Difference between revisions of "Drupal/C2/Overview-of-Drupal/Kannada"
From Script | Spoken-Tutorial
PoojaMoolya (Talk | contribs) |
PoojaMoolya (Talk | contribs) |
||
Line 244: | Line 244: | ||
|- | |- | ||
|09:17 | |09:17 | ||
− | | | + | | ಸೈಟ್ ಅನ್ನು ಹೆಚ್ಚು ಸುಲಭವಾಗಿರುವಂತೆ ರೂಪಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದುವುದು ಬಹಳ ಸಹಾಯಕಾರಿ. |
|- | |- | ||
|09:24 | |09:24 |
Latest revision as of 12:27, 17 October 2016
Time | Narration |
00:01 | Overview of Drupal ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,Content Management System,Drupal |
00:13 | ದ್ರುಪಲ್' ನ ಮುಖ್ಯ ವಿಶೇಷತೆಗಳು ಹಾಗೂ ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ. |
00:19 | ಮೊದಲಿಗೆ ನಾವು 'ದ್ರುಪಲ್' ಎಂದರೇನು ಎಂದು ತಿಳಿಯೋಣ. 'ದ್ರುಪಲ್' ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ 'ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್' (Content Management System (CMS)) ಆಗಿದೆ. |
00:30 | CMS ಎಂದರೇನು? ಇಲ್ಲಿ, ಮುಂಚಿನಂತೆ ಹಲವಾರು html ಫೈಲ್ ಗಳನ್ನು ಸರ್ವರ್ ನಲ್ಲಿ ಅಪ್ಲೋಡ್ ಮಾಡಬೇಕಾಗಿಲ್ಲ. |
00:40 | ಮುಂಚೆ, ಪ್ರತಿಯೊಂದು ವೆಬ್ ಪೇಜ್ ಕೂಡಾ ಅದರದ್ದೇ ಆದ html ಫೈಲ್ ಅನ್ನು ಹೊಂದಿರುತ್ತಿದ್ದವು. |
00:47 | ಈಗ ಅದು ತುಂಬಾ ಬದಲಾಗಿದೆ.ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ. |
00:55 | ಪ್ರತಿಯೊಂದು ಕಂಪೋನೆಂಟ್ ಬೇರೆ ಬೇರೆ ಜಾಗಗಳಿಂದ ಬರಬಹುದು. |
01:00 | ಈ ಕಾಂಪೋನೆಂಟ್ ಗಳನ್ನು ಕೆಲವು ಪ್ರೋಗ್ರಾಮಿಂಗ್ ಲಾಜಿಕ್ ಗಳನ್ನು ಉಪಯೋಗಿಸಿಕೊಂಡು ಶೀಘ್ರವಾಗಿ ಸಂಯೋಜಿಸಲಾಗುತ್ತದೆ. |
01:06 | ಹಾಗಾಗಿ, ನೀವು ಯಾವುದರ ಮೂಲಕ ನೋಡುತ್ತಿರುವಿರಿ ಎಂಬುದರ ಆಧಾರದ ಮೇಲೆ ದೃಶ್ಯಾವಳಿಗಳು ವಿಭಿನ್ನವಾಗಿರುತ್ತದೆ. ಅದು ಡೆಸ್ಕ್ಟಾಪ್ ಆಗಿರಬಹುದು ಅಥವಾ ಮೊಬೈಲ್. |
01:14 | ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು. |
01:23 | ಅಥವಾ, ಸಿಂಗಾಪೂರ್ ನಿಂದ ಒಬ್ಬ ಗ್ರಾಹಕನಾಗಿ ನೋಡುತ್ತಿರಬಹುದು.ಪ್ರತಿಯೊಬ್ಬನಿಗೂ ಕೂಡಾ ವಿಭಿನ್ನ ಪೇಜ್ ತೋರಬಹುದು. |
01:32 | CMS ಎಂಬುದೇ ಈ ತರಹನಾದ ವೀಕ್ಷಣೆಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ. |
01:37 | ಇದು PHP, Ajax (ಎಜಾಕ್ಸ್), Javascript ಮುಂತಾದ ವಿವಿಧ ಹೆಚ್ಚು ಕ್ಷಮತೆಯುಳ್ಳ ಪ್ರೊಗ್ರಾಮಿಂಗ್ ಗಳನ್ನು ಉಪಯೋಗಿಸಿಕೊಳ್ಳುತ್ತದೆ. |
01:47 | ಎಲ್ಲಾ CMS ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೇಟಾಬೇಸ್ ನಲ್ಲಿ ಯಾವುದೇ ಫಾರ್ಮ್ಯಾಟಿಂಗ್ ಇಲ್ಲದೇ ಸಂಗ್ರಹಿಸುತ್ತವೆ. |
01:55 | ಕಂಟೆಂಟ್ ನ ಫಾರ್ಮ್ಯಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ. |
02:00 | ತಂತ್ರಜ್ಞಾನದ ಅರಿವು ಇಲ್ಲದವರೂ ಕೂಡಾ CMS ಎಂಬುದರ ಉಪಯೋಗದಿಂದ ಸುಲಭವಾಗಿ ವೆಬ್ಸೈಟ್ ಅನ್ನು ವ್ಯವಸ್ಥಿತಗೊಳಿಸಬಹುದಾಗಿದೆ. |
02:07 | ದ್ರುಪಲ್ (Drupal) ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಃಶ್ಶುಲ್ಕವಾಗಿ ದೊರೆಯುತ್ತದೆ. |
02:15 | ಯಾರು ಬೇಕಾದರೂ ಅದನ್ನು ಡೌನ್ಲೋಡ್ ಮಾಡಿ ಬದಲಾಯಿಸಲೂ ಬಹುದು. |
02:18 | ದ್ರುಪಲ್ ಅನ್ನು 2000 ರಲ್ಲಿ Dries Buytaert (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ. |
02:24 | ಹಾಗೂ, ಇದು ಓಪನ್ ಸೋರ್ಸ್ ಆದ್ದರಿಂದ ಸಾವಿರಾರು ಜನ ಈ ಕೋಡ್ ಅನ್ನು ಮಾರ್ಪಡಿಸುವಲ್ಲಿ ಕೈ ಜೋಡಿಸಿದ್ದಾರೆ. |
02:32 | ಸ್ವಲ್ಪ ಮಟ್ಟಿಗೆ ಅದನ್ನು ಉತ್ತಮವಾಗಿಸಿ ಪುನಃ ಆ ಸಮುದಾಯಕ್ಕೆ ಹಿಂತಿರುಗಿಸಿದ್ದಾರೆ. |
02:37 | ದ್ರುಪಲ್ ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ. |
02:43 | ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ ದ್ರುಪಲ್ ಇವತ್ತು ಹೀಗೆ ಬೆಳೆದಿದೆ. |
02:51 | ದ್ರುಪಲ್ ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ- “Come for the code, stay for the community”. |
02:58 | ಬಹುಷಃ ಈ ಕಾರಣಕ್ಕಾಗಿಯೇ ನೀವು ಈ ಸಮುದಾಯದಲ್ಲಿ ಒಂದಾಗಬಯಸುತ್ತೀರಿ. |
03:02 | ಈಗ ನಾನು ದ್ರುಪಲ್ ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ. |
03:06 | ಮೊದಲನೆಯದು:ದ್ರುಪಲ್ ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ ಓಪನ್ ಸೋರ್ಸ್ ಆಗಿದೆ. |
03:11 | ಯಾರು ಬೇಕಾದರೂ ಇದರ ಕೋಡ್ ಗಳನ್ನು ಡೌನ್ಲೋಡ್ ಮಾಡಿ ಅದನ್ನು ಮಾರ್ಪಡಿಸಬಹುದು. |
03:15 | ನೀವು ಡೆವಲಪರ್ ಆಗಿದ್ದರೂ ಸಹ ದ್ರುಪಲ್ ನಿಮಗೆ ಉಪಕಾರಿಯಾಗಿದೆ. |
03:20 | ಎರಡನೇಯದಾಗಿ:ದ್ರುಪಲ್ ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ. |
03:24 | ದ್ರುಪಲ್ ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ. |
03:28 | ದ್ರುಪಲ್ ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ. |
03:35 | ಡೆವಲಪರ್ ಗಳು ಇದನ್ನು CMS ನಂತೆ ಹಾಗೂ ವಿಶಾಲವಾದ web development platform ನಂತೆಯೂ ಉಪಯೋಗಿಸುತ್ತಾರೆ. |
03:42 | ಮೂರನೇಯದಾಗಿ:ದ್ರುಪಲ್ ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ. |
03:46 | ನಾವು ಯಾವುದೇ ಮೊಬೈಲ್ ನಿಂದ ಕೂಡಾ ದ್ರುಪಲ್ ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು. |
03:54 | ನಾಲ್ಕನೇಯದು:ದ್ರುಪಲ್ ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ. |
04:00 | whitehouse.gov ನಿಂದ ಹಿಡಿದು weather.com ಮತ್ತು Dallas Cowboys, (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ ದ್ರುಪಲ್ ಸಂಭಾಳಿಸುತ್ತದೆ. |
04:08 | ದ್ರುಪಲ್, ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ. |
04:12 | ಯಾರು ಬಹಳ ವೈಶಿಷ್ಟ್ಯಗಳನ್ನೊಳಗೊಂಡ ವೆಬ್ಸೈಟ್ ಅನ್ನು ತಯಾರಿಸಲಿಚ್ಛಿಸುವರೋ ಅವರಿಗೆ ದ್ರುಪಲ್ ಎಂಬುದು ಉತ್ತಮವಾದ ದಾರಿಯಾಗಿದೆ. |
04:19 | ಹಾಗೂ, ಇದು ದೊಡ್ಡ ದೊಡ್ಡ ಉದ್ಯಮಗಳಿಗೂ ಕೂಡಾ ಬಹಳ ಉಪಯುಕ್ತವಾಗಿದೆ. |
04:24 | ಐದನೇಯದಾಗಿ:ದ್ರುಪಲ್ ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ. |
04:29 | ದ್ರುಪಲ್ ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ. |
04:34 | ಹಾಗೂ,ದ್ರುಪಲ್ ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ URLs ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ.. |
04:45 | ಆರನೇಯದಾಗಿ:ದ್ರುಪಲ್ ಎಂಬುದು ಸುರಕ್ಷಿತವಾಗಿದೆ. |
04:50 | ದ್ರುಪಲ್ ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ. |
04:57 | 'ಹ್ಯಾಶ್ ಪಾಸ್ವರ್ಡ್' ಗಳನ್ನು, 'ಪರ್ಮಿಶನ್ಸ್' ಬದಲಾಗುವಾಗ ಆಗುವ 'ಸೆಷನ್ ID' ಗಳನ್ನು, |
05:01 | ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ 'ಪರ್ಮಿಶನ್'ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ ದ್ರುಪಲ್ ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ. |
05:11 | ಏಳನೆಯದಾಗಿ:ನಾವು ನಮ್ಮ 'ದ್ರುಪಲ್' ಸೈಟ್ ಅನ್ನು ಸಾವಿರಾರು 'Modules' ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು 'ದ್ರುಪಲ್' ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು. |
05:18 | ನಾವು ಯಾವುದೇ ವೈಶಿಷ್ಟ್ಯಗಳನ್ನು ಬಯಸಿದರೂ ಅದನ್ನು ಯಾರಾದರೊಬ್ಬರು 'ಮೊಡ್ಯೂಲ್'ನ ರೂಪದಲ್ಲಿ ತಯಾರಿಸಿ ನಿಶ್ಶುಲ್ಕವಾಗಿ ಲಭ್ಯವಾಗುವಂತೆ ಮಾಡಿರುತ್ತಾರೆ. |
05:27 | ನಾವು ವಿವಿಧ Themes ಗಳನ್ನು ಅಥವಾ ಒಂದು 'ಥೀಮ್' ನ ಹಲವಾರು ಆವೃತ್ತಿಗಳನ್ನು ಒಂದೇ ಸೈಟ್ ನಲ್ಲಿ ಪಡೆಯಬಹುದು. ಹಾಗೂ, ನೀವು ನಿಮ್ಮ ಸೈಟ್ ನ ದೃಶ್ಯಾವಳಿಗಳ ಮಾಹಿತಿಯ ಸಂಪೂರ್ಣ ಹಿಡಿತವನ್ನು ಹೊಂದಬಹುದು. |
05:40 | ಎಂಟನೆಯದಾಗಿ:ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ ದ್ರುಪಲ್ ಸಮುದಾಯ ನಿಮಗಾಗಿ ಇದೆ. |
05:48 | ಸಂಪೂರ್ಣ ವಿಶ್ವದಲ್ಲಿ ದ್ರುಪಲ್ ನ ಆಯೋಜನೆಗಳಿವೆ. |
05:52 | ಸ್ಥಾನೀಯ ಆಯೋಜನೆಗಳಿಗೆ Drupal camps ಎಂದು ಹೆಸರು. |
05:55 | ಹಾಗೂ, ಪ್ರತಿ ವರ್ಷವೂ ವಿಶ್ವದೆಲ್ಲೆಡೆ ಪ್ರಮುಖವಾದ DrupalCons ಗಳು ಆಗುತ್ತವೆ. |
06:01 | ದ್ರುಪಲ್ ನ ಬೆಂಬಲಕ್ಕಾಗಿ ಸಕ್ರಿಯವಾದ Forum ಗಳು, User Group ಗಳು ಹಾಗೂ IRC chats ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ. |
06:08 | ಒಂಭತ್ತನೆಯದಾಗಿ:ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು ದ್ರುಪಲ್ ನ ಸಮುದಾಯದಲ್ಲಿವೆ. |
06:15 | ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ Acquia, ಎಂಬುದು ದ್ರುಪಲ್ ನ ದೊಡ್ಡ ಉದ್ಯಮವಾಗಿದೆ. |
06:21 | ಭಾರತದಲ್ಲಿ ಅರವತ್ತಕ್ಕೂ ಹೆಚ್ಚು ದ್ರುಪಲ್ ನ ಸೇವಾ ಸಂಸ್ಥೆಗಳು ಇರುತ್ತವೆ. ನೂರಾರು ಜನ ದ್ರುಪಲ್ ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ. |
06:32 | ಹತ್ತನೆಯದಾಗಿ:ದ್ರುಪಲ್ ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇವೆ. |
06:40 | ದ್ರುಪಲ್ ಸಂಪೂರ್ಣ ವೆಬ್ ನ ಕ್ಷೇತ್ರದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ. |
06:50 | ದ್ರುಪಲ್ ಎಂಬುದು ಸರಕಾರೀ, ಶೈಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ. |
06:58 | ಈ ಟ್ಯುಟೋರಿಯಲ್ ಸರಣಿಯಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿಯಲಿದ್ದೇವೆ - 'ದ್ರುಪಲ್' ನ ಇನ್ಸ್ಟಾಲ್ ಮಾಡುವಿಕೆ. |
07:04 | ನಾವು 'ದ್ರುಪಲ್' ಹಾಗೂ ಇತರ ಸಂಬಂಧಿತ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ತಿಳಿಯುವೆವು. |
07:10 | ಸಾಮಾನ್ಯವಾಗಿ Linux ಅಥವಾ Windows ನ ಅರಿವಿರುವ ಯಾರೇ ಕೂಡಾ ಉಪಯೋಗಿಸಬಹುದು. |
07:18 | content ನ ಕಾರ್ಯಪ್ರಣಾಲೀ -ಇಲ್ಲಿ ನಾವು ದ್ರುಪಲ್ ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು. |
07:26 | ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ರಚಿಸಲಿದ್ದೇವೆ. |
07:34 | ನಂತರ ನಾವು ದ್ರುಪಲ್ ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು. |
07:40 | ಸಾಮಾನ್ಯ ಕಂಟೆಂಟ್ ಗಳು ಹಾಗೂ ಈಗಾಗಲೇ ಇರುವ ಪ್ರೋಗ್ರಾಮ್ ಗಳಿಂದ ಆರಚಿಸಲ್ಪಟ್ಟ ಕಂಟೆಂಟ್ ಗಳ ನಡುವಿನ ಸಂಬಂಧವೇ ಆ ವಿಶೇಷವಾಗಿದೆ. |
07:49 | ದ್ರುಪಲ್ ಅನ್ನು ಹೇಗೆ extend ಮಾಡುವುದು -ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ Modules ಅಥವಾ Extensions. |
07:56 | ಈ ಮೊದಲೇ ತಿಳಿಸಿದಂತೆ, Module ಎಂಬುದು app ಇದ್ದಂತೆ. |
08:05 | ಲಭ್ಯವಿರುವ ಹತ್ತುಸಾವಿರಕ್ಕೊ ಹೆಚ್ಚಿನ 'ಮೊಡ್ಯೂಲ್' ಗಳಲ್ಲಿ ನಿಮಗೆ ಬೇಕಾದ 'ಮೊಡ್ಯೂಲ್' ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ತಿಳಿಸಲಾಗುತ್ತದೆ. |
08:13 | ಸೈಟ್ ಅನ್ನು ಹೇಗೆ ರೂಪಿಸುವುದು -ಒಮ್ಮೆ ಮೂಲಭೂತ ಅಂಶಗಳು ಹಾಗೂ ವೈಶಿಷ್ಟ್ಯಗಳು ಸಿದ್ಧವಾದುವೆಂದಮೇಲೆ ನಾವು ಅವುಗಳಿಗೆ ಸುಂದರವಾದ ಡಿಸ್ಪ್ಲೇ ರಚಿಸುವ ಅಗತ್ಯವಿರುತ್ತದೆ. |
08:24 | layout ವಿಭಾಗದಲ್ಲಿ, ದೃಶ್ಯವನ್ನು ಹಾಗೂ ಸೈಟ್ ನ ಸೌಂದರ್ಯವನ್ನು ಬದಲಿಸುವು ಎಷ್ಟು ಸುಲಭವೆಂಬುದನ್ನು ಕಲಿಯುವೆವು. |
08:31 | Modules ನಂತೆಯೇ, layout ಅಥವಾ Themes ಗಳು ಕೂಡಾ ಸಮುದಾಯದ ಕೊಡುಗೆಯಾಗಿದೆ. |
08:38 | people ಅನ್ನು ಹೇಗೆ ನಿರ್ವಹಿಸುವುದು - |
08:40 | ದ್ರುಪಲ್ ಎಂಬುದು ವರ್ಡಪ್ರೆಸ್ಸ್ ನ ತರಹ ಸಿಂಗಲ್-ಯೂಸರ್ ಆಧಾರವಾಗಿರದೆ ಇದರಲ್ಲಿ ಬೇರೆ ಬೇರೆ ಯೂಸರ್ ಗಳು ಬೇರೆ ಬೇರೆ ವಿಷಯಗಳ ಜೊತೆ ಕಾರ್ಯ ನಿರ್ವಹಿಸಬಹುದಾಗಿದೆ. |
08:53 | people ಎಂಬ ವಿಭಾಗದಲ್ಲಿ, ಹೇಗೆ ವಿಭಿನ್ನ ರೋಲ್ ಗಳನ್ನು ಸೆಟ್ ಮಾಡುವುದು ಹಾಗೂ ಅವರಿಗೆ ಹೇಗೆ ವಿಭಿನ್ನ ಅನುಮತಿಗಳನ್ನು ನೀಡುವುದು ಎಂಬುದರ ಬಗ್ಗೆ ಕಲಿಯುವೆವು. |
09:01 | ಹೇಗೆ ಸೈಟ್ ಅನ್ನು ಸರಿಯಾಗಿ ನಿರ್ವಹಿದುವುದು – ಕೊನೆಯ ಭಾಗದಲ್ಲಿ ದ್ರುಪಲ್ ನ ಕೋಡ್ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯುವೆವು. |
09:11 | ಸ್ಥಿರತೆ ಹಾಗೂ ಸುರಕ್ಷತೆಗಾಗಿ ನಿಮ್ಮ ಸೈಟ್ ಅನ್ನು ಯಾವಾಗಲೂ ಅಪ್ಡೇಟ್ ಆಗಿರಿಸುವುದು ಬಹಳ ಮುಖ್ಯವಾಗಿದೆ. |
09:17 | ಸೈಟ್ ಅನ್ನು ಹೆಚ್ಚು ಸುಲಭವಾಗಿರುವಂತೆ ರೂಪಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದುವುದು ಬಹಳ ಸಹಾಯಕಾರಿ. |
09:24 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ. |
09:28 | ಒಟ್ಟಿನಲ್ಲಿ,ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು:'ದ್ರುಪಲ್' ನ ಪರಿಚಯ,'ದ್ರುಪಲ್' ನ ಪ್ರಮುಖ ಅಂಶಗಳು ಹಾಗೂ 'ದ್ರುಪಲ್' ಪಾಠ ಸರಣಿಯ ಮುನ್ನೋಟ. |
09:41 | ಈ ವೀಡಿಯೋ Acquia ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ. |
09:51 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. |
09:59 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
10:11 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ. |
10:24 | ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |