Difference between revisions of "Koha-Library-Management-System/C2/Catalog-Serials/Kannada"
Sandhya.np14 (Talk | contribs) (Created page with "{| border=1 | '''Time''' |'''Narration''' |- |00:01 | '''How to catalog Serial subscriptions''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ...") |
Sandhya.np14 (Talk | contribs) |
||
(3 intermediate revisions by the same user not shown) | |||
Line 9: | Line 9: | ||
|- | |- | ||
|00:07 | |00:07 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು, ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು (subscription) ಹೇಗೆ ಕ್ಯಾಟಲಾಗ್ (ಪುಸ್ತಕದ ಪಟ್ಟಿ) ಮಾಡುವುದೆಂದು ಕಲಿಯುವೆವು. |
|- | |- | ||
Line 51: | Line 51: | ||
| 01:19 | | 01:19 | ||
|'''Volume-57''', | |'''Volume-57''', | ||
− | '''Number- 1''', | + | '''Number- 1''', |
+ | |||
ತ್ರೈಮಾಸಿಕ ಪ್ರಕಟಣೆ - Jan ಯಿಂದ March 2017 ರ ವರೆಗಿನ ಒಂದು ಸೀರಿಯಲ್ ಪಬ್ಲಿಕೇಶನ್ ಅನ್ನು ಕ್ಯಾಟಲಾಗ್ ಮಾಡುತ್ತಿದ್ದೇನೆ. | ತ್ರೈಮಾಸಿಕ ಪ್ರಕಟಣೆ - Jan ಯಿಂದ March 2017 ರ ವರೆಗಿನ ಒಂದು ಸೀರಿಯಲ್ ಪಬ್ಲಿಕೇಶನ್ ಅನ್ನು ಕ್ಯಾಟಲಾಗ್ ಮಾಡುತ್ತಿದ್ದೇನೆ. | ||
Line 78: | Line 79: | ||
|- | |- | ||
| 02:03 | | 02:03 | ||
− | | | + | |'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ತಾನೇ ವ್ಯಾಲ್ಯೂಗಳನ್ನು ಕೊಡುತ್ತದೆ. |
|- | |- | ||
|02:09 | |02:09 | ||
Line 261: | Line 262: | ||
|- | |- | ||
| 07:43 | | 07:43 | ||
− | | ಈಗ, '''310 CURRENT PUBLICATION FREQUENCY''' ಹೋಗಿ. | + | | ಈಗ, '''310 CURRENT PUBLICATION FREQUENCY''' ಗೆ ಹೋಗಿ. |
|- | |- |
Latest revision as of 12:41, 24 April 2019
Time | Narration |
00:01 | How to catalog Serial subscriptions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು (subscription) ಹೇಗೆ ಕ್ಯಾಟಲಾಗ್ (ಪುಸ್ತಕದ ಪಟ್ಟಿ) ಮಾಡುವುದೆಂದು ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux Operating System 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:33 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು. |
00:44 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:50 | ಆರಂಭಿಸುವ ಮೊದಲು, Serials ಮೊಡ್ಯೂಲ್ ಎಂದರೆ ಏನು ಎಂದು ನಾವು ತಿಳಿದುಕೊಳ್ಳೋಣ. |
00:56 | Serials ಮೊಡ್ಯೂಲ್ ಅನ್ನು -
ಕಾಲಕಾಲಕ್ಕೆ ಪ್ರಕಟಿಸಲಾಗುವ ಜರ್ನಲ್ ಗಳು, |
01:03 | ಮ್ಯಾಗಝೀನ್ ಗಳು (Magazines) ಮತ್ತು ನಿಯತಕಾಲಿಕಗಳ (Periodicals) ಚಂದಾದಾರಿಕೆಯನ್ನು ನಿರ್ವಹಿಸಲು ಬಳಸಲಾಗುತ್ತದೆ. |
01:10 | ಈ ವಿವರಣೆಯಲ್ಲಿ, ನಾನು -
Indian Journal of Microbiology ಎಂಬ ಶೀರ್ಷಿಕೆಯ |
01:19 | Volume-57,
Number- 1, ತ್ರೈಮಾಸಿಕ ಪ್ರಕಟಣೆ - Jan ಯಿಂದ March 2017 ರ ವರೆಗಿನ ಒಂದು ಸೀರಿಯಲ್ ಪಬ್ಲಿಕೇಶನ್ ಅನ್ನು ಕ್ಯಾಟಲಾಗ್ ಮಾಡುತ್ತಿದ್ದೇನೆ. |
01:30 | ಇದನ್ನು ಮಾಡಲು, Superlibrarian Username ಮತ್ತು ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
01:36 | Home ಪೇಜ್ ನಲ್ಲಿ, Cataloging ಮೇಲೆ ಕ್ಲಿಕ್ ಮಾಡಿ. |
01:41 | ಆಮೇಲೆ plus New record ಮೇಲೆ ಕ್ಲಿಕ್ ಮಾಡಿ.
ಡ್ರಾಪ್-ಡೌನ್ ನಿಂದ, Serials ಅನ್ನು ಆಯ್ಕೆಮಾಡಿ. |
01:49 | Add MARC record ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:54 | ಈಗ ನಾವು ಕೆಳಗಿನ ವಿವರಗಳನ್ನು ಭರ್ತಿ ಮಾಡೋಣ. |
01:58 | ಈ ಪೇಜ್ ನಲ್ಲಿ, ಕೆಲವು ಕಡ್ಡಾಯವಾದ ಫೀಲ್ಡ್ ಗಳಿವೆ ಎಂದು ಗಮನಿಸಿ. |
02:03 | 'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ತಾನೇ ವ್ಯಾಲ್ಯೂಗಳನ್ನು ಕೊಡುತ್ತದೆ. |
02:09 | 0 ರಿಂದ 9 ರ ವರೆಗಿನ ಟ್ಯಾಬ್ ಗಳ ಶ್ರೇಣಿಯಲ್ಲಿ, ನಾವು ಟ್ಯಾಬ್ zero ದೊಂದಿಗೆ ಆರಂಭಿಸುವೆವು. |
02:16 | 000, LEADER ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. ಡೀಫಾಲ್ಟ್ ಆಗಿ, Koha ಈ ವ್ಯಾಲ್ಯೂಅನ್ನು ತೋರಿಸುತ್ತದೆ. |
02:26 | ಆಮೇಲೆ, 005 DATE AND TIME OF LATEST TRANSACTION ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. |
02:35 | ಕೋಹಾ, ನನ್ನ ಮಷಿನ್ ನಲ್ಲಿ ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ. |
02:40 | ನಿಮ್ಮ ಇಂಟರ್ಫೇಸ್ ನಲ್ಲಿ ನೀವು ಬೇರೆ ವ್ಯಾಲ್ಯೂಅನ್ನು ನೋಡುವಿರಿ. |
02:44 | 006 ಮತ್ತು 007 ಗಳ ಫೀಲ್ಡ್ ಗಳನ್ನು ನಾನು ಹಾಗೇ ಬಿಡುತ್ತೇನೆ. |
02:50 | 008 FIXED-LENGTH DATA ELEMENTS--GENERAL INFORMATION ಅನ್ನು ಕ್ಲಿಕ್ ಮಾಡಿದಾಗ, Koha ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ. |
03:01 | ನಂತರ, 022 ISSN ಎಂಬ ಟ್ಯಾಬ್ ಗೆ ಹೋಗಿ. |
03:06 | 022 question mark ಪಕ್ಕದಲ್ಲಿಯ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
03:12 | ಗಮನಿಸಿ: ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, ಟ್ಯಾಗ್ 022 ಗಾಗಿ, ಸಂಪೂರ್ಣ MARC 21 Bibliographic ಫಾರ್ಮ್ಯಾಟ್ ತೆರೆದುಕೊಳ್ಳುತ್ತದೆ. |
03:24 | ಇಲ್ಲಿ, ಈ ಎರಡೂ indicator ಗಳನ್ನು (ಇಂಡಿಕೇಟರ್) ವಿವರಿಸಿಲ್ಲ. |
03:28 | ಈಗ ನಾವು ಕೋಹಾ ಇಂಟರ್ಫೇಸ್ ಗೆ ಹಿಂದಿರುಗೋಣ. |
03:32 | ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಹಾಗೇ ಬಿಡುತ್ತೇನೆ. |
03:36 | ನಂತರ, ‘a’ International Standard Serial Number ಎಂಬ ಸಬ್-ಫೀಲ್ಡ್ ಅನ್ನು ಗುರುತಿಸಿ. |
03:43 | ಎಂಟು ಅಂಕಿಗಳ ಜರ್ನಲ್ ISSN ಅನ್ನು ನಮೂದಿಸಿ. |
03:49 | ಆದಾಗ್ಯೂ, ನೀವು ಕ್ಯಾಟಲಾಗ್ ಗೆ ಆಯ್ಕೆಮಾಡಿರುವ ಜರ್ನಲ್ ನ ISSN ಅನ್ನು ಸೇರಿಸಬೇಕು. |
03:55 | ಉಳಿದ ಫೀಲ್ಡ್ ಗಳನ್ನು ಹಾಗೇ ಬಿಟ್ಟುಬಿಡುತ್ತೇನೆ. |
03:57 | ನಿಮ್ಮ ಲೈಬ್ರರಿಯ ಅವಶ್ಯಕತೆಗಳ ಪ್ರಕಾರ, ಈ ಫೀಲ್ಡ್ ಗಳನ್ನು ಭರ್ತಿ ಮಾಡುವುದನ್ನು ನೀವು ಪರಿಗಣಿಸಬಹುದು. |
04:04 | ನಂತರ, 040 CATALOGING SOURCE ಎಂಬ ಟ್ಯಾಬ್ ಗೆ ಹೋಗಿ.
040 ? (ಪ್ರಶ್ನಾರ್ಥಕ ಚಿಹ್ನೆಯ) ಪಕ್ಕದಲ್ಲಿಯ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
04:14 | ಇಲ್ಲಿ, ಈ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. |
04:18 | ಹೀಗಾಗಿ, ನಾನು ಈ ಎರಡೂ ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
04:23 | c, Transcribing agency ಎಂಬ ಸಬ್-ಫೀಲ್ಡ್ ಗೆ ಹೋಗಿ. |
04:28 | ಇಲ್ಲಿ Institute/University ಅಥವಾ Department ನ ಹೆಸರನ್ನು ಟೈಪ್ ಮಾಡಿ. |
04:34 | ನಾನು IIT Bombay ಎಂದು ಟೈಪ್ ಮಾಡುವೆನು. |
04:37 | ಈಗ 082 DEWEY DECIMAL CLASSIFICATION NUMBER ಎಂಬ ಟ್ಯಾಬ್ ಗೆ ಬನ್ನಿ. |
04:44 | ‘a’, Classification number ಎಂಬ ಸಬ್-ಫೀಲ್ಡ್ ನಲ್ಲಿ, 660.62 ಎಂದು ನಮೂದಿಸಿ. |
04:52 | ಆಮೇಲೆ, ಮೇಲ್ತುದಿಗೆ ಹೋಗಿ ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 2 ಮೇಲೆ ಕ್ಲಿಕ್ ಮಾಡಿ. |
05:01 | ನಂತರ, 245 TITLE STATEMENT: ಎಂಬ ಟ್ಯಾಬ್ ಗೆ ಹೋಗಿ. |
05:07 | 245 ? ಪಕ್ಕದಲ್ಲಿ ಈ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
ಮೊದಲೇ ಹೇಳಿದಂತೆ, ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, |
05:17 | ಆಯಾ ಟ್ಯಾಗ್ ಗಾಗಿ, ಸಂಪೂರ್ಣ MARC 21 Bibliographic format ತೆರೆದುಕೊಳ್ಳುತ್ತದೆ. |
05:24 | ನಾವು ಮತ್ತೆ 'ಕೋಹಾ ಇಂಟರ್ಫೇಸ್' ಗೆ ಹಿಂತಿರುಗೋಣ. |
05:28 | ಈಗ, ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 0 ಎಂದು ಟೈಪ್ ಮಾಡಿ. ಗಮನಿಸಿ: 0- ಇದು No added Entry ಗಾಗಿ ಇಂಡಿಕೇಟರ್ ಆಗಿದೆ. |
05:37 | ಎರಡನೆಯ ಖಾಲಿ ಬಾಕ್ಸ್ ನಲ್ಲಿಯೂ 0 ಎಂದು ಟೈಪ್ ಮಾಡಿ. |
05:41 | 2ನೆಯ ಇಂಡಿಕೇಟರ್, ಒಂದು non-filing (ನಾನ್-ಫೈಲಿಂಗ್) ಅಕ್ಷರವನ್ನು ಪ್ರತಿನಿಧಿಸುತ್ತದೆ. |
05:46 | ನಾನು 0 ಅನ್ನು ನಮೂದಿಸಿದ್ದೇನೆ. ಏಕೆಂದರೆ, ಈ TITLE ನ ಅಡಿಯಲ್ಲಿ, non- filing ಅಕ್ಷರವು ಇಲ್ಲ. |
05:54 | ‘a’ Title ಎಂಬ ಸಬ್-ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: Indian Journal of Microbiology. |
06:01 | ನಿಮ್ಮ ಜರ್ನಲ್ ನ ಶೀರ್ಷಿಕೆಯನ್ನು ನೀವು ಇಲ್ಲಿ ಟೈಪ್ ಮಾಡಬಹುದು. |
06:05 | ಈಗ, 260 PUBLICATION, DISTRIBUTION, ETC ಗೆ ಹೋಗಿ. |
06:11 | 260? (260 ಪ್ರಶ್ನಾರ್ಥಕ ಚಿಹ್ನೆಯ) ಪಕ್ಕದಲ್ಲಿ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
06:17 | ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
06:26 | ಈಗ, ನನ್ನ ಪುಸ್ತಕದ ವಿವರಗಳನ್ನು ನಾನು ತುಂಬುತ್ತೇನೆ. ನಿಮ್ಮ ಪುಸ್ತಕದ ವಿವರಗಳನ್ನು ನೀವು ಟೈಪ್ ಮಾಡಬಹುದು. |
06:34 | ‘a’ Place of publication, distribution, etc., ಎಂಬ ಸಬ್-ಫೀಲ್ಡ್ ನಲ್ಲಿ, New Delhi ಎಂದು ನಮೂದಿಸಿ. |
06:42 | ‘b’ Name of publisher, distributor, etc. ಎಂಬ ಸಬ್-ಫೀಲ್ಡ್ ನಲ್ಲಿ, Springer ಎಂದು ನಮೂದಿಸಿ. |
06:50 | ‘c’ Date of publication, distribution, etc. ಎಂಬ ಸಬ್-ಫೀಲ್ಡ್ ನಲ್ಲಿ 2017 ಎಂದು ನಮೂದಿಸಿ. |
07:00 | ಈಗ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು, 0 ಯಿಂದ 9 ಟ್ಯಾಬ್ ಗಳಲ್ಲಿ 3 ನೇ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:07 | ಈಗ 300 PHYSICAL DESCRIPTION ಗೆ ಹೋಗಿ. |
07:12 | 300? (300 ಪ್ರಶ್ನಾರ್ಥಕ ಚಿಹ್ನೆ) ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
07:19 | ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
07:27 | ‘a’ Extent ಸಬ್-ಫೀಲ್ಡ್ ನಲ್ಲಿ, ನಾನು 11 v ಎಂದು ಟೈಪ್ ಮಾಡುವೆನು. |
07:33 | ಗಮನಿಸಿ: 11 v ಯ ನಂತರ ನಾನು ಈ ಜರ್ನಲ್ ಗೆ ಚಂದಾದಾರನಾಗಿದ್ದೇನೆ. |
07:39 | ಆದ್ದರಿಂದ, ನಿಮ್ಮ ಜರ್ನಲ್ ನ ಪ್ರಕಾರ ನೀವು ನಮೂದಿಸಬೇಕು. |
07:43 | ಈಗ, 310 CURRENT PUBLICATION FREQUENCY ಗೆ ಹೋಗಿ. |
07:49 | 310? ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ. |
07:55 | ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ. |
08:03 | ಟ್ಯಾಗ್ ಅನ್ನು ವಿಸ್ತರಿಸಲು CURRENT PUBLICATION FREQUENCY ಮೇಲೆ ಕ್ಲಿಕ್ ಮಾಡಿ. ಇದರಿಂದ ನಾವು ಸಬ್-ಫೀಲ್ಡ್ ಗಳನ್ನು ತುಂಬಬಹುದು. |
08:12 | ‘a’ Current publication frequency ಎಂಬ ಸಬ್-ಫೀಲ್ಡ್ ನಲ್ಲಿ, ನಾನು Quarterly ಎಂದು ಟೈಪ್ ಮಾಡುವೆನು. |
08:22 | ಏಕೆಂದರೆ, ನನ್ನ ಜರ್ನಲ್ ತ್ರೈಮಾಸಿಕ ಸೀರಿಯಲ್ ಆಗಿದೆ. |
08:27 | ನಿಮ್ಮದು ವಿಭಿನ್ನವಾಗಿದ್ದರೆ, ಉದಾ: ಮಾಸಿಕ, ದ್ವಿ-ಮಾಸಿಕ ಇತ್ಯಾದಿ, ಅದಕ್ಕೆ ಅನುಗುಣವಾಗಿ ತುಂಬಿರಿ. |
08:34 | ಆಮೇಲೆ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ 6 ರ ಮೇಲೆ ಕ್ಲಿಕ್ ಮಾಡಿ. |
08:41 | 650 SUBJECT ADDED ENTRY--TOPICAL TERM ಎಂಬ ಫೀಲ್ಡ್ ಅನ್ನು ಗುರುತಿಸಿ. |
08:47 | 650 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
ಮೊದಲನೆಯ ಖಾಲಿ ಬಾಕ್ಸ್ ನಲ್ಲಿ, 1 ಎಂದು ಟೈಪ್ ಮಾಡಿ. |
08:55 | Primary (Level of subject) ಗಾಗಿ 1 ಇಂಡಿಕೇಟರ್ ಆಗಿದೆ ಎಂದು ಗಮನಿಸಿ. |
09:00 | ಎರಡನೆಯ ಖಾಲಿ ಬಾಕ್ಸ್ ನಲ್ಲಿ, 0 ಅನ್ನು ಟೈಪ್ ಮಾಡಿ. |
09:04 | Library of Congress Subject Headings (Thesaurus) ಗಾಗಿ, 0 ಇಂಡಿಕೇಟರ್ ಆಗಿದೆ ಎಂದು ಗಮನಿಸಿ. |
09:11 | ನಂತರ ‘a’ Topical term or geographic name as entry element. ಎಂಬ ಸಬ್-ಫೀಲ್ಡ್ ಬರುತ್ತದೆ. |
09:19 | ಇಲ್ಲಿ, ನಾನು subject heading ಅನ್ನು Microbiology ಎಂದು ಟೈಪ್ ಮಾಡುವೆನು. |
09:24 | ನಿಮ್ಮ 'ಬುಕ್' ಅಥವಾ 'ಸೀರಿಯಲ್' ಗೆ ಸೂಕ್ತವಾದ subject heading ಅನ್ನು ನೀವು ಟೈಪ್ ಮಾಡಬೇಕು. |
09:31 | ಒಂದು ವೇಳೆ, ಒಂದಕ್ಕಿಂತ ಹೆಚ್ಚು ಕೀವರ್ಡ್ ಗಳನ್ನು ಸೇರಿಸಬೇಕಾಗಿದ್ದರೆ, ಆಗ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ Repeat this Tag ಎಂಬ ಸಣ್ಣ ಬಟನ್ ಮೇಲೆ ಕ್ಲಿಕ್ ಮಾಡಿ. |
09:42 | ಟ್ಯಾಬ್ 650 ಯ ನಕಲು ಕಾಣಿಸಿಕೊಳ್ಳುತ್ತದೆ. |
09:47 | ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು, 0 ಯಿಂದ 9 ಟ್ಯಾಬ್ ಗಳಲ್ಲಿ 7 ರ ಮೇಲೆ ಕ್ಲಿಕ್ ಮಾಡಿ. |
09:54 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, 700 ADDED ENTRY--PERSONAL NAME ಎಂಬ ಟ್ಯಾಬ್ ಗೆ ಹೋಗಿ. |
10:03 | 700 ? (ಪ್ರಶ್ನಾರ್ಥಕ ಚಿಹ್ನೆಯ) ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
ಮೊದಲನೆಯ ಖಾಲಿ ಬಾಕ್ಸ್ ನಲ್ಲಿ, 1 ಎಂದು ಟೈಪ್ ಮಾಡಿ. |
10:13 | ಗಮನಿಸಿ: 1, Surname ಗಾಗಿ ಇಂಡಿಕೇಟರ್ ಆಗಿದೆ. |
10:18 | 2ನೆಯ ಇಂಡಿಕೇಟರ್ ಅನ್ನು MARC 21 ವಿವರಿಸಿಲ್ಲ. ಆದ್ದರಿಂದ, ನಾನು ಅದನ್ನು ಖಾಲಿ ಬಿಡುತ್ತೇನೆ. |
10:26 | ಟ್ಯಾಗ್ ಅನ್ನು ವಿಸ್ತರಿಸಲು ADDED ENTRY--PERSONAL NAME ಮೇಲೆ ಕ್ಲಿಕ್ ಮಾಡಿ. ಇದರಿಂದ ನಾವು ಸಬ್-ಫೀಲ್ಡ್ ಗಳನ್ನು ತುಂಬಬಹುದು. |
10:35 | ‘a' Personal name, ಎಂಬ ಸಬ್-ಫೀಲ್ಡ್ ನಲ್ಲಿ, ಸಂಪಾದಕರ (editor) ಹೆಸರನ್ನು ನಮೂದಿಸಿ. |
10:41 | ನಿಮ್ಮ ಪುಸ್ತಕ ಅಥವಾ ಸೀರಿಯಲ್ ನ ಸಂಪಾದಕರ ಹೆಸರನ್ನು ನೀವು ಟೈಪ್ ಮಾಡಬೇಕು. |
10:47 | ಮೊದಲು surname, ನಂತರ ಅಲ್ಪವಿರಾಮ ಚಿಹ್ನೆ, ಆಮೇಲೆ ಮೊದಲ ಹೆಸರನ್ನು ಬರೆಯಲು ನೆನಪಿಡಿ. |
10:54 | ಕೊನೆಯದಾಗಿ, 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 9 ರ ಮೇಲೆ ಕ್ಲಿಕ್ ಮಾಡಿ. |
11:00 | 942 ADDED ENTRY ELEMENTS (KOHA) ಗೆ ಹೋಗಿ. |
11:06 | ‘c’: Koha item type, ಎಂಬ ಸಬ್-ಫೀಲ್ಡ್ ಗೆ ಹೋಗಿ. ಡ್ರಾಪ್-ಡೌನ್ ನಿಂದ Serial ಅನ್ನು ಆಯ್ಕೆಮಾಡಿ. |
11:15 | ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಎಡಮೂಲೆಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ. |
11:22 | ನಾನು ಕೊಟ್ಟ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
11:26 | ನನ್ನ ಇಂಟರ್ಫೇಸ್ ನಲ್ಲಿ, ಇದು Items for Indian Journal of Microbiology ಎಂದಿದೆ. |
11:33 | ನಂತರ, Add item ಗಾಗಿ-
Date acquired , Source of acquisition, |
11:45 | Cost, normal purchase price, Barcode, Cost, replacement price etc. ಗಳಂತಹ ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುವುದು. |
11:54 | ನಾನು ನನ್ನ ಲೈಬ್ರರಿಗೆ ಅನುಗುಣವಾದ ಕೆಲವು ವಿವರಗಳನ್ನು ತುಂಬಿದ್ದೇನೆ. |
11:58 | ನೀವು ವೀಡಿಯೊವನ್ನು ತಾತ್ಕಾಲಿಕವಾಗಿ ನಿಲ್ಲಿಸಿ (pause), ನಿಮ್ಮ ಲೈಬ್ರರಿಯ ಬಗ್ಗೆ ವಿವರಗಳನ್ನು ತುಂಬಬಹುದು. |
12:04 | ದಿನಾಂಕವನ್ನು ತಂತಾನೇ ಆಯ್ಕೆಮಾಡಲು, Date acquired ಎಂಬ ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. ಆದಾಗ್ಯೂ, ದಿನಾಂಕವನ್ನು ಎಡಿಟ್ ಮಾಡಬಹುದು ಎಂದು ಗಮನಿಸಿ. |
12:15 | ಯಾವುದೇ ನಿರ್ದಿಷ್ಟ ಫೀಲ್ಡ್ ಗಾಗಿ ನೀವು ಮಾಹಿತಿಯನ್ನು ಹೊಂದಿರದಿದ್ದರೆ, ಅದನ್ನು ಹಾಗೇ ಖಾಲಿ ಬಿಡಿ. |
12:21 | ಡೀಫಾಲ್ಟ್ ಆಗಿ, ಕೋಹಾ - Permanent location, |
12:29 | Current location, Full call number ಮತ್ತು Koha item type ಗಳಿಗಾಗಿ ವಿವರಗಳನ್ನು ತುಂಬುತ್ತದೆ ಎಂಬುದನ್ನು ನೆನಪಿಡಿ. |
12:37 | ಇದರ ಜೊತೆಗೆ, ನೀವು ಪೇಜ್ ನ ಕೆಳಗಿರುವ - Add & Duplicate, |
12:43 | Add multiple copies of this item ಎಂಬ ಬಟನ್ ಗಳನ್ನು ಕ್ಲಿಕ್ ಮಾಡಬಹುದು. |
12:49 | ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Add item ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
12:56 | ನಮೂದಿಸಲಾದ ಜರ್ನಲ್ ನ ವಿವರಗಳೊಂದಿಗೆ, Items for Indian Journal of Microbiology ಎಂಬ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. |
13:05 | ಇದರೊಂದಿಗೆ, ನಾವು Indian Journal of Microbiology by Kalia, V.C. ಎಂಬ ಶೀರ್ಷಿಕೆಯ ಜರ್ನಲ್ ನ ದಾಖಲೆಗಳನ್ನು |
13:15 | ಲೈಬ್ರರಿಯ Biology ವಿಭಾಗಕ್ಕಾಗಿ, ಸೂಕ್ತವಾದ ವಿವರಗಳೊಂದಿಗೆ ಕ್ಯಾಟಲಾಗ್ ಮಾಡಿದ್ದೇವೆ. |
13:20 | ಈಗ, Koha ದಿಂದ ನೀವು ಲಾಗ್-ಔಟ್ ಮಾಡಬಹುದು. |
13:23 | Koha ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ. |
13:28 | Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ. |
13:35 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
13:38 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು, ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು (subscription) ಹೇಗೆ ಕ್ಯಾಟಲಾಗ್ ಮಾಡುವುದೆಂದು ಕಲಿತಿದ್ದೇವೆ. |
13:48 | ಅಸೈನ್ಮೆಂಟ್ –Journal of Molecular Biology ಯನ್ನು ಕ್ಯಾಟಲಾಗ್ ಮಾಡಿ. |
13:54 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:01 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. |
14:07 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:11 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
14:15 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. |
14:22 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
14:27 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |