Difference between revisions of "Moodle-Learning-Management-System/C2/User-Roles-in-Moodle/Kannada"
Sandhya.np14 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 129: | Line 129: | ||
|- | |- | ||
| 04:29 | | 04:29 | ||
− | | ಮೂಡಲ್ ನಲ್ಲಿ, ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ | + | | ಮೂಡಲ್ ನಲ್ಲಿ, ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ದಾಖಲಾಗಿರಲೇಬೇಕು. |
|- | |- | ||
|04:35 | |04:35 | ||
Line 191: | Line 191: | ||
|- | |- | ||
| 06:39 | | 06:39 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು: |
− | ಯೂಸರ್ ಗೆ '''admin role''' ಅನ್ನು ಅಸೈನ್ ಮಾಡುವುದು, | + | |
− | '''course''' ಗೆ '''teacher''' ಅನ್ನು ಅಸೈನ್ ಮಾಡುವುದು ಮತ್ತು | + | ಯೂಸರ್ ಗೆ '''admin role''' ಅನ್ನು ಅಸೈನ್ ಮಾಡುವುದು, |
+ | |||
+ | '''course''' ಗೆ '''teacher''' ಅನ್ನು ಅಸೈನ್ ಮಾಡುವುದು ಮತ್ತು | ||
+ | |||
'''course''' ನಲ್ಲಿ '''student''' ಅನ್ನು ದಾಖಲು ಮಾಡುವುದು ಹೇಗೆ ಎಂದು ಕಲಿತಿದ್ದೇವೆ. | '''course''' ನಲ್ಲಿ '''student''' ಅನ್ನು ದಾಖಲು ಮಾಡುವುದು ಹೇಗೆ ಎಂದು ಕಲಿತಿದ್ದೇವೆ. | ||
|- | |- |
Latest revision as of 09:44, 21 January 2020
Time | Narration |
00:01 | User Roles in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು, |
00:13 | course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ದಾಖಲು ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:28 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. |
00:42 | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:54 | ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು. |
01:01 | ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಹಿಂದಿನ Moodle ಟ್ಯುಟೋರಿಯಲ್ ಗಳನ್ನು ನೋಡಿ. |
01:08 | ಬ್ರೌಸರ್ ಗೆ ಬದಲಾಯಿಸಿ. ನಿಮ್ಮ “ಅಡ್ಮಿನ್ ಯೂಸರ್ ನೇಮ್” ಮತ್ತು ಪಾಸ್ವರ್ಡ್ ಗಳನ್ನು ಬಳಸಿ moodle ಸೈಟ್ ನಲ್ಲಿ ಲಾಗ್-ಇನ್ ಮಾಡಿ. |
01:16 | ಈಗ ನಾವು admin dashboard (ಅಡ್ಮಿನ್ ಡ್ಯಾಶ್ ಬೋರ್ಡ್) ನಲ್ಲಿದ್ದೇವೆ. |
01:19 | ಈಗ ನಾವು Course and Category Management ಪೇಜ್ ಗೆ ಹೋಗೋಣ. |
01:24 | ನಿಮ್ಮ “ಮೂಡಲ್ ಇಂಟರ್ಫೇಸ್” ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ, ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ. ಈ ಕೋರ್ಸ್ ಗಳನ್ನು ರಚಿಸಿಕೊಂಡು ನಂತರ ಮುಂದುವರೆಸಿ. |
01:34 | ಈಗ ನಾವು ರಚಿಸಿದ ಎಲ್ಲಾ ಯೂಸರ್ ಗಳನ್ನು ನೋಡೋಣ. |
01:38 | Site Administration ನ ಮೇಲೆ ಕ್ಲಿಕ್ ಮಾಡಿ. |
01:41 | ನಂತರ Users ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
01:44 | Accounts ವಿಭಾಗದ ಅಡಿಯಲ್ಲಿ, Browse list of users ಅನ್ನು ಕ್ಲಿಕ್ ಮಾಡಿ. |
01:50 | ಈಗ ನಾವು ನಾಲ್ಕು ಯೂಸರ್ ಗಳನ್ನು ಹೊಂದಿದ್ದೇವೆ. |
01:53 | ಈಗ ಯೂಸರ್ Priya Sinha ಮೇಲೆ ಕ್ಲಿಕ್ ಮಾಡಿ ಮತ್ತು ಅವಳ ಪ್ರೊಫೈಲ್ ಅನ್ನು ಎಡಿಟ್ ಮಾಡಿ. |
01:59 | User details ವಿಭಾಗದಲ್ಲಿ, Edit Profile ಲಿಂಕ್ ಅನ್ನು ಕ್ಲಿಕ್ ಮಾಡಿ. |
02:04 | ಕೆಳಕ್ಕೆ ಸ್ಕ್ರೋಲ್ ಮಾಡಿ , Optional ವಿಭಾಗವನ್ನು ಗುರುತಿಸಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ. |
02:11 | ಗಮನಿಸಿ, Institution, Department, Phone ಮತ್ತು Address ಫೀಲ್ಡ್ ಗಳು ತುಂಬಿವೆ. ಇವು ನಾವು CSV file ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ. |
02:23 | ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ.
ಹೀಗೆ ಮಾಡಲು, ಕ್ರಮವಾಗಿ Site Administration -> Users -> Browse list of users ಗಳನ್ನು ಕ್ಲಿಕ್ ಮಾಡಿ. |
02:33 | ಈಗ ಯೂಸರ್ System Admin2 ಗೆ, administrator role ಅನ್ನು ಕೊಡೋಣ. |
02:39 | ಎಡಭಾಗದ ಮೆನುವಿನಲ್ಲಿ , Site Administration ಮೇಲೆ, ನಂತರ Users ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:46 | ಕೆಳಗೆ Permissions ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು Site Administrators ಅನ್ನು ಕ್ಲಿಕ್ ಮಾಡಿ. |
02:52 | ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.
ಮೊದಲನೆಯದು ಪ್ರಸ್ತುತ site administrator ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಇನ್ನುಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ. |
03:05 | ಈ ಎರಡು ಪಟ್ಟಿಗಳ ನಡುವೆ, ವಿವಿಧ ಕ್ರಿಯೆಗಳನ್ನು ಮಾಡಲು ಬೇಕಾದ ಬಟನ್ ಗಳಿವೆ. |
03:11 | Users ಬಾಕ್ಸ್ ನಿಂದ , System Admin2 ಯೂಸರ್ ಅನ್ನು ಕ್ಲಿಕ್ ಮಾಡೋಣ. |
03:17 | ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು Users ಬಾಕ್ಸ್ ನ ಕೆಳಗೆ ಇರುವ Search ಬಾಕ್ಸ್ ಅನ್ನು ಬಳಸಿ.
ನಂತರ Add ಬಟನ್ ಅನ್ನು ಕ್ಲಿಕ್ ಮಾಡಿ. |
03:26 | Confirm ಬಾಕ್ಸ್ ನಲ್ಲಿ, Continue ಬಟನ್ ಅನ್ನು ಕ್ಲಿಕ್ ಮಾಡಿ. |
03:30 | ಈಗ ಇಲ್ಲಿ ಎರಡು “ಅಡ್ಮಿನ್ ಯೂಸರ್” ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು. |
03:38 | ಆದಾಗ್ಯೂ, Main administrator (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಇರಲು ಸಾಧ್ಯ. “ಮೇನ್ ಅಡ್ಮಿನಿಸ್ಟ್ರೇಟರ್” ಅನ್ನು ಸಿಸ್ಟಮ್ ನಿಂದ ಡಿಲೀಟ್ ಮಾಡಲು ಸಾಧ್ಯವಿಲ್ಲ. |
03:48 | ಈಗ Calculus (ಕ್ಯಾಲ್ಕ್ಯುಲಸ್) ಕೋರ್ಸ್ ಗೆ, ರೆಬೆಕಾ ರೇಮಂಡ್ ಅವರನ್ನು ಟೀಚರ್ ಎಂದು ಅಸೈನ್ ಮಾಡೋಣ. |
03:55 | ಇದನ್ನು ಮಾಡಲು, ಇಲ್ಲಿ ತೋರಿಸಿರುವಂತೆ, Course and category management ಪೇಜ್ ಗೆ ಹೋಗಿ. |
04:02 | 1st Year Maths ಉಪವಿಭಾಗದಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ. |
04:09 | Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. ಈ ಕೋರ್ಸ್ ನ ವಿವರಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
Enrolled Users ಅನ್ನು ಕ್ಲಿಕ್ ಮಾಡಿ. |
04:19 | ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ದಾಖಲಾಗಿರುವುದನ್ನು ನಾವು ನೋಡಬಹುದು. |
04:25 | ನಾವು ಇದನ್ನು upload user CSV ಯ ಮೂಲಕ ಮಾಡಿದ್ದೇವೆ. |
04:29 | ಮೂಡಲ್ ನಲ್ಲಿ, ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ದಾಖಲಾಗಿರಲೇಬೇಕು. |
04:35 | ಅವರಿಗೆ ಕೊಡಬೇಕಾದ ಹೊಸ ರೋಲ್, ಕೋರ್ಸ್ ನಲ್ಲಿ ಈಗ ಸಧ್ಯಕ್ಕೆ ಇರುವ ಅವರ ರೋಲ್ ಅನ್ನು ಅವಲಂಬಿಸಿದೆ. |
04:41 | ಮೇಲೆ ಅಥವಾ ಕೆಳಗಿನ ಬಲಭಾಗದಲ್ಲಿರುವ Enrol users ಬಟನ್ ಅನ್ನು ಕ್ಲಿಕ್ ಮಾಡಿ. |
04:48 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
04:51 | ಇದು Assign roles ಗಾಗಿ ಒಂದು ಡ್ರಾಪ್-ಡೌನ್ ಅನ್ನು , Enrolment options ಗಾಗಿ ಫೀಲ್ಡ್ ಗಳನ್ನು ಮತ್ತು ಒಂದು Search ಬಟನ್ ಅನ್ನು ಹೊಂದಿದೆ. |
05:00 | ಸಧ್ಯಕ್ಕೆ ಈ ಕೋರ್ಸ್ ಗೆ ಅಸೈನ್ ಮಾಡದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ನಾವು ನೋಡಬಹುದು. |
05:06 | Assign roles ಡ್ರಾಪ್-ಡೌನ್ ನಲ್ಲಿ , Teacher ಅನ್ನು ಆಯ್ಕೆಮಾಡಿ. |
05:11 | ನಂತರ, Rebecca Raymond ನ ಬದಿಯ Enrol ಬಟನ್ ಅನ್ನು ಕ್ಲಿಕ್ ಮಾಡಿ. |
05:16 | ಕೊನೆಯದಾಗಿ, ಪೇಜ್ ನ ಕೆಳಗಿರುವ Finish Enrolling users ಬಟನ್ ಅನ್ನು ಕ್ಲಿಕ್ ಮಾಡಿ. |
05:24 | ಇದೇ ರೀತಿ, Students ಅನ್ನು ಕೋರ್ಸ್ ಗೆ ಅಸೈನ್ ಮಾಡಬಹುದು. |
05:28 | ರೆಬೆಕಾ ರೇಮಂಡ್ ಅವರನ್ನು Teacher ರೋಲ್ ನಿಂದ ತೆಗೆದುಬಿಡಲು , Roles ಕಾಲಂ ನಲ್ಲಿರುವ Trash ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:36 | Confirm Role Change ಪಾಪ್-ಅಪ್ ಬಾಕ್ಸ್ ನಲ್ಲಿ, Remove ಬಟನ್ ಅನ್ನು ಕ್ಲಿಕ್ ಮಾಡಿ. |
05:42 | ಈಗಾಗಲೇ ದಾಖಲಾದ ಯೂಸರ್ ಗಳಿಗೆ ರೋಲ್ ಅನ್ನು ಅಸೈನ್ ಮಾಡಲು, ಇಲ್ಲಿರುವ Assign role ಐಕಾನ್ ಅನ್ನು ಸಹ ಬಳಸಬಹುದು. |
05:50 | ಇದನ್ನು ಕ್ಲಿಕ್ ಮಾಡಿದಾಗ, ಎಲ್ಲಾ ರೋಲ್ ಗಳ ಹೆಸರುಗಳಿರುವ, ಒಂದು ಚಿಕ್ಕ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
05:56 | ರೆಬೆಕಾ ರೇಮಂಡ್ ಗೆ ಟೀಚರ್ ರೋಲ್ ಅನ್ನು ಕೊಡಲು, Teacher ಮೇಲೆ ಕ್ಲಿಕ್ ಮಾಡಿ.
ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ. |
06:04 | ಬಲತುದಿಯಲ್ಲಿರುವ trash ಐಕಾನ್ ಮೇಲೆ ಕ್ಲಿಕ್ ಮಾಡಿ, ಕೋರ್ಸ್ ನಿಂದ ಯೂಸರ್ ಗಳ ದಾಖಲಾತಿಯನ್ನು ರದ್ದು ಮಾಡಬಹುದು. |
06:11 | ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಎಡಿಟ್ ಮಾಡಲು, ಬಲಭಾಗದಲ್ಲಿ gear ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ. |
06:20 | ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ನ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಇದರಲ್ಲಿ ಆಯ್ಕೆಗಳಿವೆ. |
06:28 | ಎನ್ರೋಲ್ಮೆಂಟ್ ಪೇಜ್ ಗೆ ಹಿಂದಿರುಗಲು, Cancel ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:33 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
06:39 | ಈ ಟ್ಯುಟೋರಿಯಲ್ ನಲ್ಲಿ ನಾವು:
ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು, course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ದಾಖಲು ಮಾಡುವುದು ಹೇಗೆ ಎಂದು ಕಲಿತಿದ್ದೇವೆ. |
06:52 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
ರೆಬೆಕಾ ರೇಮೆಂಡ್ ಅವರನ್ನು Linear Algebra course ಗೆ teacher ಎಂದು ಅಸೈನ್ ಮಾಡಿ. |
07:00 | ಪ್ರಿಯಾ ಸಿನ್ಹಾ ಅವರನ್ನು Linear Algebra course ಗೆ student ಆಗಿ ಅಸೈನ್ ಮಾಡಿ. |
07:06 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
07:22 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
07:26 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
07:38 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |