Difference between revisions of "Git/C2/Stashing-and-Cleaning/Kannada"

From Script | Spoken-Tutorial
Jump to: navigation, search
 
Line 354: Line 354:
 
|-
 
|-
 
| 12:01
 
| 12:01
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
+
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
 
ವಂದನೆಗಳು.
 
ವಂದನೆಗಳು.
 
|}
 
|}

Latest revision as of 09:34, 13 September 2017

Time
Narration
00:01 Git ನಲ್ಲಿ Stashing and Cleaning (ಸ್ಟ್ಯಾಶಿಂಗ್ ಆಂಡ್ ಕ್ಲೀನಿಂಗ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ‘ಸ್ಟ್ಯಾಶಿಂಗ್’ ನ ಬಗ್ಗೆ ಕಲಿಯುವೆವು.
00:11 ನಾವು ‘ಸ್ಟ್ಯಾಶ್’ಅನ್ನು:
  • ಹೇಗೆ ಕ್ರಿಯೇಟ್ ಮಾಡುವುದು
  • ಹೇಗೆ ಅನ್ವಯಿಸುವುದು ಹಾಗೂ
  • ಹೇಗೆ ತೆಗೆದುಹಾಕುವುದು ಇವುಗಳನ್ನು ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • Ubuntu Linux (ಉಬಂಟು ಲಿನಕ್ಸ್) 14.04
  • Git (ಗಿಟ್) 2.3.2 ಹಾಗೂ
  • gedit Text Editor ಇವುಗಳನ್ನು ಬಳಸುತ್ತಿದ್ದೇನೆ.
00:32 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
00:36 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ 'ಗಿಟ್ ಕಮಾಂಡ್' ಗಳ ಮತ್ತು ಗಿಟ್ ನಲ್ಲಿ 'ಬ್ರಾಂಚಿಂಗ್' ನ ಪರಿಚಯ ಇರಬೇಕು.
00:43 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:48 ನಾವು ‘ಸ್ಟ್ಯಾಶಿಂಗ್’ ನ ಬಗ್ಗೆ ತಿಳಿದುಕೊಳ್ಳೋಣ.
00:51 ಒಂದು ಬ್ರಾಂಚ್ ನ ತಾತ್ಕಾಲಿಕ ಬದಲಾವಣೆಗಳನ್ನು ಸೇವ್ ಮಾಡಲು, ‘ಸ್ಟ್ಯಾಶಿಂಗ್’ ಅನ್ನು ಬಳಸಲಾಗುತ್ತದೆ.
00:57 ಬ್ರಾಂಚ್ ಗಳನ್ನು ಬದಲಾಯಿಸುವಾಗ ಈಗಿನ ಕೆಲಸವನ್ನು ಕಮಿಟ್ ಮಾಡದೇ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇದು ಸಹಾಯಮಾಡುತ್ತದೆ.
01:04 ತಾತ್ಕಾಲಿಕ ಬದಲಾವಣೆಗಳ ‘ಸ್ಟ್ಯಾಶ್’ ಅನ್ನು ಯಾವುದೇ ಸಮಯದಲ್ಲಿ ರಿವೋಕ್ ಮಾಡಬಹುದು.
01:08 ನಾವು ‘ಸ್ಟ್ಯಾಶ್’ ಎಂಬ ಶಬ್ದವನ್ನು ಈ ಟ್ಯುಟೊರಿಯಲ್ ನ ಸರಣಿಯಲ್ಲಿ ಹಿಂದೆಯೇ ನೋಡಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಿ.
01:16 ಈಗ, ಇದನ್ನು ಹೆಚ್ಚು ವಿವರವಾಗಿ ತಿಳಿದುಕೊಳ್ಳೋಣ.
01:20 ಟರ್ಮಿನಲ್ ಅನ್ನು ಓಪನ್ ಮಾಡಿ ನಾವು ಆರಂಭಿಸೋಣ.
01:25 ನಾವು ಮೊದಲೇ ಕ್ರಿಯೇಟ್ ಮಾಡಿದ 'mywebpage' ಎಂಬ ನಮ್ಮ ಗಿಟ್ ರಿಪಾಸಿಟರಿಯನ್ನು ತೆರೆಯುವೆವು.
01:30 ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ.
01:35 ಪ್ರದರ್ಶಿಸಲಿಕ್ಕಾಗಿ ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. ನೀವು ನಿಮಗಿಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು.
01:44 ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡನ್ನು ಟೈಪ್ ಮಾಡಿದ ಮೇಲೆ 'Enter' ಕೀಯನ್ನು ಒತ್ತಲು ದಯವಿಟ್ಟು ನೆನೆಪಿಡಿ.
01:52 ಮೊದಲು, ನಾವು 'git space branch' ಎಂದು ಟೈಪ್ ಮಾಡಿ 'ಬ್ರಾಂಚ್ ಲಿಸ್ಟ್' ಅನ್ನು ಪರಿಶೀಲಿಸುವೆವು.
01:58 ನಾನು 'chapter-three' (ಚಾಪ್ಟರ್-ಥ್ರೀ) ಎಂಬ ಹೆಸರಿನ ಒಂದು ಬ್ರಾಂಚ್ ಅನ್ನು ಈಗಾಗಲೇ ಕ್ರಿಯೇಟ್ ಮಾಡಿದ್ದೇನೆ.
02:03 ಪ್ರದರ್ಶನದ ಉದ್ದೇಶದಿಂದ ಅದರಲ್ಲಿ ಒಂದು 'ಕಮಿಟ್' ಅನ್ನು ಮಾಡಿದ್ದೇನೆ.
02:08 ನೀವು ಸಹ ಒಂದು ಹೊಸ ಬ್ರಾಂಚ್ ಅನ್ನು ಕ್ರಿಯೇಟ್ ಮಾಡಿ ಅದರಲ್ಲಿ ಒಂದು 'ಕಮಿಟ್' ಮಾಡುವುದನ್ನು ಖಚಿತಪಡಿಸಿಕೊಳ್ಳಿ.
02:15 ನಾವು 'git space checkout space chapter-three' ಎಂದು ಟೈಪ್ ಮಾಡಿ, 'ಚಾಪ್ಟರ್-ಥ್ರೀ' ಬ್ರಾಂಚ್ ನಲ್ಲಿ ಒಳಗೆ ಹೋಗುವೆವು.
02:23 ನಾವು 'ಗಿಟ್-ಲಾಗ್' ಅನ್ನು ಪರಿಶೀಲಿಸೋಣ.
02:26 ಇದು ಪ್ರದರ್ಶನಕ್ಕಾಗಿ 'ಚಾಪ್ಟರ್-ಥ್ರೀ' ಬ್ರಾಂಚ್ ನಲ್ಲಿ ನಾನು ಮಾಡಿದ್ದ 'ಕಮಿಟ್' ಆಗಿದೆ.
02:31 ನಾವು “ls” ಎಂದು ಟೈಪ್ ಮಾಡಿ, ಫೋಲ್ಡರ್ ನಲ್ಲಿರುವುದನ್ನು ಪರಿಶೀಲಿಸೋಣ.
02:35 ನೀವು 'Windows' ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತಿದ್ದರೆ, “ls” ಕಮಾಂಡ್ ಗೆ ಬದಲಾಗಿ “dir” ಎಂಬ ಕಮಾಂಡ್ ಅನ್ನು ಬಳಸಿ.
02:43 ಇಲ್ಲಿ ಮೂರು 'html' ಫೈಲ್ ಗಳಿರುವುದನ್ನು ಗಮನಿಸಿ.
02:47 ಈಗ, ನಾವು 'mypage.html' ಫೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವೆವು.
02:53 ನಾವು 'gedit space mypage.html space ampersand' ಎಂದು ಟೈಪ್ ಮಾಡಿ 'mypage.html' ಎಂಬ ಫೈಲನ್ನು ತೆರೆಯೋಣ.
03:03 ಈ ಮೊದಲೇ ನಾನು ಸೇವ್ ಮಾಡಿದ ನನ್ನ 'Writer' ಡಾಕ್ಯೂಮೆಂಟ್ ನಿಂದ ಕೆಲವು ಸಾಲುಗಳನ್ನು ಈ ಫೈಲ್ ನಲ್ಲಿ ನಾನು ಕಾಪಿ ಮತ್ತು ಪೇಸ್ಟ್ ಮಾಡುವೆನು.
03:11 ಆಮೇಲೆ ಫೈಲನ್ನು ಸೇವ್ ಮಾಡಿ ಕ್ಲೋಸ್ ಮಾಡುತ್ತೇನೆ.
03:14 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸಲು, ಹೀಗೆ ಟೈಪ್ ಮಾಡಿ: 'git space status'.
03:19 ನಮ್ಮ ಬದಲಾವಣೆಗಳನ್ನು ಇದುವರೆಗೂ ಸ್ಟೇಜ್ ಮಾಡಲಾಗಿಲ್ಲ ಎಂದು ನಾವು ತಿಳಿದುಕೊಳ್ಳಬಹುದು.
03:24 ನಾವು ಒಂದು ದೊಡ್ಡ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುವಾಗ, ಬ್ರಾಂಚ್ ಗಳನ್ನು ಮತ್ತೆ ಮತ್ತೆ ಬದಲಾಯಿಸಬೇಕಾಗಬಹುದು.
03:30 ಈಗ, ಬೇರೆ ಯಾವುದೋ ಕೆಲಸ ಮಾಡಲು ನಮಗೆ ನಮ್ಮ 'master' ಬ್ರಾಂಚ್ ಗೆ ಹಿಂದಿರುಗಬೇಕಾಗಿದೆ ಎಂದುಕೊಳ್ಳಿ.
03:37 ಹೀಗೆ ಟೈಪ್ ಮಾಡಿ: 'git space checkout space master'.
03:41 ಬದಲಾವಣೆಗಳನ್ನು ಕಮಿಟ್ ಮಾಡದೇ, ನಾವು ಬೇರೆ ಬ್ರಾಂಚ್ ಗಳಿಗೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಈ ಎರರ್ ತೋರಿಸುತ್ತದೆ.
03:48 ನನ್ನ ಕೆಲಸವು ಕೇವಲ ಅರ್ಧ ಮುಗಿದಿರುವುದರಿಂದ ನನಗೆ ಈಗಲೇ ಬದಲಾವಣೆಗಳನ್ನು 'ಕಮಿಟ್' ಮಾಡುವದು ಬೇಕಾಗಿಲ್ಲ.
03:55 ಒಂದುವೇಳೆ, 'hyphen hyphen force' ಫ್ಲ್ಯಾಗನ್ನು ಬಳಸಿ ನಾವು ಈ ಬ್ರಾಂಚ್ ನಿಂದ ಬಲವಂತವಾಗಿ ಹೊರಬಂದರೆ, ಬದಲಾವಣೆಗಳನ್ನು ತ್ಯಜಿಸಲಾಗುವುದು.
04:04 ಒಂದುವೇಳೆ, ನನಗೆ ಬದಲಾವಣೆಗಳನ್ನು ತಾತ್ಕಾಲಿಕವಾಗಿ ಸೇವ್ ಮಾಡಬೇಕಾಗಿದ್ದರೆ? ‘ಸ್ಟ್ಯಾಶಿಂಗ್’ಅನ್ನು ಬಳಸಿ ಇದನ್ನು ಮಾಡಲಾಗುವುದು.
04:11 'git space stash space save space' ಡಬಲ್ ಕೋಟ್ಸ್ ನಲ್ಲಿ “Stashed mypage.html” ಎಂದು ಟೈಪ್ ಮಾಡಿ ನಾವು ಬದಲಾವಣೆಗಳನ್ನು ತಾತ್ಕಾಲಿಕವಾಗಿ ಸೇವ್ ಮಾಡಬಹುದು.
04:24 ಇಲ್ಲಿ, “Stashed mypage.html”-ಇದು, ನಾನು ಕೊಟ್ಟಿರುವ ‘ಸ್ಟ್ಯಾಶ್’ ನ ಹೆಸರು ಆಗಿದೆ. ನೀವು ನಿಮ್ಮ ಆಯ್ಕೆಯ ಹೆಸರನ್ನು ಕೊಡಬಹುದು.
04:34 ಟರ್ಮಿನಲ್ ನ ಮೇಲೆ, ‘ಸ್ಟ್ಯಾಶ್’ ಅನ್ನು ಕ್ರಿಯೇಟ್ ಮಾಡಿರುವಲ್ಲಿ, ‘ಸ್ಟ್ಯಾಶ್’ ನ ಹೆಸರು ಹಾಗೂ ಬ್ರಾಂಚ್ ನ ಹೆಸರುಗಳನ್ನು ತೋರಿಸಲಾಗುವುದು.
04:42 ನಾವು 'git space status' ಎಂದು ಟೈಪ್ ಮಾಡಿ, 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸುವೆವು. “nothing to commit” ಎಂಬ ಮೆಸೇಜನ್ನು ನೀವು ನೋಡಬಹುದು.
04:51 ಆದ್ದರಿಂದ, ನಾವು ಈಗ ಬ್ರಾಂಚ್ ಗಳನ್ನು ಬದಲಾಯಿಸಬಹುದು.
04:55 ಈಗ, ನಾವು 'master' ಬ್ರಾಂಚ್ ನ ಒಳಗೆ ಹೋಗಲು ಪ್ರಯತ್ನಿಸೋಣ. 'git space checkout space master' ಎಂದು ಟೈಪ್ ಮಾಡಿ.
05:03 ಗಮನಿಸಿ: ‘ಸ್ಟ್ಯಾಶಿಂಗ್’ ನ ನಂತರ ನಾವು ಬೇರೆ ಬ್ರಾಂಚ್ ಗಳಿಗೆ ಬದಲಾಯಿಸಬಹುದು.
05:07 ಇನ್ನುಮುಂದೆ ‘ಸ್ಟ್ಯಾಶಿಂಗ್’ ನ ಇನ್ನೊಂದು ವಿಧಾನವನ್ನು ನಾವು ನೋಡೋಣ.
05:11 ಇದಕ್ಕಾಗಿ, 'git space checkout space chapter-three' ಎಂದು ಟೈಪ್ ಮಾಡಿ, ಮತ್ತೊಮ್ಮೆ ನಾನು 'ಚಾಪ್ಟರ್-ಥ್ರೀ' ಬ್ರಾಂಚ್ ಗೆ ಹೋಗುವೆನು.
05:20 ಈಗ, ನಾನು 'history.html' ಫೈಲನ್ನು ಎಡಿಟ್ ಮಾಡುವೆನು. ಹೀಗೆ ಟೈಪ್ ಮಾಡಿ: ' gedit space history.html space ampersand'.
05:31 ನನ್ನ 'Writer' ಡಾಕ್ಯೂಮೆಂಟ್ ನಿಂದ ಇಲ್ಲಿ ಕೆಲವು ಸಾಲುಗಳನ್ನು ನಾನು ಸೇರಿಸುವೆನು.
05:35 ಆಮೇಲೆ ಸೇವ್ ಮಾಡಿ, ಫೈಲನ್ನು ಮುಚ್ಚುತ್ತೇನೆ.
05:38 'git space status' ಎಂದು ಟೈಪ್ ಮಾಡಿ, ನಾವು 'ಗಿಟ್ ಸ್ಟ್ಯಾಟಸ್' ಅನ್ನು. ಪರಿಶೀಲಿಸೋಣ.
05:44 ಉದಾಹರಣೆಗೆ, ‘ಸ್ಟ್ಯಾಶ್’ ನಲ್ಲಿ ನನಗೆ ಈ ಬದಲಾವಣೆಗಳನ್ನು ಬೇರೊಂದು ರೀತಿಯಲ್ಲಿ ಸೇವ್ ಮಾಡಬೇಕಾಗಿದೆ ಎಂದುಕೊಳ್ಳಿ. ಹೀಗೆ ಟೈಪ್ ಮಾಡಿ: ' git space stash'.
05:54 ಗಮನಿಸಿ: ಇಲ್ಲಿ ನಾವು ‘ಸ್ಟ್ಯಾಶ್’ ನ ಹೆಸರನ್ನು ಕೊಟ್ಟಿಲ್ಲ.
05:58 ಒಂದುವೇಳೆ ‘ಸ್ಟ್ಯಾಶ್’ ನ ಹೆಸರನ್ನು ನಾವು ಕೊಡದಿದ್ದರೆ, ‘ಸ್ಟ್ಯಾಶ್’ ಅನ್ನು ಇತ್ತೀಚಿನ 'ಕಮಿಟ್' ನ ಹೆಸರಿನಲ್ಲಿ ಸೇವ್ ಮಾಡಲಾಗುವುದು.
06:04 ನಂತರ, ‘ಸ್ಟ್ಯಾಶ್’ ನ ಹೆಸರು ಮತ್ತು ಇತ್ತೀಚಿನ 'ಕಮಿಟ್' ಒಂದೇ ಆಗಿವೆಯೇ ಎಂಬುದನ್ನು ನಾವು ಪರಿಶೀಲಿಸುವೆವು.
06:10 ನಾವು ಮೊದಲು 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ.
06:14 ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space stash space list'.
06:20 ಕೊನೆಯ 'ಕಮಿಟ್' ಹಾಗೂ ಇತ್ತೀಚಿನ ‘ಸ್ಟ್ಯಾಶ್’ ಗಳ ಹೆಸರು ಒಂದೇ ಆಗಿರುವುದನ್ನು ನೀವು ನೋಡಬಹುದು.
06:25 ಇತ್ತೀಚಿನ ‘ಸ್ಟ್ಯಾಶ್’ ಅನ್ನು ಎಲ್ಲಕ್ಕಿಂತ ಮೊದಲು ಪಟ್ಟಿಮಾಡಿರುವುದನ್ನು ಗಮನಿಸಿ. ಇದರ ಅರ್ಥ- ‘ಸ್ಟ್ಯಾಶ್’ ಗಳು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಲ್ಪಟ್ಟಿವೆ.
06:35 ಇದು ‘ಸ್ಟ್ಯಾಶ್ ಐ ಡಿ’, ತನ್ನಷ್ಟಕ್ಕೆ ತಾನೇ ರಚಿತವಾಗಿದೆ.
06:40 ಪ್ರದರ್ಶಿಸುವ ಉದ್ದೇಶದಿಂದ ನಾನು ಇನ್ನೊಂದು ‘ಸ್ಟ್ಯಾಶ್’ ಅನ್ನು ಕ್ರಿಯೇಟ್ ಮಾಡುವೆನು.
06:45 ಇದಕ್ಕಾಗಿ, ನಾನು 'story.html' ಫೈಲನ್ನು ಎಡಿಟ್ ಮಾಡುವೆನು. ಹೀಗೆ ಟೈಪ್ ಮಾಡಿ: ' gedit space story.html space ampersand'.
06:55 ನಾನು 'story.html' ಫೈಲ್ ನಲ್ಲಿ ಕೆಲವು ಸಾಲುಗಳನ್ನು ಸೇರಿಸುವೆನು.
07:00 ಆಮೇಲೆ ಸೇವ್ ಮಾಡಿ, ಫೈಲನ್ನು ಮುಚ್ಚುತ್ತೇನೆ.
07:03 ಈಗ ನಾನು, ಒಂದು ‘ಸ್ಟ್ಯಾಶ್’ ನಲ್ಲಿ ಬದಲಾವಣೆಗಳನ್ನು ಸೇವ್ ಮಾಡುವೆನು.
07:07 ಹೀಗೆ ಟೈಪ್ ಮಾಡಿ: 'git space stash space save space' ಡಬಲ್ ಕೋಟ್ಸ್ ನಲ್ಲಿ “Stashed story.html”.
07:17 ನಾವು 'git space stash space list' ಎಂದು ಟೈಪ್ ಮಾಡಿ, ‘ಸ್ಟ್ಯಾಶ್’ ಲಿಸ್ಟ್ ಅನ್ನು ಪರಿಶೀಲಿಸೋಣ.
07:24 ಈಗ 'ಚಾಪ್ಟರ್-ಥ್ರೀ' ಬ್ರಾಂಚ್ ನಲ್ಲಿ, ನಮ್ಮ ಹತ್ತಿರ ಮೂರು ‘ಸ್ಟ್ಯಾಶ್’ ಗಳಿರುವುದನ್ನು ನಾವು ನೋಡಬಹುದು.
07:30 ಕೆಲವು ಸಂದರ್ಭಗಳಲ್ಲಿ, ‘ಸ್ಟ್ಯಾಶ್’ ಗಳಲ್ಲಿ ಯಾವ ಬದಲಾವಣೆಗಳನ್ನು ನಾವು ಸೇವ್ ಮಾಡಿದ್ದೇವೆ ಎನ್ನುವುದನ್ನು ನಾವು ಮರೆತುಬಿಡಬಹುದು.
07:36 ಇದನ್ನು ಹೇಗೆ ಪರಿಶೀಲಿಸುವುದೆಂದು ನಾವು ನೋಡೋಣ.
07:40 ಉದಾಹರಣೆಗೆ, ನನಗೆ 'stash@{0}' ನ ವಿವರಗಳನ್ನು ನೋಡಬೇಕಾಗಿದೆ ಎಂದುಕೊಳ್ಳಿ.
07:45 ಆದ್ದರಿಂದ, ಹೀಗೆ ಟೈಪ್ ಮಾಡಿ: 'git space diff space stash' @ (ಆಟ್ ದ ರೇಟ್ ಚಿಹ್ನೆ) ಕರ್ಲಿ ಬ್ರಾಕೆಟ್ಸ್ ನಲ್ಲಿ 'zero'.
07:54 'story.html' ದ ಬದಲಾವಣೆಗಳನ್ನು ನಾವು ನೋಡಬಹುದು. 'stash@{0}' ನಲ್ಲಿ ಇದನ್ನೇ ನಾವು ಸೇವ್ ಮಾಡಿದ್ದೆವು.
08:01 ಆಮೇಲೆ, ‘ಸ್ಟ್ಯಾಶ್’ ಮಾಡಲಾದ ಫೈಲ್ ಗಳ ಮೇಲೆ ಕೆಲಸ ಮಾಡುವುದನ್ನು ನಾವು ಮುಂದುವರೆಸುವೆವು.
08:06 ಅದಕ್ಕಾಗಿ, ಮೊದಲು ನಾವು ‘ಸ್ಟ್ಯಾಶ್’ ಗಳನ್ನು ಅನ್ವಯಿಸಬೇಕು.
08:10 ‘ಸ್ಟ್ಯಾಶ್’ ಲಿಸ್ಟ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space stash space list'.
08:17 ಉದಾಹರಣೆಗೆ, ಈಗ ನಾವು 'stash@{1}' ಅನ್ನು ಅನ್ವಯಿಸುವೆವು.
08:21 ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: 'git space stash space apply space stash @' ( 'ಆಟ್ ದ ರೇಟ್ ಚಿಹ್ನೆ' ) ಕರ್ಲಿ ಬ್ರಾಕೆಟ್ಸ್ ನಲ್ಲಿ 'one'.
08:33 ‘ಸ್ಟ್ಯಾಶ್ id’ ಯನ್ನು ನೀವು ಉಲ್ಲೇಖಿಸದಿದ್ದರೆ, ಇತ್ತೀಚಿನ ‘ಸ್ಟ್ಯಾಶ್’, ಅರ್ಥಾತ್, ' stash@{0}' ಅನ್ನು ಅನ್ವಯಿಸಲಾಗುವುದು.
08:40 ನಮ್ಮ ‘ಸ್ಟ್ಯಾಶ್’ ಅನ್ನು ಯಶಸ್ವಿಯಾಗಿ ಅನ್ವಯಿಸಲಾಗಿದೆ ಎಂದು ನೀವು ನೋಡಬಹುದು.
08:44 'git space stash space list' ಎಂದು ಟೈಪ್ ಮಾಡಿ, ನಾವು ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸೋಣ.
08:51 'stash@{1}' ಇನ್ನೂ ಲಿಸ್ಟ್ ನಲ್ಲಿರುವುದನ್ನು ನಾವು ನೋಡಬಹುದು ಮತ್ತು ಮುಂದೆ ಇದು ಗೊಂದಲಕ್ಕೆ ದಾರಿಯಾಗಬಹುದು.
08:58 ಆದ್ದರಿಂದ, ಒಂದು ‘ಸ್ಟ್ಯಾಶ್’ ಅನ್ನು ಅನ್ವಯಿಸಿದ ನಂತರ, ಅದನ್ನು ನಮ್ಮ ಕೈಯಾರೆ ಡಿಲೀಟ್ ಮಾಡುವುದು ಒಳ್ಳೆಯದು.
09:03 'stash@{1}' ಅನ್ನು ತೆಗೆದುಹಾಕಲು, ಹೀಗೆ ಟೈಪ್ ಮಾಡಿ: 'git space stash space drop space stash@' (ಆಟ್ ದ ರೇಟ್ ಚಿಹ್ನೆ) ಕರ್ಲಿ ಬ್ರಾಕೆಟ್ಸ್ ನಲ್ಲಿ 'one'.
09:16 ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space stash space list'.
09:22 ನಮ್ಮ 'stash@{1}' ಅನ್ನು ತೆಗೆದುಹಾಕಲಾಗಿದೆ ಮತ್ತು 'stash@{2}', 'stash@{1}' ಆಗಿದೆ ಎಂದು ನಾವು ನೋಡಬಹುದು.
09:30 ಈಗ, ‘ಸ್ಟ್ಯಾಶ್’ ಅನ್ನು ಬೇರೊಂದು ರೀತಿಯಲ್ಲಿ ಅನ್ವಯಿಸಲು ನಾವು ಕಲಿಯುವೆವು. ಹೀಗೆ ಟೈಪ್ ಮಾಡಿ: 'git space stash space pop'.
09:39 ನಮ್ಮ 'stash@{0}' ಅನ್ನು ಅನ್ವಯಿಸಲಾಗಿದೆ ಎಂದು ನಾವು ನೋಡಬಹುದು.
09:43 ಆದ್ದರಿಂದ, ನಾವು 'stash pop' ಕಮಾಂಡ್ ಅನ್ನು ಬಳಸಿದರೆ, ಇತ್ತೀಚಿನ ‘ಸ್ಟ್ಯಾಶ್’, ಅರ್ಥಾತ್ ' stash@{0}' ಅನ್ನು ಅನ್ವಯಿಸಲಾಗುವುದು.
09:52 ಮತ್ತೊಮ್ಮೆ, ನಾವು 'git space stash space list' ಎಂದು ಟೈಪ್ ಮಾಡಿ, ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸುವೆವು.
09:59 ಈಗ, 'stash@{0}' ಅನ್ನು ತೆಗೆದುಹಾಕಲಾಗಿದೆ ಮತ್ತು 'stash@{1}' ಇದು ' stash@{0}' ಆಗಿದೆ ಎಂದು ನಾವು ನೋಡಬಹುದು.
10:07 ಹೀಗಾಗಿ, 'stash pop' ಕಮಾಂಡ್, 'stash@{0}' ಅನ್ನು ಅನ್ವಯಿಸುವುದು ಮತ್ತು ಅದನ್ನು ತನ್ನಿಂದ ತಾನೇ ಡಿಲೀಟ್ ಮಾಡುವುದು.
10:15 ನಂತರ ಎಲ್ಲ ‘ಸ್ಟ್ಯಾಶ್’ ಗಳನ್ನು ಒಟ್ಟಿಗೇ ತೆಗೆದುಹಾಕುವ ರೀತಿಯನ್ನು ನಾವು ಕಲಿಯುವೆವು.
10:20 ಎಲ್ಲ ‘ಸ್ಟ್ಯಾಶ್’ ಗಳನ್ನು ನಮ್ಮ ರಿಪಾಸಿಟರಿಯಿಂದ ಡಿಲೀಟ್ ಮಾಡಲು, ಹೀಗೆ ಟೈಪ್ ಮಾಡಿ: 'git space stash space clear'.
10:28 ಮತ್ತೊಮ್ಮೆ, 'git space stash space list' ಎಂದು ಟೈಪ್ ಮಾಡಿ ನಾವು ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸುವೆವು.
10:36 ನಮ್ಮ ‘ಸ್ಟ್ಯಾಶ್ ಲಿಸ್ಟ್’ ಈಗ ಖಾಲಿಯಾಗಿರುವುದನ್ನು ನಾವು ನೋಡಬಹುದು.
10:40 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
10:44 ಸಂಕ್ಷಿಪ್ತವಾಗಿ,
10:46 ಈ ಟ್ಯುಟೋರಿಯಲ್ ನಲ್ಲಿ, ನಾವು ‘ಸ್ಟ್ಯಾಶಿಂಗ್’ ನ ಬಗ್ಗೆ ಕಲಿತಿದ್ದೇವೆ.
10:51 ನಾವು:
  • ‘ಸ್ಟ್ಯಾಶ್’ ಅನ್ನು ಕ್ರಿಯೇಟ್ ಮಾಡಲು
  • ‘ಸ್ಟ್ಯಾಶ್’ ಅನ್ನು ಅನ್ವಯಿಸಲು ಹಾಗೂ
  • ‘ಸ್ಟ್ಯಾಶ್’ ಅನ್ನು ತೆಗೆದುಹಾಕಲು ಸಹ ಕಲಿತಿದ್ದೇವೆ.
10:58 ಒಂದು ಅಸೈನ್ಮೆಂಟ್- ನಿಮ್ಮ ರಿಪಾಸಿಟರಿಯಲ್ಲಿ ಮೂರು ‘ಸ್ಟ್ಯಾಶ್’ ಗಳನ್ನು ಕ್ರಿಯೇಟ್ ಮಾಡಿ.
11:03 'git stash show' ಕಮಾಂಡ್ ನ ಬಗ್ಗೆ ತಿಳಿದುಕೊಳ್ಳಿ.
11:07 'git stash show' ಹಾಗೂ 'git stash show stash@{1}' ಕಮಾಂಡ್ ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ.
11:14 ಇತ್ತೀಚಿನ 'ಸ್ಟ್ಯಾಶ್' ಅನ್ನು ಅನ್ವಯಿಸಿ. ('git stash pop' ಅನ್ನು ಬಳಸಿ)
11:21 ಮತ್ತು ರಿಪಾಸಿಟರಿಯಿಂದ ಎಲ್ಲ ‘ಸ್ಟ್ಯಾಶ್’ ಗಳನ್ನು ಡಿಲೀಟ್ ಮಾಡಿ

(ಸೂಚನೆ – 'git stash clear').

11:28 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:36 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

11:48 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:55 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

12:01 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14