Difference between revisions of "Drupal/C2/Installation-of-Drupal/Kannada"

From Script | Spoken-Tutorial
Jump to: navigation, search
Line 10: Line 10:
 
|-
 
|-
 
| 00:17
 
| 00:17
| ಈ ಟ್ಯುಟೋರಿಯಲ್ ಗಾಗಿ ನಿಮ್ಮಲ್ಲಿ -
+
| ಈ ಟ್ಯುಟೋರಿಯಲ್ ಗಾಗಿ ನಿಮ್ಮಲ್ಲಿ - ಸಕ್ರಿಯವಾದ ಇಂಟರ್ನೆಟ್ ಸಂಪರ್ಕವಿರಬೇಕು. ಇದರಿಂದ ನೀವು ನೂತನವಾದ ಆವೃತ್ತಿಯನ್ನು ಪಡೆಯಬಹುದು. ಅಥವಾ, ನಿಮಗೆ ಬೇಕಾದ ಫೈಲ್ ಗಳನ್ನು ಕೊಡಲಾಗುತ್ತದೆ.
ಸಕ್ರಿಯವಾದ ಇಂಟರ್ನೆಟ್ ಸಂಪರ್ಕವಿರಬೇಕು. ಇದರಿಂದ ನೀವು ನೂತನವಾದ ಆವೃತ್ತಿಯನ್ನು ಪಡೆಯಬಹುದು. ಅಥವಾ, ನಿಮಗೆ ಬೇಕಾದ ಫೈಲ್ ಗಳನ್ನು ಕೊಡಲಾಗುತ್ತದೆ.
+
 
|-
 
|-
 
| 00:30
 
| 00:30
Line 26: Line 25:
 
|-
 
|-
 
| 00:57
 
| 00:57
|''' Bitnami Drupal Stack''' ಅನ್ನು ಇನ್ಸ್ಟಾಲ್ ಮಾಡಲು ನಿಮ್ಮಲ್ಲಿ -
+
|''' Bitnami Drupal Stack''' ಅನ್ನು ಇನ್ಸ್ಟಾಲ್ ಮಾಡಲು ನಿಮ್ಮಲ್ಲಿ - '''Intel x86''' ಅಥವಾ ಅದಕ್ಕೆ ಸರಿಯಾದ ಪ್ರೊಸೆಸರ್
'''Intel x86''' ಅಥವಾ ಅದಕ್ಕೆ ಸರಿಯಾದ ಪ್ರೊಸೆಸರ್
+
 
|-
 
|-
 
| 01:05
 
| 01:05
Line 45: Line 43:
 
|-
 
|-
 
| 01:24
 
| 01:24
|* ಯಾವುದಾದರೂ '''32-bit Windows''' ಆಪರೇಟಿಂಗ್ ಸಿಸ್ಟಂ ಉದಾಹರಣೆಗೆ- '''Windows Vista, Windows 7, Windows 8, Windows 10, Windows Server 2008''' ಅಥವಾ '''Windows Server 2012'''.
+
|* ಯಾವುದಾದರೂ '''32-bit Windows''' ಆಪರೇಟಿಂಗ್ ಸಿಸ್ಟಂ ಉದಾಹರಣೆಗೆ- '''Windows Vista, Windows 7,Windows 8, Windows 10, Windows Server 2008''' ಅಥವಾ '''Windows Server 2012'''.
 
|-
 
|-
 
| 01:41
 
| 01:41
Line 318: Line 316:
 
|-
 
|-
 
| 10:25
 
| 10:25
|ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:  
+
|ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.  
NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
+
NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.  
+
 
|-
 
|-
 
| 10:36
 
| 10:36
 
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.
 
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.
 
|}
 
|}

Revision as of 17:54, 14 October 2016

Time Narration
00:01 ದ್ರುಪಲ್ ನ ಇನ್ಸ್ಟಾಲೇಷನ್ ನ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಇಲ್ಲಿ ನಾವು ಉಬಂಟು ಹಾಗೂ ವಿಂಡೋಸ್ ನಲ್ಲಿ ದ್ರುಪಲ್ ಅನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:17 ಈ ಟ್ಯುಟೋರಿಯಲ್ ಗಾಗಿ ನಿಮ್ಮಲ್ಲಿ - ಸಕ್ರಿಯವಾದ ಇಂಟರ್ನೆಟ್ ಸಂಪರ್ಕವಿರಬೇಕು. ಇದರಿಂದ ನೀವು ನೂತನವಾದ ಆವೃತ್ತಿಯನ್ನು ಪಡೆಯಬಹುದು. ಅಥವಾ, ನಿಮಗೆ ಬೇಕಾದ ಫೈಲ್ ಗಳನ್ನು ಕೊಡಲಾಗುತ್ತದೆ.
00:30 ಹಾಗೂ ನಿಮ್ಮ ಕಂಪ್ಯೂಟರ್ ನಲ್ಲಿ ಉಬಂಟು ಅಥವಾ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇನ್ಸ್ಟಾಲ್ ಆಗಿರಬೇಕು.
00:38 ಈ ಟ್ಯುಟೋರಿಯಲ್ ಅನ್ನು ಕಲಿಯಲು ನಿಮಗೆ ಮೇಲೆ ಹೇಳಿರುವ ಯಾವುದಾದರೊಂದು ಆಪರೇಟಿಂಗ್ ಸಿಸ್ಟಮ್ ನ ಪರಿಚಯವಿರಲೇಬೇಕು.
00:45 ದ್ರುಪಲ್ ಅನ್ನು ಇನ್ಸ್ಟಾಲ್ ಮಾಡಲು ಹಲವಾರು ಮಾರ್ಗಗಳಿವೆ.
00:48 ಈ ಟ್ಯುಟೋರಿಯಲ್ ನಲ್ಲಿ ನಾವು ಬಹಳ ಸರಳವಾದ ವಿಧಾನಗಳನ್ನು ಹೊಂದಿರುವ Bitnami Drupal Stack ಅನ್ನು ಉಪಯೋಗಿಸೋಣ.
00:57 Bitnami Drupal Stack ಅನ್ನು ಇನ್ಸ್ಟಾಲ್ ಮಾಡಲು ನಿಮ್ಮಲ್ಲಿ - Intel x86 ಅಥವಾ ಅದಕ್ಕೆ ಸರಿಯಾದ ಪ್ರೊಸೆಸರ್
01:05 * ಕನಿಷ್ಠ 256 MB RAM
01:08 * ಕನಿಷ್ಠ 150 MB ಹಾರ್ಡ್-ಡ್ರೈವ್ ಹಾಗೂ
01:13 * 'TCP/IP ಪ್ರೋಟೊಕಾಲ್' ನ ಸಹಕಾರ ಇರಬೇಕು.
01:16 ಈ ಕೆಳಗಿನವುಗಳು ಕೆಲವು ಸಹವರ್ತಿ ಆಪರೇಟಿಂಗ್ ಸಿಸ್ಟಮ್ ಗಳಾಗಿವೆ :
01:20 * ಯಾವುದಾದರೂ x86 Linux ಆಪರೇಟಿಂಗ್ ಸಿಸ್ಟಂ
01:24 * ಯಾವುದಾದರೂ 32-bit Windows ಆಪರೇಟಿಂಗ್ ಸಿಸ್ಟಂ ಉದಾಹರಣೆಗೆ- Windows Vista, Windows 7,Windows 8, Windows 10, Windows Server 2008 ಅಥವಾ Windows Server 2012.
01:41 ಯಾವುದಾದರೂ OS X operating system x86.
01:46 ಈಗ ನೀವು ಯಾವುದಾದರೂ ವೆಬ್ ಬ್ರೌಸರ್ ಗೆ ಹೋಗಿ ಹಾಗೂ ತೋರಿಸಲ್ಪಟ್ಟ URL ಓಪನ್ ಮಾಡಿ.
01:53 ಕೆಳಕ್ಕೆ ಸ್ಕ್ರೋಲ್ ಮಾಡಿ ಹಾಗೂ ವಿಂಡೋಸ್ ಹಾಗೂ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಿಗಾಗಿ ಇನ್ಸ್ಟಾಲರ್ ಅನ್ನು ನೋಡಿ.
02:01 ನೀವು ನಿಮ್ಮ ಆಪರೇಟಿಂಗ್ ಸಿಸ್ಟಮ್ ಗೆ ಅನುಗುಣವಾಗಿ installer ಅನ್ನು ಆಯ್ಕೆಮಾಡಿ.
02:06 ನಾನು Linux ಅನ್ನು ಉಪಯೋಗಿಸುತ್ತಿರುವ ಕಾರಣ Linux installer ಅನ್ನು ಆಯ್ಕೆಮಾಡುತ್ತೇನೆ.
02:11 ನೀವು Windows ಉಪಯೋಗಿಸುತ್ತಿದ್ದಲ್ಲಿ, ವಿಂಡೋಸ್ ಗಾಗಿ Drupal installer ಅನ್ನು ಆಯ್ಕೆ ಮಾಡಿ.
02:17 ನಮಗಿಲ್ಲಿ Drupal ನ ವಿವಿಧ ಆವೃತ್ತಿಗಳು ಕಾಣ ಸಿಗುತ್ತವೆ.
02:22 ನಿಮಗೆ ಈ ಆವೃತ್ತಿಗಳಲ್ಲಿ, ಯಾವುದನ್ನು ಡೌನ್ಲೋಡ್ ಮಾಡಬೇಕೆಂದು ತಿಳಿಯದಿದ್ದಲ್ಲಿ ನೀವು Recommended ಎಂಬ ಆವೃತ್ತಿಯನ್ನು ಡೌನ್ಲೋಡ್ ಮಾಡಿ.
02:29 ಪ್ರಸ್ತುತ, Drupal 8.1.3 ಎಂಬುದು Recommended ಆವೃತ್ತಿಯಾಗಿದೆ.
02:36 ಇದು ನೀವು ಅಭ್ಯಾಸ ಮಾಡುವಾಗ ಬದಲಾಗಬಹುದು.
02:39 ಬಲಗಡೆ ಇರುವ Download ಬಟನ್ ನ ಮೇಲೆ ಒತ್ತಿ.
02:43 ಒಂದು 'ಪಾಪ್-ಅಪ್ ವಿಂಡೊ' ಕಾಣಸಿಗುತ್ತದೆ. ಇದು ನಮಗೆ Bitnami ವೆಬ್ಸೈಟ್ ನಲ್ಲಿ ಒಂದು ಅಕೌಂಟ್ ಅನ್ನು ರಚಿಸಲು ಹೇಳುತ್ತದೆ.
02:50 ಸದ್ಯಕ್ಕೆ ನಾವು “No thanks” ನ ಮೇಲೆ ಒತ್ತೋಣ.
02:53 ತಕ್ಷಣ, installer ಎಂಬುದು ಡೌನ್ಲೋಡ್ ಆಗಲು ಶುರುವಾಗುತ್ತದೆ. ಫೈಲ್ ಅನ್ನು ಸೇವ್ ಮಾಡಲು 'OK' ಬಟನ್ ನ ಮೇಲೆ ಒತ್ತಿ.
03:01 ಈ ಕೆಳಗಿನ ಇನ್ಸ್ಟಾಲ್ ಮಾಡುವ ಹಂತಗಳು ವಿಂಡೋಸ್ ಹಾಗೂ ಉಬಂಟು ಇವೆರಡಕ್ಕೂ ಸಮಾನವಾಗಿದೆ.
03:07 ನಿಮ್ಮಲ್ಲಿ Bitnami installer ಫೈಲ್ ಗಳಿದ್ದರೆ ಡೌನ್ಲೋಡ್ ಗೆ ಬದಲಾಗಿ ಇದನ್ನು ಉಪಯೋಗಿಸಿ.
03:15 ಡೌನ್ಲೋಡ್ ಆಗಿರುವ 'installer' ಫೈಲನ್ನು ನೋಡಲು "Downloads" ಎಂಬ ಫೋಲ್ಡರ್ ಅನ್ನು ಓಪನ್ ಮಾಡಿ.
03:20 ಇದನ್ನು ರನ್ ಮಾಡಲು ನಮ್ಮಲ್ಲಿ admin access ಇರಬೇಕು.
03:25 ನೀವು ವಿಂಡೋಸ್ ಬಳಕೆದಾರರಾಗಿದ್ದರೆ, installer ಫೈಲ್ನ ಮೇಲೆ ರೈಟ್-ಕ್ಲಿಕ್ ಮಾಡಿ ಹಾಗೂ Run as administrator ಎಂಬ ವಿಕಲ್ಪವನ್ನು ಆಯ್ಕೆಮಾಡಿ.
03:33 ನೀವು Linux ಬಳಕೆದಾರರಾಗಿದ್ದರೆ, installer ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ Properties ಅನ್ನು ಆಯ್ಕೆ ಮಾಡಿ.
03:40 ನಂತರ Permissions ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಹಾಗೂ Allow executing file as program ಎಂಬ ಚೆಕ್-ಬಾಕ್ಸ್ ಅನ್ನು ಟಿಕ್ ಮಾಡಿ.
03:48 ಕ್ಲೋಸ್ ಮಾಡಲು, Close ಬಟನ್ ನ ಮೇಲೆ ಕ್ಲಿಕ್ ಮಾಡಿ.
03:52 ಈಗ, installer ಎಂಬ ಫೈಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
03:55 ಈಗ ಇನ್ಸ್ಟಾಲೇಷನ್ ಶುರುವಾಗುವುದು. Next ಬಟನ್ ನ ಮೇಲೆ ಕ್ಲಿಕ್ ಮಾಡಿ.
04:01 ಇಲ್ಲಿ ನಾವು ಇನ್ಸ್ಟಲ್ ಮಾಡಲು ಇಚ್ಛಿಸುವ ಕಂಪೋನೆಂಟ್ ಗಳನ್ನು ಆಯ್ಕೆ ಮಾಡಬಹುದು.
04:06 ಮೊದಲಿಗೆ ಪ್ರತಿಯೊಂದರ ಮೇಲೆ ಕ್ಲಿಕ್ ಮಾಡುವ ಮೂಲಕ ಅಲ್ಲಿ ಕಾಣಿಸುವ ಮಾಹಿತಿಗಳನ್ನು ಓದಿಕೊಳ್ಳಿ.
04:12 ನನಗೆ ಇಲ್ಲಿ ಆಯ್ಕೆಯಾಗಿರುವ ಎಲ್ಲಾ ಕಾಂಪೊನೆಂಟ್ ಗಳೂ ಬೇಕಾಗಿವೆ. ಈಗ Next ಬಟನ್ ನ ಮೇಲೆ ಕ್ಲಿಕ್ ಮಾಡಿ.
04:18 ಈ ವಿಂಡೊನಲ್ಲಿ ನಾವು Drupal ಅನ್ನು ಎಲ್ಲಿ ಇನ್ಸ್ಟಾಲ್ ಮಾಡಬೇಕೆಂದಿದ್ದೇವೆಯೋ ಆ ಫೋಲ್ಡರ್ ಅನ್ನು ಆಯ್ಕೆ ಮಾಡಬೇಕು.
04:24 ನಾನು ನನ್ನ Home ಫೋಲ್ಡರ್ ಅನ್ನು ಆಯ್ಕೆ ಮಾಡುವೆನು.
04:27 Windows ನಲ್ಲಿ ತಂತಾನೇ C colon ಅಥವಾ ಮುಖ್ಯವಾದ ಡ್ರೈವ್ ನಲ್ಲಿ ಇನ್ಸ್ಟಾಲ್ ಆಗುವುದು.
04:34 Next ಬಟನ್ ನ ಮೇಲೆ ಕ್ಲಿಕ್ ಮಾಡಿ.
04:36 ನಾವೀಗ Drupal admin account ಅನ್ನು ಆರಚಿಸೋಣ.
04:40 ನಾನು ನನ್ನ ಹೆಸರನ್ನು "Priya" ಎಂದು ಟೈಪ್ ಮಾಡುವೆನು. ಇದು ಅಪ್ಲಿಕೇಷನ್ ನಲ್ಲಿ ಪ್ರದರ್ಶಿತವಾಗುವುದು.
04:47 ಇಲ್ಲಿ ನೀವು ನಿಮ್ಮ ಹೆಸರನ್ನು ನಮೂದಿಸಿ.
04:50 Email Address ಎಂಬಲ್ಲಿ ನಾನು "priyaspoken@gmail.com" ಎಂದು ನಮೂದಿಸುವೆನು.
04:56 ನೀವು ದಯವಿಟ್ಟು ನಿಮ್ಮ ಈಮೈಲ್-ಐ ಡಿ ಯನ್ನು ನಮೂದಿಸಿ.
05:00 ನಂತರ, ನಾವು ನಮ್ಮ ಇಷ್ಟದ username ಹಾಗೂ password ಅನ್ನು ಅಡ್ಮಿನಿಸ್ಟ್ರೇಟರ್ ಗಾಗಿ ನೀಡಬೇಕಾಗುತ್ತದೆ.
05:07 Login user name ಎಂಬಲ್ಲಿ ನಾನು "admin" ಎಂದು ನಮೂದಿಸುವೆನು.
05:11 Password ಎಂಬಲ್ಲಿ ನಾನು ಪಾಸ್ವರ್ಡ್ ಅನ್ನು ನಮೂದಿಸುವೆನು. ದೃಢೀಕರಿಸಲು ಇನ್ನೊಮ್ಮೆ ಪಾಸ್ವರ್ಡ್ ಅನ್ನು ನಮೂದಿಸಿ.
05:17 ನೀವು ನಿಮಗಿಚ್ಛಿಸಿದ ಯಾವುದೇ ಲಾಗಿನ್ ಹೆಸರು ಹಾಗೂ ಪಾಸ್ವರ್ಡ್ ಗಳನ್ನು ನೀಡಬಹುದು.
05:22 Next ಬಟನ್ ನ ಮೇಲೆ ಕ್ಲಿಕ್ ಮಾಡಿ.
05:24 Linux ನಲ್ಲಿ, Apache ಯ ಡೀಫಾಲ್ಟ್ ಲಿಸ್ಟಿಂಗ್ ಪೋರ್ಟ್ 8080 ಆಗಿದ್ದು MySQL ನದ್ದು 3306 ಆಗಿದೆ.
05:34 Windows ನಲ್ಲಿ 80 ಹಾಗೂ 3306.
05:39 ಒಂದೊಮ್ಮೆ ಆ ಪೋರ್ಟ್ ಗಳು ಈಗಾಗಲೇ ಬೇರೊಂದು ಅಪ್ಲಿಕೇಶನ್ ನಲ್ಲಿ ಕ್ರಿಯಾಶೀಲವಾಗಿದ್ದರೆ, ಅದು ಪರ್ಯಾಯ ಪೋರ್ಟ್ ಗಳನ್ನು ಉಪಯೋಗಿಸಲು ನಿಮಗೆ ಸಲಹೆ ನೀಡುತ್ತದೆ.
05:47 ನಾನು ಈಗಾಗಲೇ MySQL ನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಹಾಗಾಗಿ ಇದು ಪರ್ಯಾಯ ಪೋರ್ಟ್ ಅನ್ನು ಉಪಯೋಗಿಸಲು ಹೇಳುತ್ತಿದೆ.
05:54 ನಾನು 3307 ಎಂದು ನಮೂದಿಸುತ್ತೇನೆ.
05:57 Next ಬಟನ್ ನ ಮೇಲೆ ಕ್ಲಿಕ್ ಮಾಡಿ.
05:59 ಈಗ ನಾವು ನಮ್ಮ Drupal site ಗೆ ಹೆಸರು ಕೊಡಬೇಕಾಗಿದೆ. ನಾನು Drupal 8 ಎಂದು ಹೆಸರಿಸುತ್ತೇನೆ.
06:06 ನೀವು ನಿಮ್ಮಿಷ್ಟದ ಯಾವುದೇ ಹೆಸರನ್ನೂ ಕೊಡಬಹುದು.
06:10 Next ಬಟನ್ ನ ಮೇಲೆ ಕ್ಲಿಕ್ ಮಾಡಿ.
06:12 ಇಲ್ಲಿ ಇದು Bitnami Cloud Hosting ಗಾಗಿ ಕೇಳುತ್ತದೆ. ಸದ್ಯಕ್ಕೆ ಇದು ನನಗೆ ಬೇಕಾಗಿಲ್ಲ.
06:19 ಹಾಗಾಗಿ, ಚೆಕ್-ಬಾಕ್ಸ್ ನ ಆಯ್ಕೆಯನ್ನು ರದ್ದುಗೊಳಿಸಿ.
06:23 ನಂತರ Next ಬಟನ್ ನ ಮೇಲೆ ಕ್ಲಿಕ್ ಮಾಡಿ.
06:26 ಈಗ Drupal ಇನ್ಸ್ಟಾಲ್ ಆಗಲು ಸಿದ್ಧವಾಗಿದೆ. Next ಬಟನ್ ನ ಮೇಲೆ ಕ್ಲಿಕ್ ಮಾಡಿ.
06:31 ಇನ್ಸ್ಟಾಲ್ ಆಗಲು ಕೆಲವು ನಿಮಿಷಗಳು ತೆಗೆದುಕೊಳ್ಳಬಹುದು.
06:36 ಒಮ್ಮೆ ಇನ್ಸ್ಟಾಲೇಶನ್ ಮುಗಿದ ಮೇಲೆ Launch Bitnami Drupal Stack ಎಂಬುದು ಆಯ್ಕೆಯಾಗಿದೆಯೇ ಎಂದು ಪರಿಶೀಲಿಸಿ.
06:43 ನಂತರ Finish ಬಟನ್ ನ ಮೇಲೆ ಕ್ಲಿಕ್ ಮಾಡಿ.
06:46 Bitnami Drupal Stack ಎಂಬ ಕಂಟ್ರೋಲ್ ವಿಂಡೊ ತಂತಾನೇ ಓಪನ್ ಆಗುವುದು.
06:51 ಚಾಲನೆಯಲ್ಲಿರುವ ಎಲ್ಲಾ ಸರ್ವರ್ ಗಳನ್ನು ನೋಡಲು Manage Servers ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
06:56 ಇಲ್ಲಿ ನಾವು MySQL Database ಹಾಗೂ Apache Web Server ಇವುಗಳು ಚಾಲನೆಯಲ್ಲಿರುವುದನ್ನು ನೋಡಬಹುದು.
07:02 ಗಮನಿಸಿ, 'ದ್ರುಪಲ್' ನಲ್ಲಿ ಕೆಲಸ ಮಾಡಲು MySQL, PostgreSQL (ಪೋಸ್ಟ್ ಗ್ರೆ ಎಸ್ ಕ್ಯೂ ಎಲ್) ಅಥವಾ Oracle (ಒರಾಕಲ್) ಗಳಂತಹ ಡೇಟಾಬೇಸ್ ಗಳ ಹಾಗೂ
07:11 Apache ಅಥವಾ Nginx. (ಎಂಜಿನೆಕ್ಸ್) ಗಳಂತಹ ವೆಬ್ ಬ್ರೌಸರ್ ಗಳ ಅಗತ್ಯವಿದೆ.
07:16 Bitnami Drupal Stack ಎಂಬುದರ ಜೊತೆಗೆ MySQL ಡೇಟಾಬೇಸ್ ಹಾಗೂ Apache ವೆಬ್ ಬ್ರೌಸರ್ ಗಳು ಪೂರ್ವನಿಯೋಜಿತವಾಗಿ ಇರುತ್ತವೆ.
07:23 ನಾವೀಗ 'ಕಂಟ್ರೋಲ್ ವಿಂಡೋ' ಗೆ ಮರಳಿ ಹೋಗೋಣ.
07:26 ನಾವು ಸರಿಯಾದ ಬಟನ್ ಗಳನ್ನು ಒತ್ತುವುದರ ಮೂಲಕ ಸರ್ವರ್ ಗಳನ್ನು ಸ್ಟಾರ್ಟ್, ಸ್ಟಾಪ್, ರಿ-ಸ್ಟಾರ್ಟ್ ಮುಂತಾದವುಗಳನ್ನು ಮಾಡಬಹುದು.
07:33 ನಾವೀಗ Welcome ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
07:36 Drupal ಅನ್ನು ಸ್ಟಾರ್ಟ್ ಮಾಡಲು, ಬಲಗಡೆ ಇರುವ Go to Application ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
07:42 ಬ್ರೌಸರ್ ತಂತಾನೇ bitnami ಎಂಬ ಪೇಜ್ ನೊಂದಿಗೆ ಓಪನ್ ಆಗುವುದು.
07:46 ಈಗ, Access Drupal ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ನಾವು Drupal ನ ವೆಬ್ ಸೈಟ್ ಗೆ ಮರಳಿ ಹೋಗುತ್ತೇವೆ.
07:54 ಗಮನಿಸಿ, ವೆಬ್ಸೈಟ್ ನ ಹೆಸರು Drupal 8 ಎಂದಾಗಿದೆ.
07:58 ವೆಬ್ಸೈಟ್ ಗೆ ಲಾಗಿನ್ ಆಗಲು, ಬಲ ಮೂಲೆಯಲ್ಲಿರುವ Log in ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
08:03 ಇಲ್ಲಿ ನೀವು ಈಮೊದಲು ರಚಿಸಿದ user name ಮತ್ತು password ಗಳನ್ನು ನಮೂದಿಸಿ.
08:11 ಈಗ, Login ಬಟನ್ ನ ಮೇಲೆ ಕ್ಲಿಕ್ ಮಾಡಿ.
08:14 ಅಡ್ರೆಸ್ ಬಾರ್ ನಲ್ಲಿ ನಾವು ನಮ್ಮ ವೆಬ್ಸೈಟ್ ನ ವೆಬ್ ಅಡ್ರೆಸ್ಸ್ ಅನ್ನು ನೋಡಬಹುದು- http://localhost:8080/drupal/user/1.
08:27 ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು /user/1. ಎಂಬುದರ ಬಗ್ಗೆ ಕಲಿಯೋಣ.
08:32 localhost ನ ಬದಲಾಗಿ ಕೆಲವೊಮ್ಮೆ ನಿಮ್ಮ ಸಿಸ್ಟಮ್ ಕನ್ಫಿಗರೇಶನ್ ಗೆ ಅನುಗುಣವಾಗಿ 127.0.0.1 ಎಂದೂ ತೋರಿಸಬಹುದು.
08:42 ಮುಂದಿನ ಸಲದಿಂದ Apache ಎಂಬುದು port 80 ರಲ್ಲಿ ಲಿಸ್ಟಿಂಗ್ ಆಗಿದ್ದರೆ 'ದ್ರುಪಲ್' ಅನ್ನು localhost colon 8080 slash drupal ಅಥವಾ localhost slash drupal ಎಂಬ ವೆಬ್ ಅಡ್ರೆಸ್ಸ್ ನ ಮೂಲಕ ನೋಡಬಹುದು.
08:57 ನಂತರ, ನಾವು Bitnami Drupal Stack ಕಂಟ್ರೋಲ್-ವಿಂಡೊ ಅನ್ನು ಹೇಗೆ ಆಕ್ಸಸ್ ಮಾಡಬೇಕೆಂದು ನೋಡೋಣ.
09:03 ನೀವು Linux ಬಳಕೆದಾರರಾಗಿದ್ದರೆ, ದಯವಿಟ್ಟು ಈ ಹಂತಗಳನ್ನು ಅನುಸರಿಸಿ.
09:07 File browser ಗೆ ಹೋಗಿ.
09:10 ಅಲ್ಲಿ ಎಡಬದಿಯ ಬಾರ್ ನಲ್ಲಿ Places ನ ಅಡಿಯಲ್ಲಿರುವ Home ಮೇಲೆ ಕ್ಲಿಕ್ ಮಾಡಿ.
09:15 ಈಗ, ಸೂಚಿಯಲ್ಲಿರುವ drupal hyphen 8.1.3 hyphen 0 folder ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
09:23 ಇಲ್ಲಿ ನಿಮಗೆ manager hyphen linux hyphen x64.run ಎಂಬ ಫೈಲ್ ಸಿಗುತ್ತದೆ. ಅದನ್ನು ಓಪನ್ ಮಾಡಲು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
09:33 ನೀವು ವಿಂಡೋಸ್ ಬಳಕೆದಾರರಾಗಿದ್ದಲ್ಲಿ, ಕ್ರಮವಾಗಿ Start Menu -> All Programs -> Bitnami Drupal Stack -> Bitnami Drupal Stack Manager Tool ಎಂಬಲ್ಲಿಗೆ ಹೋಗಿ.
09:44 Bitnami Drupal Stack ಎಂಬ ಕಂಟ್ರೋಲ್ ವಿಂಡೊ ತೆರೆದುಕೊಳ್ಳುತ್ತದೆ.
09:48 ಪ್ರತಿ ಬಾರಿಯೂ ನೀವು 'ದ್ರುಪಲ್' ಅನ್ನು ಓಪನ್ ಮಾಡಿದಾಗ, ದಯವಿಟ್ಟು ಎಲ್ಲಾ ಸರ್ವರ್ ಗಳೂ ಚಾಲನೆಯಲ್ಲಿವೆಯೇ ಎಂದು ಪರಿಶೀಲಿಸಿ.
09:54 ಹೀಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:57 ಒಟ್ಟಿನಲ್ಲಿ ನಾವು ಈ ಟ್ಯುಟೋರಿಯಲ್ ನಲ್ಲಿ 'ದ್ರುಪಲ್' ಅನ್ನು Ubuntu Linux ಹಾಗೂ Windows ನಲ್ಲಿ ಹೇಗೆ ಇನ್ಸ್ಟಾಲ್ ಮಾಡಬೇಕೆಂಬುದನ್ನು ತಿಳಿದೆವು.
10:07 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
10:14 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
10:25 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
10:36 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal