Difference between revisions of "PHP-and-MySQL/C3/MySQL-Part-3/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:00 |ನಮಸ್ತೆ, ಪುನಃ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು...") |
Sandhya.np14 (Talk | contribs) |
||
(2 intermediate revisions by the same user not shown) | |||
Line 13: | Line 13: | ||
|- | |- | ||
|00:16 | |00:16 | ||
− | | ನಾನು ಇದನ್ನು ಇನ್ನೊಮ್ಮೆ ಮಾಡುತ್ತಿರುವೆನು ಏಕೆಂದರೆ ಮೊದಲ ಬಾರಿಗೆ ನಾನು ಮಾಡಿದ್ದು ಕಾರ್ಯನಿರ್ವಹಿಸುತ್ತಿಲ್ಲ. |- | + | | ನಾನು ಇದನ್ನು ಇನ್ನೊಮ್ಮೆ ಮಾಡುತ್ತಿರುವೆನು ಏಕೆಂದರೆ ಮೊದಲ ಬಾರಿಗೆ ನಾನು ಮಾಡಿದ್ದು ಕಾರ್ಯನಿರ್ವಹಿಸುತ್ತಿಲ್ಲ. |
+ | |- | ||
|00:22 | |00:22 | ||
| ಮೊದಲಿಗೆ ನಾನು ಇಲ್ಲಿನ ಡಾಟಾ ವನ್ನು ಅಳಿಸಿ ಹಾಕುವೆನು. | | ಮೊದಲಿಗೆ ನಾನು ಇಲ್ಲಿನ ಡಾಟಾ ವನ್ನು ಅಳಿಸಿ ಹಾಕುವೆನು. | ||
Line 111: | Line 112: | ||
|- | |- | ||
|03:16 | |03:16 | ||
+ | |ಇದು ಇದಕ್ಕೆ ಸಮವಾಗಿರುತ್ತದೆ. ಮತ್ತು ಇದು ಪ್ರಸ್ತುತ ದಿನಾಂಕವಾಗಿರುತ್ತದೆ. | ||
|- | |- | ||
|03:20 | |03:20 | ||
Line 251: | Line 253: | ||
|- | |- | ||
|08:17 | |08:17 | ||
− | |ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ | + | |ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |
Latest revision as of 15:50, 13 April 2020
Time | Narration |
00:00 | ನಮಸ್ತೆ, ಪುನಃ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ಡಾಟಾಬೇಸ್ ನೊಳಗೆ ಕೆಲವು ಡಾಟಾವನ್ನು ಬರೆಯುವೆವು. |
00:07 | ಇದನ್ನು ಮಾಡಲು ನಾವು, "mysql query" ಫಂಕ್ಷನ್ ಅನ್ನು ಬಳಸುವೆವು. |
00:12 | ಇಲ್ಲಿ ನೀವು ನಮ್ಮ ರೆಕಾರ್ಡ್ ಗಳಿರುವುದನ್ನು ನೋಡಬಹುದು. |
00:16 | ನಾನು ಇದನ್ನು ಇನ್ನೊಮ್ಮೆ ಮಾಡುತ್ತಿರುವೆನು ಏಕೆಂದರೆ ಮೊದಲ ಬಾರಿಗೆ ನಾನು ಮಾಡಿದ್ದು ಕಾರ್ಯನಿರ್ವಹಿಸುತ್ತಿಲ್ಲ. |
00:22 | ಮೊದಲಿಗೆ ನಾನು ಇಲ್ಲಿನ ಡಾಟಾ ವನ್ನು ಅಳಿಸಿ ಹಾಕುವೆನು. |
00:29 | ಇಲ್ಲಿ ನಾವು ಒಂದು ಖಾಲಿ ಟೇಬಲ್ ಅನ್ನು ಹೊಂದಿದ್ದೇವೆ. ನಮ್ಮ ಟೇಬಲ್ ನಲ್ಲಿ ಇಲ್ಲಿಯ ತನಕ ಯಾವುದೇ ಡಾಟಾ ಇಲ್ಲ. |
00:37 | ನಾವು ಇಲ್ಲಿ ಏನೂ ಇಲ್ಲದಿರುವುದನ್ನು ನೋಡಬಹುದು. |
00:40 | ಇಲ್ಲಿ ಕೇವಲ ನಮ್ಮ ಫೀಲ್ಡ್ ನ ಹೆಸರುಗಳಿವೆ. |
00:43 | ಇದನ್ನು ಆರಂಭಿಸಲು, ಇಲ್ಲಿ |
00:47 | "write some data" ಎಂಬ ಕಮೆಂಟ್ ಅನ್ನು ಹಾಕೋಣ. ಈಗ ನಾವು ಡಾಟಾವನ್ನು ಬರೆಯುವ ಒಂದು query (ಕ್ವೈರಿ) ಯನ್ನು ಸೆಟ್ ಮಾಡೋಣ. |
00:52 | ಅದಕ್ಕಾಗಿ, "$write" = "mysql-query()" ಎಂದು ಟೈಪ್ ಮಾಡೋಣ. |
00:57 | ಈ ಫಂಕ್ಷನ್ ಕೇವಲ ಒಂದು ಪ್ಯಾರಾಮೀಟರ್ ಅನ್ನು ತೆಗೆದುಕೊಳ್ಳುತ್ತದೆ, ಅಂದರೆ ಅದು ನಮ್ಮ sql query ಆಗಿರುತ್ತದೆ. |
01:02 | ಡಾಟಾ ವನ್ನು ಇನ್ಸರ್ಟ್ ಮಾಡಲು, "INSERT" ಎಂದು ಟೈಪ್ ಮಾಡಿ. |
01:06 | ಅಂದರೆ "INSERT INTO" ಎಂದು ಟೈಪ್ ಮಾಡಿ. |
01:09 | ಇದನ್ನು ಕ್ಯಾಪಿಟಲ್(ದೊಡ್ಡಕ್ಷರ) ನಲ್ಲಿ ಬರೆದಿದ್ದೇನೆ ಏಕೆಂದರೆ ಇದು sql code ಅನ್ನು ಸೂಚಿಸುತ್ತದೆ. |
01:14 | ಏನನ್ನಾದರೂ ಕ್ಯಾಪಿಟಲ್ ನಲ್ಲಿ ಬರೆದಿದ್ದರೆ ಅದು sql code ಎಂದು ಅರ್ಥ. |
01:19 | ನಾನು ಸಣ್ಣ ಅಕ್ಷರದಲ್ಲಿ ಬರೆದಿದ್ದರೆ, ಅದು ಟೇಬಲ್ ನ ಹೆಸರು, ಡಾಟಾಬೇಸ್ ನ ಹೆಸರು ಅಥವಾ ನಾನು ಡಾಟಾಬೇಸ್ ನಲ್ಲಿ ಬರೆಯುವ ಡಾಟಾ ಆಗಿರುತ್ತದೆ. |
01:28 | ಹಾಗಾಗಿ ನಾನು, "INSERT INTO people" ಎಂದು ಟೈಪ್ ಮಾಡುವೆನು ಏಕೆಂದರೆ ಇದು ಟೇಬಲ್ ನ ಹೆಸರಾಗಿದೆ. |
01:33 | "INSERT INTO people" ಆದ ನಂತರ "VALUES" ಎಂದು ಟೈಪ್ ಮಾಡಿ ನಂತರ ಬ್ರ್ಯಾಕೆಟ್ ನಲ್ಲಿ ಪ್ರತಿಯೊಂದು ವ್ಯಾಲ್ಯೂ ಗೂ ಜಾಗವನ್ನು ಇಟ್ಟುಕೊಳ್ಳಬೇಕು. |
01:42 | ನಾವು 1,2,3,4,5 ಹೊಂದಿದ್ದೇವೆ. |
01:46 | ಇಲ್ಲಿ 5 ಫೀಲ್ಡ್ ಗಳಿವೆ, ಹಾಗಾಗಿ ನಾವು ಐದು ಚೂರು ಡಾಟಾಬೇಸ್ ಅನ್ನು ಇಲ್ಲಿ ಬರೆಯಬೇಕು. |
01:53 | ನಮಗೆ "id", "firstname", "lastname" ಹೀಗೆಯೇ "gender" ವರೆಗೂ ಬೇಕು. |
01:58 | ಇವುಗಳನ್ನು ಸಿಂಗಲ್ ಕೋಟ್ ಅನ್ನು ಬಳಸಿ, ಪ್ರತಿಯೊಂದನ್ನು ಕೊಮಾ ದಿಂದ ಬೇರ್ಪಡಿಸಿ ರಚಿಸಲಾಗಿದೆ. |
02:07 | ನಾವು ಡಬಲ್ ಕೋಟ್ ಅನ್ನು ಬಳಸಿಲ್ಲ ಏಕೆಂದರೆ ಇದು ಕ್ವೈರಿಯ ಆರಂಭ ಮತ್ತು ಕೊನೆಯನ್ನು ಸೂಚಿಸುತ್ತದೆ. |
02:15 | ಇಲ್ಲಿ ನಾವು id ಯನ್ನು ಸೇರಿಸುವುದು ಬೇಕಿಲ್ಲ. |
02:18 | ಮುಂದಿನದು "firstname" ಆಗಿದೆ - ಅದನ್ನು "Alex" ಎಂದು ಟೈಪ್ ಮಾಡೋಣ. |
02:22 | "lastname" ಅನ್ನು ನಾನು "Garrett" ಎಂದು ನಮೂದಿಸುವೆನು. |
02:25 | "date of birth" ಗೆ ,ಒಂದು "date" ಫಂಕ್ಷನ್ ಅನ್ನು ರಚಿಸಿ, ಅದು "$date" ವೇರಿಯೇಬಲ್ ಗೆ ಸಮ ಎಂದು ಟೈಪ್ ಮಾಡಿರಿ |
02:31 | ನಾನು ಇದನ್ನು ಈ ನಿರ್ದಿಷ್ಟ ಮಾದರಿಯಲ್ಲಿ ಇಡುವೆನು. |
02:35 | ನಾವು ಇಲ್ಲಿ ನಮ್ಮ ಡಾಟಾಬೇಸ್ ನಲ್ಲಿ ವ್ಯಾಲ್ಯುವನ್ನು ಸೇರಿಸಲು ಹೋದಾಗ, ಕೆಳಕ್ಕೆ ಸ್ಕ್ರೋಲ್ ಮಾಡಿದರೆ, ಕ್ಯಾಲೆಂಡರ್ ಫಂಕ್ಷನ್ ದಿನಾಂಕವನ್ನು ಹೊಂದಿರುವುದನ್ನು ಇಲ್ಲಿ ನೋಡಬಹುದು. |
02:44 | ಹಾಗಾಗಿ 23ರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಈ ಫೀಲ್ಡ್ ಮಾದರಿಯನ್ನು ತೆಗೆದುಕೊಳ್ಳುವುದನ್ನು ನಾವು ನೋಡಬಹುದು. |
02:50 | ಇಲ್ಲಿ ಇಸ್ವಿಯು ಪೂರ್ಣ ಮಾದರಿಯನ್ನು ಹೊಂದಿದೆ. |
02:52 | ನಂತರ ತಿಂಗಳು, ತದನಂತರ ದಿನಾಂಕವಾಗಿದೆ. |
02:55 | ಹಾಗಾಗಿ, 2009 02 23 ಅಂದರೆ 23ನೇ ತಾರೀಖು, 2 ನೇ ತಿಂಗಳು, 2009 ನೇ ಇಸ್ವಿ ಎಂದರ್ಥ. |
03:02 | ಹಾಗಾಗಿ, ನಾವು ನಮ್ಮ date ಫಂಕ್ಷನ್ ಅನ್ನು ಕ್ಯಾಪಿಟಲ್ 'Y', 'm' ಮತ್ತು ನಂತರ 'd' ಮತ್ತು ಪ್ರತಿಯೊಂದರ ಮಧ್ಯದಲ್ಲಿ ಹೈಫನ್ - ಈ ಮಾದರಿಯಲ್ಲಿ ಬರೆಯುವುದರ ಮೂಲಕ ನಮಗೆ ಬೇಕಾದ ಮಾದರಿಯನ್ನು ತಯಾರಿಸಿಕೊಳ್ಳಬಹುದು. |
03:13 | ಹಾಗಾಗಿ ಅದು ಆ ಮಾದರಿಯಲ್ಲಿ ಸಿದ್ಧವಾಗುತ್ತದೆ. |
03:16 | ಇದು ಇದಕ್ಕೆ ಸಮವಾಗಿರುತ್ತದೆ. ಮತ್ತು ಇದು ಪ್ರಸ್ತುತ ದಿನಾಂಕವಾಗಿರುತ್ತದೆ. |
03:20 | $date ಅನ್ನು ಬಳಸಿ ಮತ್ತು ನಮ್ಮ ಡೇಟ್ ಮಾದರಿಯನ್ನು ಭಾವಿಸಿಕೊಂಡು, ಇಲ್ಲಿ ಈ ಟೇಬಲ್ ನಲ್ಲಿ ಇನ್ಸರ್ಟ್ ಮಾಡಬಹುದು. |
03:28 | ಕೊನೆಯದು gender ಆಗಿದೆ, ಮತ್ತು ನಾನು ಪುರುಷ ಆಗಿರುವುದರಿಂದ ನಾನು ಇಲ್ಲಿ "M" ಎಂದು ನಮೂದಿಸುವೆನು. |
03:34 | ಅದು ಕಾರ್ಯ ನಿರ್ವಹಿಸುತ್ತದೆ ಎಂದು ಭಾವಿಸಿ, ನಾವು ಇದನ್ನು run ಮಾಡಬಹುದು. |
03:37 | ಆದರೆ ಅದಕ್ಕು ಮೊದಲು ನಾವು ಕೊನೆಯಲ್ಲಿ or die "mysql_error" ಅನ್ನು ಟೈಪ್ ಮಾಡಿಬಿಡೋಣ.. |
03:44 | ಈಗ ನಾನು ಇದನ್ನು ಬಿಡುವೆನು, ಆದರೆ ನೀವು ಬೇಕಾದರೆ ಮಾಡಬಹುದು. |
03:50 | ಈಗ ಆ ಪೇಜ್ ಅನ್ನು ರಿಫ್ರೆಶ್ ಮಾಡೋಣ. |
03:53 | ಈಗ ನಾವು ನೋಡುತ್ತಿರುವುದು ಹಿಂದಿನ ಟ್ಯುಟೋರಿಯಲ್ ದಾಗಿದೆ. |
03:57 | ಈಗ ಇದಕ್ಕೆ ಕಮೆಂಟ್ ಸೇರಿಸೋಣ. |
03:59 | ಈಗ ಇದನ್ನು ನಿರ್ಲಕ್ಷಿಸೋಣ. |
04:01 | ಇದು ಈ ಟ್ಯುಟೋರಿಯಲ್ ನ ಈ ಭಾಗವನ್ನು ನಿರ್ಲಕ್ಷಿಸುತ್ತದೆ. |
04:08 | ಸರಿ, ಈಗ ನಾನು ಪ್ರಸ್ತುತವಾಗಿ ತೋರಿಸುತ್ತಿರುವ ಕೋಡ್ ಗೆ ಬಂದು ರಿಫ್ರೆಶ್ ಮಾಡೋಣ. |
04:14 | ನಾನು ಇದನ್ನು ಎರಡು ಬಾರಿ ರಿಫ್ರೆಶ್ ಮಾಡಿರುವೆನು, ಹಾಗಾಗಿ ಎರಡು ರೆಕಾರ್ಡ್ ಗಳನ್ನು ತೋರಿಸಲಾಗಿದೆ. |
04:24 | ಆದರೆ ಹಿಂದಕ್ಕೆ ಹೋಗಿ ಬ್ರೌಸ್ ಮಾಡಿ ಮತ್ತು ಕೆಳಕ್ಕೆ ಸ್ಕ್ರೋಲ್ ಮಾಡಿ, ಇದರಲ್ಲಿ ಒಂದನ್ನು ಅಳಿಸಿಬಿಡೋಣ. ಹಾಗಾಗಿ ಈಗ ನಾವು ನಿರ್ದಿಷ್ಟಪಡಿಸಿದ ಒಂದು ರೆಕಾರ್ಡ್ ಮಾತ್ರ ನಮ್ಮ ಡಾಟಾಬೇಸ್ ನಲ್ಲಿ ಸೇರಿಸಲ್ಪಟ್ಟಿದೆ. |
04:35 | ಈಗಾಗಲೇ ನಾನು ಇವತ್ತಿನ ದಿನಾಂಕವನ್ನು ಇಲ್ಲಿ ನನ್ನ ಜನ್ಮ ದಿನಾಂಕವನ್ನಾಗಿ ಸೆಟ್ ಮಾಡಿದ್ದೇನೆ, ಆದರೆ ಅದು ನನಗೆ ಬೇಕಿಲ್ಲ. |
04:43 | ನನ್ನ ಜನ್ಮ ದಿನಾಂಕ ಇವತ್ತಿನ ದಿನಾಂಕವಲ್ಲ ಏಕೆಂದರೆ ನಾನು ಇವತ್ತು ಹುಟ್ಟಿಲ್ಲ. |
04:48 | ನನ್ನ firstname ಸರಿಯಾಗಿದೆ. ನನ್ನ lastname ಕೂಡ ಸರಿಯಾಗಿದೆ. ನನ್ನ gender ಕೂಡ ಸರಿಯಾಗಿದೆ. |
04:53 | ನೀವು ನನ್ನ id ಯು ಈ ಸಮಯದಲ್ಲಿ 6 ಎಂದು ಇರುವುದನ್ನು ನೋಡಬಹುದು. ಮುಂದಿನ ಸಲ ನಾವು ರೆಕಾರ್ಡ್ ಅನ್ನು ಇನ್ಸರ್ಟ್ ಮಾಡಿದಾಗ ಅದು 7 ಆಗುವುದು ಮತ್ತು ಇನ್ನೊಮ್ಮೆ ಮಾಡಿದಾಗ ಅದು 8 ಆಗುವುದು. |
05:02 | ನೀವು ಇದನ್ನು ಈಗ ತಿಳಿದುಕೊಳ್ಳಬೇಕು. ನಂತರ ನಾನು ನನ್ನ ಜನ್ಮದಿನಾಂಕವನ್ನು ಹೇಗೆ ಬದಲಿಸುವುದು ಎಂದು ತೋರಿಸುವೆನು, ಏಕೆಂದರೆ ಅಲ್ಲಿ ನಾನು ಒಂದು ತಪ್ಪನ್ನು ಮಾಡಿರುವೆನು. |
05:09 | ಹಾಗಾಗಿ ನಾನು ಈ ಎರಡು ಸಾಲುಗಳನ್ನು comment ಮಾಡುವೆನು, ಏಕೆಂದರೆ ನಾನು ಇವುಗಳನ್ನು ಪುನಃ ರನ್ ಮಾಡಲು ಬಯಸುವುದಿಲ್ಲ. |
05:15 | ನಾನು ಒಂದು ಹೊಸ ವೇರಿಯೇಬಲ್ ಅನ್ನು ರಚಿಸುವೆನು. ನಾನು ಇದನ್ನು "update data" ಎಂದು ಕಮೆಂಟ್ ಮಾಡುವೆನು. |
05:20 | ಪ್ರಸ್ತುತ ವೇರಿಯೇಬಲ್ "$update" ಮತ್ತು ಅದು "mysql_query()" ಫಂಕ್ಷನ್ ಎಂದು ಆಗಿರಲಿ. |
05:26 | ಮತ್ತು ಪ್ಯಾರಾಮೀಟರ್ ನೊಳಗೆ mysql query code ಅನ್ನೇ ಕಾಲ್ ಮಾಡುತ್ತಿರುವೆವು. |
05:32 | ಇಲ್ಲಿ ನೀವು "UPDATE" ಎಂದೂ, ಮತ್ತು ನಿಮ್ಮ ಟೇಬಲ್ ನ ಹೆಸರಾದ "people" ಎಂದೂ ಟೈಪ್ ಮಾಡಿ. |
05:38 | ನಂತರ ನಾವು "SET" ಎಂದು ಟೈಪ್ ಮಾಡಿ, ನಂತರ ನಮಗೆ ಬದಲಿಸ ಬೇಕಾದ ನಿರ್ದಿಷ್ಟ ಫೀಲ್ಡ್ ಅನ್ನು ಆರಿಸಿಕೊಳ್ಳಬೇಕು. |
05:43 | ಇದು "d o b" ಫೀಲ್ಡ್ ಆಗಿದೆ ಮತ್ತು ಅದು ನನ್ನ ಜನ್ಮ ದಿನಾಂಕ ಅಂದರೆ 1989 ನಾನು ಹುಟ್ಟಿದ ವರ್ಷ, ಮತ್ತು ತಿಂಗಳು ನವೆಂಬರ್ ಮತ್ತು ನಾನು 16 ನೇ ತಾರೀಕಿನಂದು ಹುಟ್ಟಿದ್ದೇನೆ. |
05:57 | ಈ ಕಮಾಂಡ್ ಅನ್ನು ರನ್ ಮಾಡುವುದರಿಂದ ನಾವು ಈ ಟೇಬಲ್ ನಲ್ಲಿ ಎಲ್ಲರ ಜನ್ಮದಿನಾಂಕವನ್ನು ಅಪ್ಡೇಟ್ ಮಾಡುತ್ತಿದ್ದೇವೆ. |
06:05 | ಏಕೆಂದರೆ ನಾವು ಇಲ್ಲಿ ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂದು ಸೂಚಿಸಿಲ್ಲ. |
06:10 | ಆದರೆ ನಾವು ಏನು ಮಾಡಬಹುದೆಂದರೆ, ಇದಾದ ನಂತರ "WHERE id=6" ಎಂದು ಟೈಪ್ ಮಾಡಬೇಕು ಏಕೆಂದರೆ ನನ್ನ ಅನನ್ಯವಾದ ಐ.ಡಿ. 6 ಆಗಿದೆ. |
06:18 | ಈಗ ಇಲ್ಲಿ ಒಮ್ಮೆ ನೋಡಬೇಕು. |
06:23 | ಇಲ್ಲವಾದಲ್ಲಿ ಇದು ಎಲ್ಲರ ರೆಕಾರ್ಡ್ ಅನ್ನೂ ಅಪ್ಡೇಟ್ ಮಾಡುವುದು. |
06:26 | ನೆನಪಿಡಿ, id ಯು ಅನನ್ಯವಾದುದು. ನನ್ನ id ಯನ್ನು ಅಪ್ಡೇಟ್ ಮಾಡುವುದು ಉತ್ತಮವಾಗಿದೆ. |
06:32 | ನಾನು ಇದರ ಬದಲು "WHERE firstname equals 'Alex' " ಎಂದೂ ಹೇಳಬಹುದು. ಆದರೆ ಇದು firstname "Alex" ಎಂದಿರುವ ಎಲ್ಲ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡುವುದು. |
06:41 | ಅಥವಾ "AND lastname equals Garrett" ಎಂದೂ ಹೇಳಬಹುದು. |
06:46 | ಆದರೆ ನಮ್ಮ ಡಾಟಾಬೇಸ್ ನಲ್ಲಿ ಅದೇ ಫಸ್ಟ್ ನೇಮ್ ಮತ್ತು ಲಾಸ್ಟ್ ನೇಮ್ ಅನ್ನು ಇಬ್ಬರು ಹೊಂದಿದ್ದರೆ, ನಾವು ಮೊದಲಿನಂತೆಯೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. |
06:54 | ಹಾಗಾಗಿ "unique" ಫೀಲ್ಡ್ ಅನ್ನು ಬಳಸುವುದು ಉತ್ತಮ ಮತ್ತು ಈ ಉದಾಹರಣೆಯಲ್ಲಿ ಅದು "unique id" ಯಾಗಿದ್ದು ನನ್ನ ರೆಕಾರ್ಡ್ ನಲ್ಲಿ ಅದರ ವ್ಯಾಲ್ಯು 6 ಆಗಿದೆ. |
07:00 | ಈಗ ನನ್ನ ಜನ್ಮ ದಿನಾಂಕವು ಇಂದಿನ ದಿನಾಂಕ ಅಂದರೆ 2009 ಎಂದೇ ಸೆಟ್ ಆಗಿದೆ. |
07:06 | ಈ ಪೇಜ್ ಅನ್ನು ರಿಫ್ರೆಶ್ ಮಾಡುವುದರಿಂದ ಏನೂ ಆಗಿಲ್ಲ, ಏಕೆಂದರೆ ನಾವು ಕೇವಲ ಕಮಾಂಡ್ ಅನ್ನು ರನ್ ಮಾಡುತ್ತಿದ್ದೇವೆ. |
07:11 | ಈಗ ನಾನು ರಿಫ್ರೆಶ್ ಮಾಡಲು Browse ಅನ್ನು ಕ್ಲಿಕ್ ಮಾಡಿ, ಕೆಳಕ್ಕೆ ಸ್ಕ್ರೋಲ್ ಮಾಡಿದರೆ, ನಾವು ಸೂಚಿಸಿದ ರೆಕಾರ್ಡ್ ಮಾತ್ರ ಬದಲಾಗಿದೆ, ಮತ್ತೆ ಉಳಿದ ಎಲ್ಲವೂ ಮೊದಲಿನ ಹಾಗೆಯೇ ಇದೆ. |
07:21 | ಹಾಗಾಗಿ ನೀವು ನಿಮ್ಮ ಡಾಟಾಬೇಸ್ ನಲ್ಲಿ ಡಾಟಾ ವನ್ನು ಅಪ್ಡೇಟ್ ಮಾಡುವುದಾದರೆ ಅಥವಾ ಅದೇ ರೀತಿಯಾಗಿ ಏನನ್ನಾದರೂ ಮಾಡುವುದಾದರೆ ನೀವು ಯಾವ ಡಾಟಾವನ್ನು ಅಪ್ಡೇಟ್ ಮಾಡಬೇಕು ಎಂದು ನೀವು ಸೂಚಿಸಬಹುದು. |
07:29 | ನಾನು ಇಲ್ಲಿ "dob" ಯನ್ನು ಬಳಸಿದ್ದೇನೆ ಮತ್ತು ಇದು ನನ್ನ ಜನ್ಮ ದಿನಾಂಕಕ್ಕೆ ಸಮವಾಗಿತ್ತು ಮತ್ತು ಅದು ಅಗತ್ಯವಾಗಿತ್ತು. |
07:34 | ನಾನು ನನ್ನ lastname ಅನ್ನು ಅಪ್ಡೇಟ್ ಮಾಡಬಹುದು. |
07:36 | ನೀವು ಇದನ್ನು ಯಾವ ರೆಕಾರ್ಡ್ ಗೆ ಅಪ್ಡೇಟ್ ಮಾಡಬೇಕು ಎಂಬುದನ್ನು ಸೂಚಿಸಬಹುದು. |
07:40 | ನಾನು record ಅಂದರೆ ಈ ಉದ್ದನೆಯ ಸಾಲನ್ನು ಸೂಚಿಸಿರುವೆನು. |
07:46 | ಇವುಗಳನ್ನು records ಎಂದು ಕರೆಯುವೆವು. ಮತ್ತು "WHERE" id = 6 ಆಗಿದೆ. ಮತ್ತು ಅದು ನಿರ್ದಿಷ್ಟವಾದ ರೆಕಾರ್ಡ್ ಅನ್ನು ಅಪ್ಡೇಟ್ ಮಾಡುವುದು. |
07:56 | ಈಗ ನಾವು ವ್ಯಾಲ್ಯುಗಳನ್ನು ಹೇಗೆ ಸೇರಿಸುವುದು, ತಪ್ಪಾಗಿದ್ದಲ್ಲಿ ನಾನು ಮಾಡಿದಂತೆ, ಡಾಟಾವನ್ನು ಹೇಗೆ ಅಪ್ಡೇಟ್ ಮಾಡುವುದು ಅಥವಾ ನೀವು ಡಾಟಾಬೇಸ್ ಅನ್ನು ಮಾಡುವಾಗ ಸಾಮಾನ್ಯವಾಗಿ ಯಾವಾಗಲೂ ಆಗುವಂತಹ ಡಾಟಾವನ್ನು ಅಪ್ಡೇಟ್ ಮಾಡುವುದನ್ನು ಕಲಿತಿರುವಿರಿ. |
08:10 | ಮುಂದಿನ ಭಾಗದಲ್ಲಿ ಡಾಟಾ ಬೇಸ್ ನಿಂದ ಡಾಟಾ ವನ್ನು ರೀಡ್ ಮಾಡುವುದು ಹೇಗೆ ಮತ್ತು ಬಳಕೆದಾರರಿಗೆ ತೋರಿಸುವುದು ಹೇಗೆ ಎಂದು ನೋಡೋಣ. |
08:17 | ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |