Difference between revisions of "Introduction-to-Computers/C2/Google-Drive-Options/Kannada"
From Script | Spoken-Tutorial
Line 28: | Line 28: | ||
|- | |- | ||
| 00:38 | | 00:38 | ||
− | |ಇಲ್ಲದಿದ್ದರೆ, ದಯವಿಟ್ಟು 'Gmail' ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ. | + | |ಇಲ್ಲದಿದ್ದರೆ, ದಯವಿಟ್ಟು '''Gmail''' ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ. |
|- | |- | ||
|00:43 | |00:43 | ||
Line 34: | Line 34: | ||
|- | |- | ||
| 00:45 | | 00:45 | ||
− | |ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು ನಿಮ್ಮ 'gmail' ಅಕೌಂಟ್ ನಲ್ಲಿ ಲಾಗ್-ಇನ್ ಮಾಡಿ. | + | |ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು ನಿಮ್ಮ '''gmail''' ಅಕೌಂಟ್ ನಲ್ಲಿ ಲಾಗ್-ಇನ್ ಮಾಡಿ. |
|- | |- | ||
| 00:49 | | 00:49 | ||
Line 40: | Line 40: | ||
|- | |- | ||
| 00:51 | | 00:51 | ||
− | | ಮೇಲ್ಗಡೆ ಬಲಭಾಗದಲ್ಲಿ, ನಮ್ಮ ಹೆಸರಿನ ಬದಿಯಲ್ಲಿ, ನಾವು ಒಂದು 'grid' ಐಕಾನನ್ನು ನೋಡಬಹುದು. | + | | ಮೇಲ್ಗಡೆ ಬಲಭಾಗದಲ್ಲಿ, ನಮ್ಮ ಹೆಸರಿನ ಬದಿಯಲ್ಲಿ, ನಾವು ಒಂದು '''grid''' ಐಕಾನನ್ನು ನೋಡಬಹುದು. |
|- | |- | ||
| 00:56 | | 00:56 | ||
− | | ನಾವು ‘ಮೌಸ್’ಅನ್ನು ಇದರ ಮೇಲೆ ಕೊಂಡೊಯ್ದಾದಾಗ, 'Apps' ಎಂಬ ಟೆಕ್ಸ್ಟ್ ಕಾಣುತ್ತದೆ. ಇದರ ಮೇಲೆ ಮೇಲೆ ಕ್ಲಿಕ್ ಮಾಡಿ. | + | | ನಾವು ‘ಮೌಸ್’ಅನ್ನು ಇದರ ಮೇಲೆ ಕೊಂಡೊಯ್ದಾದಾಗ, '''Apps''' ಎಂಬ ಟೆಕ್ಸ್ಟ್ ಕಾಣುತ್ತದೆ. ಇದರ ಮೇಲೆ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:02 | | 01:02 | ||
− | | ಇದು, ಕೆಳಗೆ ಹೇಳಿದಂತಹ ಕೆಲವು 'google apps' ಗಳನ್ನು ನಮಗೆ ತೋರಿಸುವುದು: | + | | ಇದು, ಕೆಳಗೆ ಹೇಳಿದಂತಹ ಕೆಲವು '''google apps''' ಗಳನ್ನು ನಮಗೆ ತೋರಿಸುವುದು: |
'google plus' | 'google plus' | ||
'Search' | 'Search' | ||
Line 58: | Line 58: | ||
|- | |- | ||
| 01:18 | | 01:18 | ||
− | |ನಾವು ಇವುಗಳ ಮೇಲೆ ಕ್ಲಿಕ್ ಮಾಡಿದರೆ, ನಮ್ಮನ್ನು ಆ ನಿರ್ದಿಷ್ಟ 'google app'ಗೆ ಕೊಂಡೊಯ್ಯಲಾಗುವುದು. | + | |ನಾವು ಇವುಗಳ ಮೇಲೆ ಕ್ಲಿಕ್ ಮಾಡಿದರೆ, ನಮ್ಮನ್ನು ಆ ನಿರ್ದಿಷ್ಟ '''google app'''ಗೆ ಕೊಂಡೊಯ್ಯಲಾಗುವುದು. |
|- | |- | ||
| 01:24 | | 01:24 | ||
− | | ನಮ್ಮ ಆದ್ಯತೆಗೆ ಅನುಗುಣವಾಗಿ, 'apps' ಐಕಾನ್ ಗಳನ್ನು ಅತ್ತಿತ್ತ ಎಳೆಯುವುದರ ಮೂಲಕ ನಾವು ಈ ಸೂಚಿಯನ್ನು ಮರು ವ್ಯವಸ್ಥೆ ಸಹ ಮಾಡಬಹುದು. | + | | ನಮ್ಮ ಆದ್ಯತೆಗೆ ಅನುಗುಣವಾಗಿ, '''apps''' ಐಕಾನ್ ಗಳನ್ನು ಅತ್ತಿತ್ತ ಎಳೆಯುವುದರ ಮೂಲಕ ನಾವು ಈ ಸೂಚಿಯನ್ನು ಮರು ವ್ಯವಸ್ಥೆ ಸಹ ಮಾಡಬಹುದು. |
|- | |- | ||
| 01:32 | | 01:32 | ||
− | | ಈ ಟ್ಯುಟೋರಿಯಲ್ ನಲ್ಲಿ, ವಿಶೇಷವಾಗಿ ನಾವು 'Drive' ನ ಬಗ್ಗೆ ಕಲಿಯುವೆವು. | + | | ಈ ಟ್ಯುಟೋರಿಯಲ್ ನಲ್ಲಿ, ವಿಶೇಷವಾಗಿ ನಾವು '''Drive''' ನ ಬಗ್ಗೆ ಕಲಿಯುವೆವು. |
|- | |- | ||
| 01:35 | | 01:35 | ||
− | | ಹೀಗಾಗಿ, ನಾನು 'Drive' ನ ಮೇಲೆ ಕ್ಲಿಕ್ ಮಾಡುತ್ತೇನೆ. | + | | ಹೀಗಾಗಿ, ನಾನು '''Drive''' ನ ಮೇಲೆ ಕ್ಲಿಕ್ ಮಾಡುತ್ತೇನೆ. |
|- | |- | ||
| 01:39 | | 01:39 | ||
− | |ಇದು, 'Google Drive' ಪೇಜನ್ನು ಒಂದು ಹೊಸ ಟ್ಯಾಬ್ ನಲ್ಲಿ ಓಪನ್ ಮಾಡುವುದು. | + | |ಇದು, '''Google Drive''' ಪೇಜನ್ನು ಒಂದು ಹೊಸ ಟ್ಯಾಬ್ ನಲ್ಲಿ ಓಪನ್ ಮಾಡುವುದು. |
|- | |- | ||
| 01:43 | | 01:43 | ||
Line 110: | Line 110: | ||
|- | |- | ||
| 02:38 | | 02:38 | ||
− | | ಹೀಗಾಗಿ, ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಅಪ್ಲೋಡ್ ಮಾಡಿದ 'PDF' ಮತ್ತು 'ZIP' ಫೈಲ್ ಗಳನ್ನು ಇಲ್ಲಿ ನೋಡಬಹುದು. | + | | ಹೀಗಾಗಿ, ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಅಪ್ಲೋಡ್ ಮಾಡಿದ '''PDF''' ಮತ್ತು '''ZIP''' ಫೈಲ್ ಗಳನ್ನು ಇಲ್ಲಿ ನೋಡಬಹುದು. |
|- | |- | ||
| 02:47 | | 02:47 | ||
Line 125: | Line 125: | ||
|- | |- | ||
| 03:09 | | 03:09 | ||
− | | ಇತ್ತೀಚೆಗೆ ಗೂಗಲ್, 'Drive' ನ ಒಳಗಿನ 'Google Photos'ಅನ್ನು ಆಕ್ಸೆಸ್ ಮಾಡಲು, ಒಂದು ‘ಶಾರ್ಟ್ಕಟ್ ಲಿಂಕ್’ಅನ್ನು ಕ್ರಿಯೇಟ್ ಮಾಡಿದೆ. | + | | ಇತ್ತೀಚೆಗೆ ಗೂಗಲ್, '''Drive''' ನ ಒಳಗಿನ '''Google Photos'''ಅನ್ನು ಆಕ್ಸೆಸ್ ಮಾಡಲು, ಒಂದು ‘ಶಾರ್ಟ್ಕಟ್ ಲಿಂಕ್’ಅನ್ನು ಕ್ರಿಯೇಟ್ ಮಾಡಿದೆ. |
|- | |- | ||
| 03:15 | | 03:15 | ||
Line 137: | Line 137: | ||
|- | |- | ||
| 03:30 | | 03:30 | ||
− | |ಹೀಗಾಗಿ, ಇಲ್ಲಿ ನಾವು 'pdf' ಮತ್ತು 'zip' ಫೈಲ್ ಗಳನ್ನು ನೋಡಬಹುದು. ಏಕೆಂದರೆ, ನಾವು ಅವುಗಳನ್ನು ಈ ಮೊದಲು ಓಪನ್ ಮಾಡಿದ್ದೆವು. | + | |ಹೀಗಾಗಿ, ಇಲ್ಲಿ ನಾವು '''pdf''' ಮತ್ತು '''zip''' ಫೈಲ್ ಗಳನ್ನು ನೋಡಬಹುದು. ಏಕೆಂದರೆ, ನಾವು ಅವುಗಳನ್ನು ಈ ಮೊದಲು ಓಪನ್ ಮಾಡಿದ್ದೆವು. |
|- | |- | ||
| 03:37 | | 03:37 | ||
− | | 'Starred' ಎಂಬ ಮೆನ್ಯೂ ನ ಅಡಿಯಲ್ಲಿ, ನಾವು 'Important' ಎಂದು ಗುರುತಿಸಿದ ಫೈಲ್ ಅಥವಾ ಡಾಕ್ಯೂಮೆಂಟ್ ಅನ್ನು ತೋರಿಸಲಾಗುವುದು. | + | | 'Starred' ಎಂಬ ಮೆನ್ಯೂ ನ ಅಡಿಯಲ್ಲಿ, ನಾವು '''Important''' ಎಂದು ಗುರುತಿಸಿದ ಫೈಲ್ ಅಥವಾ ಡಾಕ್ಯೂಮೆಂಟ್ ಅನ್ನು ತೋರಿಸಲಾಗುವುದು. |
|- | |- | ||
| 03:45 | | 03:45 | ||
− | | ನಾವು 'My Drive' ಮೆನ್ಯೂಗೆ ಹಿಂದಿರುಗೋಣ ಮತ್ತು ನಮ್ಮ'pdf' ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡೋಣ. | + | | ನಾವು '''My Drive''' ಮೆನ್ಯೂಗೆ ಹಿಂದಿರುಗೋಣ ಮತ್ತು ನಮ್ಮ'''pdf''' ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡೋಣ. |
|- | |- | ||
| 03:51 | | 03:51 | ||
− | |ಈಗ, 'Add Star' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | + | |ಈಗ, '''Add Star''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
| 03:55 | | 03:55 | ||
Line 155: | Line 155: | ||
|- | |- | ||
| 04:03 | | 04:03 | ||
− | |ಆದ್ದರಿಂದ, ಮತ್ತೊಮ್ಮೆ ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' Make a copy' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | + | |ಆದ್ದರಿಂದ, ಮತ್ತೊಮ್ಮೆ ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು '''Make a copy''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
| 04:10 | | 04:10 | ||
Line 164: | Line 164: | ||
|- | |- | ||
|04:20 | |04:20 | ||
− | | ತೆಗೆದುಹಾಕಲಾದ ಫೈಲ್ ಅಥವಾ ಡಾಕ್ಯೂಮೆಂಟ್ ಗಳನ್ನು 'Trash' ಮೆನ್ಯೂ ನ ಅಡಿಯಲ್ಲಿ ತೋರಿಸಲಾಗುವುದು. | + | | ತೆಗೆದುಹಾಕಲಾದ ಫೈಲ್ ಅಥವಾ ಡಾಕ್ಯೂಮೆಂಟ್ ಗಳನ್ನು '''Trash''' ಮೆನ್ಯೂ ನ ಅಡಿಯಲ್ಲಿ ತೋರಿಸಲಾಗುವುದು. |
|- | |- | ||
| 04:25 | | 04:25 | ||
Line 170: | Line 170: | ||
|- | |- | ||
| 04:28 | | 04:28 | ||
− | | “Empty Trash” ಆಯ್ಕೆಯನ್ನು ಆರಿಸಿಕೊಳ್ಳುವುದರ ಮೂಲಕ 'Trash' ಮೆನ್ಯೂದಿಂದ ನಾವು ಎಲ್ಲ ಫೈಲ್ ಗಳನ್ನು ಶಾಶ್ವತವಾಗಿ ತೆಗೆದುಹಾಕಬಹುದು. | + | | “Empty Trash” ಆಯ್ಕೆಯನ್ನು ಆರಿಸಿಕೊಳ್ಳುವುದರ ಮೂಲಕ '''Trash''' ಮೆನ್ಯೂದಿಂದ ನಾವು ಎಲ್ಲ ಫೈಲ್ ಗಳನ್ನು ಶಾಶ್ವತವಾಗಿ ತೆಗೆದುಹಾಕಬಹುದು. |
|- | |- | ||
| 04:36 | | 04:36 | ||
Line 558: | Line 558: | ||
|- | |- | ||
| 16:27 | | 16:27 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .ವಂದನೆಗಳು. |
− | ವಂದನೆಗಳು. | + | |
|} | |} |
Latest revision as of 18:10, 22 February 2017
Time | Narration |
00:01 | Google Drive options ಎಂಬ ‘ಸ್ಪೋಕನ್ ಟ್ಯುಟೋರಿಯಲ್’ ಗೆ (Spoken Tutorial) ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, 'Google Drive' ನಲ್ಲಿ ಲಭ್ಯವಿರುವ ಈ ಕೆಳಗಿನ ಆಯ್ಕೆಗಳ ಬಗ್ಗೆ ಕಲಿಯುವೆವು: |
00:12 | * ‘ಡಾಕ್ಯೂಮೆಂಟ್’, ಸ್ಪ್ರೆಡ್ ಶೀಟ್ ಮತ್ತು ‘ಪ್ರೆಸೆಂಟೇಶನ್’ ಗಳನ್ನು ಕ್ರಿಯೇಟ್ ಮಾಡುವುದು, |
00:17 | * ಫೈಲ್ ಹಾಗೂ ಫೋಲ್ಡರ್ ಗಳನ್ನು ಅಪ್ಲೋಡ್ ಮಾಡುವುದು ಹಾಗೂ |
00:20 | * ‘ಶೇರ್’ ಮಾಡಲು ಆಯ್ಕೆಗಳು. |
00:22 | ಈ ಟ್ಯುಟೋರಿಯಲ್ ಗಾಗಿ, ನಿಮಗೆ ‘ಇಂಟರ್ನೆಟ್’ನ ಸಂಪರ್ಕ ಮತ್ತು ಯಾವುದೇ ಒಂದು ‘ವೆಬ್ ಬ್ರೌಸರ್’ ಬೇಕಾಗುವುದು. |
00:29 | ನಾನು ‘Firefox’ (ಫೈರ್ಫಾಕ್ಸ್) ‘ವೆಬ್ ಬ್ರೌಸರ್’ಅನ್ನು ಬಳಸುತ್ತಿದ್ದೇನೆ. |
00:33 | ಇದಕ್ಕೂ ಮುನ್ನ ನಿಮಗೆ 'Gmail'ನ (ಜಿ ಮೇಲ್) ಬಗ್ಗೆ ತಿಳಿದಿರಬೇಕು. |
00:38 | ಇಲ್ಲದಿದ್ದರೆ, ದಯವಿಟ್ಟು Gmail ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ. |
00:43 | ನಾವೀಗ ಪ್ರಾರಂಭಿಸೋಣ. |
00:45 | ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು ನಿಮ್ಮ gmail ಅಕೌಂಟ್ ನಲ್ಲಿ ಲಾಗ್-ಇನ್ ಮಾಡಿ. |
00:49 | ನಾನು ಈಗಾಗಲೇ ಲಾಗಿನ್ ಮಾಡಿದ್ದೇನೆ. |
00:51 | ಮೇಲ್ಗಡೆ ಬಲಭಾಗದಲ್ಲಿ, ನಮ್ಮ ಹೆಸರಿನ ಬದಿಯಲ್ಲಿ, ನಾವು ಒಂದು grid ಐಕಾನನ್ನು ನೋಡಬಹುದು. |
00:56 | ನಾವು ‘ಮೌಸ್’ಅನ್ನು ಇದರ ಮೇಲೆ ಕೊಂಡೊಯ್ದಾದಾಗ, Apps ಎಂಬ ಟೆಕ್ಸ್ಟ್ ಕಾಣುತ್ತದೆ. ಇದರ ಮೇಲೆ ಮೇಲೆ ಕ್ಲಿಕ್ ಮಾಡಿ. |
01:02 | ಇದು, ಕೆಳಗೆ ಹೇಳಿದಂತಹ ಕೆಲವು google apps ಗಳನ್ನು ನಮಗೆ ತೋರಿಸುವುದು:
'google plus' 'Search' 'Maps' 'PlayStore' 'News' 'Mail' 'Drive' Calendar' ಮತ್ತು 'More'. |
01:18 | ನಾವು ಇವುಗಳ ಮೇಲೆ ಕ್ಲಿಕ್ ಮಾಡಿದರೆ, ನಮ್ಮನ್ನು ಆ ನಿರ್ದಿಷ್ಟ google appಗೆ ಕೊಂಡೊಯ್ಯಲಾಗುವುದು. |
01:24 | ನಮ್ಮ ಆದ್ಯತೆಗೆ ಅನುಗುಣವಾಗಿ, apps ಐಕಾನ್ ಗಳನ್ನು ಅತ್ತಿತ್ತ ಎಳೆಯುವುದರ ಮೂಲಕ ನಾವು ಈ ಸೂಚಿಯನ್ನು ಮರು ವ್ಯವಸ್ಥೆ ಸಹ ಮಾಡಬಹುದು. |
01:32 | ಈ ಟ್ಯುಟೋರಿಯಲ್ ನಲ್ಲಿ, ವಿಶೇಷವಾಗಿ ನಾವು Drive ನ ಬಗ್ಗೆ ಕಲಿಯುವೆವು. |
01:35 | ಹೀಗಾಗಿ, ನಾನು Drive ನ ಮೇಲೆ ಕ್ಲಿಕ್ ಮಾಡುತ್ತೇನೆ. |
01:39 | ಇದು, Google Drive ಪೇಜನ್ನು ಒಂದು ಹೊಸ ಟ್ಯಾಬ್ ನಲ್ಲಿ ಓಪನ್ ಮಾಡುವುದು. |
01:43 | ‘ಪೇಜ್’ನ ಮೇಲ್ಗಡೆಯಲ್ಲಿ, ನಾವು ಒಂದು ‘ಸರ್ಚ್ ಬಾರ್’ಅನ್ನು ನೋಡಬಹುದು. |
01:47 | ಎಡಗಡೆಗೆ ಕೆಲವು ಮೆನ್ಯೂ ಗಳಿವೆ. |
01:51 | ಮತ್ತು ಮೇಲ್ಗಡೆ ಬಲಭಾಗದಲ್ಲಿ ಕೆಲವು ಐಕಾನ್ ಗಳಿರುತ್ತವೆ. |
01:55 | ಮಧ್ಯದಲ್ಲಿ ನಾವು ಎರಡು ‘ಫೈಲ್’ಗಳನ್ನು ನೋಡಬಹುದು. |
01:59 | ಮೊದಲನೆಯದು, ಅಕೌಂಟ್ ಅನ್ನು ಕ್ರಿಯೇಟ್ ಮಾಡುವಾಗ, ‘Google’ ತಂಡದವರು ನಮ್ಮ ಜೊತೆಗೆ ಹಂಚಿಕೊಂಡ ಫೈಲ್ ಹಾಗೂ |
02:05 | ಎರಡನೆಯದು, ಈ ಮೊದಲು ನಾವೇ ಅಪ್ಲೋಡ್ ಮಾಡಿದ ಫೈಲ್ ಆಗಿದೆ. |
02:10 | ಈಗ, ನಾವು ಎಡಭಾಗದಲ್ಲಿರುವ ಮೆನ್ಯೂಗಳತ್ತ ಒಮ್ಮೆ ನೋಡೋಣ. |
02:14 | ನಾವು ಈ ಕೆಳಗಿನ ಮೆನ್ಯೂಗಳನ್ನು ಪಡೆದಿದ್ದೇವೆ:
'New' 'My Drive' 'Shared with me' 'Google Photos' 'Recent' 'Starred' ಮತ್ತು 'Trash'. |
02:27 | ಡೀಫಾಲ್ಟ್ ಆಗಿ, “My Drive” ಎಂಬ ಮೆನ್ಯೂ ಆಯ್ಕೆಯಾಗುವುದು ಮತ್ತು ಅದರಲ್ಲಿರುವುದನ್ನು ಮಧ್ಯದಲ್ಲಿ ತೋರಿಸಲಾಗುವುದು. |
02:34 | ಮಧ್ಯಭಾಗದಲ್ಲಿ, ಎಲ್ಲ ಫೈಲ್ ಮತ್ತು ಫೋಲ್ಡರ್ ಗಳನ್ನು ತೋರಿಸಲಾಗುವುದು. |
02:38 | ಹೀಗಾಗಿ, ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಅಪ್ಲೋಡ್ ಮಾಡಿದ PDF ಮತ್ತು ZIP ಫೈಲ್ ಗಳನ್ನು ಇಲ್ಲಿ ನೋಡಬಹುದು. |
02:47 | ನಮ್ಮಿಂದ ಕ್ರಿಯೇಟ್ ಮಾಡಲಾದ ಅಥವಾ ಅಪ್ಲೋಡ್ ಮಾಡಲಾದ ಫೈಲ್ ಗಳನ್ನು “My Drive” ನ ಅಡಿಯಲ್ಲಿ ಸ್ಟೋರ್ ಮಾಡಲಾಗುವುದು. |
02:53 | “Shared with me” ಎಂಬುದು ಮುಂದಿನ ಮೆನ್ಯೂ ಆಗಿದೆ. ನಾನು ಇದರ ಮೇಲೆ ಕ್ಲಿಕ್ ಮಾಡುತ್ತೇನೆ. |
02:58 | ಯಾರಾದರೂ ಒಬ್ಬರು ಒಂದು ಫೈಲ್ ಅಥವಾ ಡಾಕ್ಯೂಮೆಂಟ್ ಅನ್ನು ನನ್ನೊಂದಿಗೆ ಹಂಚಿಕೊಂಡರೆ, ಅದನ್ನು ಈ ಮೆನ್ಯೂನಡಿಯಲ್ಲಿ ತೋರಿಸಲಾಗುವುದು. |
03:03 | ಸಧ್ಯಕ್ಕೆ, ಯಾರೂ ಯಾವ ಫೈಲ್ ಅನ್ನು ನನ್ನೊಂದಿಗೆ ‘ಶೇರ್’ ಮಾಡಿಲ್ಲ. ಹೀಗಾಗಿ, ಇದು ಬರಿದಾಗಿದೆ. |
03:09 | ಇತ್ತೀಚೆಗೆ ಗೂಗಲ್, Drive ನ ಒಳಗಿನ Google Photosಅನ್ನು ಆಕ್ಸೆಸ್ ಮಾಡಲು, ಒಂದು ‘ಶಾರ್ಟ್ಕಟ್ ಲಿಂಕ್’ಅನ್ನು ಕ್ರಿಯೇಟ್ ಮಾಡಿದೆ. |
03:15 | ನಾವು ಈ ಟ್ಯುಟೊರಿಯಲ್ ನಲ್ಲಿ, ಈ ಆಯ್ಕೆಯನ್ನು ಬಿಟ್ಟುಬಿಡೋಣ. |
03:19 | “Recent” ಎಂಬ ಮೆನ್ಯೂ, ಇತ್ತೀಚೆಗೆ ಓಪನ್ ಮಾಡಿದ ಫೈಲ್ ಗಳ ಅಥವಾ ಡಾಕ್ಯೂಮೆಂಟ್ ಗಳ ಲಿಸ್ಟ್ ಅನ್ನು ತೋರಿಸುವುದು. |
03:25 | ಇದು, “My Drive” ಮತ್ತು “Shared with me” ಇವೆರಡರಲ್ಲಿಯೂ ಇರುವುದನ್ನು ತೋರಿಸುವುದು. |
03:30 | ಹೀಗಾಗಿ, ಇಲ್ಲಿ ನಾವು pdf ಮತ್ತು zip ಫೈಲ್ ಗಳನ್ನು ನೋಡಬಹುದು. ಏಕೆಂದರೆ, ನಾವು ಅವುಗಳನ್ನು ಈ ಮೊದಲು ಓಪನ್ ಮಾಡಿದ್ದೆವು. |
03:37 | 'Starred' ಎಂಬ ಮೆನ್ಯೂ ನ ಅಡಿಯಲ್ಲಿ, ನಾವು Important ಎಂದು ಗುರುತಿಸಿದ ಫೈಲ್ ಅಥವಾ ಡಾಕ್ಯೂಮೆಂಟ್ ಅನ್ನು ತೋರಿಸಲಾಗುವುದು. |
03:45 | ನಾವು My Drive ಮೆನ್ಯೂಗೆ ಹಿಂದಿರುಗೋಣ ಮತ್ತು ನಮ್ಮpdf ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡೋಣ. |
03:51 | ಈಗ, Add Star ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
03:55 | ಆಮೇಲೆ, 'Starred' ಎಂಬ ಮೆನ್ಯೂ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಮ್ಮ ಫೈಲ್ ಇದೆ. |
04:00 | ನಾನು ಈ ಫೈಲ್ ನ ಒಂದು ನಕಲನ್ನು (copy) ಮಾಡುತ್ತೇನೆ. |
04:03 | ಆದ್ದರಿಂದ, ಮತ್ತೊಮ್ಮೆ ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Make a copy ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
04:10 | ಈಗ ನಮ್ಮ ಹತ್ತಿರ ಎರಡು ಫೈಲ್ ಗಳಿವೆ. |
04:13 | ಅವುಗಳಲ್ಲಿ ಒಂದನ್ನು ನಾವು ತೆಗೆದುಹಾಕೋಣ (ಡಿಲೀಟ್). ಫೈಲ್ ಅನ್ನು ಆಯ್ಕೆಮಾಡಿ ಮತ್ತು ಕೀಬೋರ್ಡ್ ಮೇಲಿನ ‘Delete’ ಕೀಯನ್ನು ಒತ್ತಿ. |
04:20 | ತೆಗೆದುಹಾಕಲಾದ ಫೈಲ್ ಅಥವಾ ಡಾಕ್ಯೂಮೆಂಟ್ ಗಳನ್ನು Trash ಮೆನ್ಯೂ ನ ಅಡಿಯಲ್ಲಿ ತೋರಿಸಲಾಗುವುದು. |
04:25 | ಆದರೆ, ಈ ತೆಗೆದುಹಾಕುವಿಕೆ ತಾತ್ಕಾಲಿಕವಾಗಿದೆ. |
04:28 | “Empty Trash” ಆಯ್ಕೆಯನ್ನು ಆರಿಸಿಕೊಳ್ಳುವುದರ ಮೂಲಕ Trash ಮೆನ್ಯೂದಿಂದ ನಾವು ಎಲ್ಲ ಫೈಲ್ ಗಳನ್ನು ಶಾಶ್ವತವಾಗಿ ತೆಗೆದುಹಾಕಬಹುದು. |
04:36 | “Trash” ಮೆನ್ಯೂನಲ್ಲಿನ ಎಲ್ಲ ಫೈಲ್ ಗಳು, 30 ದಿನಗಳ ನಂತರ 'ಗೂಗಲ್ ಸರ್ವರ್' ನಿಂದ ತಮ್ಮಷ್ಟಕ್ಕೆ ತಾವೇ ಶಾಶ್ವತವಾಗಿ ತೆಗೆದುಹಾಕಲ್ಪಡುತ್ತವೆ. |
04:44 | ಈಗ, ಫೈಲ್ ಮತ್ತು ಫೋಲ್ಡರ್ ಗಳನ್ನು ಹೇಗೆ 'ಕ್ರಿಯೇಟ್' ಮತ್ತು 'ಅಪ್ಲೋಡ್' ಮಾಡುವುದೆಂದು ನಾವು ಕಲಿಯೋಣ. |
04:49 | ಇದನ್ನು ಮಾಡಲು ನಾಲ್ಕು ವಿಧಾನಗಳಿವೆ:
ಮೊದಲನೆಯದು - ಎಡಭಾಗದಲ್ಲಿರುವ ಕೆಂಪು ಬಣ್ಣದ ‘New’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುವುದು. |
04:56 | ಎರಡನೆಯ ವಿಧಾನ: ‘My Drive’ ಎಂಬ ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡುವುದು. |
05:00 | ಈಗ, ನಾವು 'My Drive' ಗೆ ಹಿಂದಿರುಗೋಣ.ಮೂರನೇಯದು, ‘My Drive’ ಎಂಬ ಆಯ್ಕೆಯ ಮಧ್ಯಭಾಗದಲ್ಲಿ ನಾವು ರೈಟ್-ಕ್ಲಿಕ್ ಮಾಡಬಹುದು. |
05:09 | ಕೊನೆಯದಾಗಿ, ಮೇಲ್ಗಡೆ ಇರುವ ‘My Drive ಡ್ರಾಪ್-ಡೌನ್’ ಮೆನ್ಯೂದ ಮೇಲೆ ಕ್ಲಿಕ್ ಮಾಡುವುದು. |
05:14 | ನಾವು 'New' ಎಂಬ ಆಯ್ಕೆಯನ್ನು ತಿಳಿದುಕೊಳ್ಳೋಣ.New ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:19 | ಇದು,
Folder' 'File upload' 'Google Docs, Sheets, Slides ಮತ್ತು More ಗಳಂತಹ ಕೆಲವು ಆಯ್ಕೆಗಳನ್ನು ತೋರಿಸುವುದು. |
05:28 | ನಾವು ಪ್ರತಿಯೊಂದು ಆಯ್ಕೆಯನ್ನು ಒಂದೊಂದಾಗಿ ನೋಡುವೆವು. |
05:31 | ನಾವು Folder ಆಯ್ಕೆಯನ್ನು ಬಳಸಿ ಒಂದು ಫೋಲ್ಡರ್ ಅನ್ನು ಕ್ರಿಯೇಟ್ ಮಾಡಬಹುದು. |
05:34 | ಇದರ ಮೇಲೆ ಕ್ಲಿಕ್ ಮಾಡಿ. ತಕ್ಷಣ ಇದು ನಮಗೆ ಒಂದು ಹೆಸರಿಗಾಗಿ ಸೂಚಿಸುವುದು. |
05:40 | ನಾವು ಈ ಫೋಲ್ಡರ್ ಅನ್ನು Spoken Tutorial ಎಂದು ಹೆಸರಿಸಿ, 'Create 'ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
05:48 | ಡೀಫಾಲ್ಟ್ ಆಗಿ, ಈ ಫೋಲ್ಡರ್, My drive ನ ಅಡಿಯಲ್ಲಿ ಕಾಣಿಸಿಕೊಳ್ಳುವುದು. |
05:52 | ಇಲ್ಲಿ, ಮಧ್ಯಭಾಗದಲ್ಲಿ, ಇದನ್ನು ನಾವು ನೋಡಬಹುದು. |
05:56 | ಫೋಲ್ಡರ್ ಗಳು, ನಮ್ಮ ಫೈಲ್ ಗಳನ್ನು ವ್ಯವಸ್ಥಿತವಾಗಿಡಲು ನಮಗೆ ಸಹಾಯಮಾಡುತ್ತವೆ. |
06:00 | ಆದ್ದರಿಂದ, ನಾವು ಪ್ರತ್ಯೇಕ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಬಹುದು. ಉದಾ - 'personal, work' ಇತ್ಯಾದಿ. |
06:07 | ಯಾವುದೇ ಫೈಲ್ ಅನ್ನು 'ಅಪ್ಲೋಡ್' ಮಾಡಲು - ಮೊದಲು ‘New’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಆಮೇಲೆ ‘ File upload’ನ ಮೇಲೆ ಕ್ಲಿಕ್ ಮಾಡಿ. |
06:13 | ಇದು ಒಂದು ‘ಫೈಲ್ ಬ್ರೌಸರ್ ವಿಂಡೋ’ಅನ್ನು ಓಪನ್ ಮಾಡುವುದು. |
06:16 | ನಿಮಗೆ ಅಪ್ಲೋಡ್ ಮಾಡಬೇಕಾಗಿರುವ ಫೈಲ್ ಅನ್ನು ಬ್ರೌಸ್ ಮಾಡಿ ಮತ್ತು ಆಯ್ಕೆಮಾಡಿ. |
06:19 | ನಾನು “xyz.odt” ಎಂಬ ಫೈಲ್ ಅನ್ನು 'Desktop' ನಿಂದ ಆಯ್ಕೆಮಾಡಿ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
06:26 | ಕೆಳತುದಿಯ ಬಲಭಾಗದಲ್ಲಿ, ಅಪ್ಲೋಡ್ ಆಗುತ್ತಿರುವುದರ ಪ್ರಗತಿಯನ್ನು (progress) ನಾವು ನೋಡಬಹುದು. |
06:30 | ಫೈಲ್ ನ ಸೈಜ್ ಗೆ ಮತ್ತು ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |
06:35 | ಒಮ್ಮೆ ಪೂರ್ತಿಗೊಂಡರೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಮಧ್ಯಭಾಗದಲ್ಲಿ ತೋರಿಸಲಾಗುವುದು. |
06:41 | ಈಗ, ಕೆಳಗಿರುವ 'ಪ್ರೊಗ್ರೆಸ್ ವಿಂಡೋ'ಅನ್ನು ಕ್ಲೋಸ್ ಮಾಡಿ. |
06:45 | ಇದೇ ರೀತಿ, ನಾವು 'Folder upload' ಆಯ್ಕೆಯನ್ನು ಬಳಸಿ, ‘Drive’ನಲ್ಲಿ ಫೋಲ್ಡರ್ ಅನ್ನು ಅಪ್ಲೋಡ್ ಮಾಡಬಹುದು. |
06:52 | ಈ ವೈಶಿಷ್ಟ್ಯವು ಕೆಲವು ಬ್ರೌಸರ್ ಗಳಲ್ಲಿ ಮಾತ್ರ ಲಭ್ಯವಿರಬಹುದು. ಉದಾ: 'Google Chrome'. |
06:59 | ನಾವು ನಮ್ಮ ಅಪ್ಲೋಡ್ ಮಾಡಿದ ಫೈಲ್ ಅನ್ನು, ನಮ್ಮ ‘Spoken Tutorial’ ಫೋಲ್ಡರ್ ನ ಒಳಗೆ ಹೇಗೆ ಹಾಕಬಹುದು? |
07:04 | ಸರಳವಾಗಿ ಫೈಲ್ ಅನ್ನು ಹೀಗೆ ಎಳೆದು ತನ್ನಿ ಮತ್ತು ಫೋಲ್ಡರ್ ನಲ್ಲಿ ಹಾಕಿ (ಡ್ರ್ಯಾಗ್ ಆಂಡ್ ಡ್ರಾಪ್). |
07:09 | ಈಗ, ಎಡಭಾಗದಲ್ಲಿ, ‘My Drive’ ಆಯ್ಕೆಯತ್ತ ಹತ್ತಿರದಿಂದ ನೋಡಿ. |
07:14 | ಅದರ ಎಡಭಾಗದಲ್ಲಿ ಒಂದು ಚಿಕ್ಕ ತ್ರಿಕೋನವನ್ನು ಗಮನಿಸಿ. |
07:18 | ಇದರ ಮೇಲೆ ಕ್ಲಿಕ್ ಮಾಡಿದರೆ, ‘My Drive’ ನ ಅಡಿಯಲ್ಲಿ ಸಬ್-ಫೋಲ್ಡರ್ ಗಳನ್ನು ತೋರಿಸುವುದು. |
07:22 | ನೋಡಿ, ಇಲ್ಲಿ ನಮ್ಮ ‘Spoken Tutorial’ ಫೋಲ್ಡರ್ ಇದೆ ಮತ್ತು ಇಲ್ಲಿ ಒಳಗಡೆ ಫೈಲ್ 'xyz.odt' ಇದೆ. |
07:31 | ನಮ್ಮ ದಿನನಿತ್ಯದ ಕೆಲಸಕ್ಕಾಗಿ, ನಾವು ಡಾಕ್ಯೂಮೆಂಟ್ ಗಳನ್ನು, ಸ್ಪ್ರೆಡ್ಶೀಟ್ ಗಳನ್ನು ಮತ್ತು ಪ್ರೆಸೆಂಟೇಶನ್ ಗಳನ್ನು ಬಳಸುತ್ತೇವೆ. |
07:36 | ಇವುಗಳನ್ನು 'Drive' ನ ಮೇಲೆ ಕ್ರಿಯೇಟ್ ಮಾಡಲು ಮತ್ತು ನಿಭಾಯಿಸಲು ಸಾಧ್ಯವಿದೆಯೋ ಹೇಗೆ? |
07:39 | ಹೌದು, ಇದು ಸಾಧ್ಯವಿದೆ. ‘ಗೂಗಲ್ ಡ್ರೈವ್’ (Google Drive) ನಲ್ಲಿ, ನಾವು ಡಾಕ್ಯೂಮೆಂಟ್ ಗಳನ್ನು, ಸ್ಪ್ರೆಡ್ಶೀಟ್ ಗಳನ್ನು ಮತ್ತು ಪ್ರೆಸೆಂಟೇಶನ್ ಗಳನ್ನು ಯಾವುದೇ ‘Office Suite’ ನಲ್ಲಿ ಮಾಡುವಂತೆಯೇ ಕ್ರಿಯೇಟ್ ಮಾಡಬಹುದು. |
07:50 | ಹೀಗಾಗಿ, ಡಾಕ್ಯೂಮೆಂಟ್ ಗಳನ್ನು ಕ್ರಿಯೇಟ್ ಮಾಡಲು 'Google Docs' ಅನ್ನು (ಗೂಗಲ್ ಡಾಕ್ಸ್), |
07:54 | ಸ್ಪ್ರೆಡ್ಶೀಟ್ ಗಳನ್ನು ಕ್ರಿಯೇಟ್ ಮಾಡಲು, 'Google Sheets' ಅನ್ನು (ಗೂಗಲ್ ಶೀಟ್ಸ್) |
07:57 | ಮತ್ತು ಪ್ರೆಸೆಂಟೇಶನ್ ಗಳನ್ನು ಕ್ರಿಯೇಟ್ ಮಾಡಲು, 'Google Slides' (ಗೂಗಲ್ ಸ್ಲೈಡ್ಸ್) ಗಳನ್ನು ನಾವು ಪಡೆದಿದ್ದೇವೆ. |
08:01 | ಇಲ್ಲಿ, 'Google Docs' ಬಳಸಿ ಒಂದು ಡಾಕ್ಯೂಮೆಂಟ್ ಅನ್ನು ಕ್ರಿಯೇಟ್ ಮಾಡುವುದನ್ನು ಮಾತ್ರ ನಾನು ಮಾಡಿ ತೋರಿಸುವೆನು. |
08:08 | ಒಂದು ಹೊಸ ಡಾಕ್ಯೂಮೆಂಟ್ ಅನ್ನು ಕ್ರಿಯೇಟ್ ಮಾಡಲು, 'New' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Google Docs' ಅನ್ನು ಆಯ್ಕೆಮಾಡಿ. |
08:14 | ಇದು, ಹೊಸ ಟ್ಯಾಬ್ ನಲ್ಲಿ ಒಂದು ಖಾಲಿ ಡಾಕ್ಯೂಮೆಂಟ್ ಅನ್ನು ಓಪನ್ ಮಾಡುವುದು. |
08:19 | ಮೆನ್ಯೂಗಳು ಮತ್ತು ಟೆಕ್ಸ್ಟ್ ಫಾರ್ಮ್ಯಾಟಿಂಗ್ ಆಯ್ಕೆಗಳು, 'Office Suite' ನಲ್ಲಿ ಇರುವಂತೆಯೇ ಆಗಿವೆ ಎಂಬುದನ್ನು ನಾವು ನೋಡಬಹುದು. |
08:26 | ಮೇಲ್ಗಡೆಯಲ್ಲಿ, ಡಾಕ್ಯೂಮೆಂಟ್ ನ ಶೀರ್ಷಿಕೆಯು 'Untitled document’ ಆಗಿದೆ ಎಂಬುದನ್ನು ಗಮನಿಸಿ. |
08:31 | ಈ ಟೈಟಲ್ ಅನ್ನು ಎಡಿಟ್ ಮಾಡಬಹುದು. ಟೈಟಲ್ ಅನ್ನು 'ರಿ-ನೇಮ್' (rename) ಮಾಡಲು, ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ. |
08:38 | 'Rename document' ವಿಂಡೋ ತೆರೆದುಕೊಳ್ಳುತ್ತದೆ. |
08:41 | ಇಲ್ಲಿ, ನಾವು ನಮ್ಮ ಡಾಕ್ಯೂಮೆಂಟ್ ಗೆ ಸೂಕ್ತವಾದ ಶೀರ್ಷಿಕೆಯನ್ನು ಟೈಪ್ ಮಾಡಬಹುದು. |
08:46 | ನಾನು 'My first google doc' ಎಂದು ಟೈಪ್ ಮಾಡುತ್ತೇನೆ ಮತ್ತು 'OK'ಯ ಮೇಲೆ ಕ್ಲಿಕ್ ಮಾಡುತ್ತೇನೆ. |
08:53 | ಟೈಟಲ್ ನಲ್ಲಿನ ಬದಲಾವಣೆಯನ್ನು ಗಮನಿಸಿ. |
08:56 | ನಂತರ, ನಾನು ಇಲ್ಲಿ “Welcome to Google Docs” ಎಂದು ಟೈಪ್ ಮಾಡುತ್ತೇನೆ. |
09:02 | ಈ ಡಾಕ್ಯೂಮೆಂಟ್ ಗೆ ಸೇರಿಸಿರುವ, ಬದಲಾಯಿಸಿರುವ ಅಥವಾ ತೆಗೆದುಹಾಕಿರುವುದೆಲ್ಲ ತನ್ನಷ್ಟಕ್ಕೆ ತಾನೇ ಸೇವ್ ಆಗುವುದು. |
09:08 | ಮೇಲ್ಗಡೆ 'Help' ಎಂಬ ಮೆನ್ಯೂವಿನ ಬದಿಯಲ್ಲಿ, “All changes saved in Drive” ಎಂಬ ಮೆಸೇಜ್ ಅನ್ನು ನೋಡಿ. |
09:14 | ಅದರ ಮೇಲೆ ಕ್ಲಿಕ್ ಮಾಡಿದರೆ, ಬಲಗಡೆಯಲ್ಲಿ 'Revision History' ಎಂಬುದನ್ನು ನಾವು ನೋಡಬಹುದು. |
09:19 | ಇದು ಕೊನೆಯ ಬದಲಾವಣೆಯ ದಿನಾಂಕ ಮತ್ತು ಸಮಯವನ್ನು ಹೊಂದಿದೆ ಮತ್ತು ಬದಲಾವಣೆಯನ್ನು ಯಾರು ಮಾಡಿದರು ಎಂಬುದನ್ನು ಸಹ ತೋರಿಸುತ್ತದೆ. |
09:26 | ಸಧ್ಯಕ್ಕೆ, ಈ ಡಾಕ್ಯೂಮೆಂಟ್ ಅನ್ನು ಯಾರ ಜೊತೆಗೂ ‘ಶೇರ್’ ಮಾಡಲಾಗಿಲ್ಲ. |
09:30 | ಹೀಗಾಗಿ, ನಾವು ದಿನಾಂಕ ಮತ್ತು ಸಮಯಗಳ ಜೊತೆಗೆ ‘Rebecca Raymond’ ಎಂಬ ಒಬ್ಬ ಬಳಕೆದಾರಳನ್ನು (user) ಮಾತ್ರ ನೋಡಬಹುದು. |
09:37 | ಈ ‘ಗೂಗಲ್ ಡಾಕ್’ಅನ್ನು ಅನೇಕ ಜನರೊಂದಿಗೆ ‘ಶೇರ್’ ಮಾಡಿದರೆ, 'revision history' ಯು, ಬೆರೆ ಬೆರೆ ಬಣ್ಣಗಳಲ್ಲಿ, ಪ್ರತಿಯೊಬ್ಬ ಯೂಸರ್ ನ ವಿವರಗಳನ್ನು, ಅವರಿಂದ ಮಾಡಲ್ಪಟ್ಟ ಎಲ್ಲ ಬದಲಾವಣೆಗಳೊಂದಿಗೆ ಪಟ್ಟಿ ಮಾಡುವುದು. |
09:48 | ನಾವು ಈ ವೈಶಿಷ್ಟ್ಯವನ್ನು, ಈ ಟ್ಯುಟೋರಿಯಲ್ ನಲ್ಲಿ ಸ್ವಲ್ಪ ಸಮಯದ ನಂತರ ನೋಡುವೆವು. |
09:53 | 'Revision History' ಯನ್ನು ಕ್ಲೋಸ್ ಮಾಡಿ. |
09:56 | ನಾನು ಈ ಟ್ಯಾಬ್ ಅನ್ನು ಕ್ಲೋಸ್ ಮಾಡುತ್ತೇನೆ. ‘ಗೂಗಲ್ ಡಾಕ್’, ತನ್ನಷ್ಟಕ್ಕೆ ತಾನೇ ಸೇವ್ ಆಗುವುದು. |
10:02 | ಮತ್ತೊಮ್ಮೆ, ನಾವು ‘My Drive’ ನಲ್ಲಿ ಇದ್ದೇವೆ ಮತ್ತು ಇಲ್ಲಿ ನಮ್ಮ ಫೈಲ್ ಅನ್ನು ನೋಡಬಹುದು. |
10:07 | ಅದನ್ನು ಓಪನ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
10:10 | ಈಗ, ನಾವು “Welcome to Google Docs” ಎಂಬ ಪಂಕ್ತಿಯನ್ನು ಎರಡು ಸಲ ‘ಕಾಪಿ-ಪೇಸ್ಟ್’ ಮಾಡಿ ಆಮೇಲೆ ಟ್ಯಾಬ್ ಅನ್ನು ಕ್ಲೋಸ್ ಮಾಡೋಣ. |
10:17 | ಫೈಲ್ ಅನ್ನು ಓಪನ್ ಮಾಡಲು, ಅದರ ಮೇಲೆ ಇನ್ನೊಮ್ಮೆ ಡಬಲ್-ಕ್ಲಿಕ್ ಮಾಡಿ. |
10:20 | ಮತ್ತೊಮ್ಮೆ, “Welcome to Google Docs” ಎಂಬ ಪಂಕ್ತಿಯನ್ನು ‘ಕಾಪಿ-ಪೇಸ್ಟ್’ ಮಾಡಿ. |
10:26 | ಈಗ, 'Revision History' ಯ ಮೇಲೆ ಕ್ಲಿಕ್ ಮಾಡಿ. ನಾವು ಫೈಲ್ ನ ಎಲ್ಲ ಪರಿಷ್ಕರಣೆಗಳನ್ನು (revision), ‘ಡೇಟ್-ಟೈಮ್’ ಸ್ಟಾಂಪ್ ಮತ್ತು ಯೂಸರ್ ನ ಮಾಹಿತಿಯೊಂದಿಗೆ ನೋಡಬಹುದು. |
10:36 | ಅನೇಕ ಪರಿಷ್ಕರಣೆಗಳು ಕಾಣಿಸದಿದ್ದರೆ, ಆಗ, ಕೆಳಗೆ ಇರುವ “Show more detailed revisions” ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
10:44 | ಈ ಪರಿಷ್ಕರಣೆಗಳು (revisions) ಕಾಲಾನುಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತವೆ ಮತ್ತು ಇತ್ತೀಚಿನ ರಿವಿಶನ್ ಎಲ್ಲಕ್ಕಿಂತ ಮೇಲೆ ಇರುತ್ತದೆ. |
10:50 | ಪ್ರತಿಯೊಂದು ರಿವಿಶನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಈ ವೈಶಿಷ್ಟ್ಯವು ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಿ. |
10:55 | ಈಗ ನಾನು ಈ ಡಾಕ್ಯೂಮೆಂಟ್ ಅನ್ನು ಬೇರೆ ಇಬ್ಬರು ಬಳಕೆದಾರರೊಂದಿಗೆ ‘ಶೇರ್’ ಮಾಡುತ್ತೇನೆ. |
10:59 | ಇದಕ್ಕಾಗಿ, ಮೇಲಕ್ಕೆ ಬಲಗಡೆ ಇರುವ 'Share' ಬಟನ್ ನ ಮೇಲೆ ಕ್ಲಿಕ್ ಮಾಡಿ. |
11:03 | 'Share with others' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
11:07 | 'People' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ನಮಗೆ ಯಾರ ಜೊತೆಯಲ್ಲಿ ಈ ಡಾಕ್ಯೂಮೆಂಟ್ಅನ್ನು ಶೇರ್ ಮಾಡಬೇಕಾಗಿದೆಯೋ, ಅವರ ಇಮೇಲ್-id ಗಳನ್ನು ನಾವು ಕೊಡಬೇಕು. |
11:15 | ಆದ್ದರಿಂದ, ನಾನು ಹೀಗೆ ಟೈಪ್ ಮಾಡುವೆನು: “0808iambecky@gmail.com”. |
11:23 | ಈ ಮೊದಲು ನಾವು ಯಾರಿಗೆ ಇಮೇಲ್ ಗಳನ್ನು ಕಳಿಸಿದ್ದೆವೋ ಅವರ ಇಮೇಲ್-id ಗಳಿಗಾಗಿ, 'auto-fill' ಎಂಬ ವೈಶಿಷ್ಟ್ಯವು ಇಲ್ಲಿ ಲಭ್ಯವಿರುವುದನ್ನು ಗಮನಿಸಿ. |
11:31 | ಬೇರೆ ಬಳಕೆದಾರರೊಂದಿಗೆ ನಾವು ಡಾಕ್ಯೂಮೆಂಟ್ ಅನ್ನು, ಇಲ್ಲಿರುವ ಈ ಮೂರು ಮೋಡ್ ಗಳಲ್ಲಿ ‘ಶೇರ್’ ಮಾಡಬಹುದು. |
11:36 | ಈ ಮೂರು ಮೋಡ್ ಗಳನ್ನು ನೋಡಲು, ಇಲ್ಲಿ ಬಟನ್ ನ ಮೇಲೆ ಕ್ಲಿಕ್ ಮಾಡಿ:
'Can edit' 'Can comment' 'Can view'. |
11:44 | 'Can edit' ಆಯ್ಕೆಯು, ಬೇರೆ ಯೂಸರ್ ಗಳಿಗೆ, ಡಾಕ್ಯೂಮೆಂಟ್ ನಲ್ಲಿ ಬದಲಾವಣೆಗಳನ್ನು ಮಾಡಲು ಅನುಮತಿಯನ್ನು ಕೊಡುತ್ತದೆ. |
11:51 | 'Can comment' ಆಯ್ಕೆಯು, ಬೇರೆ ಯೂಸರ್ ಗಳಿಗೆ, ಬದಲಾವಣೆಗಳನ್ನು ಸೂಚಿಸಲು ಅನುಮತಿಯನ್ನು ಕೊಡುತ್ತದೆ. |
11:56 | 'Can view' ಆಯ್ಕೆಯು, ಬೇರೆ ಯೂಸರ್ ಗಳಿಗೆ, ನೋಡಲು ಮಾತ್ರ ಅನುಮತಿಯನ್ನು ಕೊಡುತ್ತದೆ. |
12:00 | ಅವರು ಬದಲಾವಣೆಗಳನ್ನು ಮಾಡಲು ಅಥವಾ ಸೂಚಿಸಲು ಸಾಧ್ಯವಿಲ್ಲ. |
12:04 | ನಾವು 'Can edit' ಆಯ್ಕೆಯನ್ನು '0808iambecky' ಗೆ ಕೊಡೋಣ. |
12:09 | ನಾನು 'stlibreoffice@gmail.com' ಅನ್ನು ಸಹ ಸೇರಿಸುವೆನು. |
12:16 | ಎರಡು ಇಮೇಲ್-id ಗಳ ನಡುವೆ, ಅಲ್ಪವಿರಾಮ ಚಿಹ್ನೆಯನ್ನು (comma) ಉಪಯೋಗಿಸುವುದನ್ನು ನೆನಪಿಡಿ. |
12:21 | ಇಮೇಲ್-id ಗಳನ್ನು ಸೇರಿಸಿದ ಕೂಡಲೆ, ಈ ವಿಂಡೋದಲ್ಲಿ ಬದಲಾವಣೆ ಆಗುವುದು. |
12:25 | ನಮಗೆ ‘Add a note’ ಎಂಬ ‘ಟೆಕ್ಸ್ಟ್ ಏರಿಯಾ’ ಸಿಗುವುದು. |
12:28 | ನಮಗೆ, ಈ ಡಾಕ್ಯೂಮೆಂಟ್ ನ ಬಗ್ಗೆ ಸ್ವಲ್ಪ ಮಾಹಿತಿಯನ್ನು ಬೇರೆ ಯೂಸರ್ ಗಳಿಗೆ ಕಳಿಸಬೇಕಾಗಿದ್ದರೆ ನಾವು ಅದನ್ನು ಇಲ್ಲಿ ಟೈಪ್ ಮಾಡಬಹುದು. |
12:36 | ನಾನು ಹೀಗೆ ಟೈಪ್ ಮಾಡುವೆನು: “Please find attached document for testing purpose. Kindly modify or suggest, as per the permission given to you.
Thanks Ray.Becky” |
12:47 | ಕೊನೆಯದಾಗಿ, ‘ಶೇರ್’ ಮಾಡುವ (sharing) ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು, 'Send' ಬಟನ್ ನ ಮೇಲೆ ಕ್ಲಿಕ್ ಮಾಡಿ. |
12:52 | ಇದು, ಬೇರೆ ಯೂಸರ್ ಗಳಿಗೆ ನಮ್ಮ ಮೆಸೇಜ್ ಮತ್ತು ‘ಶೇರ್’ ಮಾಡಲ್ಪಟ್ಟ ಡಾಕ್ಯೂಮೆಂಟ್ ಅನ್ನು ಒಂದು 'ಲಿಂಕ್' ನೊಂದಿಗೆ, ಇಮೇಲ್-ನ ಮುಖಾಂತರ (email notification) ಕಳಿಸುವುದು. |
12:59 | ಮತ್ತೊಮ್ಮೆ, 'Share' ಬಟನ್ ನ ಮೇಲೆ ಕ್ಲಿಕ್ ಮಾಡಿ. |
13:02 | ಆಮೇಲೆ 'Advanced' ನ ಮೇಲೆ ಕ್ಲಿಕ್ ಮಾಡಿ. |
13:05 | ಈಗ, ನಾವು 'stlibreoffice' ಎಂಬ ಯೂಸರ್ ಗಾಗಿ, ‘ಶೇರ್’ ಮಾಡುವ ಮೋಡ್ ಅನ್ನು 'Can comment' ಗೆ ಬದಲಾಯಿಸುವೆವು. |
13:12 | ಕೊನೆಯದಾಗಿ, 'Save changes' ಬಟನ್ ಮೇಲೆ, ಆಮೇಲೆ 'Done' ಬಟನ್ ನ ಮೇಲೆ ಕ್ಲಿಕ್ ಮಾಡಿ |
13:18 | ಮತ್ತು ಈ ಡಾಕ್ಯೂಮೆಂಟ್ ಅನ್ನು ಕ್ಲೋಸ್ ಮಾಡಿ (ಮುಚ್ಚಿಬಿಡಿ). |
13:21 | ಈಗ, ಇಬ್ಬರೂ ಯೂಸರ್ ಗಳು, ‘ಶೇರ್’ ಮಾಡಿದ ಡಾಕ್ಯೂಮೆಂಟ್ ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಊಹಿಸಿಕೊಳ್ಳಿ. |
13:27 | ಕೆಲವು ಸಮಯದ ನಂತರ ಡಾಕ್ಯೂಮೆಂಟ್ ಅನ್ನು ಮತ್ತೆ ಓಪನ್ ಮಾಡಿದಾಗ, ‘ಶೇರ್’ ಮಾಡಲ್ಪಟ್ಟ ಯೂಸರ್ ಗಳು ಮಾಡಿರುವ ಎಡಿಟ್ ಗಳನ್ನು ನಾವು ನೋಡಬಹುದು. |
13:34 | 'stlibreoffice@gmail.com', ಕೇವಲ ಸೂಚಿಸುವ ಅನುಮತಿಯನ್ನು (‘suggest’ permission) ಪಡೆದಿದ್ದರಿಂದ, ಆ ಯೂಸರ್ ನಿಂದ ಕೊಡಲ್ಪಟ್ಟ ಸೂಚನೆಗಳನ್ನು ನಾವು ನೋಡಬಹುದು. |
13:43 | ನಿಮ್ಮ ಮೌಸ್ ಅನ್ನು, ‘ಸಜೆಶನ್ ಬಾಕ್ಸ್’ನ 'ಚೆಕ್' ಮತ್ತು 'ಕ್ರಾಸ್' ಗುರುತುಗಳ ಮೇಲೆ ಕೊಂಡೊಯ್ಯಿರಿ. |
13:49 | 'ಚೆಕ್' ಗುರುತು, Accept suggestion ಮತ್ತು 'ಕ್ರಾಸ್' ಗುರುತು Reject suggestion ಎಂದು ಹೇಳುತ್ತದೆ. |
13:56 | ನಾನು ಒಂದು ಸೂಚನೆಯನ್ನು ಸ್ವೀಕರಿಸುತ್ತೇನೆ ಮತ್ತು ಇನ್ನೊಂದನ್ನು ತ್ಯಜಿಸುತ್ತೇನೆ. |
14:02 | ಇಲ್ಲಿ, ನಾವು 0808iambecky ಯಿಂದ ಒಂದು ಕಾಮೆಂಟ್ ಅನ್ನು ನೋಡಬಹುದು |
14:07 | ಮತ್ತು ಇಲ್ಲಿ, 'Resolve' ಬಟನ್ ಅನ್ನು ನಾವು ನೋಡಬಹುದು. |
14:11 | 'Can edit' ಆಯ್ಕೆಯನ್ನು ಪಡೆದ ಯೂಸರ್ ಗಳು, ಆ ಕಾಮೆಂಟ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಕಾಮೆಂಟ್ ಗೆ ಉತ್ತರಿಸಬಹುದು. |
14:18 | ‘ಕಾಮೆಂಟ್ ಥ್ರೆಡ್’ (ಎಳೆ) ಅನ್ನು ತೆಗೆದುಹಾಕಲು,'Resolve ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
14:22 | 0808iambecky ಯಿಂದ, ಡಾಕ್ಯೂಮೆಂಟ್ ನಲ್ಲಿ ಮಾಡಲ್ಪಟ್ಟ ಯಾವುದೇ ಬದಲಾವಣೆಗಳನ್ನು ನಾವು ನೋಡಲು ಸಾಧ್ಯವಿಲ್ಲ. |
14:29 | ಈ ಯೂಸರ್, ಡಾಕ್ಯೂಮೆಂಟ್ ನಲ್ಲಿ ‘edit ಪರ್ಮಿಶನ್’ ಅನ್ನು ಪಡೆದಿದ್ದ ಎಂಬುದನ್ನು ನೆನಪಿಸಿಕೊಳ್ಳಿ. |
14:34 | ಹೀಗಾಗಿ, ಆ ಯೂಸರ್ ನಿಂದ ಯಾವ ಬದಲಾವಣೆಗಳು ಮಾಡಲ್ಪಟ್ಟಿವೆ ಎಂಬುದನ್ನು ನಾವು ಹೇಗೆ ಕಂಡುಹಿಡಿಯಬಹುದು? |
14:39 | ಅದಕ್ಕಾಗಿ, ನಾವು ನಮ್ಮ Revision History ಯನ್ನು ತಪಾಸಣೆ (ಚೆಕ್) ಮಾಡಬಹುದು. |
14:43 | ಅದನ್ನು ಓಪನ್ ಮಾಡಲು, 'File' ನ ಮೇಲೆ, ಆನಂತರ See revision history ಯ ಮೇಲೆ ಕ್ಲಿಕ್ ಮಾಡುವೆವು. |
14:50 | '0808iambecky', ಕೆಲವು ಬದಲಾವಣೆಗಳನ್ನು ಮಾಡಿದ್ದಾಳೆ ಎಂಬುದನ್ನು ನಾವು ನೋಡಬಹುದು ಮತ್ತು ಇದು ಬೇರೆ ಬಣ್ಣದಲ್ಲಿ ಕಾಣುತ್ತದೆ. |
14:58 | 'stlibreoffice@gmail.com' ಯಿಂದ ಕೊಡಲ್ಪಟ್ಟ ಸೂಚನೆಗಳನ್ನು ಸಹ ನಾವು ಬೇರೆ ಬಣ್ಣದಲ್ಲಿ ನೋಡಬಹುದು. |
15:05 | ಅಷ್ಟೇ ಏಕೆ, ನಾವೇ ‘ಓನರ್’ (ಮಾಲೀಕ) ಆಗಿರುವುದರಿಂದ, ನಾವು ನಮ್ಮದೇ ಕೆಲಸವನ್ನು ಬೇರೆ ಬಣ್ಣದಲ್ಲಿ ನೋಡುವೆವು. |
15:11 | ನಾವು ಈಗ Revision History ವಿಂಡೋಅನ್ನು ಕ್ಲೋಸ್ ಮಾಡೋಣ. |
15:14 | ಇಲ್ಲಿ, ಡಾಕ್ಯೂಮೆಂಟ್ ಅನ್ನು ‘ಶೇರ್’ ಮಾಡಲು ಬೇರೊಂದು ವಿಧಾನವಿದೆ. Share ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
15:20 | ‘Share with others’ ಎಂಬ ವಿಂಡೋದಲ್ಲಿ, ಮೇಲಿನ ಬಲಭಾಗದಲ್ಲಿ, ‘Get shareable link’ ಎಂಬ ಟೆಕ್ಸ್ಟ್ ಅನ್ನು ನಾವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. |
15:29 | ಇದು “Anyone with the link can view” ಎಂದು ಹೇಳುತ್ತದೆ. |
15:32 | ಇದು, ಈ ಡಾಕ್ಯೂಮೆಂಟ್ ನ ಒಂದು ಲಿಂಕನ್ನು ಕ್ರಿಯೇಟ್ ಮಾಡುವುದು. |
15:35 | ಈಗ, ನಾವು ಯಾವುದೇ ಇಮೇಲ್-id ಗೆ ಈ ಲಿಂಕನ್ನು ಕಳಿಸಬಹುದು. ಎಂದರೆ, ಈ ಲಿಂಕನ್ನು ಹೊಂದಿದ ಯಾರೇ ಆದರೂ ಈ ಡಾಕ್ಯೂಮೆಂಟ್ ಅನ್ನು ನೋಡಬಹುದು. |
15:44 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
15:47 | ಸಂಕ್ಷಿಪ್ತವಾಗಿ, |
15:49 | ಈ ಟ್ಯುಟೋರಿಯಲ್ ನಲ್ಲಿ, ನಾವು:
‘Google Drive’ ಅನ್ನು ಆಕ್ಸೆಸ್ ಮಾಡಲು, ಫೈಲ್ ಗಳನ್ನು ಕ್ರಿಯೇಟ್ ಮತ್ತು ಅಪ್ಲೋಡ್ ಮಾಡಲು, Google Docs ಕ್ರಿಯೇಟ್ ಮಾಡಲು ಮತ್ತು, ‘ಶೇರ್’ ಮಾಡುವ ಆಯ್ಕೆಗಳನ್ನು ಬಳಸಲು ಕಲಿತಿದ್ದೇವೆ. |
16:00 | ಈ ಲಿಂಕ್ ನಲ್ಲಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
16:07 | ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
16:16 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
16:27 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .ವಂದನೆಗಳು. |