Difference between revisions of "Health-and-Nutrition/C2/Breastfeeding-latching/Kannada"
From Script | Spoken-Tutorial
Sandhya.np14 (Talk | contribs) (Created page with "{| border =1 | <center>''' Time '''</center> | <center>'''Narration'''</center> |- | 00:02 | '''Breastfeeding Latching''' (ಬ್ರೆಸ್ಟ್ ಫೀಡಿಂಗ್...") |
|||
(3 intermediate revisions by one other user not shown) | |||
Line 13: | Line 13: | ||
| ನಾವು ಪ್ರಾರಂಭಿಸುವ ಮೊದಲು ದಯವಿಟ್ಟು ಗಮನಿಸಿ, ಪರಿಣಾಮಕಾರಿಯಾದ ಸ್ತನ್ಯಪಾನಕ್ಕಾಗಿ, ಸರಿಯಾಗಿ ಲ್ಯಾಚ್ ಮಾಡುವುದು (ಹೊಂದಿಸುವುದು) ಬಹಳ ಮುಖ್ಯವಾಗಿದೆ. | | ನಾವು ಪ್ರಾರಂಭಿಸುವ ಮೊದಲು ದಯವಿಟ್ಟು ಗಮನಿಸಿ, ಪರಿಣಾಮಕಾರಿಯಾದ ಸ್ತನ್ಯಪಾನಕ್ಕಾಗಿ, ಸರಿಯಾಗಿ ಲ್ಯಾಚ್ ಮಾಡುವುದು (ಹೊಂದಿಸುವುದು) ಬಹಳ ಮುಖ್ಯವಾಗಿದೆ. | ||
|- | |- | ||
− | | | + | | 00:29 |
| ಸ್ತನಕ್ಕೆ ಮಗುವಿನ ಬಾಯಿಯು ಸರಿಯಾಗಿ ಅಂಟಿಕೊಳ್ಳದಿದ್ದರೆ, ಆಗ ಅದು ಕೇವಲ ಮೊಲೆತೊಟ್ಟಿನಿಂದ ಹಾಲುಣಿಸುವುದಾಗುತ್ತದೆ. | | ಸ್ತನಕ್ಕೆ ಮಗುವಿನ ಬಾಯಿಯು ಸರಿಯಾಗಿ ಅಂಟಿಕೊಳ್ಳದಿದ್ದರೆ, ಆಗ ಅದು ಕೇವಲ ಮೊಲೆತೊಟ್ಟಿನಿಂದ ಹಾಲುಣಿಸುವುದಾಗುತ್ತದೆ. | ||
|- | |- | ||
Line 137: | Line 137: | ||
|- | |- | ||
| 05:13 | | 05:13 | ||
− | | ಇದು, ಮೊಲೆತೊಟ್ಟಿನಿಂದ | + | | ಇದು, ಮೊಲೆತೊಟ್ಟಿನಿಂದ ಹಾಲುಣಿಸುವಂತೆ ಮಾಡಬಹುದು. |
|- | |- | ||
| 05:16 | | 05:16 | ||
− | | ನೆನಪಿಡಿ, | + | | ನೆನಪಿಡಿ, ಹಾಲುಣಿಸುವಿಕೆಯು ತಾಯಿಗೆ ಆರಾಮದಾಯಕ ಆಗಿರಬೇಕು. |
|- | |- | ||
| 05:21 | | 05:21 | ||
Line 148: | Line 148: | ||
| ತಾಯಿಗೆ ಮೊಲೆಯುಣಿಸುವಾಗ ನೋವಾಗುತ್ತಿದ್ದರೆ ಬಹುಶಃ ಮಗುವು ಸರಿಯಾಗಿ ಅಂಟಿಕೊಂಡಿರಲಿಕ್ಕಿಲ್ಲ. | | ತಾಯಿಗೆ ಮೊಲೆಯುಣಿಸುವಾಗ ನೋವಾಗುತ್ತಿದ್ದರೆ ಬಹುಶಃ ಮಗುವು ಸರಿಯಾಗಿ ಅಂಟಿಕೊಂಡಿರಲಿಕ್ಕಿಲ್ಲ. | ||
|- | |- | ||
− | | | + | | 05:35 |
| ಸಾಧಾರಣ ಜೋಡಣೆಯ ಸಾಮಾನ್ಯ ಕಾರಣಗಳಲ್ಲಿ ಒಂದನ್ನು ನಾವು ನೋಡೋಣ. | | ಸಾಧಾರಣ ಜೋಡಣೆಯ ಸಾಮಾನ್ಯ ಕಾರಣಗಳಲ್ಲಿ ಒಂದನ್ನು ನಾವು ನೋಡೋಣ. | ||
|- | |- | ||
Line 221: | Line 221: | ||
|- | |- | ||
| 07:53 | | 07:53 | ||
− | | ಮಗು ಫೋರ್-ಮಿಲ್ಕ್ ಮತ್ತು ಹೈಂಡ್- ಮಿಲ್ಕ್ ಎರಡನ್ನೂ ಪಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ತಾಯಿಯು ಇನ್ನೊಂದು ಸ್ತನವನ್ನು ಕೊಡುವ ಮೊದಲು ಒಂದು ಸ್ತನದಿಂದ ಪೂರ್ತಿಯಾಗಿ ಮಗುವಿಗೆ | + | | ಮಗು ಫೋರ್-ಮಿಲ್ಕ್ ಮತ್ತು ಹೈಂಡ್- ಮಿಲ್ಕ್ ಎರಡನ್ನೂ ಪಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ತಾಯಿಯು ಇನ್ನೊಂದು ಸ್ತನವನ್ನು ಕೊಡುವ ಮೊದಲು ಒಂದು ಸ್ತನದಿಂದ ಪೂರ್ತಿಯಾಗಿ ಮಗುವಿಗೆ ಹಾಲುಣಿಸಬೇಕು. |
|- | |- | ||
| 08:05 | | 08:05 | ||
− | | ಮಗುವಿಗೆ ಒಂದು ಸ್ತನದಿಂದ ಸಂಪೂರ್ಣವಾಗಿ | + | | ಮಗುವಿಗೆ ಒಂದು ಸ್ತನದಿಂದ ಸಂಪೂರ್ಣವಾಗಿ ಹಾಲುಣಿಸಿದ್ದಾಳೆಯೆ ಎಂದು ಪರಿಶೀಲಿಸಲು, ತಾಯಿಯು ಆ ಸ್ತನದಿಂದ ತನ್ನ ಕೈಯಿಂದ ಹಾಲನ್ನು ಹಿಂಡಬೇಕು. |
|- | |- | ||
| 08:15 | | 08:15 | ||
Line 239: | Line 239: | ||
|- | |- | ||
| 08:35 | | 08:35 | ||
− | | ತಾಯಿಯು ಮಗುವಿಗೆ ಆ ಸ್ತನದಿಂದ ಸಂಪೂರ್ಣವಾಗಿ | + | | ತಾಯಿಯು ಮಗುವಿಗೆ ಆ ಸ್ತನದಿಂದ ಸಂಪೂರ್ಣವಾಗಿ ಹಾಲುಣಿಸಿದ್ದಾಳೆ ಎಂದು ಅರ್ಥ. |
|- | |- | ||
| 08:41 | | 08:41 | ||
Line 254: | Line 254: | ||
|- | |- | ||
| 09:14 | | 09:14 | ||
− | | ಮತ್ತು, | + | | ಮತ್ತು, ಹಾಲುಣಿಸುವಾಗ ಮಗು ತನ್ನ ಹೊಟ್ಟೆಯಲ್ಲಿ ಹೆಚ್ಚಿನ ಗಾಳಿಯನ್ನು ಒಳಗೆ ತೆಗೆದುಕೊಂಡಿಲ್ಲ. |
|- | |- | ||
| 09:21 | | 09:21 | ||
− | | ಮಗುವಿಗೆ ಈಗ ತಾಯಿಯು ತನ್ನ ಇನ್ನೊಂದು ಸ್ತನದಿಂದ | + | | ಮಗುವಿಗೆ ಈಗ ತಾಯಿಯು ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕು. |
|- | |- | ||
| 09:26 | | 09:26 | ||
Line 281: | Line 281: | ||
|- | |- | ||
| 10:12 | | 10:12 | ||
− | | ತಾಯಿಯು ತನ್ನ ಮಗುವಿಗೆ 24 ಗಂಟೆಗಳಲ್ಲಿ ಕನಿಷ್ಠ 12 ಬಾರಿ | + | | ತಾಯಿಯು ತನ್ನ ಮಗುವಿಗೆ 24 ಗಂಟೆಗಳಲ್ಲಿ ಕನಿಷ್ಠ 12 ಬಾರಿ ಹಾಲುಣಿಸಬೇಕು. |
|- | |- | ||
| 10:17 | | 10:17 | ||
− | | ಇದರಲ್ಲಿ ಅವಳು 2 ರಿಂದ 3 ಸಲವಾದರೂ ರಾತ್ರಿಯಲ್ಲಿ | + | | ಇದರಲ್ಲಿ ಅವಳು 2 ರಿಂದ 3 ಸಲವಾದರೂ ರಾತ್ರಿಯಲ್ಲಿ ಹಾಲುಣಿಸಬೇಕು. |
|- | |- | ||
| 10:24 | | 10:24 | ||
Line 305: | Line 305: | ||
|- | |- | ||
| 11:05 | | 11:05 | ||
− | | ಅಲ್ಲದೆ, ಮಗುವಿಗೆ ಹೆಚ್ಚು ಸಲ | + | | ಅಲ್ಲದೆ, ಮಗುವಿಗೆ ಹೆಚ್ಚು ಸಲ ಹಾಲುಣಿಸಿದಾಗ ತಾಯಿಯ ಎದೆಹಾಲಿನ ಉತ್ಪಾದನೆಯು ಹೆಚ್ಚಾಗುತ್ತದೆ. |
|- | |- | ||
| 11:12 | | 11:12 | ||
− | | ಆದ್ದರಿಂದ, ಇಂತಹ ಶೀಘ್ರ ಬೆಳವಣಿಗೆಯ ಅವಧಿಗಳಲ್ಲಿ ತಾಯಿಯು ಮೆಲಿಂದ ಮೇಲೆ | + | | ಆದ್ದರಿಂದ, ಇಂತಹ ಶೀಘ್ರ ಬೆಳವಣಿಗೆಯ ಅವಧಿಗಳಲ್ಲಿ ತಾಯಿಯು ಮೆಲಿಂದ ಮೇಲೆ ಹಾಲುಣಿಸಬೇಕು. |
|- | |- | ||
| 11:19 | | 11:19 | ||
Line 319: | Line 319: | ||
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
|- | |- | ||
− | | 11: | + | | 11:39 |
− | + | |ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ. | |
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | | ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ. | + | |
ಧನ್ಯವಾದಗಳು. | ಧನ್ಯವಾದಗಳು. | ||
+ | |- | ||
|} | |} |
Latest revision as of 11:56, 27 August 2020
|
|
00:02 | Breastfeeding Latching (ಬ್ರೆಸ್ಟ್ ಫೀಡಿಂಗ್ ಲ್ಯಾಚಿಂಗ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ಮಗು ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು ಬೇಕಾಗಿರುವ ಸರಿಯಾದ ಲ್ಯಾಚಿಂಗ್ ತಂತ್ರ ಮತ್ತು ದಿನದಲ್ಲಿ ಎಷ್ಟು ಸಲ ಹಾಲುಣಿಸಬೇಕು ಇವುಗಳ ಬಗ್ಗೆ ನಾವು ಕಲಿಯಲಿದ್ದೇವೆ. |
00:20 | ನಾವು ಪ್ರಾರಂಭಿಸುವ ಮೊದಲು ದಯವಿಟ್ಟು ಗಮನಿಸಿ, ಪರಿಣಾಮಕಾರಿಯಾದ ಸ್ತನ್ಯಪಾನಕ್ಕಾಗಿ, ಸರಿಯಾಗಿ ಲ್ಯಾಚ್ ಮಾಡುವುದು (ಹೊಂದಿಸುವುದು) ಬಹಳ ಮುಖ್ಯವಾಗಿದೆ. |
00:29 | ಸ್ತನಕ್ಕೆ ಮಗುವಿನ ಬಾಯಿಯು ಸರಿಯಾಗಿ ಅಂಟಿಕೊಳ್ಳದಿದ್ದರೆ, ಆಗ ಅದು ಕೇವಲ ಮೊಲೆತೊಟ್ಟಿನಿಂದ ಹಾಲುಣಿಸುವುದಾಗುತ್ತದೆ. |
00:36 | ಇದು ಮಗುವಿಗೆ ಬಹಳ ಕಡಿಮೆ ಹಾಲು ಕೊಡುತ್ತದೆ. |
00:40 | ಆದರೆ, ಸ್ತನದ ಅರಿಯೋಲಾದ ಕೆಳಗಿನ ಭಾಗಕ್ಕೆ ಮಗುವಿನ ಗಟ್ಟಿಯಾದ ಅಂಟಿಕೊಳ್ಳುವಿಕೆಯು ಮಗುವಿಗೆ ಸಾಕಷ್ಟು ಹಾಲು ಕೊಡುತ್ತದೆ. |
00:50 | ದಯವಿಟ್ಟು ಗಮನಿಸಿ, ಅರಿಯೋಲಾ ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
00:56 | ಈಗ ನಾವು ವಿವರಿಸೋಣ. ಮೊದಲಿಗೆ, ತಾಯಿಯು ತನ್ನ ಮಗುವನ್ನು ಸೂಕ್ತವಾದ ಹಾಲುಣಿಸುವ ಪದ್ಧತಿಯಲ್ಲಿ (ಹಿಡಿತ) ಹಿಡಿದುಕೊಳ್ಳಬೇಕು. |
01:05 | ಈ ಹಿಡಿತಗಳ ಬಗ್ಗೆ ಇದೇ ಸರಣಿಯ ಇತರ ವೀಡಿಯೊಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. |
01:11 | 'ಕ್ರಾಸ್ ಕ್ರೇಡಲ್ ಹೋಲ್ಡ್' ಅನ್ನು ಬಳಸಿ, ಈ ಟ್ಯುಟೋರಿಯಲ್ ಅನ್ನು ವಿವರಿಸಲಾಗುತ್ತದೆ. |
01:16 | ನೆನಪಿಡಿ - ಶಿಶುವನ್ನು ಸರಿಯಾಗಿ ಹಿಡಿದುಕೊಳ್ಳುವುದು, ಸಫಲವಾದ ಲ್ಯಾಚಿಂಗ್ ಮತ್ತು ಹಾಲುಣಿಸುವುದಕ್ಕೆ ಅಗತ್ಯವಾಗಿದೆ. |
01:24 | ಈ ಚಿತ್ರದಲ್ಲಿ, ತಾಯಿಯು ಮಗುವನ್ನು “ಕ್ರಾಸ್ ಕ್ರೇಡಲ್ ಹೋಲ್ಡ್” ನಲ್ಲಿ ಸರಿಯಾಗಿ ಹಿಡಿದುಕೊಂಡಿದ್ದಾಳೆ. |
01:31 | ಮತ್ತು, ಮಗು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ. |
01:35 | ಲ್ಯಾಚ್ ಮಾಡುವ ಮೊದಲು, ಮಗು ತನ್ನ ಬಾಯಿಯನ್ನು ಆಕಳಿಸುತ್ತಿರುವಂತೆ ಅಗಲವಾಗಿ ತೆರೆಯುವುದು ಮುಖ್ಯವಾಗಿದೆ. |
01:42 | ಯಾಕೆ? ವಡಾ- ಪಾವ್ ಅಥವಾ ಬರ್ಗರ್ ತಿನ್ನುವ ಒಬ್ಬ ವಯಸ್ಕನ ಉದಾಹರಣೆಯ ಮೂಲಕ ಇದನ್ನು ನಾವು ಅರ್ಥಮಾಡಿಕೊಳ್ಳೋಣ. |
01:49 | ವಡಾ- ಪಾವ್ ಅಥವಾ ಬರ್ಗರ್ ನ ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ನಮ್ಮ ಬಾಯಿಯನ್ನು ಅಗಲವಾಗಿ ತೆರೆಯುತ್ತೇವೆ. |
01:56 | ಹಾಗೆಯೇ, ಅಗಲವಾಗಿ ತೆರೆದ ಬಾಯಿಯು ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಮಗುವಿಗೆ ಸಹಾಯ ಮಾಡುತ್ತದೆ. |
02:04 | ಅಗಲವಾಗಿ ತನ್ನ ಬಾಯಿ ತೆರೆಯುವಂತೆ ಮಗುವನ್ನು ಪ್ರೋತ್ಸಾಹಿಸಲು- ಮಗು ಬಾಯಿಯನ್ನು ಅಗಲವಾಗಿ ತೆರೆಯುವವರೆಗೆ, ತಾಯಿಯು ತನ್ನ ಮೊಲೆತೊಟ್ಟನ್ನು ಮಗುವಿನ ಮೇಲಿನ ತುಟಿಗೆ ಲಘುವಾಗಿ ಉಜ್ಜಬೇಕು. |
02:16 | ತಾಳ್ಮೆಯಿಂದಿರಿ. ಕೆಲವೊಮ್ಮೆ, ಬಾಯಿಯನ್ನು ಅಗಲವಾಗಿ ತೆರೆಯಲು ಮಗುವಿಗೆ ಕೆಲವು ಸೆಕೆಂಡುಗಳಿಂದ 2 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು. |
02:25 | ನೆನಪಿನಲ್ಲಿಡಿ: ಸ್ತನ್ಯಪಾನಕ್ಕಾಗಿ ಮಗುವನ್ನು ಹೇಗೆ ಹಿಡಿದಿದ್ದರೂ, ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು ಮತ್ತು ಹೆಬ್ಬೆರಳು ಯಾವಾಗಲೂ ಮಗುವಿನ ತುಟಿಗಳಿಗೆ ಸಮಾನಾಂತರವಾಗಿರಬೇಕು. |
02:36 | ಮಗು ತನ್ನ ಬಾಯಿಯನ್ನು ಅಗಲವಾಗಿ ತೆರೆದಾಗ, ಅದರ ಕೆಳತುಟಿಯು ಅರಿಯೋಲಾದ ಅಡಿಯಲ್ಲಿ ಇರಬೇಕು. |
02:43 | ಮತ್ತು, ಮೊಲೆತೊಟ್ಟು ಮಗುವಿನ ಬಾಯಿಯ ಮೇಲ್ಭಾಗದತ್ತ ಇರಬೇಕು, ಆದರೆ ಬಾಯಿಯ ಮಧ್ಯಭಾಗದೆಡೆಗೆ ಅಲ್ಲ. |
02:50 | ಈಗ, ತಾಯಿಯು ಶೀಘ್ರವಾಗಿ ಮಗುವಿನ ಬಾಯಿಯಲ್ಲಿ ತನ್ನ ಸ್ತನವನ್ನು ಇರಿಸಬೇಕು. |
02:55 | ಮಗುವಿನ ತಲೆಯನ್ನು ಹೊರಮುಖವಾಗಿ ಸ್ವಲ್ಪ ಬಾಗಿಸುವ ಮೂಲಕ ಮೊದಲು ಅವಳು ಮಗುವಿನ ಗದ್ದವನ್ನು ಸ್ತನದತ್ತ ನೂಕಬೇಕು. |
03:02 | ಮಗುವಿನ ಬಾಯಿಯನ್ನು ತಲುಪಲು, ಆಕೆಯು ತನ್ನ ಬೆನ್ನನ್ನು ಬಾಗಿಸಬಾರದು ಅಥವಾ ತನ್ನ ಸ್ತನವನ್ನು ನೂಕಬಾರದು. |
03:08 | ಶಿಶುವಿನ ಭುಜದ ಹಿಂಭಾಗದಲ್ಲಿ ಮೃದುವಾಗಿ ತಳ್ಳುವ ಮೂಲಕ, ಮಗುವನ್ನು ಸ್ತನದೆಡೆಗೆ ತರಬೇಕು. |
03:15 | ಲ್ಯಾಚಿಂಗ್ ನಲ್ಲಿರುವ ಅತಿ ಮುಖ್ಯ ಅಂಶವೆಂದರೆ, ತಾಯಿಯ ಅರಿಯೋಲಾದ ಕೆಳಭಾಗವು ಮಗುವಿನ ಬಾಯಿಯಲ್ಲಿ ಇರಬೇಕು. |
03:25 | ಇದು, ಮೊಲೆತೊಟ್ಟು ಮಗುವಿನ ಬಾಯಿಯಲ್ಲಿ ಆರಾಮವಾಗಿರುವ ಪ್ರದೇಶವನ್ನು ತಲುಪಲು ಸಹಾಯ ಮಾಡುತ್ತದೆ. |
03:31 | ಮಗು ತನ್ನ ಕೆಳತುಟಿಯ ಹತ್ತಿರದ ಅರಿಯೋಲಾದ ಭಾಗವನ್ನು ತನ್ನ ನಾಲಿಗೆಯಿಂದ ಒತ್ತುತ್ತಿರಬೇಕು. |
03:37 | ಇದು ದೊಡ್ಡ ಹಾಲಿನ ನಾಳಗಳನ್ನು ಒತ್ತುತ್ತದೆ ಮತ್ತು ಹೆಚ್ಚು ಹಾಲು ಹೊರಬರುತ್ತದೆ. |
03:42 | ನಂತರ ಮಗುವನ್ನು ಸ್ತನಕ್ಕೆ ಗಟ್ಟಿಯಾಗಿ ಹಿಡಿದುಕೊಂಡಿದೆಯೆ ಎಂದು ಪರಿಶೀಲಿಸಬೇಕು. |
03:48 | ಗಟ್ಟಿಯಾಗಿ ಜೋಡಿಸಿರುವುದನ್ನು ಖಚಿತಪಡಿಸಿಕೊಳ್ಳಲು, ತಾಯಿಯು ಕೆಳಗಿನವುಗಳನ್ನು ನೋಡಬೇಕು: |
03:54 | ಮಗುವಿನ ಬಾಯಿಯು ಅಗಲವಾಗಿ ತೆರೆದುಕೊಂಡಿದೆ, |
03:57 | ಮಗುವಿನ ಮೇಲಿನ ತುಟಿಯ ಹತ್ತಿರ ಕಾಣುವ ಅರಿಯೋಲಾದ ಭಾಗವು, ಮಗುವಿನ ಕೆಳ ತುಟಿಯ ಹತ್ತಿರ ಕಾಣಿಸುವದಕ್ಕಿಂತ ಹೆಚ್ಚಾಗಿದೆ. |
04:06 | ಮಗುವಿನ ಕೆಳಗಿನ ಗದ್ದವನ್ನು ತಾಯಿಯ ಸ್ತನವು ಸಂಪೂರ್ಣವಾಗಿ ಆವರಿಸಿದೆ. |
04:11 | ಮಗುವಿನ ದವಡೆಯು, ಅದು ಹಾಲು ನುಂಗುತ್ತಿದ್ದಂತೆ ಸ್ಫುಟವಾಗಿ ಕೆಳಗೆ ಇಳಿಯುತ್ತದೆ. |
04:16 | ಮತ್ತು, ಮಗುವಿನ ಕೆಳತುಟಿಯು ಹೊರಮುಖವಾಗಿ ತಿರುಚಿಕೊಂಡಿದೆ. |
04:22 | ಚೆನ್ನಾಗಿ ಜೋಡಿಸಿಕೊಂಡ ಮಗುವಿನಲ್ಲಿ, ಇದು ಹೆಚ್ಚಾಗಿ ಸ್ತನದಲ್ಲಿ ಮರೆಯಾಗಿರುತ್ತದೆ. |
04:28 | ಅಂತಹ ಸಂದರ್ಭಗಳಲ್ಲಿ, ಮಗುವಿನ ಕೆಳತುಟಿಯ ಹತ್ತಿರದ ಸ್ತನವನ್ನು ಮೆತ್ತಗೆ ಒತ್ತಿ. ಮತ್ತು, ಮಗುವಿನ ಕೆಳತುಟಿಯು ಹೊರಮುಖವಾಗಿ ಬಾಗಿಕೊಂಡಿದೆಯೆ ಎಂದು ಪರಿಶೀಲಿಸಿ. |
04:41 | ನಂತರ, ಮಗುವಿನ ಮೂಗನ್ನು ನೋಡಿ. ಮಗುವಿನ ಮೂಗು ತಾಯಿಯ ಸ್ತನಕ್ಕೆ ಒತ್ತಿದ್ದರೆ, ಆಗ - |
04:49 | ಮಗುವಿನ ಗದ್ದವು ತನ್ನ ಸ್ತನದಲ್ಲಿ ಇನ್ನಷ್ಟು ಒಳಗೆ ನೂಕುವಂತೆ, ತಾಯಿಯು ಮಗುವಿನ ತಲೆಯನ್ನು ಸ್ವಲ್ಪ ಹೊರಕ್ಕೆ ಬಾಗಿಸಬಹುದು. |
04:58 | ಮತ್ತು ಮಗುವಿನ ಮೂಗು ಹಾಗೂ ಹಣೆಯನ್ನು ಸ್ತನದಿಂದ ದೂರ ಸರಿಸಲಾಗುತ್ತದೆ. |
05:04 | ಹೀಗೆ ಮಾಡುವುದರಿಂದ, ಸ್ತನಕ್ಕೆ ಮಗುವಿನ ಜೋಡಣೆಯನ್ನು ಬಲವಾಗಿಸುತ್ತದೆ. |
05:09 | ಮಗುವಿನ ಪೂರ್ತಿ ಮುಖವನ್ನು ಸ್ತನದಿಂದ ದೂರ ಸರಿಸಬೇಡಿ. |
05:13 | ಇದು, ಮೊಲೆತೊಟ್ಟಿನಿಂದ ಹಾಲುಣಿಸುವಂತೆ ಮಾಡಬಹುದು. |
05:16 | ನೆನಪಿಡಿ, ಹಾಲುಣಿಸುವಿಕೆಯು ತಾಯಿಗೆ ಆರಾಮದಾಯಕ ಆಗಿರಬೇಕು. |
05:21 | ಅವಳಿಗೆ ಮೊಲೆತೊಟ್ಟಿನ ಮೇಲೆ ಚಿವುಟಿದ, ಎಳೆದ ಅಥವಾ ಉಜ್ಜಿದ ಭಾವನೆ ಬರಬಾರದು. |
05:27 | ತಾಯಿಗೆ ಮೊಲೆಯುಣಿಸುವಾಗ ನೋವಾಗುತ್ತಿದ್ದರೆ ಬಹುಶಃ ಮಗುವು ಸರಿಯಾಗಿ ಅಂಟಿಕೊಂಡಿರಲಿಕ್ಕಿಲ್ಲ. |
05:35 | ಸಾಧಾರಣ ಜೋಡಣೆಯ ಸಾಮಾನ್ಯ ಕಾರಣಗಳಲ್ಲಿ ಒಂದನ್ನು ನಾವು ನೋಡೋಣ. |
05:40 | ಅನೇಕ ತಾಯಂದಿರು ಮೊಲೆತೊಟ್ಟನ್ನು ಮಾತ್ರ ಮಗುವಿನ ಬಾಯಿಯಲ್ಲಿ ಇಡಲು, ತಮ್ಮ ಅರಿಯೋಲಾವನ್ನು ಒತ್ತಿ ಹಿಡಿಯುತ್ತಾರೆ. |
05:48 | ಇಲ್ಲಿ, ಮಗುವಿನ ಬಾಯಿಯು ಅಗಲವಾಗಿ ತೆರೆದಿಲ್ಲ. |
05:52 | ಮಗು ಮೊಲೆತೊಟ್ಟಿಗೆ ಮಾತ್ರ ಅಂಟಿಕೊಳ್ಳುತ್ತದೆ. |
05:56 | ಇಲ್ಲಿ, ಮಗುವಿನ ಮೇಲಿನ ಮತ್ತು ಕೆಳತುಟಿಗಳ ಹತ್ತಿರ ಅರಿಯೋಲಾದ ಸಮನಾದ ಭಾಗವು ಕಂಡುಬರುತ್ತದೆ. |
06:04 | ಮಗುವಿನ ಗದ್ದವು ಸ್ತನದಿಂದ ದೂರವಿದೆ. |
06:07 | ಮಗು ನಿರಂತರವಾಗಿ, ಬೇಗನೆ ಹಾಲು ಕುಡಿಯುವ ರೀತಿಯನ್ನು ಹೊಂದಿದೆ. |
06:14 | ಹೀರಿಕೊಳ್ಳುವಾಗ, ಮಗುವಿನ ಕೆನ್ನೆಗಳಲ್ಲಿ ಗುಳಿ ಬರುತ್ತದೆ. |
06:17 | ಹಾಲು ನುಂಗುತ್ತಿರುವಾಗ ಮಗುವಿನ ದವಡೆಯು ಸ್ಫುಟವಾಗಿ ಇಳಿಯುವುದಿಲ್ಲ. |
06:23 | ಮತ್ತು, ಮಗುವಿನ ಬಾಯಿಯ ಬಿರುಸಾದ ಭಾಗದಲ್ಲಿ ಮೊಲೆತೊಟ್ಟನ್ನು ಜಿಗುಟಿದಂತೆ ಹಾಗು ಒತ್ತಿದಂತೆ ಆಗುತ್ತದೆ. |
06:31 | ಇದು ತಾಯಿಗೆ ನೋವುಂಟುಮಾಡುತ್ತದೆ ಮತ್ತು ಮೊಲೆತೊಟ್ಟನ್ನು ಗಾಯಗೊಳಿಸಬಹುದು. |
06:37 | ಅಲ್ಲದೆ, ಮೊಲೆತೊಟ್ಟಿನಿಂದ ಹಾಲುಣಿಸುವಾಗ, ಅರಿಯೋಲಾದ ಕೆಳಗಿರುವ ದೊಡ್ಡ ಹಾಲಿನ ನಾಳಗಳಿಂದ ಮಗುವಿಗೆ ಹಾಲು ಸಿಗಲು ಸಾಧ್ಯವಿಲ್ಲ. |
06:45 | ಆದ್ದರಿಂದ, ಮಗುವಿಗೆ ಸಾಕಷ್ಟು ಹಾಲು ಸಿಗುವುದಿಲ್ಲ. |
06:50 | ಮಗುವು ಮೊಲೆತೊಟ್ಟಿನಿಂದ ಮಾತ್ರ ಹೀರುತ್ತಿದ್ದರೆ, ಆಗ |
06:54 | ಮಗುವಿನ ಬಾಯಿಯ ಮೂಲೆಯೊಳಗೆ ತಾಯಿಯು ತನ್ನ ಸ್ವಚ್ಛವಿರುವ ಕಿರುಬೆರಳನ್ನು ಹಾಕಬೇಕು. |
06:59 | ತನ್ನ ಮೊಲೆತೊಟ್ಟಿನ ಮೇಲಿನ ಮಗುವಿನ ಎಳೆತವನ್ನು ಬಿಡುಗಡೆ ಮಾಡಲು ಅವಳು ಅದನ್ನು ಬಳಸಬೇಕು. |
07:04 | ನಂತರ, ಆಕೆಯು ಮಗುವನ್ನು ಮತ್ತೆ ಅದೇ ಸ್ತನದ ಮೇಲೆ ಜೋಡಿಸಬೇಕು ಹಾಗೂ ಸರಿಯಾದ ಲ್ಯಾಚ್ ಅನ್ನು ಖಚಿತಪಡಿಸಿಕೊಳ್ಳಬೇಕು. |
07:11 | ಸರಿಯಾದ ಲ್ಯಾಚಿಂಗ್ ನ ನಂತರ, ಮಗು ಫೋರ್-ಮಿಲ್ಕ್ ಮತ್ತು ಹೈಂಡ್- ಮಿಲ್ಕ್ ಗಳನ್ನು ಸಾಕಷ್ಟು ಪಡೆಯುತ್ತಿದೆ ಎಂದು ತಾಯಿಯು ಖಚಿತಪಡಿಸಿಕೊಳ್ಳಬೇಕು. |
07:19 | ಫೋರ್- ಮಿಲ್ಕ್ ಎಂದರೆ ಸ್ತನದ ಮುಂಭಾಗದಲ್ಲಿ ಸಂಗ್ರಹವಾಗಿರುವ ನೀರಿನಂತಹ ಹಾಲು. |
07:25 | ಇದು ನೀರು ಮತ್ತು ಪ್ರೋಟೀನ್ ನಿಂದ ಮಾಡಲ್ಪಟ್ಟಿದೆ. |
07:29 | ಇದು ಮಗುವಿನ ಬೆಳವಣಿಗೆಗೆ ಮತ್ತು ಮಗುವನ್ನು ಬಲಶಾಲಿಯಾಗಿಸಲು ಅಗತ್ಯವಿರುತ್ತದೆ. |
07:36 | ಹೈಂಡ್ – ಮಿಲ್ಕ್, ಸ್ತನದ ಹಿಂಭಾಗದಲ್ಲಿ ಸಂಗ್ರಹವಾಗಿರುವ ಗಟ್ಟಿಯಾದ ಹಾಲು. |
07:42 | ಇದು ಮುಖ್ಯವಾಗಿ ಕೊಬ್ಬಿನಿಂದ ಮಾಡಲ್ಪಟ್ಟಿದೆ. |
07:46 | ಮಗುವಿನ ಮಿದುಳಿನ ಬೆಳವಣಿಗೆ ಮತ್ತು ತೂಕ ಹೆಚ್ಚಾಗಲು ಇದು ಅಗತ್ಯವಾಗಿದೆ. |
07:53 | ಮಗು ಫೋರ್-ಮಿಲ್ಕ್ ಮತ್ತು ಹೈಂಡ್- ಮಿಲ್ಕ್ ಎರಡನ್ನೂ ಪಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ತಾಯಿಯು ಇನ್ನೊಂದು ಸ್ತನವನ್ನು ಕೊಡುವ ಮೊದಲು ಒಂದು ಸ್ತನದಿಂದ ಪೂರ್ತಿಯಾಗಿ ಮಗುವಿಗೆ ಹಾಲುಣಿಸಬೇಕು. |
08:05 | ಮಗುವಿಗೆ ಒಂದು ಸ್ತನದಿಂದ ಸಂಪೂರ್ಣವಾಗಿ ಹಾಲುಣಿಸಿದ್ದಾಳೆಯೆ ಎಂದು ಪರಿಶೀಲಿಸಲು, ತಾಯಿಯು ಆ ಸ್ತನದಿಂದ ತನ್ನ ಕೈಯಿಂದ ಹಾಲನ್ನು ಹಿಂಡಬೇಕು. |
08:15 | ತೆಳುವಾದ ನೀರಿನಂತಹ ಹಾಲು ಸ್ತನದಿಂದ ಹೊರಬಂದರೆ, |
08:19 | ಅಥವಾ, ಹಿಂಡಿದಾಗ ಗಟ್ಟಿಯಾದ ಹೈಂಡ್ – ಮಿಲ್ಕ್ ನ ಉತ್ತಮ ಹರಿವು ಇದ್ದರೆ, |
08:24 | ಆಗ, ತಾಯಿಯು ತನ್ನ ಮಗುವನ್ನು ಅದೇ ಸ್ತನಕ್ಕೆ ಮತ್ತೆ ಹಿಡಿದುಕೊಳ್ಳಬೇಕು. |
08:29 | ಕೈಯಿಂದ ಹಿಂಡಿದಾಗ, ಗಟ್ಟಿಯಾದ ಹೈಂಡ್ – ಮಿಲ್ಕ್ ನ ಹರಿವು ಕಡಿಮೆಯಾಗಿ ಕೆಲವು ಹನಿಗಳಷ್ಟು ಮಾತ್ರ ಆದಾಗ, |
08:35 | ತಾಯಿಯು ಮಗುವಿಗೆ ಆ ಸ್ತನದಿಂದ ಸಂಪೂರ್ಣವಾಗಿ ಹಾಲುಣಿಸಿದ್ದಾಳೆ ಎಂದು ಅರ್ಥ. |
08:41 | ಆದರೆ, ಇನ್ನೊಂದು ಸ್ತನವನ್ನು ಕೊಡುವ ಮೊದಲು, ತಾಯಿಯು ಮಗುವನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ನಂತರ ಮಗುವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ಮತ್ತು ಮಗುವಿನ ದವಡೆಯನ್ನು ತನ್ನ ಕೈಯಿಂದ ಬಟ್ಟಲಿನಂತೆ ಮಾಡಿ, ತೇಗುವಂತೆ ಪ್ರೋತ್ಸಾಹಿಸಬೇಕು. |
09:00 | ಮಗು 2 ರಿಂದ 3 ನಿಮಿಷಗಳೊಳಗೆ ತೇಗಬೇಕು. |
09:04 | ಮುಂದಿನ 5 ನಿಮಿಷಗಳಲ್ಲಿ ತೇಗು ಬರದಿದ್ದರೆ, |
09:08 | ಮಗು ಸ್ತನಕ್ಕೆ ಬಹಳ ಚೆನ್ನಾಗಿ ಜೋಡಿಸಿಕೊಂಡಿತ್ತು ಎಂದು ಅದರ ಅರ್ಥ. |
09:14 | ಮತ್ತು, ಹಾಲುಣಿಸುವಾಗ ಮಗು ತನ್ನ ಹೊಟ್ಟೆಯಲ್ಲಿ ಹೆಚ್ಚಿನ ಗಾಳಿಯನ್ನು ಒಳಗೆ ತೆಗೆದುಕೊಂಡಿಲ್ಲ. |
09:21 | ಮಗುವಿಗೆ ಈಗ ತಾಯಿಯು ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕು. |
09:26 | ಮಗುವಿನ ಹೊಟ್ಟೆಯು ತುಂಬಿದ್ದರೆ, ಅದು ಇನ್ನೊಂದು ಸ್ತನದಿಂದ ಹಾಲು ಕುಡಿಯುವುದಿಲ್ಲ. |
09:32 | ಆದರೆ ತಾಯಿಯು ಮಗುವಿಗೆ ಯಾವಾಗಲೂ ಎರಡೂ ಸ್ತನಗಳನ್ನು ಹಾಲೂಡಲು ಕೊಡಬೇಕು. |
09:39 | ಅವಳು ನಿರ್ಧಾರ ಮಾಡುವುದನ್ನು ಮಗುವಿಗೇ ಬಿಡಬೇಕು. |
09:45 | ಸ್ತನ್ಯಪಾನ ಮಾಡುವಾಗ ಮಗು ನಿದ್ದೆ ಹೋದರೆ, ಮಗುವಿನ ಅಂಗಾಲುಗಳನ್ನು ಮೆತ್ತಗೆ ತಟ್ಟುವುದರ ಮೂಲಕ, |
09:55 | ಅಥವಾ ಮಗುವಿನ ಬೆನ್ನಿಗೆ ಮೆತ್ತಗೆ ಕಚಗುಳಿ ಇಟ್ಟು |
09:59 | ಅಥವಾ, ತೇಗಲು ತೋರಿಸಿದ ಸ್ಥಿತಿಯಲ್ಲಿ ಮಗುವನ್ನು ಕುಳಿತುಕೊಳ್ಳುವಂತೆ ಮಾಡಿ ತಾಯಿಯು ಮಗುವನ್ನು ಎಚ್ಚರಗೊಳಿಸಬೇಕು. |
10:04 | ಸರಿಯಾದ ತಂತ್ರದ ಜೊತೆಗೆ, ದಿನದಲ್ಲಿ ಎಷ್ಟು ಸಲ ಹಾಲುಣಿಸಬೇಕು ಎನ್ನುವುದು ಸಹ ಮುಖ್ಯವಾಗಿದೆ. |
10:12 | ತಾಯಿಯು ತನ್ನ ಮಗುವಿಗೆ 24 ಗಂಟೆಗಳಲ್ಲಿ ಕನಿಷ್ಠ 12 ಬಾರಿ ಹಾಲುಣಿಸಬೇಕು. |
10:17 | ಇದರಲ್ಲಿ ಅವಳು 2 ರಿಂದ 3 ಸಲವಾದರೂ ರಾತ್ರಿಯಲ್ಲಿ ಹಾಲುಣಿಸಬೇಕು. |
10:24 | ತಾಯಿಯು ಮಗುವಿಗೆ ಎದೆಹಾಲು ಕೊಡಲು: ಮಗು ಅಲುಗಾಡುವುದು, |
10:32 | ಬಾಯಿ ತೆಗೆಯುವುದು, ತಲೆಯನ್ನು ತಿರುಗಿಸುವುದು, ತನ್ನ ಕೈಯನ್ನು ಬಾಯಿಗೆ ತರುವುದು, |
10:37 | ಬೆರಳುಗಳನ್ನು ಚೀಪುವುದು ಮತ್ತು ತನ್ನ ಶರೀರವನ್ನು ಹಿಗ್ಗಿಸುವುದು ಮುಂತಾದ ಹಸಿವಿನ ಸೂಚನೆಗಳನ್ನು ಗಮನಿಸಬೇಕು. |
10:42 | ಮಗು ಎದೆಹಾಲಿಗಾಗಿ ಅಳುವುದಕ್ಕೆ ಪ್ರಾರಂಭಿಸಿದಲ್ಲಿ, ಆಗ ತುಂಬಾ ತಡವಾಗಿದೆ ಎಂದು ಅದರ ಅರ್ಥ. |
10:49 | ದಯವಿಟ್ಟು ಗಮನಿಸಿ - 2 ವಾರಗಳು, 6 ವಾರಗಳು ಮತ್ತು 3 ತಿಂಗಳ ವಯಸ್ಸಿನ ಮಗುವಿನ ಬೆಳವಣಿಗೆಯಲ್ಲಿ ಶೀಘ್ರ ಹೆಚ್ಚಳವಿದೆ. |
10:59 | ಮತ್ತು ಮಗುವಿಗೆ ಹೆಚ್ಚು ಹಾಲು ಬೇಕಾಗುತ್ತದೆ. |
11:05 | ಅಲ್ಲದೆ, ಮಗುವಿಗೆ ಹೆಚ್ಚು ಸಲ ಹಾಲುಣಿಸಿದಾಗ ತಾಯಿಯ ಎದೆಹಾಲಿನ ಉತ್ಪಾದನೆಯು ಹೆಚ್ಚಾಗುತ್ತದೆ. |
11:12 | ಆದ್ದರಿಂದ, ಇಂತಹ ಶೀಘ್ರ ಬೆಳವಣಿಗೆಯ ಅವಧಿಗಳಲ್ಲಿ ತಾಯಿಯು ಮೆಲಿಂದ ಮೇಲೆ ಹಾಲುಣಿಸಬೇಕು. |
11:19 | ನೆನಪಿಡಿ, ಮೊದಲ ಆರು ತಿಂಗಳುಗಳ ಕಾಲ ಮಗುವಿಗಾಗಿ ಎದೆಹಾಲು ಉತ್ತಮ ಪೋಷಕಾಂಶವಾಗಿದೆ. |
11:30 | ಮತ್ತು, ಉತ್ತಮವಾದ ಜೋಡಣೆಯು ಯಶಸ್ವಿಯಾದ ಸ್ತನ್ಯಪಾನಕ್ಕೆ ಅತ್ಯವಶ್ಯವಾಗಿದೆ. |
11:36 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:39 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
ಧನ್ಯವಾದಗಳು. |