Difference between revisions of "PHP-and-MySQL/C4/User-Login-Part-2/Kannada"
From Script | Spoken-Tutorial
Sandhya.np14 (Talk | contribs) (Created page with "{|Border=1 |'''Time''' |'''Narration''' |- |00:00 | ಎರಡನೆ ಭಾಗಕ್ಕೆ ಸ್ವಾಗತ. ಇಲ್ಲಿ ನಾನು "login dot php" ಪೇಜ್ ಅನ...") |
Sandhya.np14 (Talk | contribs) |
||
(One intermediate revision by the same user not shown) | |||
Line 157: | Line 157: | ||
|- | |- | ||
|05:42 | |05:42 | ||
− | |ಈಗ ಪಾಸ್ವರ್ಡ್ ಅನ್ನು | + | |ಈಗ ಪಾಸ್ವರ್ಡ್ ಅನ್ನು ಪಡೆಯಲು, ನಾನು ಒಂದು ಫಂಕ್ಷನ್ ಅನ್ನು ಬಳಸುವೆನು. |
|- | |- | ||
|05:46 | |05:46 | ||
Line 250: | Line 250: | ||
|- | |- | ||
|09:24 | |09:24 | ||
− | |ಮುಂದಿನ ಭಾಗದಲ್ಲಿ ಭೇಟಿಯಾಗೋಣ ಮತ್ತು ನಾನು '''sessions''' ಮತ್ತು ಲಾಗೌಟ್ ಪೇಜ್ ಅನ್ನು ರಚಿಸುವುದು | + | |ಮುಂದಿನ ಭಾಗದಲ್ಲಿ ಭೇಟಿಯಾಗೋಣ ಮತ್ತು ನಾನು '''sessions''' ಮತ್ತು ಲಾಗೌಟ್ ಪೇಜ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು. |
|- | |- | ||
|09:32 | |09:32 | ||
| ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |
Latest revision as of 15:20, 27 May 2020
Time | Narration |
00:00 | ಎರಡನೆ ಭಾಗಕ್ಕೆ ಸ್ವಾಗತ. ಇಲ್ಲಿ ನಾನು "login dot php" ಪೇಜ್ ಅನ್ನು ಡಾಟಾಬೇಸ್ ಗೆ ಕನೆಕ್ಟ್ ಮಾಡಲು ಎಡಿಟ್ ಮಾಡುವುದು ಮತ್ತು ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ಡಾಟಾಬೇಸ್ ನಲ್ಲಿ ಪರೀಕ್ಷಿಸುವುದರ ಬಗ್ಗೆ ತೋರಿಸುವೆನು. |
00:14 | ನಾವು ಈಗಾಗಲೇ ಡಾಟಾಬೇಸ್ ಗೆ ಕನೆಕ್ಟ್ ಮಾಡಿದ್ದೇವೆ. |
00:18 | ಇದನ್ನು ರಿಫ್ರೆಶ್ ಮಾಡಿ, ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಪುನಃ ಕಳುಹಿಸಿ, ನಾವು ಇಲ್ಲಿ ಎರರ್ ಗಳಿಲ್ಲ ಎಂದು ನೋಡಬಹುದು. |
00:24 | ಇಲ್ಲಿ ಎರರ್ ಇಲ್ಲ. ನಾವು ಡಾಟಾವನ್ನು ಟೈಪ್ ಮಾಡದೇ ಇದ್ದರೆ ಎರರ್ ಬರುತ್ತದೆ ಎಂದು ನೋಡಿದ್ದೇವೆ. |
00:28 | ಈಗ ಮೊದಲಿಗೆ ನಾನು ಒಂದು query ಯನ್ನು ತಯಾರಿಸುವೆನು. |
00:36 | ನೀವು ಈ ಮೊದಲು "mysql" ಅನ್ನು ಬಳಸಿದ್ದರೆ ಅಥವಾ ಯಾವುದಾದರೂ ಸ್ಟ್ರಕ್ಚರ್ಡ್ ಕ್ವೈರಿ ಲಾಂಗ್ವೇಜ್ ಅನ್ನು ಬಳಸಿದ್ದರೆ, ಡಾಟಾಬೇಸ್ ಗೆ ಕ್ವೈರಿಯನ್ನು ತಯಾರಿಸುವುದನ್ನು ತಿಳಿದಿರುತ್ತೀರಿ. |
00:43 | ನಾನು "Microsoft Access" ಇದನ್ನು ಹೊಂದಿದೆ ಎಂದುಕೊಳ್ಳುವೆನು. |
00:46 | ಅದಕ್ಕಾಗಿ ನಾವು, SELECT, ಅಂದರೆ "SELECT *" ಎಂದು ಟೈಪ್ ಮಾಡುವೆವು, ಏಕೆಂದರೆ ನಮಗೆ ID, username ಮತ್ತು password - ಎಲ್ಲವೂ ಬೇಕು. |
00:54 | ನಮಗೆ id ಬೇಡ ಅನಿಸುತ್ತದೆ. ಆದರೆ, "SELECT *" ಹೇಗಿದ್ದರೂ ಎಲ್ಲವನ್ನು ತೆಗೆದುಕೊಳ್ಳುತ್ತದೆ. |
00:59 | ಹಾಗಾಗಿ "SELECT * FROM" ಮತ್ತು ನಾವು ಇದನ್ನು 'users' ಎಂದಿದ್ದೇವೆ ಅನಿಸುತ್ತದೆ. ಈಗ ನಾನು ಅದನ್ನು ಖಚಿತಪಡಿಸಿಕೊಳ್ಳುವೆನು. |
01:04 | ಹೌದು, ಅದು 'users' ಎಂದೇ ಇದೆ. ಹಾಗಾಗಿ "SELECT * users" ಮತ್ತು ಇಲ್ಲಿ "WHERE username" ಇದು ಇದರ ಹೆಸರಾಗಿದೆ. |
01:20 | ಹಾಗಾಗಿ ನಾವು ಇಲ್ಲಿ "WHERE username equals" "username" –ಇದು ಟೈಪ್ ಮಾಡಿದ ಹೆಸರು ಆಗಿದೆ- ಎಂದಿರಲಿ. |
01:30 | ಈಗ ಈ "username" ಇರದಿದ್ದರೆ, ನಾವು ಒಂದು ಎರರ್ ಮೆಸೇಜ್ ಅನ್ನು, ಉದಾಹರಣೆಗೆ, "This user doesn’t exist" ಎಂದು ತೋರಿಸಬೇಕು. |
01:37 | ಅದಕ್ಕಾಗಿ ನಾವು "mysql_num_rows()" ಎನ್ನುವ ಇನ್ನೊಂದು 'mysql' ಫಂಕ್ಷನ್ ಅನ್ನು ಬಳಸಬೇಕು. |
01:46 | ಇದು ನೀವು ಡಾಟಾಬೇಸ್ ಗೆ ಕೊಟ್ಟ ಕ್ವೈರಿಯಿಂದ ನೋಡಲ್ಪಟ್ಟ ರೋ ಗಳ ಸಂಖ್ಯೆಯನ್ನು ಎಣಿಸುತ್ತದೆ. |
01:53 | ಅದಕ್ಕಾಗಿ ನಾವು, $numrows equals mysql_num_rows() ಎಂದೂ ಮತ್ತು ಬ್ರ್ಯಾಕೆಟ್ ನಲ್ಲಿ ನಮ್ಮ ಕ್ವೈರಿಯ ಹೆಸರನ್ನು, ಅಂದರೆ ನಾನು ಕ್ವೈರಿ ಫಂಕ್ಷನ್ ಅನ್ನು ಸ್ಟೋರ್ ಮಾಡಿದ ವೇರಿಯೇಬಲ್ ಅನ್ನು ಟೈಪ್ ಮಾಡೋಣ. |
02.08 | ಮತ್ತು ಇಲ್ಲಿ ನಾವು ರೋ ಗಳ ಸಂಖ್ಯೆಯನ್ನು ಎಕೋ ಮಾಡಿದರೆ, ಈಗ ನಾವು ಪರೀಕ್ಷೆಮಾಡಿದಾಗ 1 ಎಂದು ಬರಲೇ ಬೇಕು, ಏಕೆಂದರೆ ನಾವು ಒಂದು ರೋ ಅನ್ನು ಹೊಂದಿದ್ದೇವೆ. |
02.16 | ಈಗ ಇಲ್ಲಿ ನಾನು Insert ಅನ್ನು ಕ್ಲಿಕ್ ಮಾಡಿ, ಇನ್ನೊಂದು ಡಾಟಾ ರೋ ಅನ್ನು ಸೇರಿಸುವೆನು, ಅಂದರೆ ಇನ್ನೊಂದು "username" ಮತ್ತು "password" ಅನ್ನು ಸೇರಿಸುವೆನು. |
02:26 | ಈಗ ನಾನು ಅದನ್ನು ಪ್ರಯತ್ನಿಸುವೆನು. ನಾನು ಇದನ್ನು ಆಮೇಲೆ ಪರೀಕ್ಷಿಸುವೆನು. ಈಗ ನಮ್ಮ 'username' ಇದು "Kyle" ಆಗಿರಲಿ ಮತ್ತು 'password' ಇದು "123" ಎಂದಿರಲಿ. |
02:38 | ಸರಿ ಈಗ ಇದನ್ನು ಪ್ರಯತ್ನಿಸೋಣ. ಸರಿ ನಾವು ಅದನ್ನು ಮಾಡಿದ್ದೇವೆ. ನಾನು ಎಲ್ಲಿದ್ದೇನೆ. ಹಾ! ನಾವು ಇಲ್ಲಿಗೆ ಹೋಗಬೇಕು. |
02:53 | ನಾವು ಇಲ್ಲಿ "Alex" ಮತ್ತು "Kyle" ಎರಡನ್ನೂ ಪಡೆದಿದ್ದೇವೆ. |
02:55 | ಇಲ್ಲಿ ನಾವು "id" ಗಳು ತಂತಾನೆ ಹೆಚ್ಚಳವಾಗಿರುವುದನ್ನು ನೋಡಬಹುದು. |
02:58 | ನೀವು ಇಲ್ಲಿ ನಮ್ಮ ಎರಡೂ ಪಾಸ್ವರ್ಡ್ ಮತ್ತು ಯೂಸರ್ ನೇಮ್ ಗಳಿರುವುದನ್ನು ನೋಡಬಹುದು. |
03:02 | ಈಗ ಇದನ್ನು ರಿಫ್ರೆಶ್ ಮಾಡಿ, ಏನು ಬರುತ್ತದೆಯೆಂದು ಪರೀಕ್ಷಿಸೋಣ. |
03:06 | ಸರಿ. ಇದು ಪರೀಕ್ಷೆಯ ಭಾಗವಾಗಿದೆ. |
03:10 | ಇಲ್ಲಿ ಒಂದು ಎಂದು ಬರಲು ಕಾರಣವೆಂದರೆ, ನಾನು ಇಲ್ಲಿ ಎಲ್ಲ ಯೂಸರ್ ಅನ್ನು ಆಯ್ಕೆಮಾಡಿಕೊಂಡು ನಂತರ ರೋ ಅನ್ನು ಎಣಿಸಿದ್ದರೆ, ಅದು ಹೆಚ್ಚಳವಾಗುತ್ತಿತ್ತು. |
03:18 | ಇಲ್ಲಿಗೆ ಹಿಂದಿರುಗಿ, ರಿಫ್ರೆಶ್ ಮಾಡಿ, ನಾವು 2 ಎಂಬ ವ್ಯಾಲ್ಯುವನ್ನು ಪಡೆಯುತ್ತೇವೆ ಏಕೆಂದರೆ ಇಲ್ಲಿ 2 ರೋ ಗಳಿವೆ. |
03:22 | ಆದರೆ ನಾನು "SELECT where the username equals my username" ಎಂದು ಹೇಳಿದಾಗ, ನಾವು ಕೇವಲ ನನ್ನ username' ಅಸ್ತಿತ್ವದಲ್ಲಿರುವ ಒಂದು ರೋ ಅನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ, ಹಾಗಾಗಿ ಅದು ಒಂದು ರೋ ಆಗಿರುತ್ತದೆ. |
03:34 | ಸಾಮಾನ್ಯವಾಗಿ ವೆಬ್ಸೈಟ್ ನಲ್ಲಿ ನಾವು ನಕಲಿ username ಅನ್ನು ಹೊಂದಿರುವುದಿಲ್ಲ. |
03:40 | ಸರಿ ಈಗ ನಮಗೆ ರೋಗಳು ಎಷ್ಟಿವೆ ಎಂದು ಕಂಡುಹಿಡಿಯುವ ಉದ್ದೇಶ ಅರ್ಥವಾಗಿದೆ. |
03:47 | ಈಗ ಅದರ ಉದ್ದೇಶವನ್ನು ನೋಡೋಣ. if "num_rows is equal to zero" ಎಂದು ಟೈಪ್ ಮಾಡಿ, ಅಂದರೆ ನಾವು, ಕ್ಷಮಿಸಿ ಇದು if "my num_rows doesn’t equal zero" ಎಂದಾಗಬೇಕು ಆಗ ನಾವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು ಅಂದರೆ ನಾವು ಲಾಗಿನ್ ಆಗಬೇಕು. |
04:01 | else, ನಾವು ಎಕೋ ಕ್ಷಮಿಸಿ, else die. ಮತ್ತು "That user doesn’t exist" ಎಂಬ ಮೆಸೇಜ್ ಅನ್ನು ಕೊಡುವೆವು. |
04:16 | ಈಗ ನಾವು ಏನು ಮಾಡುತ್ತಿದ್ದೇವೆಂದರೆ, ನಾವು ಯಾವ ಯೂಸರ್ ನೇಮ್ ಅನ್ನು ಸಲ್ಲಿಸುತ್ತಿದ್ದೇವೆಯೋ ಆ ರೋ ಇದೆಯೆ ಎಂದು ಪರೀಕ್ಷಿಸುತ್ತಿದ್ದೇವೆ. |
04:25 | ಮತ್ತು ಅದು ಸೊನ್ನೆಗೆ ಸಮವಾಗಿಲ್ಲದಿದ್ದರೆ, ಆಗ ನಾವು ಲಾಗಿನ್ ಆಗುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
04:29 | ಇಲ್ಲವಾದಲ್ಲಿ die "That username doesn’t exist" ಇದು ಎಕ್ಸಿಕ್ಯೂಟ್ ಆಗುವುದು. |
04:33 | 1, 2, 3, 4 – ಈ ರೀತಿಯಾಗಿ |
04:38 | ಕ್ಷಮಿಸಿ ಇದು |
04:40 | ಸೊನ್ನೆಗೆ ಸಮವಾಗಿಲ್ಲದಿದ್ದರೆ, ಇದು ಇನ್ಯಾವುದಾದರೂ ವ್ಯಾಲ್ಯುವಿಗೆ ಸಮವಾಗಿರಬೇಕು. |
04:44 | ಮತ್ತು ಇದು ಸೊನ್ನೆಯಲ್ಲದೆ ಬೇರೆ ಯಾವುದಕ್ಕಾದರೂ ಸಮವಾಗಿದ್ದರೆ, ಈ ಕೋಡ್ ಎಕ್ಸಿಕ್ಯೂಟ್ ಆಗುವುದು. |
04:47 | ಇದು 0 ಗೆ ಸಮವಾಗಿದ್ದರೆ, ಯಾವುದೇ ಫಲಿತಾಂಶವನ್ನು ಕೊಡಲು ಸಾಧ್ಯವಿಲ್ಲ ಎಂದರ್ಥ. |
04:52 | ನಾನು ಇದನ್ನು resend ಮಾಡುವೆನು. ಈಗ ಹಿಂದಿರುಗೋಣ. |
04:57 | ನಾನು ಇದನ್ನು "echo num_rows" ಅಳಿಸಿ ಹಾಕುವೆನು. |
05:05 | ಈಗ ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗೋಣ ಮತ್ತು ನಾವು "Alex" ಮತ್ತು "abc" ಗಳೊಂದಿಗೆ ಲಾಗಿನ್ ಆಗೋಣ; ಈಗ ಸದ್ಯಕ್ಕೆ ಪಾಸ್ವರ್ಡ್ ಅನ್ನು ಗಣನೆಗೆ ತೆಗೆದುಕೊಂಡಿಲ್ಲ. |
05:13 | ಇಲ್ಲಿ ಏನೂ ಆಗಿಲ್ಲ, ಏಕೆಂದರೆ ಯಾವುದೇ ಎರರ್ ಗಳಿಲ್ಲ. |
05:15 | ಈಗ ಉದಾಹರಣೆಗೆ ಇಲ್ಲಿ "Billy" ಎಂದೂ , ಮತ್ತು ಇಲ್ಲಿ ಪಾಸ್ವರ್ಡ್ ಅನ್ನು ಟೈಪ್ ಮಾಡಿ, Login ಅನ್ನು ಕ್ಲಿಕ್ ಮಾಡುವೆನು. |
05:21 | "That user doesn’t exist!" ಏಕೆಂದರೆ "Billy" ಗೆ ಸಮವಾದ ಯೂಸರ್ ನೇಮ್ ಅನ್ನು ಹೊಂದಿರುವ ರೋ ಇಲ್ಲ. |
05:26 | ಈಗ ಇದು ಕಾರ್ಯನಿರ್ವಹಿಸುತ್ತಿರುವುದನ್ನು ನಾವು ನೋಡಬಹುದು. |
05:28 | ಈಗ ನಮ್ಮ ಮುಖ್ಯವಾದ ವಿಷಯಕ್ಕೆ ಹೋಗೋಣ. |
05:31 | "Alex" ಮತ್ತು ನನ್ನ ಪಾಸ್ವರ್ಡ್ "abc" ಆಗಿದೆ. |
05:37 | ಈಗ ಲಾಗಿನ್ ಆಗಲು ಕೋಡ್ ಅನ್ನು ಬರೆಯಬೇಕು. |
05:39 | ಲಾಗಿನ್ ಆಗಲು ನಾವು ಪಾಸ್ವರ್ಡ್ ಅನ್ನು ಪರೀಕ್ಷಿಸಬೇಕು. |
05:42 | ಈಗ ಪಾಸ್ವರ್ಡ್ ಅನ್ನು ಪಡೆಯಲು, ನಾನು ಒಂದು ಫಂಕ್ಷನ್ ಅನ್ನು ಬಳಸುವೆನು. |
05:46 | ಕ್ಷಮಿಸಿ, ಅದು ಫಂಕ್ಷನ್ ಅಲ್ಲ, ಲೂಪ್ ಅಂದರೆ ಒಂದು while ಲೂಪ್ ಅನ್ನು ಬಳಸುವೆನು. |
05:52 | ಇಲ್ಲಿ ನಾನೊಂದು ವೇರಿಯೇಬಲ್ ನ ಹೆಸರನ್ನು ಟೈಪ್ ಮಾಡುವೆನು ಮತ್ತು ಅದನ್ನು $row ಎಂದು ಕರೆಯುವೆನು ಮತ್ತು ಅದು "mysql"..... "mysql_ ರೋ ಅನ್ನು ಅರೇ ಆಗಿ ತೆಗೆದುಕೊಳ್ಳಲು" ಅಂದರೆ |
06:11 | "mysql_fetch_assoc" ಎಂದು ಟೈಪ್ ಮಾಡುವೆನು. |
06:22 | ಮತ್ತು ಇದು ನನ್ನ ಕ್ವೈರಿಯಾಗಿರುವುದು. ಹಾಗಾಗಿ ಇಲ್ಲಿ ನಾನು $query ಯನ್ನು ಹೊಂದಿದ್ದೇನೆ. |
06:28 | ಇದರಿಂದ ನಾವು ಪ್ರತಿ ಡಾಟಾ ಕಾಲಮ್ ಅನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದನ್ನು "$row" ಎನ್ನುವ ಅರೇ ಯಲ್ಲಿ ಇಡುವೆವು. |
06:40 | ಈಗ while ಲೂಪ್ ನೊಂದಿಗೆ, ಇಲ್ಲಿ ಬ್ರ್ಯಾಕೆಟ್ ಗಳನ್ನು ಹಾಕೋಣ, ಮತ್ತು ಇಲ್ಲಿ ವೇರಿಯೇಬಲ್ ಗಳನ್ನು ಸೆಟ್ ಮಾಡೋಣ. |
06:45 | "$db username" ಎಂದು ಟೈಪ್ ಮಾಡೋಣ ಮತ್ತು ಇದು ಡಾಟಾಬೇಸ್ ನಿಂದ ಹೊರತೆಗೆದ ಯೂಸರ್ ನೇಮ್ ಆಗಿರುತ್ತದೆ. ಮತ್ತು ಇದು "$row" ರೋದ ಹೆಸರು "username" ಗೆ ಸಮವಾಗಿರುತ್ತದೆ. |
06:55 | ನೀವು ಇಲ್ಲಿ ನೋಡಬಹುದು, ಇದು ರೋ ದ ಹೆಸರಾಗಿದೆ. |
06:59 | ಇದು ಒಂದು ಡಾಟಾ ದ ಅರೇ ಆದರೆ, ಆಗ ಇದರ ಪ್ರತಿಯೊಂದು ಎಲಿಮೆಂಟ್ "id", "username" ಮತ್ತು "password" ಆಗಿರುವುದು. |
07:06 | ನಾವು 0,1,2 ಎಂದು ಬಳಸುತ್ತಿಲ್ಲ. ಆದರೆ ಇದು ಕೆಲಸ ಮಾಡುತ್ತದೆ ಎಂದು ನನಗೆ ಖಚಿತವಾಗಿ ತಿಳಿದಿಲ್ಲ. |
07:10 | ಈಗ ಇದನ್ನು ಸರಳವಾಗಿಡಲು ನಾನು, ನಮ್ಮ ಕಾಲಮ್ ನ ಹೆಸರನ್ನು ನೇರವಾಗಿ ಸೂಚಿಸಿದ್ದೇನೆ. |
07:20 | ಹಾಗಾಗಿ ಡಾಟಾಬೇಸ್ ನ ಯೂಸರ್ ನೇಮ್ "row" ಆಗಿರುವುದು ಮತ್ತು ಇದು ಈ ಫಂಕ್ಷನ್ ಅನ್ನು ನಮ್ಮ ಕ್ವೈರಿಯ ಮೂಲಕ ಬಳಸುತ್ತಿರುವ ಒಂದು ಅರೆಯಾಗಿದೆ. |
07:26 | ಈಗ ನಾವು "$db password" equals "$row" ಮತ್ತು ಇಲ್ಲಿ 'password' ಎಂದು ಟೈಪ್ ಮಾಡೋಣ. |
07:38 | ಹಾಗಾಗಿ ಇದಾದ ಮೇಲೆ ನಾವು ಎಕೋ ಮಾಡಬಹುದು, |
07:43 | ಆದರೆ ಬೇಡ, ನಾವು ನಮ್ಮ 'db username' ಮತ್ತು 'password' ಅನ್ನು ಎಕೋ ಮಾಡುವುದು ಬೇಡ, ಆದರೆ ಎರರ್ ಗಳನ್ನು ಪರೀಕ್ಷಿಸಬೇಕು. |
07:49 | ಅವು ಏನು ಎಂದು ಈಗಾಗಲೇ ನಾವು ತಿಳಿದಿದ್ದೇವೆ. ನಾವು ಅವುಗಳನ್ನು ಡಾಟಾಬೇಸ್ ನಲ್ಲಿ ನೋಡಿದ್ದೇವೆ. |
07:51 | ಈಗ ನಾವು ಒಂದು ಪರೀಕ್ಷೆಯನ್ನು ಮಾಡೋಣ."check to see if they match" ಎಂದು ಕಮೆಂಟ್ ಮಾಡಿ. |
08:00 | ಇದನ್ನು if ಸ್ಟೇಟ್ಮೆಂಟ್ ಅನ್ನು ಬಳಸಿ ಮಾಡುವುದು ಸುಲಭವಾಗಿದೆ. |
08:04 | if $username equals $db username AND $password is equal to $db password ಎಂದು ಟೈಪ್ ಮಾಡಿ ಮತ್ತು ಇದು ಟ್ರ್ಯೂ ಆಗಿದ್ದರೆ ನಾವು ಇದು ಸರಿಯಾಗಿದೆ ಎಂದು ಹೇಳುವೆವು. |
08:19 | ಇಲ್ಲವಾದಲ್ಲಿ ಇದು ತಪ್ಪು ಎಂದು ಹೇಳುವೆವು. |
08:22 | ನಾನು ಈ ಬ್ರ್ಯಾಕೆಟ್ ಗಳನ್ನು ತೆಗೆದು ಹಾಕುವೆನು ಏಕೆಂದರೆ ಇಲ್ಲಿ ಕೇವಲ ಒಂದೇ ಸಾಲು ಇದೆ. echo "Incorrect password!" ಎಂದು ಟೈಪ್ ಮಾಡಿ. ಇದನ್ನು ಹೀಗೆ ಬಿಡಿ. |
08:34 | ಮತ್ತು ಇಲ್ಲಿ echo "You’re in!" ಎಂದು ಟೈಪ್ ಮಾಡಿ. |
08:41 | ಸರಿ ನಾನು ವಿಡಿಯೋದ ಈ ಭಾಗವನ್ನು ಮುಗಿಸುವ ಮೊದಲು ಇದನ್ನು ಒಮ್ಮೆ ಪರೀಕ್ಷಿಸೋಣ. |
08:46 | ಮತ್ತು ಮೊದಲಿಗೆ ನಾನು ಇಲ್ಲಿ "Alex" ಎಂದು ಇಡುವೆನು ಮತ್ತು ತಪ್ಪಾದ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. . "Incorrect password!" ಎಂದು ಪಡೆದಿದ್ದೇವೆ. |
08:51 | ಈಗ ನಾನು ಪಾಸ್ವರ್ಡ್ ಅನ್ನು "abc" ಎಂದೇ ಹಾಕುವೆನು ಮತ್ತು ನಾವು "You’re in!" ಎಂದು ಪಡೆದಿದ್ದೇವೆ. |
08:55 | ನಾವು "username" ಅನ್ನು ಪರೀಕ್ಷಿಸಿದ್ದೇವೆ ಮತ್ತು ಅದು ಅಸ್ತಿತ್ವದಲ್ಲಿದೆ. |
08:58 | ನಾವು ನಮ್ಮ ಫೀಲ್ಡ್ ಗಳು ಅಸ್ತಿತ್ವದಲ್ಲಿದೆಯೇ ಎಂದು ಪರೀಕ್ಷಿಸಿದ್ದೇವೆ ಹಾಗಾಗಿ ದಯವಿಟ್ಟು "username" ಮತ್ತು "password" ಅನ್ನು ನಮೂದಿಸಿ. |
09:04 | ನಾವು ಸರಿಯಾದ "username" ಅನ್ನೂ ಮತ್ತು ತಪ್ಪಾದ "password" ಅನ್ನೂ ನಮೂದಿಸಿದರೆ,– "Incorrect password" ಎಂಬ ಎರರ್ ಮೆಸೇಜ್ ಅನ್ನು ಪಡೆಯುತ್ತೇವೆ. |
09:11 | ನಾವು ಸರಿಯಾದ ಪಾಸ್ವರ್ಡ್ ಅನ್ನು ನಮೂದಿಸಿದರೆ, ನಾವು "You’re in" ಎಂಬ ಮೆಸೇಜ್ ಅನ್ನು ಪಡೆಯುತ್ತೇವೆ. |
09:13 | ನಾವು ಇಲ್ಲಿ ಇಲ್ಲದ "username" ಅನ್ನು ನಮೂದಿಸಿದರೆ, ನಾವು "user doesn’t exist" ಎಂಬ ಎರರ್ ಮೆಸೇಜ್ ಅನ್ನು ಪಡೆಯುವೆವು. |
09:24 | ಮುಂದಿನ ಭಾಗದಲ್ಲಿ ಭೇಟಿಯಾಗೋಣ ಮತ್ತು ನಾನು sessions ಮತ್ತು ಲಾಗೌಟ್ ಪೇಜ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು. |
09:32 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |