Difference between revisions of "Inkscape/C2/Text-tool-features/Kannada"
From Script | Spoken-Tutorial
PoojaMoolya (Talk | contribs) |
PoojaMoolya (Talk | contribs) |
||
Line 11: | Line 11: | ||
|- | |- | ||
|00:09 | |00:09 | ||
− | | | + | | ಮಾನ್ಯುಯಲ್ ಕರ್ನಿಂಗ್(Manual kerning), ಸ್ಪೆಲ್ ಚೆಕಿಂಗ್ (Spell checking) |
− | + | ||
− | + | ||
− | + | ||
|- | |- | ||
|00:12 | |00:12 | ||
− | | | + | | ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script) |
− | + | ||
− | + | ||
− | + | ||
|- | |- | ||
Line 222: | Line 216: | ||
|- | |- | ||
|05:24 | |05:24 | ||
− | | | + | |ಮಾನ್ಯುಯಲ್ ಕರ್ನಿಂಗ್(Manual kerning), ಸ್ಪೆಲ್ ಚೆಕಿಂಗ್ (Spell checking) |
− | + | ||
− | + | ||
− | + | ||
|- | |- | ||
|05:26 | |05:26 | ||
− | | | + | | ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script) |
− | + | ||
− | + | ||
− | + | ||
|- | |- | ||
|05:29 | |05:29 |
Latest revision as of 11:32, 20 March 2017
Time | Narration |
00:01 | ನಮಸ್ಕಾರ, ಟೆಕ್ಸ್ಟ್ ಟೂಲ್ ಫೀಚರ್ಸ್ ಎನ್ನುವ ಇಂಕ್-ಸ್ಕೇಪ್-ನ ಸ್ಪೋಕನ್ ಟ್ಯುಟೋರಿಯಲ್-ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು : |
00:09 | ಮಾನ್ಯುಯಲ್ ಕರ್ನಿಂಗ್(Manual kerning), ಸ್ಪೆಲ್ ಚೆಕಿಂಗ್ (Spell checking) |
00:12 | ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script) |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:24 | ಈ ಟ್ಯುಟೋರಿಯಲ್-ನಲ್ಲಿ ಬಳಸುವ ಎಲ್ಲಾ ಟೂಲ್-ಗಳಿಗೆ ಉಪಯೋಗವಾಗಲೆಂದು, ಗರಿಷ್ಠ ರೆಸೊಲ್ಯುಶನ್-ನಲ್ಲಿ ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲಾಗಿದೆ |
00:33 | ಇಂಕ್ ಸ್ಕೇಪ್ ಅನ್ನು ಓಪನ್ ಮಾಡೋಣ. |
00:35 | ಈ ಸರಣಿಯಲ್ಲಿ ಹಿಂದೆ, ಟೆಕ್ಸ್ಟ್ ಟೂಲ್ ಅನ್ನು ಬಳಸಿ, ಟೆಕ್ಸ್ಟ್ ಅನ್ನು ರಚಿಸಲು ಮತ್ತು ಫಾರ್ಮ್ಯಾಟ್ ಮಾಡಲು ಕಲಿತಿದ್ದೆವು. |
00:40 | ಈಗ, ಟೆಕ್ಸ್ಟ್ ಟೂಲ್ ನ ಕೆಲವು ಮುಖ್ಯ ವೈಶಿಷ್ಟ್ಯಗಳನ್ನು ಕಲಿಯೋಣ. ಅದನ್ನು ಕ್ಲಿಕ್ ಮಾಡಿ. |
00:45 | ಮ್ಯಾನ್ಯುಯಲ್ ಕರ್ನಿಂಗ್ ನಿಂದ ಆರಂಭಿಸೋಣ. |
00:48 | ಹಾರಿಜಾಂಟಲ್ ಕರ್ನಿಂಗ್ (Horizontal kerning), ವರ್ಟಿಕಲ್ ಶಿಫ್ಟ್ (Vertical shift) ಮತ್ತು ಕ್ಯಾರಕ್ಟರ್ ರೊಟೇಶನ್ (Character rotation), ಇವುಗಳಿಗೆ ಮ್ಯಾನ್ಯುಯಲ್ ಕರ್ನಿಂಗ್ ಎನ್ನುತ್ತಾರೆ(manual kerns). |
00:54 | ಸ್ಪೋಕನ್ ಎಂದು ಟೈಪ್ ಮಾಡಿ. |
00:58 | S ನ ನಂತರ ಕರ್ಸರ್ ಅನ್ನು ಇಡಿ. |
01:01 | Horizontal kerning, ಆಯ್ಕೆಯಾದ ಅಕ್ಷರದ ನಂತರ ಅಂತರವನ್ನು ಸೃಷ್ಟಿಸುತ್ತದೆ. |
01:05 | S ಮತ್ತು p ಅಕ್ಷರಗಳ ನಡುವಿನ ಅಂತರವನ್ನು ಹೆಚ್ಚಿಸಲು ಅಥವಾ ತಗ್ಗಿಸಲು, ಮೇಲೆ ಮತ್ತು ಕೆಳಗಿನ ಆರೋಗಳನ್ನು ಕ್ಲಿಕ್ ಮಾಡಿ . |
01:13 | S ಮತ್ತು p ಅಕ್ಷರಗಳ ನಡುವಿನ ಅಂತರ ಮಾತ್ರ ಹೆಚ್ಚಿರುವುದನ್ನು ಗಮನಿಸಿ. |
01:19 | Horizontal kerning ಪ್ಯಾರಾಮೀಟರ್ ಅನ್ನು ಮೂರು ಎಂದಿರಿಸೋಣ. |
01:24 | ಮುಂದಿನ ಐಕಾನ್, Vertical shift. ಇದು, ಆಯ್ಕೆಯಾದ ಅಕ್ಷರದ ಮುಂದಿನ ಅಕ್ಷರಗಳನ್ನು ಮೇಲೆ ಅಥವಾ ಕೆಳಗೆ ಸರಿಸುತ್ತದೆ. |
01:30 | ಮೇಲೆ ಮತ್ತು ಕೆಳಗಿನ ಆರೋಗಳನ್ನು ಕ್ಲಿಕ್ ಮಾಡಿ. |
01:34 | ಕರ್ಸರ್ ನ ಮುಂದಿರುವ ಅಕ್ಷರಗಳು ಮೇಲೆ ಅಥವಾ ಕೆಳಗೆ ಸರಿದಿರುವುದನ್ನು ಗಮನಿಸಿ. |
01:39 | ಈ ಪ್ಯಾರಾಮೀಟರ್ ಅನ್ನು ಹದಿನೈದು ಎಂದಿರಿಸಿ. |
01:42 | ನಂತರ, ನಮ್ಮ ಅಕ್ಷರಗಳನ್ನು ಕ್ಯಾರೆಕ್ಟರ್ ರೊಟೇಶನ್(Character rotation) ಬಳಸಿ ತಿರುಗಿಸೋಣ. |
01:47 | ಈ ಐಕಾನ್, ಕರ್ಸರ್ ನ ಬಲಭಾಗಕ್ಕಿರುವ ಒಂದೇ ಅಕ್ಷರವನ್ನು ತಿರುಗಿಸುತ್ತದೆ. |
01:51 | ಹಾಗಾಗಿ, e ಅಕ್ಷರದ ಹಿಂದೆ ಕರ್ಸರ್ ಅನ್ನು ಇಡಿ. |
01:55 | ಕ್ಯಾರೆಕ್ಟರ್ ರೊಟೇಶನ್ (Character rotation) ನ ಮೇಲೆ ಮತ್ತು ಕೆಳಗಿನ ಆರೋಗಳ ಮೇಲೆ ಕ್ಲಿಕ್ ಮಾಡಿ ಮತ್ತು e ಅಕ್ಷರ ತಿರುಗುವುದನ್ನು ನೀವು ನೋಡಬಹುದು. |
02:02 | ಒಂದಕ್ಕಿಂತ ಹೆಚ್ಚು ಅಕ್ಷರಗಳಿಗೆ ಕರ್ನ್ ಗಳನ್ನು ಅಳವಡಿಸಲು, ಮೊದಲು ಅಕ್ಷರಗಳನ್ನು ಆಯ್ಕೆ ಮಾಡಿ, ನಂತರ ಮೌಲ್ಯಗಳನ್ನು ನೀಡಿ. |
02:09 | p ಮತ್ತು o ಅಕ್ಷರಗಳನ್ನು ಆಯ್ಕೆ ಮಾಡುತ್ತೇನೆ ಮತ್ತು Horizontal kerning ಪ್ಯಾರಾಮೀಟರ್ ಗೆ ಐದು ಎಂದು ಮೌಲ್ಯ ಕೊಡುತ್ತೇನೆ. |
02:17 | Vertical shift ಪ್ಯಾರಾಮೀಟರ್ ಗೆ ಹತ್ತು ಮತ್ತು Character rotation ಪ್ಯಾರಾಮೀಟರ್ ಗೆ ಇಪ್ಪತ್ತು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
02:24 | ಬದಲಾವಣೆಗಳನ್ನು ಗಮನಿಸಿ. |
02:26 | ಕರ್ನ್ ಆನು ತೆಗೆಯಲು, ಟೆಕ್ಸ್ಟ್ ಮೆನುವಿನಲ್ಲಿ |
02:29 | ರಿಮೂವ್ ಮ್ಯಾನ್ಯುಯಲ್ ಕರ್ನ್ಸ್ ಅನ್ನು ಕ್ಲಿಕ್ ಮಾಡಿ. |
02:32 | ಮ್ಯಾನ್ಯುಯಲ್ ಕರ್ನ್ ಗಳು ರೆಗ್ಯುಲರ್ ಟೆಕ್ಸ್ಟ್ ಗಳಿಗೆ ಮಾತ್ರ ಬಳಸಬಹುದು. |
02:35 | ಫ್ಲೋಡ್ ಟೆಕ್ಸ್ಟ್ ಗಳಿಗೆ ಈ ಆಯ್ಕೆಗಳು ನಿಷ್ಕ್ರಿಯವಾಗಿರುತ್ತವೆ. |
02:39 | ಇದನ್ನು ಪರೀಕ್ಷಿಸಲು, ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ. |
02:43 | ಈಗ ಮ್ಯಾನ್ಯುಯಲ್ ಕರ್ನ್ ಆಯ್ಕೆಗಳು ನಿಷ್ಕ್ರಿಯವಾಗಿರುವುದನ್ನು ಗಮನಿಸಿ. |
02:47 | ಇದನ್ನು undo ಮಾಡಲು Ctrl ಮತ್ತು Z ಕೀಗಳನ್ನು ಒತ್ತಿ. |
02:51 | ನಂತರ, ಸ್ಪೆಲ್ ಚೆಕ್ ವೈಶಿಷ್ಟ್ಯವನ್ನು ಕಲಿಯೋಣ. |
02:54 | ಸ್ಪೆಲ್ ಚೆಕ್ ವೈಶಿಷ್ಟ್ಯವನ್ನು ವಿವರಿಸಲು, ಈಗಾಗಲೇ ಸೇವ್ ಮಾಡಿರುವ ಲಿಬರೆ ಆಫೀಸ್ ರೈಟರ್ ನಿಂದ ಟೆಕ್ಸ್ಟ್ ಅನ್ನು ಕಾಪಿ ಮಾಡುತ್ತೇನೆ. |
03:01 | ಎಲ್ಲಾ ಟೆಕ್ಸ್ಟ್ ಅನ್ನು ಆಯ್ಕೆ ಮಾಡಲು Ctrl ಮತ್ತು A ಕೀಗಳನ್ನು ಒತ್ತಿ, ಕಾಪಿ ಮಾಡಲು Ctrl ಮತ್ತು C ಕೀಗಳನ್ನು ಒತ್ತಿ. |
03:08 | ಇಂಕ್ ಸ್ಕೇಪ್ ಗೆ ಹಿಂತಿರುಗಿ. |
03:10 | ಕ್ಯಾನ್ವಾಸ್ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟ್ ಅನ್ನು ಪೇಸ್ಟ್ ಮಾಡಲು Ctrl ಮತ್ತು V ಒತ್ತಿ. |
03:15 | ಟೆಕ್ಸ್ಟ್ ಮೆನುವಿನಲ್ಲಿ ಚೆಕ್ ಸ್ಪೆಲ್ಲಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ. |
03:19 | ಒಂದು ಹೊಸ ಡೈಲಾಗ್ ಬಾಕ್ಸ್ ಕಾಣುತ್ತದೆ. |
03:22 | ಆಯ್ಕೆಯಾದ ಮತ್ತು ಆಯ್ಕೆಯಾಗದ ಟೆಕ್ಸ್ಟ್ ಗಳೂ ಪರೀಕ್ಷಿಸಲ್ಪಡುತ್ತವೆ. |
03:27 | ಶಂಕಿತ ಶಬ್ದಗಳು ಕೆಂಪು ಬಣ್ಣದ ಬಾಕ್ಸ್ ನಿಂದ ಗುರುತಿಸಲ್ಪಡುತ್ತವೆ ಮತ್ತು ಆ ಟೆಕ್ಸ್ಟ್ ನ ಹಿಂದೆ ಕರ್ಸರ್ ಇರುತ್ತದೆ. |
03:33 | ಹೆಚ್ ಟಿ ಟಿ ಪಿ(http) ಎಂಬ ಶಬ್ದಕ್ಕೆ ಕೆಲವು ಸಲಹೆಗಳು ಕಾಣುತ್ತವೆ. |
03:37 | ಸ್ಪೆಲ್ಲಿಂಗ್ ಸರಿಯಾಗಿರುವುದರಿಂದ ಈ ಶಬ್ದವನ್ನು ನಿಘಂಟಿಗೆ ಸೇರಿಸೋಣ. |
03:41 | ಇದಕ್ಕಾಗಿ, ಆಡ್ ಟು ಡಿಕ್ಷನರಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ. |
03:45 | ಇದರಿಂದಾಗಿ, ಸ್ಪೆಲ್ ಚೆಕರ್ ಈ ಶಬ್ದವನ್ನು ಯಾವಾಗಲೂ ಸರಿಯಾಗಿದೆ ಎಂದು ಪರಿಗಣಿಸುತ್ತದೆ. |
03:50 | ನಂತರ, ಟ್ಯಟೋರಿಯಲ್ ಎಂಬ ಶಬ್ದವು ಗುರುತಿಸಲ್ಪಟ್ಟಿದೆ. |
03:53 | ಸ್ಪೆಲ್ಲಿಂಗ್ ತಪ್ಪಾಗಿರುವುದರಿಂದ, ಸಲಹೆಯ ಪಟ್ಟಿಯಿಂದ, ಸರಿಯಾಗಿರುವ ಟ್ಯುಟೋರಿಯಲ್ ಶಬ್ದವನ್ನು ಆಯ್ಕೆ ಮಾಡಿ. |
03:59 | ಈಗ ಅಕ್ಸೆಪ್ಟ್ ಬಟನ್ ಅನ್ನು ಕ್ಲಿಕ್ ಮಾಡಿ. |
04:02 | ಇಗ್ನೋರ್ ಅನ್ನು ಕ್ಲಿಕ್ ಮಾಡಿದರೆ, ಇದೇ ರೀತಿ ಬರೆಯಲ್ಪಟ್ಟ ಈ ಫೈಲ್ ನ ಎಲ್ಲ ಶಬ್ದಗಳೂ ನಿರ್ಲಕ್ಷಿಸಲ್ಪಡುತ್ತವೆ. |
04:08 | ಇಗ್ನೋರ್ ಒನ್ಸ್ ಅನ್ನು ಕ್ಲಿಕ್ ಮಾಡಿದರೆ, ಆ ಶಬ್ದವು ಒಂದು ಬಾರಿ ಅಂದರೆ ಮೊದಲ ಬಾರಿ ಮಾತ್ರ ನಿರ್ಲಕ್ಷಿಸಲ್ಪಡುತ್ತದೆ. |
04:14 | ಸ್ಪೆಲ್ ಚೆಕಿಂಗ್ ಅನ್ನು ನಿಲ್ಲಿಸಬೇಕಾದರೆ, ಸ್ಟಾಪ್ ಅನ್ನು ಕ್ಲಿಕ್ ಮಾಡಿ. |
04:18 | ಪುನಃ ಆರಂಭಿಸಲು, ಸ್ಟಾರ್ಟ್ ಬಟನ್ ಅನ್ನು ಕ್ಲಿಕ್ ಮಾಡಿ. |
04:22 | ಸ್ಪೆಲ್ ಚೆಕಿಂಗ್ ಮೇಲಿನ ಬಲ ಮೂಲೆಯಲ್ಲಿರುವ ಟೆಕ್ಸ್ಟ್ ಇಂದ ಆರಂಭವಾಗಿ ಕ್ಯಾನ್ವಾಸ್ ನ ಕೆಳಗಿನವರೆಗೂ ಆಗುತ್ತದೆ. |
04:27 | ಈ ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ, ಈ ಟೆಕ್ಸ್ಟ್ ಅನ್ನು ಪಕ್ಕಕ್ಕಿರಿಸೋಣ. |
04:32 | ನಂತರ, ಸೂಪರ್ ಸ್ಕ್ರಿಪ್ಟ್ ಮತ್ತು ಸಬ್ ಸ್ಕ್ರಿಪ್ಟ್ ಬರೆಯುವುದನ್ನು ಕಲಿಯೋಣ. |
04:36 | ಈ ಗಣಿತ ಸೂತ್ರವನ್ನು ಟೈಪ್ ಮಾಡಿ. a ಪ್ಲಸ್ b ಹೋಲ್ ಸ್ಕ್ವೇರ್ ಈಸ್ ಈಕ್ವಲ್ ಟು a ಸ್ಕ್ವೇರ್ ಪ್ಲಸ್ b ಸ್ಕ್ವೇರ್ ಪ್ಲಸ್ ಟು a b ((a+b)2 = a2+b2+2ab) |
04:44 | ಅಂಕೆ ಎರಡನ್ನು ಮೂರು ಜಾಗದಲ್ಲಿ ಸ್ಕ್ವೇರ್ ಎಂದು ಬದಲಾಯಿಸಬೇಕು. |
04:48 | ಮೊದಲ ಎರಡನ್ನು ಆಯ್ಕೆ ಮಾಡಿ. ಟೂಲ್ ಕಂಟ್ರೋಲ್ ಬಾರ್ ನಲ್ಲಿ, ಟಾಗಲ್ ಸೂಪರ್ ಸ್ಕ್ರಿಪ್ಟ್ ಐಕಾನ್ ಅನ್ನು ಕ್ಲಿಕ್ ಮಾಡಿ. |
04:56 | ಉಳಿದ ಎರಡೂ ಜಾಗದಲ್ಲಿ ಎರಡನ್ನು ಹೀಗೆಯೇ ಬದಲಾಯಿಸಿ. |
04:59 | ನಂತರ, ಸಬ್ ಸ್ಕ್ರಿಪ್ಟ್ ಅನ್ನು ಬಳಸಿ, ಒಂದು ರಾಸಾಯನಿಕ ಸೂತ್ರವನ್ನು ಬರೆಯೋಣ. |
05:04 | ಹೆಚ್ ಎರಡು ಎಸ್ ಒ ನಾಲ್ಕು(H2SO4) ಎಂದು ಟೈಪ್ ಮಾಡಿ. |
05:07 | ಇಲ್ಲಿ, ಎರಡು ಮತ್ತು ನಾಲ್ಕನ್ನು ಸಬ್ ಸ್ಕ್ರಿಪ್ಟ್ ಆಗಿ ಬರೆಯಬೇಕು. |
05:11 | ಮೊದಲು, ಎರಡನ್ನು ಆಯ್ಕೆ ಮಾಡಿ. ಟೂಲ್ ಕಂಟ್ರೋಲ್ ಬಾರ್ ನಲ್ಲಿ, ಟಾಗಲ್ ಸಬ್ ಸ್ಕ್ರಿಪ್ಟ್ ಐಕಾನ್ ಅನ್ನು ಕ್ಲಿಕ್ ಮಾಡಿ. |
05:17 | ಹೀಗೆಯೇ, ನಾಲ್ಕನ್ನೂ ಬದಲಾಯಿಸಿ. |
05:19 | ಸಾರಾಂಶ ತಿಳಿಯೋಣ. |
05:21 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು: |
05:24 | ಮಾನ್ಯುಯಲ್ ಕರ್ನಿಂಗ್(Manual kerning), ಸ್ಪೆಲ್ ಚೆಕಿಂಗ್ (Spell checking) |
05:26 | ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script) |
05:29 | ನಿಮಗಾಗಿ ಎರಡು ಅಸೈನ್ಮೆಂಟ್ ಗಳು ಇಲ್ಲಿವೆ - |
05:31 | ಹೌ ಆರ್ ಯು ಎಂದು ಟೆಕ್ಸ್ಟ್ ಅನ್ನು ಟೈಪ್ ಮಾಡಿ ಮತ್ತು ಫಾಂಟ್ ಸೈಸ್ ಅನ್ನು ಎಪ್ಪತ್ತೈದು ಎಂದು ಬದಲಾಯಿಸಿ. |
05:36 | w ನ ನಂತರ ಕರ್ಸರ್ ಇಡಿ. Horizontal kerning ಪ್ಯಾರಾಮೀಟರ್ ಅನ್ನು ಮೈನಸ್ ಇಪ್ಪತ್ತು ಎಂದು ಬದಲಾಯಿಸಿ. |
05:42 | ಆರ್ ಶಬ್ದವನ್ನು ಆಯ್ಕೆ ಮಾಡಿ. ವರ್ಟಿಕಲ್ ಶಿಫ್ಟ್ ಪ್ಯಾರಮೀಟರ್ ಅನ್ನು ನಲವತ್ತು ಎಂದು ಬದಲಾಯಿಸಿ. |
05:47 | ಯು ಶಬ್ದವನ್ನು ಆಯ್ಕೆ ಮಾಡಿ. ಕ್ಯಾರೆಕ್ಟರ್ ರೊಟೇಶನ್ ಪ್ಯಾರಾಮೀಟರ್ ಅನ್ನು ಮೂವತ್ತು ಎಂದು ಬದಲಾಯಿಸಿ. |
05:52 | ಈ ಕೆಳಗಿನ ಸೂತ್ರಗಳನ್ನು ಸಬ್ ಸ್ಕ್ರಿಪ್ಟ್ ಮತ್ತು ಸೂಪರ್ ಸ್ಕ್ರಿಪ್ಟ್ ಅನ್ನು ಬಳಸಿ ಬರೆಯಿರಿ. |
05:57 | ಸಿಲ್ವರ್ ಸಲ್ಫೇಟ್ - ಎ ಜಿ ಟು ಎಸ್ ಒ ಫೋರ್ |
06:00 | ಎ ಸ್ಕ್ವೇರ್ ಮೈನಸ್ ಬಿ ಸ್ಕ್ವೇರ್ ಈಸ್ ಈಕ್ವಲ್ ಟು ಎ ಮೈನಸ್ ಬಿ ಇಂಟು ಎ ಪ್ಲಸ್ ಬಿ |
06:06 | ನಿಮ್ಮ ಅಸೈನ್ಮೆಂಟ್ ಈ ರೀತಿ ಕಾಣಬೇಕು. |
06:09 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ನೀವು ಇದನ್ನು ನೋಡಬಹುದು. |
06:15 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
06:22 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
06:24 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
06:30 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
06:34 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:36 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ರಾಕೇಶ. ಧನ್ಯವಾದಗಳು. |