Difference between revisions of "ExpEYES/C3/Transient-Response-of-Circuits/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 250: | Line 250: | ||
|- | |- | ||
|08:57 | |08:57 | ||
− | |'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | |'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
ವಂದನೆಗಳು. | ವಂದನೆಗಳು. | ||
|} | |} |
Latest revision as of 12:57, 23 September 2017
Time | Narration |
00:01 | ನಮಸ್ಕಾರ. Transient Response of circuits (ಟ್ರಾನ್ಸಿಯೆಂಟ್ ರಿಸ್ಪಾನ್ಸ್ ಆಫ್ ಸರ್ಕೀಟ್ಸ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:08 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
ಇವುಗಳನ್ನು ಕಲಿಯುವೆವು. |
00:24 | ಇಲ್ಲಿ ನಾನು:
ಇವುಗಳನ್ನು ಬಳಸುತ್ತಿದ್ದೇನೆ. |
00:33 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:44 | ಮೊದಲು, ನಾವು ಒಂದು 'ಸರ್ಕೀಟ್' ನ 'ಟ್ರಾನ್ಸಿಯೆಂಟ್ ರಿಸ್ಪಾನ್ಸ್'ಅನ್ನು (transient Response) ವ್ಯಾಖ್ಯಾನಿಸೋಣ. |
00:49 | ಕೆಪ್ಯಾಸಿಟರ್ ಗಳು ಅಥವಾ ‘ಇಂಡಕ್ಟರ್’ಗಳಲ್ಲಿ ಶೇಖರಿಸಿರುವ ಎನರ್ಜೀಗೆ ಒಂದು ‘ಸರ್ಕೀಟ್’ ತೋರಿಸುವ ಪ್ರತಿಕ್ರಿಯೆಯನ್ನು ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ ಎಂದು ಹೇಳಲಾಗುತ್ತದೆ.
ಒಂದು 'ಕೆಪ್ಯಾಸಿಟರ್' ಅಥವಾ ಒಂದು 'ಇಂಡಕ್ಟರ್'ನಲ್ಲಿ ಶೇಖರಿಸಲಾದ ಎನರ್ಜಿಯನ್ನು (ಶಕ್ತಿ) ಒಂದು 'ರೆಜಿಸ್ಟರ್' ನ ಮೂಲಕ ನಷ್ಟಗೊಳಿಸಬಹುದು. |
01:03 | ಈಗ 'RC ‘ಸರ್ಕೀಟ್’ ನ ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ಅನ್ನು ಮಾಡಿತೋರಿಸುವೆವು. |
01:07 | ಈ ಪ್ರಯೋಗದಲ್ಲಿ, ನಾವು:
|
01:18 | ಈ ಪ್ರಯೋಗವನ್ನು ಮಾಡಲು, OD1 ಅನ್ನು 1K ರೆಜಿಸ್ಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. |
01:24 | A1 ಮತ್ತು ಗ್ರೌಂಡ್ (GND) ಗಳ ನಡುವೆ 1 uF (ಒಂದು ಮೈಕ್ರೋ ಫರಾಡ್) ಕೆಪ್ಯಾಸಿಟರ್ ಅನ್ನು ಜೋಡಿಸಲಾಗಿದೆ.
ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
01:34 | ನಾವು ಇದರ ಪರಿಣಾಮವನ್ನು 'ಪ್ಲಾಟ್ ವಿಂಡೋ'ದಲ್ಲಿ ನೋಡೋಣ. |
01:36 | 'ಪ್ಲಾಟ್ ವಿಂಡೋ'ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'RC Circuit' ಅನ್ನು ಆಯ್ಕೆಮಾಡಿ. |
01:43 | 'Transient response of RC Circuit' ಮತ್ತು 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ.
'Schematic' ವಿಂಡೋ, 'RC Circuit Transient' ಅನ್ನು ತೋರಿಸುತ್ತದೆ. |
01:52 | 'Transient response of RC Circuit' ವಿಂಡೋದಲ್ಲಿ, '0 to 5V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ.
'ಸ್ಟೆಪ್ ಅಪ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗುತ್ತದೆ. |
02:03 | ಆಮೇಲೆ '5 to 0 V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಟೆಪ್ ಡೌನ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗುತ್ತದೆ. |
02:11 | 'Calculate RC' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
'RC = 1.14 msec' ಇದೆ ಎಂದು ಪ್ರದರ್ಶಿಸಲಾಗುತ್ತಿದೆ. |
02:20 | ವಿಂಡೋಅನ್ನು ತೆರವುಗೊಳಿಸಲು 'Clear' ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:24 | 'CC Charge' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 4.5 volts ಗೆ ಒಂದು ಅಡ್ಡಲಾದ ಟ್ರೇಸ್ ಕಂಡುಬರುತ್ತದೆ. |
02:31 | ನಂತರ:
|
02:41 | ‘ಸರ್ಕೀಟ್’ ನಲ್ಲಿ, ನಾವು OD1 ಗೆ ಬದಲಾಗಿ 1K ರೆಜಿಸ್ಟರ್ ಅನ್ನು CCS ಗೆ ಜೋಡಿಸುವೆವು. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
02:51 | ವಿಂಡೋಅನ್ನು ತೆರವುಗೊಳಿಸಲು, 'CLEAR ' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:55 | 'CC Charge' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಕೆಪ್ಯಾಸಿಟರ್' ನ ವೋಲ್ಟೇಜ್ ಗಮನಾರ್ಹವಾಗಿ (exponentially) ವೃದ್ಧಿಸುತ್ತದೆ. |
03:03 | 'Calculate RC' ಬಟನ್ ನ ಮೇಲೆ ಕ್ಲಿಕ್ ಮಾಡಿ. ವ್ಯಾಲ್ಯೂ,
'RC= 5.81 mSec' ಎಂದು ಪ್ರದರ್ಶಿಸಲಾಗುತ್ತದೆ. |
03:12 | ಈಗ 'RL ಸರ್ಕೀಟ್' ನ ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ ಅನ್ನು ಮಾಡಿತೋರಿಸುವೆವು. |
03:17 | ಈ ಪ್ರಯೋಗದಲ್ಲಿ:
|
03:26 | ಈ ಪ್ರಯೋಗದಲ್ಲಿ,
IN1 ಅನ್ನು OD1 ಗೆ ಜೋಡಿಸಲಾಗಿದೆ. OD1 ಅನ್ನು '1K' ರೆಜಿಸ್ಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. A1 ಅನ್ನು ಒಂದು ಕಾಯ್ಲ್ ನ ಮೂಲಕ GND ಗೆ ಜೋಡಿಸಲಾಗಿದೆ. |
03:38 | ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
03:41 | ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
03:44 | 'ಪ್ಲಾಟ್ ವಿಂಡೋ' ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'RL Circuit' ಅನ್ನು ಆಯ್ಕೆಮಾಡಿ. |
03:51 | 'Transient response of RL Circuit' ಮತ್ತು 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ.
'Schematic' ವಿಂಡೋ 'RL Circuit, Transient' ಅನ್ನುತೋರಿಸುತ್ತದೆ. |
04:02 | 'Transient response of RL Circuit' ವಿಂಡೋದಲ್ಲಿ, '0 to 5V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ.
'ಸ್ಟೆಪ್ ಅಪ್' ವೋಲ್ಟೇಜ್ ಕರ್ವ್ ಅನ್ನುಪ್ರದರ್ಶಿಸಲಾಗುತ್ತದೆ. |
04:12 | '5 to 0 V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಟೆಪ್ ಡೌನ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗುತ್ತದೆ. |
04:20 | ವ್ಯಾಲ್ಯೂಗಳನ್ನು ಪ್ರದರ್ಶಿಸಲು, 'Calculate R/L' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:26 | 'L/R' ನ ವ್ಯಾಲ್ಯೂ, 0.083 mSec (ಮಿಲಿ ಸೆಕೆಂಡ್ ಗಳು),
'Rind' ನ ವ್ಯಾಲ್ಯೂ, 529 Ohm ಗಳು, |
04:35 | ’ಇಂಡಕ್ಟರ್’ ನ ವ್ಯಾಲ್ಯೂ 127.6mH (ಮಿಲಿ ಹೆನ್ರೀ) ಆಗಿರುತ್ತವೆ.
ಇಲ್ಲಿ - 'R' ರೆಸಿಸ್ಟನ್ಸ್, 'L' ಇಂಡಕ್ಟನ್ಸ್ ಮತ್ತು 'Rind' - ‘ಇಂಡಕ್ಟರ್’ ನ ರೆಸಿಸ್ಟನ್ಸ್ ಆಗಿವೆ. |
04:50 | ಒಂದು ಅಸೈನ್ಮೆಂಟ್-
’ಸಿರೀಸ್’ ನಲ್ಲಿ ಜೋಡಿಸಲಾದ ಎರಡು ಕಾಯ್ಲ್ ಗಳನ್ನು ಬಳಸಿ, 'RL ಸರ್ಕೀಟ್' ನ ವೋಲ್ಟೇಜ್ ಕರ್ವ್ ಗಳನ್ನು ರಚಿಸಿ. |
04:57 | ಈಗ, ನಾವು 'LCR ಸರ್ಕೀಟ್' ನ 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್' ಅನ್ನು (underdamped discharge) ತೋರಿಸುತ್ತೇವೆ. |
05:02 | ಈ ಪ್ರಯೋಗದಲ್ಲಿ, OD1 ಅನ್ನು ಒಂದು ಕಾಯ್ಲ್ ನ ಮೂಲಕ A1 ಗೆ ಜೋಡಿಸಲಾಗಿದೆ. |
05:07 | A1 ಅನ್ನು '0.1uF' (0.1 ಮೈಕ್ರೋ ಫರಾಡ್) ಕೆಪ್ಯಾಸಿಟನ್ಸ್ ಮೂಲಕ GND ಗೆ ಜೋಡಿಸಲಾಗಿದೆ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
05:15 | ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
05:18 | 'ಪ್ಲಾಟ್ ವಿಂಡೋದಲ್ಲಿ', 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'RLC Discharge' ಅನ್ನು ಆಯ್ಕೆಮಾಡಿ. |
05:25 | 'EYES Junior: RLC Discharge' ವಿಂಡೋ ಹಾಗೂ 'Schematic' ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, 'RLC Circuit, Transient' ಅನ್ನು ತೋರಿಸುತ್ತದೆ. |
05:35 | 'EYES Junior: RLC Discharge' ವಿಂಡೋದಲ್ಲಿ, '5->0V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಟೆಪ್ ಡೌನ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗಿದೆ. |
05:45 | 'mS/div' ಸ್ಲೈಡರ್ ಅನ್ನು ಕದಲಿಸಿ ಮತ್ತು '5->0V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್ ಕರ್ವ್' (Underdamped discharge curve) ಅನ್ನು ಪ್ರದರ್ಶಿಸಲಾಗಿದೆ. |
05:55 | ವ್ಯಾಲ್ಯೂಗಳನ್ನು ತೋರಿಸಲು, 'FIT' ಬಟನ್ ನ ಮೇಲೆ ಕ್ಲಿಕ್ ಮಾಡಿ.
'Resonant Frequency = 1.38 KHz' ಮತ್ತು 'Damping = 0.300'. |
06:08 | ಒಂದು ಅಸೈನ್ಮೆಂಟ್-
ಒಂದು 2K ರೆಜಿಸ್ಟರ್ ಅನ್ನು ಬಳಸಿ, LCR ‘ಸರ್ಕೀಟ್’ನ 'ಓವರ್-ಡ್ಯಾಂಪ್ಡ್ ಡಿಸ್ಚಾರ್ಜ್' ಅನ್ನು (overdamped discharge) ರಚಿಸಿ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
06:18 | ಈಗ, 'RC integration' ಅನ್ನು ಮಾಡಿತೋರಿಸುವೆವು. |
06:21 | ಈ ಪ್ರಯೋಗದಲ್ಲಿ ನಾವು, ಒಂದು ಚೌಕ ತರಂಗವನ್ನು ತ್ರಿಕೋನ ತರಂಗವನ್ನಾಗಿ ಬದಲಾಯಿಸುವೆವು. |
06:28 | ಇಲ್ಲಿ, SQR2 ಅನ್ನು 1K ರೆಜಿಸ್ಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
06:34 | ಇದರ ಪರಿಣಾಮವನ್ನು ನಾವು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
06:38 | 'ಪ್ಲಾಟ್ ವಿಂಡೋ' ದಲ್ಲಿ, SQR2 ಅನ್ನು 1000 Hz ಗಳಿಗೆ ಸೆಟ್ ಮಾಡಿ. SQR2 ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:45 | 'ಫ್ರಿಕ್ವೆನ್ಸಿ ಸ್ಲೈಡರ್' ಅನ್ನು ಜರುಗಿಸಿ. |
06:48 | ತರಂಗವನ್ನು ಸರಿಹೊಂದಿಸಲು, mSec/div ಸ್ಲೈಡರ್ ಅನ್ನು ಜರುಗಿಸಿ. ಒಂದು ಚೌಕ ತರಂಗವನ್ನು ರಚಿಸಲಾಗಿದೆ. |
06:56 | ಇದೇ ಕನೆಕ್ಷನ್ ನಲ್ಲಿ, A1 ಅನ್ನು 1uF (ಒಂದು ಮೈಕ್ರೋ ಫರಾಡ್) ಕೆಪ್ಯಾಸಿಟರ್ ನ ಮೂಲಕ GND ಗೆ ಜೋಡಿಸಿ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
07:05 | ಒಂದು ತ್ರಿಕೋನ ತರಂಗವನ್ನು ರಚಿಸಲಾಗಿದೆ. RC ಯನ್ನು ಇಂಟಿಗ್ರೇಟ್ ಮಾಡಿದಾಗ, ಒಂದು ಚೌಕ ತರಂಗವು ತ್ರಿಕೋನ ತರಂಗವಾಗಿ ಬದಲಾಯಿಸಿದೆ. |
07:14 | ತ್ರಿಕೋನ ತರಂಗದ 'Grace' ಪ್ಲಾಟ್ ಅನ್ನು ತೋರಿಸಲು, 'XMG' ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:20 | ಈಗ, 'RC ಡಿಫರೆನ್ಸಿಯೇಶನ್' ಅನ್ನು ಮಾಡಿತೋರಿಸುವೆವು. |
07:24 | ಈ ಪ್ರಯೋಗದಲ್ಲಿ, ನಾವು ಒಂದು ಚೌಕ ತರಂಗವನ್ನು ಕಿರಿದಾದ ಸ್ಪೈಕ್ ಗಳ ತರಂಗವನ್ನಾಗಿ ಬದಲಾಯಿಸುವೆವು. |
07:31 | ಈ ಪ್ರಯೋಗದಲ್ಲಿ, SQR2 ಅನ್ನು 1uF (ಒಂದು ಮೈಕ್ರೋ ಫರಾಡ್) ಕೆಪ್ಯಾಸಿಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
07:40 | ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ. |
07:43 | ಒಂದು ಚೌಕ ತರಂಗವು ರಚಿಸಲ್ಪಟ್ಟಿದೆ. |
07:46 | ಇದೇ ಕನೆಕ್ಷನ್ ನಲ್ಲಿ, A1 ಅನ್ನು 1K ರೆಜಿಸ್ಟರ್ ನ ಮೂಲಕ GND ಗೆ ಜೋಡಿಸಿ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ. |
07:55 | 'ಪ್ಲಾಟ್ ವಿಂಡೋ' ದಲ್ಲಿ, SQR2 ಅನ್ನು 100 Hz ಗೆ ಸೆಟ್ ಮಾಡಿ. |
08:00 | ತರಂಗಗಳನ್ನು ಸರಿಹೊಂದಿಸಲು, mSec/div ಸ್ಲೈಡರ್ ಅನ್ನು ಕದಲಿಸಿ. ಕಿರಿದಾದ 'ಸ್ಪೈಕ್' ಗಳ (narrow spikes) ಒಂದು ತರಂಗವು ರಚಿಸಲ್ಪಟ್ಟಿದೆ. |
08:08 | RC ಯನ್ನು 'ಡಿಫರೆನ್ಸಿಯೇಟ್' ಮಾಡಿದಾಗ, ಚೌಕ ತರಂಗವು (square wave), ಕಿರಿದಾದ 'ಸ್ಪೈಕ್' ಗಳ (narrow spikes) ತರಂಗವಾಗಿ ಬದಲಾಯಿಸಿದೆ. |
08:15 | 'Grace' ಪ್ಲಾಟ್ ಅನ್ನು ತೋರಿಸಲು, XMG ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:19 | ಸಂಕ್ಷಿಪ್ತವಾಗಿ, |
08:21 | ಈ ಟ್ಯುಟೋರಿಯಲ್ ನಲ್ಲಿ, ನಾವು -
|
08:36 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:44 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
08:51 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
08:57 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |