Difference between revisions of "C-and-Cpp/C2/First-Cpp-Program/Kannada"
From Script | Spoken-Tutorial
Sandhya.np14 (Talk | contribs) |
PoojaMoolya (Talk | contribs) |
||
Line 13: | Line 13: | ||
|- | |- | ||
| 00:13 | | 00:13 | ||
− | | ಅದನ್ನು ಕಂಪೈಲ್ ಮಾಡುವ ಬಗೆ, | + | | ಅದನ್ನು ಕಂಪೈಲ್ ಮಾಡುವ ಬಗೆ, ಅದನ್ನು ಎಕ್ಸಿಕ್ಯೂಟ್ ಮಾಡುವ ಬಗೆ, |
− | + | ||
− | + | ||
− | + | ||
|- | |- | ||
| 00:17 | | 00:17 | ||
Line 348: | Line 345: | ||
| ಮತ್ತು cout was not declared in this scope ಎಂಬ ಎರರ್ ಗಳಿರುವುದನ್ನು ನೋಡುತ್ತೇವೆ. | | ಮತ್ತು cout was not declared in this scope ಎಂಬ ಎರರ್ ಗಳಿರುವುದನ್ನು ನೋಡುತ್ತೇವೆ. | ||
|- | |- | ||
− | |09:05 | + | | 09:05 |
| cout ಎಂಬುದು ಸ್ಟಾಂಡರ್ಡ್ C++ ಲೈಬ್ರರಿ ಫಂಕ್ಷನ್ ಆಗಿರುವುದರಿಂದ | | cout ಎಂಬುದು ಸ್ಟಾಂಡರ್ಡ್ C++ ಲೈಬ್ರರಿ ಫಂಕ್ಷನ್ ಆಗಿರುವುದರಿಂದ | ||
|- | |- | ||
Line 355: | Line 352: | ||
|- | |- | ||
| 09:18 | | 09:18 | ||
− | | ಈಗ ಎರರ್ ಅನ್ನು ಸರಿಪಡಿಸೋಣ. | + | | ಈಗ ಎರರ್ ಅನ್ನು ಸರಿಪಡಿಸೋಣ. ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. ಇಲ್ಲಿ std ಎಂದು ಟೈಪ್ ಮಾಡಿ. |
− | + | ||
− | + | ||
− | + | ||
|- | |- | ||
| 09:23 | | 09:23 | ||
Line 370: | Line 364: | ||
|- | |- | ||
| 09:32 | | 09:32 | ||
− | | ನಿಮ್ಮ ಹೆಸರು ಮತ್ತು ಊರನ್ನು | + | | ನಿಮ್ಮ ಹೆಸರು ಮತ್ತು ಊರನ್ನು, ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
− | + | ||
− | + | ||
− | + | ||
|- | |- | ||
| 09:37 | | 09:37 |
Latest revision as of 17:16, 17 March 2017
Time | Narration |
00:02 | ಮೊದಲನೇ ಸಿ ಪ್ಲಸ್ ಪ್ಲಸ್ (C++) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾನು ವಿವರಿಸುವ ಅಂಶಗಳು: |
00:10 | ಸಿ ಪ್ಲಸ್ ಪ್ಲಸ್ (C++) ಪ್ರೊಗ್ರಾಮ್ ಬರೆಯುವ ಬಗೆ, |
00:13 | ಅದನ್ನು ಕಂಪೈಲ್ ಮಾಡುವ ಬಗೆ, ಅದನ್ನು ಎಕ್ಸಿಕ್ಯೂಟ್ ಮಾಡುವ ಬಗೆ, |
00:17 | ಸಾಮಾನ್ಯವಾಗಿ ಬರುವ ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ವಿಧಾನಗಳನ್ನೂ ನಾನು ವಿವರಿಸುತ್ತೇನೆ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿಯನ್ನು ಮತ್ತು ಉಬುಂಟು ನಲ್ಲಿ g++ ಕಂಪೈಲರ್ ನ 4.5.2 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:35 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, |
00:37 | ಉಬುಂಟು ಆಪರೇಟಿಂಗ್ ಸಿಸ್ಟಮ್ ಮತ್ತು ಒಂದು ಎಡಿಟರ್ ಅನ್ನು ಉಪಯೋಗಿಸಲು ನಿಮಗೆ ತಿಳಿದಿರಬೇಕು. |
00:44 | 'vim' ಮತ್ತು 'gedit' ಗಳು ಕೆಲವು ಎಡಿಟರ್ ಗಳು. |
00:48 | ಈ ಟ್ಯುಟೋರಿಯಲ್ ನಲ್ಲಿ ನಾನು gedit ಅನ್ನು ಉಪಯೋಗಿಸುತ್ತೇನೆ. |
00:50 | ಸಂಬಂಧಪಟ್ಟ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿ ಕೊಡಿ. |
00:56 | C++ ಪ್ರೊಗ್ರಾಮ್ ಅನ್ನು ಹೇಗೆ ಬರೆಯಬಹುದು ಎಂಬುದನ್ನು ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ. |
01:01 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
01:09 | ಈಗ ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡೋಣ. ಅದಕ್ಕಾಗಿ ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ, |
01:13 | “gedit” ಸ್ಪೇಸ್ “talk” ಡಾಟ್ “cpp” ಸ್ಪೇಸ್ “&”(ampersand) ಸೈನ್. |
01:21 | ampersand (&) ಅನ್ನು ನಾವು ಪ್ರಾಂಪ್ಟ್ ಅನ್ನು ಫ್ರೀ ಮಾಡಲು ಉಪಯೋಗಿಸುತ್ತೇವೆ. |
01:25 | ಎಲ್ಲಾ C++ ಫೈಲ್ ಗಳು “.cpp” ಎಂಬ ಎಕ್ಸ್ಟೆಂಶನ್ ಹೊಂದಿರುತ್ತವೆ ಎಂಬುದನ್ನು ಗಮನದಲ್ಲಿಡಿ. |
01:31 | ಈಗ “Enter” ಕೀ ಅನ್ನು ಪ್ರೆಸ್ ಮಾಡಿ. |
01:33 | ಈಗ ಟೆಕ್ಸ್ಟ್ ಎಡಿಟರ್ ಓಪನ್ ಆಗಿದೆ. |
01:35 | ಒಂದು ಪ್ರೊಗ್ರಾಮ್ ಬರೆಯಲು ಪ್ರಾರಂಭಿಸೋಣ. |
01:38 | (ಡಬಲ್ ಸ್ಲ್ಯಾಶ್)“//” ಸ್ಪೇಸ್ “My first C++ program” ಎಂದು ಟೈಪ್ ಮಾಡಿ. |
01:44 | ಇಲ್ಲಿ, ಡಬಲ್ ಸ್ಲ್ಯಾಶ್ ಅನ್ನು, ಲೈನ್ ಅನ್ನು ಕಮೆಂಟ್ ಮಾಡಲು ಉಪಯೋಗಿಸಲಾಗಿದೆ. |
01:49 | ಕಾಮೆಂಟ್ ಗಳನ್ನು, ಪ್ರೊಗ್ರಾಮ್ ಅನ್ನು ಅರ್ಥ ಮಾಡಿಕೊಳ್ಳಲು ಉಪಯೋಗಿಸುತ್ತೇವೆ. |
01:52 | ಡಾಕ್ಯುಮೆಂಟೇಶನ್ ನಲ್ಲಿಯೂ ಇದು ಸಹಾಯಕ. |
01:55 | ಇದು ಪ್ರೊಗ್ರಾಮ್ ನ ಬಗ್ಗೆ ಮಾಹಿತಿ ಕೊಡುತ್ತದೆ. |
01:59 | ಡಬಲ್ ಸ್ಲ್ಯಾಶ್ ಅನ್ನು (//) ಸಿಂಗಲ್ ಲೈನ್ ಕಾಮೆಂಟ್ ಎನ್ನುತ್ತಾರೆ. ಈಗ Enter ಒತ್ತಿ. |
02:05 | ಹ್ಯಾಶ್ “include” ಸ್ಪೇಸ್ ಓಪನಿಂಗ್ ಆಂಗಲ್ ಬ್ರಾಕೆಟ್, ಕ್ಲೋಸಿಂಗ್ ಆಂಗಲ್ ಬ್ರಾಕೆಟ್ ಎಂದು ಟೈಪ್ ಮಾಡಿ. |
02:13 | ಯಾವಾಗಲೂ ಬ್ರಾಕೆಟ್ ಅನ್ನು ಮೊದಲು ಕಂಪ್ಲೀಟ್ ಮಾಡಿ ನಂತರ ಅದರೊಳಗೆ ಬರೆಯುವುದು ಒಳ್ಳೆಯ ಅಭ್ಯಾಸ. |
02:20 | ಈಗ ಬ್ರಾಕೆಟ್ ನ ಒಳಗೆ, “iostream” ಎಂದು ಟೈಪ್ ಮಾಡಿ. |
02:23 | ಇಲ್ಲಿ “iostream” ಎಂಬುದು ಒಂದು ಹೆಡರ್ ಫೈಲ್ ಆಗಿದೆ. |
02:26 | ಈ ಫೈಲ್ ನಲ್ಲಿ, C++ ನ ಸ್ಟಾಂಡರ್ಡ್ ಇನ್ ಪುಟ್ ಮತ್ತು ಔಟ್ ಪುಟ್ ಫಂಕ್ಷನ್ ಗಳ ಡಿಕ್ಲರೇಶನ್ ಇರುತ್ತವೆ. ಈಗ Enter ಒತ್ತಿ. |
02:35 | using ಸ್ಪೇಸ್ namespace ಸ್ಪೇಸ್ std ಸೆಮಿಕೊಲನ್ ( ; ) ಎಂದು ಟೈಪ್ ಮಾಡಿ. |
02:45 | using ಎಂಬ ಸ್ಟೇಟ್ಮೆಂಟ್, ನೀವು std ಎಂಬ ನೇಮ್ ಸ್ಪೇಸ್ ಅನ್ನು ಉಪಯೊಗಿಸುತ್ತೀರಿ ಎಂಬುದನ್ನು, ಕಂಪೈಲರ್ ಗೆ ಹೇಳುತ್ತದೆ. |
02:52 | ನೇಮ್ ಸ್ಪೇಸ್ ಉಪಯೋಗಿಸುವುದರಿಂದ ಹೆಸರುಗಳ ನಡುವೆ ಆಗುವ ಗೊಂದಲ ತಪ್ಪುತ್ತದೆ. |
02:56 | ಐಡೆಂಟಿಫೈರ್ ಗಳ ವ್ಯಾಪ್ತಿಯನ್ನು ಸೀಮಿತಗೊಳಿಸುವುದರಿಂದ ಈ ಗೊಂದಲ ತಪ್ಪಿಸಬಹುದು. |
03:00 | ಇದು ಡಿಕ್ಲೇರ್ ಮಾಡುವ ಜಾಗವನ್ನು ಗೊತ್ತು ಮಾಡಿ, ವ್ಯಾಪ್ತಿಯನ್ನು ಹೇಳುತ್ತದೆ. |
03:05 | ಒಂದು ನೇಮ್ ಸ್ಪೇಸ್ ಒಳಗೆ ಡಿಫೈನ್ ಮಾಡಿದವುಗಳು ಆ ನೇಮ್ ಸ್ಪೇಸ್ ನ ಒಳಗೆ ಮಾತ್ರ ಸ್ಕೋಪ್ ಹೊಂದಿರುತ್ತವೆ. |
03:11 | std ಎಂಬ ನೇಮ್ ಸ್ಪೇಸ್ ನಲ್ಲಿ ಎಲ್ಲ ಸ್ಟಾಂಡರ್ಡ್ C++ ಲೈಬ್ರರಿಗಳು ಡಿಕ್ಲೇರ್ ಆಗಿವೆ. ಈಗ Enter ಒತ್ತಿ. |
03:20 | int ಸ್ಪೇಸ್ main ಓಪನಿಂಗ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ. |
03:26 | main ಎಂಬುದು ಒಂದು ವಿಶೇಷ ಫಂಕ್ಷನ್ ಆಗಿದೆ. |
03:30 | ಇದು, ಪ್ರೊಗ್ರಾಮ್, ಈ ಲೈನ್ ಇಂದ ಎಕ್ಸಿಕ್ಯೂಟ್ ಆಗಲು ಪ್ರಾರಂಭವಾಗುತ್ತದೆ, ಎಂಬುದನ್ನು ಸೂಚಿಸುತ್ತದೆ. |
03:34 | ಓಪನಿಂಗ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಅನ್ನು ಪ್ಯಾರಾಂಥೆಸಿಸ್ (parenthesis) ಎನ್ನುತ್ತಾರೆ. |
03:39 | ಮೈನ್ ನಂತರದ ಪ್ಯಾರಾಂಥೆಸಿಸ್, ಮೈನ್ ಎಂಬುದು ಒಂದು ಫಂಕ್ಷನ್ ಎಂಬುದನ್ನು ಸೂಚಿಸುತ್ತದೆ. |
03:45 | ಇಲ್ಲಿ, “ಇಂಟ್ ಮೈನ್” ಎಂಬ ಫಂಕ್ಷನ್, ಯಾವುದೇ ಆರ್ಗ್ಯುಮೆಂಟ್ ಗಳನ್ನು ಸ್ವೀಕರಿಸುವುದಿಲ್ಲ ಮತ್ತು ಇಂಟಿಜರ್ ಮೌಲ್ಯವನ್ನು ಕೊಡುತ್ತದೆ. |
03:52 | ಡೇಟಾ ಟೈಪ್ಸ್ ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
03:56 | ಈಗ, ಮೈನ್ ಫಂಕ್ಷನ್ ನ ಬಗ್ಗೆ ಇನ್ನಷ್ಟು ತಿಳಿಯಲು ಸ್ಲೈಡ್ ಗೆ ಹಿಂತಿರುಗೋಣ. |
04:02 | ಪ್ರತಿ ಪ್ರೊಗ್ರಾಮ್ ಕೂಡಾ, ಒಂದು ಮೈನ್ ಫಂಕ್ಷನ್ ಅನ್ನು ಹೊಂದಿರಲೇಬೇಕು. |
04:04 | ಒಂದಕ್ಕಿಂತ ಹೆಚ್ಚು ಮೈನ್ ಫಂಕ್ಷನ್ ಗಳು ಇರಬಾರದು. |
04:09 | ಇಲ್ಲದಿದ್ದಲ್ಲಿ, ಕಂಪೈಲರ್ ಗೆ ಪ್ರೋಗ್ರಾಮಿನ ಆರಂಭವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. |
04:13 | ಖಾಲಿ ಜೋಡಿ ಪ್ಯಾರಂಥೆಸಿಸ್, ಮೈನ್ ಫಂಕ್ಷನ್ ಗೆ ಆರ್ಗ್ಯುಮೆಂಟ್ ಇಲ್ಲ ಎಂಬುದನ್ನು ಸೂಚಿಸುತ್ತದೆ. |
04:19 | ಆರ್ಗ್ಯುಮೆಂಟ್ ಗಳ ಬಗ್ಗೆ ವಿವರವಾಗಿ ಮುಂಬರುವ ಟ್ಯುಟೋರಿಯಲ್ ನಲ್ಲಿ ಚರ್ಚಿಸೋಣ. |
04:24 | ಈಗ, ನಮ್ಮ ಪ್ರೋಗ್ರಾಮ್ ಗೆ ಹಿಂತಿರುಗೋಣ. |
04:29 | ಓಪನಿಂಗ್ ಕರ್ಲಿ ಬ್ರಾಕೆಟ್ ( { ) ಅನ್ನು ಟೈಪ್ ಮಾಡಿ. |
04:32 | ಇಲ್ಲಿ, ಓಪನಿಂಗ್ ಕರ್ಲಿ ಬ್ರಾಕೆಟ್ ( { ), ಮೈನ್ ಫಂಕ್ಷನ್ ನ ಆರಂಭವನ್ನು ಸೂಚಿಸುತ್ತದೆ. |
04:37 | ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ) ಅನ್ನು ಟೈಪ್ ಮಾಡಿ. |
04:40 | ಇಲ್ಲಿ, ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ), ಮೈನ್ ಫಂಕ್ಷನ್ ನ ಅಂತ್ಯವನ್ನು ಸೂಚಿಸುತ್ತದೆ. |
04:45 | ಈಗ, ಬ್ರಾಕೆಟ್ ನ ಒಳಗೆ ಎರಡು ಬಾರಿ Enter ಒತ್ತಿ. |
04:49 | ಕರ್ಸರ್ ಅನ್ನು ಒಂದು ಲೈನ್ ಮೇಲೆ ತನ್ನಿ. |
04:51 | ಇಂಡೆಂಟೇಶನ್ (Indentation) ಇಂದ ಕೋಡ್ ಅನ್ನು ಒದಲು ಸುಲಭವಾಗುತ್ತದೆ. |
04:54 | ಇದು, ಎರರ್ ಅನ್ನು ಬೇಗ ಕಂಡುಹಿಡಿಯಲು ಕೂಡಾ, ಸಹಾಯ ಮಾಡುತ್ತದೆ. |
04:58 | ಹಾಗಾಗಿ, ಇಲ್ಲಿ ಮೂರು ಸ್ಪೇಸ್ ಕೊಡೋಣ. |
05:01 | ಮತ್ತು, cout ಸ್ಪೇಸ್ ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ. |
05:07 | cout ಎಂಬುದು, ಟರ್ಮಿನಲ್ ಗೆ ಔಟ್ ಪುಟ್ ಅನ್ನು ಪ್ರಿಂಟ್ ಮಾಡಲು ಇರುವ, ಒಂದು ಸ್ಟಾಂಡರ್ಡ್ C++ ಫಂಕ್ಷನ್ ಆಗಿದೆ. |
05:14 | ಈಗ, ಬ್ರಾಕೆಟ್ ಗಳ ನಂತರ ಎರಡು ಡಬಲ್ ಕೋಟ್ಸ್ ಟೈಪ್ ಮಾಡಿ. |
05:18 | cout ಫಂಕ್ಷನ್ ನ ಡಬಲ್ ಕೋಟ್ಸ್ ನ ಒಳಗೆ ಏನೇ ಇದ್ದರೂ, ಅದು ಟರ್ಮಿನಲ್ ಗೆ ಪ್ರಿಂಟ್ ಆಗುತ್ತದೆ. |
05:24 | ಡಬಲ್ ಕೋಟ್ಸ್ ಒಳಗೆ,“Talk to a teacher” ಬ್ಯಾಕ್ ಸ್ಲ್ಯಾಶ್ “n” ಎಂದು ಟೈಪ್ ಮಾಡಿ. |
05:31 | ಬ್ಯಾಕ್ ಸ್ಲ್ಯಾಶ್ “n” (\n) ಎನ್ನುವುದು ಹೊಸ ಲೈನ್ ಅನ್ನು ಸೂಚಿಸುತ್ತದೆ. |
05:35 | ಇದರಿಂದಾಗಿ, cout ಫಂಕ್ಷನ್ ನ ಎಕ್ಸಿಕ್ಯೂಶನ್ ನ ನಂತರ, ಕರ್ಸರ್ ಹೊಸ ಲೈನ್ ಗೆ ಹೋಗುತ್ತದೆ. |
05:41 | ಎಲ್ಲ C++ ಸ್ಟೇಟ್ಮೆಂಟ್ ಗಳೂ ಸೆಮಿಕೊಲನ್ (;) ಇಂದ ಕೊನೆಗೊಳ್ಳಬೇಕು. |
05:45 | ಹಾಗಾಗಿ, ಇದನ್ನು ಲೈನ್ ನ ಕೊನೆಗೆ ಟೈಪ್ ಮಾಡಿ. |
05:48 | ಸೆಮಿಕೊಲನ್, ಸ್ಟೇಟ್ಮೆಂಟ್ ಅನ್ನು ಕೊನೆಗೊಳಿಸುತ್ತದೆ. ಈಗ, Enter ಒತ್ತಿ. |
05:53 | ಇಲ್ಲಿ, ಸ್ಪೇಸ್ ಕೊಡಿ, ಮತ್ತು ರಿಟರ್ನ್ ಸ್ಪೇಸ್ ಝೀರೊ (zero) ಸೆಮಿಕೋಲನ್ ( ; )ಎಂದು ಟೈಪ್ ಮಾಡಿ. |
06:00 | ಈ ಸ್ಟೇಟ್ಮೆಂಟ್, integer ಝೀರೊ ಅನ್ನು ಕೊಡುತ್ತದೆ. |
06:03 | ಈ ಫಂಕ್ಷನ್ int ಟೈಪ್ ನದ್ದಾಗಿರುವುದರಿಂದ, integer ಮೌಲ್ಯವನ್ನೇ ರಿಟರ್ನ್ ಮಾಡಬೇಕು. |
06:10 | ರಿಟರ್ನ್ ಸ್ಟೇಟ್ಮೆಂಟ್, ಎಕ್ಸಿಕ್ಯೂಟ್ ಮಾಡಬಹುದಾದಂತಹ ಸ್ಟೇಟ್ಮೆಂಟ್ ಗಳ ಕೊನೆಯನ್ನು ಸೂಚಿಸುತ್ತದೆ. |
06:14 | ರಿಟರ್ನ್ ಆದ ಮೌಲ್ಯಗಳ ಬಗ್ಗೆ ಬೇರೆ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
06:20 | ಈಗ ಫೈಲ್ ಅನ್ನು ಸೇವ್ ಮಾಡಲು “Save” ಬಟನ್ ಅನ್ನು ಕ್ಲಿಕ್ ಮಾಡಿ. |
06:23 | ಆಗಾಗ್ಗೆ, ಫೈಲ್ ಗಳನ್ನು ಸೇವ್ ಮಾಡುವುದು ಒಳ್ಳೆಯ ಅಭ್ಯಾಸ. |
06:26 | ಇದು, ಹಠಾತ್ ವಿದ್ಯುತ್ ವ್ಯತ್ಯಯದಿಂದಾಗುವ ತೊಂದರೆಯನ್ನು ತಪ್ಪಿಸುತ್ತದೆ. |
06:30 | ಇದು, ಅಪ್ಲಿಕೇಶನ್ ಗಳು ಕ್ರ್ಯಾಶ್ ಆದ ಪರಿಸ್ಥಿತಿಯಲ್ಲೂ ಸಹಾಯಕವಾಗಿದೆ. |
06:34 | ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ. |
06:36 | ಟರ್ಮಿನಲ್ ಗೆ ಹಿಂತಿರುಗಿ. |
06:39 | “g++” ಸ್ಪೇಸ್ “talk.cpp” ಸ್ಪೇಸ್ ಹೈಫನ್ (-) ಒ (O) ಸ್ಪೇಸ್ “output” ಎಂದು ಟೈಪ್ ಮಾಡಿ. |
06:49 | ಇಲ್ಲಿ, “g++” ಎಂಬುದು C++ ಪ್ರೊಗ್ರಾಮ್ ಗಳನ್ನು ಕಂಪೈಲ್ ಮಾಡಲು ಉಪಯೋಗಿಸುವ ಒಂದು ಕಂಪೈಲರ್. |
06:55 | talk.cpp ಎಂಬುದು ನಮ್ಮ ಫೈಲ್ ಹೆಸರು. |
06:59 | ಹೈಫನ್ ಒ output (-O output) ಎಂಬುದು, ಎಕ್ಸಿಕ್ಯೂಟ್ ಮಾಡಬಹುದಾದವುಗಳು output ಎಂಬ ಫೈಲ್ ಗೆ ಹೋಗಬೇಕು ಎಂಬುದನ್ನು ಸೂಚಿಸುತ್ತದೆ. |
07:05 | ಈಗ Enter ಒತ್ತಿ. |
07:07 | ಪ್ರೊಗ್ರಾಮ್ ಕಂಪೈಲ್ ಆಗಿರುವುದನ್ನು ನಾವು ಕಾಣುತ್ತೇವೆ. |
07:10 | ls ಸ್ಪೇಸ್ (ಹೈಫನ್)-lrt ಎಂದು ಟೈಪ್ ಮಾಡಿ, Enter ಒತ್ತುವುದರಿಂದ output ಎಂಬುದು ಕೊನೆಗೆ ಕ್ರಿಯೇಟ್ ಆದ ಫೈಲ್ ಎಂಬುದು ತಿಳಿಯುತ್ತದೆ. |
07:19 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು, ( ./ ) ಡಾಟ್ ಸ್ಲ್ಯಾಶ್ output ಎಂದು ಟೈಪ್ ಮಾಡಿ, |
07:24 | ಮತ್ತು Enter ಒತ್ತಿ. |
07:27 | ಇಲ್ಲಿ, “Talk to a teacher” ಎಂದು ಔಟ್ ಪುಟ್ ತೋರಿಸುತ್ತದೆ. |
07:30 | ಈಗ, ಸಾಮಾನ್ಯವಾಗಿ ಬರುವ ಎರರ್ ಗಳನ್ನು ಗಮನಿಸೋಣ. |
07:35 | ಎಡಿಟರ್ ಗೆ ಹಿಂತಿರುಗಿ. |
07:38 | ಇಲ್ಲಿ, ನಾವು ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ಅನ್ನು ಬಿಡುತ್ತೇವೆ ಎಂದೆಣಿಸಿ. |
07:42 | ಈಗ ಫೈಲ್ ಅನ್ನು Save ಮಾಡಿ. |
07:44 | ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
07:48 | ಈಗ, ಈ ಮೊದಲು ಉಪಯೋಗಿಸಿದ ಕಮಾಂಡ್ ಅನ್ನು ಉಪಯೋಗಿಸಿ ಕಂಪೈಲ್ ಮತ್ತು ರನ್ ಮಾಡಿ. |
07:55 | ನಾವೀಗ, ನಮ್ಮ talk.cpp ಫೈಲ್ ನ ಏಳನೇ ಸಾಲಿನಲ್ಲಿ “Expected curly bracket at the end of input” ಎರರ್ ಇರುವುದನ್ನು ಕಾಣುತ್ತೇವೆ. |
08:07 | ಈಗ, ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. |
08:09 | ನಾನು ಮೊದಲೇ ಹೇಳಿದಂತೆ, ಕ್ಲೋಸಿಂಗ್ ಕರ್ಲಿ ಬ್ರಾಕೆಟ್, ಮೈನ್ ಫಂಕ್ಷನ್ ನ ಕೊನೆಯನ್ನು ಸೂಚಿಸುತ್ತದೆ. |
08:14 | ಹಾಗಾಗಿ, ಬ್ರಾಕೆಟ್ ಅನ್ನು ಮತ್ತೆ ಸೇರಿಸಿ. ಈಗ ಫೈಲ್ ಅನ್ನು Save ಮಾಡಿ. |
08:19 | ಮತ್ತೆ ಎಕ್ಸಿಕ್ಯೂಟ್ ಮಾಡೋಣ. |
08:21 | up arrow (ಅಪ್ ಆರೊ) ಕೀ ಇಂದ, ಹಿಂದೆ ಉಪಯೋಗಿಸಿದ ಕಮಾಂಡ್ ಗಳನ್ನು ಮತ್ತೆ ಉಪಯೋಗಿಸಬಹುದು. |
08:26 | ನಾನೀಗ ಅದನ್ನೇ ಮಾಡಿದೆ. |
08:30 | ಹೌದು, ಇದು ಕೆಲಸ ಮಾಡುತ್ತಿದೆ. |
08:32 | ನಾನೀಗ ನಿಮಗೆ ಮತ್ತೊಂದು ಸಾಮಾನ್ಯ ಎರರ್ ಅನ್ನು ತೋರಿಸುತ್ತೇನೆ. |
08:35 | ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗೋಣ. |
08:37 | ಈಗ, ನಾವು std ಎಂಬುದನ್ನು ಬಿಡುತ್ತೇವೆ ಎಂದೆಣಿಸಿ. |
08:41 | ಫೈಲ್ ಅನ್ನು Save ಮಾಡೋಣ. |
08:44 | ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
08:46 | ಕಂಪೈಲ್ ಮಾಡೋಣ. |
08:48 | ನಮ್ಮ talk.cpp ಫೈಲ್ ನ ಮೂರು ಮತ್ತು ಆರನೇ ಸಾಲಿನಲ್ಲಿ expected identifier before semicolon |
08:56 | ಮತ್ತು cout was not declared in this scope ಎಂಬ ಎರರ್ ಗಳಿರುವುದನ್ನು ನೋಡುತ್ತೇವೆ. |
09:05 | cout ಎಂಬುದು ಸ್ಟಾಂಡರ್ಡ್ C++ ಲೈಬ್ರರಿ ಫಂಕ್ಷನ್ ಆಗಿರುವುದರಿಂದ |
09:09 | ಮತ್ತು, C++ ಲೈಬ್ರರಿ ಫಂಕ್ಷನ್ ಡಿಫೈನ್ ಆಗಿರುವುದು std ಎಂಬ ನೇಮ್ ಸ್ಪೇಸ್ ನೊಳಗೆ ಇರುವುದರಿಂದ, ಎರರ್ ಕೊಡುತ್ತಿದೆ. |
09:18 | ಈಗ ಎರರ್ ಅನ್ನು ಸರಿಪಡಿಸೋಣ. ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. ಇಲ್ಲಿ std ಎಂದು ಟೈಪ್ ಮಾಡಿ. |
09:23 | ಇದನ್ನು Save ಮಾಡೋಣ. |
09:25 | ಇದನ್ನು ಮತ್ತೆ ಕಂಪೈಲ್ ಮಾಡೋಣ. |
09:29 | ಹೌದು, ಇದು ಕೆಲಸ ಮಾಡುತ್ತಿದೆ. |
09:32 | ನಿಮ್ಮ ಹೆಸರು ಮತ್ತು ಊರನ್ನು, ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
09:37 | ನಾವು ಈ ಟ್ಯುಟೋರಿಯಲ್ ನಲ್ಲಿ ಸಿಂಗಲ್ ಲೈನ್ ಕಾಮೆಂಟ್ ಅನ್ನು ಉಪಯೋಗಿಸಿದ್ದೇವೆ. |
09:40 | ಈಗ ಮಲ್ಟಿಲೈನ್ ಕಾಮೆಂಟ್ ಉಪಯೋಗಿಸಲು ಪ್ರಯತ್ನಿಸಿ. |
09:44 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
09:46 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
09:48 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
09:53 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, |
09:55 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
09:58 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
10:01 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
10:10 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
10:14 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
10:20 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
10:25 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ . |
10:28 | ಧನ್ಯವಾದಗಳು. |