Difference between revisions of "LibreOffice-Suite-Calc/C2/Basic-Data-Manipulation/Kannada"
From Script | Spoken-Tutorial
Line 1: | Line 1: | ||
{| border=1 | {| border=1 | ||
− | | | + | |'''Time''' |
+ | |'''Narration''' | ||
|- | |- |
Latest revision as of 11:34, 14 July 2014
Time | Narration |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾ ಮೆನಿಪ್ಯುಲೇಶನ್ ನ ಬೇಸಿಕ್ ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ನಲ್ಲಿ ನಾವು, |
00:09 | ಫಾರ್ಮುಲಾಗಳ ಬೇಸಿಕ್ ಗಳ ಬಗ್ಗೆ ಪರಿಚಯ. |
00:12 | ಕಾಲಂಗಳನ್ನು ಜೋಡಿಸುವುದು. |
00:15 | ಡಾಟಾ ವನ್ನು ಫಿಲ್ಟರ್ ಮಾಡುವುದು ಮುಂತಾದವುಗಳನ್ನು ಕಲಿಯುತ್ತೇವೆ. |
00:17 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4. |
00:27 | ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ನ ಬೇಸಿಕ್ ಫಾರ್ಮುಲಾಗಳನ್ನು ಕಲಿಯುವುದರ ಮೂಲಕ ಟ್ಯುಟೋರಿಯಲ್ ಅನ್ನು ಆರಂಭಿಸೋಣ. |
00:35 | ಫಾರ್ಮುಲಾಗಳೆಂದರೆ ಸಂಖ್ಯೆಗಳನ್ನು ಮತ್ತು ವೇರಿಯೇಬಲ್ ಗಳನ್ನು ಬಳಸಿಕೊಂಡು ಫಲಿತಾಂಶವನ್ನು ಕೊಡುವ ಸಮೀಕರಣಗಳು. |
00:41 | ಸ್ಪ್ರೆಡ್ ಶೀಟ್ ನಲ್ಲಿ ವೇರಿಯೇಬಲ್ ಆಗಿರುವುದು ಎಂದರೆ ಸೆಲ್ ಲೊಕೇಶನ್. ಅದು ಸಮೀಕರಣಕ್ಕೆ ಬೇಕಾದ ಡಾಟಾವನ್ನು ಹಿಡಿದಿಟ್ಟುಕೊಂಡಿರುತ್ತದೆ. |
00:47 | ಇಲ್ಲಿ ಮಾಡಬಹುದಾದ ಮೂಲಭೂತ ಅಂಕಗಣಿತದ ಕಾರ್ಯಾಚರಣೆಗಳೆoದರೆ ಕೂಡಿಸುವುದು, ಕಳೆಯುವುದು, ಗುಣಿಸುವುದು ಹಾಗೂ ಭಾಗಿಸುವುದು. |
00:56 | ಈಗ ಮೊದಲು ನಮ್ಮ “Personal-Finance-Tracker.ods” ಫೈಲ್ ನ್ನು ಓಪನ್ ಮಾಡೋಣ. |
01:02 | ನಮ್ಮ ಈ “personal finance tracker.ods” ನಲ್ಲಿ “Cost” ಹೆಡಿಂಗ್ ನ ಕೆಳಗೆ ಕೊಟ್ಟಿರುವ ಎಲ್ಲಾ ಖರ್ಚುಗಳ ವಿವರಗಳನ್ನು ಹೇಗೆ ಸೇರಿಸುವುದು ಎಂದು ನೋಡೋಣ. |
01:13 | ಈಗ ನಾವು “Miscellaneous” ನ ಕೆಳಗೆ “SUM TOTAL” ಎಂಬ ಇನ್ನೊಂದು ಹೆಡಿಂಗ್ ನ್ನು ಕೊಡೋಣ. |
01:19 | ನಂತರ A8 ಸೆಲ್ ಮೇಲೆ ಕ್ಲಿಕ್ ಮಾಡೋಣ ಮತ್ತು “7” ಎಂದು ಕ್ರಮ ಸಂಖ್ಯೆಯನ್ನು ಹಾಕೋಣ. |
01:25 | ಈಗ ನಾವು “c8” ಸೆಲ್ ಮೇಲೆ ಕ್ಲಿಕ್ ಮಾಡೋಣ. ಅಲ್ಲಿ ನಾವು ಖರ್ಚುಗಳ ಒಟ್ಟು ಮೊತ್ತವನ್ನು ತೋರಿಸುತ್ತೇವೆ. |
01:32 | ಎಲ್ಲಾ ಖರ್ಚುಗಳನ್ನು ಸೇರಿಸಲು ನಾವು “is equal to SUM” ಎಂದು ಟೈಪ್ ಮಾಡಬೇಕು ಮತ್ತು ಆವರಣದ ಒಳಗೆ ಕಾಲಂಗಳ ಸಾಲನ್ನು ಸೇರಿಸಬೇಕು. ಅದು, ”C3 colon C7” ಹೀಗಿರುತ್ತದೆ. |
01:44 | ಈಗ ಕೀ ಬೋರ್ಡ್ ನಲ್ಲಿ ಎಂಟರ್ ಒತ್ತಿ. |
01:47 | “Cost” ಕೆಳಗೆ ಎಲ್ಲಾ ಐಟಂ ಗಳು ಸೇರಿರುವುದನ್ನು ನೀವು ಕಾಣಬಹುದು. |
01:51 | ಈಗ ನಾವು ಕ್ಯಾಲ್ಕ್ ನಲ್ಲಿ ಕಳೆಯುವುದು ಹೇಗೆ ಎಂದು ಕಲಿಯೋಣ. |
01:55 | ನಮಗೆ “House Rent” ನ ಮತ್ತು “ Electricity Bill” ನ ಖರ್ಚನ್ನು ಕಳೆಯಬೇಕಿದ್ದರೆ, ಮತ್ತು ಅದನ್ನು A9 ರೆಫೆರೆನ್ಸ್ ಇರುವ ಸೆಲ್ ನಲ್ಲಿ ತೋರಿಸಬೇಕೆಂದಿದ್ದರೆ, ಮೊದಲು A9 ಸೆಲ್ ಮೇಲೆ ಕ್ಲಿಕ್ ಮಾಡಿ. |
02:06 | ಈಗ ಈ ಸೆಲ್ ನಲ್ಲಿ “is equal to” ಎಂದು ಟೈಪ್ ಮಾಡಿ ಮತ್ತು ಆವರಣದ ಒಳಗೆ ಸಂಬಂಧಪಟ್ಟ ಸೆಲ್ ರೆಫೆರೆನ್ಸ್ ಗಳನ್ನು ಟೈಪ್ ಮಾಡಿ. ಅದು, “C3 minus C4” ಆಗಿರುತ್ತದೆ. |
02:17 | ಈಗ ಕೀ ಬೋರ್ಡ್ ನಲ್ಲಿ ಎಂಟರ್ ಒತ್ತಿ. |
02:20 | ಎರಡು ಸೆಲ್ ನಲ್ಲಿರುವ ಖರ್ಚುಗಳು ಕಳೆದು ಅದರ ಫಲಿತಾಂಶ ಸೆಲ್ ನಂಬರ್ A9 ರಲ್ಲಿ ಕಾಣಿಸುವುದನ್ನು ನಾವು ನೋಡಬಹುದು. |
02:29 | ಈಗ ನಾವು ಮಾಡಿದ ಬದಲಾವಣೆಗಳನ್ನು undo ಮಾಡೋಣ. |
02:32 | ಅಂತೆಯೇ ಇದರಲ್ಲಿ ನಮಗೆ ಬೇರೆ ಬೇರೆ ಸೆಲ್ ಗಳಲ್ಲಿರುವ ಡಾಟಾವನ್ನು ಭಾಗಿಸಬಹುದು ಮತ್ತು ಗುಣಿಸಬಹುದು. |
02:37 | ಸ್ಪ್ರೆಡ್ ಶೀಟ್ ನ ಇನ್ನೊಂದು ಮೂಲಭೂತವಾದ ಕಾರ್ಯವೇನೆಂದರೆ, ಸಂಖ್ಯೆಗಳ “Average” ನ್ನು ಕಂಡುಹಿಡಿಯುವುದು. |
02:43 | ಈಗ ನಾವು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. |
02:45 | ಈಗ ನಾವು “SUM TOTAL” ನ ಸ್ವಲ್ಪ ಕೆಳಗೆ “Average” ಎಂದು ಹೆಡಿಂಗ್ ಕೊಡೋಣ. |
02:50 | ಇದರಲ್ಲಿ ನಮಗೆ ಒಟ್ಟು ಖರ್ಚಿನ ಸರಾಸರಿಯನ್ನು ತೋರಿಸಬೇಕಿದೆ. |
02:55 | ಹಾಗಾಗಿ ಈಗ ನಾವು “C9” ಸೆಲ್ ನ ಮೇಲೆ ಕ್ಲಿಕ್ ಮಾಡೋಣ. |
02:58 | ಈಗ ನಾವು ಆವರಣದ ಒಳಗೆ “is equal to” ಸರಾಸರಿ ಮತ್ತು ಕ್ರಯ ಎಂದು ಬರೆಯುತ್ತೇವೆ. |
03:04 | ಕೀ ಬೋರ್ಡ್ ನಲ್ಲಿ ಎಂಟರ್ ಒತ್ತಿ. |
03:07 | ಈಗ ಸೆಲ್ ನಲ್ಲಿ “Cost” ಕಾಲಂನ ಸರಾಸರಿ ಬಂದಿರುವುದನ್ನು ನೀವು ಕಾಣಬಹುದು. |
03:11 | ಈಗ ನಾವು ಮಾಡಿದ ಬದಲಾವಣೆಗಳನ್ನು undo ಮಾಡೋಣ. |
03:15 | ಅಂತೆಯೇ, ನೀವು ಅಡ್ಡ ಸಾಲುಗಳಲ್ಲಿ ಇರುವ ಅಂಶಗಳ ಸರಾಸರಿಯನ್ನು ಕೂಡ ಕಂಡುಹಿಡಿಯಬಹುದು. |
03:20 | ನಾವು ಫಾರ್ಮುಲಾಗಳ ಮತ್ತು ಒಪರೇಟರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇನ್ನೂ ಮುಂಬರುವ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ. |
03:25 | ಈಗ ನಾವು ಕ್ಯಾಲ್ಕ್ ನ ಸ್ಪ್ರೆಡ್ ಶೀಟ್ ನಲ್ಲಿ ಡಾಟಾವನ್ನು ಹೇಗೆ “Sort” ಮಾಡುವುದು ಎಂದು ಕಲಿಯೋಣ. |
03:30 | ಸಾರ್ಟಿಂಗ್ ಬಳಸಿ ಸೆಲ್ ಗಳನ್ನು ಶೀಟ್ ನಲ್ಲಿ ನಮಗೆ ಇಷ್ಟ ಬಂದ ರೀತಿಯಲ್ಲಿ ಜೋಡಿಸಬಹುದು. |
03:35 | ಕ್ಯಾಲ್ಕ್ ನಲ್ಲಿ ನೀವು ಡಾಟಾ ವನ್ನು ಮೂರು ರೀತಿಯಲ್ಲಿ ಸಾರ್ಟ್ ಮಾಡಬಹುದು. |
03:43 | ನೀವು ಒಂದು ನಿರ್ದಿಷ್ಟವಾದ ಐಟಂ ನ್ನು ಹುಡುಕುತ್ತಿರುವಾಗ ಇವುಗಳು ತುಂಬಾ ಉಪಯೋಗಕ್ಕೆ ಬರುತ್ತವೆ. |
03:51 | ಈಗ ನಮಗೆ “Costs” ಹೆಡಿಂಗ್ ನ ಅಡಿಯಿರುವ ಡಾಟಾವನ್ನು ಏರಿಕೆ ಕ್ರಮದಲ್ಲಿ ಜೋಡಿಸಬೇಕು ಎನ್ನಿ. |
03:57 | ಹಾಗಾದರೆ ಜೋಡಿಸಬೇಕಾದ ಸೆಲ್ ಗಳನ್ನು ಮೊದಲು ಸೆಲೆಕ್ಟ್ ಮಾಡಬೇಕು. ಅದಕ್ಕೆ, “Cost” ಸೆಲ್ ಮೇಲೆ ಕ್ಲಿಕ್ ಮಾಡಬೇಕು. |
04:03 | ಈಗ ಲೆಫ್ಟ್ ಮೌಸ್ ಬಟನ್ ನ್ನು ಒತ್ತಿ ಹಿಡಿದು “2000” ಎಂದು ಬರೆದಿರುವ ಕೊನೆಯ ಸೆಲ್ ವರೆಗೂ ಎಳೆಯಿರಿ. |
04:12 | ಇದು ನಾವು ಸಾರ್ಟ್ ಮಾಡಬೇಕಿರುವ ಕಾಲಂ ಅನ್ನು ಸೆಲೆಕ್ಟ್ ಮಾಡುತ್ತದೆ. |
04:15 | ಈಗ ಮೆನ್ಯು ಬಾರ್ ನಲ್ಲಿ “Data” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Sort” ನ್ನು ಕ್ಲಿಕ್ ಮಾಡಿ. |
04:21 | ನಂತರ “Current Selection” ನ್ನು ಸೆಲೆಕ್ಟ್ ಮಾಡಿ. |
04:24 | ಈಗ “Sort criteria” ಮತ್ತು “Options” ಟ್ಯಾಬ್ ಗಳಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
04:31 | “Sort criteria” ಟ್ಯಾಬ್ ನಲ್ಲಿ “Sort by” ಫೀಲ್ಡ್ ನಲ್ಲಿ “Cost” ನ್ನು ಸೆಲೆಕ್ಟ್ ಮಾಡಿ. |
04:37 | “Cost” ಅನ್ನು ಏರಿಕಯ ಕ್ರಮದಲ್ಲಿ ಜೋಡಿಸಲು “Ascending” ಆಯ್ಕೆಯ ಮೇಲೆ ಕ್ಲಿಕ್ ಮಾಡಿ . |
04:44 | ಈಗ “OK” ಬಟನ್ ಕ್ಲಿಕ್ ಮಾಡಿ. |
04:47 | ಈಗ ಕಾಲಂ ಏರಿಕೆ ಕ್ರಮದಲ್ಲಿರುವುದನ್ನು ನೀವು ನೋಡಬಹುದು. |
04:51 | ಹಾಗೆಯೇ, ಇಳಿಕೆ ಕ್ರಮದಲ್ಲಿ ಜೋಡಿಸಲು “Descending” ನ್ನು ಕ್ಲಿಕ್ ಮಾಡಿ ನಂತರ “OK” ಬಟನ್ ಕ್ಲಿಕ್ ಮಾಡಿ. |
04:59 | ಈಗ ನಾವು ಮಾಡಿದ ಬದಲಾವಣೆಗಳನ್ನು undo ಮಾಡೋಣ. |
05:02 | ಎಲ್ಲಾ ಕಾಲಂ ಗಳನ್ನು ಒಟ್ಟಿಗೆ ಸೆಲೆಕ್ಟ್ ಮಾಡಿ ನಂತರ ಸಾರ್ಟ್ ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದ ಹೆಚ್ಚಿನ ಕಾಲಂ ಗಳನ್ನು ಒಟ್ಟಿಗೆ ಸಾರ್ಟ್ ಮಾಡಬಹುದು. |
05:09 | ಈಗ ನಮಗೆ ಕ್ರಮ ಸಂಖ್ಯೆಯನ್ನೂ ಕೂಡ ಕಾಸ್ಟ್ ನಂತೆಯೇ ಸಾರ್ಟ್ ಮಾಡಬೇಕು ಎಂದುಕೊಳ್ಳಿ. |
05:14 | ಹಾಗಾದರೆ, ಮೇಲೆ ಮಾಡಿದಂತೆಯೇ ಮೊದಲು ಈ ಕಾಲಂಗಳನ್ನು ಸೆಲೆಕ್ಟ್ ಮಾಡಿ. |
05:18 | ಈಗ ಮೆನ್ಯು ಬಾರ್ ನಲ್ಲಿ “Data” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Sort” ನ್ನು ಕ್ಲಿಕ್ ಮಾಡಿ. |
05:24 | ಈಗ ಕಾಣಿಸುವ ಡೈಲಾಗ್ ಬಾಕ್ಸ್ ನಲ್ಲಿ “Sort by” ಫೀಲ್ಡ್ ನಲ್ಲಿ “Cost” ನ್ನು ಸೆಲೆಕ್ಟ್ ಮಾಡಿ. |
05:30 | ಇನ್ನು “Then by” ಫೀಲ್ಡ್ ನಲ್ಲಿ “SN” ಸೆಲೆಕ್ಟ್ ಮಾಡಿ. |
05:35 | ಅವುಗಳ ಬಳಿ ಇರುವ ಎರಡೂ ಆಯ್ಕೆಗಳಲ್ಲಿ “ Descending” ನ್ನು ಕ್ಲಿಕ್ ಮಾಡಿ ನಂತರ “OK” ಕ್ಲಿಕ್ ಮಾಡಿ. |
05:43 | ಈಗ ಎರಡೂ ಹೆಡಿಂಗ್ ಗಳೂ ಇಳಿಕೆ ಕ್ರಮದಲ್ಲಿರುವುದನ್ನು ನೀವು ಕಾಣಬಹುದು. |
05:47 | ಈಗ ನಾವು ಮಾಡಿದ ಬದಲಾವಣೆಗಳನ್ನು undo ಮಾಡೋಣ. |
05:49 | ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಹೇಗೆ ಡಾಟಾ ವನ್ನು ಫಿಲ್ಟರ್ ಮಾಡುವುದು ಎಂದು ತಿಳಿಯೋಣ. |
05:53 | ಫಿಲ್ಟರ್ ಎಂದರೆ ಕಂಡೀಶನ್ ಗಳ ಒಂದು ಲಿಸ್ಟ್ ಆಗಿದೆ. ಪ್ರತೀ ಎಂಟ್ರಿಯು ಇದನ್ನು ತಲುಪಿದ ಮೇಲೆಯೇ ಡಿಸ್ಪ್ಲೇ ಆಗಬೇಕು. |
06:00 | ಸ್ಪ್ರೆಡ್ ಶೀಟ್ ನಲ್ಲಿ ಫಿಲ್ಟರ್ ನ್ನು ಹಾಕಲು ಈಗ ನಾವು “Item” ಹೆಸರಿನ ಸೆಲ್ ನ್ನು ಕ್ಲಿಕ್ ಮಾಡೋಣ. |
06:07 | ಈಗ ಮೆನ್ಯು ಬಾರ್ ನಲ್ಲಿ “Data” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Filter” ನ್ನು ಕ್ಲಿಕ್ ಮಾಡಿ. |
06:12 | ಈಗ ಪಾಪ್ ಅಪ್ ಮೆನ್ಯುವಲ್ಲಿ “AutoFilter” ಆಯ್ಕೆಯನ್ನು ಕ್ಲಿಕ್ ಮಾಡಿ. |
06:16 | ಈಗ ಹೆಡಿಂಗ್ ನ ಮೇಲೆ ಒಂದು ಬಾಣದ ಗುರುತು ಗೋಚರಿಸುವುದನ್ನು ನೀವು ಗಮನಿಸಬಹುದು. |
06:20 | ಈಗ “Item” ಹೆಸರಿನ ಸೆಲ್ ಮೇಲಿನ ಡೌನ್ ಏರೋ ಅನ್ನು ಕ್ಲಿಕ್ ಮಾಡಿ . |
06:24 | ಈಗ ಒಂದು ವೇಳೆ ನಿಮಗೆ “Electricity Bill” ಗೆ ಸಂಬಂಧಪಟ್ಟ ಡಾಟಾವನ್ನು ಮಾತ್ರ ತೋರಿಸಬೇಕು ಎಂದುಕೊಳ್ಳಿ. |
06:29 | ಹಾಗಾದರೆ “Electricity Bill” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:34 | ಈಗ ಶೀಟ್ ನಲ್ಲಿ “Electricity Bill” ಗೆ ಸಂಬಂಧಿಸಿದ ಡಾಟಾ ಮಾತ್ರ ಡಿಸ್ಪ್ಲೇ ಆಗಿರುವುದನ್ನು ನೀವು ಕಾಣಬಹುದು. |
06:40 | ಉಳಿದ ಆಯ್ಕೆಗಳು ಶೋಧಿಸಿ ಹೋಗುತ್ತವೆ. |
06:43 | ಈಗ ಎಲ್ಲಾ ಡಾಟಾಗಳನ್ನು ನೋಡಲು ಪುನಃ ”Item” ಹೆಸರಿನ ಸೆಲ್ ಮೇಲೆ ಕ್ಲಿಕ್ ಮಾಡಿ ನಂತರ “All” ಮೇಲೆ ಕ್ಲಿಕ್ ಮಾಡಿ. |
06:52 | ಈಗ ನಮಗೆ ನಾವು ಮೊದಲು ಬರೆದ ಎಲ್ಲಾ ಡಾಟಾಗಳನ್ನು ನೋಡಲು ಸಾಧ್ಯವಿದೆ. |
06:59 | “AutoFilter” ನ್ನು ಹೊರತುಪಡಿಸಿ “Standard Filter” ಮತ್ತು “Advanced Filter” ಎಂಬ ಇನ್ನೆರಡು ಫಿಲ್ಟರ್ ಗಳ ಆಯ್ಕೆಗಳಿವೆ. ಅವುಗಳನ್ನು ಈ ಸರಣಿಯ ಮುಂದಿನ ಹಂತಗಳಲ್ಲಿ ಕಲಿಯುತ್ತೇವೆ. |
07:11 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
07:15 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, |
07:18 | ಫಾರ್ಮುಲಾಗಳ ಬೇಸಿಕ್ ಗಳ ಬಗ್ಗೆ ಪರಿಚಯ. |
07:21 | ಕಾಲಂಗಳಿಗನುಗುಣವಾಗಿ ಸಾರ್ಟ್ ಮಾಡುವುದು. |
07:23 | ಡಾಟಾವನ್ನು ಫಿಲ್ಟರ್ ಮಾಡುವ ಬಗ್ಗೆ ಇತ್ಯಾದಿ. |
07:26 | ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. |
07:30 | ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವನ್ನು ಕೊಡುತ್ತದೆ. |
07:33 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ. |
07:37 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:43 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:47 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:53 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:06 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:16 | ಈ ಪಾಠದ ಅನುವಾದಕ ಉದಯ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.
ಧನ್ಯವಾದಗಳು. |