Difference between revisions of "Java/C2/Numerical-Datatypes/Kannada"
From Script | Spoken-Tutorial
(Created page with ' {|border=1 ||''Time''' ||'''Narration''' |- |00:01 |ಜಾವಾ ದಲ್ಲಿ ನ್ಯುಮೆರಿಕಲ್ ಡಾಟಾಟೈಪ್ ನ ಬಗ್ಗೆ ಇರುವ ಈ …') |
|||
Line 179: | Line 179: | ||
|- | |- | ||
|06:06 | |06:06 | ||
− | | | + | |ಏಕೆಂದರೆ, ಚರ ಸಂಖ್ಯೆಯ ನಿಖರತೆಗೆ ಒಂದು ಮಿತಿಯಿದೆ. |
|- | |- | ||
|06:11 | |06:11 |
Revision as of 17:05, 23 June 2014
Time' | Narration |
00:01 | ಜಾವಾ ದಲ್ಲಿ ನ್ಯುಮೆರಿಕಲ್ ಡಾಟಾಟೈಪ್ ನ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ಜಾವಾ ದಲ್ಲಿ ಲಭ್ಯವಿರುವ ವಿವಿಧ ನ್ಯೂಮೆರಿಕಲ್ ಡಾಟಾಟೈಪ್ ಗಳ ಬಗ್ಗೆ ಹಾಗೂ, |
00:13 | ಅವುಗಳನ್ನು ನ್ಯೂಮೆರಿಕ್ ಡಾಟಾ ವನ್ನು ಸಂಗ್ರಹಿಸಲು ಹೇಗೆ ಉಪಯೋಗಿಸುವುದೆಂದು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ನಲ್ಲಿ ನಾವು
|
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಎಕ್ಲಿಪ್ಸ್ ನಲ್ಲಿ ಪ್ರೊಗ್ರಾಮ್ ಅನ್ನು ಬರೆಯುವುದು ಮತ್ತು ಅದನ್ನು ರನ್ ಮಾಡುವುದು ಹೇಗೆ ಎಂಬುದನ್ನು ತಿಳಿದಿರಬೇಕು. |
00:34 | ಇಲ್ಲವಾದಲ್ಲಿ ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಕೆಳಗೆ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:42 | ಇಂಟಿಜೆರ್ ಅನ್ನು ಸಂಗ್ರಹಿಸಲು ಇರುವ ಡಾಟಾ ಟೈಪ್ ಅನ್ನು int ಎನ್ನುತ್ತೇವೆ. |
00:47 | ಡೆಸಿಮಲ್ ಅನ್ನು ಸಂಗ್ರಹಿಸಲು ಇರುವ ಡಾಟಾ ಟೈಪ್ ಅನ್ನು float ಎನ್ನುತ್ತೇವೆ. |
00:52 | ಮೊದಲಿಗೆ ನಾನು ಇಂಟಿಜೆರ್ ಅನ್ನು ವಿವರಿಸುತ್ತೇನೆ ಮತ್ತು ಉಪಯೋಗಿಸುತ್ತೇನೆ. |
01:02 | ಇಲ್ಲಿ ನಾವು, Here, we have the Eclipse IDE and the skeleton required for the rest of the code. |
01:10 | ನಾವು NumericalData ಎಂಬ ಕ್ಲಾಸ್ ಅನ್ನು ರಚಿಸಿದ್ದೇವೆ ಮತ್ತು ಇದಕ್ಕೆ ಮೇನ್ ಮೆಥೆಡ್ ಅನ್ನು ಸೇರಿಸಿದ್ದೇವೆ. |
01:15 | ಈಗ ಸಂಖ್ಯೆಯನ್ನು ಹೇಗೆ ಸಂಗ್ರಹಿಸಿವುದೆಂದು ನೋಡೋಣ. |
01:20 | int distance equal to (=) 28 |
01:27 | ಈ ಸ್ಟೇಟ್ಮೆಂಟ್ ಎಂಬುದು ಇಂಟಿಜೆರ್ ವ್ಯಾಲ್ಯೂ ಅನ್ನು distance ನ ಹೆಸರಿನಲ್ಲಿ ಸಂಗ್ರಹಿಸುತ್ತದೆ. |
01:33 | distance ಎಂಬ ಹೆಸರನ್ನು ಇಂಟಿಜೆರ್ ವೇರಿಯೇಬಲ್ ಎಂದು ಕರೆಯುತ್ತಾರೆ. |
01:37 | ಈಗ ನಾವು ಡಿಸ್ಟೆನ್ಸ್ ಎಂಬ ವೇರಿಯೇಬಲ್ ಅನ್ನು ಅದರಲ್ಲಿನ ವ್ಯಾಲ್ಯೂವನ್ನು ಪ್ರಿಂಟ್ ಮಾಡಲು ಬಳಸಬಹುದು. |
01:47 | System dot out dot println. ಪೆರಂಥಿಸಿಸ್ ನಲ್ಲಿ distance. |
02:01 | ಈ ಸ್ಟೇಟ್ಮೆಂಟ್ ಡಿಸ್ಟೆಂಟ್ ವೇರಿಯೇಬಲ್ ನ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತದೆ. |
02:06 | ಫೈಲ್ ಅನ್ನು Save ಮಾಡಿ ಹಾಗೂ Run ಮಾಡಿ. |
02:14 | 28 ಎಂಬ ವ್ಯಾಲ್ಯೂ ಡಿಸ್ಟೆನ್ಸ್ ಎಂಬಲ್ಲಿ ಸಂಗ್ರಹವಾಗಿ ಪ್ರಿಂಟ್ ಆಗಿದೆ ಎಂದು ನಾವು ನೋಡಬಹುದು. |
02:21 | ಈಗ ನಾವು ವೇರಿಯೇಬಲ್ ನಲ್ಲಿ ಸಂಗ್ರಹವಾದ ವ್ಯಾಲ್ಯೂವನ್ನು ಬದಲಿಸೋಣ. |
02:25 | 28 ರಿಂದ 24 ಕ್ಕೆ ಬದಲಿಸೋಣ. |
02:29 | Save ಮಾಡಿ Run ಮಾಡಿ. |
02:34 | ನೋಡಿ, ಇದಕ್ಕನುಗುಣವಾಗಿ ಔಟ್ಪುಟ್ ಕೂಡಾ ಬದಲಾಗಿದೆ. |
02:39 | int ಎಂಬುದು ನೆಗೆಟೀವ್ ವ್ಯಾಲ್ಯೂಗಳನ್ನು ಕೂಡಾ ಸಂಗ್ರಹಿಸುತ್ತದೆ. |
02:42 | 24 ಅನ್ನು minus 25 ಗೆ ಬದಲಿಸಿ. |
02:48 | Save ಮಾಡಿ Run ಮಾಡಿ. |
02:56 | ನೋಡಿ, ನೆಗೆಟೀವ್ ವ್ಯಾಲ್ಯೂವನ್ನು ಕೂಡಾ int ಎಂಬ ವೇರಿಯೇಬಲ್ ಸಂಗ್ರಹಿಸುತ್ತದೆ. |
03:02 | int ಎಂಬ ಡಾಟಾ ಟೈಪ್ ಹೆಚ್ಚಿನ ಪ್ರೊಗ್ರಾಮಿಂಗ್ ನ ಅವಶ್ಯಕತೆಗಳನ್ನು ಪೂರೈಸುತ್ತದೆ. |
03:06 | ಆದರೆ ಇದು ಒಂದು ಮಿತಿಯವರೆಗೆ ಮಾತ್ರ ವ್ಯಾಲ್ಯೂವನ್ನು ಸಂಗ್ರಹಿಸುತ್ತದೆ. |
03:10 | ನಾವೀಗ ಒಂದು ದೊಡ್ಡ ಮೊತ್ತದ ವ್ಯಾಲ್ಯೂವನ್ನು ಸಂಗ್ರಹಿಸಲು ಪ್ರಯತ್ನಿಸೋಣ. |
03:25 | ನೋಡಿ, ಸಂಖ್ಯೆಯ ಕೆಳಗೆ ಕೆಂಪು ಬಣ್ಣದ ಲೈನ್ ಕಾಣುತ್ತದೆ, ಇದು ಎರರ್ ಅನ್ನು ಸೂಚಿಸುತ್ತದೆ. |
03:34 | ಆ ಎರರ್, ಸಂಖ್ಯೆಯು int ಯ ವೇರಿಯೇಬಲ್ ನ ಮಿತಿಯನ್ನು ದಾಟಿದೆ ಎಂದು ಹೇಳುತ್ತದೆ. |
03:42 | int ಎಂಬುದು ಕೇವಲ 32 bits memory ಯನ್ನು ತೆಗೆದುಕೊಳ್ಳುತ್ತದೆ ಹಾಗೂ -2 power 31 ರಿಂದ 2 power 31 ರ ವರೆಗಿನ ವ್ಯಾಲ್ಯೂವನ್ನು ಮಾತ್ರ ಸಂಗ್ರಹಿಸುತ್ತದೆ. |
03:49 | ದೋಡ್ಡ ಸಂಖ್ಯೆಯನ್ನು ಸಂಗ್ರಹಿಸಲು ಜಾವಾ, long ಡಾಟಾ ಟೈಪ್ ಅನ್ನು ಒದಗಿಸುತ್ತದೆ. |
03:54 | ಇದನ್ನು ನಾವು ದೊಡ್ಡ ವ್ಯಾಲ್ಯೂವನ್ನು ಸಂಗ್ರಹಿಸಲು ಬಳಸೋಣ. |
03:59 | int ಯನ್ನು long ಗೆ ಬದಲಿಸಿ. |
04:04 | ಸಂಖ್ಯೆಯ ಕೊನೆಯಲ್ಲಿ ದೊಡ್ಡ L ಅನ್ನು ಸೇರಿಸಿ. |
04:11 | Ctrl, S ಒತ್ತಿ ಸೇವ್ ಮಾಡಿ. |
04:16 | ನೋಡಿ, ಈಗ ಯಾವುದೇ ಎರರ್ ಗಳಿಲ್ಲ. |
04:19 | ಇದನ್ನು Ctrl, F11 ಒತ್ತುವುದರ ಮೂಲಕ ರನ್ ಮಾಡೋಣ. ಈಗ ವ್ಯಾಲ್ಯೂ ಪ್ರಿಂಟ್ ಆಗಿದೆ. |
04:27 | ನೋಡಿ, ದೊಡ್ಡ ಸಂಖ್ಯೆಗಳು long ಎಂಬ ವೇರಿಯೇಬಲ್ ನಲ್ಲಿ ಸಂಗ್ರಹವಾಗುತ್ತವೆ. |
04:32 | ಈಗ ನಾವು, int ಎಂಬ ವೇರಿಯೇಬಲ್ ನಲ್ಲಿ ಡೆಸಿಮಲ್ ಸಂಖ್ಯೆಯನ್ನು ಸಂಗ್ರಹಿಸೋಣ. |
04:37 | long ಅನ್ನು int ಗೆ ಬದಲಾಯಿಸಿ ಹಾಗೂ ಸಂಖ್ಯೆಯನ್ನು 23.5 ಎಂದು ಬದಲಾಯಿಸಿ. |
04:50 | ಈಗ ನಾವು ಎರರ್ ಅನ್ನು ನೋಡುತ್ತೇವೆ. ಏಕೆಂದರೆ, int ಎಂಬುದು ಕೇವಲ ಪೂರ್ಣಾಂಕವನ್ನು ಸಂಗ್ರಹಿಸುತ್ತದೆ. |
05:00 | ದಶಮಾಂಶ ಸಂಖ್ಯೆಯನ್ನು ಸಂಗ್ರಹಿಸಲು ನಾವು float ಅನ್ನು ಉಪಯೋಗಿಸಬೇಕು. |
05:05 | ಡಾಟಾ ಟೈಪ್ ಅನ್ನು float ಗೆ ಬದಲಿಸಿ. |
05:10 | ಹಾಗೂ ವ್ಯಾಲ್ಯೂವಿನ ಕೊನೆಯಲ್ಲಿ f ಅನ್ನು ಸೇರಿಸಿ. |
05:17 | ಸೇವ್ ಮಾಡಿ. |
05:19 | ನಾವೀಗ ಇಲ್ಲಿ ಎರರ್ ಅನ್ನು ನೋಡುವುದಿಲ್ಲ. |
05:22 | Control F11 ಒತ್ತುವುದರ ಮೂಲಕ ರನ್ ಮಾಡೋಣ. |
05:29 | ನೋಡಿ, ದಶಮಾಂಶ ಸಂಖ್ಯೆಯು ಸಂಗ್ರಹವಾಗಿದೆ ಹಾಗೂ ಪ್ರಿಂಟ್ ಆಗಿದೆ. |
05:37 | ನಾವೀಗ ಡಿಸ್ಟೆನ್ಸ್ ಎಂಬ ವೇರಿಯೇಬಲ್ ನ ವ್ಯಾಲ್ಯೂವನ್ನು ಬದಲಾಯಿಸೋಣ. |
05:46 | ಇಲ್ಲಿ ತೋರಿಸಿರುವಂತೆ ದಶಮಾಂಶ ಬಿಂದುವಿನ ನಂತರ ಹಲವು ಸಂಖ್ಯೆಗಳನ್ನು ಸೇರಿಸಿ. |
05:53 | Save ಮಾಡಿ ಹಾಗೂ Run ಮಾಡಿ. |
06:01 | ನೋಡಿ, ಔಟ್ಪುಟ್ ಎಂಬುದು ಸಂಗ್ರಹದಲ್ಲಿರುವುದಕ್ಕಿಂತ ಸ್ವಲ್ಪ ಭಿನ್ನವಾಗಿ ಇದೆ. |
06:06 | ಏಕೆಂದರೆ, ಚರ ಸಂಖ್ಯೆಯ ನಿಖರತೆಗೆ ಒಂದು ಮಿತಿಯಿದೆ. |
06:11 | ಇದು ನಿಖರವಾಗಿ ಸಂಗ್ರಹವಾಗಿರದಿದ್ದಲ್ಲಿ ಅದರ ಹತ್ತಿರದ ಸಂಖ್ಯೆಯನ್ನು ಸೂಚಿಸುತ್ತದೆ. |
06:18 | ಈಗ ನಾವು ವೇರಿಯೇಬಲ್ ಗೆ ಇರುವ ಹೆಸರಿನ ನಿಯಮಗಳ ಬಗ್ಗೆ ನೋಡೋಣ. |
06:23 | ಹೆಸರಿಗೆ ಮುಂಚೆ 2 ಎಂಬ ಸಂಖ್ಯೆಯನ್ನು ಸೇರಿಸಿ. |
06:30 | ನೋಡಿ, ಇಲ್ಲಿ syntax error ಕಾಣುತ್ತದೆ. |
06:34 | ಏಕೆಂದರೆ, ವೇರಿಯೇಬಲ್ ನ ಹೆಸರು ಯಾವಾಗಲೂ ಕೂಡಾ ಅಕ್ಷರಗಳಿಂದಲೇ ಶುರುವಾಗಬೇಕು. |
06:40 | ಹಾಗೂ ಸಾಮಾನ್ಯವಾಗಿ underscore ಎಂಬುದನ್ನು ವೇರಿಯೇಬಲ್ ನ ಹೆಸರಿನ ಶುರುವಿನಲ್ಲಿ ಉಪಯೋಗಿಸುವುದಿಲ್ಲ. |
06:45 | ಈಗ ಸಂಖ್ಯೆಯನ್ನು ವೇರಿಯೇಬಲ್ ಹೆಸರಿನ ಕೊನೆಯಲ್ಲಿ ಸೇರಿಸೋಣ. |
06:55 | ನೋಡಿ, ಈಗ ಎರರ್ ಗಳಿಲ್ಲ. |
06:59 | ವೇರಿಯೇಬಲ್ ನ ಹೆಸರಿನಲ್ಲಿ ಸಂಖ್ಯೆಗಳಿರಬಹುದು ಆದರೆ ಶುರುವಿನಲ್ಲಲ್ಲ. |
07:04 | ಈಗ ಹೆಸರಿನ ಮಧ್ಯದಲ್ಲಿ underscore ಅನ್ನು ಸೇರಿಸೋಣ. |
07:15 | ನೋಡಿ, ಈಗಲೂ ಯಾವುದೇ ಎರರ್ ಗಳಿಲ್ಲ. |
07:17 | ಅಂದರೆ underscore ಎಂಬುದುದನ್ನು ವೇರಿಯೇಬಲ್ ಹೆಸರಿನಲ್ಲಿ ಉಪಯೋಗಿಸಬಹುದು. |
07:22 | ಆದರೆ ಬೇರಾವ ಚಿಹ್ನೆಗಳೂ ಕೂಡಾ ವೇರಿಯೇಬಲ್ ಹೆಸರಿನಲ್ಲಿ ಇದ್ದಲ್ಲಿ ಅದು syntax error ಅಥವಾ ಇತರ error ಗಳನ್ನು ತೋರಿಸುತ್ತದೆ. |
07:28 | ಹೀಗೆ ನೀವು ಜಾವಾದಲ್ಲಿ numerical data ವನ್ನು ಸಂಗ್ರಹಿಸುತ್ತೀರಿ. |
07:35 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:38 | ಈ ಟ್ಯುಟೋರಿಯಲ್ ನಲ್ಲಿ ನಾವು ವಿವಿಧ numerical datatype ಗಳ ಬಗ್ಗೆ ತಿಳಿದೆವು. |
07:44 | ಹಾಗೂ numerical data ಗಳನ್ನು ಹೇಗೆ ಸಂಗ್ರಹಿಸುವುದೆಂದೂ ತಿಳಿದೆವು. |
07:46 | ಮತ್ತು ನಾವು ವೇರಿಯೇಬಲ್ ನ ಹೆಸರಿನಲ್ಲಿರುವ ನಿಯಮಗಳನ್ನೂ ತಿಳಿದುಕೊಂಡೆವು. |
07:51 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, |
07:53 | ಬೇರೆ numerical data type ಗಳ ಬಗ್ಗೆ ಓದಿ. |
07:56 | ಅವುಗಳು int ಹಾಗೂ float ಗಿಂತ ಹೇಗೆ ವಿಭಿನ್ನವಾಗಿದೆ ಎಂಬುದನ್ನು ನೋಡಿ. |
08:00 | ಜಾವಾ ಟ್ಯುಟೋರಿಯಲ್ ಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
08:05 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
08:11 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
08:14 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
08:20 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:24 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:35 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:39 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:45 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ. |
08:51 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |