Difference between revisions of "Git/C2/Stashing-and-Cleaning/Kannada"
From Script | Spoken-Tutorial
Sandhya.np14 (Talk | contribs) (Created page with " {|Border = 1 | <center>Time</center> | <center>Narration</center> |- | 00:01 | '''Git''' ನಲ್ಲಿ '''stashing and cleaning''' (ಸ್ಟ್ಯಾಶಿಂಗ್ ಆಂ...") |
Sandhya.np14 (Talk | contribs) |
||
Line 257: | Line 257: | ||
|- | |- | ||
| 08:40 | | 08:40 | ||
− | | ನಮ್ಮ ‘ಸ್ಟ್ಯಾಶ್’ ಅನ್ನು ಯಶಸ್ವಿಯಾಗಿ ಅನ್ವಯಿಸಲಾಗಿದೆ ಎಂದು ನೀವು ನೋಡಬಹುದು. |- | + | | ನಮ್ಮ ‘ಸ್ಟ್ಯಾಶ್’ ಅನ್ನು ಯಶಸ್ವಿಯಾಗಿ ಅನ್ವಯಿಸಲಾಗಿದೆ ಎಂದು ನೀವು ನೋಡಬಹುದು. |
+ | |- | ||
| 08:44 | | 08:44 | ||
| 'git space stash space list' ಎಂದು ಟೈಪ್ ಮಾಡಿ, ನಾವು ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸೋಣ. | | 'git space stash space list' ಎಂದು ಟೈಪ್ ಮಾಡಿ, ನಾವು ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸೋಣ. |
Revision as of 19:12, 23 August 2016
|
|
00:01 | Git ನಲ್ಲಿ stashing and cleaning (ಸ್ಟ್ಯಾಶಿಂಗ್ ಆಂಡ್ ಕ್ಲೀನಿಂಗ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ‘ಸ್ಟ್ಯಾಶಿಂಗ್’ ನ ಬಗ್ಗೆ ಕಲಿಯುವೆವು. |
00:11 |
|
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
|
00:32 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:36 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ 'ಗಿಟ್ ಕಮಾಂಡ್' ಗಳ ಮತ್ತು ಗಿಟ್ ನಲ್ಲಿ 'ಬ್ರಾಂಚಿಂಗ್' ನ ಪರಿಚಯ ಇರಬೇಕು. |
00:43 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:48 | ನಾವು ‘ಸ್ಟ್ಯಾಶಿಂಗ್’ ನ ಬಗ್ಗೆ ತಿಳಿದುಕೊಳ್ಳೋಣ. |
00:51 | ಒಂದು 'ಬ್ರಾಂಚ್' ನ ತಾತ್ಕಾಲಿಕ ಬದಲಾವಣೆಗಳನ್ನು ಸೇವ್ ಮಾಡಲು, ‘ಸ್ಟ್ಯಾಶಿಂಗ್’ ಅನ್ನು ಬಳಸಲಾಗುತ್ತದೆ. |
00:57 | ಬ್ರಾಂಚ್ ಗಳನ್ನು ಬದಲಾಯಿಸುವಾಗ, ಈಗಿನ ಕೆಲಸವನ್ನು ಕಮಿಟ್ ಮಾಡದೇ, ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇದು ಸಹಾಯಮಾಡುತ್ತದೆ. |
01:04 | ತಾತ್ಕಾಲಿಕ ಬದಲಾವಣೆಗಳ ‘ಸ್ಟ್ಯಾಶ್’ ಅನ್ನು ಯಾವುದೇ ಸಮಯದಲ್ಲಿ ರಿವೋಕ್ ಮಾಡಬಹುದು. |
01:08 | ನಾವು ‘ಸ್ಟ್ಯಾಶ್’ ಎಂಬ ಶಬ್ದವನ್ನು, ಈ ಟ್ಯುಟೊರಿಯಲ್ ನ ಸರಣಿಯಲ್ಲಿ ಹಿಂದೆಯೇ ನೋಡಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಿ. |
01:16 | ಈಗ, ಇದನ್ನು ಹೆಚ್ಚು ವಿವರವಾಗಿ ತಿಳಿದುಕೊಳ್ಳೋಣ. |
01:20 | ಟರ್ಮಿನಲ್ ಅನ್ನು ಓಪನ್ ಮಾಡಿ ನಾವು ಆರಂಭಿಸೋಣ. |
01:25 | ನಾವು ಮೊದಲೇ ಕ್ರಿಯೇಟ್ ಮಾಡಿದ 'mywebpage' ಎಂಬ ನಮ್ಮ ಗಿಟ್ ರಿಪಾಸಿಟರಿಯನ್ನು ತೆರೆಯುವೆವು. |
01:30 | ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ. |
01:35 | ಪ್ರದರ್ಶಿಸಲಿಕ್ಕಾಗಿ ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. ನೀವು ನಿಮಗಿಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು. |
01:44 | ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡನ್ನು ಟೈಪ್ ಮಾಡಿದ ಮೇಲೆ 'Enter' ಕೀಯನ್ನು ಒತ್ತಲು ದಯವಿಟ್ಟು ನೆನೆಪಿಡಿ. |
01:52 | ಮೊದಲು, ನಾವು 'git space branch' ಎಂದು ಟೈಪ್ ಮಾಡಿ 'ಬ್ರಾಂಚ್ ಲಿಸ್ಟ್' ಅನ್ನುಪರಿಶೀಲಿಸುವೆವು. |
01:58 | ನಾನು 'chapter-three' (ಚಾಪ್ಟರ್- ಥ್ರೀ) ಎಂಬ ಹೆಸರಿನ ಒಂದು ಬ್ರಾಂಚ್ ಅನ್ನು ಈಗಾಗಲೇ ಕ್ರಿಯೇಟ್ ಮಾಡಿದ್ದೇನೆ. |
02:03 | ಪ್ರದರ್ಶನದ ಉದ್ದೇಶದಿಂದ ಅದರ ಒಳಗೆ ಒಂದು 'ಕಮಿಟ್' ಅನ್ನು ಮಾಡಿದ್ದೇನೆ. |
02:08 | ನೀವು ಸಹ ಒಂದು ಹೊಸ ಬ್ರಾಂಚ್ ಅನ್ನು ಕ್ರಿಯೇಟ್ ಮಾಡಿ ಅದರ ಒಳಗೆ ಒಂದು 'ಕಮಿಟ್' ಅನ್ನು ಮಾಡುವಿರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. |
02:15 | ನಾವು 'git space checkout space chapter-three' ಎಂದು ಟೈಪ್ ಮಾಡಿ, ' ಚಾಪ್ಟರ್- ಥ್ರೀ' ಬ್ರಾಂಚ್ ನಲ್ಲಿ ಒಳಗೆ ಹೋಗುವೆವು. |
02:23 | ನಾವು 'ಗಿಟ್ ಲಾಗ್' ನ್ನು ಪರಿಶೀಲಿಸೋಣ. |
02:26 | ಇದು ಪ್ರದರ್ಶನಕ್ಕಾಗಿ 'ಚಾಪ್ಟರ್- ಥ್ರೀ' ಬ್ರಾಂಚ್ ನಲ್ಲಿ ನಾನು ಮಾಡಿದ್ದ 'ಕಮಿಟ್' ಆಗಿದೆ. |
02:31 | ನಾವು “ls” ಎಂದು ಟೈಪ್ ಮಾಡಿ, ಫೋಲ್ಡರ್ ನಲ್ಲಿರುವುದನ್ನು ಪರಿಶೀಲಿಸೋಣ. |
02:35 | ನೀವು 'Windows' ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತಿದ್ದರೆ, “ls” ಕಮಾಂಡ್ ಗೆ ಬದಲಾಗಿ “dir” ಎಂಬ ಕಮಾಂಡ್ ಅನ್ನು ಬಳಸಿ. |
02:43 | ಇಲ್ಲಿ ಮೂರು 'html' ಫೈಲ್ ಗಳಿರುವುದನ್ನು ಗಮನಿಸಿ. |
02:47 | ಈಗ , ನಾವು 'mypage.html' ಫೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವೆವು. |
02:53 | ನಾವು 'gedit space mypage.html space ampersand' ಎಂದು ಟೈಪ್ ಮಾಡಿ 'mypage.html' ಎಂಬ ಫೈಲನ್ನು ತೆರೆಯೋಣ. |
03:03 | ಈ ಮೊದಲೇ ನಾನು ಸೇವ್ ಮಾಡಿದ ನನ್ನ 'Writer' ಡಾಕ್ಯೂಮೆಂಟ್ ನಿಂದ ಕೆಲವು ಸಾಲುಗಳನ್ನು ಈ ಫೈಲ್ ನಲ್ಲಿ ನಾನು ಕಾಪಿ ಮತ್ತು ಪೇಸ್ಟ್ ಮಾಡುವೆನು. |
03:11 | ಆಮೇಲೆ ಫೈಲನ್ನು ಸೇವ್ ಮಾಡಿ ಕ್ಲೋಸ್ ಮಾಡುತ್ತೇನೆ. |
03:14 | 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸಲು, ಹೀಗೆ ಟೈಪ್ ಮಾಡಿ: 'git space status'. |
03:19 | ನಮ್ಮ ಬದಲಾವಣೆಗಳನ್ನು ಇದುವರೆಗೂ ಸ್ಟೇಜ್ ಮಾಡಲಾಗಿಲ್ಲ ಎಂದು ನಾವು ತಿಳಿದುಕೊಳ್ಳಬಹುದು. |
03:24 | ನಾವು ಒಂದು ದೊಡ್ಡ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುವಾಗ, ಬ್ರಾಂಚ್ ಗಳನ್ನು ಮತ್ತೆ ಮತ್ತೆ ಬದಲಾಯಿಸಬೇಕಾಗಬಹುದು. |
03:30 | ಈಗ, ಬೇರೆ ಯಾವುದೋ ಕೆಲಸ ಮಾಡಲು ನಮಗೆ ನಮ್ಮ 'master' ಬ್ರಾಂಚ್ ಗೆ ಹಿಂದಿರುಗಬೇಕಾಗಿದೆ ಎಂದುಕೊಳ್ಳಿ. |
03:37 | ಹೀಗೆ ಟೈಪ್ ಮಾಡಿ: 'git space checkout space master'. |
03:41 | ಬದಲಾವಣೆಗಳನ್ನು ಕಮಿಟ್ ಮಾಡದೇ, ನಾವು ಬೇರೆ ಬ್ರಾಂಚ್ ಗಳಿಗೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಈ ಎರರ್ ತೋರಿಸುತ್ತದೆ. |
03:48 | ನನ್ನ ಕೆಲಸವು ಕೇವಲ ಅರ್ಧ ಮುಗಿದಿರುವುದರಿಂದ, ನನಗೆ ಈಗಲೇ ಬದಲಾವಣೆಗಳನ್ನು 'ಕಮಿಟ್' ಮಾಡುವದು ಬೇಕಾಗಿಲ್ಲ. |
03:55 | ಒಂದುವೇಳೆ, 'hyphen hyphen force' ಫ್ಲ್ಯಾಗನ್ನು ಬಳಸಿ ನಾವು ಈ ಬ್ರಾಂಚ್ ನಿಂದ ಬಲವಂತವಾಗಿ ಹೊರಬಂದರೆ, ಬದಲಾವಣೆಗಳನ್ನು ತ್ಯಜಿಸಲಾಗುವುದು. |
04:04 | ಆದರೆ, ನನಗೆ ಬದಲಾವಣೆಗಳನ್ನು ತಾತ್ಕಾಲಿಕವಾಗಿ ಸೇವ್ ಮಾಡಬೇಕಾಗಿದ್ದರೆ? ‘ಸ್ಟ್ಯಾಶಿಂಗ್’ಅನ್ನು ಬಳಸಿ ಇದನ್ನು ಮಾಡಲಾಗುವುದು. |
04:11 | 'git space stash space save space' ಡಬಲ್ ಕೋಟ್ಸ್ ನಲ್ಲಿ “Stashed mypage.html” ಎಂದು ಟೈಪ್ ಮಾಡಿ ನಾವು ಬದಲಾವಣೆಗಳನ್ನು ತಾತ್ಕಾಲಿಕವಾಗಿ ಸೇವ್ ಮಾಡಬಹುದು. |
04:24 | ಇಲ್ಲಿ, “Stashed mypage.html”-ಇದು, ನಾನು ಕೊಟ್ಟಿರುವ ‘ಸ್ಟ್ಯಾಶ್’ ನ ಹೆಸರು ಆಗಿದೆ. ನೀವು ನಿಮ್ಮ ಆಯ್ಕೆಯ ಹೆಸರನ್ನು ಕೊಡಬಹುದು. |
04:34 | ಟರ್ಮಿನಲ್ ನ ಮೇಲೆ, ‘ಸ್ಟ್ಯಾಶ್’ ಅನ್ನು ಕ್ರಿಯೇಟ್ ಮಾಡಿರುವಲ್ಲಿ, ‘ಸ್ಟ್ಯಾಶ್’ ನ ಹೆಸರು ಹಾಗೂ ಬ್ರಾಂಚ್ ನ ಹೆಸರುಗಳನ್ನು ತೋರಿಸಲಾಗುವುದು. |
04:42 | ನಾವು 'git space status' ಎಂದು ಟೈಪ್ ಮಾಡಿ, 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸುವೆವು. “nothing to commit” ಎಂಬ ಮೆಸೇಜನ್ನು ನೀವು ನೋಡಬಹುದು. |
04:51 | ಆದ್ದರಿಂದ, ನಾವು ಈಗ ಬ್ರಾಂಚ್ ಗಳನ್ನು ಬದಲಾಯಿಸಬಹುದು. |
04:55 | ಈಗ , ನಾವು 'master ಬ್ರಾಂಚ್' ನ ಒಳಗೆ ಹೋಗಲು ಪ್ರಯತ್ನಿಸೋಣ. 'git space checkout space master' ಎಂದು ಟೈಪ್ ಮಾಡಿ. |
05:03 | ಗಮನಿಸಿ: ‘ಸ್ಟ್ಯಾಶಿಂಗ್’ ನ ನಂತರ ನಾವು ಬೇರೆ ಬ್ರಾಂಚ್ ಗಳಿಗೆ ಬದಲಾಯಿಸಬಹುದು. |
05:07 | ಇನ್ನುಮುಂದೆ, ‘ಸ್ಟ್ಯಾಶಿಂಗ್’ ನ ಇನ್ನೊಂದು ವಿಧಾನವನ್ನು ನಾವು ನೋಡೋಣ. |
05:11 | ಇದಕ್ಕಾಗಿ, 'git space checkout space chapter-three' ಎಂದು ಟೈಪ್ ಮಾಡಿ, ಮತ್ತೊಮ್ಮೆ ನಾನು 'ಚಾಪ್ಟರ್- ಥ್ರೀ' ಬ್ರಾಂಚ್ ಗೆ ಹೋಗುವೆನು. |
05:20 | ಈಗ, ನಾನು 'history.html' ಫೈಲನ್ನು ಎಡಿಟ್ ಮಾಡುವೆನು. ಹೀಗೆ ಟೈಪ್ ಮಾಡಿ: ' gedit space history.html space ampersand'. |
05:31 | ನನ್ನ 'Writer' ಡಾಕ್ಯೂಮೆಂಟ್ ನಿಂದ ಇಲ್ಲಿ ಕೆಲವು ಸಾಲುಗಳನ್ನು ನಾನು ಸೇರಿಸುವೆನು. |
05:35 | ಆಮೇಲೆ ಸೇವ್ ಮಾಡಿ, ಫೈಲನ್ನು ಮುಚ್ಚುತ್ತೇನೆ. |
05:38 | 'git space status' ಎಂದು ಟೈಪ್ ಮಾಡಿ, ನಾವು 'ಗಿಟ್ ಸ್ಟ್ಯಾಟಸ್' ಅನ್ನು. ಪರಿಶೀಲಿಸೋಣ. |
05:44 | ಉದಾಹರಣೆಗೆ, ‘ಸ್ಟ್ಯಾಶ್’ ನಲ್ಲಿ, ನನಗೆ ಈ ಬದಲಾವಣೆಗಳನ್ನು ಬೇರೊಂದು ರೀತಿಯಲ್ಲಿ ಸೇವ್ ಮಾಡಬೇಕಾಗಿದೆ ಎಂದುಕೊಳ್ಳಿ. ಹೀಗೆ ಟೈಪ್ ಮಾಡಿ: ' git space stash'. |
05:54 | ಗಮನಿಸಿ: ಇಲ್ಲಿ ನಾವು ‘ಸ್ಟ್ಯಾಶ್’ ನ ಹೆಸರನ್ನು ಕೊಟ್ಟಿಲ್ಲ. |
05:58 | ಒಂದುವೇಳೆ ‘ಸ್ಟ್ಯಾಶ್’ ನ ಹೆಸರನ್ನು ನಾವು ಕೊಡದಿದ್ದರೆ, ‘ಸ್ಟ್ಯಾಶ್’ ಅನ್ನು ಇತ್ತೀಚಿನ 'ಕಮಿಟ್' ನ ಹೆಸರಿನಲ್ಲಿ ಸೇವ್ ಮಾಡಲಾಗುವುದು. |
06:04 | ನಂತರ, ‘ಸ್ಟ್ಯಾಶ್’ ನ ಹೆಸರು ಮತ್ತು ಇತ್ತೀಚಿನ 'ಕಮಿಟ್' ಒಂದೇ ಆಗಿವೆಯೇ ಎಂಬುದನ್ನು ನಾವು ಪರಿಶೀಲಿಸುವೆವು. |
06:10 | ನಾವು ಮೊದಲು 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. |
06:14 | ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space stash space list'. |
06:20 | ಕೊನೆಯ 'ಕಮಿಟ್' ಹಾಗೂ ಇತ್ತೀಚಿನ ‘ಸ್ಟ್ಯಾಶ್’ ಗಳ ಹೆಸರು ಒಂದೇ ಆಗಿರುವುದನ್ನು ನೀವು ನೋಡಬಹುದು. |
06:25 | ಇತ್ತೀಚಿನ ‘ಸ್ಟ್ಯಾಶ್’ ಅನ್ನು ಎಲ್ಲಕ್ಕಿಂತ ಮೊದಲು ಪಟ್ಟಿಮಾಡಿರುವುದನ್ನು ಗಮನಿಸಿ. ಇದರ ಅರ್ಥ- ‘ಸ್ಟ್ಯಾಶ್’ ಗಳು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಲ್ಪಟ್ಟಿವೆ. |
06:35 | ಇದು ‘ಸ್ಟ್ಯಾಶ್ ಐ ಡಿ’, ತನ್ನಷ್ಟಕ್ಕೆ ತಾನೇ ರಚಿತವಾಗಿದೆ. |
06:40 | ಪ್ರದರ್ಶಿಸುವ ಉದ್ದೇಶದಿಂದ ನಾನು ಇನ್ನೊಂದು ‘ಸ್ಟ್ಯಾಶ್’ ಅನ್ನು ಕ್ರಿಯೇಟ್ ಮಾಡುವೆನು. |
06:45 | ಇದಕ್ಕಾಗಿ, ನಾನು 'story.html' ಫೈಲನ್ನು ಎಡಿಟ್ ಮಾಡುವೆನು. ಹೀಗೆ ಟೈಪ್ ಮಾಡಿ: ' gedit space story.html space ampersand'. |
06:55 | ನಾನು 'story.html' ಫೈಲ್ ನಲ್ಲಿ ಕೆಲವು ಸಾಲುಗಳನ್ನು ಸೇರಿಸುವೆನು. |
07:00 | ಆಮೇಲೆ ಸೇವ್ ಮಾಡಿ, ಫೈಲನ್ನು ಮುಚ್ಚುತ್ತೇನೆ. |
07:03 | ಈಗ ನಾನು, ಒಂದು ‘ಸ್ಟ್ಯಾಶ್’ ನಲ್ಲಿ ಬದಲಾವಣೆಗಳನ್ನು ಸೇವ್ ಮಾಡುವೆನು. |
07:07 | ಹೀಗೆ ಟೈಪ್ ಮಾಡಿ: 'git space stash space save space' ಡಬಲ್ ಕೋಟ್ಸ್ ನಲ್ಲಿ “Stashed story.html”. |
07:17 | ನಾವು 'git space stash space list' ಎಂದು ಟೈಪ್ ಮಾಡಿ, ‘ಸ್ಟ್ಯಾಶ್’ ಲಿಸ್ಟ್ ಅನ್ನು ಪರಿಶೀಲಿಸೋಣ. |
07:24 | ಈಗ 'ಚಾಪ್ಟರ್- ಥ್ರೀ' ಬ್ರಾಂಚ್ ನಲ್ಲಿ, ನಮ್ಮ ಹತ್ತಿರ ಮೂರು ‘ಸ್ಟ್ಯಾಶ್’ ಗಳಿರುವುದನ್ನು ನಾವು ನೋಡಬಹುದು. |
07:30 | ಕೆಲವು ಸಂದರ್ಭಗಳಲ್ಲಿ, ‘ಸ್ಟ್ಯಾಶ್’ ಗಳಲ್ಲಿ ಯಾವ ಬದಲಾವಣೆಗಳನ್ನು ನಾವು ಸೇವ್ ಮಾಡಿದ್ದೇವೆ ಎನ್ನುವುದನ್ನು ನಾವು ಮರೆತುಬಿಡಬಹುದು. |
07:36 | ಇದನ್ನು ಹೇಗೆ ಪರಿಶೀಲಿಸುವುದೆಂದು ನಾವು ನೋಡೋಣ. |
07:40 | ಉದಾಹರಣೆಗೆ, ನನಗೆ 'stash@{0}' ನ ವಿವರಗಳನ್ನು ನೋಡಬೇಕಾಗಿದೆ ಎಂದುಕೊಳ್ಳಿ. |
07:45 | ಆದ್ದರಿಂದ, ಹೀಗೆ ಟೈಪ್ ಮಾಡಿ: 'git space diff space stash' @ ( 'ಆಟ್ ದ ರೇಟ್ ಚಿಹ್ನೆ' ) ಕರ್ಲಿ ಬ್ರಾಕೆಟ್ಸ್ ನಲ್ಲಿ 'zero'. |
07:54 | 'story.html' ದ ಬದಲಾವಣೆಗಳನ್ನು ನಾವು ನೋಡಬಹುದು. 'stash@{0}' ನಲ್ಲಿ ಇದನ್ನೇ ನಾವು ಸೇವ್ ಮಾಡಿದ್ದೆವು. |
08:01 | ಆಮೇಲೆ, ‘ಸ್ಟ್ಯಾಶ್’ ಮಾಡಲಾದ ಫೈಲ್ ಗಳ ಮೇಲೆ ಕೆಲಸ ಮಾಡುವುದನ್ನು ನಾವು ಮುಂದುವರೆಸುವೆವು. |
08:06 | ಅದಕ್ಕಾಗಿ, ಮೊದಲು ನಾವು ‘ಸ್ಟ್ಯಾಶ್’ ಗಳನ್ನು ಅನ್ವಯಿಸಬೇಕು. |
08:10 | ‘ಸ್ಟ್ಯಾಶ್’ ಲಿಸ್ಟ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space stash space list'. |
08:17 | ಉದಾಹರಣೆಗೆ, ಈಗ ನಾವು 'stash@{1}' ಅನ್ನು ಅನ್ವಯಿಸುವೆವು. |
08:21 | ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: 'git space stash space apply space stash @' ( 'ಆಟ್ ದ ರೇಟ್ ಚಿಹ್ನೆ' ) ಕರ್ಲಿ ಬ್ರಾಕೆಟ್ಸ್ ನಲ್ಲಿ 'one '. |
08:33 | ‘ಸ್ಟ್ಯಾಶ್ id’ ಯನ್ನು ನೀವು ಉಲ್ಲೇಖಿಸದಿದ್ದರೆ, ಇತ್ತೀಚಿನ ‘ಸ್ಟ್ಯಾಶ್’, ಅರ್ಥಾತ್, ' stash@{0}' ಅನ್ನು ಅನ್ವಯಿಸಲಾಗುವುದು. |
08:40 | ನಮ್ಮ ‘ಸ್ಟ್ಯಾಶ್’ ಅನ್ನು ಯಶಸ್ವಿಯಾಗಿ ಅನ್ವಯಿಸಲಾಗಿದೆ ಎಂದು ನೀವು ನೋಡಬಹುದು. |
08:44 | 'git space stash space list' ಎಂದು ಟೈಪ್ ಮಾಡಿ, ನಾವು ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸೋಣ. |
08:51 | 'stash@{1}' ಇನ್ನೂ ಲಿಸ್ಟ್ ನಲ್ಲಿರುವುದನ್ನು ನಾವು ನೋಡಬಹುದು ಮತ್ತು ಮುಂದೆ ಇದು ಗೊಂದಲಕ್ಕೆ ದಾರಿಯಾಗಬಹುದು. |
08:58 | ಆದ್ದರಿಂದ, ಒಂದು ‘ಸ್ಟ್ಯಾಶ್’ ಅನ್ನು ಅನ್ವಯಿಸಿದ ನಂತರ, ಅದನ್ನು ಕೈಯಾರೆ ಡಿಲೀಟ್ ಮಾಡುವುದು ಒಳ್ಳೆಯದು. |
09:03 | 'stash@{1}' ಅನ್ನು ತೆಗೆದುಹಾಕಲು, ಹೀಗೆ ಟೈಪ್ ಮಾಡಿ: 'git space stash space drop space stash@' ( 'ಆಟ್ ದ ರೇಟ್ ಚಿಹ್ನೆ' ) ಕರ್ಲಿ ಬ್ರಾಕೆಟ್ಸ್ ನಲ್ಲಿ 'one'. |
09:16 | ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space stash space list'. |
09:22 | ನಮ್ಮ 'stash@{1}' ಅನ್ನು ತೆಗೆದುಹಾಕಲಾಗಿದೆ ಮತ್ತು 'stash@{2}', 'stash@{1}' ಆಗಿದೆ ಎಂದು ನಾವು ನೋಡಬಹುದು. |
09:30 | ಈಗ, ‘ಸ್ಟ್ಯಾಶ್’ ಅನ್ನು ಬೇರೊಂದು ರೀತಿಯಲ್ಲಿ ಅನ್ವಯಿಸಲು ನಾವು ಕಲಿಯುವೆವು. ಹೀಗೆ ಟೈಪ್ ಮಾಡಿ: 'git space stash space pop'. |
09:39 | ನಮ್ಮ 'stash@{0}' ಅನ್ನು ಅನ್ವಯಿಸಲಾಗಿದೆ ಎಂದು ನಾವು ನೋಡಬಹುದು. |
09:43 | ಆದ್ದರಿಂದ, ನಾವು 'stash pop' ಕಮಾಂಡ್ ಅನ್ನು ಬಳಸಿದರೆ, ಇತ್ತೀಚಿನ ‘ಸ್ಟ್ಯಾಶ್’, ಅರ್ಥಾತ್ ' stash@{0}' ಅನ್ನು ಅನ್ವಯಿಸಲಾಗುವುದು. |
09:52 | ಮತ್ತೊಮ್ಮೆ, ನಾವು 'git space stash space list' ಎಂದು ಟೈಪ್ ಮಾಡಿ, ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸುವೆವು. |
09:59 | ಈಗ, 'stash@{0}' ಅನ್ನು ತೆಗೆದುಹಾಕಲಾಗಿದೆ ಮತ್ತು 'stash@{1}' ಇದು ' stash@{0}' ಆಗಿದೆ ಎಂದು ನಾವು ನೋಡಬಹುದು. |
10:07 | ಹೀಗಾಗಿ, 'stash pop' ಕಮಾಂಡ್, 'stash@{0}' ಅನ್ನು ಅನ್ವಯಿಸುವುದು ಮತ್ತು ಅದನ್ನು ತನ್ನಿಂದ ತಾನೇ ಡಿಲೀಟ್ ಮಾಡುವುದು. |
10:15 | ನಂತರ ಎಲ್ಲ ‘ಸ್ಟ್ಯಾಶ್’ ಗಳನ್ನು ಒಟ್ಟಿಗೇ ತೆಗೆದುಹಾಕುವ ರೀತಿಯನ್ನುನಾವು ಕಲಿಯುವೆವು. |
10:20 | ಎಲ್ಲ ‘ಸ್ಟ್ಯಾಶ್’ ಗಳನ್ನು ನಮ್ಮ ರಿಪಾಸಿಟರಿಯಿಂದ ಡಿಲೀಟ್ ಮಾಡಲು, ಹೀಗೆ ಟೈಪ್ ಮಾಡಿ: 'git space stash space clear'. |
10:28 | ಮತ್ತೊಮ್ಮೆ, 'git space stash space list' ಎಂದು ಟೈಪ್ ಮಾಡಿ ನಾವು ‘ಸ್ಟ್ಯಾಶ್ ಲಿಸ್ಟ್’ ಅನ್ನು ಪರಿಶೀಲಿಸುವೆವು. |
10:36 | ನಮ್ಮ ‘ಸ್ಟ್ಯಾಶ್ ಲಿಸ್ಟ್’ ಈಗ ಖಾಲಿಯಾಗಿರುವುದನ್ನು ನಾವು ನೋಡಬಹುದು. |
10:40 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
10:44 | ಸಂಕ್ಷಿಪ್ತವಾಗಿ, |
10:46 | ಈ ಟ್ಯುಟೋರಿಯಲ್ ನಲ್ಲಿ, ನಾವು ‘ಸ್ಟ್ಯಾಶಿಂಗ್’ ನ ಬಗ್ಗೆ ಕಲಿತಿದ್ದೇವೆ. |
10:51 | ನಾವು:
|
10:58 | ಒಂದು ಅಸೈನ್ಮೆಂಟ್- ನಿಮ್ಮ ರಿಪಾಸಿಟರಿಯಲ್ಲಿ ಮೂರು ‘ಸ್ಟ್ಯಾಶ್’ ಗಳನ್ನು ಕ್ರಿಯೇಟ್ ಮಾಡಿ. |
11:03 | 'git stash show' ಕಮಾಂಡ್ ನ ಬಗ್ಗೆ ತಿಳಿದುಕೊಳ್ಳಿ. |
11:07 | 'git stash show' ಹಾಗೂ 'git stash show stash@{1}' ಕಮಾಂಡ್ ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. |
11:14 | ಇತ್ತೀಚಿನ 'ಸ್ಟ್ಯಾಶ್' ಅನ್ನು ಅನ್ವಯಿಸಿ. ('git stash pop' ಅನ್ನು ಬಳಸಿ) |
11:21 | ಮತ್ತು ರಿಪಾಸಿಟರಿಯಿಂದ ಎಲ್ಲ ‘ಸ್ಟ್ಯಾಶ್’ ಗಳನ್ನು ಡಿಲೀಟ್ ಮಾಡಿ
(ಸೂಚನೆ – 'git stash clear'). |
11:28 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:36 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
11:48 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:55 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
12:01 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |