Difference between revisions of "Koha-Library-Management-System/C3/Import-MARC-to-Koha/Kannada"
Sandhya.np14 (Talk | contribs) (Created page with "{|border=1 |Time |Narration |- | 00:01 | '''Import MARC file into Koha.''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ...") |
Sandhya.np14 (Talk | contribs) |
||
(One intermediate revision by the same user not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | '''Import MARC file into Koha | + | | '''Import MARC file into Koha''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
− | | ಈ ಟ್ಯುಟೋರಿಯಲ್ ನಲ್ಲಿ, ನಾವು | + | | ಈ ಟ್ಯುಟೋರಿಯಲ್ ನಲ್ಲಿ, ನಾವು ''' KOHA ''' ದಲ್ಲಿ '''MARC '''ಫೈಲ್ ಅನ್ನು ಇಂಪೋರ್ಟ್ ಮಾಡಲು ಮತ್ತು ಇಂಪೋರ್ಟ್ ಮಾಡಲಾದ ಡೇಟಾಅನ್ನು ''' OPAC''' ನಲ್ಲಿ ಹುಡುಕಲು ಕಲಿಯುವೆವು. |
|- | |- | ||
Line 25: | Line 25: | ||
|- | |- | ||
| 00:41 | | 00:41 | ||
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
|- | |- |
Latest revision as of 11:00, 9 April 2019
Time | Narration |
00:01 | Import MARC file into Koha ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು KOHA ದಲ್ಲಿ MARC ಫೈಲ್ ಅನ್ನು ಇಂಪೋರ್ಟ್ ಮಾಡಲು ಮತ್ತು ಇಂಪೋರ್ಟ್ ಮಾಡಲಾದ ಡೇಟಾಅನ್ನು OPAC ನಲ್ಲಿ ಹುಡುಕಲು ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 , |
00:28 | Koha ಆವೃತ್ತಿ 16.05 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:36 | ನಿಮ್ಮ ಆಯ್ಕೆಯ ಬೇರೆ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. |
00:41 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:47 | ಇದನ್ನು ಅಭ್ಯಾಸ ಮಾಡಲು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
ಮತ್ತು, ನೀವು Koha ದಲ್ಲಿ, Admin ಆಕ್ಸೆಸ್ ಅನ್ನು ಸಹ ಹೊಂದಿರಬೇಕು. |
00:58 | ಇಲ್ಲದಿದ್ದಲ್ಲಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
01:05 | 'ಕೋಹಾ' ದಲ್ಲಿ 'ರೆಕಾರ್ಡ್' ಗಳನ್ನು ಇಂಪೋರ್ಟ್ ಮಾಡುವುದನ್ನು ಈ ಎರಡು ಹಂತಗಳಲ್ಲಿ ಮಾಡಲಾಗುತ್ತದೆ:
Stage MARC records for import ಹಾಗೂ Manage staged records. |
01:18 | ಮೊದಲು ನಮ್ಮ Superlibrarian ಆಕ್ಸೆಸ್ ನೊಂದಿಗೆ, Koha ದಲ್ಲಿ ಲಾಗ್-ಇನ್ ಮಾಡೋಣ. |
01:24 | Home ಪೇಜ್ ನಲ್ಲಿ, Tools ಮೇಲೆ ಕ್ಲಿಕ್ ಮಾಡಿ. |
01:28 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. Catalog ವಿಭಾಗದ ಕೆಳಗೆ, Stage MARC records for import ನ ಮೇಲೆ ಕ್ಲಿಕ್ ಮಾಡಿ. |
01:40 | Stage MARC records for import ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:46 | Stage records into the reservoir ಎಂಬ ವಿಭಾಗಕ್ಕೆ ಹೋಗಿ. |
01:51 | ಇಲ್ಲಿ, Select the file to stage ನ ಬದಿಯಲ್ಲಿರುವ Browse... ಮೇಲೆ ಕ್ಲಿಕ್ ಮಾಡಿ. |
01:58 | File Upload ಎಂಬ ವಿಂಡೋ ತೆರೆದುಕೊಳ್ಳುತ್ತದೆ. ನಂತರ Downloads ಫೋಲ್ಡರ್ ಗೆ ಹೋಗಿ. |
02:06 | ಇಲ್ಲಿ, TestData.mrc ಎಂಬ ಫೈಲ್ ಅನ್ನು ಗುರುತಿಸಿ. |
02:12 | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು TestData.mrc ಫೈಲ್ ಅನ್ನು ಕ್ರಿಯೇಟ್ ಮಾಡಿದ್ದೆವು ಎಂದು ನೆನಪಿಸಿಕೊಳ್ಳಿ. |
02:20 | ಈಗಾಗಲೇ ಆಯ್ಕೆ ಆಗಿರದಿದ್ದರೆ, TestData.mrc ಫೈಲ್ ಅನ್ನು ಆಯ್ಕೆಮಾಡಿ.
ಮತ್ತು, ಪೇಜ್ ನ ಕೆಳಗಿರುವ Open ಬಟನ್ ಮೇಲೆ ಕ್ಲಿಕ್ ಮಾಡಿ. |
02:32 | ಇದೇ ಪೇಜ್ ನಲ್ಲಿ, Browse ಟ್ಯಾಬ್ ನ ಬದಿಯಲ್ಲಿ, TestData.mrc ಎಂದು ಫೈಲ್ ನ ಹೆಸರನ್ನು ನೀವು ನೋಡುವಿರಿ. |
02:43 | ಈಗ, ಪೇಜ್ ನ ಕೆಳಗಿರುವ Upload file ಬಟನ್ ಮೇಲೆ ಕ್ಲಿಕ್ ಮಾಡಿ. |
02:49 | ಕಂದು ಬಣ್ಣದಲ್ಲಿ Upload progress ಬಾರ್ ಅನ್ನು ನೀವು ನೋಡುವಿರಿ. |
02:55 | ಅಪ್ಲೋಡ್ 100% ಪೂರ್ಣಗೊಂಡ ನಂತರ, ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗಿದೆ. |
03:03 | ಮೊದಲು, Comments about this file ಗಾಗಿ ಫೀಲ್ಡ್ ಅನ್ನು ತುಂಬಿ. |
03:09 | ಕೋಹಾದಲ್ಲಿ ಅಪ್ಲೋಡ್ ಮಾಡಿದ ಫೈಲ್ ಅನ್ನು ಗುರುತಿಸಲು ಇದು ಉಪಯುಕ್ತವಾಗಿದೆ. |
03:14 | ನಾನು Book Data ಎಂದು ನಮೂದಿಸುವೆನು. |
03:18 | ನಂತರ Record type ಇದೆ. ಇಲ್ಲಿ ಕೋಹಾ, ಡೀಫಾಲ್ಟ್ ಆಗಿ, Bibliographic ಅನ್ನು ಆಯ್ಕೆಮಾಡುತ್ತದೆ. |
03:26 | ಹೀಗೆಯೇ, Character encoding ಗಾಗಿ ಕೋಹಾ, ಡೀಫಾಲ್ಟ್ ಆಗಿ, UTF-8 (Default) ಅನ್ನು ಆಯ್ಕೆಮಾಡುತ್ತದೆ. |
03:35 | ಆಮೇಲೆ, Look for existing records in catalog? ಎಂಬ ವಿಭಾಗಕ್ಕೆ ಬನ್ನಿ. |
03:41 | ಈ ವಿಭಾಗದ ಕೆಳಗೆ, Record matching rule: ಗೆ ಹೋಗಿ.
ಕೋಹಾ, ಡೀಫಾಲ್ಟ್ ಆಗಿ, Do not look for matching records ಅನ್ನು ಆಯ್ಕೆಮಾಡುತ್ತದೆ. |
03:51 | ನೀವು ಈಗಿರುವ ರೆಕಾರ್ಡ್ ಗಳನ್ನು ಹೊಂದಿಸಲು (match) ಬಯಸಿದರೆ, ಡ್ರಾಪ್-ಡೌನ್ ನಿಂದ ಇನ್ನೊಂದು ಆಯ್ಕೆಯನ್ನು, ಎಂದರೆ ISBN/ISSN number ಅನ್ನು ಆರಿಸಿಕೊಳ್ಳಿ. |
04:04 | ಈಗ ನಾವು Action if matching record found ಗೆ ಬರುತ್ತೇವೆ. |
04:09 | ಕೋಹಾ, ಡೀಫಾಲ್ಟ್ ಆಗಿ, Replace existing record with incoming record ಅನ್ನು ಆಯ್ಕೆಮಾಡುತ್ತದೆ. |
04:16 | ನಂತರ Action if no match is found ಬರುತ್ತದೆ. ಕೋಹಾ, ಡೀಫಾಲ್ಟ್ ಆಗಿ, Add incoming record ಅನ್ನು ಆಯ್ಕೆಮಾಡುತ್ತದೆ. |
04:25 | ಆಮೇಲೆ, ನಾವು Check for embedded item record data? ಎಂಬ ವಿಭಾಗಕ್ಕೆ ಬರುತ್ತೇವೆ.
ಇಲ್ಲಿ Yes ಮತ್ತು No ಎಂಬ ಎರಡು ಆಯ್ಕೆಗಳು ಇವೆ. |
04:37 | ಕೋಹಾ, ಡೀಫಾಲ್ಟ್ ಆಗಿ Yes ಅನ್ನು ಆಯ್ಕೆಮಾಡುತ್ತದೆ. |
04:41 | ಕೋಹಾ, How to process items ಗಾಗಿ, Always add items ಅನ್ನು ಡೀಫಾಲ್ಟ್ ಆಗಿ ಆಯ್ಕೆಮಾಡುತ್ತದೆ. |
04:48 | ಇಲ್ಲಿ ಬೇರೆ ಆಯ್ಕೆಗಳು ಸಹ ಇವೆ. ನಿಮ್ಮ ಆದ್ಯತೆಯ ಪ್ರಕಾರ, ಇವುಗಳಲ್ಲಿ ಯಾವುದನ್ನಾದರೂ ನೀವು ಆಯ್ಕೆ ಮಾಡಬಹುದು. |
04:56 | ಪೇಜ್ ನ ಕೆಳಗಿರುವ Stage for import ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು “Job progress” ಅನ್ನು ನೀಲಿ ಬಣ್ಣದ ಪಟ್ಟಿಯಲ್ಲಿ ನೋಡುವಿರಿ. |
05:06 | progress 100% ಪೂರ್ಣಗೊಂಡಾಗ, Stage MARC records for import ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
05:17 | ನಮ್ಮ 'ಎಕ್ಸೆಲ್ ಶೀಟ್' ನಲ್ಲಿದ್ದ ಡೇಟಾವನ್ನು ಈಗ ನಾವು ಯಶಸ್ವಿಯಾಗಿ ಇಂಪೋರ್ಟ್ ಮಾಡಿದ್ದೇವೆ ಎಂಬುದನ್ನು ಗಮನಿಸಿ. |
05:25 | ಇದು ಕೆಳಗಿನ ವಿವರಗಳನ್ನು ಹೊಂದಿದೆ. |
05:28 | ಗಮನಿಸಿ, ನಿಮ್ಮ .mrc (ಡಾಟ್ ಎಮ್ ಆರ್ ಸಿ) ಡೇಟಾ ಪ್ರಕಾರ, ನೀವು ನಿಮ್ಮ 'ಕೊಹಾ ಇಂಟರ್ಫೇಸ್' ನಲ್ಲಿ ಬೇರೆ ವ್ಯಾಲ್ಯೂಅನ್ನು ನೋಡುವಿರಿ. |
05:36 | ಇದೇ ಪೇಜ್ ನಲ್ಲಿ, ಶೀರ್ಷಿಕೆಯ ಮೇಲೆ, ನೀವು ಈ ಎರಡು ಆಯ್ಕೆಗಳನ್ನು ನೋಡುತ್ತೀರಿ:
Stage MARC records ಮತ್ತುManage staged records. |
05:48 | ಗಮನಿಸಿ: ನಾನು Excel ಫೈಲ್, ಎಂದರೆ TestData ಅನ್ನು ಈಗಾಗಲೇ ಇಂಪೋರ್ಟ್ ಮಾಡಿರುವುದರಿಂದ, Stage MARC records ಮೇಲೆ ಕ್ಲಿಕ್ ಮಾಡುವುದಿಲ್ಲ. |
06:00 | ನಿಮಗೆ ಬೇರಾವುದೇ ಫೈಲ್ ಅನ್ನು ಇಂಪೋರ್ಟ್ ಮಾಡಬೇಕಾಗಿದ್ದರೆ, ಆಗ Stage MARC records ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲು ಹೇಳಿದ ಹಂತಗಳನ್ನು ಅನುಸರಿಸಿ. |
06:11 | ನಂತರ, ನಾವು ಇಂಪೋರ್ಟ್ ಮಾಡಲಾದ ದಾಖಲೆಗಳನ್ನು KOHA Catalog ನಲ್ಲಿ ನಿರ್ವಹಿಸಬೇಕು. ಆದ್ದರಿಂದ, Manage staged records ಮೇಲೆ ಕ್ಲಿಕ್ ಮಾಡಿ. |
06:22 | Manage staged MARC records › Batch 6 ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
06:30 | 'ಕೋಹಾ', ಈ ಪೇಜ್ ನಲ್ಲಿ, ಇಲ್ಲಿ ತೋರಿಸಿರುವ ವ್ಯಾಲ್ಯೂ ಗಳೊಂದಿಗೆ ಕೆಳಗಿನ ಫೀಲ್ಡ್ ಗಳನ್ನು ತುಂಬುತ್ತದೆ. |
06:37 | ಮತ್ತು, ಕೆಳಗಿನ ಫೀಲ್ಡ್ ಗಳಿಗಾಗಿ ಡ್ರಾಪ್-ಡೌನ್ ನಿಂದ ಈ ನಮೂದುಗಳನ್ನು ಡೀಫಾಲ್ಟ್ ಆಗಿ ಆಯ್ಕೆಮಾಡುತ್ತದೆ. |
06:45 | ಆದರೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನೀವು ಈ ನಮೂದುಗಳನ್ನು ಅವುಗಳ ಡ್ರಾಪ್-ಡೌನ್ ಗಳಿಂದ ಬದಲಾಯಿಸಬಹುದು. |
06:52 | ಆಮೇಲೆ, Apply different matching rules ಎಂಬ ಬಟನ್ ಇದೆ. |
06:57 | ಡೇಟಾಬೇಸ್ ನಲ್ಲಿರುವ ರೆಕಾರ್ಡ್ ಗಳ ನಕಲು ಉಂಟಾಗುವುದನ್ನು ತಪ್ಪಿಸಲು ನೀವು ಈ ಬಟನ್ ಮೇಲೆ ಕ್ಲಿಕ್ ಮಾಡಬಹುದು. ನಾನು ಈ ಬಟನ್ ಅನ್ನು ಬಿಟ್ಟು ಮುಂದೆ ಹೋಗುತ್ತೇನೆ. |
07:09 | ಈಗ, Add new bibliographic records into this framework ಅನ್ನು ಗುರುತಿಸಿ.
ಮತ್ತು, ನಾನು ಡ್ರಾಪ್-ಡೌನ್ ನಿಂದ BOOKS ಅನ್ನು ಆಯ್ಕೆಮಾಡುವೆನು. |
07:20 | ಮತ್ತೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದು. |
07:25 | ಈಗ, ನಾನು Import this batch into the catalog ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡುವೆನು. |
07:32 | ಆದರೆ ಕ್ಲಿಕ್ ಮಾಡುವ ಮೊದಲು Citation ಎಂಬ ವಿಭಾಗವನ್ನು ನೋಡುವೆವು. |
07:37 | ದಯವಿಟ್ಟು ಈ ನಿರ್ದಿಷ್ಟ ಸಂಖ್ಯೆಗಳನ್ನು ಗಮನಿಸಿ.
ಎಕ್ಸೆಲ್ ನಿಂದ ನಾವು ಇಂಪೋರ್ಟ್ ಮಾಡಿದ ವಿವರಗಳೊಂದಿಗೆ, ನೀವು ಬೇರೆ ಸಂಖ್ಯೆಯನ್ನು ನೋಡುತ್ತೀರಿ ಎಂಬುದನ್ನು ಗಮನಿಸಿ. |
07:48 | ಈಗ, Import this batch into the catalog ಎಂಬ ಬಟನ್ ಮೇಲೆ ಕ್ಲಿಕ್ ಮಾಡುವೆವು. |
07:55 | ನಾವು ಹಾಗೆ ಮಾಡುವಾಗ, Job progress bar ಕಾಣಿಸಿಕೊಳ್ಳುತ್ತದೆ. |
08:00 | ಪ್ರೊಗ್ರೆಸ್ 100% ಪೂರ್ಣಗೊಂಡಾಗ, Manage staged MARC records › Batch 6 ಎಂಬ ಶೀರ್ಷಿಕೆಯ ಒಂದು ಹೊಸ ಪೇಜ್, |
08:06 | ಮೊದಲು ನಮೂದಿಸಲಾದ ಈ ಕೆಳಗಿನ ವಿವರಗಳೊಂದಿಗೆ ತೆರೆದುಕೊಳ್ಳುತ್ತದೆ. |
08:16 | ನಿಮ್ಮ ಇಂಪೋರ್ಟ್ ಅನ್ನು undo ಮಾಡಲು ಸಾಧ್ಯವಿದೆ. ಒಂದು ವೇಳೆ, ಇಂಪೋರ್ಟ್ ಮಾಡಿಕೊಂಡ ಡೇಟಾದಲ್ಲಿ ತಪ್ಪು ಇದ್ದರೆ, ಅದನ್ನು ಸರಿಪಡಿಸಲು ಕೆಳಗಿನಂತೆ ಮಾಡಿ. |
08:27 | ವಿಭಾಗದ ಕೆಳಗಿರುವ Undo import into catalog ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:34 | ನಾನು ಇಲ್ಲಿ ಕ್ಲಿಕ್ ಮಾಡುವುದಿಲ್ಲ. |
08:37 | ನಂತರ Completed import of records ಇದೆ. |
08:42 | ಸೇರಿಸಲಾದ, ಅಪ್ಡೇಟ್ ಮಾಡಲಾದ ಹಾಗೂ ಇನ್ನಿತರ ರೆಕಾರ್ಡ್ ಗಳ ವಿವರಗಳನ್ನು ಇಲ್ಲಿ ನೀವು ನೋಡುತ್ತೀರಿ. |
08:49 | ನಂತರ, ಇಂಪೋರ್ಟ್ ಮಾಡಲಾದ ವಿವರಗಳೊಂದಿಗೆ Citation ಎಂಬ ವಿಭಾಗವನ್ನು ನೀವು ನೋಡುತ್ತೀರಿ. |
08:56 | ಇಂಪೋರ್ಟ್ ಮಾಡುವುದು ಪೂರ್ಣಗೊಂಡ ನಂತರ, ಹೊಸ Record ಗೆ (ರೆಕಾರ್ಡ್) ಒಂದು ಲಿಂಕ್ ಕಾಣಿಸಿಕೊಳ್ಳುತ್ತದೆ. |
09:02 | ಇಂಪೋರ್ಟ್ ಮಾಡಿಕೊಂಡ ಪ್ರತಿಯೊಂದು Citation ನ ಬಲಭಾಗದಲ್ಲಿ, ಇದು ಗೋಚರಿಸುತ್ತದೆ. |
09:08 | ಈಗ, 'ಕ್ಯಾಟಲಾಗ್' ನಲ್ಲಿ ಶೀರ್ಷಿಕೆಗಳನ್ನು ಸೇರಿಸಲಾಗಿದೆಯೇ/ಇಲ್ಲವೇ ಎಂದು ನಾವು ಖಚಿತಪಡಿಸುತ್ತೇವೆ. |
09:15 | ಹಾಗೆ ಮಾಡಲು, ಅದೇ ಪೇಜ್ ನ ಮೇಲ್ಭಾಗದಲ್ಲಿ, Search the catalog ಎಂಬ ಫೀಲ್ಡ್ ಅನ್ನು ಗುರುತಿಸಿ. |
09:22 | ಕೋಹಾದಲ್ಲಿ ರೆಕಾರ್ಡ್ ಗಳ ಇಂಪೋರ್ಟ್ ಗಳನ್ನು ಖಚಿತಪಡಿಸಲು, ನಾನು ಈಗ ಒಂದು ಸಣ್ಣ ಪರೀಕ್ಷೆಯನ್ನು ಮಾಡುತ್ತೇನೆ. |
09:29 | ಇದಕ್ಕಾಗಿ, Citation ವಿಭಾಗದಲ್ಲಿ ಇಂಪೋರ್ಟ್ ಮಾಡಿಕೊಂಡ 'ರೆಕಾರ್ಡ್' ನಿಂದ, ಶೀರ್ಷಿಕೆಗಳಲ್ಲಿ ಒಂದನ್ನು ನಾನು ಟೈಪ್ ಮಾಡುತ್ತೇವೆ. |
09:37 | ನಂತರ, ಫೀಲ್ಡ್ ನ ಬಲಭಾಗದಲ್ಲಿರುವ Submit ಬಟನ್ ಮೇಲೆ ಕ್ಲಿಕ್ ಮಾಡಿ. |
09:43 | Inorganic chemistry Housecroft, Catherine E. ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
09:50 | ಹುಡುಕಲಾದ Title ಫಲಿತಾಂಶವನ್ನು ಕೋಹಾ ತೋರಿಸುತ್ತದೆ. ಇದು ರೆಕಾರ್ಡ್ ಗಳನ್ನು ಸರಿಯಾಗಿ ಇಂಪೋರ್ಟ್ ಮಾಡಲಾಗಿದೆ ಎಂದು ಧೃಡಪಡಿಸುತ್ತದೆ. |
09:58 | ಇದರೊಂದಿಗೆ, ನಾವು Koha ದಲ್ಲಿ MARC ಅನ್ನು ಇಂಪೋರ್ಟ್ ಮಾಡುವುದನ್ನು ಪೂರ್ಣಗೊಳಿಸಿದ್ದೇವೆ. |
10:04 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
MARC ಫೈಲ್ ಅನ್ನು KOHA ದಲ್ಲಿ ಇಂಪೋರ್ಟ್ ಮಾಡಲು ಮತ್ತು OPAC ನಲ್ಲಿ ಇಂಪೋರ್ಟ್ ಮಾಡಲಾದ ಡೇಟಾ ಅನ್ನು ಹುಡುಕಲು ಕಲಿತಿದ್ದೇವೆ. |
10:17 | ಅಸೈನ್ಮೆಂಟ್ ಗಾಗಿ -
ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಮಾರ್ಪಡಿಸಲಾದ MARC ನ 10 ರೆಕಾರ್ಡ್ ಗಳನ್ನು ಬಳಸಿ. ಮತ್ತು, ಅವುಗಳನ್ನು ಕೋಹಾ ದಲ್ಲಿ ಇಂಪೋರ್ಟ್ ಮಾಡಿಕೊಳ್ಳಿ. |
10:29 | ಸೂಚನೆ: ದಯವಿಟ್ಟು Conversion of Excel data to Marc 21 format ಎಂಬ ಟ್ಯುಟೋರಿಯಲ್ ಅನ್ನು ನೋಡಿ. |
10:37 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:45 | ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
10:56 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
10:59 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
11:10 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |