Difference between revisions of "LaTeX/C2/Report-Writing/Kannada"

From Script | Spoken-Tutorial
Jump to: navigation, search
 
Line 142: Line 142:
 
|-
 
|-
 
| 04:20
 
| 04:20
|ಈ ಟ್ಯುಟೋರಿಯಲ್ ನ ಇನ್ನುಳಿದ ಭಾಗಕ್ಕಾಗಿ ನಾವು '''a5''' ಕಾಗದವನ್ನು ಬಳಸುವೆವು. ನೀವು ಇದನ್ನು '''a4''' ಗೆ ಬದಲಾಯಿಸಬಹುದು
+
|ಈ ಟ್ಯುಟೋರಿಯಲ್ ನ ಇನ್ನುಳಿದ ಭಾಗಕ್ಕಾಗಿ ನಾವು '''a5''' ಕಾಗದವನ್ನು ಬಳಸುವೆವು. ನೀವು ಇದನ್ನು '''a4''' ಗೆ ಬದಲಾಯಿಸಬಹುದು.
 
|-
 
|-
 
| 04:28
 
| 04:28
Line 166: Line 166:
 
|-
 
|-
 
| 05:18
 
| 05:18
| ಕಂಪೈಲ್ ಮಾಡಿದಾಗ, ಕ್ರಮವಾದ ಸಂಖ್ಯೆಯೊಂದಿಗೆ ಇದು ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಸಂಖ್ಯೆಯನ್ನು ಕೊಡುವುದನ್ನು ಸಹ LaTeX ತನ್ನಷ್ಟಕ್ಕೆ ತಾನೇ ಮಾಡುತ್ತದೆ.
+
| ಕಂಪೈಲ್ ಮಾಡಿದಾಗ, ಕ್ರಮವಾದ ಸಂಖ್ಯೆಯೊಂದಿಗೆ ಇದು ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಸಂಖ್ಯೆಯನ್ನು ಕೊಡುವುದನ್ನು ಸಹ '''LaTeX''' ತನ್ನಷ್ಟಕ್ಕೆ ತಾನೇ ಮಾಡುತ್ತದೆ.
 
|-
 
|-
 
| 05:29
 
| 05:29
Line 407: Line 407:
 
|-
 
|-
 
|12:50
 
|12:50
|'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್,  NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
+
|'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್,  '''NMEICT, MHRD''', ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
 
|-
 
|-
 
|12:56
 
|12:56
|ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.ವಂದನೆಗಳು.
+
|ಈ ಸ್ಕ್ರಿಪ್ಟ್ ನ ಅನುವಾದಕಿ, '''IIT Bombay''' ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು.
 
|}
 
|}

Latest revision as of 06:49, 8 February 2019

Time Narration
00:01 LaTeX ನಲ್ಲಿ Report Writing ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ನಾವು ಇದನ್ನು “ಲೇಟೆಕ್” (latek) ಎಂದು ಕರೆಯುತ್ತೇವೆ, “ಲೇಟೆಕ್ಸ್” (latex) ಎಂದಲ್ಲ.
00:09 ಈ ಟ್ಯುಟೋರಿಯಲ್ ಪ್ರೊ. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆಯಾಗಿದೆ.
00:13 ಈ ಟ್ಯುಟೋರಿಯಲ್ ನಲ್ಲಿ, ನಾವು ಡೊಕ್ಯೂಮೆಂಟ್ ಅನ್ನು ಬರೆಯಲು ಕಲಿಯುವೆವು.
00:19 ವಿಶೇಷವಾಗಿ, ‘report’ ಮತ್ತು ‘articleclass ಗಳನ್ನು ಹೇಗೆ ಬಳಸುವುದು,

sections ಅನ್ನು ಹೇಗೆ ಕ್ರಿಯೇಟ್ ಮಾಡುವುದು,

sections ಗಳಿಗೆ ತನ್ನಷ್ಟಕ್ಕೆ ತಾನೇ ಹೇಗೆ ಕ್ರಮಾಂಕವನ್ನು ಕೊಡುವುದು,

Table of contents ಅನ್ನು ತಯಾರಿಸುವುದು ಮತ್ತು

ಟೈಟಲ್ ಪೇಜ್ ಅನ್ನು ಹೇಗೆ ತಯಾರಿಸುವುದು.

00:38 ನಾವು ಈ ಟ್ಯುಟೋರಿಯಲ್ ಅನ್ನು ನಮ್ಮ Rs. 10,000 ಗಿಂತ ಕಡಿಮೆ ಬೆಲೆಯ ಲ್ಯಾಪ್-ಟಾಪ್ ನಲ್ಲಿ ತಯಾರಿಸುತ್ತಿದ್ದೇವೆ.
00:44 ಮತ್ತು, ನಾನು Ubuntu Linux, TeXworks ಮತ್ತು LaTeX ಅನ್ನು ಬಳಸುತ್ತಿದ್ದೇನೆ.
00:51 ನೀವು TeXworks ಅನ್ನು Windows ಅಥವಾ Mac ನಲ್ಲಿ ಸಹ ಬಳಸಬಹುದು. ವಿಧಾನವು ಮಾತ್ರ ಇದೇ ಆಗಿದೆ.
00:57 ನೀವು LaTeX ಅನ್ನು ಹಾಗೆಯೇ ಎಂದರೆ TeXworks ಇಲ್ಲದೆಯೇ ಬಳಸಬಹುದು.
01:02 ನೀವು ಹೆಚ್ಚಿನ ಬೆಲೆಯ ಲಿನಕ್ಸ್ ಕಂಪ್ಯೂಟರ್ ಗಳನ್ನು ಸಹ ಬಳಸಬಹುದು.
01:07 ಇದನ್ನು ಕಲಿಯಲು, ಈ ಕೆಳಗಿನವುಗಳು ಅವಶ್ಯವಾಗಿವೆ:

LaTeX ಅನ್ನು ಪರಿಚಯಿಸುವ ಸ್ಪೋಕನ್ ಟ್ಯುಟೋರಿಯಲ್ ಗಳು,

report dot tex ಎಂಬ ಫೈಲ್,

ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ಅಗತ್ಯವಿರುವ side-by-side method ನ ಬಗ್ಗೆ ತಿಳಿದಿರಬೇಕು.

01:23 ಮೇಲೆ ಹೇಳಿದ ಎಲ್ಲದರ ಬಗ್ಗೆ ಮಾಹಿತಿಯು ನಮ್ಮ ಈ ವೆಬ್ಸೈಟ್ ನಲ್ಲಿ ಲಭ್ಯವಿದೆ: spoken tutorial dot org.
01:32 ನಾನು TeXworks ವಿಂಡೋ ಗೆ ಹೋಗುತ್ತೇನೆ.
01:36 ನಾನು ಈಗಾಗಲೇ report.tex ಫೈಲ್ ಅನ್ನು ತೆರೆದಿದ್ದೇನೆ. ದಯವಿಟ್ಟು ಈ ಫೈಲ್ ಅನ್ನು ಡೌನ್ಲೋಡ್ ಮಾಡಿ ನನ್ನ ಜೊತೆಗೆ ಅಭ್ಯಾಸ ಮಾಡಿ.
01:44 ನಾನು 12 point ಫಾಂಟ್ ಸೈಜ್, ‘a4 paper’ ಮತ್ತು ‘article’ class ಇವುಗಳನ್ನು ಬಳಸುತ್ತಿದ್ದೇನೆ.
01:55 ಅಂಚುಗಳನ್ನು (margins) ಸೆಟ್ ಮಾಡಲು, ನಾನು 'usepackage' ಕಮಾಂಡ್ ಮೂಲಕ geometry package ಅನ್ನು ಬಳಸುತ್ತಿದ್ದೇನೆ.
02:02 ಪ್ರತಿಯೊಂದು ಕಮಾಂಡ್ ಆರಂಭವಾಗುವ ಮೊದಲು, ಒಂದು ರಿವರ್ಸ್ ಸ್ಲ್ಯಾಶ್ ಇರಬೇಕು.
02:07 ನಾನು ಅದನ್ನು ಸ್ಪಷ್ಟವಾಗಿ ಹೇಳದಿದ್ದರೂ, ರಿವರ್ಸ್ ಸ್ಲ್ಯಾಷ್ ಅನ್ನು ಸೇರಿಸಲು ನೀವು ಮರೆಯಬಾರದು.
02:13 ಹೀಗೆಯೇ, ನಾನು ಸ್ಪಷ್ಟವಾಗಿ ಬ್ರೇಸ್ ಗಳನ್ನು ಹೇಳುವುದಿಲ್ಲ, ಆದರೆ ನೀವು ಅವುಗಳನ್ನು ಬಳಸಬೇಕಾಗಬಹುದು.
02:20 ದಯವಿಟ್ಟು ವೀಡಿಯೋದಲ್ಲಿ ತೋರಿಸಿದ ಹಾಗೆಯೇ ಮಾಡಿ.
02:25 usepackage ಕಮಾಂಡ್, ಚೌಕ ಬ್ರ್ಯಾಕೆಟ್ ಗಳ ಒಳಗೆ ಐಚ್ಛಿಕ ಪ್ಯಾರಾಮೀಟರ್ ಗಳನ್ನು ಹೊಂದಿದೆ.
02:31 ಪ್ಯಾಕೇಜ್ ನ ಹೆಸರು ಬ್ರೇಸ್ ಗಳ ಒಳಗೆ ಇದೆ.
02:35 ನಾನು 4.5 ಸೆ.ಮೀ.ನ ಅಡ್ಡವಾದ ಮತ್ತು ಲಂಬ ಅಂಚುಗಳನ್ನು ಸೆಟ್ ಮಾಡಿದ್ದೇನೆ.
02:41 '"TexWorks"' (ಟೆಕ್ವರ್ಕ್ಸ್) ವಿಂಡೋದ ಮೇಲಿನ ಎಡಮೂಲೆಯಲ್ಲಿ ನೋಡಿ.
02:47 pdfLaTeX ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದರೆ, ದಯವಿಟ್ಟು ಅದನ್ನು ಪುಲ್ ಡೌನ್ ಮೆನ್ಯುವಿನಿಂದ ಆಯ್ಕೆ ಮಾಡಿ.
02:55 ಎಡಭಾಗದಲ್ಲಿ, ಬಾಣದ ಗುರುತಿರುವ ಒಂದು ಹಸಿರು ವೃತ್ತವಿದೆ.
02:59 ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ಈ ಫೈಲ್ ಅನ್ನು ಕಂಪೈಲ್ ಮಾಡಿ.
03:04 ನಾವು ಬಲಭಾಗದಲ್ಲಿ ತೋರಿಸಿರುವ ‘report.pdf’ ಎಂಬ ಫೈಲ್ ಅನ್ನು ಪಡೆಯುತ್ತೇವೆ.
03:09 ಔಟ್ಪುಟ್ ಫೈಲ್ ನಲ್ಲಿ, section, sub-section ಮತ್ತು sub-sub-section ಎಂಬ ಶೀರ್ಷಿಕೆಗಳನ್ನು (titles) ನೋಡಿ.
03:18 ಸೋರ್ಸ್ ಫೈಲ್ ನಲ್ಲಿ ಕೊಟ್ಟಿರುವ ತದ್ರೂಪವಾದ ಕಮಾಂಡ್ ಗಳನ್ನು ಬಳಸಿ, ಇವುಗಳನ್ನು ಕ್ರಿಯೇಟ್ ಮಾಡಲಾಗಿದೆ.
03:23 'pdf' ಫೈಲ್ ನಲ್ಲಿ, ಈ section ಟೈಟಲ್ ಗಳ ವಿಶಿಷ್ಟ ಲಕ್ಷಣಗಳನ್ನು ಗಮನಿಸಿ.
03:30 ಈ ಶೀರ್ಷಿಕೆಗಳ ಸೈಜ್ ಗಳನ್ನು ಸರಿ ಪ್ರಮಾಣದಲ್ಲಿ ಮತ್ತು ತಂತಾನೆ ರಚಿಸಲಾಗಿದೆ.
03:37 ಅಲ್ಲದೆ, section ಟೈಟಲ್ ಅತಿ ದೊಡ್ಡದು ಮತ್ತು sub-sub-section ಟೈಟಲ್ ಅತಿ ಚಿಕ್ಕದು ಆಗಿದೆ.
03:45 ಸೋರ್ಸ್ ಫೈಲ್ ನಲ್ಲಿ ಖಾಲಿ ಸಾಲುಗಳು ಇದ್ದರೂ ಸಹ ಔಟ್ಪುಟ್ ಮೊದಲಿನಂತೆಯೇ ಉಳಿಯುತ್ತದೆ.
03:50 ಇಲ್ಲಿ ನಾನು ಒಂದು ಸಾಲನ್ನು ಡಿಲೀಟ್ ಮಾಡುತ್ತೇನೆ. ಕಂಪೈಲ್ ಮಾಡುತ್ತೇನೆ.
03:55 ಇಲ್ಲಿ ಏನೂ ಬದಲಾವಣೆ ಅಗಿಲ್ಲ.
03:57 ಈಗ ನಾನು ಪೇಪರ್ ಸೈಜ್ ಅನ್ನು a5 ಗೆ ಬದಲಾಯಿಸುತ್ತೇನೆ.
04:02 ಔಟ್ಪುಟ್ ನಲ್ಲಿ, ಪ್ರತಿಯೊಂದು ಸಾಲಿನ ಅಗಲವನ್ನು ಇದು ಕಡಿಮೆ ಮಾಡುತ್ತದೆ.
04:06 ನಾವು ಈ ಮೊದಲು ಮಾಡಿದಂತೆ, ನಾನು ಟೆಕ್ಸ್ಟ್ ಅನ್ನು ಕಂಪೈಲ್ ಮಾಡುತ್ತೇನೆ.
04:10 control + ಅನ್ನು ಒತ್ತಿ, ನಾನು ಇದನ್ನು ದೊಡ್ಡದು ಮಾಡುತ್ತೇನೆ. ಇದರಿಂದ ನೀವು ಔಟ್ಪುಟ್ ಅನ್ನು ಸ್ಪಷ್ಟವಾಗಿ ನೋಡಬಹುದು.
04:17 ನಾನು ಇದನ್ನು ಮಧ್ಯದಲ್ಲಿ ತರುತ್ತೇನೆ.
04:20 ಈ ಟ್ಯುಟೋರಿಯಲ್ ನ ಇನ್ನುಳಿದ ಭಾಗಕ್ಕಾಗಿ ನಾವು a5 ಕಾಗದವನ್ನು ಬಳಸುವೆವು. ನೀವು ಇದನ್ನು a4 ಗೆ ಬದಲಾಯಿಸಬಹುದು.
04:28 ನಾನು ಫೈಲ್ ಅನ್ನು ಸೇವ್ ಮಾಡಲಿಲ್ಲ ಎಂಬುದನ್ನು ಗಮನಿಸಿ. ಏಕೆಂದರೆ, TexWorks (ಟೆಕ್ವರ್ಕ್ಸ್), ಕಂಪೈಲ್ ಮಾಡುವ ಮೊದಲು ಫೈಲ್ ಅನ್ನು ತಂತಾನೇ ಸೇವ್ ಮಾಡುತ್ತದೆ.
04:37 ಫಾಂಟ್ ಅನ್ನು ಸಣ್ಣದನ್ನಾಗಿ, ಎಂದರೆ 10 point ಗೆ ಬದಲಾಯಿಸೋಣ ಮತ್ತು ಕಂಪೈಲ್ ಮಾಡೋಣ.
04:44 ಹೇ, ಫಾಂಟ್ ಗಾತ್ರ ಚಿಕ್ಕದಾಗಿದೆ – ನಮಗೆ ಆಶ್ಚರ್ಯವಾಗಬೇಕೇ? ಆದರೆ, ಪ್ರಮಾಣಾನುಗುಣ ಗಾತ್ರ ಮತ್ತು ಅಂತರವು ಹಾಗೇ ಉಳಿದಿರುತ್ತವೆ.
04:54 ನಾನು ಫಾಂಟ್ ಅನ್ನು ಮತ್ತೆ 12 point ಗೆ ಬದಲಾಯಿಸುತ್ತೇನೆ.
04:59 ಈಗ ನಾವು section titles ಗಳ ಇನ್ನೊಂದು ಮುಖ್ಯ ಅಂಶವನ್ನು ಚರ್ಚಿಸುವೆವು.
05:04 ಇದು section ಸಂಖ್ಯೆಗಳನ್ನು ತಂತಾನೇ ಉತ್ಪಾದಿಸುವುದರ ಬಗ್ಗೆ ಆಗಿದೆ.
05:09 ಇದನ್ನು ಮತ್ತಷ್ಟು ವಿವರಿಸಲು, ನಾನು 'Inserted section' ಎಂಬ ಒಂದು ಹೊಸ 'ಸೆಕ್ಶನ್' ಅನ್ನು ಸೇರಿಸುತ್ತೇನೆ.
05:18 ಕಂಪೈಲ್ ಮಾಡಿದಾಗ, ಕ್ರಮವಾದ ಸಂಖ್ಯೆಯೊಂದಿಗೆ ಇದು ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಸಂಖ್ಯೆಯನ್ನು ಕೊಡುವುದನ್ನು ಸಹ LaTeX ತನ್ನಷ್ಟಕ್ಕೆ ತಾನೇ ಮಾಡುತ್ತದೆ.
05:29 ಲೇಟೆಕ್, “toc” ಎಕ್ಸ್ಟೆನ್ಶನ್ ಅನ್ನು (extension) ಹೊಂದಿರುವ ಒಂದು ಫೈಲ್ ನ ಮೂಲಕ table of contents ಅನ್ನು ರಚಿಸುತ್ತದೆ.
05:36 ಇಲ್ಲಿ ನಾನು ‘table of contents’ ಎಂಬ ಒಂದು ಪದವನ್ನು ಸೇರಿಸುತ್ತೇನೆ.
05:42 ಕಂಪೈಲ್ ಮಾಡುತ್ತೇನೆ.
05:44 ಔಟ್ಪುಟ್ ನಲ್ಲಿ ‘Contents’ ಎಂಬ ಪದವು ಕಾಣಿಸಿಕೊಳ್ಳುತ್ತದೆ. ಮತ್ತೇನೂ ಇಲ್ಲ.
05:50 ಮತ್ತೆ ನಾನು ಕಂಪೈಲ್ ಮಾಡುತ್ತೇನೆ.
05:53 ಈಗ ಎಲ್ಲ ಟೈಟಲ್ ಗಳು, table of contents ನಲ್ಲಿ ಪುಟದ ಸಂಖ್ಯೆಗಳೊಂದಿಗೆ ಅಸ್ತಿತ್ವದಲ್ಲಿವೆ.
05:59 ಸರಿಯಾದ ಪುಟದ ಸಂಖ್ಯೆಗಳನ್ನು ಪಡೆಯಲು, ನೀವು ಇದನ್ನು ಮೂರನೆಯ ಸಲ ಕಂಪೈಲ್ ಮಾಡಬೇಕು.
06:05 ಮೂರು ಸಲ ಏಕೆ? ದಯವಿಟ್ಟು ಅಸೈನ್ಮೆಂಟ್ ಅನ್ನು ನೋಡಿ.
06:09 table of contents’ ಈ ಒಂದು ಪದವು ಮಾತ್ರ ಅವಶ್ಯವಿದೆ.
06:14 ಲೇಟೆಕ್ ನಲ್ಲಿ ಎಷ್ಟು ಅದ್ಭುತವಾದ ಸಾಮರ್ಥ್ಯವಿದೆ!
06:17 ಲೇಟೆಕ್ ನಿರ್ವಹಿಸುವ “toc” ಎಕ್ಸ್ಟೆನ್ಶನ್ ಅನ್ನು ಹೊಂದಿರುವ ಫೈಲ್ ಮೂಲಕ ಇದನ್ನು ಸಾಧಿಸಲಾಗುತ್ತದೆ.
06:24 ಈ ಮಲ್ಟಿ ಪಾಸ್ ಕಂಪೈಲೇಶನ್ ವಿಧಾನವು, ಟೈಟಲ್ ಗಳಲ್ಲಿನ ಬದಲಾವಣೆಗಳೊಂದಿಗೆ ಸಹ ಕೆಲಸ ಮಾಡುತ್ತದೆ.
06:30 ನಾನು ಸೆಕ್ಶನ್ ಟೈಟಲ್ ಅನ್ನು ‘Modified section’ ಎಂದು ಬದಲಾಯಿಸುತ್ತೇನೆ.
06:36 ಇದನ್ನು ನಾನು ಕಂಪೈಲ್ ಮಾಡುತ್ತೇನೆ. Table of Contents ಬದಲಾಗುವುದಿಲ್ಲ.
06:42 ಮತ್ತೊಮ್ಮೆ ಇದನ್ನು ನಾನು ಕಂಪೈಲ್ ಮಾಡುತ್ತೇನೆ ಮತ್ತು ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ.
06:46 ಈಗ ನಾವು ಇಲ್ಲಿ ಮಾರ್ಪಡಿಸಿದ ಸೆಕ್ಶನ್ ಅನ್ನು ಹೊಂದಿದ್ದೇವೆ.
06:49 ಈ ಡೊಕ್ಯುಮೆಂಟ್ ಗೆ ನಾವು ಒಂದು ಟೈಟಲ್ ಅನ್ನು ರಚಿಸುತ್ತೇವೆ. ನಾನು ಅದನ್ನು ಇಲ್ಲಿ, ‘begin document’ ಗಿಂತ ಮೊದಲು ಮಾಡುತ್ತೇನೆ.
06:57 ಇಲ್ಲಿ ತೋರಿಸಿದಂತೆ, ನಾನು ಒಂದು ‘title’, ‘Author’ ನ ಬಗ್ಗೆ ಮಾಹಿತಿ ಮತ್ತು ‘date’ ಇವುಗಳನ್ನು ರಚಿಸುತ್ತೇನೆ.
07:13 ಹೀಗಾಗಿ, ನಾನು ಈ ಮೂರು ಕಮಾಂಡ್ ಗಳನ್ನು ಸೇರಿಸಿದ್ದೇನೆ.
07:17 ಇವುಗಳು ಬರುವ ಕ್ರಮ ಅಥವಾ ಸ್ಥಾನವು ಮುಖ್ಯವಲ್ಲ.
07:22 ಆದರೆ, ಇವುಗಳು begin document ಕಮಾಂಡ್ ನ ಮೊದಲು ಬರಬೇಕು.
07:26 ಎಲ್ಲ ಕಮಾಂಡ್ ಗಳಲ್ಲಿ, 'ರಿವರ್ಸ್ ಸ್ಲ್ಯಾಶ್' ಅನ್ನು ಮರೆಯಬೇಡಿ.
07:31 ಇಲ್ಲಿ, ಡಬಲ್ ಸ್ಲ್ಯಾಷ್ ಎಂದರೆ ಮುಂದಿನ ಸಾಲು ಎಂದರ್ಥ. ನಾವು ಕಂಪೈಲ್ ಮಾಡುತ್ತೇವೆ.
07:38 'ಪಿಡಿಎಫ್' ಫೈಲ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ.
07:42 ಇದಕ್ಕೆ ಕಾರಣ, ಈ ಮಾಹಿತಿಯೊಂದಿಗೆ ಏನು ಮಾಡಬೇಕೆಂದು ನಾನು ಲೇಟೆಕ್ ಗೆ ಹೇಳಿಲ್ಲ.
07:47 ಆದ್ದರಿಂದ, ನಾನು 'begin document' ನಂತರ, ಈ ಒಂದು ಪದವನ್ನು- 'make title' ಕಮಾಂಡ್ ಅನ್ನು ಸೇರಿಸುತ್ತೇನೆ.
07:55 ನಾನು ಇದನ್ನು ಕಂಪೈಲ್ ಮಾಡುತ್ತೇನೆ.
07:58 ನಾನು ಈ ಕಮಾಂಡ್ ಅನ್ನು ಸೇರಿಸಿದ ಸ್ಥಳದಲ್ಲಿ, ಎಂದರೆ, ಡಾಕ್ಯುಮೆಂಟ್ ನ ಆರಂಭದಲ್ಲಿ
08:03 ಟೈಟಲ್, ಔಟ್ಪುಟ್ ನಲ್ಲಿ ಕಾಣಿಸಿಕೊಳ್ಳುತ್ತದೆ.
08:07 ನಾವು ಈ ಡಾಕ್ಯುಮೆಂಟ್ ನ class ಅನ್ನು, article ನಿಂದ report ಗೆ ಬದಲಾಯಿಸುವೆವು.
08:15 ಇದೇ ಸಮಯದಲ್ಲಿ, ನಾವು ಒಂದು chapterಅನ್ನು ಈ ಕಮಾಂಡ್ ನೊಂದಿಗೆ ವ್ಯಾಖ್ಯಾನಿಸುತ್ತೇವೆ: 'Chapter First Chapter'.
08:24 Report style ಗೆ ಕನಿಷ್ಠ ಒಂದು chapter ನ ಅಗತ್ಯವಿದೆ.
08:27 ನಾವು ಇದನ್ನು ಕಂಪೈಲ್ ಮಾಡೋಣ ಮತ್ತು ಔಟ್ಪುಟ್ ಅನ್ನು ನೋಡೋಣ.
08:31 ಔಟ್ಪುಟ್ ನಲ್ಲಿಯ ಬದಲಾವಣೆಗಳನ್ನು ಗಮನಿಸಿ.
08:35 ಸಂಖ್ಯೆಯಿಲ್ಲದ ಒಂದು ಇಡೀ ಪುಟದಲ್ಲಿ ಟೈಟಲ್ ಕಾಣಿಸಿಕೊಳ್ಳುತ್ತದೆ.
08:40 Contents ಸಹ ಪುಟ ಸಂಖ್ಯೆ 1 ರಲ್ಲಿ, ಇಡೀ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ.
08:47 ದಯವಿಟ್ಟು ಇಲ್ಲಿ ನಿಲ್ಲಿಸಿ ಮತ್ತು 'Contents' ನಲ್ಲಿ ಎಷ್ಟು ನಮೂದುಗಳು ತಪ್ಪಾಗಿವೆ ಎಂಬುದನ್ನು ಕಂಡುಹಿಡಿಯಿರಿ.
08:54 ನಾವು ಮುಂದಿನ ಪುಟಕ್ಕೆ ಹೋಗೋಣ. chapter ಪ್ರಾರಂಭವಾಗುವ ರೀತಿಯನ್ನು ಗಮನಿಸಿ.
09:00 ನೀವು ಎಷ್ಟು ವಿಶಿಷ್ಟ ಲಕ್ಷಣಗಳನ್ನು ಗುರುತಿಸಬಹುದು? ಕನಿಷ್ಠ ಐದನ್ನು ನೀವು ಕಂಡುಹಿಡಿಯಬೇಕು.
09:08 ನಾವು ಇದನ್ನು ಎರಡನೇ ಬಾರಿಗೆ ಕಂಪೈಲ್ ಮಾಡೋಣ.
09:12 Contents ಪುಟವು ಈಗ ಸರಿಯಾದ ಮಾಹಿತಿಯನ್ನು ಹೊಂದಿದೆ ಎಂದು ಗಮನಿಸಿ. ಪುಟಗಳ ಸಂಖ್ಯೆಗಳು ಈಗ ಸರಿಯಾಗಿವೆ.
09:21 ‘New Chapter’ಎಂಬ ಒಂದು chapterಅನ್ನು ನಾವು ಸೇರಿಸೋಣ.
09:32 ಕಂಪೈಲ್ ಮಾಡಿ.
09:34 ನಾನು ಮತ್ತೊಮ್ಮೆ ಕಂಪೈಲ್ ಮಾಡುತ್ತೇನೆ ಮತ್ತು ಅದು ಹೊಸ ಪೇಜ್ ನ ಮೇಲೆ ಬರುತ್ತಿರುವುದನ್ನು ನೋಡುತ್ತೇನೆ.
09:47 ಈ ಹೊಸ chapter ನ ಮೊದಲು appendix ಎಂಬ ಕಮಾಂಡ್ ಅನ್ನು ಸೇರಿಸಿ.
09:53 ಕಂಪೈಲ್ ಮಾಡಿದಾಗ, “Appendix” ಎಂಬ ಪದವು ಕಾಣಿಸುತ್ತಿರುವುದನ್ನು ನೀವು ನೋಡುತ್ತೀರಿ.
09:59 chapter ನಂಬರ್ A ಆಗಿದೆ.
10:02 ನಾವು ಈಗ ಸ್ಲೈಡ್ ಗಳಿಗೆ ಹೋಗೋಣ.
10:05 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತದ್ದರ ಸಾರಾಂಶವನ್ನು ನೋಡೋಣ.
10:08 ಲೇಟೆಕ್ ನಲ್ಲಿ ಡಾಕ್ಯುಮೆಂಟ್ ಅನ್ನು ಬರೆಯುವುದು,

ತನ್ನಷ್ಟಕ್ಕೆ ತಾನೇ chapter ಮತ್ತು section ಟೈಟಲ್ ಗಳನ್ನು ರಚಿಸುವುದು,

ತಂತಾನೆ ಸಂಖ್ಯೆಗಳನ್ನು ಕೊಡುವುದು,

Table of contents ಮತ್ತು ಟೈಟಲ್ ಪೇಜ್ ಗಳ ರಚನೆ,

Appendix ಅನ್ನು ರಚಿಸುವುದು.

10:21 ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ.
10:24 ಈ ಅಸೈನ್ಮೆಂಟ್, a4 ಕಾಗದ ಮತ್ತು letter paper ಬಗ್ಗೆ ಇದೆ.
10:29 ದಯವಿಟ್ಟು ವೀಡಿಯೋವನ್ನು ನಿಲ್ಲಿಸಿ, ಸ್ಲೈಡ್ ಅನ್ನು ಓದಿ ಮತ್ತು ಅಸೈನ್ಮೆಂಟ್ ಅನ್ನು ಮಾಡಿ.
10:35 ಈ ಅಸೈನ್ಮೆಂಟ್ 'ಫಾಂಟ್ ಸೈಜ್' ಬಗ್ಗೆ ಆಗಿದೆ.
10:41 ಇದು report dot toc ಬಗ್ಗೆ ಇದೆ.
10:47 ಇದು ಕಂಪೈಲೇಶನ್ ಗಳ ಸಂಖ್ಯೆಯ ಬಗ್ಗೆ ಆಗಿದೆ.
10:52 ಇದು Table of Contents ಇರುವ ಸ್ಥಳದಲ್ಲಿದೆ.
10:59 ಈ ಅಸೈನ್ಮೆಂಟ್, 'report' ಮತ್ತು 'article' ಗಳಲ್ಲಿ 'chapter' ಕಮಾಂಡ್ ನ ಬಳಕೆಯ ಬಗ್ಗೆ ಆಗಿದೆ.
11:07 ಈ ಅಸೈನ್ಮೆಂಟ್, 'report' class ನಲ್ಲಿ 'appendix' ಕಮಾಂಡ್ ನ ಪರಿಣಾಮದ ಬಗ್ಗೆ ಆಗಿದೆ.
11:15 ಇದು ಹಿಂದಿನ ಅಸೈನ್ಮೆಂಟ್ ನ ಹಾಗೆಯೇ ಇದೆ. ಆದರೆ 'article' class ನಲ್ಲಿದೆ.
11:22 ಇದು geometry package ಬಗ್ಗೆ ಆಗಿದೆ.
11:27 ಈ ಅಸೈನ್ಮೆಂಟ್, LaTeX classes ಬಗ್ಗೆ ಆಗಿದೆ.
11:34 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:38 ಈ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಸರಿಯಾದ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:46 ನಾವು 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:53 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
11:56 ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.
12:03 ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ.
12:09 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
12:13 ದಯವಿಟ್ಟು ಇದಕ್ಕೆ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
12:19 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಸೂಚನೆಗಳಂತೆ ಬಳಸಬಹುದು.
12:28 'ಸ್ಪೋಕನ್ ಟ್ಯುಟೋರಿಯಲ್' ಗಳಲ್ಲಿ ಒಳಗೊಂಡಿರದ ವಿಷಯಗಳಿಗಾಗಿ, stack exchange ಅನ್ನು ಈ ವಿಳಾಸದಲ್ಲಿ ಭೇಟಿ ಮಾಡಿ.
12:35 ಲೇಟೆಕ್ ನ ಬಗ್ಗೆ ಉತ್ತರಗಳನ್ನು ಪಡೆಯಲು ಇದು ಉತ್ತಮ ಸ್ಥಳವಾಗಿದೆ. ನಮ್ಮ ಕಾರ್ಯಶಾಲೆಗಳು, ಪ್ರಮಾಣಪತ್ರಗಳು ಇತ್ಯಾದಿಗಳ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿರಬಹುದು.
12:45 ಇದಕ್ಕಾಗಿ, ನಮ್ಮನ್ನು ಸಂಪರ್ಕಿಸಲು ಈ ಇಮೇಲ್ ವಿಳಾಸಕ್ಕೆ ಬರೆಯಿರಿ.
12:50 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
12:56 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು.

Contributors and Content Editors

Sandhya.np14