Difference between revisions of "LibreOffice-Suite-Math/C3/Set-Operations-Factorials-Cross-reference-equations/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 272: | Line 272: | ||
|- | |- | ||
|09:32 | |09:32 | ||
− | | ಈ ಸ್ಕ್ರಿಪ್ಟ್ ನ ಅನುವಾದಕಿ | + | | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ------. |
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Revision as of 21:46, 2 June 2018
Time | Narration |
00:00 | LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:07 | 'ಸೆಟ್ ಆಪರೇಷನ್' ಗಳನ್ನು ಬರೆಯಲು, |
00:10 | ಫ್ಯಾಕ್ಟೋರಿಯಲ್ ಗಳನ್ನು ಬರೆಯಲು, |
00:12 | ಮತ್ತು ಸಂಖ್ಯೆಗಳನ್ನು ಬಳಸಿ, ಸಮೀಕರಣಗಳನ್ನು ' ಕ್ರಾಸ್ ರೆಫರೆನ್ಸ್' ಮಾಡಲು ಕಲಿಯುವೆವು. |
00:16 | ಇದಕ್ಕಾಗಿ, ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Writer ಡಾಕ್ಯುಮೆಂಟ್ ನ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ. |
00:29 | ಇಲ್ಲಿ, ಡಾಕ್ಯುಮೆಂಟ್ ನ ಕೊನೆಗೆ ಹೋಗಿ ಮತ್ತು ಹೊಸ ಪೇಜ್ ಗೆ ಹೋಗಲು Control, Enter ಅನ್ನು ಒತ್ತೋಣ. |
00:37 | ಮತ್ತು “Set Operations: ” ಎಂದು ಟೈಪ್ ಮಾಡಿ, Enter ಅನ್ನು ಎರಡು ಬಾರಿ ಒತ್ತಿ. |
00:42 | ಈಗ ನಾವು Math ಅನ್ನು ಕಾಲ್ ಮಾಡೋಣ. |
00:45 | ಮೊದಲು, ನಾವು ಫಾಂಟ್ ಸೈಜ್ ಅನ್ನು 18 point ಗೆ ಹೆಚ್ಚಿಸೋಣ. |
00:51 | Alignment ಅನ್ನು Left ಎಂದು ಬದಲಾಯಿಸೋಣ. |
00:54 | ಈಗ 'ಸೆಟ್ ಆಪರೇಶನ್' ಗಳನ್ನು (Set operation) ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ. |
01:00 | ಸೆಟ್ ಗಳನ್ನು ಪ್ರತಿನಿಧಿಸಲು, Math, ಪ್ರತ್ಯೇಕ ಮಾರ್ಕಪ್ ಅನ್ನು ಹೊಂದಿದೆ. ಈ ಸೆಟ್ ಗಳು ವಿಭಿನ್ನ ಎಲಿಮೆಂಟ್ ಗಳ ಗುಂಪುಗಳಾಗಿವೆ. |
01:07 | ಸ್ಕ್ರೀನ್ ಮೇಲೆ ತೋರಿಸಿದಂತೆ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಬರೆಯೋಣ: |
01:14 | 5 ಎಲಿಮೆಂಟ್ ಗಳನ್ನು ಹೊಂದಿರುವ Set A, |
01:18 | ಸೆಟ್ B, ಸೆಟ್ C |
01:21 | ಮತ್ತು ಸೆಟ್ D ಗಳು ಸಹ ಎಲಿಮೆಂಟ್ ಗಳನ್ನು ಹೊಂದಿವೆ. |
01:26 | ಗಮನಿಸಿ: ಸೆಟ್ ಗಳಿಗಾಗಿ ಬ್ರ್ಯಾಕೆಟ್ ಗಳನ್ನು ಹಾಕಲು, ನಾವು lbrace ಮತ್ತು rbrace ಎಂಬ ಮಾರ್ಕಪ್ ಗಳನ್ನು ಬಳಸಬಹುದು. |
01:35 | ನಾವು ಈಗ, ಸೆಟ್ ಆಪರೇಷನ್ ಗಳಾದ 'ಯೂನಿಯನ್' (union) ಮತ್ತು 'ಇಂಟರ್ಸೆಕ್ಷನ್' (intersection) ಗಳನ್ನು ಬರೆಯಬಹುದು. |
01:42 | ಮೊದಲು ಒಂದು 'ಯೂನಿಯನ್ ಆಪರೇಷನ್' ಅನ್ನು ಬರೆಯೋಣ. |
01:46 | B union C ಗಾಗಿ ಮಾರ್ಕಪ್, ನಾವು ಅದನ್ನು ಓದಿದ ಹಾಗೆಯೇ ಇರುತ್ತದೆ. |
01:51 | ಮತ್ತು, ಫಲಿತ ಸೆಟ್ 1, 2, 6, 4 ಮತ್ತು 5 ಗಳಿಂದ ಆಗಿದೆ. ಇದು ಎರಡೂ ಸೆಟ್ ಗಳಲ್ಲಿರುವ ವಿಭಿನ್ನ ಎಲಿಮೆಂಟ್ ಗಳನ್ನು ಒಳಗೊಂಡಿದೆ. |
02:04 | ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ, ನಾವು ಓದಿದ ಹಾಗೆಯೇ ಇರುತ್ತದೆ. |
02:10 | ಇಂಟರ್ಸೆಕ್ಷನ್, ಎರಡೂ ಸೆಟ್ ಗಳಲ್ಲಿ ಉಪಸ್ಥಿತವಿರುವ ಎಲಿಮೆಂಟ್ ಗಳನ್ನು ಮಾತ್ರ ಒಳಗೊಂಡಿರುತ್ತದೆ. |
02:16 | ಹಾಗಾಗಿ, 'B ಇಂಟರ್ಸೆಕ್ಷನ್ D' ದ ಫಲಿತಾಂಶವು 6 ಎಂದು ಆಗಿರುತ್ತದೆ. |
02:23 | ಮತ್ತು, ಸೆಟ್ 'C' ಯಲ್ಲಿರುವ ಪ್ರತಿಯೊಂದು ಎಲಿಮೆಂಟ್, ' ಸೆಟ್ A' ನಲ್ಲಿ ಇರುವುದರಿಂದ, ' ಸೆಟ್ C' ಯು, ' ಸೆಟ್ A' ದ ' ಸಬ್-ಸೆಟ್ ' ಆಗಿದೆ ಎಂದು ಸಹ ನಾವು ಬರೆಯಬಹುದು. |
02:35 | ಇದಕ್ಕಾಗಿ ಮಾರ್ಕಪ್, C subset A ಎಂದಾಗಿದೆ. |
02:42 | ನೀವು Elements ವಿಂಡೋವನ್ನು ಬಳಸಿ, ಅಲ್ಲಿರುವ ಮೂರನೇ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಹಲವು ಸೆಟ್ ಆಪರೇಷನ್ ಗಳನ್ನು ಬರೆಯಲು ಕಲಿಯಬಹುದು. |
02:51 | ಕ್ರಮವಾಗಿ View > Elements > Set Operations ಗೆ ಹೋಗಿ. |
02:59 | ಈಗ ನಾವು ಮಾಡಿರುವುದನ್ನು ಸೇವ್ ಮಾಡೋಣ. |
03:02 | ಕ್ರಮವಾಗಿ File > Save ಗಳ ಮೇಲೆ ಕ್ಲಿಕ್ ಮಾಡಿ. |
03:06 | ಈಗ ನಾವು 'ಫ್ಯಾಕ್ಟೋರಿಯಲ್ ಫಂಕ್ಷನ್' ಗಳನ್ನು ಬರೆಯೋಣ. |
03:11 | ಶೀಘ್ರದಲ್ಲಿಯೆ ನಾವು ಬರೆಯುವ ಮೂರು ಸೂತ್ರಗಳಿಗೆ, 1 ರಿಂದ 3 ರವರೆಗಿನ ಸಂಖ್ಯೆ ಗಳಿಂದ ಹೆಸರಿಸೋಣ. |
03:19 | ಇದು, ರೈಟರ್ ಡಾಕ್ಯುಮೆಂಟ್ ನಲ್ಲಿ ಅವುಗಳನ್ನು ಎಲ್ಲಿ ಬೇಕಾದರೂ, 'ಕ್ರಾಸ್ ರೆಫರೆನ್ಸ್' ಮಾಡಲು ಸಹಾಯ ಮಾಡುತ್ತದೆ. |
03:25 | 'ರೈಟರ್ ಗ್ರೇ ಬಾಕ್ಸ್' (Writer gray box) ನ ಹೊರಭಾಗದಲ್ಲಿ, ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಹೊಸ ಪೇಜ್ ಗೆ ಹೋಗೋಣ. |
03:33 | Control, Enter ಅನ್ನು ಒತ್ತಿ. |
03:36 | “Factorial Function: ” ಎಂದು ಟೈಪ್ ಮಾಡಿ ಮತ್ತು Enter ಅನ್ನು ಎರಡು ಬಾರಿ ಒತ್ತಿ. |
03:42 | Math ಅನ್ನು ಹೇಗೆ ಕಾಲ್ ಮಾಡುವುದು ಎಂದು ನಮಗೆ ತಿಳಿದಿದೆ. |
03:45 | ಆದರೆ Math ಆಬ್ಜೆಕ್ಟ್ ಅನ್ನು, Writer ನಲ್ಲಿ ತರಲು ಇನ್ನೊಂದು ವಿಧಾನವಿದೆ. |
03:51 | ಇದಕ್ಕಾಗಿ, 'ರೈಟರ್ ಡಾಕ್ಯುಮೆಂಟ್' ನಲ್ಲಿ ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ. |
03:59 | ಈಗ ನಾವು, E is equal to m c squared ಎಂದು ತೋರಿಸುತ್ತಿರುವ ಒಂದು ಹೊಸ Math ಆಬ್ಜೆಕ್ಟ್ ಅನ್ನು ನೋಡುತ್ತಿದ್ದೇವೆ. |
04:07 | ಮತ್ತು ಇದರ ಜೊತೆ, ಬಲಭಾಗದಲ್ಲಿ ಕಂಸದಲ್ಲಿ ಸಂಖ್ಯೆ ಒಂದು (1) ಇದೆ. |
04:14 | ಅಂದರೆ, ಸಂಖ್ಯೆ ಒಂದರ ಮೂಲಕ ಈ ಸೂತ್ರ ವನ್ನು, ಈ ಡಾಕ್ಯುಮೆಂಟ್ ನಲ್ಲಿ, ಎಲ್ಲಿ ಬೇಕಾದರೂ 'ಕ್ರಾಸ್ ರೆಫರೆನ್ಸ್' ಮಾಡಬಹುದು. |
04:22 | ಇದನ್ನು ಮಾಡುವ ಬಗ್ಗೆವಿವರಗಳನ್ನು ನಂತರ ನೋಡುವೆವು. |
04:27 | ಈಗ Math ಆಬ್ಜೆಕ್ಟ್ ನ ಮೇಲೆ ಡಬಲ್ ಕ್ಲಿಕ್ ಮಾಡಿ |
04:32 | ಮತ್ತು ಹೀಗೆ ಫಾರ್ಮ್ಯಾಟ್ ಮಾಡಿ. Font size 18 ಮತ್ತು 'Left' Alignment. |
04:40 | ಸರಿ. ಈಗ ನಾವು 'ಫ್ಯಾಕ್ಟೋರಿಯಲ್' (Factorial) ಗೆ ಒಂದು ಉದಾಹರಣೆಯನ್ನು ಬರೆಯೋಣ. |
04:44 | ‘fact’ ಎಂಬ 'ಮಾರ್ಕಪ್', ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ. |
04:50 | ಇಲ್ಲಿ ಈಗಾಗಲೇ ಇರುವ ಸೂತ್ರದ ಬದಲಾಗಿ, |
04:55 | 5 Factorial = 5 into 4 into 3 into 2 into 1 = 120 ಎಂದು ಬರೆಯೋಣ. |
05:07 | ಇಲ್ಲಿ ಮಾರ್ಕಪ್ ಅನ್ನು ಗಮನಿಸಿ. |
05:09 | ಇಲ್ಲಿ ಹೊಸ Math ಆಬ್ಜೆಕ್ಟ್ ನಲ್ಲಿ, ನಮ್ಮ ಮುಂದಿನ ಸೂತ್ರವನ್ನು ಬರೆಯೋಣ. |
05:14 | ಇದಕ್ಕಾಗಿ, ಮೊದಲು ಈ 'ರೈಟರ್ ಗ್ರೇ ಬಾಕ್ಸ್' ನ ಹೊರಗೆ ನಿಧಾನವಾಗಿ ಮೂರು ಬಾರಿ ಕ್ಲಿಕ್ ಮಾಡೋಣ. |
05:23 | ಈ ಪೇಜ್ ನ ಕೊನೆಗೆ ಹೋಗಲು, ಡೌನ್ – ಆರೋ ಕೀಯನ್ನು ಎರಡು-ಮೂರು ಬಾರಿ ಒತ್ತಿ. |
05:30 | ಮತ್ತು, ಎರಡನೇ Math ಆಬ್ಜೆಕ್ಟ್ ಅನ್ನು ತರಲು, ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ. |
05:37 | ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಮಾಡುವೆವು. |
05:46 | ಮತ್ತು, ಈಗ ಇಲ್ಲಿರುವ ಸೂತ್ರವನ್ನು ಬದಲಿಸಿ, ಪ್ಯಾಕ್ಟೋರಿಯಲ್ ನ ವ್ಯಾಖ್ಯಾನವನ್ನು ಹೀಗೆ ಬರೆಯುವೆವು: |
05:52 | n factorial is equal to prod from k = 1 to n of k. |
06:01 | ಗಮನಿಸಿ: ‘prod’ ಎಂಬ ಮಾರ್ಕಪ್, ಗುಣಲಬ್ಧವನ್ನು ಹಾಗೂ sigma, ಮೊತ್ತವನ್ನು ಸೂಚಿಸುತ್ತವೆ. |
06:10 | ಈಗ, ಮೊದಲ ಎರಡು ಮ್ಯಾಥ್ ಒಬ್ಜೆಕ್ಟ್ ಗಳಂತೆಯೆ ಮೂರನೆಯದನ್ನು ಸಹ ಪರಿಚಯಿಸೋಣ. |
06:20 | ಮತ್ತು ಸ್ಕ್ರೀನ್ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ನ ವ್ಯಾಖ್ಯಾನವನ್ನು (definition) ಎರಡು ಕಂಡಿಷನಲ್ ಫಾರ್ಮುಲ ಗಳಾಗಿ ಪುನಃ ಬರೆಯಿರಿ. |
06:30 | ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ. ಇದು ಎರಡು ಎಲಿಮೆಂಟ್ ಗಳ ಲಂಬವಾದ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ ಹಾಗೂ ಸರಿಯಾಗಿ ಹೊಂದಿಸಲು (ಅಲೈನ್) ಸಹಾಯಮಾಡುತ್ತದೆ. |
06:42 | ಈಗ ನಾವು ಈ ಸೂತ್ರಗಳನ್ನು ಹೇಗೆ ಕ್ರಾಸ್ ರೆಫರೆನ್ಸ್ ಮಾಡಲು ಸಾಧ್ಯವಿದೆ ಎಂದು ನೋಡೋಣ. |
06:47 | ಇದಕ್ಕಾಗಿ, ಒಂದು ಹೊಸ ಪೇಜ್ ಗೆ ಹೋಗಿ |
06:51 | ಹೀಗೆ ಟೈಪ್ ಮಾಡೋಣ: "An example of factorial is provided here:" |
06:59 | ಈಗ Insert ಮೆನ್ಯು ವಿನ ಮೇಲೆ, ನಂತರ Cross reference ನ ಮೇಲೆ ಕ್ಲಿಕ್ ಮಾಡಿ. |
07:06 | ಹೊಸ ಪಾಪ್-ಅಪ್ ನಲ್ಲಿ, Type ಲಿಸ್ಟ್ ನಲ್ಲಿ, ನಾವು Text ಅನ್ನು ಆಯ್ಕೆ ಮಾಡೋಣ. |
07:12 | ನಂತರ Selection ಲಿಸ್ಟ್ ನಲ್ಲಿ, ಮೊದಲನೆಯ ಐಟಂ ಅನ್ನು ಆಯ್ಕೆ ಮಾಡಿ. ಇದು, ನಾವು ಬರೆದ ಮೊದಲನೆಯ ಫ್ಯಾಕ್ಟೋರಿಯಲ್ ನ ಸೂತ್ರವನ್ನು ಸೂಚಿಸುತ್ತದೆ. |
07:21 | ಈಗ ‘Insert reference to’ ಲಿಸ್ಟ್ ನಲ್ಲಿ Reference ಅನ್ನು ಆಯ್ಕೆ ಮಾಡಿ. Insert ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ. |
07:31 | ಕಂಸದಲ್ಲಿರುವ ಸಂಖ್ಯೆ ಒಂದು (1), ನಮ್ಮ ಟೆಕ್ಸ್ಟ್ ನ ಮುಂದೆ ಕಾಣಿಸಿಕೊಂಡಿದೆ. ನಾವು ಇದನ್ನು ಮಾಡಿದ್ದೇವೆ. |
07:39 | ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ, ಇದನ್ನು ನಾವು ಪರೀಕ್ಷಿಸೋಣ. |
07:43 | ಕರ್ಸರ್, ನಾವು ಮೊದಲನೆಯ ಸೂತ್ರವನ್ನು ಬರೆದಿರುವಲ್ಲಿಗೆ ಹೋಗಿರುವುದನ್ನು ಗಮನಿಸಿ. |
07:51 | ಹೀಗೆ, 'ರೈಟರ್ ಡಾಕ್ಯೂಮೆಂಟ್' ನಲ್ಲಿ, ಎಲ್ಲಿ ಬೇಕಾದರೂ ನಾವು ಮ್ಯಾಥ್ ಸೂತ್ರಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು. |
07:58 | ಈಗ ನಾವು ಮಾಡಿದ ಕೆಲಸವನ್ನು ಸೇವ್ ಮಾಡೋಣ. |
08:01 | ಇಲ್ಲಿ Math ಗಾಗಿ, ಕೆಲವು ರೆಫರೆನ್ಸ್ ಲಿಂಕ್ ಗಳಿವೆ: |
08:06 | 'libreoffice.org documentation' ಲಿಂಕ್ ನಲ್ಲಿರುವ Guide ಅನ್ನು ಡೌನ್ಲೋಡ್ ಮಾಡಿ. |
08:14 | Math ನ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಸಹ ನೋಡಬಹುದು. |
08:20 | ಕೊನೆಯದಾಗಿ, ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ 'ರೈಟರ್ ಡಾಕ್ಯೂಮೆಂಟ್' (Writer document) ಅನ್ನು ಬಳಸಿ. |
08:25 | ಈ ಟ್ಯುಟೋರಿಯಲ್ ನಲ್ಲಿ ಕೊಟ್ಟ ಸೆಟ್ ನ ಉದಾಹರಣೆಯನ್ನು ಬಳಸಿ, A union ( B union C) is equal to (A union B) union C ಆಗಿದೆಯೇ ಎಂದು ಪರೀಕ್ಷಿಸಿ. |
08:40 | A minus B ದ ಫಲಿತಾಂಶವನ್ನು ಬರೆಯಿರಿ. |
08:43 | ಮತ್ತು, 'ರೈಟರ್ ಡಾಕ್ಯೂಮೆಂಟ್' ನಲ್ಲಿಯ ಎರಡನೆಯ ಮತ್ತು ಮೂರನೆಯ, ಫ್ಯಾಕ್ಟೋರಿಯಲ್ ನ ಸೂತ್ರಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ. |
08:51 | ಇಲ್ಲಿಗೆ ನಾವು LibreOffice Math ನ Sets, Factorials and Cross Referencing ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:59 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: |
09:03 | ಸೆಟ್ ಆಪರೇಷನ್ ಗಳನ್ನು ಬರೆಯಲು, |
09:05 | ಫ್ಯಾಕ್ಟೋರಿಯಲ್ ಗಳನ್ನು ಬರೆಯಲು, |
09:08 | ಮತ್ತು ಸಂಖ್ಯೆಗಳನ್ನು ಕೊಟ್ಟು, ಸಮೀಕರಣಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಲು ಕಲಿತಿದ್ದೇವೆ. |
09:11 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:23 | ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ. |
09:27 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ. |
09:32 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ------.
ಧನ್ಯವಾದಗಳು. |