Difference between revisions of "Linux-Old/C2/Desktop-Customization-14.04/Kannada"
From Script | Spoken-Tutorial
Nancyvarkey (Talk | contribs) m (Nancyvarkey moved page Linux/C2/Desktop-Customization/Kannada to Linux-Old/C2/Desktop-Customization-14.04/Kannada without leaving a redirect) |
|
(No difference)
|
Latest revision as of 12:21, 6 September 2018
Time | Narration |
00:01 | ಎಲ್ಲರಿಗೂ ನಮಸ್ಕಾರ. Desktop Customization in Ubuntu Linux OS ಎನ್ನುವ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
00:27 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux OS 14.04 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:34 | ನಾವು Launcher ನೊಂದಿಗೆ ಆರಂಭಿಸೋಣ. |
00:36 | Launcher , Ubuntu Linux desktop ನಲ್ಲಿ ಡೀಫಾಲ್ಟ್ ಆಗಿ ಎಡಭಾಗದಲ್ಲಿರುವ ಪ್ಯಾನೆಲ್ ಆಗಿದೆ. ಇದು ಕೆಲವು ಡೀಫಾಲ್ಟ್ ಅಪ್ಲಿಕೇಶನ್ಗಳನ್ನು ಹೊಂದಿದೆ. |
00:44 | Launcher , ಮೇಲಿಂದ ಮೇಲೆ ಬಳಸಿದ ಅಪ್ಲಿಕೇಶನ್ಗಳನ್ನು ಆಕ್ಸೆಸ್ ಮಾಡುವುದನ್ನು ಸುಲಭಗೊಳಿಸುತ್ತದೆ. |
00:49 | ಆದ್ದರಿಂದ, ನಾವು Launcher ನಲ್ಲಿ ಅದರ desktop shortcut (ಡೆಸ್ಕ್ಟಾಪ್ ಶಾರ್ಟ್ಕಟ್) ಅನ್ನು ಕ್ಲಿಕ್ ಮಾಡುವುದರ ಮೂಲಕ ಪ್ರೋಗ್ರಾಂ ಅನ್ನು ಪ್ರಾರಂಭಿಸಬಹುದು. |
00:56 | ಡೀಫಾಲ್ಟ್ ಆಗಿ, Launcher ಕೆಲವು ಅಪ್ಲಿಕೇಶನ್ಗಳನ್ನು ಹೊಂದಿದೆ. |
01:00 | ನಮ್ಮ ಅವಶ್ಯಕತೆಗಳಿಗೆ ತಕ್ಕಂತೆ Launcher ಅನ್ನು ಕಸ್ಟಮೈಜ್ ಮಾಡಲು ನಾವು ಕಲಿಯೋಣ. |
01:06 | ನನ್ನ ಕೆಲಸಕ್ಕೆ, ನನಗೆ Terminal , LibreOffice Writer , Gedit ಇತ್ಯಾದಿ ಅಪ್ಪ್ಲಿಕೇಶನ್ ಗಳ ಅಗತ್ಯವಿದೆ. |
01:15 | Launcher ನಲ್ಲಿ ನಾವು ಈ ಅಪ್ಲಿಕೇಶನ್ಗಳನ್ನು ಸೇರಿಸೋಣ. |
01:19 | ಇದನ್ನು ಮಾಡುವ ಮೊದಲು, ನನಗೆ ಬೇಡವಾದ ಕೆಲವು ಅಪ್ಲಿಕೇಶನ್ಗಳನ್ನು ನಾನು ತೆಗೆದುಹಾಕುತ್ತೇನೆ. |
01:25 | ಒಂದು ವೇಳೆ, ನನಗೆ VLC ಅಪ್ಲಿಕೇಶನ್ ಅನ್ನು ತೆಗೆದುಹಾಕಬೇಕಾಗಿದೆ ಎಂದುಕೊಳ್ಳಿ. |
01:30 | ಆದ್ದರಿಂದ, VLC ಅಪ್ಲಿಕೇಶನ್ ಐಕಾನ್ ನ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು Unlock from Launcher ಅನ್ನು ಆಯ್ಕೆಮಾಡಿ. |
01:37 | Launcher ನಿಂದ VLC ಅಪ್ಲಿಕೇಶನ್ ಐಕಾನ್ ಅನ್ನು ತೆಗೆದುಹಾಕಿರುವುದನ್ನು ನೀವು ಇಲ್ಲಿ ನೋಡಬಹುದು. |
01:43 | ಅದೇ ರೀತಿ, ನಾವು ಆಗಾಗ ಬಳಸದೆ ಇರುವ ಎಲ್ಲ ಶಾರ್ಟ್ಕಟ್ಗಳನ್ನು ತೆಗೆದುಹಾಕಬಹುದು.. |
01:49 | ನೀವು ಇಲ್ಲಿ ನೋಡುವಂತೆ, ನನ್ನ ಡೆಸ್ಕ್ಟಾಪ್ ನ Launcher ನಿಂದ ಕೆಲವು ಅಪ್ಲಿಕೇಶನ್ಗಳನ್ನು ತೆಗೆದುಹಾಕಿದ್ದೇನೆ. |
01:55 | ಈಗ, ನಾನು Launcher ಗೆ Terminal ಶಾರ್ಟ್ಕಟ್ ಅನ್ನು ಸೇರಿಸುತ್ತೇನೆ. |
02:00 | Dash Home ಅನ್ನು ಕ್ಲಿಕ್ ಮಾಡಿ. |
02:02 | 'Search Bar ನಲ್ಲಿ, Terminal ಎಂದು ಟೈಪ್ ಮಾಡಿ. |
02:05 | Terminal ಅನ್ನು ತೆರೆಯಲು, Terminal ಐಕಾನ್ ಅನ್ನು ಕ್ಲಿಕ್ ಮಾಡಿ. |
02:09 | Launcher ನಲ್ಲಿ ನೀವು Terminal ಐಕಾನ್ ಅನ್ನು ನೋಡಬಹುದು. |
02:13 | Launcher ನಲ್ಲಿ Terminal ಐಕಾನ್ ಅನ್ನು ಇರಿಸಲು, ಮೊದಲು ಅದರ ಮೇಲೆ ರೈಟ್-ಕ್ಲಿಕ್ ಮಾಡಿ. |
02:18 | ನಂತರ Lock to Launcher ಅನ್ನು ಕ್ಲಿಕ್ ಮಾಡಿ. |
02:21 | Launcher ನಲ್ಲಿ ಅಪ್ಲಿಕೇಶನ್ ಶಾರ್ಟ್ಕಟ್ಗಳನ್ನು ಇರಿಸುವ ಇನ್ನೊಂದು ವಿಧಾನ, ಡ್ರ್ಯಾಗ್-ಅಂಡ್-ಡ್ರಾಪ್ ಮಾಡುವುದು. ನಾನು ಈಗ ಇದನ್ನು ಮಾಡಿತೋರಿಸುತ್ತೇನೆ. |
02:30 | '’'Dash Home ಅನ್ನು ತೆರೆಯಿರಿ ಮತ್ತು search bar ನಲ್ಲಿ, libreOffice ಎಂದು ಟೈಪ್ ಮಾಡಿ. |
02:37 | libreOffice ಐಕಾನ್ ಅನ್ನು Launcher ನ ಒಳಗೆ ಎಳೆಯಿರಿ. |
02:42 | ನಾವು ಇದನ್ನು ಮಾಡುತ್ತಿದ್ದಂತೆ , Drop to Add application ಎಂಬ ಹೆಲ್ಪ್ ಟೆಕ್ಸ್ಟ್ ಕಾಣಿಸಿಕೊಳ್ಳಬಹುದು. ಯಾವುದೇ ಹೆಲ್ಪ್ ಟೆಕ್ಸ್ಟ್ ಕಾಣಿಸದಿದ್ದರೆ ಚಿಂತಿಸಬೇಡಿ. |
02:51 | ಈಗ, Launcher ನಲ್ಲಿ LibreOffice ಐಕಾನ್ ಅನ್ನು ಡ್ರಾಪ್ ಮಾಡಿ . |
02:55 | ಶಾರ್ಟ್ಕಟ್ ಅನ್ನು ಈಗ Launcher ಗೆ ಸೇರಿಸಿರುವುದನ್ನು ನೀವು ನೋಡಬಹುದು. |
03:00 | ಈ ರೀತಿಯಾಗಿ ನಾವು Launcher ನಲ್ಲಿ ಶಾರ್ಟ್ಕಟ್ಗಳನ್ನು ಸೇರಿಸಬಹುದು. |
03:04 | Ubuntu Linux OS ನಲ್ಲಿರುವ ಮುಂದಿನ ಪ್ರಮುಖ ವೈಶಿಷ್ಟ್ಯವೆಂದರೆ multiple desktop ಅಥವಾ Workspace Switcher. |
03:12 | ಕೆಲವೊಮ್ಮೆ ನಾವು ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ಗಳಲ್ಲಿ ಕೆಲಸ ಮಾಡುತ್ತಿರಬಹುದು . |
03:17 | ಮತ್ತು ಒಂದು ಅಪ್ಲಿಕೇಶನ್ನಿಂದ ಇನ್ನೊಂದಕ್ಕೆ ಬದಲಾಯಿಸಲು ನಮಗೆ ಕಷ್ಟವಾಗಬಹುದು. |
03:22 | ಇದನ್ನು ಹೆಚ್ಚು ಅನುಕೂಲಕರಗೊಳಿಸಲು, ನಾವು Workspace Switcher ಅನ್ನು ಬಳಸಬಹುದು. |
03:27 | Launcher ಗೆ ಹಿಂತಿರುಗೋಣ. |
03:30 | Launcher ನಲ್ಲಿ, Workspace Switcher ಐಕಾನ್ ಅನ್ನು ಹುಡುಕಿ . ಅದರ ಮೇಲೆ ಕ್ಲಿಕ್ ಮಾಡಿ. |
03:36 | ಇದು 4 Desktop ಗಳೊಂದಿಗೆ 4 ಕ್ವಾಡ್ರಂಟ್ಗಳನ್ನು ತೋರಿಸುತ್ತದೆ. |
03:40 | ಡೀಫಾಲ್ಟ್ ಆಗಿ , ಟಾಪ್-ಲೆಫ್ಟ್ ಡೆಸ್ಕ್ಟಾಪ್ ಅನ್ನು ಆಯ್ಕೆಮಾಡಲಾಗಿದೆ. |
03:44 | ಇದು, ನಾವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡೆಸ್ಕ್ಟಾಪ್ ಆಗಿದೆ . |
03:48 | ಈಗ, ಅದರ ಮೇಲೆ ಕ್ಲಿಕ್ ಮಾಡಿ , ಎರಡನೇ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡೋಣ. |
03:53 | Launcher ನಲ್ಲಿನ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ , ನಾನು ಇಲ್ಲಿ Terminal ಅನ್ನು ತೆರೆಯುತ್ತೇನೆ. |
03:59 | ಈಗ, Workspace Switcher ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ. |
04:02 | ಎರಡನೆಯ Workspace Switcher ನಲ್ಲಿ 'Terminal ಅನ್ನು ಮತ್ತು ಮೊದಲನೆಯದರಲ್ಲಿ ನಮ್ಮ ಡೆಸ್ಕ್ಟಾಪ್ ಅನ್ನು ನೀವು ನೋಡಬಹುದು. |
04:09 | ಈ ರೀತಿಯಲ್ಲಿ, ನೀವು ಒಂದಕ್ಕಿಂತ ಹೆಚ್ಚು ಡೆಸ್ಕ್ಟಾಪ್ ಗಳಲ್ಲಿ ಕೆಲಸ ಮಾಡಬಹುದು. |
04:12 | ನಾವು ಮೊದಲನೆಯ ಡೆಸ್ಕ್ಟಾಪ್ ಗೆ ಹಿಂದಿರುಗೋಣ . |
04:15 | Trash , Launcher ನಲ್ಲಿ ಇರುವ ಮತ್ತೊಂದು ಪ್ರಮುಖ ಐಕಾನ್ ಆಗಿದೆ . |
04:19 | Trash ,ಡಿಲೀಟ್ ಮಾಡಿದ್ ಎಲ್ಲ ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಒಳಗೊಂಡಿದೆ. |
04:23 | ನಾವು ಆಕಸ್ಮಿಕವಾಗಿ file ಅನ್ನು ಡಿಲೀಟ್ ಮಾಡಿದರೆ , ಅದನ್ನು Trash ನಿಂದ ಮರಳಿ ಪಡೆಯಬಹುದು . |
04:28 | ಇದನ್ನು ಪ್ರದರ್ಶಿಸಲು, ನಾನು ಡೆಸ್ಕ್ಟಾಪ್ ನಲ್ಲಿರುವ ನನ್ನ DIW ಫೈಲ್ ಅನ್ನು ಡಿಲೀಟ್ ಮಾಡುತ್ತೇನೆ . |
04:33 | ಫೈಲ್ ಮೇಲೆ ರೈಟ್ - ಕ್ಲಿಕ್ ಮಾಡಿ, ಮತ್ತು Move to Trash ಅನ್ನು ಕ್ಲಿಕ್ ಮಾಡಿ. |
04:38 | ಅದನ್ನು ಮರಳಿಪಡೆಯಲು, Launcher ನಲ್ಲಿನ Trash icon ಅನ್ನು ಒತ್ತಿ . |
04:43 | Trash ಫೋಲ್ಡರ್ ತೆರೆಯುತ್ತದೆ. |
04:46 | File ಅನ್ನು ಆಯ್ಕೆಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Restore ಅನ್ನು ಕ್ಲಿಕ್ ಮಾಡಿ. |
04:50 | Trash ವಿಂಡೋವನ್ನು ಮುಚ್ಚಿ ಮತ್ತು ಡೆಸ್ಕ್ಟಾಪ್ ಗೆ ಹಿಂತಿರುಗಿ. |
04:54 | ನಾವು ಮೊದಲು ಡಿಲೀಟ್ ಮಾಡಿದ ಫೈಲ್ ಅನ್ನು ಈಗ ಮರಳಿ ಪಡೆಯಲಾಗಿದೆ ಎಂದು ನೋಡಬಹುದು. |
04:59 | ನಿಮ್ಮ ಸಿಸ್ಟಮ್ ನಿಂದ ಫೈಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲು , ಮೊದಲು ಅದನ್ನು ಆಯ್ಕೆ ಮಾಡಿ ಮತ್ತು Shift + Delete ಅನ್ನು ಒತ್ತಿರಿ. |
05:07 | “Are you sure you want to permanently delete DIW” ಎಂದು ಕೇಳುತ್ತಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ. Delete ಅನ್ನು ಕ್ಲಿಕ್ ಮಾಡಿ. |
05:15 | ಮತ್ತೊಮ್ಮೆ Trash ಐಕಾನ್ ಮೇಲೆ ಕ್ಲಿಕ್ ಮಾಡಿ. |
05:18 | ಫೈಲ್ ಅನ್ನು ನಮ್ಮ ಸಿಸ್ಟಮ್ ನಿಂದ ಶಾಶ್ವತವಾಗಿ ಡಿಲೀಟ್ ಮಾಡಿರುವ ಕಾರಣಾ, Trash ಫೋಲ್ಡರ್ನಲ್ಲಿ ನಮಗೆ ಅದು ಕಾಣುವುದಿಲ. |
05:24 | ಈಗ, ಡೆಸ್ಕ್ಟಾಪ್ ನ ಮೇಲ್ತುದಿಯ ಬಲಮೂಲೆಯಲ್ಲಿ ಕೆಲವು ಅಪ್ಲಿಕೇಶನ್ಗಳು ಲಭ್ಯವಿರುವುದನ್ನು ನಾವು ನೋಡುತ್ತೇವೆ. |
05:31 | ಮೊದಲನೆಯದು, Internet connectivity ಆಗಿದೆ . |
05:34 | ನೀವು ಯಾವುದೇ Lan ಅಥವಾ Wifi network ನ ಸಂಪರ್ಕ ಹೊಂದಿದ್ದರೆ, ಕನೆಕ್ಷನ್ ಅನ್ನು ಸ್ಥಾಪಿಸಲಾಗುತ್ತದೆ . |
05:39 | ನೀವು ಇವುಗಳನ್ನು ಇಲ್ಲಿ ನೋಡಬಹುದು. |
05:42 | ನಿಮಗೆ ಆಕ್ಸೆಸ್ ಇರುವ network ಅನ್ನು ನೀವು ಆಯ್ಕೆ ಮಾಡಬಹುದು. |
05:46 | ನೆಟ್ವರ್ಕ್ ಅನ್ನು Enable/ Disable ಮಾಡಲು, Enable Networking ಆಯ್ಕೆಯನ್ನು ಗುರುತು ಮಾಡಿ/ರದ್ದುಗೊಳಿಸಿ . |
05:52 | Edit Connections ಆಯ್ಕೆಯನ್ನು ಬಳಸಿಕೊಂಡು ನಾವು ನೆಟ್ವರ್ಕ್ ಗಳನ್ನು ಎಡಿಟ್ ಮಾಡಬಹುದು. |
05:57 | ಮುಂದಿನ ಆಯ್ಕೆ ಯು ,Sound ಆಗಿದೆ . ಅದರ ಮೇಲೆ ಕ್ಲಿಕ್ ಮಾಡಿ. |
06:00 | ನೀವು ಇಲ್ಲಿ ಒಂದು ಸ್ಲೈಡರ್ ಅನ್ನು ನೋಡಬಹುದು. ನಮಗೆ ಬೇಕಾದ್ ಹಾಗೆ , ಆಡಿಯೊ ಮಟ್ಟವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. |
06:07 | Sound Settings ಅನ್ನು ಕ್ಲಿಕ್ ಮಾಡುವುದರ ಮೂಲಕ ನಮ್ಮ ಸಿಸ್ಟಮ್ನ ಧ್ವನಿ ಮಟ್ಟವನ್ನು ನಾವು ಮತ್ತಷ್ಟು ಹೊಂದಿಸಬಹುದು. |
06:14 | ಈ ವಿಂಡೋದಲ್ಲಿಯ ಸೆಟ್ಟಿಂಗ್ಗಳನ್ನು ನಿಮಷ್ಟಕೆ ನೀವೇ ಎಕ್ಸ್ಪ್ಲೋರ್ ಮಾಡಿ. |
06:17 | ಮುಂದಿನ ಐಕಾನ್ Time & Date ಆಗಿದೆ . |
06:20 | ನಾವು ಈ ಐಕಾನ್ ಅನ್ನು ಕ್ಲಿಕ್ ಮಾಡಿದರೆ, ಕ್ಯಾಲೆಂಡರ್ ತೆರೆಯುತ್ತದೆ. ನಾವು ಪ್ರಸ್ತುತ ದಿನಾಂಕ, ತಿಂಗಳು ಮತ್ತು ವರ್ಷವನ್ನು ಇಲ್ಲಿ ನೋಡಬಹುದು. |
06:29 | ಆರೋ ಬಟನ್ಗಳು ನಮಗೆ ಬೇಕಾದ ಹಾಗೆ ಇತರ ತಿಂಗಳುಗಳು ಮತ್ತು ವರ್ಷಗಳನ್ನು ಆಯ್ಕೆಮಾಡಲು ಅನುವು ಮಾಡಿಕೊಡುತ್ತವೇ. |
06:35 | ‘Time & Date Settings 'ಮೇಲೆ ಕ್ಲಿಕ್ ಮಾಡುವ ಮೂಲಕ ನಾವು ದಿನಾಂಕ ಮತ್ತು ಸಮಯವನ್ನು ಎಡಿಟ್ ಮಾಡ ಬಹುದು. ಈ ಆಯ್ಕೆಯನ್ನು ನಿಮ್ಮಷ್ಟಕ್ಕೆ ನೀವೇ ಕಲಿಯರಿ . |
06:44 | ಮುಂದೆ, Wheel ಐಕಾನ್ ಅನ್ನು ಕ್ಲಿಕ್ ಮಾಡಿ. |
06:47 | ಇಲ್ಲಿ ನಾವು Log out ಮತ್ತು Shutdown ಆಯ್ಕೆಗಳೊಂದಿಗೆ ಕೆಲವು ಶಾರ್ಟ್ಕಟ್ ಆಯ್ಕೆಗಳನ್ನು ನೋಡಬಹುದು. |
06:53 | ನಮ್ಮ ಸಿಸ್ಟಮ್ನಲ್ಲಿ ಲಭ್ಯವಿರುವ ಎಲ್ಲ User accounts ' ಸಹ ನಾವು ನೋಡಬಹುದು. |
06:59 | ನಿರ್ದಿಷ್ಟ ಯೂಸರ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ನಾವು ಬಯಸುವ ಯಾವುದೇ ಯೂಸರ್ ಅಕೌಂಟ್ ಗೆ ನಾವು ಬದಲಾಯಿಸಬಹುದು. |
07:05 | ಸಂಕ್ಷಿಪ್ತವಾಗಿ , |
07:07 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
07:26 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:32 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
|
07:39 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
07:42 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
07:53 | ಈ ಟ್ಯುಟೋರಿಯಲ್ ಗೌರವ್ ಶಿಂದೆ ಮತ್ತು ಪ್ರವೀಣ್ ಎಸ್ ಅವರ ಕೊಡುಗೆಯಾಗಿದೆ.IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕ ಲೋಹಿತ್ ಪಿ ಮತ್ತು ಪ್ರವಾಚಕಿ ಗ್ಲೋರಿಯಾ ನಾಂದಿಹಾಳ್ .
ಧನ್ಯವಾದಗಳು.| |