Difference between revisions of "PERL/C3/Perl-and-HTML/Kannada"

From Script | Spoken-Tutorial
Jump to: navigation, search
 
Line 31: Line 31:
 
|-
 
|-
 
| 00:40
 
| 00:40
| ಇಲ್ಲದಿದ್ದರೆ, ಸಂಬಂಧಿತ '' Perl''' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, '''Spoken Tutorial''' ವೆಬ್ಸೈಟ್ ನ ಮೇಲೆ ನೋಡಿ.
+
| ಇಲ್ಲದಿದ್ದರೆ, ಸಂಬಂಧಿತ ''' Perl''' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, '''Spoken Tutorial''' ವೆಬ್ಸೈಟ್ ನ ಮೇಲೆ ನೋಡಿ.
  
 
|-
 
|-
Line 43: Line 43:
 
|-
 
|-
 
| 00:56
 
| 00:56
| ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
+
| ಇದು '''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
  
 
|-
 
|-
 
| 01:01
 
| 01:01
| '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.  
+
| '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, '''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.  
  
 
|-
 
|-
Line 59: Line 59:
 
|-
 
|-
 
| 01:33
 
| 01:33
| ಈ ಫಂಕ್ಷನ್ ಅನ್ನು '''CGI''' ಎಂದು ಮತ್ತು ಪ್ರೋಗ್ರಾಮ್ ಗಳನ್ನು '''CGI ಸ್ಕ್ರಿಪ್ಟ್ಸ್''' ಎಂದು ಕರೆಯಲಾಗುತ್ತದೆ.
+
| ಈ ಫಂಕ್ಷನ್ ಅನ್ನು '''CGI''' ಎಂದು ಮತ್ತು ಪ್ರೋಗ್ರಾಮ್ ಗಳನ್ನು '''CGI ಸ್ಕ್ರಿಪ್ಟ್ಸ್ ''' ಎಂದು ಕರೆಯಲಾಗುತ್ತದೆ.
  
 
|-
 
|-
Line 71: Line 71:
 
|-
 
|-
 
| 01:50
 
| 01:50
| '''terminal'' ಗೆ (ಟರ್ಮಿನಲ್) ಬದಲಾಯಿಸಿ.
+
| '''terminal''' ಗೆ (ಟರ್ಮಿನಲ್) ಬದಲಾಯಿಸಿ.
  
 
|-
 
|-
 
| 01:53
 
| 01:53
| ''' gedit''' ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, '''cgiexample.pl'''' ಫೈಲ್ ಅನ್ನು ತೆರೆಯುತ್ತೇನೆ .
+
| ''' gedit''' ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, '''cgiexample.pl''' ಫೈಲ್ ಅನ್ನು ತೆರೆಯುತ್ತೇನೆ .
  
 
|-
 
|-
Line 94: Line 94:
 
|-
 
|-
 
| 02:26
 
| 02:26
|''' HTML''' ಅನ್ನು ಪ್ರಾರಂಭಿಸಲು, ನಾವು '''start_html()'' ಮೆಥಡ್ ಅನ್ನು ಬಳಸುತ್ತೇವೆ.
+
|''' HTML''' ಅನ್ನು ಪ್ರಾರಂಭಿಸಲು, ನಾವು '''start_html()''ಮೆಥಡ್ ಅನ್ನು ಬಳಸುತ್ತೇವೆ.
  
 
|-
 
|-
Line 150: Line 150:
 
|-
 
|-
 
| 03:40
 
| 03:40
| ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ '''web service'''' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು '''ON''' ಸ್ಟೇಟಸ್ ನಲ್ಲಿ ಇಲ್ಲ.
+
| ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ '''web service''' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು '''ON''' ಸ್ಟೇಟಸ್ ನಲ್ಲಿ ಇಲ್ಲ.
  
 
|-
 
|-
Line 213: Line 213:
 
|-
 
|-
 
| 05:13
 
| 05:13
| ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl
+
| ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl'''
  
 
|-
 
|-
Line 312: Line 312:
 
|-
 
|-
 
| 07:58
 
| 07:58
|ಹೀಗೆ ಟೈಪ್ ಮಾಡಿ : '''localhost/cgi-bin/form.cgi'ಮತ್ತು '''Enter''' ಅನ್ನು ಒತ್ತಿ.
+
|ಹೀಗೆ ಟೈಪ್ ಮಾಡಿ : '''localhost/cgi-bin/form.cgi''' ಮತ್ತು '''Enter''' ಅನ್ನು ಒತ್ತಿ.
  
 
|-
 
|-

Latest revision as of 17:09, 12 October 2017

Time Narration
00:01 Perl and HTML (ಪರ್ಲ್ ಆಂಡ್ H T M L ) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು :

html page ಗಳನ್ನು ಹೇಗೆ ರಚಿಸುವುದು ಮತ್ತು CGI module ನ ಬಗ್ಗೆ ಕಲಿಯುವೆವು.

00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :

Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2, Firefox ವೆಬ್-ಬ್ರೌಸರ್, Apache HTTP server (ಅಪಾಚೆ H T T P ಸರ್ವರ್) ಮತ್ತು 'gedit' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.

00:31 ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
00:35 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Perl ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು.
00:40 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು, Spoken Tutorial ವೆಬ್ಸೈಟ್ ನ ಮೇಲೆ ನೋಡಿ.
00:47 ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, Perl CGI ಎಂದು ಕರೆಯಲಾಗುತ್ತದೆ.
00:52 CGI, ಎಂದರೆ Common Gateway Interface (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ .
00:56 ಇದು client-server (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
01:01 CGI.pm, ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, Perl ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.
01:10 CGI.pm, ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. Perl CGI ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ.
01:19 ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), HTTP ಸರ್ವರ್ ನಂತೆ ಅಲ್ಲದೆ, Perl CGI ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ.
01:33 ಈ ಫಂಕ್ಷನ್ ಅನ್ನು CGI ಎಂದು ಮತ್ತು ಪ್ರೋಗ್ರಾಮ್ ಗಳನ್ನು CGI ಸ್ಕ್ರಿಪ್ಟ್ಸ್ ಎಂದು ಕರೆಯಲಾಗುತ್ತದೆ.
01:40 CGI ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು.
01:47 ಈಗ, ನಾವು ಒಂದು ಸ್ಯಾಂಪಲ್ Perl ಪ್ರೊಗ್ರಾಮ್ ಅನ್ನು ನೋಡೋಣ.
01:50 terminal ಗೆ (ಟರ್ಮಿನಲ್) ಬದಲಾಯಿಸಿ.
01:53 gedit ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, cgiexample.pl ಫೈಲ್ ಅನ್ನು ತೆರೆಯುತ್ತೇನೆ .
02:01 cgiexample dot pl ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
02:08 ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.
02:11 CGI.pm ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು use CGI ಸ್ಟೇಟ್ಮೆಂಟ್, Perl ಗೆ ಹೇಳುತ್ತದೆ.
02:19 ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು CGI ಫಂಕ್ಷನ್ ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ.
02:26 HTML ಅನ್ನು ಪ್ರಾರಂಭಿಸಲು, ನಾವು start_html() ಮೆಥಡ್ ಅನ್ನು ಬಳಸುತ್ತೇವೆ.
02:33 “My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ .
02:38 ನಾವು CGI ಮೊಡ್ಯೂಲ್ ಅನ್ನು ಬಳಸಿ, ಯಾವುದೇ HTML ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು.
02:43 ಹೆಡಿಂಗ್ ಟ್ಯಾಗ್ ಗಳನ್ನು h1, h2 ಇತ್ಯಾದಿಗಳಿಂದ ಸೂಚಿಸಲಾಗುತ್ತದೆ.
02:49 end_html ಮೆಥಡ್, BODY ಮತ್ತು HTML ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ.
02:55 ಈಗ, ಫೈಲ್ ಅನ್ನು ಸೇವ್ ಮಾಡಿ.
02:57 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ.
03:04 ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: perl cgiexample.pl ಮತ್ತು Enter ಅನ್ನು ಒತ್ತಿ.
03:12 ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ.
03:15 ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು.
03:20 ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ.
03:25 ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ IP address ಅನ್ನು ನಮೂದಿಸಿ. Enter ಅನ್ನು ಒತ್ತಿರಿ.
03:31 ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು.
03:35 ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ.
03:40 ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ web service ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು ON ಸ್ಟೇಟಸ್ ನಲ್ಲಿ ಇಲ್ಲ.
03:48 Apache HTTP server ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ.
03:52 ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ.
03:58 ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ.
04:04 ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು.
04:09 ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು.
04:13 ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು cgi-bin ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು CGI ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ.
04:22 ಪ್ರೋಗ್ರಾಂ ಫೈಲ್ ನ ಹೆಸರು, dot pl ಅಥವಾ dot cgi ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು.
04:29 ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು.
04:33 ಸ್ಕ್ರಿಪ್ಟ್ ಅನ್ನು ರನ್ ಮಾಡಿ.
04:35 ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು.
04:40 ಟರ್ಮಿನಲ್ ಗೆ ಬದಲಾಯಿಸಿ.
04:42 ಈಗ, ನಾವು ಫೈಲ್ ಅನ್ನು cgi-bin ಡೈರೆಕ್ಟರಿಗೆ ಕಾಪಿ ಮಾಡುವೆವು.
04:47 ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: sudo space cp space cgiexample.pl /usr/lib/cgi-bin/.
05:03 ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ.
05:06 ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು.
05:13 ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 755 space /usr/lib/cgi-bin/cgiexample.pl
05:31 ಈಗ, cgi-bin ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ.
05:38 ವೆಬ್-ಬ್ರೌಸರ್ ಗೆ ಹೋಗಿ.
05:41 ಹೀಗೆ ಟೈಪ್ ಮಾಡಿ: localhost/cgi-bin/cgiexampl ಮತ್ತು Enter ಅನ್ನು ಒತ್ತಿ.
05:50 ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು.
05:55 ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ.
06:06 ಮೊದಲೇ ರಚಿಸಿರುವ cgi-bin ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು gedit ನಲ್ಲಿ ತೆರೆಯುತ್ತೇನೆ.
06:17 ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ.
06:24 ಯೂಸರ್ ನು, first name, last name, gender ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು.
06:31 form ಅನ್ನು ಪ್ರಾರಂಭಿಸಲು, ನಾವು start_form() ಮೆಥಡ್ ಅನ್ನು ಬಳಸುತ್ತಿದ್ದೇವೆ.
06:36 Form field ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ.
06:42 ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ Textfield() ಮೆಥಡ್ ಅನ್ನು ಬಳಸಲಾಗುತ್ತದೆ.
06:49 ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ.
06:57 radio underscore group, ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
07:05 ಇದು hyphen values ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ.
07:09 hyphen default ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ.
07:15 popup underscore menu, ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ.
07:20 Submit ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ.
07:26 Clear ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ.
07:30 displayform ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ.
07:36 ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು param() ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ.
07:42 ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ.
07:47 ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು dollar name1 ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ.
07:53 ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ.
07:56 ವೆಬ್-ಬ್ರೌಸರ್ ಗೆ ಹೋಗಿ.
07:58 ಹೀಗೆ ಟೈಪ್ ಮಾಡಿ : localhost/cgi-bin/form.cgi ಮತ್ತು Enter ಅನ್ನು ಒತ್ತಿ.
08:06 feedback form ಡಿಸ್ಪ್ಲೇ ಆಗಿದೆ.
08:09 ಇಲ್ಲಿ ತೋರಿಸಿರುವಂತೆ, ನಾನು ಈ form ನಲ್ಲಿ ಡೇಟಾ ಅನ್ನು ನಮೂದಿಸುವೆನು.
08:15 ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, Submit ಬಟನ್ ಅನ್ನು ಒತ್ತುವೆನು.
08:21 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು
08:26 ಈ ಟ್ಯುಟೋರಿಯಲ್ ನಲ್ಲಿ: CGI ಮಾಡ್ಯೂಲ್ ಅನ್ನು ಬಳಸಿ, html ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ.
08:33 ಒಂದು ಅಸೈನ್ಮೆಂಟ್: form.cgi ಪ್ರೋಗ್ರಾಮ್ ನಲ್ಲಿ, Java, C/C++ ಮತ್ತು Perl ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ.
08:44 ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು textarea (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ.
08:48 ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ.
08:52 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.
08:59 ‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:

‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.

09:08 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
09:11 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
09:23 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Glorianandihal, Sandhya.np14