Difference between revisions of "Java/C3/Using-final-keyword/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 26: | Line 26: | ||
ಉಬಂಟು ಲಿನಕ್ಸ್ ಆವೃತ್ತಿ 12.04, | ಉಬಂಟು ಲಿನಕ್ಸ್ ಆವೃತ್ತಿ 12.04, | ||
− | ''' | + | '''JDK''' 1.7, |
'''Eclipse ''' 4.3.1 ಇವುಗಳನ್ನು ಬಳಸುತ್ತಿದ್ದೇನೆ. | '''Eclipse ''' 4.3.1 ಇವುಗಳನ್ನು ಬಳಸುತ್ತಿದ್ದೇನೆ. | ||
Line 40: | Line 40: | ||
|- | |- | ||
| 00:41 | | 00:41 | ||
− | | ಇರದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ನಮ್ಮ | + | | ಇರದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ. |
|- | |- | ||
Line 269: | Line 269: | ||
|ಈಗ '''setEmail''' ಮೆಥೆಡ್ ಗೆ ಬನ್ನಿರಿ. | |ಈಗ '''setEmail''' ಮೆಥೆಡ್ ಗೆ ಬನ್ನಿರಿ. | ||
ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡುವೆವು: | ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡುವೆವು: | ||
− | '''newEmail is equal to abc@gmail.com''' ಸೆಮಿಕೋಲನ್ | + | '''newEmail is equal to abc@gmail.com''' ಸೆಮಿಕೋಲನ್. |
|- | |- |
Latest revision as of 10:17, 2 February 2019
Time | Narration |
00:01 | Using final keyword ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, final ಎಂಬ ಕೀ ವರ್ಡ್ ಮತ್ತು ಅದನ್ನು ಯಾವಾಗ ಬಳಸಬೇಕು ಎಂಬುದನ್ನು ತಿಳಿಯುವೆವು. |
00:11 | ಅಲ್ಲದೆ, ನಾವು-
final ವೇರಿಯೇಬಲ್ ಗಳು, final ಮೆಥೆಡ್ ಗಳು ಮತ್ತು final ಕ್ಲಾಸ್ ಗಳ ಬಗ್ಗೆ ಸಹ ತಿಳಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
ಉಬಂಟು ಲಿನಕ್ಸ್ ಆವೃತ್ತಿ 12.04, JDK 1.7, Eclipse 4.3.1 ಇವುಗಳನ್ನು ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಜಾವಾ ಮತ್ತು ಎಕ್ಲಿಪ್ಸ್ ಐಡಿಇ ಇವುಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:36 | ನಿಮಗೆ ಸಬ್-ಕ್ಲಾಸಿಂಗ್ ಮತ್ತು ಮೆಥಡ್ ಓವರ್ ರೈಡಿಂಗ್ ನ ಬಗ್ಗೆಯೂ ತಿಳಿದಿರಬೇಕು. |
00:41 | ಇರದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ. |
00:46 | ಮೊದಲಿಗೆ ನಾವು final ಎಂಬ ಕೀವರ್ಡ್ ಅನ್ನು ತಿಳಿಯೋಣ. |
00:50 | “ಫೈನಲ್” ಎನ್ನುವುದು ಜಾವಾ ದಲ್ಲಿ ಒಂದು ಕೀ-ವರ್ಡ್ ಅಥವಾ ಕಾಯ್ದಿರಿಸಲಾದ ಪದ ಆಗಿದೆ. |
00:55 | ಇದನ್ನು ವೇರಿಯೇಬಲ್ ಗಳಿಗೆ, ಮೆಥೆಡ್ ಗಳಿಗೆ ಮತ್ತು ಕ್ಲಾಸ್ ಗಳಿಗೆ ಅನ್ವಯಿಸಬಹುದು. |
01:01 | ಈಗ ನಾವು ಫೈನಲ್ ವೇರಿಯೇಬಲ್ ದ ಬಗ್ಗೆ ತಿಳಿಯೋಣ. |
01:05 | ಫೈನಲ್ ವೇರಿಯೇಬಲ್ ನ ವ್ಯಾಲ್ಯೂವನ್ನು ಬದಲಾಯಿಸಲು ಸಾಧ್ಯವಿಲ್ಲ. ಅಂದರೆ ಅದು ಒಂದು ಕಾನ್ಸ್ಟಂಟ್ ಆಗಿದೆ. |
01:13 | ಈಗ ನಾನು Eclipse IDE ಗೆ (ಎಕ್ಲಿಪ್ಸ್ ಐ ಡಿ ಇ) ಬದಲಾಯಿಸುತ್ತಿದ್ದೇನೆ. ಹಿಂದಿನ ಟ್ಯುಟೋರಿಯಲ್ ನಲ್ಲಿ, ನಾನು ಆಗಲೇ MyProject ಎಂಬ ಒಂದು ಪ್ರೊಜೆಕ್ಟ್ ಅನ್ನು ರಚಿಸಿದ್ದೆ. |
01:22 | ಹೀಗಾಗಿ, ನಾವು ನೇರವಾಗಿ ಪ್ರೊಜೆಕ್ಟ್ ನ Employee ಕ್ಲಾಸ್ ಗೆ ಹೊಗೋಣ. |
01:26 | name ಎನ್ನುವ ವೇರಿಯೇಬಲ್ ಗೆ ಬನ್ನಿ. |
01:30 | name ಎನ್ನುವ ವೇರಿಯೇಬಲ್ ನ ಮೊದಲು final ಕೀವರ್ಡ್ ಅನ್ನು ಸೇರಿಸಿ. ನಾವೀಗ name ಎನ್ನುವ ವೇರಿಯೇಬಲ್ ಅನ್ನು final ಎಂದು ಮಾಡಿದ್ದೇವೆ. |
01:40 | ನಾವು ಈ name ಎಂಬ ವೇರಿಯೇಬಲ್ ಅನ್ನು, "sneha" ಎಂಬ ವ್ಯಾಲ್ಯೂ ದಿಂದ ಇನಿಶಿಯಲೈಸ್ ಮಾಡುವೆವು. |
01:45 | ಈ ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡುವೆವು. |
01:48 | ನಮಗೆ The final field Employee.name cannot be assigned ಎಂಬ ಕಂಪೈಲೇಶನ್ ಎರರ್ ಸಿಗುತ್ತದೆ. |
01:55 | ಏಕೆಂದರೆ, ಇಲ್ಲಿ final ವೇರಿಯೇಬಲ್ name ಅನ್ನು ಈಗಾಗಲೇ ಡಿಕ್ಲೇರ್ ಮಾಡಿ ಇನಿಶಿಯಲೈಸ್ ಮಾಡಲಾಗಿದೆ. |
02:05 | final ವೇರಿಯೇಬಲ್ ಅನ್ನು ನಾವು ಒಮ್ಮೆ ಮಾತ್ರ ಇನಿಶಿಯಲೈಸ್ ಮಾಡಬಹುದು. |
02:08 | ಆದ್ದರಿಂದ, ನಾವು setName (ಸೆಟ್ ನೇಮ್) ಮೆಥಡ್ ಅನ್ನು ಕಾಮೆಂಟ್ ಮಾಡೋಣ. ಇದು name ಅನ್ನು ಮಾರ್ಪಡಿಸುತ್ತದೆ. |
02:14 | ಈ ಕ್ಲಾಸ್ ಅನ್ನು ಸೇವ್ ಮಾಡಿ. |
02:16 | ಈಗ TestEmployee ಕ್ಲಾಸ್ ಗೆ ಬನ್ನಿ. |
02:19 | main ಮೆಥೆಡ್ ಗೆ ಬನ್ನಿ ಮತ್ತು manager.setName("Nikkita Dinesh"); ಎನ್ನುವ ಸಾಲನ್ನು ಕಾಮೆಂಟ್ ಮಾಡಿ. |
02:26 | ಇದು setName ಮೆಥೆಡ್ ನ ಇನ್ಸ್ಟನ್ಸ್ ಆಗಿದ್ದರಿಂದ, ಈ ಸಾಲನ್ನು ನಾವು ಕಾಮೆಂಟ್ ಮಾಡಿದ್ದೇವೆ. |
02:31 | ನಾವು ಈಗಾಗಲೇ Employee ಕ್ಲಾಸ್ ನಲ್ಲಿ, setName ಮೆಥೆಡ್ ಅನ್ನು ಕಾಮೆಂಟ್ ಮಾಡಿದ್ದೇವೆ. |
02:35 | ಈಗ ಈ ಕ್ಲಾಸ್ ಅನ್ನು ಸೇವ್ ಮಾಡಿಕೊಂಡು ಪ್ರೊಗ್ರಾಂಅನ್ನು ರನ್ ಮಾಡೋಣ. |
02:38 | ಉತ್ತಮ !!! ನಾವು ಈ ಔಟ್ಪುಟ್ ಅನ್ನು ಪಡೆದಿದ್ದೇವೆ.
Name: Sneha Email: abc@gmail.com Manager of: Accounts |
02:47 | ನಾವೀಗಾಗಲೇ TestEmployee ಕ್ಲಾಸ್ ಮತ್ತು Employee ಕ್ಲಾಸ್ ನಲ್ಲಿ, ವೇರಿಯೇಬಲ್ ಗಳನ್ನು ಈ ವ್ಯಾಲ್ಯೂಗಳೊಂದಿಗೆ ಇನಿಶಿಯಲೈಸ್ ಮಾಡಿದ್ದರಿಂದ ಈ ಔಟ್ಪುಟ್ ಅನ್ನು ಪಡೆದಿದ್ದೇವೆ. |
02:58 | ಈಗ Employee ಕ್ಲಾಸ್ ನ final ವೇರಿಯೇಬಲ್ name ಗೆ ಬನ್ನಿ. |
03:02 | final ವೇರಿಯೇಬಲ್ name ನ ಇನಿಶಿಯಲೈಸ್ ಮಾಡಿದ ವ್ಯಾಲ್ಯೂ ಎಂದರೆ “sneha” ಅನ್ನು ತೆಗೆದುಬಿಡಿ. |
03:08 | setName ಮೆಥೆಡ್ ಅನ್ನು ಕಾಮೆಂಟ್ ಮಾಡಿದ್ದನ್ನು ರದ್ದುಮಾಡಿ. |
03:12 | ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
03:14 | ನಮಗೆ ಈ ಎರರ್ ಸಿಗುತ್ತದೆ: The final field Employee.name cannot be assigned. |
03:20 | ಏಕೆಂದರೆ, final ವೇರಿಯೇಬಲ್ ಅನ್ನು ಇನಿಶಿಯಲೈಸ್ ಮಾಡಿರದಿದ್ದರೆ ಮಾತ್ರ “ಕನ್ಸ್ಟ್ರಕ್ಟರ್” ಇದನ್ನು ಇನಿಶಿಯಲೈಸ್ ಮಾಡಬಹುದು. |
03:28 | ಎಂದರೆ, ಇದನ್ನು ಪ್ರೋಗ್ರಾಮ್ ನಲ್ಲಿ ಬೇರೆಲ್ಲಿಯೂ ಬದಲಿಸಲು ಸಾಧ್ಯವಿಲ್ಲ. |
03:33 | ಅದಕ್ಕಾಗಿ, Employee ಕ್ಲಾಸ್ ನಲ್ಲಿ ಒಂದು ಕನ್ಸ್ಟ್ರಕ್ಟರ್ ಅನ್ನು ರಚಿಸೋಣ. ಕನ್ಸ್ಟ್ರಕ್ಟರ್ ನ ಬಗ್ಗೆ ನಾವು ಈಗಾಗಲೇ ಅರಿತಿದ್ದೇವೆ. |
03:43 | ಕನ್ಸ್ಟ್ರಕ್ಟರ್ ಸಹ ಕ್ಲಾಸ್ ನ ಹೆಸರನ್ನೇ ಹೊಂದಿರುವುದು ನಮಗೆ ತಿಳಿದಿದೆ. |
03:47 | ಆದ್ದರಿಂದ, ಹೀಗೆ ಟೈಪ್ ಮಾಡಿ:
Employee, parentheses, open and close curly brackets ಮತ್ತು ಕರ್ಲಿ ಬ್ರ್ಯಾಕೆಟ್ ಒಳಗೆ ನಾವು ವೇರಿಯೇಬಲ್ name ಅನ್ನು “sneha” ಸೆಮಿಕೋಲನ್ ನೊಂದಿಗೆ ಇನಿಶಿಯಲೈಸ್ ಮಾಡೋಣ. |
04:08 | setName ಮೆಥೆಡ್ ಅನ್ನು ಕಾಮೆಂಟ್ ಮಾಡಿ. |
04:12 | ಪ್ರೊಗ್ರಾಂ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
04:15 | ನಮಗೆ ಬೇಕಾಗಿರುವ ಔಟ್ಪುಟ್ ಅನ್ನು ಪಡೆದಿದ್ದೇವೆ. |
04:17 | ಕನ್ಸ್ಟ್ರಕ್ಟರ್ ನಲ್ಲಿ, ಫೈನಲ್ ವೇರಿಯೇಬಲ್ ಅನ್ನು ಯಶಸ್ವಿಯಾಗಿ ಇನಿಶಿಯಲೈಸ್ ಮಾಡಲಾಗಿದೆ. |
04:22 | ನಾವೀಗ “ಫೈನಲ್ ಸ್ಟ್ಯಾಟಿಕ್ ವೇರಿಯೆಬಲ್” ಗಳ ಬಗ್ಗೆ ತಿಳಿಯೋಣ. |
04:26 | Employee ಕ್ಲಾಸ್ ನಲ್ಲಿ, ಫೈನಲ್ ವೇರಿಯೇಬಲ್ ಗೆ ಬನ್ನಿ. |
04:30 | final ಕೀವರ್ಡ್ ಗೆ ಮುಂಚಿತವಾಗಿ static ಕೀವರ್ಡ್ ಅನ್ನು ಸೇರಿಸಿ. ಈಗ ನಾವು ಫೈನಲ್ ವೇರಿಯೇಬಲ್ ಅನ್ನು ಸ್ಟ್ಯಾಟಿಕ್ ಎಂದು ಮಾಡಿದ್ದೇವೆ. |
04:38 | ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
04:40 | ನಮಗೆ The final field Employee.name cannot be assigned ಎಂಬ ಎರರ್ ಸಿಗುತ್ತದೆ. |
04:46 | ಇದಕ್ಕೆ ಕಾರಣ, ಕನ್ಸ್ಟ್ರಕ್ಟರ್ ನಲ್ಲಿ, static final ವೇರಿಯೇಬಲ್ ಗಳನ್ನು ಇನಿಶಿಯಲೈಸ್ ಮಾಡಲು ಸಾಧ್ಯವಿಲ್ಲ. |
04:53 | ಅವುಗಳನ್ನು ಡಿಕ್ಲೇರ್ ಮಾಡುವಾಗಲೇ ವ್ಯಾಲ್ಯೂಅನ್ನು ಅಸೈನ್ ಮಾಡಬೇಕು. ಅಥವಾ, ಅವುಗಳನ್ನು “ಸ್ಟ್ಯಾಟಿಕ್ ಬ್ಲಾಕ್” ಗಳಲ್ಲಿ ಡಿಕ್ಲೇರ್ ಮಾಡಬೇಕು. |
05:01 | ಸ್ಟ್ಯಾಟಿಕ್ ವೇರಿಯೇಬಲ್ ಗಳನ್ನು, ಒಂದು ಕ್ಲಾಸ್ ನ ಎಲ್ಲಾ ಆಬ್ಜೆಕ್ಟ್ ಗಳಲ್ಲಿ ಹಂಚಲಾಗುವುದು. |
05:06 | ಹೊಸ ಆಬ್ಜೆಕ್ಟ್ ಅನ್ನು ರಚಿಸಿದರೆ, ಸ್ಟ್ಯಾಟಿಕ್ ವೇರಿಯೇಬಲ್ ಬದಲಾಗಬಹುದು. ಸ್ಟ್ಯಾಟಿಕ್ ವೇರಿಯೇಬಲ್ ಫೈನಲ್ ಎಂದಾದರೆ ಇದಕ್ಕೆ ಅನುಮತಿಯಿಲ್ಲ. |
05:14 | Eclipse IDE ಗೆ ಹಿಂತಿರುಗಿ. |
05:17 | ಈಗ ನಾವು ಒಂದು ಸ್ಟ್ಯಾಟಿಕ್ ಬ್ಲಾಕ್ ಅನ್ನು ರಚಿಸೋಣ. |
05:20 | ಅದಕ್ಕಾಗಿ, Employee ಕ್ಲಾಸ್ ನಲ್ಲಿ ನಾವು ರಚಿಸಿದ ಕನ್ಸ್ಟ್ರಕ್ಟರ್ ಗೆ ಬರೋಣ. |
05:26 | ಇಲ್ಲಿ, Employee ಮತ್ತು ಆವರಣದ ಬದಲಾಗಿ static ಎಂದು ಟೈಪ್ ಮಾಡೋಣ. ಈಗ ನಾವು ಒಂದು ಸ್ಟ್ಯಾಟಿಕ್ ಬ್ಲಾಕ್ ಅನ್ನು ರಚಿಸಿದ್ದೇವೆ. |
05:35 | ಈಗ ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡುತ್ತೇವೆ. |
05:38 | ನಮಗೆ ಬೇಕಾದ ಔಟ್ಪುಟ್ ಸಿಕ್ಕಿದೆ. ನಾವು ಯಶಸ್ವಿಯಾಗಿ static final ವೇರಿಯೇಬಲ್ ಅನ್ನು ಇನಿಶಿಯಲೈಸ್ ಮಾಡಿದ್ದೇವೆ. |
05:46 | ನಾವೀಗ ಫೈನಲ್ ವೇರಿಯೇಬಲ್ ಅನ್ನು, ಮೆಥೆಡ್ ಗೆ ಪ್ಯಾರಾಮೀಟರ್ ಆಗಿ ಬಳಸೋಣ. |
05:52 | Employee ಕ್ಲಾಸ್ ನಲ್ಲಿಯ setEmail ಮೆಥೆಡ್ ಗೆ ಬನ್ನಿರಿ. |
05:55 | String newEmail ಗೆ (ಸ್ಟ್ರಿಂಗ್ ನ್ಯೂ ಈಮೇಲ್) ಮುನ್ನ final ಕೀವರ್ಡ್ ಅನ್ನು ಸೇರಿಸಿ. ನಾವು ಈ ಪ್ಯಾರಾಮೀಟರ್ ಅನ್ನು ಫೈನಲ್ ಎಂದು ಮಾಡಿದ್ದೇವೆ. |
06:03 | ಈಗ ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
06:06 | ನಮಗೆ ಬೇಕಾದ ಔಟ್ಪುಟ್ ಸಿಕ್ಕಿದೆ. |
06:09 | ಈಗ setEmail ಮೆಥೆಡ್ ಗೆ ಬನ್ನಿರಿ.
ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡುವೆವು: newEmail is equal to abc@gmail.com ಸೆಮಿಕೋಲನ್. |
06:28 | ನಾವು newEmail ಫೈನಲ್ ವೇರಿಯೇಬಲ್ ಅನ್ನು ಬದಲಾಯಿಸಿದ್ದೇವೆ. |
06:32 | ಮತ್ತೊಮ್ಮೆ, ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡುತ್ತೇವೆ. |
06:35 | ನಮಗೆ ಈ ಎರರ್ ಸಿಗುತ್ತದೆ: The final local variable newEmail cannot be assigned. |
06:42 | ಏಕೆಂದರೆ, ಫೈನಲ್ ವೇರಿಯೇಬಲ್ ಒಂದು ಮೆಥೆಡ್ ಗೆ ಪ್ಯಾರಾಮೀಟರ್ ಆಗಿದ್ದರೆ, ಆ ಮೆಥೆಡ್ ನಿಂದ ಅದನ್ನು ಪರಿವರ್ತಿಸಲು ಸಾಧ್ಯವಿಲ್ಲ. |
06:50 | ಹೀಗಾಗಿ, ನಾವು ವೇರಿಯೇಬಲ್ ನ ಬದಲಾವಣೆಯನ್ನು ತೆಗೆದುಬಿಡೋಣ. |
06:54 | ಈಗ final ಮೆಥೆಡ್ ಬಗ್ಗೆ ಕಲಿಯೋಣ. Employee ಕ್ಲಾಸ್ ನಲ್ಲಿಯ getDetails ಎಂಬ ಮೆಥೆಡ್ ಗೆ ಬನ್ನಿ . |
07:01 | getDetails ಮೆಥೆಡ್ ಗೆ ಮುಂಚೆ, final ಕೀವರ್ಡ್ ಅನ್ನು ಸೇರಿಸಿ. ಈಗ ನಾವು ಮೆಥೆಡ್ ಅನ್ನು ಫೈನಲ್ ಎಂದು ಮಾಡಿದ್ದೇವೆ. |
07:08 | ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
07:10 | ನಮಗೆ ಈ ಎರರ್ ಸಿಗುತ್ತದೆ: class Manager overrides final method getDetails(). |
07:16 | Manager ಕ್ಲಾಸ್ ನಲ್ಲಿಯ getDetails() ಮೆಥೆಡ್ ಗೆ ಬನ್ನಿ. |
07:21 | ಇದಕ್ಕೆ ಕಾರಣ, ನೀವು ಯಾವುದೇ ಮೆಥೆಡ್ ಅನ್ನು ಫೈನಲ್ ಎಂದು ಮಾಡಿದರೆ, ನೀವು ಅದನ್ನು ಓವರ್-ರೈಡ್ ಮಾಡಲು ಸಾಧ್ಯವಿಲ್ಲ. |
07:29 | Manager ಕ್ಲಾಸ್ ನ getDetails() ಮೆಥೆಡ್ , Employee ಕ್ಲಾಸ್ ನ getDetails() ಮೆಥೆಡ್ ಅನ್ನು ಓವರ್-ರೈಡ್ ಮಾಡುತ್ತದೆ. |
07:36 | final ಮೆಥೆಡ್, private ಎಂದಾದರೆ ಎನಾಗುವುದು? |
07:39 | ಚೈಲ್ಡ್ ಕ್ಲಾಸ್ ಗಳು, private (ಪ್ರೈವೇಟ್) ಮೆಥೆಡ್ ಗಳನ್ನು ಇನ್ಹೆರಿಟ್ ಮಾಡುವುದಿಲ್ಲ. |
07:43 | ಹಾಗಾಗಿ, ನಾವು getDetails() ಮೆಥೆಡ್ ಅನ್ನು ಚೈಲ್ಡ್ ಕ್ಲಾಸ್ ನಲ್ಲಿ ಸೇರಿಸಬಹುದು. ನೀವು ಇದನ್ನು ಮಾಡಲು ಪ್ರಯತ್ನಿಸಿ. |
07:51 | Eclipse IDE ಗೆ (ಎಕ್ಲಿಪ್ಸ್ ಐ ಡಿ ಇ) ಹಿಂತಿರುಗೋಣ. |
07:54 | Employee ಕ್ಲಾಸ್ ನಲ್ಲಿ, getDetails() ಮೆಥಡ್ ನ ಮೊದಲು ಇರುವ final ಕೀವರ್ಡ್ ಅನ್ನು ತೆಗೆದುಹಾಕಿ. |
08:03 | ಫೈನಲ್ ವೇರಿಯೇಬಲ್ name ನ ಮುನ್ನ ಇರುವ static ಕೀವರ್ಡ್ ಅನ್ನು ತೆಗೆದುಹಾಕಿ. |
08:10 | ಈಗ, ಕನ್ಸ್ಟ್ರಕ್ಟರ್ ಅನ್ನು ಫೈನಲ್ ಎಂದು ಡಿಕ್ಲೇರ್ ಮಾಡಬಹುದೋ ಇಲ್ಲವೋ ಎಂದು ತಿಳಿಯೋಣ. |
08:15 | ಅದಕ್ಕಾಗಿ, ಮತ್ತೊಮ್ಮೆ ನಾವು ಒಂದು ಕನ್ಸ್ಟ್ರಕ್ಟರ್ ಅನ್ನು ರಚಿಸೋಣ. static ನ ಬದಲಾಗಿ ಹೀಗೆ ಟೈಪ್ ಮಾಡಿ: Employee parentheses. |
08:26 | ಕನ್ಸ್ಟ್ರಕ್ಟರ್ ಗಿಂತ ಮೊದಲು, final ಕೀವರ್ಡ್ ಅನ್ನು ಸೇರಿಸಿ. |
08:31 | ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
08:36 | ನಮಗೆ ಈ ಎರರ್ ಸಿಗುತ್ತದೆ: Illegal modifier for the constructor in type Employee. |
08:42 | ಇದಕ್ಕೆ ಕಾರಣ, ಕನ್ಸ್ಟ್ರಕ್ಟರ್ ಗಳನ್ನು ಇನ್ಹೆರಿಟ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕನ್ಸ್ಟ್ರಕ್ಟರ್ ಫೈನಲ್ ಆಗಲು ಸಾಧ್ಯವಿಲ್ಲ. |
08:50 | ನಾವು ಕನ್ಸ್ಟ್ರಕ್ಟರ್ ಮುಂಚೆ ಇರುವ final ಕೀವರ್ಡ್ ಅನ್ನು ತೆಗೆದುಬಿಡೋಣ. |
08:54 | ಈಗ, ನಾವು final ಕ್ಲಾಸ್ ಬಗ್ಗೆ ಕಲಿಯೋಣ. |
08:57 | Employee ಕ್ಲಾಸ್ ಅನ್ನು final ಎಂದು ಮಾಡಲು, ಕ್ಲಾಸ್ ನ ಮೊದಲು final ಕೀವರ್ಡ್ ಅನ್ನು ಸೇರಿಸಿ. |
09:03 | ಪ್ರೋಗ್ರಾಮ್ ಅನ್ನು ಸೇವ್ ಮಾಡಿಕೊಂಡು ರನ್ ಮಾಡಿ. |
09:06 | ನಮಗೆ ಈ ಎರರ್ ಸಿಗುತ್ತದೆ: The method setEmail is undefined for the type Manager. |
09:12 | ನಿಜವಾದ ಎರರ್ ಅನ್ನು ತಿಳಿಯಬೇಕಾದರೆ, ನಾವು TestEmployee ಕ್ಲಾಸ್ ಗೆ ಬರೋಣ ಮತ್ತು ಈ ಕೆಳಗಿನ ಸಾಲುಗಳನ್ನು ಕಾಮೆಂಟ್ ಮಾಡೋಣ. |
09:21 | manager.setEmail("abc@gmail.com"); manager.setDepartment("Accounts"); |
09:28 | ಕ್ಲಾಸ್ ಅನ್ನು ಸೇವ್ ಮಾಡಿ, ಪ್ರೋಗ್ರಾಮ್ ಅನ್ನು ರನ್ ಮಾಡಿ. |
09:31 | ನಿಜವಾದ ಎರರ್ ಹೀಗಿದೆ: The type manager cannot subclass the final class Employee. |
09:40 | ಇಲ್ಲಿ, Manager ಕ್ಲಾಸ್, Employee ಕ್ಲಾಸ್ ಅನ್ನು ಎಕ್ಸ್ಟೆಂಡ್ (extend) ಮಾಡುತ್ತದೆ. |
09:45 | ಹೀಗಾಗಿ, ನಾವು Employee ಕ್ಲಾಸ್ ಗೆ ಹಿಂತಿರುಗಿ, ಫೈನಲ್ ಕೀವರ್ಡ್ ಅನ್ನು ತೆಗೆದುಹಾಕೋಣ. ಕ್ಲಾಸ್ ಅನ್ನು ಸೇವ್ ಮಾಡೋಣ. |
09:54 | TestEmployee ಕ್ಲಾಸ್ ಗೆ ಬನ್ನಿ. ಈ ಕೆಳಗಿನ ಸಾಲುಗಳನ್ನು ಅನ್-ಕಾಮೆಂಟ್ ಮಾಡಿ.
manager.setEmail("abc@gmail.com"); manager.setDepartment("Accounts"); |
10:06 | ಕ್ಲಾಸ್ ಅನ್ನು ಸೇವ್ ಮಾಡಿಕೊಂಡು, ಪ್ರೋಗ್ರಾಮ್ ಅನ್ನು ರನ್ ಮಾಡಿ. |
10:09 | ನಮಗೆ ಬೇಕಾದ ಔಟ್ಪುಟ್ ಸಿಕ್ಕಿದೆ. |
10:12 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
final ಕೀವರ್ಡ್ ಅನ್ನು ಯಾವಾಗ ಇನ್ವೋಕ್ ಮಾಡುವುದು, final ವೇರಿಯೇಬಲ್ ಗಳು, final ಮೆಥೆಡ್ ಗಳು ಮತ್ತು ಫೈನಲ್ ಕ್ಲಾಸ್ ಗಳು ಇವುಗಳ ಬಗ್ಗೆ ಕಲಿತಿದ್ದೇವೆ. |
10:27 | ಅಸೈನ್ಮೆಂಟ್ ಗಾಗಿ,
ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಉಪಯೋಗಿಸಿದ Bike (ಬೈಕ್) ಮತ್ತು Vehicle (ವೆಹಿಕಲ್) ಕ್ಲಾಸ್ ಗಳಿಗಾಗಿ, Using final keyword ಟ್ಯುಟೋರಿಯಲ್ ನಲ್ಲಿಯ ಹಂತಗಳನ್ನು ಪುನರಾವರ್ತಿಸಿ. |
10:37 | ಜಾವಾದಲ್ಲಿರುವ ಫೈನಲ್ ಕ್ಲಾಸ್ ಗಳನ್ನು ಬರೆಯಿರಿ. |
10:41 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
10:47 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ತಂಡವು:
ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
10:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |