Difference between revisions of "Inkscape/C2/Layers-and-Boolean-operations/Kannada"
From Script | Spoken-Tutorial
(Created page with " {| Border =1 | Time | Narration |- | 00:00 |ಸ್ಪೋಕನ್ ಟ್ಯುಟೋರಿಯಲ್ ನ, ಇಂಕ್ ಸ್ಕೇಪ್ ಅನ್ನು ಬಳಸಿ ಲೇ...") |
Rakeshkkrao (Talk | contribs) |
||
Line 6: | Line 6: | ||
|- | |- | ||
| 00:00 | | 00:00 | ||
− | | | + | |ನಮಸ್ಕಾರ, ಲೇಯರ್ಸ್ ಆಂಡ್ ಬೂಲಿಯನ್ ಆಪರೇಶನ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೊರಿಯಲ್-ಗೆ ಸ್ವಾಗತ. |
|- | |- | ||
| 00:07 | | 00:07 |
Revision as of 14:20, 3 May 2016
Time | Narration |
00:00 | ನಮಸ್ಕಾರ, ಲೇಯರ್ಸ್ ಆಂಡ್ ಬೂಲಿಯನ್ ಆಪರೇಶನ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೊರಿಯಲ್-ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು : ಲೇಯರ್ಸ್ |
00:11 | ಫಿಲ್ಟರ್ಸ್ |
00:12 | ಬೂಲಿಯನ್ ಆಪರೇಶನ್ಸ್ |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:25 | ಇಂಕ್ಕ್ ಸ್ಕೇಪ್ ಅನ್ನು ಒಪನ್ ಮಾಡೋಣ. ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ. |
00:30 | ಲೋಗೋ ಅನ್ನು ಡಬಲ್ ಕ್ಲಿಕ್ ಮಾಡಿ ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು. |
00:32 | ನಾವು ಈ ಮೊದಲು ರಚಿಸಿದ ಅಸೈನ್ಮೆಂಟ್ ಅಂಡರ್ಸ್ಕೋರ್ ಟು ಡಾಟ್ ಎಸ್ ವಿ ಜಿ ಯನ್ನು ಓಪನ್ ಮಾಡೋಣ. |
00:38 | ಇದನ್ನು ನಾವು ಮೈ ಡಾಕ್ಯುಮೆಂಟ್ಸ್ ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೆ. |
00:41 | ಮೊದಲು, ಇಂಕ್ ಸ್ಕೇಪ್ ನಲ್ಲಿ ಲೇಯರ್ಸ್ ನ ಬಗೆಗೆ ಕಲಿಯೋಣ. |
00:45 | ಲೇಯರ್ ಮೆನುವಿನಲ್ಲಿ, ಲೇಯರ್ ಎಂಬುದನ್ನು ಆಯ್ಕೆ ಮಾಡಿ. |
00:50 | ಈಗ, ಇಂಟರ್ಫೇಸ್ ನ ಬಲಭಾಗದಲ್ಲಿ, ಲೇಯರ್ ಪ್ಯಾಲೆಟ್ ಒಪನ್ ಆಗುತ್ತದೆ. |
00:55 | ಪೂರ್ವನಿಯೋಜಿತವಾಗಿ, ಒಂದು ಲೇಯರ್ ಇರುತ್ತದೆ. ಲೇಯರ್ ಒನ್ ಎಂದು ಒಂದು ಲೇಯರ್ ಅನ್ನು ನೋಡಬಹುದು. |
01:01 | ಇನ್ನೊಂದು ಲೇಯರ್ ಅನ್ನು ಸೇರಿಸಲು ಅಥವಾ ರಚಿಸಲು, ಲೇಯರ್ ಪ್ಯಾಲೆಟ್ ನ ಮೇಲಿರುವ ಪ್ಲಸ್ ಐಕಾನ್ ಅನ್ನು ಕ್ಲಿಕ್ ಮಾಡಿ. |
01:07 | ಆಡ್(add) ಲೇಯರ್ ಎಂಬ ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ. |
01:10 | ಲೇಯರ್ ನೇಮ್ ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ, ಲೇಯರ್ ಗೆ ಹೆಸರನ್ನು ಕೊಡಬಹುದು. |
01:15 | ನಾನು ಈ ಲೇಯರ್ ಅನ್ನು ಐ ಎಂದು ಹೆಸರಿಸುತ್ತೇನೆ. |
01:18 | ಲೇಯರ್ ನ ಸ್ಥಾನವನ್ನು ನಾವು ನಿರ್ಧರಿಸಬಹುದು, ಇದಕ್ಕಾಗಿ, ಪೊಸಿಶನ್ ಎಂಬ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ. |
01:25 | ಇಲ್ಲಿ ಮೂರು ಆಯ್ಕೆಗಳಿವೆ. |
01:27 | ಅಬೊವ್ ಕರೆಂಟ್ ಎಂಬುದು, ಈ ಲೇಯರ್ ಅನ್ನು ಈಗಿನ ಲೇಯರ್ ನ ಮೇಲೆ ಇರಿಸುತ್ತದೆ. |
01:32 | ಬಿಲೊ ಕರೆಂಟ್ ಎಂಬುದು ಈ ಲೇಯರ್ ಅನ್ನು ಈಗಿನ ಲೇಯರ್ ನ ಕೆಳಗೆ ಇರಿಸುತ್ತದೆ. |
01:36 | ಆಸ್ (as) ಸಬ್ ಲೇಯರ್ ಆಫ್ ಕರೆಂಟ್ ಎಂಬುದು, ಈ ಲೇಯರ್, ಈಗಿನ ಲೇಯರ್ ನ ಭಾಗವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. |
01:41 | ಈಗ ನಾನು, ಅಬೊವ್ ಕರೆಂಟ್ ಎಂದು ಆಯ್ಕೆ ಮಾಡುತ್ತೇನೆ ಮತ್ತು add ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
01:47 | ಈಗ ಲೇಯರ್ ಪ್ಯಾಲೆಟ್ ನಲ್ಲಿ, ಐ ಹೆಸರಿನ, ಒಂದು ಹೊಸ ಲೇಯರ್ ಇರುವುದನ್ನು ಗಮನಿಸಬಹುದು. |
01:52 | ಹೀಗೆಯೇ, ಬೋ ಎಂಬ ಇನ್ನೊಂದು ಲೇಯರ್ ಅನ್ನು ರಚಿಸಿ. |
02:00 | ಈಗ, ಲೇಯರ್ ಪ್ಯಾಲೆಟ್ ನಲ್ಲಿ ಮೂರು ಲೇಯರ್ ಗಳಿವೆ. |
02:04 | ಈಗ, ಲೇಯರ್ ನ ಹೆಸರು ಬದಲಾಯಿಸುವುದನ್ನು ಕಲಿಯೋಣ. |
02:08 | ಮೊದಲು, ಲೇಯರ್ ಒನ್ ನ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಸರ್ಕಲ್ ಎಂದು ಹೆಸರಿಸಿ ನಂತರ ಎಂಟರ್ (enter) ಕೀಯನ್ನು ಒತ್ತಿ. |
02:16 | ನಮ್ಮ ಕ್ಯಾನ್ವಾಸ್ ಗೆ ಹಿಂತಿರುಗಿ, ಈಗ ಎರಡು ಕಣ್ಣುಗಳೂ ಮತ್ತು ಒಂದು ಬೋ ಇವೆ. |
02:20 | ಈಗ, ಈ ಎರಡೂ ಆಕಾರಗಳನ್ನೂ ನಾವು ರಚಿಸಿದ ಎರಡು ವಿವಿಧ ಲೇಯರ್ ಗಳಿಗೆ ಸರಿಸೋಣ. |
02:25 | ಮೌಸ್ ಅನ್ನು ಎಳೆದು, ಎರಡೂ ಕಣ್ಣುಗಳನ್ನೂ ಆಯ್ಕೆ ಮಾಡಿ. |
02:28 | ಈಗ, ನಿಮ್ಮ ಕೀಬೋರ್ಡ್ ನಲ್ಲಿ, Ctrl ಮತ್ತು X ಅನ್ನು ಒತ್ತಿ. ಕಣ್ಣುಗಳು ಈಗ ಕಾಣದಾಗುತ್ತವೆ. |
02:34 | ಲೇಯರ್ ಪ್ಯಾಲೆಟ್ ನಲ್ಲಿರುವ ಐ ಎಂಬ ಲೇಯರ್ ನ ಮೇಲೆ ಕ್ಲಿಕ್ ಮಾಡಿ. |
02:38 | ಕ್ಯಾನ್ವಾಸ್ ಗೆ ಹಿಂತಿರುಗಿ, Ctrl, Alt ಮತ್ತು V ಕೀಗಳನ್ನು ಒತ್ತಿ. |
02:44 | ಇದೇ ರೀತಿ ಬೋ ಆಕಾರಕ್ಕೂ ಮಾಡಿ. |
02:52 | ಎಲ್ಲ ಆಬ್ಜೆಕ್ಟ್ ಗಳ ಆಯ್ಕೆಯನ್ನು ರದ್ದುಗೊಳಿಸಲು, ಕ್ಯಾನ್ವಾಸ್ ನ ಮೇಲೆ, ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ. |
03:00 | ಐ ಮತ್ತು ಲಾಕ್ ಐಕಾನ್ ಗಳು ಲೇಯರ್ ಗಳನ್ನು ಮರೆಮಾಚಲು ಮತ್ತು ಲೊಚ್ಕ್ ಮಾಡಲು ಸಹಾಯ ಮಾಡುತ್ತವೆ. |
03:04 | ನೀವು ಲೇಯರ್ ಅನ್ನು ಮರೆಮಾಚಿದಾಗ, ಕೆಳಗಿರುವ ಲೇಯರ್ ಗಳ ಆಬ್ಜೆಕ್ಟ್ ಗಳನ್ನು ಸ್ಪಷ್ಟವಾಗಿ ನೋಡಬಹುದು. |
03:11 | ನೀವು ಒಂದು ಲೇಯರ್ ಅನ್ನು ಲಾಕ್ ಮಾಡಿದಾಗ, ಆ ಲೇಯರ್ ಗೆ ಆಗಬಹುದಾದ ಆಕಸ್ಮಿಕ ಬದಲಾವಣೆಗಳನ್ನು ತಡೆಯಬಹುದು. |
03:18 | ನಾವು ದೊಡ್ಡ ಮತ್ತು ಕ್ಲಿಷ್ಟ ಗ್ರಾಫಿಕ್ ಅಸೈನ್ಮೆಂಟ್ ಗಳನ್ನು ಮಾಡುವಾಗ, ಈ ವಿಶೇಷತೆಗಳು ಸಹಾಯಕವಾಗುತ್ತವೆ. |
03:25 | ಎಲ್ಲ ಲೇಯರ್ ನ ಎಡ ಭಾಗದಲ್ಲಿ, ನೀವು ಮುಖ್ಯವಾಗಿ ಎರಡು ಐಕಾನ್ ಗಳನ್ನು ಗಮನಿಸಬೇಕು – ಐ ಮತ್ತು ಲಾಕ್. |
03:32 | ಈಗ ನಾವು ಇವುಗಳ ಬಳಕೆಯನ್ನು ಕಲಿಯೋಣ. |
03:35 | ಲೇಯರ್ ಗಳನ್ನು, ಲಾಕ್ ಅಥವಾ ಅನ್ಲಾಕ್ ಮಾಡಲು, ಲಾಕ್ ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ ನಾನು ಬೋ ಲೇಯರ್ ಅನ್ನು ಲಾಕ್ ಮಾಡಿದ್ದೇನೆ. |
03:42 | ಲಾಕ್ ಆದ ಲೇಯರ್ ನಲ್ಲಿ ನಾವು ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. |
03:47 | ಈಗ, ಕ್ಯಾನ್ವಾಸ್ ಮೇಲಿರುವ ಬೋ ಅನ್ನು ಆಯ್ಕೆ ಮಾಡಲು ಪ್ರಯತ್ನಿಸೋಣ. ಆಯ್ಕೆ ಮಾಡಲು ಸಾಧ್ಯವಾಗದಿರುವುದನ್ನು ನೀವು ಗಮನಿಸಬಹುದು. |
03:58 | ಈಗ, ಬೋ ಲೇಯರ್ ಅನ್ನು ಅನ್ಲಾಕ್ ಮಾಡುತ್ತೇನೆ. |
04:01 | ಈಗ, ಬೋ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಬಹುದು ಮತ್ತು ಅದರ ಗುಣಗಳನ್ನು ಬದಲಾಯಿಸಬಹುದು. |
04:07 | ಕ್ಯಾನ್ವಾಸ್ ನ ಮೇಲೆ, ಲೇಯರ್ ಅನ್ನು ಮರೆಮಾಚಲು ಅಥವಾ ಗೋಚರಿಸುವಂತೆ ಮಾಡಲು, ಲೇಯರ್ ನ ಎಡಭಾಗದಲ್ಲಿರುವ, ಐ ಐಕಾನ್ ಅನ್ನು ಕ್ಲಿಕ್ ಮಾಡಿ. |
04:15 | ಬೋ ಲೇಯರ್ ನ ಐ ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ. |
04:18 | ಕ್ಯಾನ್ವಾಸ್ ನ ಮೇಲೆ ಏನಾಗುತ್ತದೆ ಎಂಬುದನ್ನು ಗಮನಿಸಿ. |
04:23 | ಈಗ ನಾನು ಬೋ ಲೇಯರ್ ನ ನಕಲು ಮಾಡುತ್ತೇನೆ. |
04:26 | ಲೇಯರ್ ಮೆನುವಿನಲ್ಲಿ, ಡುಪ್ಲಿಕೇಟ್ ಕರೆಂಟ್ ಲೇಯರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. |
04:32 | ಲೇಯರ್ ಪ್ಯಾಲೆಟ್ ವಿಂಡೋ ನಲ್ಲಿ, ಬೋ ಕಾಪಿ ಎಂಬ ಹೊಸ ಲೇಯರ್ ಇರುವುದನ್ನು ನೀವು ಗಮನಿಸಬಹುದು. |
04:41 | ಆದರೆ, ನಮಗೆ, ಕ್ಯಾನ್ವಾಸ್ ನ ಮೇಲೆ ಇನ್ನೊಂದು ಬೋ ಕಾಣುವುದಿಲ್ಲ. ಏಕೆಂದರೆ, ಬೋ ಆಬ್ಜೆಕ್ಟ್, ಕೆಳಗಿನ ಲೇಯರ್ ನ ಮೇಲೆ ಇದೆ. |
04:50 | ಮೇಲಿನ ಲೇಯರ್ ನ ಬೋ ಅನ್ನು ಆಯ್ಕೆ ಮಾಡಿ, ಮತ್ತು ಇದನ್ನು ಸರಿಸಿ, ಎರಡೂ ಬೋ ಗಳೂ ಕಾಣುವಂತೆ ಮಾಡಿ. |
04:56 | ಸರ್ಕಲ್ ಲೇಯರ್ ಅನ್ನು ಆಯ್ಕೆ ಮಾಡಿ. |
04:58 | ಕ್ಯಾನ್ವಾಸ್ ನ ಮೇಲೆ ಕಣ್ಣುಗಳು ಮತ್ತು ಬೋ ಗಳನ್ನು ಸುತ್ತುವರೆಯುವಂತೆ, ಒಂದು ವೃತ್ತವನ್ನು ರಚಿಸಿ, ಅದಕ್ಕೆ ಕೇಸರಿ ಬಣ್ಣ ತುಂಬಿ. |
05:05 | ದೀರ್ಘ ವೃತ್ತವು ಉಳಿದೆಲ್ಲ ಆಬ್ಜೆಕ್ಟ್ ಗಳ ಹಿನ್ನೆಲೆಯಲ್ಲಿ ಕಾಣುತ್ತದೆ. |
05:10 | ಲೇಯರ್ ಪ್ಯಾಲೆಟ್ ನಲ್ಲಿ, ಪ್ಲಸ್ ಐಕಾನ್ ನ ಮುಂದಿರುವ ನಾಲ್ಕು ಐಕಾನ್ ಗಳು, ಆಯ್ಕೆಯಾದ ಲೇಯರ್ ನ ಸ್ಥಾನದಲ್ಲಿರಿಸಲು ಸಹಾಯ ಮಾಡುತ್ತವೆ. |
05:17 | ಮೊದಲನೇ ಐಕಾನ್, ಲೇಯರ್ ಅನ್ನು ಉಳಿದೆಲ್ಲ ಲೇಯರ್ ಗಳ ಮೆಲೆ ಇರಿಸುತ್ತದೆ. |
05:23 | ಈಗ ಸರ್ಕಲ್ ಲೇಯರ್ ಆಯ್ಕೆ ಆಗಿದೆ. |
05:25 | ಈ ಐಕಾನ್ ಅನ್ನು ಕ್ಲಿಕ್ ಮಾಡುವುದರಿಂದ, ಸರ್ಕಲ್ ಲೇಯರ್ ಅತಿ ಮೇಲಿನ ಲೇಯರ್ ಆಗುವುದನ್ನು ನೀವು ಗಮನಿಸಬಹುದು. |
05:33 | ಆಯ್ಕೆಯಾದ ಲೇಯರ್ ಅನ್ನು, ಕೊನೆಯ ಐಕಾನ್, ಅತೀ ಕೆಳಗಿನ ಲೇಯರ್ ಆಗಿ ಮಾಡುತ್ತದೆ. |
05:38 | ಈ ಐಕಾನ್ ನ ಮೇಲ್ ಕ್ಲಿಕ್ ಮಾಡಿ, ಈಗ, ಸರ್ಕಲ್ ಲೇಯರ್, ಅತೀ ಕೆಳಗಿನ ಲೇಯರ್ ಆಗಿವುದನ್ನು ನೀವು ಗಮನಿಸಬಹುದು. |
05:44 | ಎರಡನೇ ಐಕಾನ್, ಆಯ್ಕೆಯಾದ ಲೇಯರ್ ಅನ್ನು ಒಂದು ಲೇಯರ್ ಮೇಲೆ ಏರಿಸುತ್ತದೆ. |
05:48 | ಈ ಐಕಾನ್ ಮೇಲೆ ಕ್ಲಿಕ್ ಮಾಡಿ, ಈಗ, ಸರ್ಕಲ್ ಲೇಯರ್, ಐ ಲೇಯರ್ ನ ಮೇಲೆ ಬರುತ್ತದೆ. ಹಾಗಾಗಿ, ಕಣ್ಣುಗಳು ಕಾಣುವುದಿಲ್ಲ. |
05:57 | ಮೂರನೇ ಐಕಾನ್, ಆಯ್ಕೆಯಾದ ಲೇಯರ್ ಅನ್ನು ಒಂದು ಲೇಯರ್ ಕೆಳಗಿ ಇಳಿಸುತ್ತದೆ. |
06:01 | ಈ ಐಕಾನ್ ನ ಮೇಲೆ ಕ್ಲಿಕ್ ಮಾಡಿ, ಈಗ ಸರ್ಕಲ್ ಲೇಯರ್, ಐ ಲೇಯರ್ ನ ಕೆಳಗೆ ಬರುತ್ತದೆ. |
06:07 | ಹೀಗೆ ಈ ನಾಲ್ಕೂ ಐಕಾನ್ ಗಳನ್ನೂ ಬಳಸಬಹುದು. |
06:13 | ಕೊನೆಯಲ್ಲಿರುವ ಮೈನಸ್ ಐಕಾನ್, ಆಯ್ಕೆಯಾದ ಲೇಯರ್ ಅನ್ನು ಅಳಿಸಿಹಾಕುತ್ತದೆ. ಬೋ ಕಾಪಿ ಎಂಬ ಲೇಯರ್ ಅನ್ನು ಆಯ್ಕೆ ಮಾಡಿ, ಇದನ್ನು ಒತ್ತಿ. |
06:21 | ಬೋ ಕಾಪಿ ಲೇಯರ್ ಈಗ ಕಾಣುತ್ತಿಲ್ಲ ಎಂಬುದನ್ನು ಗಮನಿಸಬಹುದು. |
06:27 | ಬ್ಲೆಂಡ್ ಮೋಡ್ ಎಂಬುದು, ಒಂದು ಲೇಯರ್ ಗೆ ಬ್ಲೆಂಡ್ ಫಿಲ್ಟರ್ ಹಾಕಲು ಇರುವ ಶಾರ್ಟ್ ಕಟ್. |
06:31 | ಆಯ್ಕೆಯಾದ ಲೇಯರ್ ನಲ್ಲಿ, ಆಬ್ಜೆಕ್ಟ್ ಗಳು ಒಂದರ ಮೇಲೊಂದು ಇದ್ದರೆ, ಇಂಕ್ ಸ್ಕೇಪ್ , ಎರಡೂ ಆಬ್ಜೆಕ್ಟ್ ಗಳ ಪ್ರತೀ ಪಿಕ್ಸೆಲ್ ಅನ್ನೂ ಬ್ಲೆಂಡ್ ಮಾಡುತ್ತದೆ. |
06:41 | ಹಾಗಾಗಿ, ಸರ್ಕಲ್ ಲೇಯರ್ ಅನ್ನು ಮೇಲೆ ಸರಿಸಿ, ಫಿಲ್ಟರ್ ಗಳು ಕಾಣುವಂತೆ ಮಾಡಿ. |
06:46 | ಬ್ಲೆಂಡ್ ಮೋಡ್ ನ ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಐದು ಆಯ್ಕೆಗಳಿರುವುದನ್ನು ನೀವು ನೋಡಬಹುದು. |
06:52 | ಮೊದಲನೇಯ, ನಾರ್ಮಲ್ ಎಂಬ ಆಯ್ಕೆಯು, ಲೇಯರ್ ಗೆ ಯಾವುದೇ ಫಿಲ್ಟರ್ ಅನ್ನು ಸೇರಿಸುವುದಿಲ್ಲ. |
06:57 | ಇದರ ಮೇಲೆ ಕ್ಲಿಕ್ ಮಾಡೋಣ. ಯಾವುದೇ ಫಿಲ್ಟರ್ ಸೇರ್ಪಡೆ ಆಗದಿರುವುದನ್ನು ನೀವು ಗಮನಿಸಬಹುದು. |
07:03 | ನಂತರ, ಮಲ್ಟಿಪ್ಲೈ ಎಂಬುದರ ಮೇಲೆ ಕ್ಲಿಕ್ ಮಾಡಿ. |
07:06 | ಉನ್ನತವಾದ ಪದರದ ಮೇಲೆ ಇರುವ ವಸ್ತುಗಳು ಫಿಲ್ಟರ್ ನಂತೆ, ಬೆಳಕನ್ನು ಕೆಳಗಿನ ಪದರಗಳ ಆಬ್ಜೆಕ್ಟ್ ಗಳು ಕಾಣುವಂತೆ ಬಿಡುತ್ತವೆ. |
07:14 | ಇದರ ಜೊತೆಗೆ, ಒಂದರ ಮೇಲೊಂದು ಬಂದ ಭಾಗಗಳಲ್ಲಿ, ಬಣ್ಣಗಳನ್ನು ಬೆರೆಸಿ ಗಾಢ ಬಣ್ಣಗಳನ್ನಾಗಿಸುತ್ತದೆ. |
07:21 | ಮುಂದಿನ ಆಯ್ಕೆ : ಸ್ಕ್ರೀನ್ |
07:25 | ಮೇಲಿನ ಆಬ್ಜೆಕ್ಟ್ ಗಳನ್ನು ಗಮನಿಸಿ. ಅವು ಕೆಳಗಿನ ಆಬ್ಜೆಕ್ಟ್ ಗಳನ್ನು ತಿಳಿಯಾಗಿಸುತ್ತವೆ. |
07:30 | ಹಾಗಾಗಿ, ಒಂದರ ಮೇಲೊಂದು ಆಬ್ಜೆಕ್ಟ್ ಗಳು ಬಂದ ಭಾಗಗಳಲ್ಲಿ, ಬಣ್ಣಗಳನ್ನು ಬೆರೆಸಿ ತಿಳಿ ಬಣ್ಣವನ್ನಾಗಿಸುತ್ತದೆ. |
07:36 | ಡಾರ್ಕನ್ ಎಂಬುದನ್ನು ಆಯ್ಕೆ ಮಾಡಿ. ಮೇಲಿನ ಲೇಯರ್ ನಲ್ಲಿರುವ ಆಬ್ಜೆಕ್ಟ್ ಗಳು ಕೆಳಗಿನ ಲೇಯರ್ ನಲ್ಲಿರುವ ಆಬ್ಜೆಕ್ಟ್ ಗಳನ್ನ್ ಗಾಢವಾಗಿಸುತ್ತವೆ. |
07:44 | ಈಗ, ಲೈಟನ್ ಎಂಬುದನ್ನು ಆಯ್ಕೆ ಮಾಡಿ. ಇಲ್ಲಿ, ಮೇಲಿನ ಆಬ್ಜೆಕ್ಟ್ ಗಳು ಕೆಳಗಿನ ಆಬ್ಜೆಕ್ಟ್ ಗಳನ್ನು ತಿಳಿಯಾಗಿಸುತ್ತವೆ. |
07:53 | ಬ್ಲೆಂಡ್ ಮೋಡ್ ಅನ್ನು ಪುನಃ ನಾರ್ಮಲ್ ಮೋಡ್ ಗೆ ಬದಲಾಯಿಸಿದರೆ, ಬ್ಲೆಂಡ್ ಫಿಲ್ಟರ್ ಕಣ್ಮರೆಯಾಗುತ್ತವೆ. |
08:00 | ಈ ರೀತಿ, ಇನ್ನೂ ಹಲವು ಫಿಲ್ಟರ್ ಗಳನ್ನು ಫಿಲ್ಟರ್ ಮೆನುವುನಲ್ಲಿ ನೋಡಬಹುದು. |
08:04 | ಯಾವುದೇ ಫಿಲ್ಟರ್ ಅನ್ನು ಅಳವಡಿಸುವ ಮೊದಲು, ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, ನಂತರ ಬೇಕಾದ ಫಿಲ್ಟರ್ ಅನ್ನು ಕ್ಲಿಕ್ ಮಾಡಿ. |
08:12 | ಸರ್ಕಲ್ ಲೇಯರ್ ಅನ್ನು ಪುನಃ ಕೆಳಗೆ ಸರಿಸಿ. |
08:16 | ಈಗ ಐ ಅನ್ನು ಆಯ್ಕೆ ಮಾಡುತ್ತೆನೆ. ಫಿಲ್ಟರ್ಸ್ ಮೆನುವಿನಲ್ಲಿ, ಬ್ಲರ್ ಮತ್ತು ಫ್ಯಾನ್ಸಿ ಬ್ಲರ್ ಅನ್ನು ಆಯ್ಕೆ ಮಾಡಿ. |
08:26 | ಐ ನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. |
08:29 | ಇನ್ನೊಂದು ಐ ಅನ್ನು ಆಯ್ಕೆ ಮಾಡುತ್ತೇನೆ. ಫಿಲ್ಟರ್ಸ್ ಮೆನುವಿನಲ್ಲಿ, ಬೆವೆಲ್ ಮತ್ತು ಸ್ಮಾರ್ಟ್ ಜೆಲ್ಲಿ ಅನ್ನು ಆಯ್ಕೆ ಮಾಡಿ. |
08:39 | ಪುನಃ, ಐ ನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. |
08:44 | ಈಗ, ಬೋ ಅನ್ನು ಆಯ್ಕೆ ಮಾಡಿ. ಫಿಲ್ಟರ್ಸ್ ಮೆನುವಿನಲ್ಲಿ, ಸ್ಕ್ಯಾಟರ್ ಮತ್ತು ಏರ್ ಸ್ಪ್ರೇ ಅನ್ನು ಆಯ್ಕೆ ಮಾಡಿ. |
08:51 | ಬಣ್ಣವನ್ನು ಸಿಂಪಡಿಸಿದಂತೆ ಬೋ ಕಾಣುತ್ತದೆ. |
08:55 | ಬ್ಲೆಂಡ್ ಮೋಡ್ ನ ಕೆಳಗಿರುವ, ಒಪ್ಯಾಸಿಟಿ ಆಯ್ಕೆಯು, ಆಯ್ಕೆಯಾದ ಲೇಯರ್ ನ ಅಪಾರದರ್ಶಕತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. |
09:01 | ಸರ್ಕಲ್ ಲೇಯರ್ ಅನ್ನು ಆಯ್ಕೆ ಮಾಡಿ. |
09:03 | ಒಪ್ಯಾಸಿಟಿ ಮಟ್ಟವನ್ನು ಸರಿಪಡಿಸಿ ಮತ್ತು ದೀರ್ಘ ವೃತ್ತದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. |
09:10 | ನಂತರ, ನಾವು ಬೂಲಿಯನ್ ಆಪರೇಶನ್ ಗಳ ಬಗೆಗೆ ತಿಳಿಯೋಣ. |
09:13 | ಪಾತ್ ಮೆನುವಿನಲ್ಲಿ, ಎಲ್ಲ ಬೂಲಿಯನ್ ಆಪರೇಶನ್ ಗಳೂ ಲಭ್ಯವಿದೆ. |
09:21 | ಕ್ಯಾನ್ವಾಸ್ ನ ಮೇಲಿರುವ ಎಲ್ಲ ಆಕಾರಗಳಾನ್ನೂ ಪಕ್ಕದಲ್ಲಿಡಿ. |
09:26 | ಒಂದು ಹಸಿರು ಚೌಕ ಮತ್ತು ಕೆಂಪು ಬಣ್ಣದ ವೃತವನ್ನು ರಚಿಸಿ. ವೃತ್ತವನ್ನು ಚೌಕದ ಮೇಲೆ ಬದಿಯಲ್ಲಿ ಇಡಿ. |
09:36 | ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ, ಯುನಿಯನ್ ಎಂಬುದನ್ನು ಕ್ಲಿಕ್ ಮಾಡಿ. ಈಗ ಎರಡೂ ಆಕಾರಗಳೂ ಸೇರಿರುವುದನ್ನು ನೀವು ಗಮನಿಸಬಹುದು. |
09:46 | ಈಗ, ಈ ಕ್ರಿಯೆಯನ್ನು ರದ್ದುಗೊಳಿಸಲು, ನಿಮ್ಮ ಕೀಬೋರ್ಡ್ ನಲ್ಲಿ, Ctrl ಮತ್ತು Z ಕೀಗಳನ್ನು ಒತ್ತಿ. |
09:51 | ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಡಿಫರೆನ್ಸ್ ಎಂಬುದನ್ನು ಕ್ಲಿಕ್ ಮಾಡಿ, ಮತ್ತು ಏನಾಗುವುದೆಂದು ಗಮನಿಸಿ. |
09:59 | ಪುನಃ, ಈಗ, ಈ ಕ್ರಿಯೆಯನ್ನು ರದ್ದುಗೊಳಿಸಲು, Ctrl ಮತ್ತು Z ಕೀಗಳನ್ನು ಒತ್ತಿ. |
10:03 | ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಇಂಟರ್ಸೆಕ್ಷನ್ ಎಂಬುದನ್ನು ಕ್ಲಿಕ್ ಮಾಡಿ, ಮತ್ತು ಆಕಾರದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. |
10:11 | ಈ ಕ್ರಿಯೆಯನ್ನು ರದ್ದುಗೊಳಿಸಲು, Ctrl ಮತ್ತು Z ಕೀಗಳನ್ನು ಒತ್ತಿ. |
10:16 | ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಎಕ್ಸ್ ಕ್ಲೂಶನ್(Exclusion) ಎಂಬುದನ್ನು ಕ್ಲಿಕ್ ಮಾಡಿ, ಮತ್ತು ಆಕಾರದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. |
10:24 | ಪುನಃ Ctrl ಮತ್ತು Z ಕೀಗಳನ್ನು ಒತ್ತಿ. |
10:27 | ಪುನಃ ಎರಡನ್ನೂ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ ಡಿವಿಶನ್ ಎಂಬುದನ್ನು ಕ್ಲಿಕ್ ಮಾಡಿ. |
10:34 | ವಿಂಗಡಿಸಲಾದ ವೃತ್ತದ ಮೇಲೆ ಕ್ಲಿಕ್ ಮಾಡಿ, ಮತ್ತು ಆ ಭಾಗವನ್ನು ಪಕ್ಕಕ್ಕೆ ಸರಿಸಿ, ಫಲಿತಾಂಶವನ್ನು ನೋಡಿ. |
10:39 | ಈಗ, ctrl ಮತ್ತು z ಕೀಗಳನ್ನು ಎರಡು ಬಾರಿ ಒತ್ತಿ, ಈ ಕಾರ್ಯಗಳನ್ನು ರದ್ದುಗೊಳಿಸಿ. |
10:44 | ಎರಡೂ ಆಬ್ಜೆಕ್ಟ್ ಗಳನ್ನೂ ಮತ್ತೆ ಆಯ್ಕೆ ಮಾಡಿ. ಪಾತ್ ಮೆನುವಿನಲ್ಲಿ, ಕಟ್ ಪಾತ್ ಎಂಬುದನ್ನು ಕ್ಲಿಕ್ ಮಾಡಿ. |
10:50 | ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. |
10:53 | ಕಟ್ ಪಾತ್ ಎಂಬ ಆಯ್ಕೆಯು, ಆಬ್ಜೆಕ್ಟ್ ಸ್ಟ್ರೋಕ್ ಅನ್ನು ಹೊಂದಿದ್ದರೆ ಮಾತ್ರ ಕೆಲಸ ಮಾಡುತ್ತದೆ. ಆಕಾರಗಳ ಆಯ್ಕೆಯನ್ನು ಮೊದಲು ರದ್ದುಗೊಳಿಸಿ. |
10:59 | ಈಗ, ಯಾವುದಾದರೊಂದು ಸ್ಟ್ರೋಕ್ ಅನ್ನು ಆಯ್ಕೆ ಮಾಡಿ ಮತ್ತು ಕಟ್ ಪಾತ್ ಕಾಣುವಂತೆ ಅದನ್ನು ಪಕ್ಕಕ್ಕೆ ಸರಿಸಿ. |
11:05 | ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : |
11:09 | *ಲೇಯರ್ ಗಳು |
11:10 | * ಫಿಲ್ಟರ್ಸ್ ಮತ್ತು ಬೂಲಿಯನ್ ಆಪರೇಶನ್ ಗಳು |
11:14 | ನಿಮಗಾಗಿ ನಾಲ್ಕು ಅಸೈನ್ಮೆಂಟ್ ಗಳು ಇಲ್ಲಿವೆ. |
11:16 | ಗುಲಾಬಿ ಬಣ್ಣದ ಒಂದು ಆಯತ ಮತ್ತು ಹಸಿರು ಬಣ್ಣದ ತ್ರಿಕೋನ ಗಳನ್ನು ರಚಿಸಿ. |
11:21 | ತ್ರಿಕೋನವನ್ನು ಆಯತದ ಮೇಲೆ ಇಡಿ. |
11:24 | ಎರಡನ್ನೂ ಆಯ್ಕೆ ಮಾಡಿ. ಯುನಿಯನ್ ಅನ್ನು ಬಳಸಿ. ಅದು ಹೋಮ್ ಐಕಾನ್ ನಂತೆ ಕಾಣಬೇಕು. |
11:30 | ಈ ಲೇಯರ್ ಅನ್ನು ಹೋಮ್ ಎಂದು ಹೆಸರಿಸಿ. |
11:32 | ಎರಡು ವೃತ್ತವನ್ನು ರಚಿಸಿ. |
11:34 | ಒಂದರಮೇಲೊಂದು ಇಡಿ. |
11:36 | ಎರಡನ್ನೂ ಆಯ್ಕೆ ಮಾಡಿ, ಡಿಫರೆನ್ಸ್ ಅನ್ನು ಉಪಯೋಗಿಸಿ. |
11:39 | ಇದು ಅರ್ಧಚಂದ್ರದಂತೆ ಕಾಣಬೇಕು. |
11:42 | ಒಂದು ದೀರ್ಘವೃತ್ತವನ್ನು ರಚಿಸಿ. |
11:44 | ಹತ್ತು ಮೂಲೆಯ ಒಂದು ನಕ್ಷತ್ರವನ್ನು ರಚಿಸಿ. |
11:46 | ಇದನ್ನು ದೀರ್ಘವೃತ್ತದ ಮಧ್ಯದಲ್ಲಿ ಇಡಿ. |
11:49 | ಎರಡನ್ನೂ ಆಯ್ಕೆ ಮಾಡಿ, ಎಕ್ಸ್ ಕ್ಲೂಶನ್ ಆಯ್ಕೆ ಮಾಡಿ. |
11:52 | ಕ್ರೆಸೆಂಟ್ ಮತ್ತು ಸ್ಟಾರ್ ಎಂಬ ಎರಡು ಲೇಯರ್ ಅನ್ನು ರಚಿಸಿ. |
11:57 | ಅರ್ಧವೃತ್ತವನ್ನು ಕತ್ತರಿಸಿ ಮತ್ತು ಕ್ರೆಸೆಂಟ್ ಲೇಯರ್ ಮೇಲೆ ಪೇಸ್ಟ್ ಮಾಡಿ. |
12:00 | ಹೀಗೆಯೇ, ನಕ್ಷತ್ರ ಆಕಾರಕ್ಕೂ ಮಾಡಿ. |
12:03 | ನಿಮ್ಮ ಅಸೈನ್ಮೆಂಟ್ ಮುಗಿದ ನಂತರ ಹೀಗೆ ಕಾಣಬೇಕು. |
12:07 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
12:16 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
12:23 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
12:27 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
12:34 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
12:39 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
12:42 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |