Difference between revisions of "Netbeans/C2/Netbeans-Debugger/Kannada"

From Script | Spoken-Tutorial
Jump to: navigation, search
 
Line 389: Line 389:
 
|-
 
|-
 
| 09:20
 
| 09:20
|ಕೋಡ್ ನಲ್ಲಿ 'ಬ್ರೆಕ್ ಪಾಯಿಂಟ್' ಗಳನ್ನು ಸೆಟ್ ಮಾಡಿ. ಸಾಮಾನ್ಯವಾಗಿ, ಫಂಕ್ಷನ್ ಅನ್ನು ಕಾಲ್ ಮಾಡುವಲ್ಲಿ ಎರರ್ ಇರಬಹುದು ಎಂದು ಊಹಿಸಿ ನೀವು ಬ್ರೆಕ್ ಅನ್ನು ಸೆಟ್ ಮಾಡಿರಬಹುದು.  
+
|ಕೋಡ್ ನಲ್ಲಿ 'ಬ್ರೆಕ್ ಪಾಯಿಂಟ್' ಗಳನ್ನು ಸೆಟ್ ಮಾಡಿ. ಸಾಮಾನ್ಯವಾಗಿ, ಫಂಕ್ಷನ್ ಅನ್ನು ಕಾಲ್ ಮಾಡುವಲ್ಲಿ ಎರರ್ ಇರಬಹುದು ಎಂದು ಊಹಿಸಿ ನೀವು ಬ್ರೆಕ್ ಅನ್ನು ಸೆಟ್ ಮಾಡಿರಬಹುದು.  
  
 
|-
 
|-
Line 397: Line 397:
 
|-
 
|-
 
| 09:32
 
| 09:32
| ಸಾಲುಗಳನ್ನು ಎಕ್ಸೀಕ್ಯೂಟ್ ಮಾಡಲು, '''Step Over'''ಗಳನ್ನು ಬಳಸಿ. ಮತ್ತು, '''Variable''' ವಿಂಡೋದಲ್ಲಿ, ವೇರಿಯೇಬಲ್ ನ ವ್ಯಾಲ್ಯೂಗಳನ್ನು ಗಮನಿಸುತ್ತಿರಿ.  
+
| ಸಾಲುಗಳನ್ನು ಎಕ್ಸೀಕ್ಯೂಟ್ ಮಾಡಲು '''Step Over''' ಗಳನ್ನು ಬಳಸಿ. ಮತ್ತು '''Variable''' ವಿಂಡೋದಲ್ಲಿ, ವೇರಿಯೇಬಲ್ ನ ವ್ಯಾಲ್ಯೂಗಳನ್ನು ಗಮನಿಸುತ್ತಿರಿ.  
  
 
|-
 
|-
Line 405: Line 405:
 
|-
 
|-
 
| 09:45
 
| 09:45
|ಮೆಥಡ್ ನಿಂದ Step Out ಮಾಡಿ.  
+
|ಮೆಥಡ್ ನಿಂದ '''Step Out''' ಮಾಡಿ.  
  
 
|-
 
|-

Latest revision as of 20:13, 2 October 2018

Time Narration
00:01 ಎಲ್ಲರಿಗೂ ನಮಸ್ಕಾರ.
00:02 Netbeans Debugger ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ನೀವು Netbeans (ನೆಟ್ಬೀನ್ಸ್) ಅನ್ನು ಮೊದಲ ಬಾರಿಗೆ ಬಳಸುತ್ತಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳನ್ನು 'ಸ್ಪೋಕನ್ ಟ್ಯುಟೋರಿಯಲ್' ವೆಬ್ಸೈಟ್ ನಲ್ಲಿ ವೀಕ್ಷಿಸಿ.
00:14 ಇಲ್ಲಿ ವಿವರಣೆಗಾಗಿ, ನಾನು Linux Operating System Ubuntu ಆವೃತ್ತಿ 12.04
00:21 ಮತ್ತು Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ.
00:26 ಪ್ರೊಗ್ರಾಂಗಳನ್ನು ಡೀಬಗ್ ಮಾಡುವುದು ಒಂದು ಕಠಿಣವಾದ ಕೆಲಸವೆಂದು ನಮಗೆಲ್ಲ ತಿಳಿದಿದೆ.
00:31 ಆದ್ದರಿಂದ, ಡೀಬಗ್ ಮಾಡುವ ಟೂಲ್ ಅನ್ನು ಅದರ ವೈಶಿಷ್ಟ್ಯಗಳೊಂದಿಗೆ ತಿಳಿದುಕೊಳ್ಳುವುದು, ನಿಮ್ಮ ಅಮೂಲ್ಯ ಸಮಯವನ್ನು ಉಳಿಸಲು ಸಹಾಯಕವಾಗುತ್ತದೆ.
00:39 ವಿಶೇಷವಾಗಿ, ನೀವು ದೊಡ್ಡ ಪ್ರೊಗ್ರಾಂಗಳನ್ನು ಕೋಡ್ ಮಾಡುವಾಗ ಅಥವಾ ಪರೀಕ್ಷೆ ಮಾಡುವಾಗ,
00:42 ಈ ಪ್ರಬಲವಾದ ಡೀಬಗ್ ಮಾಡುವ ಟೂಲ್, ತುಂಬಾ ಉಪಯುಕ್ತವಾಗಿದೆ.
00:46 ಈ ಟ್ಯುಟೋರಿಯಲ್ ನಲ್ಲಿ, Netbeans Debugger (ನೆಟ್ಬೀನ್ಸ್ ಡಿಬಗ್ಗರ್) ಒದಗಿಸುವ ಕೆಲವು ವೈಶಿಷ್ಟ್ಯಗಳನ್ನು ನಾವು ಕಲಿಯುವೆವು.
00:53 ಈ ಟ್ಯುಟೋರಿಯಲ್ -
00:55 ಡೀಬಗ್ ಮಾಡುವ ವಿಂಡೋ,
00:58 'ಬ್ರೆಕ್-ಪಾಯಿಂಟ್' ಗಳನ್ನು ಕಾನ್ಫಿಗರ್ ಮಾಡುವುದು,
01:00 ಎಕ್ಸ್ಪ್ರೆಶನ್ ಗಳ (expressions) ಮೌಲ್ಯಮಾಪನ ಅಥವಾ ವಾಚ್ ಗಳನ್ನು ಸೆಟ್ ಮಾಡುವುದು,
01:04 ನಿಮ್ಮ ಪ್ರೊಗ್ರಾಂನ ಎಕ್ಸೀಕ್ಯೂಶನ್ ನ ಗತಿಯನ್ನು ಕಂಡುಹಿಡಿಯಲು ಆಯ್ಕೆಗಳು ಮತ್ತು
01:17 ಡೀಬಗ್ಗರ್ ಅನ್ನು ಕಾನ್ಫಿಗರ್ ಮಾಡಲು ಆಯ್ಕೆಗಳು, ಇವುಗಳನ್ನು ನಿಮಗೆ ತಿಳಿಸಿಕೊಡುತ್ತದೆ.
01:12 ಈಗ, ನಾವು ಈ ಸ್ಯಾಂಪಲ್ ಕೋಡ್ ಅನ್ನು ಡಿಬಗ್ ಮಾಡುವುದರೊಂದಿಗೆ ಆರಂಭಿಸೋಣ.
01:17 ನಾನು Netbeans IDE ಗೆ ಬದಲಾಯಿಸುವೆನು.
01:20 ಈ ವಿವರಣೆಗಾಗಿ, ನನ್ನ IDE ಯಲ್ಲಿ ನಾನು ಈಗಾಗಲೇ "sampleDebug" ಎಂಬ ಒಂದು ಜಾವಾ ಅಪ್ಲಿಕೇಶನ್ ಅನ್ನು ತಯಾರಿಸಿದ್ದೇನೆ.
01:27 ಇದು 'a', 'b', ಮತ್ತು 'c' ಎಂಬ ಮೂರು ಇಂಟೀಜರ್ ವ್ಯಾಲ್ಯೂಗಳನ್ನು ಆರಂಭಿಸುವ ಒಂದು ಸಣ್ಣ ಪ್ರೋಗ್ರಾಂ ಆಗಿದೆ.
01:35 ನಂತರ, ಇದು "Hello World!" ಮತ್ತು 'a' ದ ವ್ಯಾಲ್ಯೂ ಇವುಗಳನ್ನು ಪ್ರಿಂಟ್ ಮಾಡುತ್ತದೆ.
01:40 ಇದು 'value' ಎಂಬ ಇಂಟೀಜರ್ ಅನ್ನು private integer value ಎಂದು ಹೊಂದಿರುವ "SampleClass" ಎಂಬ ಒಂದು class ಆಬ್ಜೆಕ್ಟ್ ಅನ್ನು ಸಹ ಕ್ರಿಯೇಟ್ ಮಾಡುತ್ತದೆ.
01:52 ನಂತರ, ಇದು 'b' ಯ ವ್ಯಾಲ್ಯೂಅನ್ನು ಕಂಡುಹಿಡಿಯುತ್ತದೆ
01:55 ಮತ್ತು 'c' ಯ ವ್ಯಾಲ್ಯೂಅನ್ನು ಕಂಡುಹಿಡಿಯಲು ಒಂದು ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ
02:00 ಹಾಗೂ 'b' ಮತ್ತು 'c' ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತದೆ.
02:05 ಡೀಬಗ್ಗಿಂಗ್ ಅನ್ನು ಆರಂಭಿಸಲು, ಮೊದಲು ನಾವು 'ಬ್ರೆಕ್-ಪಾಯಿಂಟ್' ಅನ್ನು ಸೆಟ್ ಮಾಡೋಣ.
02:09 'ಬ್ರೆಕ್-ಪಾಯಿಂಟ್' ಅನ್ನು ಸೆಟ್ ಮಾಡಲು, ಲೈನ್ ನಂಬರ್ ನ ಮೇಲೆ ಕ್ಲಿಕ್ ಮಾಡಿ.
02:13 "Hello World!" ಎಂದು ಪ್ರಿಂಟ್ ಮಾಡುವ ಈ ಲೈನ್ ಮೇಲೆ ನಾನು ಸೆಟ್ ಮಾಡುವೆನು.
02:18 ಗಮನಿಸಿ: ' ಬ್ರೆಕ್ ಪಾಯಿಂಟ್' ಅನ್ನು ಹೊಂದಿದ ಲೈನ್, ಗುಲಾಬಿ ಬಣ್ಣಕ್ಕೆ ಬದಲಾಯಿಸುತ್ತದೆ ಮತ್ತು ಅದರ ಲೈನ್ ನಂಬರ್ ಅನ್ನು ಒಂದು ಸಣ್ಣ ಚೌಕದಿಂದ ಗುರುತಿಸಲಾಗಿದೆ.
02:28 ನೀವು ಟೂಲ್ ಬಾರ್ ನಲ್ಲಿ Debug Project ಬಟನ್ ಮೇಲೆ ಕ್ಲಿಕ್ ಮಾಡಿ,
02:31 ಪ್ರೊಗ್ರಾಂಅನ್ನು debugging ಮೋಡ್ ನಲ್ಲಿ ರನ್ ಮಾಡಿದಾಗ,
02:35 'ಬ್ರೆಕ್ ಪಾಯಿಂಟ್' ಅನ್ನು ಹೊಂದಿದ ಲೈನ್ ನಲ್ಲಿ, ಪ್ರೊಗ್ರಾಂ ಎಕ್ಸೀಕ್ಯೂಟ್ ಆಗುತ್ತಿರುವುದು ನಿಲ್ಲುತ್ತದೆ.
02:41 ಇಲ್ಲಿಯವರೆಗೆ, 'a' ದ ವ್ಯಾಲ್ಯೂವನ್ನು ಸೆಟ್ ಮಾಡಲಾಗಿದೆ.
02:45 ಅದರ ವ್ಯಾಲ್ಯೂವನ್ನು ನೋಡಲು, ಅದರ ಮೇಲೆ ಮೌಸ್ ಅನ್ನು ನಡೆದಾಡಿಸಿ.
02:49 ಅದರ ವ್ಯಾಲ್ಯೂ, 10 ಎಂದು ಅದು ತೋರಿಸುತ್ತದೆ.
02:52 ವರ್ಕ್-ಸ್ಪೇಸ್ ನ ಕೆಳಗಡೆ ಇನ್ನೂ ಕೆಲವು ವಿಂಡೋಗಳು ಇರುವುದನ್ನು ನೀವು ನೋಡಬಹುದು.
02:59 ಇಲ್ಲಿ ಒಂದು 'Variables' ಎಂಬ ವಿಂಡೋ ಇದೆ. ಇದು ವೇರಿಯೇಬಲ್ ಗಳ ಒಂದು ಲಿಸ್ಟ್ ಅನ್ನು ಮತ್ತು ಅವುಗಳ ವ್ಯಾಲ್ಯೂಗಳನ್ನು ತೋರಿಸುತ್ತದೆ.
03:07 ಇಲ್ಲಿಯವರೆಗೆ, ವೇರಿಯೇಬಲ್ 'a' ಅನ್ನು ಮಾತ್ರ ಇನಿಶಿಯಲೈಸ್ ಮಾಡಲಾಗಿದೆ.
03:11 sampleDebug (ಸ್ಯಾಂಪಲ್ ಡೀಬಗ್) ಔಟ್ಪುಟ್ ನೊಂದಿಗೆ, Output ವಿಂಡೋಅನ್ನು ಸಹ ನಾವು ನೋಡಬಹುದು.
03:17 ಇಲ್ಲಿ ಇನ್ನೂ ಔಟ್ಪುಟ್ ಇಲ್ಲ.
03:19 ಇಲ್ಲಿ ಒಂದು Debugger Console ಸಹ ಇದೆ. ಇದು, ಪ್ರೊಗ್ರಾಂಗೆ ಲೈನ್ 29 ರಲ್ಲಿ ಒಂದು 'ಬ್ರೆಕ್ ಪಾಯಿಂಟ್' ಸಿಕ್ಕಿದ್ದರಿಂದ ಅದು ಅಲ್ಲಿಯೇ ನಿಂತುಬಿಟ್ಟಿದೆ ಎಂದು ಹೇಳುತ್ತದೆ.
03:28 ಇಲ್ಲಿ ಒಂದು Breakpoints ಎಂಬ ವಿಂಡೋ ಸಹ ಇದೆ. ಇದು, ಲೈನ್ 29 ರಲ್ಲಿ ಒಂದು 'ಬ್ರೆಕ್ ಪಾಯಿಂಟ್' ಅನ್ನು ಸೆಟ್ ಮಾಡಲಾಗಿದೆ ಎಂದು ಹೇಳುತ್ತದೆ.
03:36 ಈಗ, watch ಅನ್ನು ಸೇರಿಸುವುದು ಹೇಗೆ ಎಂಬುದನ್ನು ನಾವು ನೋಡೋಣ.
03:40 ಉದಾಹರಣೆಗೆ, ನನಗೆ ಇಂಟೀಜರ್ ವ್ಯಾಲ್ಯೂ 'aSample' ಅನ್ನು ವಾಚ್ ಮಾಡಬೇಕಾಗಿದೆ ಎಂದುಕೊಳ್ಳೋಣ.
03:48 ವರ್ಕ್-ಸ್ಪೇಸ್ ನ ಕೆಳಗಡೆ, 'Variables' ವಿಂಡೋದಲ್ಲಿ, Enter new Watch ಎಂಬ ಆಯ್ಕೆಯ ಮೇಲೆ ನಾನು ಡಬಲ್-ಕ್ಲಿಕ್ ಮಾಡುವೆನು. ಮತ್ತು, ವೇರಿಯೇಬಲ್ ನ ಹೆಸರನ್ನು "aSample.value" ಎಂದು ನಮೂದಿಸುವೆನು.
04:02 OK ಮೇಲೆ ಕ್ಲಿಕ್ ಮಾಡಿ.
04:06 ಇಲ್ಲಿಯವರೆಗೆ, 'aSample' ಅನ್ನು ಕ್ರಿಯೇಟ್ ಮಾಡಿಲ್ಲ. ಹೀಗಾಗಿ, ಇದು ವ್ಯಾಲ್ಯೂ ತನಗೆ ಗೊತ್ತಿಲ್ಲ ಎಂದು ಹೇಳುತ್ತಿದೆ.
04:12 ಒಮ್ಮೆ ಇದು ಲೈನ್ ಅನ್ನು ಎಕ್ಸೀಕ್ಯೂಟ್ ಮಾಡಿತೆಂದರೆ, ವೇರಿಯೇಬಲ್ ನಲ್ಲಿ ಏನಿದೆ ಎಂದು ನಮಗೆ ತಿಳಿಯುವುದು.
04:16 ಹೀಗೆಯೇ, ನೀವು ಎಕ್ಸ್ಪ್ರೆಶನ್ ಗಳನ್ನು ವಾಚ್ ಮಾಡಬಹುದು ಮತ್ತು ಮೌಲ್ಯವನ್ನು ಕಂಡುಹಿಡಿಯಬಹುದು.
04:21 ಇಲ್ಲಿ, ನಾನು b=a+10 ಗಾಗಿ ಇದನ್ನು ಪರೀಕ್ಷಿಸುತ್ತಿದ್ದೇನೆ.
04:25 ಒಂದುವೇಳೆ, ನನಗೆ 'a-4' ವ್ಯಾಲ್ಯೂ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾಗಿದ್ದರೆ?
04:29 ಅದಕ್ಕಾಗಿ, ನಾನು ಮೆನು ಬಾರ್ ನಲ್ಲಿಯ Debug ಎಂಬ ಮೆನುವಿಗೆ ಹೋಗಿ, Evaluate expression ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ.
04:37 ವರ್ಕ್-ಸ್ಪೇಸ್ ನಲ್ಲಿ, Evaluate Code ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
04:41 ಇಲ್ಲಿ, ನಾನು 'a-4' ಎಂಬ ಎಕ್ಸ್ಪ್ರೆಶನ್ ಅನ್ನು ನಮೂದಿಸುತ್ತೇನೆ.
04:45 ಇಲ್ಲಿ, Evaluate Expression ಬಟನ್ ಮೇಲೆ ಕ್ಲಿಕ್ ಮಾಡಿ. Variable ವಿಂಡೋದಲ್ಲಿ, a-4 ನ (a ಮೈನಸ್ 4) ವ್ಯಾಲ್ಯೂ 6 ಇದೆ ಎಂದು ಇದು ಹೇಳುತ್ತಿದೆ.
04:56 ಈಗ ನಾವು ಕೋಡ್ ನ ಒಂದು ಸಾಲನ್ನು ಎಕ್ಸೀಕ್ಯೂಟ್ ಮಾಡೋಣ.
05:00 ಇದನ್ನು ಮಾಡಲು, ಟೂಲ್ ಬಾರ್ ನಿಂದ Step-Over ಬಟನ್ ಅನ್ನು ಆರಿಸಿಕೊಳ್ಳಿ.
05:06 ಅದು “Hello World” ಅನ್ನು ಪ್ರಿಂಟ್ ಮಾಡಲು, ಕೋಡ್ ನ ಆ ಒಂದು ಸಾಲನ್ನು ಮಾತ್ರ ಎಕ್ಸೀಕ್ಯೂಟ್ ಮಾಡಬೇಕು.
05:12 ಔಟ್ಪುಟ್ ಅನ್ನು ನೋಡಲು, Output ವಿಂಡೋಗೆ ಹೋಗಿ ಮತ್ತು sampleDebug ಎಂಬ ಔಟ್ಪುಟ್ ವಿಂಡೋಅನ್ನು ಆರಿಸಿಕೊಳ್ಳಿ.
05:17 ಇದು "Hello World! 'a' is 10" ಎಂದು ಹೇಳುತ್ತಿದೆ.
05:22 ಈಗ SampleClass ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, ಪ್ರೊಗ್ರಾಂ ಈ ಲೈನ್ ನಲ್ಲಿ ನಿಂತಿದೆ.
05:28 ಈಗ ನನಗೆ, SampleClass ನ ಕನ್ಸ್ಟ್ರಕ್ಟರ್ ನ (constructor) ಒಳಗೆ ಹೋಗಬೇಕಾಗಿದೆ.
05:32 ಇದನ್ನು ಮಾಡಲು, ಟೂಲ್ ಬಾರ್ ನಿಂದ ನಾನು Step Into ಆಯ್ಕೆಯನ್ನು ಆರಿಸಿಕೊಳ್ಳಬಹುದು.
05:41 ಆಗ ನಾನು Step Over ಅನ್ನು ಆಯ್ಕೆಮಾಡಬಹುದು ಮತ್ತು ' ಕನ್ಸ್ಟ್ರಕ್ಟರ್ ಕಾಲ್' ನ (constructor call) ನ ಒಳಗಡೆ ಬಂದ ವ್ಯಾಲ್ಯೂ ಈಗ 10 ಗೆ ಸೆಟ್ ಆಗಿದೆ ಎಂದು ನೋಡಬಹುದು.
05:51 ವೇರಿಯೇಬಲ್ ನ ಮೇಲೆ ಸುತ್ತಾಡಿ ಸಹ ನೀವು ಇದನ್ನು ನೋಡಬಹುದು.
05:55 ನಾನು ಮತ್ತೆ Step Over ಮಾಡಿದಾಗ, this.variable ಸಹ 10 ಗೆ ಸೆಟ್ ಆಗಿರುವುದನ್ನು ನಾವು ನೋಡಬಹುದು.
06:03 ಈ ಫಂಕ್ಷನ್ ನಿಂದ ಹೊರಬರಲು, ನಾನು Continue, Step Over ಅಥವಾ Step Out ಅನ್ನು ಆರಿಸಿಕೊಳ್ಳಬಹುದು.
06:11 ಈ ಮೆಥಡ್ ನಿಂದ ಹೊರಬರಲು, ನಾನು Step-Out ಅನ್ನು ಆರಿಸಿಕೊಳ್ಳುತ್ತೇನೆ.
06:14 ಮತ್ತು, ಈಗ ನಾನು ಫಂಕ್ಷನ್ ಕಾಲ್ ಮಾಡಿರುವಲ್ಲಿಗೇ ಮರಳಿದ್ದೇನೆ.
06:19 ನಾನು ಮತ್ತೆ Step-Over ಎಂದು ಹೇಳಿದಾಗ, aSample.value ಈಗ 10 ಗೆ ಸೆಟ್ ಆಗಿರುವುದನ್ನು ನೀವು ನೋಡುವಿರಿ.
06:27 ನಮಗೆ ಇದನ್ನೇ ವಾಚ್ ಮಾಡಬೇಕಾಗಿತ್ತು.
06:30 Breakpoint ಗಳು ಮತ್ತು Step Over ಗಳನ್ನು ಹೊರತುಪಡಿಸಿ, ಪ್ರೊಗ್ರಾಂ ನ ಎಕ್ಸೀಕ್ಯೂಶನ್ ಅನ್ನು ಕರ್ಸರ್ ಇರುವ ಲೈನ್ ನಲ್ಲಿ ಸಹ ನೀವು ನಿಲ್ಲಿಸಬಹುದು.
06:38 ಉದಾಹರಣೆಗೆ, ಇಲ್ಲಿ ನಾನು ಫಂಕ್ಷನ್ ನ ಒಳಗೆ ಹೋಗುತ್ತೇನೆ. ಮತ್ತು d=b-5; ಎಂದು ಹೇಳುವ ಈ ಲೈನ್ ನ ಮೇಲೆ ಇರುವಂತೆ ಕರ್ಸರ್ ಅನ್ನು ಸೆಟ್ ಮಾಡುತ್ತೇನೆ.
06:49 ಈಗ ಟೂಲ್ ಬಾರ್ ನಿಂದ, Run To Cursor ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:54 ಪ್ರೊಗ್ರಾಂನ ಎಕ್ಸೀಕ್ಯೂಶನ್, ಫಂಕ್ಷನ್ ನ ಒಳಗೆ ಹೋಗುತ್ತದೆ ಮತ್ತು ಅದು ಕರ್ಸರ್ ಇರುವ ಲೈನ್ ನಲ್ಲಿ ನಿಲ್ಲುವುದನ್ನು ನೀವು ನೋಡುವಿರಿ.
07:05 ಇದು 'b' ಯ ವ್ಯಾಲ್ಯೂಅನ್ನು 20 ಎಂದು ಕಂಡುಹಿಡಿದಿರುವುದನ್ನು ನೀವು ನೋಡಬಹುದು.
07:10 ಮತ್ತು, Variable ವಿಂಡೋದಲ್ಲಿ, ಅದು 'b' ಯನ್ನು 20 ಗೆ ಸೆಟ್ ಮಾಡಿದೆ.
07:14 ಈಗ, ನಾನು ಮತ್ತೊಮ್ಮೆ Step Over ಅನ್ನು ಆಯ್ಕೆಮಾಡಬಹುದು ಮತ್ತು 'd' ಯ ವ್ಯಾಲ್ಯೂ ಸಹ ಇನಿಶಿಯಲೈಸ್ ಆಗಿ 15 ಆಗುವುದು.
07:23 ಈಗ ನಾನು ಹಿಂದಿರುಗಬಹುದು ಅಥವಾ ಪ್ರೊಗ್ರಾಂನ ಎಕ್ಸೀಕ್ಯೂಶನ್ ಅನ್ನು ಪೂರ್ಣಗೊಳಿಸಬಹುದು.
07:29 ನಾನು Step Out ಅನ್ನು ಆಯ್ದುಕೊಳ್ಳುತ್ತೇನೆ ಮತ್ತು ಫಂಕ್ಷನ್-ಕಾಲ್ ಗೆ ಹಿಂದಿರುಗುತ್ತೇನೆ.
07:36 ನೀವು getC() ಫಂಕ್ಷನ್ ನ ಮೇಲೆ ಸುತ್ತಾಡಿದಾಗ, ಈ ಫಂಕ್ಷನ್, ವ್ಯಾಲ್ಯೂಅನ್ನು 15 ಎಂದು ಹಿಂದಿರುಗಿಸಿರುವುದನ್ನು ನೋಡುವಿರಿ.
07:43 ವೇರಿಯೇಬಲ್ 'c' ಗೆ, ಆ ವ್ಯಾಲ್ಯೂ 15 ಅನ್ನು ಇನ್ನೂ ಅಸೈನ್ ಮಾಡಿಲ್ಲ.
07:47 ಹೀಗಾಗಿ, ನಾವು Step Over ಮಾಡಿ, ಆ ಸಾಲನ್ನು ಎಕ್ಸೀಕ್ಯೂಟ್ ಮಾಡಿದಾಗ, 'c', ವ್ಯಾಲ್ಯೂ 15 ಅನ್ನು ಪಡೆಯುವುದು.
07:55 ಈಗ Variable ವಿಂಡೋದಲ್ಲಿ, ಇದನ್ನು ನಾವು ಪರೀಕ್ಷಿಸಬಹುದು. ಅಥವಾ, ಇದರ ವ್ಯಾಲ್ಯೂ ಅನ್ನು ನೋಡಲು, ವೇರಿಯೇಬಲ್ ನ ಮೇಲೆ ಸುತ್ತಾಡಬಹುದು.
08:03 ಈಗ, ನಿಮಗೆ ಡೀಬಗ್ಗಿಂಗ್ ಸೆಶನ್ ಅನ್ನು ನಿಲ್ಲಿಸಬೇಕಾಗಿದ್ದರೆ, ನೀವು ಟೂಲ್ ಬಾರ್ ನಿಂದ Finish Debugger Session ಆಯ್ಕೆಯನ್ನು ಆರಿಸಿಕೊಳ್ಳಬಹುದು.
08:12 ಒಂದುವೇಳೆ ನಿಮಗೆ ಮುಂದಿನ 'ಬ್ರೆಕ್ ಪಾಯಿಂಟ್' ವರೆಗೆ ಎಕ್ಸೀಕ್ಯೂಶನ್ ಅನ್ನು ಮುಂದುವರೆಸಬೇಕಿದ್ದರೆ, ನೀವು Continue ಎಂಬ ಆಯ್ಕೆಯನ್ನು ಆರಿಸಿಕೊಳ್ಳಬಹುದು.
08:19 ನೀವು ಮುಗಿಸಿದ ನಂತರ, ಉಳಿದ ಪ್ರೊಗ್ರಾಂನ ಎಕ್ಸೀಕ್ಯೂಶನ್ ಅನ್ನು ಮುಂದುವರೆಸಲು, ನೀವು Continue ಆಯ್ಕೆಯನ್ನು ಆರಿಸಿಕೊಳ್ಳಬಹುದು.
08:25 ಇಲ್ಲಿ ನಾನು Continue ಅನ್ನು ಆರಿಸಿಕೊಳ್ಳುತ್ತೇನೆ.
08:27 Output ವಿಂಡೋದಲ್ಲಿ, ಇದು ನನಗೆ ಔಟ್ಪುಟ್ ಅನ್ನು ಹೀಗೆ ತೋರಿಸುತ್ತದೆ: 'b' is 20 and 'c' is 15 .
08:34 ಇದು netbeans ದಲ್ಲಿಯ ಡೀಬಗ್ ಮಾಡುವ ಆಯ್ಕೆಗಳ ಬಗ್ಗೆ ಇರುವ ಒಂದು ಅವಲೋಕನ ಆಗಿತ್ತು.
08:39 ನಿಮಗೆ ಇನ್ನೂ ಸುಧಾರಿತ ವೈಶಿಷ್ಟ್ಯಗಳ ಸೆಟ್ಟಿಂಗ್ ಗಳು ಬೇಕಾಗಿದ್ದರೆ,
08:42 ನೀವು Tools ಮೆನ್ಯು ಗೆ ಹೋಗಿ, Options ನ ಮೇಲೆ ಕ್ಲಿಕ್ ಮಾಡಬಹುದು. Miscellaneous ಎಂಬ ಆಯ್ಕೆಗೆ ಹೋಗಿ, Java Debugger ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:53 ಇಲ್ಲಿ, ಮಲ್ಟಿ-ಥ್ರೆಡೆಡ್ ಪ್ರೊಗ್ರಾಂ ಬ್ರೆಕ್-ಪಾಯಿಂಟ್ ಆಯ್ಕೆಗಳಿಗಾಗಿ ನೀವು ಸೆಟ್ಟಿಂಗ್ ಗಳನ್ನು ಬದಲಾಯಿಸಬಹುದು.
08:59 ಅಥವಾ, ನಿಮಗೆ ಸ್ಟೆಪ್-ಇನ್ ಮಾಡಬೇಕಾಗಿರುವ ಮೆಥಡ್ ಗಳನ್ನು ನಿರ್ಧರಿಸಲು, ಫಿಲ್ಟರ್ ಗಳನ್ನು (filters) ಪಡೆಯಬಹುದು.
09:07 ಈಗ ಒಂದು ಅಸೈನ್ಮೆಂಟ್..
09:09 ಅಸೈನ್ಮೆಂಟ್ ಗಾಗಿ, ನಿಮ್ಮಲ್ಲಿರುವ ಯಾವುದೇ ಒಂದು ಪ್ರೊಗ್ರಾಂ ಅನ್ನು ತೆಗೆದುಕೊಳ್ಳಿ. ಇದರಲ್ಲಿ ಈಗಾಗಲೇ ಎರರ್ ಗಳಿದ್ದರೆ ಇನ್ನೂ ಉತ್ತಮ.
09:16 ಇಲ್ಲದಿದ್ದರೆ, ಲಾಜಿಕ್ ಅಥವಾ ಅಲ್ಗೊರಿದಮ್ ನಲ್ಲಿ ಸ್ವಲ್ಪ ಎರರ್ ಅನ್ನು ಸೇರಿಸಿ.
09:20 ಕೋಡ್ ನಲ್ಲಿ 'ಬ್ರೆಕ್ ಪಾಯಿಂಟ್' ಗಳನ್ನು ಸೆಟ್ ಮಾಡಿ. ಸಾಮಾನ್ಯವಾಗಿ, ಫಂಕ್ಷನ್ ಅನ್ನು ಕಾಲ್ ಮಾಡುವಲ್ಲಿ ಎರರ್ ಇರಬಹುದು ಎಂದು ಊಹಿಸಿ ನೀವು ಬ್ರೆಕ್ ಅನ್ನು ಸೆಟ್ ಮಾಡಿರಬಹುದು.
09:29 ಫಂಕ್ಷನ್ ನ ಒಳಗೆ ಹೋಗಲು Step Into ಬಳಸಿ.
09:32 ಸಾಲುಗಳನ್ನು ಎಕ್ಸೀಕ್ಯೂಟ್ ಮಾಡಲು Step Over ಗಳನ್ನು ಬಳಸಿ. ಮತ್ತು Variable ವಿಂಡೋದಲ್ಲಿ, ವೇರಿಯೇಬಲ್ ನ ವ್ಯಾಲ್ಯೂಗಳನ್ನು ಗಮನಿಸುತ್ತಿರಿ.
09:41 ಎರರ್ ಅನ್ನು ಗುರುತಿಸಲು ಮತ್ತು ಸರಿಪಡಿಸಲು ನಿಮಗೆ ಸಹಾಯವಾಗುವಂತೆ, ಕೆಲವು ವಾಚ್ ಗಳನ್ನು ಸೇರಿಸಿ.
09:45 ಮೆಥಡ್ ನಿಂದ Step Out ಮಾಡಿ.
09:48 ನೀವು ಮುಂದಿನ 'ಬ್ರೆಕ್-ಪಾಯಿಂಟ್' ಅನ್ನು ತಲುಪುವವರೆಗೆ ಮುಂದುವರೆಸಿ.
09:51 ಕೊನೆಯದಾಗಿ, debugger ಸೆಶನ್ ಅನ್ನು ಮುಗಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಅನ್ನು ರನ್ ಮಾಡಿ.
09:57 ಈ ಟ್ಯುಟೋರಿಯಲ್ ನಲ್ಲಿ, ನಾವು Netbeans Debugger ಬಗ್ಗೆ ತಿಳಿದುಕೊಂಡಿದ್ದೇವೆ.
10:02 'ಬ್ರೆಕ್-ಪಾಯಿಂಟ್' ಗಳನ್ನು ಮತ್ತು ವಾಚ್ ಗಳನ್ನು ಹೇಗೆ ಸೆಟ್ ಮಾಡುವುದೆಂದು ನೋಡಿದ್ದೇವೆ.
10:06 ಕೋಡ್ ರನ್ ಆಗುತ್ತಿರುವಾಗ, ವ್ಯಾಲ್ಯೂಅನ್ನು ಕಂಡುಹಿಡಿಯಬೇಕಾಗಿರುವ ಎಕ್ಸ್ಪ್ರೆಶನ್ ಗಳನ್ನು (expressions) ಸೇರಿಸುವುದು,
10:11 Step-Into, Step-Over, Step-Out ಮತ್ತು Run-to-Cursor ಆಯ್ಕೆಗಳೊಂದಿಗೆ ಪ್ರೊಗ್ರಾಂನ ಎಕ್ಸೀಕ್ಯೂಶನ್ ನ ಗತಿಯನ್ನು ಕಂಡುಹಿಡಿಯಲು,
10:19 ಅಲ್ಲದೆ, ಮುಂದುವರಿದ ಡೀಬಗ್ಗಿಂಗ್ ಗಾಗಿ, ಡೀಬಗ್ಗರ್ ಅನ್ನು ಹೇಗೆ ಕಾನ್ಫಿಗರ್ ಮಾಡುವುದು ಎಂಬುದನ್ನು ನೋಡಿದೆವು.
10:24 ಈ ಟ್ಯುಟೋರಿಯಲ್, ಡಿಬಗ್ ಮಾಡುವ ಅಥವಾ ಪರೀಕ್ಷೆ ಮಾಡುವ ಕೆಲಸದಲ್ಲಿ ನಿಮ್ಮ ಸಮಯವನ್ನು ಉಳಿಸುತ್ತದೆ ಎಂದು ಆಶಿಸುತ್ತೇನೆ.
10:30 ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
10:33 ಇದು Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
10:36 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು.
10:41 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:46 ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
10:49 ಹೆಚ್ಚಿನ ಮಾಹಿತಿಗಾಗಿ,

contact@spoken-tutorial.org ಅನ್ನು ಸಂರ್ಪಕಿಸಿ.

10:55 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
10:59 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:05 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

11:14 ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ.
11:18 ಧನ್ಯವಾದಗಳು.

Contributors and Content Editors

Sandhya.np14