಸಿ: Penalty for each incorrect try ಫೀಲ್ಡ್ ಅನ್ನು ಡಿಫಾಲ್ಟ್ ಆಗಿ 33.33% ಎನ್ನಲಾಗಿದೆ. |
06:18 | ಎಂದರೆ, ವಿದ್ಯಾರ್ಥಿಯ ಪ್ರತಿಯೊಂದು ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ. |
06:24 | ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು. |
06:31 | ನಾನು 0% ಅನ್ನು ಆಯ್ಕೆ ಮಾಡುವೆನು. ಏಕೆಂದರೆ ತಪ್ಪು ಉತ್ತರಗಳಿಗಾಗಿ ವಿದ್ಯಾರ್ಥಿಗಳನ್ನು ದಂಡಿಸಲು ನಾನು ಬಯಸುವುದಿಲ್ಲ. |
06:39 | ನಂತರ ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
06:46 | ನಮ್ಮ ಪ್ರಶ್ನೆಯು Question Bank ಗೆ ಸೇರಿರುವುದನ್ನು ನೋಡಬಹುದು. |
06:51 | ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ. |
06:57 | ಇವು ಪ್ರಶ್ನೆಯನ್ನು edit, duplicate, preview ಮತ್ತು delete ಮಾಡಲು ಇರುತ್ತವೆ. |
07:06 | ಕ್ವಿಝ್ ನಲ್ಲಿ ಪ್ರಶ್ನೆಯು ಹೇಗೆ ಕಾಣುತ್ತವೆ ಎಂದು ನೋಡಲು, Preview ಐಕಾನ್ ಅನ್ನು ಕ್ಲಿಕ್ ಮಾಡಿ. |
07:13 | ಆಯ್ಕೆ ಮಾಡಿದ ಪ್ರಶ್ನೆ ಮತ್ತು ಅದರ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊ ದಲ್ಲಿ ತೆರೆದುಕೊಳ್ಳುತ್ತವೆ. |
07:19 | Fill in correct responses ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ. |
07:29 | Submit and finish ಬಟನ್ ಅನ್ನು ಕ್ಲಿಕ್ ಮಾಡಿ. |
07:32 | ಪ್ರಶ್ನೆಗೆ ಉತ್ತರಿಸಿದ ಮೇಲೆ ವಿದ್ಯಾರ್ಥಿಯು ನೋಡುವ ಫೀಡ್-ಬ್ಯಾಕ್ ಅನ್ನು ಇದು ತೋರಿಸುತ್ತದೆ. |
07:38 | ಒಂದು ಹೊಸ ಪ್ರಶ್ನೆಯನ್ನು ಸೇರಿಸಿದಾಗಲೆಲ್ಲ, ಅದನ್ನು ಮತ್ತೆ ಪರೀಕ್ಷಿಸಲು ನೀವು ಪ್ರಿವ್ಯೂ ವನ್ನು ನೋಡಿ. |
07:44 | ಈ ಪಾಪ್-ಅಪ್ ವಿಂಡೋ ವನ್ನು ಮುಚ್ಚಲು, Close preview ಬಟನ್ ಅನ್ನು ಕ್ಲಿಕ್ ಮಾಡಿ. |
07:49 | ಒಂದಕ್ಕಿಂತ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ MCQ ಅನ್ನು ಈಗ ರಚಿಸೋಣ. |
07:54 | ಹಿಂದಿನ ಹಂತಗಳನ್ನು ಅನುಸರಿಸಿ, ಒಂದು MCQ ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಸಹ ಹೀಗೆಯೆ ಮಾಡಿ. |
08:01 | One or multiple answers ಡ್ರಾಪ್-ಡೌನ್ ನಲ್ಲಿ ನಾನು ಈ ಬಾರಿ Multiple answers allowed ಅನ್ನು ಆಯ್ಕೆಮಾಡುವೆನು. |
08:10 | choice 1 ಹಾಗೂ 2 ಮತ್ತು ಅವುಗಳ Grade ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.
ಇಲ್ಲಿ ನಾನು ಎರಡಕ್ಕೂ Grade ಅನ್ನು 50% ಎಂದು ಆಯ್ಕೆಮಾಡಿದ್ದೇನೆ. |
08:20 | ಒಂದು ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಯು ಅರ್ಧ ಅಂಕವನ್ನು ಮತ್ತು |
08:26 | ಎರಡೂ ಉತ್ತರಗಳನ್ನು ಸರಿಯಾಗಿ ಕೊಡುವ ವಿದ್ಯಾರ್ಥಿಯು 1 ಅಂಕವನ್ನು ಪಡೆಯುತ್ತಾನೆ. |
08:32 | choice 3 ಹಾಗೂ 4 ಮತ್ತು ಅವುಗಳ Grade ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ. |
08:38 | ನಾನು Penalty for each incorrect try ಫೀಲ್ಡ್ ಅನ್ನು 0% ಎಂದು ಇಡುವೆನು. |
08:44 | ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ. |
08:49 | ನಂತರ, ಒಂದು Short answer ಪ್ರಶ್ನೆಯನ್ನು ಸೇರಿಸೋಣ. |
08:53 | ಇಲ್ಲಿ ವಿದ್ಯಾರ್ಥಿಯು, ಪ್ರಶ್ನೆಗೆ ಒಂದು ಶಬ್ದ ಅಥವಾ ವಾಕ್ಯಾಂಶವನ್ನು (phrase) ಉತ್ತರವಾಗಿ ಟೈಪ್ ಮಾಡಬೇಕು. |
09:00 | Create a new question ಬಟನ್ ನ ಮೇಲೆ ಕ್ಲಿಕ್ ಮಾಡಿ. ನಂತರ Short answer ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ. |
09:08 | ಇಲ್ಲಿ ತೋರಿಸಿದಂತೆ ಪ್ರಶ್ನೆಯನ್ನು ರಚಿಸಿ. |
09:11 | Case sensitivity ಡ್ರಾಪ್-ಡೌನ್ ನಲ್ಲಿ, No, case is unimportant ಅನ್ನು ಆಯ್ಕೆ ಮಾಡಿ. |
09:18 | ಈ ಪ್ರಶ್ನೆಗೆ ಸರಿಯಾದ ಉತ್ತರ “same logarithmic spiral” ಎಂದಾಗಿದೆ. |
09:24 | “same spiral” ಅಥವಾ “same logarithmic spiral” ಎಂದು ಉತ್ತರಿಸಿದ ವಿದ್ಯಾರ್ಥಿಗೆ ನಾನು ಪೂರ್ಣ ಅಂಕವನ್ನು ಕೊಡಲು ಬಯಸುತ್ತೇನೆ. |
09:35 | ಆದರೆ, ವಿದ್ಯಾರ್ಥಿಯು “logarithmic spiral” ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು. |
09:43 | ಕೆಳಗೆ Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
09:46 | ಇಲ್ಲಿ ತೋರಿಸಿದಂತೆ, Answer 1 ಮತ್ತು 2 ಹಾಗೂ ಅವುಗಳ grade ಗಳನ್ನು ನಮೂದಿಸಿ. |
09:52 | Answer 1 ಟೆಕ್ಸ್ಟ್ ನಲ್ಲಿರುವ ಆಸ್ಟೆರಿಸ್ಕ್ ಅನ್ನು (ನಕ್ಷತ್ರ ಚಿಹ್ನೆ) ಗಮನಿಸಿ.
ಇದನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು. |
10:02 | ಉದಾಹರಣೆಗೆ, ವಿದ್ಯಾರ್ಥಿಯು The evolute of a logarithmic spiral is the same logarithmic spiral ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ. |
10:15 | ಇಲ್ಲಿ ತೋರಿಸಿದಂತೆ, Answer 3 ಮತ್ತು ಅದರ Grade ಅನ್ನು ನಮೂದಿಸಿ. |
10:20 | ಗಮನಿಸಿ, ಇಲ್ಲಿ ಉತ್ತರದ ಮೊದಲು ಆಸ್ಟೆರಿಸ್ಕ್ ಚಿಹ್ನೆ ಇಲ್ಲ. |
10:24 | ಉದಾಹರಣೆಗೆ, ವಿದ್ಯಾರ್ಥಿಯು The evolute of a logarithmic spiral is not the same logarithmic spiral ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲಾಗುವುದಿಲ್ಲ. |
10:37 | ಇಲ್ಲಿ ತೋರಿಸಿದಂತೆ Answer 4 ಮತ್ತು ಅದರ Grade ಅನ್ನು ನಮೂದಿಸಿ. |
10:43 | ಈ ಉತ್ತರಕ್ಕೆ ನಾನು 50% ಅಂಕವನ್ನು ಮಾತ್ರ ಕೊಟ್ಟಿರುವುದನ್ನು ಗಮನಿಸಿ. |
10:48 | ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ ಹೀಗೆ ಟೈಪ್ ಮಾಡಿ:
“You need to specify that it’s the same spiral and not any spiral”. |
10:57 | ಈ ವಿವರಣೆಯನ್ನು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಎಂದು ತೋರಿಸಲಾಗುತ್ತದೆ. |
11:02 | ಇನ್ನೊಮ್ಮೆ, ನಾನು Penalty for each incorrect try ಫೀಲ್ಡ್ ನಲ್ಲಿ 0% ಎಂದೇ ಇಡುವೆನು. |
11:09 | ನಂತರ ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ. |
11:14 | ಈಗ ಒಂದು Numerical ಪ್ರಶ್ನೆಯನ್ನು ಸೇರಿಸೋಣ. |
11:18 | Create a new question ಬಟನ್ ಅನ್ನು ಕ್ಲಿಕ್ ಮಾಡಿ. ನಂತರ Numerical ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ. |
11:26 | ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ. |
11:29 | ಈ ಪ್ರಶ್ನೆಗೆ ಸರಿಯಾದ ಉತ್ತರ 5 mm ಎಂದಾಗಿದೆ.
ಆದರೆ, ವಿದ್ಯಾರ್ಥಿಯು 4.5mm ಮತ್ತು 5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ನನಗೆ ಒಪ್ಪಿಗೆ ಇದೆ. |
11:41 | ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ. |
11:45 | ಕೆಳಗೆ Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
11:48 | ಇಲ್ಲಿ ತೋರಿಸಿದಂತೆ Answers, Error ಮತ್ತು Grade ಗಳನ್ನು ನಮೂದಿಸಿ. |
11:53 | Unit handling ವಿಭಾಗವನ್ನು ವಿಸ್ತರಿಸಿ.
Unit handling ಡ್ರಾಪ್-ಡೌನ್ ನಲ್ಲಿ ಮೂರು ಆಯ್ಕೆಗಳಿವೆ. |
12:00 | ನಾನು The unit must be given, and will be graded ಆಯ್ಕೆಯನ್ನು ಆರಿಸಿಕೊಳ್ಳುವೆನು. |
12:07 | ಡಿಫಾಲ್ಟ್ ಆಗಿ, Unit penalty field, 0.1 ಅನ್ನು ತೋರಿಸುತ್ತಿದೆ. ನಾನು ಅದನ್ನು 0.5 ಎನ್ನುತ್ತೇನೆ. |
12:16 | ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಮಾತ್ರ ಬರೆದಿದ್ದರೆ, ಅರ್ಧದಷ್ಟು ಅಂಕಗಳನ್ನು ಪಡೆಯುವನು. |
12:23 | Units are input using ಡ್ರಾಪ್-ಡೌನ್ ನಲ್ಲಿ, ನಾನು the text input element ಅನ್ನು ಆಯ್ಕೆಮಾಡುವೆನು. |
12:31 | ಎಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಬೇಕು. |
12:37 | Units ವಿಭಾಗವನ್ನು ವಿಸ್ತರಿಸಿ. |
12:40 | ಯುನಿಟ್ ಅನ್ನು mm ಎಂದು, multiplier ಅನ್ನು 1 ಎಂದೂ ನಮೂದಿಸಿ. ಎಂದರೆ, ಉತ್ತರದ ಆಯ್ಕೆಗಳು mm ನಲ್ಲಿರಬೇಕು. |
12:50 | ಇನ್ನೊಮ್ಮೆ ನಾನು, Penalty for each incorrect try ಫೀಲ್ಡ್ ಅನ್ನು 0% ಎಂದೇ ಇಡುವೆನು. |
12:57 | ನಂತರ ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ. |
13:02 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
13:08 | ಈ ಟ್ಯುಟೋರಿಯಲ್ ನಲ್ಲಿ ನಾವು ಮೂಡಲ್ ನಲ್ಲಿ: Question bank, |
13:14 | ಪ್ರಶ್ನೆಗಳ ಕ್ಯಾಟೆಗರಿ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ. |
13:22 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ. |
13:28 | ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
13:34 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಮಾಡಿ ಮುಗಿದ ಮೇಲೆ ಮತ್ತೆ ಮುಂದುವರೆಸಿ. |
13:38 | ಈ ಕ್ವಶ್ಚನ್ ಬ್ಯಾಂಕ್ ನಲ್ಲಿ ಈಗ ನಾವು 10 ಪ್ರಶ್ನೆಗಳನ್ನು ಹೊಂದಿರಬೇಕು.
ಅವುಗಳಲ್ಲಿ 6 ಪ್ರಶ್ನೆಗಳು Evolutes ನಲ್ಲಿ ಮತ್ತು 4 ಪ್ರಶ್ನೆಗಳು Involutes ಸಬ್- ಕ್ಯಾಟೆಗರಿಯಲ್ಲಿ ಇರುತ್ತವೆ. |
13:51 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:00 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:10 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
14:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
14:27 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |