Difference between revisions of "Health-and-Nutrition/C2/Basics-of-newborn-care/Kannada"
Sandhya.np14 (Talk | contribs) (Created page with "{|border=1 | <center>Time</center> |<center>Narration</center> |- | 00:00 | '''Basics of newborn care''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗ...") |
Sandhya.np14 (Talk | contribs) |
||
Line 249: | Line 249: | ||
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. | ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. | ||
+ | |||
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Revision as of 09:41, 14 September 2019
|
|
00:00 | Basics of newborn care ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು - ನವಜಾತ ಶಿಶುವನ್ನು ಹೇಗೆ ನೋಡಿಕೊಳ್ಳುವುದು, |
00:11 | ಹೊಕ್ಕುಳಬಳ್ಳಿಯ ಆರೈಕೆ,
ನವಜಾತ ಶಿಶುವಿನ ಅಹಾರ ಮತ್ತು ತೇಗುವುದು (burping), |
00:15 | ಡಯಾಪರ್ ಹಾಕುವುದು ಹಾಗೂ ಇದರಿಂದ ಆಗಬಹುದಾದ ಗಾದರಿ/ದದ್ದು (diaper rash) ಮತ್ತು |
00:19 | ನವಜಾತ ಶಿಶುವಿನ ಮಲಗುವ ರೀತಿ ಇವುಗಳ ಬಗ್ಗೆ ಕಲಿಯುತ್ತೇವೆ. |
00:23 | ಒಂದು ಶಿಶು ಜನಿಸಿದಾಗ, ಇಡೀ ಕುಟುಂಬವು ಉತ್ಸಾಹದಿಂದಿರುತ್ತದೆ. ಪ್ರತಿಯೊಬ್ಬರೂ ಮಗುವನ್ನು ನೋಡಲು ಮತ್ತು ಮಗುವನ್ನು ಹಿಡಿದುಕೊಳ್ಳಲು ಬಯಸುತ್ತಾರೆ. |
00:34 | ಆದ್ದರಿಂದ ನವಜಾತ ಶಿಶುವನ್ನು ಹಿಡಿಯುವಾಗ, ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. |
00:40 | ನವಜಾತ ಶಿಶುಗಳಿಗೆ ಬಲವಾದ ರೋಗನಿರೋಧಕ ಶಕ್ತಿ ಇರುವುದಿಲ್ಲ. ಹೀಗಾಗಿ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. |
00:48 | ಮಗುವನ್ನು ಸೋಂಕಿನಿಂದ ರಕ್ಷಿಸಲು, ಅದನ್ನು ಸ್ಪರ್ಶಿಸುವ ಅಥವಾ ಹಿಡಿಯುವ ಮೊದಲು ಸ್ವಚ್ಛವಾದ ಕೈಗಳನ್ನು ಹೊಂದಿರುವುದು ಬಹಳ ಮುಖ್ಯ. |
00:57 | ನವಜಾತ ಶಿಶುವನ್ನು ಹಿಡಿಯುವ ಮೊದಲು, ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದು, ಶುಚಿಯಾದ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಿ. |
01:07 | ಈಗ, ಮಗುವನ್ನು ಹೇಗೆ ಹಿಡಿದುಕೊಳ್ಳುವುದು ಎಂದು ನೋಡೋಣ. |
01:11 | ಒಂದು ಕೈಯಿಂದ ಮಗುವಿನ ತಲೆ ಹಾಗೂ ಕುತ್ತಿಗೆಯನ್ನು ಆಧರಿಸಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಕೆಳಭಾಗವನ್ನು ಹಿಡಿದುಕೊಳ್ಳಿ. |
01:19 | ಕೆಳಗೆ ಮಲಗಿಸುವಾಗ, ಯಾವಾಗಲೂ ಮಗುವಿನ ತಲೆ ಮತ್ತು ಕುತ್ತಿಗೆಯನ್ನು ಆಧರಿಸಿ ಹಿಡಿದುಕೊಂಡು, ಅವಳ ಕೆಳಭಾಗವನ್ನು ಸಹ ಹಿಡಿದುಕೊಳ್ಳಿ. |
01:26 | ಮಲಗಿರುವ ಮಗುವನ್ನು ಎಚ್ಚರಗೊಳಿಸಲು, ಹೀಗೆ ಮಾಡಿ: |
01:31 | ಮಗುವಿನ ಪಾದಗಳಿಗೆ ಕಚಗುಳಿ ಇಡಿ ಅಥವಾ ಮಗುವನ್ನು ಎತ್ತಿಕೊಂಡು ಕುಳ್ಳಿರಿಸಿ ಅಥವಾ ಮಗುವಿನ ಕಿವಿಯನ್ನು ಮೆತ್ತಗೆ ಸ್ಪರ್ಶಿಸಿ. |
01:42 | ಯಾವಾಗಲೂ ನೆನಪಿಡಿ, ನವಜಾತ ಶಿಶು ಸೂಕ್ಷ್ಮವಾಗಿರುತ್ತದೆ. |
01:46 | ನವಜಾತ ಶಿಶುವನ್ನು ನೋಡಿಕೊಳ್ಳುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು -
ನವಜಾತ ಶಿಶು ಒರಟು ಆಟಕ್ಕೆ ಸಿದ್ಧವಾಗಿಲ್ಲ. |
01:55 | ಆದ್ದರಿಂದ, ಮಗುವನ್ನು ಮೊಣಕಾಲಿನ ಮೇಲೆ ಜಿಗಿಸಬೇಡಿ ಅಥವಾ ಗಾಳಿಯಲ್ಲಿ ತೂರಬೇಡಿ. |
02:01 | ಆಟದಲ್ಲಿ ಅಥವಾ ಹತಾಶೆಯಿಂದ ನವಜಾತ ಶಿಶುವನ್ನು ಎಂದಿಗೂ ಅಲುಗಾಡಿಸಬೇಡಿ. |
02:05 | ಮಗುವಿನ ಕತ್ತಿನ ಹಠಾತ್ ಎಳೆತವನ್ನು ತಪ್ಪಿಸಿ.
ಇವೆಲ್ಲವೂ ಮಗುವಿಗೆ ಒಳಗಿನ ಗಾಯಗಳಿಗೆ ಕಾರಣವಾಗಬಹುದು. |
02:14 | ಈಗ ನಾವು ಮನೆಯಲ್ಲಿ ಹೊಕ್ಕುಳಬಳ್ಳಿಯ ಆರೈಕೆಯ ಬಗ್ಗೆ ಕಲಿಯುತ್ತೇವೆ. |
02:18 | ಮಗು ತಾಯಿಯ ಗರ್ಭದಲ್ಲಿದ್ದಾಗ, ಹೊಕ್ಕುಳಬಳ್ಳಿಯು ಮಗುವಿನ ಜೀವಸೆಲೆ ಆಗಿದೆ.
ಆದರೆ ಮಗು ಜನಿಸಿದ ನಂತರ ಇದರ ಅಗತ್ಯವಿಲ್ಲ. |
02:30 | ಹುಟ್ಟಿದ ಕೆಲವೇ ನಿಮಿಷಗಳಲ್ಲಿ, ಬಳ್ಳಿಯು ಮಿಡಿಯುವುದನ್ನು ನಿಲ್ಲಿಸಿದ ತಕ್ಷಣ, ಅದನ್ನು ಕಟ್ಟಿಡಲಾಗುತ್ತದೆ. |
02:37 | ಮಗು ಆಸ್ಪತ್ರೆಯಿಂದ ಮನೆಗೆ ಹೋಗುವವರೆಗೆ ಬಳ್ಳಿಯು ಒಣಗಿ ಸುಕ್ಕಾಗಲು ಆರಂಭಿಸುತ್ತದೆ. |
02:45 | ಸುಮಾರು ಒಂದರಿಂದ ಎರಡು ವಾರಗಳಲ್ಲಿ ಬಳ್ಳಿಯು ತಾನಾಗಿಯೇ ಬಿದ್ದುಹೋಗುತ್ತದೆ. |
02:50 | ದಯವಿಟ್ಟು ಗಮನಿಸಿ, ಮಗುವಿನ ದೇಹದಲ್ಲಿ ಹೊಕ್ಕುಳಬಳ್ಳಿಯ ಮೂಲಕ ಸೋಂಕು ಪ್ರವೇಶಿಸಬಹುದು. |
02:57 | ಆದ್ದರಿಂದ, ಅದನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. |
03:02 | ಅದಕ್ಕಾಗಿ, ಮಗುವಿನ ಬಳ್ಳಿಯನ್ನು ಶುಷ್ಕವಾಗಿಟ್ಟು, ಗಾಳಿಗೆ ಒಡ್ಡಿರಬೇಕು ಎಂಬುದನ್ನು ನೆನಪಿಡಿ. |
03:09 | ಬಳ್ಳಿಯು ಉದುರುವವರೆಗೆ ಸ್ಪಾಂಜ್ ಸ್ನಾನವನ್ನು ಮಾತ್ರ ಮಾಡಿಸಬೇಕು. |
03:14 | ಬಳ್ಳಿಯನ್ನು ಮಗುವಿನ ನ್ಯಾಪಿಯ ಹೊರಗೆ ಇಡಬೇಕು ಅಥವಾ ನ್ಯಾಪಿಯ ಮೇಲಿನ ಅಂಚಿನವರೆಗೆ ಮಡಚಬಹುದು. |
03:24 | ಹೊಕ್ಕುಳಬಳ್ಳಿಯ ತುದಿಯಿಂದ ಅಥವಾ ಚರ್ಮದ ಸಮೀಪದಲ್ಲಿ ರಕ್ತಸ್ರಾವ ಆಗುತ್ತಿದ್ದರೆ, |
03:32 | ಕೀವು,
ಹೊಕ್ಕುಳ ಸುತ್ತಲೂ ಊತ ಅಥವಾ ಕೆಂಪಾಗಿರುವುದು, |
03:36 | ಹೊಕ್ಕುಳ ಪ್ರದೇಶದಲ್ಲಿ ಮಗುವಿಗೆ ನೋವಾಗುತ್ತಿರುವ ಚಿಹ್ನೆಗಳು, |
03:41 | ಹಾಗೂ ಒಂದು ತಿಂಗಳ ಅವಧಿಯಲ್ಲಿ ಬಳ್ಳಿಯು ಉದುರಿಹೋಗದಿದ್ದರೆ, ದಯವಿಟ್ಟು ಮಗುವಿನ ವೈದ್ಯರನ್ನು ಸಂಪರ್ಕಿಸಿ. |
03:46 | ಕೆಲವೊಮ್ಮೆ ಸ್ಟಂಪ್ ಉದುರುವ ಮುನ್ನ ಮತ್ತು ಬಳ್ಳಿಯು ಉದುರಿದ ನಂತರ, ಸ್ವಲ್ಪ ರಕ್ತ ಇರಬಹುದು. ಆದರೆ ಇದನ್ನು ತ್ವರಿತವಾಗಿ ನಿಲ್ಲಿಸಬೇಕು. |
04:01 | ನೆನಪಿಡಿ, ಬಳ್ಳಿಯನ್ನು ಎಂದಿಗೂ ಎಳೆಯಬೇಡಿ. |
04:04 | ಬಳ್ಳಿಯು ಬಿದ್ದ ನಂತರ ಮಗುವಿನ ಹೊಕ್ಕುಳ ಮೇಲೆ ಯಾವುದೇ ಕ್ರೀಮ್ ಅಥವಾ |
04:08 | ಪೌಡರ್ ಅನ್ನು ಹಚ್ಚಬೇಡಿ. ಅಥವಾ ಯಾವುದೇ ಬ್ಯಾಂಡೇಜ್ ಅನ್ನು ಹಾಕಬೇಡಿ. |
04:13 | ನವಜಾತ ಶಿಶುವಿಗೆ ಪೌಷ್ಠಿಕಾಂಶ ಹಾಗೂ ಆಹಾರವನ್ನು ಹೇಗೆ ಕೊಡುವುದು ಎಂದು ನೋಡೋಣ. |
04:20 | ಹೆರಿಗೆಯಾದ 1 ಗಂಟೆಯೊಳಗೆ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡಿಸಬೇಕು. |
04:25 | ವಿಶೇಷವಾಗಿ ಮೊದಲ 6 ತಿಂಗಳು, ಸ್ತನ್ಯಪಾನವನ್ನು ಮಾತ್ರ ಶಿಫಾರಸು ಮಾಡಲಾಗಿದೆ. |
04:30 | ಇದರ ಜೊತೆಗೆ, ತಾಯಿಯು ಮಗುವಿಗೆ ಸಾಕಷ್ಟು ಪರಸ್ಪರ ಚರ್ಮದ ಸಂಪರ್ಕವನ್ನು ಒದಗಿಸಬೇಕು. ಮತ್ತು ಮಗುವಿನ ಹಸಿವಿನ ಸೂಚನೆಗಳನ್ನು ಗಮನಿಸುತ್ತಿರಬೇಕು. |
04:40 | ಇದೇ ಸರಣಿಯ ಇತರ ಟ್ಯುಟೋರಿಯಲ್ ಗಳಲ್ಲಿ ಈ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ. |
04:46 | ಕೆಲವು ಸಂದರ್ಭಗಳಲ್ಲಿ, ಸಾಕಷ್ಟು ಆಹಾರವನ್ನು ಕೊಡಲು ಶಿಶುವನ್ನು, ವಿಶೇಷವಾಗಿ ಸಣ್ಣ- ಅಕಾಲಿಕ ಶಿಶುಗಳನ್ನು, ಆಗಾಗ್ಗೆ ಎಚ್ಚರಗೊಳಿಸುವ ಅಗತ್ಯವಿದೆ. |
04:57 | ಆರೋಗ್ಯಕರ ಅಥವಾ ಅಕಾಲಿಕ ಮಗು, ಒಂದುವೇಳೆ ಸ್ತನ್ಯಪಾನದಲ್ಲಿ ಆಸಕ್ತಿ ತೋರದಿದ್ದರೆ ಆಗ
ತಾಯಿಯು ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು. |
05:09 | ಸ್ತನ್ಯಪಾನ ಮಾಡುವಾಗ, ಶಿಶು ಆಗಾಗ್ಗೆ ಗಾಳಿಯನ್ನು ನುಂಗುವುದರಿಂದ ಶಿಶುವಿಗೆ ಚಡಪಡಿಕೆಯಾಗುತ್ತದೆ. |
05:15 | ಇದನ್ನು ತಡೆಗಟ್ಟಲು, ಪ್ರತಿಸಲ ಹಾಲುಣಿಸಿದ ನಂತರ ಮಗುವನ್ನು ಕುಳ್ಳಿರಿಸಿ ತೇಗುವಂತೆ ಮಾಡಿ. |
05:20 | ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇದನ್ನು ವಿವರಿಸಲಾಗಿದೆ. |
05:25 | ನಂತರ ಡಯಾಪರ್ ಹಾಕುವುದು:
ಪ್ರತಿಸಲ ಮಲವಿಸರ್ಜನೆಯ ನಂತರ ಅಥವಾ ಬಟ್ಟೆಯ ನ್ಯಾಪಿ ಒದ್ದೆಯಾಗಿದ್ದರೆ - ಮಗುವನ್ನು ಅವಳ ಬೆನ್ನಿನ ಮೇಲೆ ಮಲಗಿಸಿ ಮತ್ತು ಕೊಳಕು ನ್ಯಾಪಿಯನ್ನು ತೆಗೆಯಿರಿ. |
05:37 | ಮಗುವಿನ ಈ ಜಾಗವನ್ನು ಶುಚಿಗೊಳಿಸಲು ಮತ್ತು ಒರೆಸಲು, ನೀರು ಮತ್ತು ಮೃದುವಾದ ಬಟ್ಟೆಯನ್ನು ಬಳಸಿ. |
05:44 | ಈ ಜಾಗದಲ್ಲಿ ಸಾಬೂನನ್ನು ಹಚ್ಚಬೇಡಿ.
ಹೆಣ್ಣುಮಗುವಿದ್ದರೆ, ಒರೆಸುವಾಗ ಮೂತ್ರನಾಳದ ಸೋಂಕನ್ನು ತಪ್ಪಿಸಲು, ಮುಂಭಾಗದಿಂದ ಹಿಂಭಾಗಕ್ಕೆ ಒರೆಸಿ. |
05:55 | ನ್ಯಾಪಿಯನ್ನು ಬದಲಾಯಿಸುವ ಮೊದಲು ಮತ್ತು ನಂತರ, ತಾಯಿ ಅಥವಾ ಪೋಷಕರು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. |
06:03 | ಕೆಲವೊಮ್ಮೆ ಮಗು ಡಯಾಪರ್ ರಾಶ್ನಿಂದ ಬಳಲುತ್ತಿರಬಹುದು. |
06:08 | ಡಯಾಪರ್ ರಾಶ್ (diaper rash) ಒಂದು ಸಾಮಾನ್ಯ ಸಮಸ್ಯೆಯಾಗಿದೆ.
ಸಾಮಾನ್ಯವಾಗಿ ಈ ದದ್ದು ಕೆಂಪಗೆ ಊದಿಕೊಂಡಿದ್ದು, ಬೆಚ್ಚಗಿನ ಸ್ನಾನದಿಂದ, |
06:18 | ಸ್ವಲ್ಪ ಡಯಾಪರ್ ಕ್ರೀಮ್ ಮತ್ತು ಕೆಲವು ಸಮಯ ಯಾವುದೇ ಡಯಾಪರ್ ಅಥವಾ ನ್ಯಾಪಿ ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಗುಣವಾಗುತ್ತದೆ. |
06:25 | ಮಗುವಿನ ಚರ್ಮವು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ದದ್ದು ಉಂಟಾಗುತ್ತದೆ ಮತ್ತು ಒದ್ದೆಯಾದ ನ್ಯಾಪಿಯಿಂದ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. |
06:33 | ಡಯಾಪರ್ ರಾಶ್ ಅನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು -
ಮಗುವಿನ ನ್ಯಾಪಿಯನ್ನು ಆಗಾಗ್ಗೆ, ವಿಶೇಷವಾಗಿ ಮಲವಿಸರ್ಜನೆಯ ನಂತರ, ಬದಲಾಯಿಸಿ. |
06:41 | ಮೃದುವಾದ ಬಟ್ಟೆ ಮತ್ತು ನೀರಿನಿಂದ ಈ ಜಾಗವನ್ನು ಶುಚಿಗೊಳಿಸಿ.
ಟಿಶ್ಯೂ ಪೇಪರ್ ಬಳಸುವುದನ್ನು ತಪ್ಪಿಸಿ, ಕೆಲವೊಮ್ಮೆ ಅದು ಕಿರಿಕಿರಿ ಉಂಟುಮಾಡುತ್ತದೆ. |
06:50 | ಡಯಾಪರ್ ರಾಶ್ ಅಥವಾ ಬ್ಯಾರಿಯರ್ ಕ್ರೀಮ್ ಅನ್ನು ಸಾಕಷ್ಟು ದಪ್ಪಗೆ ಹಚ್ಚಿ. |
06:55 | ಇದಕ್ಕಾಗಿ, ತೇವಾಂಶವನ್ನು ತಡೆಹಿಡಿಯುವ 'ಝಿಂಕ್ ಆಕ್ಸೈಡ್' ಇರುವ ಕ್ರೀಮ್ಗಳನ್ನು ಶಿಫಾರಸು ಮಾಡಲಾಗುತ್ತದೆ. |
07:03 | ಬಣ್ಣ ಮತ್ತು ಸುಗಂಧಗಳಿಲ್ಲದ ಸಾಬೂನನ್ನು ಬಳಸಿ ಮಗುವಿನ ನ್ಯಾಪಿಗಳನ್ನು ತೊಳೆಯಿರಿ. |
07:08 | ದಿನದಲ್ಲಿ ಕೆಲವು ಸಮಯ ಮಗುವಿಗೆ ಡಯಾಪರ್ ಅಥವಾ ನ್ಯಾಪಿ ಹಾಕಬೇಡಿ.
ಇದು ಚರ್ಮವನ್ನು ಶುಷ್ಕವಾಗಿರಿಸಲು ಅವಕಾಶ ನೀಡುತ್ತದೆ. |
07:18 | ಒಂದುವೇಳೆ, ಡಯಾಪರ್ ರಾಶ್ 3 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅಥವಾ ಇನ್ನೂ ಹೆಚ್ಚಾದರೆ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. |
07:27 | ಇದು ಫಂಗಲ್ ಇನ್ಫೆಕ್ಶನ್ ನಿಂದ (ಶಿಲೀಂಧ್ರಗಳ ಸೋಂಕು) ಆಗಿರಬಹುದು. ಇದಕ್ಕೆ ವೈದ್ಯರ ಔಷಧಿಯ ಅಗತ್ಯವಿದೆ. |
07:33 | ಕೊನೆಯಲ್ಲಿ, ಮಗುವಿನ ಮಲಗುವ ರೀತಿಯ ಬಗ್ಗೆ ಚರ್ಚಿಸೋಣ. |
07:38 | ಶಿಶುಗಳು ದಿನದಲ್ಲಿ ಸುಮಾರು 14 ರಿಂದ 16 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಲಗುತ್ತವೆ. |
07:43 | ನವಜಾತ ಶಿಶುಗಳು ಸಾಮಾನ್ಯವಾಗಿ 2 ರಿಂದ 4 ಗಂಟೆಗಳ ಕಾಲ ಮಲಗುತ್ತವೆ. |
07:48 | ಅನೇಕ ಶಿಶುಗಳಿಗೆ ತಮ್ಮ ಹಗಲು ರಾತ್ರಿಗಳಲ್ಲಿ ವ್ಯತ್ಯಾಸ ಇರುವುದಿಲ್ಲ. |
07:52 | ರಾತ್ರಿಯಲ್ಲಿ ಎಚ್ಚರವಿದ್ದು ಚುರುಕಾಗಿರುತ್ತಾರೆ ಮತ್ತು ಹಗಲಿನಲ್ಲಿ ನಿದ್ರಿಸುತ್ತಾರೆ. |
07:58 | ರಾತ್ರಿಯಲ್ಲಿ ಅತೀ ಕಡಿಮೆ ಪ್ರಚೋದಕಗಳನ್ನು ಇಡುವುದರಿಂದ, ಶಿಶುವಿಗೆ ಹೆಚ್ಚು ನಿದ್ರೆ ಮಾಡಲು ಸಹಾಯವಾಗುತ್ತದೆ.
ಉದಾಹರಣೆಗೆ, ನೈಟ್-ಲ್ಯಾಂಪ್ ಬಳಸಿ ಮಂದ ಬೆಳಕನ್ನು ಇರಿಸಿ. ಹಗಲಿನಲ್ಲಿ ಸ್ವಲ್ಪ ಹೆಚ್ಚು ಸಮಯ ಮಾತನಾಡುವ ಮತ್ತು ಆಡುವ ಮೂಲಕ ಶಿಶುವನ್ನು ಎಚ್ಚರವಾಗಿಡಲು ಪ್ರಯತ್ನಿಸಿ. |
08:17 | ಮಗು ಯಾವಾಗಲೂ ಅವಳ ಬೆನ್ನಿನ ಮೇಲೆ ಮಲಗಿ ನಿದ್ದೆ ಮಾಡಬೇಕು ಎಂದು ನೆನಪಿನಲ್ಲಿಡಿ. |
08:24 | ಇದು sudden infant death syndrome ನ ಅಪಾಯವನ್ನು ಕಡಿಮೆ ಮಾಡುತ್ತದೆ. |
08:30 | ಇತರ ಸುರಕ್ಷಿತ ಮಲಗುವ ಅಭ್ಯಾಸಗಳಿಗಾಗಿ, ಮಗುವಿನ ತೊಟ್ಟಿಲಲ್ಲಿ ಕಂಬಳಿ, ಕೌದಿ/ರಜಾಯಿ, ಕುರಿ ಚರ್ಮ, ಆಟಿಕೆಗಳು (stuffed toys) ಮತ್ತು ದಿಂಬು ಇತ್ಯಾದಿಗಳನ್ನು ಬಳಸುವುದನ್ನು ತಪ್ಪಿಸಿ. |
08:44 | ಇವೆಲ್ಲವೂ ಮಗುವಿಗೆ ಉಸಿರುಗಟ್ಟಿಸಬಹುದು. |
08:47 | ಅಲ್ಲದೆ, ಪ್ರತಿ ರಾತ್ರಿ ಮಗುವಿನ ತಲೆಯ ಸ್ಥಾನವನ್ನು ಪರ್ಯಾಯವಾಗಿ ಬದಲಾಯಿಸಲು ಮರೆಯದಿರಿ - ಮೊದಲು ಬಲಗಡೆ, ನಂತರ ಎಡಗಡೆ .. ಹೀಗೆ. |
08:58 | ಒಂದು ಬದಿಯಲ್ಲಿ ಮಗುವಿನ ತಲೆಯು ಚಪ್ಪಟೆ ಆಗುವುದನ್ನು ಇದು ತಡೆಯುತ್ತದೆ. |
09:04 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |