Difference between revisions of "GChemPaint/C3/Orbital-Overlap/Kannada"
From Script | Spoken-Tutorial
Line 4: | Line 4: | ||
|- | |- | ||
|00:00 | |00:00 | ||
− | | ನಮಸ್ಕಾರ. | + | | ನಮಸ್ಕಾರ.'''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Orbital Overlap''' (ಆರ್ಬಿಟಲ್ ಓವರ್ಲ್ಯಾಪ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
− | + | ||
− | + | ||
− | + | ||
|- | |- | ||
|00:06 | |00:06 |
Latest revision as of 16:04, 17 March 2017
Time | Narration |
00:00 | ನಮಸ್ಕಾರ.GChemPaint (ಜಿ-ಕೆಮ್-ಪೇಂಟ್) ನಲ್ಲಿಯ Orbital Overlap (ಆರ್ಬಿಟಲ್ ಓವರ್ಲ್ಯಾಪ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:08 | * ವಿವಿಧ ಪ್ರಕಾರದ ‘ಆರ್ಬಿಟಲ್’ಗಳ ಬಗ್ಗೆ |
00:11 | * ‘ಆರ್ಬಿಟಲ್’ಗಳನ್ನು ತಿರುಗಿಸುವುದು ಮತ್ತು ‘ರಿ-ಸೈಜ್’ ಮಾಡುವುದು |
00:14 | * ವಿವಿಧ ಬಗೆಯ ‘ಆರ್ಬಿಟಲ್ ಓವರ್ಲ್ಯಾಪ್’ಗಳು (ಕಕ್ಷೆಯ ಅತಿಕ್ರಮಣ) ಇತ್ಯಾದಿಗಳನ್ನು ಕಲಿಯುವೆವು. |
00:17 | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:21 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:26 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:31 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:34 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
00:38 | ಮೊದಲು, ‘ಅಟೊಮಿಕ್ ಆರ್ಬಿಟಲ್’ (ಪರಮಾಣುವಿನ ಕಕ್ಷೆ) ಎಂದರೇನು ಎನ್ನುವುದನ್ನು ನೋಡೋಣ. |
00:42 | ‘ಅಟೊಮಿಕ್ ಆರ್ಬಿಟಲ್’ ಎನ್ನುವುದು ಗಣಿತಶಾಸ್ತ್ರದ ಒಂದು ‘ಫಂಕ್ಷನ್‘ ಆಗಿದೆ. |
00:46 | ಪರಮಾಣುವಿನಲ್ಲಿ ‘ಇಲೆಕ್ಟ್ರಾನ್’ನ ತರಂಗದಂತಹ ವರ್ತನೆಯನ್ನು ಅದು ವಿವರಿಸುತ್ತದೆ. |
00:52 | ‘ಆರ್ಬಿಟಲ್’, ಇಲೆಕ್ಟ್ರಾನ್ ಕಂಡುಬರುವ ಗರಿಷ್ಠ ಸಂಭವಗಳಿರುವ ‘ಸ್ಪೇಸ್’ನ ಒಂದು ಜಾಗವಾಗಿದೆ. |
00:58 | ಇದು 's’ ಆರ್ಬಿಟಲ್ ಆಗಿದೆ. |
01:00 | ಇದು ‘ಸ್ಫೆರಿಕಲ್’ ಆಕಾರವನ್ನು (ಗೋಲಾಕಾರ) ಹೊಂದಿದೆ. |
01:03 | ಇಲ್ಲಿ ವಿಭಿನ್ನ ಅಕ್ಷಗಳಲ್ಲಿ (axes) 'p’ ಆರ್ಬಿಟಲ್ ಗಳಿರುತ್ತವೆ. |
01:06 | ‘p ಆರ್ಬಿಟಲ್’ಗಳು ‘ಡಂಬ್-ಬೆಲ್’ನ ಆಕಾರದಲ್ಲಿರುತ್ತವೆ. |
01:09 | ಆಮೇಲೆ, ವಿಭಿನ್ನ ಅಕ್ಷಗಳಲ್ಲಿ ‘d’ ‘ಆರ್ಬಿಟಲ್’ಗಳಿರುತ್ತವೆ. |
01:13 | ‘d ಆರ್ಬಿಟಲ್’ಗಳು ‘ಡಬಲ್ ಡಂಬ್-ಬೆಲ್’ನ ಆಕಾರದಲ್ಲಿರುತ್ತವೆ. |
01:17 | ನಾನು ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
01:20 | ನಾವು ಮೊದಲು ‘ಆರ್ಬಿಟಲ್’ಗಳ ಬಗ್ಗೆ ತಿಳಿಯೋಣ. |
01:24 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:28 | ‘ಆರ್ಬಿಟಲ್’ ಪ್ರಾಪರ್ಟೀ ವಿಂಡೋ ತೆರೆದುಕೊಳ್ಳುತ್ತದೆ. |
01:30 | ಈ ವಿಂಡೋ, Coefficient, Rotation ಮತ್ತು Type ಗಳಂತಹ ‘ಫೀಲ್ಡ್’ಗಳನ್ನು ಒಳಗೊಂಡಿದೆ. |
01:36 | ಮೊದಲು, ನಾನು Type ನಿಂದ ಆರಂಭಿಸುವೆನು. |
01:40 | ಡೀ-ಫಾಲ್ಟ್ ಆಗಿ 's’ ಆರ್ಬಿಟಲ್’, ಆಯ್ಕೆಯಾಗಿದೆ. |
01:42 | 'p’, ‘d xy' (ಡಿ ಎಕ್ಸ್ ವಾಯ್) ಮತ್ತು 'd z ಸ್ಕ್ವೇರ್ ಆರ್ಬಿಟಲ್' ರೇಡಿಯೋ ಬಟನ್ಗಳ ಮೇಲೆ ನಾವು ಕ್ಲಿಕ್ ಮಾಡೋಣ. |
01:50 | ಜೊತೆಯಲ್ಲಿ ತೋರಿಸಿದ ವಿವಿಧ ‘ಆರ್ಬಿಟಲ್’ ಆಕಾರಗಳನ್ನು ಗಮನಿಸಿ. |
01:54 | ನಂತರ Coefficient ಮತ್ತು Rotation ಎನ್ನುವ ಗುಣಲಕ್ಷಣಗಳನ್ನು ನಾವು ಪರಿಶೀಲಿಸೋಣ. |
01:59 | Coefficient ಎನ್ನುವ ಲಕ್ಷಣವು -1.00 (ಮೈನಸ್ ಒಂದು) ರಿಂದ 1.00 ರ ವರೆಗೆ ವ್ಯಾಲ್ಯೂಗಳನ್ನು ಹೊಂದಿದೆ. |
02:04 | Coefficient ಫೀಲ್ಡ್ ನ ವ್ಯಾಲ್ಯೂಗಳನ್ನು ಬಳಸಿ ನಾವು ‘ಆರ್ಬಿಟಲ್’ನ ಗಾತ್ರವನ್ನು ಬದಲಾಯಿಸಬಹುದು. |
02:10 | ಜೊತೆಗೆ ‘ಆರ್ಬಿಟಲ್’ನ ಗಾತ್ರವು ಬದಲಾಗಿರುವುದನ್ನು ಗಮನಿಸಿ. |
02:15 | Rotation ಎನ್ನುವ ಲಕ್ಷಣವು -180 (ಮೈನಸ್ ನೂರೆಂಭತ್ತು) ರಿಂದ 180 ರ ವರೆಗೆ ವ್ಯಾಲ್ಯೂಗಳನ್ನು ಹೊಂದಿದೆ. |
02:20 | ನಾವು ‘ಆರ್ಬಿಟಲ್’ಗಳನ್ನು ‘ಕ್ಲಾಕ್ವೈಸ್ ಅಥವಾ ಆಂಟಿ- ಕ್ಲಾಕ್ವೈಸ್’ಆಗಿ ತಿರುಗಿಸಬಹುದು. |
02:25 | ‘ಅಪ್ ಅಥವಾ ಡೌನ್ ಆರೋ’ಗಳನ್ನು ಬಳಸಿ ವ್ಯಾಲ್ಯೂಗಳನ್ನು ಬದಲಾಯಿಸಬಹುದು. |
02:30 | ವಿವಿಧ ಬಗೆಯ ‘ಪಾಸಿಟಿವ್ ಓವರ್ಲ್ಯಾಪ್’ಗಳನ್ನು ತೋರಿಸಲು, ‘ಆರ್ಬಿಟಲ್’ಗಳನ್ನು ಹೇಗೆ ಬಳಸುವುದೆಂದು ನಾವು ನೋಡೋಣ. |
02:36 | ವಿಭಿನ್ನ ‘ಆರ್ಬಿಟಲ್’ಗಳ ‘ಪಾಸಿಟಿವ್ ಓವರ್ಲ್ಯಾಪ್’ಗಾಗಿ ಇಲ್ಲಿ ಒಂದು ಸ್ಲೈಡ್ ಇದೆ. |
02:40 | 's-s’ ಓವರ್ಲ್ಯಾಪ್, 's-p’ ಓವರ್ಲ್ಯಾಪ್, 'p-p’ ಓವರ್ಲ್ಯಾಪ್ ಮತ್ತು 'p-p’ ಸೈಡ್-ವೈಸ್ ಓವರ್ಲ್ಯಾಪ್. |
02:51 | ‘ಡಿಸ್ಪ್ಲೇ ಏರಿಯಾ’ದ ಮೇಲೆ ನಾವು ‘ಹೈಡ್ರೋಜನ್’ ಅಣುವನ್ನು ‘ಡ್ರಾ’ ಮಾಡೋಣ. |
02:55 | ಕೀಬೋರ್ಡ್ ಮೇಲಿನ ‘H’ ಒತ್ತಿ. |
02:58 | Co-efficient ನ ವ್ಯಾಲ್ಯೂವನ್ನು ಒಂದಕ್ಕೆ (1) ಸೆಟ್ ಮಾಡಿ. |
03:01 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:04 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:07 | Bond length, ಸುಮಾರು 130 (ನೂರಮೂವತ್ತು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
03:11 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
03:14 | ‘ಹೈಡ್ರೋಜನ್’ ಅಣು ರೂಪುಗೊಂಡಿದೆ. |
03:17 | 's-s' ಎಂಡ್-ಆನ್ ‘ಓವರ್ಲ್ಯಾಪ್’ನೊಂದಿಗೆ ಆರಂಭಿಸೋಣ. |
03:20 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:24 | ‘s’ ಆರ್ಬಿಟಲ್’ನ ಮೇಲೆ ಕ್ಲಿಕ್ ಮಾಡಿ. |
03:28 | ಆಮೇಲೆ ‘ಹೈಡ್ರೋಜನ್’ ಅಣುವಿನ ‘ಹೈಡ್ರೋಜನ್’ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
03:33 | 's-s' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ಗಮನಿಸಿ. |
03:35 | ಈಗ 'p-p' ‘ಎಂಡ್-ಆನ್ ಓವರ್ಲ್ಯಾಪ್’ ರಚಿಸೋಣ. |
03:38 | ಕೀಬೋರ್ಡ್ ಮೇಲಿನ ‘F’ ಒತ್ತಿ. |
03:42 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:45 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:49 | Bond length, ಸುಮಾರು 200 (ಇನ್ನೂರು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
03:53 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
03:56 | ‘ಫ್ಲೋರಿನ್’ ಅಣು ರೂಪುಗೊಂಡಿದೆ. |
03:59 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:02 | ‘p’ ಆರ್ಬಿಟಲ್’ ಮೇಲೆ ಕ್ಲಿಕ್ ಮಾಡಿ. |
04:05 | 'p-p' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ರೂಪಿಸಲು ನಮಗೆ ಸಮತಲ ದಿಕ್ಕಿನಲ್ಲಿ 'p’ ಆರ್ಬಿಟಲ್’ಗಳ ಅಗತ್ಯವಿದೆ. |
04:11 | ನಾವು Rotation ನ ವ್ಯಾಲ್ಯೂ ಅನ್ನು 90 (ತೊಂಬತ್ತಕ್ಕೆ) ಹೆಚ್ಚಿಸೋಣ. |
04:15 | 'p’ ಆರ್ಬಿಟಲ್ ನ ಮೇಲೆ ಕ್ಲಿಕ್ ಮಾಡಿ. |
04:18 | ‘ಫ್ಲೋರಿನ್’ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
04:21 | ಹೀಗೆಯೇ, ಈ ಪ್ರಕ್ರಿಯೆಯನ್ನು ಮತ್ತೆ ಮಾಡಿ ಹಾಗೂ 'p’ ಆರ್ಬಿಟಲ್ ಅನ್ನು '-90' (ಮೈನಸ್ ತೊಂಬತ್ತು) ಕ್ಕೆ ತಿರುಗಿಸಿ. |
04:27 | ಇನ್ನೊಂದು ‘ಫ್ಲೋರಿನ್’ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
04:30 | ಒಂದುವೇಳೆ ನಿಮಗೆ ‘ಆರ್ಬಿಟಲ್’ಅನ್ನು ಸ್ಪಷ್ಟವಾಗಿ ನೋಡಲು ಆಗದಿದ್ದರೆ, ನೀವು ಅದನ್ನು ರೀ-ಸೈಜ್ ಮಾಡಬಹುದು. |
04:36 | ಹೀಗೆ ಮಾಡಲು, ನಾವು Coefficient ದ ವ್ಯಾಲ್ಯೂ ಅನ್ನು ಬದಲಾಯಿಸಬೇಕು. |
04:40 | ‘ಆರ್ಬಿಟಲ್’ನ ಮೇಲೆ ರೈಟ್-ಕ್ಲಿಕ್ ಮಾಡಿ, Orbital ಅನ್ನು ಆಯ್ಕೆಮಾಡಿ. ನಂತರ Properties ಮೆಲೆ ಕ್ಲಿಕ್ ಮಾಡಿ. |
04:46 | Orbital properties ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:50 | ಸರಿಯಾದ ಓವರ್ಲ್ಯಾಪ್ ಕಾಣುವವರೆಗೆ Coefficient ನ ವ್ಯಾಲ್ಯೂ ಅನ್ನು ಕಡಿಮೆ ಮಾಡಿ. |
04:54 | Close ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:57 | ಇನ್ನೊಂದು ‘ಆರ್ಬಿಟಲ್’ಗಾಗಿ ನಾನು ಈ ಪ್ರಕ್ರಿಯೆಯನ್ನು ಪುನಃ ಮಾಡುವೆನು. |
05:01 | 'p-p' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ಗಮನಿಸಿ. |
05:04 | ಈಗ, 'dz^2' (dz ಸ್ಕ್ವೇರ್) ‘ಆರ್ಬಿಟಲ್’ಅನ್ನು ಬಳಸಿ 'd-d' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ರಚಿಸೋಣ. |
05:09 | ‘ಡಿಸ್ಪ್ಲೇ ಏರಿಯಾ’ಗೆ ಬನ್ನಿ ಮತ್ತು ಕೀಬೋರ್ಡ್ ಮೇಲಿನ ದೊಡ್ಡಕ್ಷರ ‘F’ ಒತ್ತಿ. |
05:14 | ಲಿಸ್ಟ್ ನಿಂದ ‘Fe’ ಅನ್ನು ಆಯ್ಕೆಮಾಡಿ. |
05:17 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:20 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
05:23 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:26 | ‘ಬಾಂಡ್’ಅನ್ನು ‘ಡ್ರಾ’ ಮಾಡಲು Iron (Fe) (ಅಯರ್ನ್) ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
05:29 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:32 | 'dz^2' (dz ಸ್ಕ್ವೇರ್) ‘ಆರ್ಬಿಟಲ್’ ರೇಡಿಯೋ ಬಟನ್ ಅನ್ನು ಆಯ್ಕೆಮಾಡಿ. |
05:37 | ಸರಿಯಾದ ಓವರ್ಲ್ಯಾಪ್ ಗಾಗಿ, Coefficient ನ ವ್ಯಾಲ್ಯೂ ಅನ್ನು 0.8 ಗೆ ಇಳಿಸಿ. |
05:42 | 'dz^2' (dz ಸ್ಕ್ವೇರ್) ‘ಆರ್ಬಿಟಲ್’ಗಳನ್ನು ಓವರ್ಲ್ಯಾಪ್ ಮಾಡಲು, ‘ಬಾಂಡೆಡ್’ Iron (ಅಯರ್ನ್) ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
05:49 | 'd-d' ‘ಎಂಡ್-ಆನ್ ಓವರ್ಲ್ಯಾಪ್’ಅನ್ನು ಗಮನಿಸಿ. |
05:52 | ‘p ಆರ್ಬಿಟಲ್’ಗಳ ‘ಸೈಡ್-ವೈಸ್’ (ಪಾರ್ಶ್ವದ) ಓವರ್ಲ್ಯಾಪ್ ಬಗ್ಗೆ ಈಗ ನಾವು ತಿಳಿಯೋಣ. |
05:57 | Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
06:02 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:05 | Bond length, ಸುಮಾರು 90 (ತೊಂಬತ್ತು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
06:08 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
06:12 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:16 | Coefficient ನ ವ್ಯಾಲ್ಯೂ ಅನ್ನು ಒಂದಕ್ಕೆ (1) ಹೆಚ್ಚಿಸಿ. |
06:20 | 'p' ‘ಆರ್ಬಿಟಲ್’ ರೇಡಿಯೋ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:23 | 'p' ‘ಆರ್ಬಿಟಲ್’, ಸಮತಲ ಸ್ಥಾನದಲ್ಲಿ (horizontal position ) ಇದ್ದರೆ ಅದನ್ನುಲಂಬ ಸ್ಥಾನಕ್ಕೆ (vertical position) ತಿರುಗಿಸಿ. |
06:29 | ‘ಬಾಂಡ್’ಗಳ ತುದಿಗಳ ಮೇಲೆ ಕ್ಲಿಕ್ ಮಾಡಿ. |
06:32 | ‘p-p’ ‘ಸೈಡ್-ವೈಸ್ ಓವರ್ಲ್ಯಾಪ್’ಅನ್ನು ಗಮನಿಸಿ. |
06:37 | ಈ ಬಗೆಯ ‘ಓವರ್ಲ್ಯಾಪ್’ನಲ್ಲಿ, ‘ಆರ್ಬಿಟಲ್’ನ ಲೋಬ್ ಗಳು (ಎಸಳುಗಳು) ಒಂದೇ ಚಿನ್ಹೆಯನ್ನು ಹೊಂದಿರುತ್ತವೆ. |
06:43 | ಆನಂತರ, ನಾವು ‘ನೆಗೆಟಿವ್’ ಮತ್ತು ‘ಜೀರೋ’ (zero) ‘ಓವರ್ಲ್ಯಾಪ್’ಗೆ ನಡೆಯುವೆವು. |
06:46 | ಇಲ್ಲಿ ‘ನೆಗೆಟಿವ್’ ‘ಓವರ್ಲ್ಯಾಪ್’ಗಳಿಗಾಗಿ ಒಂದು ಸ್ಲೈಡ್ ಇದೆ. |
06:51 | ನಾನು ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
06:55 | ಈಗ, ‘ನೆಗೆಟಿವ್ ಓವರ್ಲ್ಯಾಪ್’ಅನ್ನು ಹೇಗೆ ‘ಡ್ರಾ’ ಮಾಡುವುದೆಂದು ನಾನು ತೋರಿಸುತ್ತೇನೆ. |
06:59 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
07:02 | Bond length, ಸುಮಾರು 90 (ತೊಂಬತ್ತು) ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
07:05 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
07:08 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
07:12 | 'p-ಆರ್ಬಿಟಲ್’ನ ‘ರೇಡಿಯೋ ಬಟನ್’ನ ಮೇಲೆ ಕ್ಲಿಕ್ ಮಾಡಿ. ಆಮೇಲೆ ‘ಬಾಂಡ್’ನ ಒಂದು ತುದಿಯ ಮೇಲೆ ಕ್ಲಿಕ್ ಮಾಡಿ. |
07:17 | ತಲೆಕೆಳಗಾಗಿಸಲು, 'p-ಆರ್ಬಿಟಲ್’ಅನ್ನು 180 (ನೂರೆಂಭತ್ತು) ಅಂಶಗಳಿಗೆ ತಿರುಗಿಸಿ. |
07:23 | ಆನಂತರ ‘ಬಾಂಡ್’ನ ಇನ್ನೊಂದು ತುದಿಯ ಮೇಲೆ ಕ್ಲಿಕ್ ಮಾಡಿ. |
07:27 | ‘ನೆಗೆಟಿವ್ ಓವರ್ಲ್ಯಾಪ್’ಅನ್ನು ಗಮನಿಸಿ. |
07:29 | ಈ ವಿಧದ ‘ಓವರ್ಲ್ಯಾಪ್’ನಲ್ಲಿ ‘ಆರ್ಬಿಟಲ್’ಗಳ ಲೋಬ್ ಗಳು ವಿರುದ್ಧ ಚಿನ್ಹೆಗಳನ್ನು ಹೊಂದಿರುತ್ತವೆ. |
07:34 | ಈಗ, ‘ಜೀರೋ ಓವರ್ಲ್ಯಾಪ್’ಅನ್ನು ಹೇಗೆ ರಚಿಸುವುದೆಂದು ನಾವು ತಿಳಿಯೋಣ. |
07:38 | ‘ಜೀರೋ ಓವರ್ಲ್ಯಾಪ್’ಗಾಗಿ ಇಲ್ಲಿ ಒಂದು ಸ್ಲೈಡ್ ಇದೆ. |
07:42 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
07:45 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಮೇಲೆ ಕ್ಲಿಕ್ ಮಾಡಿ. |
07:48 | Add or modify an atomic orbital ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
07:52 | 'p’ ಆರ್ಬಿಟಲ್’ನ ಮೇಲೆ ಕ್ಲಿಕ್ ಮಾಡಿ. |
07:54 | 'p’ ಆರ್ಬಿಟಲ್’ಅನ್ನು ಮೂಲ ಸ್ಥಾನಕ್ಕೆ ತಿರುಗಿಸಿ. |
07:59 | ‘ಬಾಂಡ್’ನ ಒಂದು ತುದಿಯ ಮೇಲೆ ಕ್ಲಿಕ್ ಮಾಡಿ. |
08:02 | 's’ ‘ಆರ್ಬಿಟಲ್’ನ ಮೇಲೆ ಕ್ಲಿಕ್ ಮಾಡಿ. |
08:05 | ಆನಂತರ ‘ಬಾಂಡ್’ನ ಇನ್ನೊಂದು ತುದಿಯ ಮೇಲೆ ಕ್ಲಿಕ್ ಮಾಡಿ. |
08:09 | ‘ಜೀರೊ ಓವರ್ಲ್ಯಾಪ್’ಅನ್ನು ಗಮನಿಸಿ. |
08:12 | ಈ ವಿಧದ ‘ಓವರ್ಲ್ಯಾಪ್’ನಲ್ಲಿ, ‘ಆರ್ಬಿಟಲ್’ಗಳ ಓರಿಯಂಟೇಶನ್ ಒಂದೇರೀತಿ ಇರುವುದಿಲ್ಲ. |
08:17 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
08:20 | ಈ ‘ಟ್ಯುಟೋರಿಯಲ್’ನಲ್ಲಿ ನಾವು, * ವಿವಿಧ ಪ್ರಕಾರದ ‘ಆರ್ಬಿಟಲ್’ಗಳ ಬಗ್ಗೆ |
08:24 | * ‘ಎಂಡ್-ಆನ್’ ಹಾಗೂ ‘ಸೈಡ್-ವೈಸ್’ ‘ಓವರ್ಲ್ಯಾಪ್’ಗಳು |
08:27 | * ‘ಆರ್ಬಿಟಲ್’ಗಳನ್ನು ತಿರುಗಿಸುವುದು ಮತ್ತು ‘ರಿ-ಸೈಜ್’ ಮಾಡುವುದು |
08:30 | * ಪಾಸಿಟಿವ್, ನೆಗೆಟಿವ್ ಮತ್ತು ‘ಜೀರೊ’ ‘ಓವರ್ಲ್ಯಾಪ್’ಗಳು ಇತ್ಯಾದಿಗಳನ್ನು ಕಲಿತಿದ್ದೇವೆ. |
08:34 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
08:36 | * ‘ಹೈಡ್ರೋಜನ್ ಕ್ಲೋರೈಡ್’ (H-Cl) ಅಣುವಿನೊಂದಿಗೆ, 's-p' ‘ಎಂಡ್-ಆನ್’ ‘ಓವರ್ಲ್ಯಾಪ್’ಅನ್ನು ‘ಡ್ರಾ’ ಮಾಡಿ. |
08:40 | * 'dxy-dxy' ‘ಆರ್ಬಿಟಲ್’ಗಳ, ‘ಸೈಡ್-ವೈಸ್’ ಓವರ್ಲ್ಯಾಪ್’ಅನ್ನು ‘ಡ್ರಾ’ ಮಾಡಿ. |
08:44 | * ಇತರ ನೆಗೆಟಿವ್ ಮತ್ತು ‘ಜೀರೊ’ ‘ಓವರ್ಲ್ಯಾಪ್’ಗಳನ್ನು ‘ಡ್ರಾ’ ಮಾಡಿ. |
08:48 | * ಸೂಚನೆ: ಸರಿಯಾದ ‘ಓವರ್ಲ್ಯಾಪ್’ಗಾಗಿ, ‘ಆರ್ಬಿಟಲ್’ಗಳನ್ನು ತಿರುಗಿಸಿ ಹಾಗೂ ‘ರಿ-ಸೈಜ್’ ಮಾಡಿ. |
08:56 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
09:00 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
09:04 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
09:07 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:12 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:16 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:20 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:27 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:31 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:37 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:43 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. ವಂದನೆಗಳು. |