Difference between revisions of "ExpEYES/C2/Panel-connections-and-software-interface/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' ||'''Narration''' |- |00:01 |ನಮಸ್ಕಾರ. '''Panel connections and Software interface''' ಎಂಬ ‘ಟ್ಯುಟೋರಿಯಲ್’...")
 
 
(4 intermediate revisions by the same user not shown)
Line 14: Line 14:
 
|00:17
 
|00:17
 
| ನಾವು-  
 
| ನಾವು-  
* ಓಂ ನ ನಿಯಮ (Ohm's law)  
+
* 'ಓಂ' ನ ನಿಯಮ (Ohm's law)  
 
* 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್
 
* 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್
 
* 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಹಾಗೂ
 
* 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಹಾಗೂ
* ಮೇಲಿನ ಪ್ರಯೋಗಗಳ ಸರ್ಕಿಟ್ ಡೈಗ್ರಾಮ್ ಇವುಗಳನ್ನು ತೋರಿಸಲು ಕಲಿತಿದ್ದೇವೆ.  
+
* ಮೇಲಿನ ಪ್ರಯೋಗಗಳ ಸರ್ಕಿಟ್ ಡೈಗ್ರಾಮ್ ಇವುಗಳನ್ನು ತೋರಿಸಲು ಕಲಿಯಲಿದ್ದೇವೆ.  
 
|-
 
|-
 
|00:33
 
|00:33
 
| ಇಲ್ಲಿ ನಾನು:
 
| ಇಲ್ಲಿ ನಾನು:
 
* '''ExpEYES''' ಆವೃತ್ತಿ 3.1.0
 
* '''ExpEYES''' ಆವೃತ್ತಿ 3.1.0
* '''Ubuntu Linux OS''' (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.04
+
* '''Ubuntu Linux OS''' (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.04 ಇವುಗಳನ್ನು ಬಳಸುತ್ತಿದ್ದೇನೆ.
 
|-
 
|-
 
|00:43
 
|00:43
Line 317: Line 317:
 
|-
 
|-
 
|13:02
 
|13:02
|'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
+
|'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
| ವಂದನೆಗಳು.
+
ವಂದನೆಗಳು.
 
|-
 
|-

Latest revision as of 20:05, 20 September 2017

Time Narration
00:01 ನಮಸ್ಕಾರ. Panel connections and Software interface ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ, ನಾವು:
  • ಪ್ಯಾನೆಲ್ ನ ಮೇಲಿನ ವಿವಿಧ ಟರ್ಮಿನಲ್ ಗಳು
  • ಅಕ್ಸೆಸ್ಸರೀ ಸೆಟ್ (ಪರಿಕರಗಳ ಸೆಟ್) ಹಾಗೂ
  • ಸಾಫ್ಟ್ವೇರ್ ಇಂಟರ್ಫೇಸ್ ಇವುಗಳ ಬಗ್ಗೆ ಕಲಿಯುವೆವು.
00:17 ನಾವು-
  • 'ಓಂ' ನ ನಿಯಮ (Ohm's law)
  • 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್
  • 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಹಾಗೂ
  • ಮೇಲಿನ ಪ್ರಯೋಗಗಳ ಸರ್ಕಿಟ್ ಡೈಗ್ರಾಮ್ ಇವುಗಳನ್ನು ತೋರಿಸಲು ಕಲಿಯಲಿದ್ದೇವೆ.
00:33 ಇಲ್ಲಿ ನಾನು:
  • ExpEYES ಆವೃತ್ತಿ 3.1.0
  • Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.04 ಇವುಗಳನ್ನು ಬಳಸುತ್ತಿದ್ದೇನೆ.
00:43 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:55 ExpEYES Junior device ನ ಪ್ರಯೋಜನಗಳ ಬಗ್ಗೆ ನಾವು ಚರ್ಚಿಸೋಣ.
01:00 ಈ ಸಾಧನವನ್ನು-
  • ಹೈಯರ್ ಸೆಕೆಂಡರಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು
  • ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ಕೋರ್ಸ್ ನ ವಿದ್ಯಾರ್ಥಿಗಳು ಪ್ರಯೋಗಗಳನ್ನು ಮಾಡಲು ಬಳಸಬಹುದು.
01:12 ವಿದ್ಯುತ್, ಧ್ವನಿ, ಕಾಂತೀಯತೆ, ಬೆಳಕು, ಡಯೋಡ್, ಟ್ರಾನ್ಸಿಸ್ಟರ್ಗಳು ಹಾಗೂ ಇತರ ಕ್ಷೇತ್ರಗಳಲ್ಲಿಇದನ್ನು ಬಳಸಬಹುದು.
01:23 ನಾವು ಪ್ಯಾನೆಲ್ ನ ಮೇಲಿನ ಟರ್ಮಿನಲ್ ಗಳೊಂದಿಗೆ ಪ್ರಾರಂಭಿಸೋಣ. ಪ್ಯಾನೆಲ್, ನಾಲ್ಕು ಗ್ರೌಂಡ್ (GND) ಟರ್ಮಿನಲ್ ಗಳನ್ನು ಹೊಂದಿದೆ. ಈ ಟರ್ಮಿನಲ್ ಗಳಲ್ಲಿ, ವೋಲ್ಟೇಜ್ ಸೊನ್ನೆ volt (0 V) ಇರುತ್ತದೆ.
01:35 ಇತರ ಇನ್ಪುಟ್ ಟರ್ಮಿನಲ್ ಗಳಲ್ಲಿ ಅಳೆಯಲಾದ ವೋಲ್ಟೇಜ್, ಗ್ರೌಂಡ್ (GND) ಟರ್ಮಿನಲ್ ಗಳಿಗೆ ಸಂಬಂಧಿಸಿದಂತೆ ಇರುತ್ತದೆ.
01:42 A1 ಮತ್ತು A2 ಇನ್ಪುಟ್ ಟರ್ಮಿನಲ್ ಗಳು -5V ದಿಂದ +5V ವರೆಗಿನ ವೋಲ್ಟೇಜ್ ಅನ್ನು ಅಳೆಯಲು ಸಾಧ್ಯವಿದೆ.
01:51 ಎಡಬದಿಯ IN1 ಹಾಗೂ IN2 ಟರ್ಮಿನಲ್ ಗಳು 0 (ಸೊನ್ನೆ) ಯಿಂದ 5V ವರೆಗಿನ ವೋಲ್ಟೇಜ್ ಅನ್ನು ಅಳೆಯಲು ಸಾಧ್ಯವಿದೆ.
01:59 IN1, 5000 pF (pico farads) ಗಳ ವರೆಗಿನ 'ಕ್ಯಪ್ಯಾಸಿಟನ್ಸ್' ಅನ್ನು (capacitance) ಸಹ ನಿಖರವಾಗಿ ಅಳೆಯುತ್ತದೆ.
02:07 PVS- ಇದು 'ಪ್ರೊಗ್ರಾಮೇಬಲ್ ವೋಲ್ಟೇಜ್ ಸೋರ್ಸ್' (Programmable voltage source) ಆಗಿದೆ. ಕನಿಷ್ಠ 1.25 mV (ಮಿಲಿ ವೋಲ್ಟ್ಸ್) ಗಳ ಹಂತದೊಂದಿಗೆ, 0-5 Volts ಶ್ರೇಣಿಯ ವೋಲ್ಟೇಜ್ ಗಳನ್ನು ಒದಗಿಸಲು ಇದನ್ನು ಬಳಸಲಾಗುತ್ತದೆ ಮತ್ತು ಇದು 5 mA (milli amps) ವರೆಗೆ ಒದಗಿಸಲು ಸಾಧ್ಯವಿದೆ.
02:25 SINE, ಸುಮಾರು 4 volts ನ ಆಂಪ್ಲಿಟ್ಯೂಡ್ ನಲ್ಲಿ, 150 Hz ಗಳ ಸ್ಥಿರ ಫ್ರಿಕ್ವೆನ್ಸಿ ಯನ್ನು (ಆವರ್ತನ) ಒದಗಿಸುತ್ತದೆ.
02:33 SEN ಅನ್ನು ಮುಖ್ಯವಾಗಿ

'ಫೋಟೋ ಟ್ರಾನ್ಸಿಸ್ಟರ್'ಗಳು (photo-transistors), 'ಲೈಟ್ ಡಿಪೆಂಡೆಂಟ್ ರಿಜಿಸ್ಟರ್'ಗಳು (Light Dependent Resistors) ಹಾಗೂ 'ಥರ್ಮಿಸ್ಟರ್ಸ್' (Thermistors) ಗಳಂತಹ ಕನೆಕ್ಟಿವ್ ಸೆನ್ಸರ್ ಎಲಿಮೆಂಟ್ ಗಳಿಗಾಗಿ ಬಳಸಲಾಗುತ್ತದೆ.

02:45 ಇದು 5.1K ಗಳ ಇಂಟರ್ನಲ್ ರೆಜಿಸ್ಟರ್ ಅನ್ನು ಹೊಂದಿರುವ, 5 volts ಗೆ ಜೋಡಿಸಲಾದ ವೋಲ್ಟೇಜ್ ಅನ್ನು ಅಳೆಯುವ ಟರ್ಮಿನಲ್ ಆಗಿದೆ.
02:52 SQR1 ಹಾಗೂ SQR2 ಟರ್ಮಿನಲ್ ಗಳು, “0” ಯಿಂದ “5V” ವರೆಗೆ

'0.7 Hertz' ನಿಂದ '100 Kilo Hertz' ಗಳ ವರೆಗಿನ ಫ್ರಿಕ್ವೆನ್ಸಿ ಯನ್ನು ಹೊಂದಿರುವ ಚೌಕ ತರಂಗಗಳನ್ನು (Square waves) ಉತ್ಪಾದಿಸಬಲ್ಲವು.

03:05 OD1, ಸಾಫ್ಟ್ವೇರ್ ನ ನಿಯಂತ್ರಣದಲ್ಲಿ 0V ಅಥವಾ 5V ಡಿಜಿಟಲ್ ಔಟ್ಪುಟ್ ಅನ್ನು ಉತ್ಪಾದಿಸುತ್ತದೆ.
03:13 MIC, ಹೊರಗಿನ ಧ್ವನಿಯ ಮೂಲದಿಂದ ಧ್ವನಿಯನ್ನು ಹಿಡಿದಿಡುತ್ತದೆ.
03:18 CCS ಎಂದರೆ 'ಕಾನ್ಸ್ಟಂಟ್ ಕರೆಂಟ್ ಸೋರ್ಸ್' (Constant Current Source).
03:22 ವೋಲ್ಟೇಜ್ ಅನ್ನು '4 volts' ಗಿಂತ ಕಡಿಮೆ ಇಡಬೇಕಾಗಿರುವುದರಿಂದ, ಇದು 3 kΩ (ಕಿಲೋ ಓಮ್ಸ್) ಗಳ ಲೋಡ್ ರೆಜಿಸ್ಟರ್ ನೊಂದಿಗೆ 1 mA (ಒಂದು 'ಮಿಲಿ Amp') ಕರೆಂಟ್ ಅನ್ನು ಕೊಡುತ್ತದೆ.
03:31 ಹೊರಗಿನ ವೋಲ್ಟೇಜ್ ಗಳನ್ನು ಆಂಪ್ಲಿಫೈ ಮಾಡಲು (ಹೆಚ್ಚಿಸಲು) 'ಇನ್ವರ್ಟಿಂಗ್ ಆಂಪ್ಲಿಫಾಯರ್' (Inverting amplifier) ಅನ್ನು ಬಳಸಲಾಗುತ್ತದೆ. ಹೊರಗಿನ 'ಕಂಡೆನ್ಸರ್' ಅಥವಾ mic ನ ಔಟ್ಪುಟ್ ಅನ್ನು ಆಂಪ್ಲಿಫೈ ಮಾಡಲು ಇದನ್ನು ಬಳಸಬಹುದು.
03:42 ಈ ಸಾಧನದೊಂದಿಗೆ ಕೆಲವು ಪರಿಕರಗಳನ್ನು ಒದಗಿಸಲಾಗಿದೆ.
03:47 ಈ ಪರಿಕರಗಳ ಪಟ್ಟಿಯು:
  • ಎರಡು ಪೈಝೋ ಇಲೆಕ್ಟ್ರಿಕ್ ಡಿಸ್ಕ್ ಗಳು (Piezo Electric Discs)
  • 3000 ಸುತ್ತುಗಳಿರುವ ಎರಡು ಸುರುಳಿಗಳು
  • DC ಮೋಟರ್
03:56
  • ಸ್ಕ್ರೂ ಡ್ರೈವರ್
  • ನಾಲ್ಕು ಆಯಸ್ಕಾಂತಗಳ ಒಂದು ಸೆಟ್
  • ತಂತಿಗಳೊಂದಿಗೆ ನಾಲ್ಕು 'ಕ್ರೊಕೊಡೈಲ್ ಕ್ಲಿಪ್'ಗಳು
  • ಟ್ರಾನ್ಸಿಸ್ಟರ್
04:05 * ಎರಡು ಸಿಲಿಕಾನ್ ಡಯೋಡ್ ಗಳು
  • LDR & ಥರ್ಮಿಸ್ಟರ್
  • ಕ್ಯಪ್ಯಾಸಿಟರ್ ಗಳು (Capacitors)
04:12 * ನಾಲ್ಕು 5 mm LED ಗಳು
  • ನಾಲ್ಕು ತಂತಿಗಳು
  • ರಜಿಸ್ಟರ್ ಗಳು

ಇವುಗಳನ್ನು ಒಳಗೊಂಡಿದೆ.

04:19 ಇದು 'ExpEYES Junior' ನ 'ಗ್ರಾಫಿಕಲ್ ಯೂಸರ್ ಇಂಟರ್ಫೇಸ್' (GUI) ಆಗಿದೆ. GUI, ಪ್ಲಾಟ್ ವಿಂಡೋ (Plot window) ಎಂದು ಪರಿಚಿತವಾಗಿದೆ.
04:28 'ಪ್ಲಾಟ್ ವಿಂಡೋ'ದ ಎಡಭಾಗದಲ್ಲಿ, ಇನ್ಪುಟ್ ಟರ್ಮಿನಲ್ ಗಳು ಇರುತ್ತವೆ: A1, A2, IN1, IN2, SEN, SQ1 ಹಾಗೂ SQ2.
04:40 ATR, WHI ಮತ್ತು ಇತರ 'ಟ್ರಿಗರ್ ಸೋರ್ಸ್'ಗಳು ತರಂಗವನ್ನು (waveform) ಸರಿಪಡಿಸಲು ಬಳಸಲ್ಪಡುತ್ತವೆ.
04:48 ATR, WHI ಮತ್ತು ಇತರ 'ಟ್ರಿಗರ್ ಸೋರ್ಸ್'ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಚರ್ಚಿಸುವೆವು.
04:56 CH1, CH2, CH3, CH4 ಇವುಗಳು ಸ್ಲೈಡರ್ ಗಳನ್ನು ಹೊಂದಿರುವ ಪ್ಲಾಟ್ ಮಾಡುವ ಚಾನಲ್ ಗಳಾಗಿವೆ.
05:04 ತರಂಗವನ್ನು 'ಪ್ಲಾಟ್ ವಿಂಡೋ'ದ ಮೇಲೆ ಅಲ್ಲಾಡಿಸಲು ಬಲಗಡೆಯಲ್ಲಿರುವ 'ಚಾನಲ್ ಸ್ಲೈಡರ್'ಗಳನ್ನು (Channel sliders) ಬಳಸಲಾಗುತ್ತದೆ.
05:11 A1 ಮೇಲೆ ಕ್ಲಿಕ್ ಮಾಡಿ ಮತ್ತು CH1ಗೆ ಎಳೆಯಿರಿ. ಕೆಳಗಿನ ಬಾಕ್ಸ್ ನಲ್ಲಿ ನಾವು ಕನೆಕ್ಷನ್ ನ ಬಗ್ಗೆ ಮಾಹಿತಿಯನ್ನು ನೋಡಬಹುದು.
05:21 A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ದತ್ತ ಎಳೆಯಿರಿ. ಹಿಂದಿನಂತೆ, ನಾವು ಕನೆಕ್ಷನ್ ನ ವಿವರಗಳನ್ನು ನೋಡಬಹುದು.
05:29 CH2 ಚಾನಲ್ ಅನ್ನು FIT ದೆಡೆಗೆ ಎಳೆಯಿರಿ. ಇದು A2 ದ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ಯನ್ನು ತೋರಿಸುತ್ತದೆ.
05:38 CH2 ಅನ್ನು NMLಗೆ ಎಳೆಯಿರಿ. ಇದು FIT ನಿಂದ ತೋರಿಸಲಾದ ಡಿಸ್ಪ್ಲೇಯನ್ನು ತೆಗೆದುಹಾಕುತ್ತದೆ.
05:44 msec/div (ಮಿಲಿ ಸೆಕೆಂಡ್ ಪರ್ ಡಿವಿಜನ್), ಟೈಮ್ ಆಕ್ಸಿಸ್ ಅನ್ನು (time axis) ಪ್ರತಿನಿಧಿಸುತ್ತದೆ.
05:51 Volt/div (ವೋಲ್ಟ್ ಪರ್ ಡಿವಿಜನ್), ವೋಲ್ಟ್ ಆಕ್ಸಿಸ್ ಅನ್ನು (volt axis) ಪ್ರತಿನಿಧಿಸುತ್ತದೆ.
05:56 Trig level (ಟ್ರಿಗ್ ಲೆವಲ್), ಟ್ರಿಗರ್ ಕಂಟ್ರೋಲರ್ ಆಗಿದೆ.
06:00 CH2 ದ ಮೇಲೆ ಕ್ಲಿಕ್ ಮಾಡಿ ಮತ್ತು DEL ಗೆ ಎಳೆಯಿರಿ. ಇದು CH2 ಅನ್ನು ತೆಗೆದುಹಾಕುತ್ತದೆ .
06:07 CH1 ನ ಮೇಲೆ ಕ್ಲಿಕ್ ಮಾಡಿ ಮತ್ತು DEL ಗೆ ಎಳೆಯಿರಿ. ಇದು CH1 ನ ಡಿಸ್ಪ್ಲೇಯನ್ನು ನಿಷ್ಕ್ರಿಯಗೊಳಿಸುತ್ತದೆ.
06:15 FTR, ತರಂಗದ 'ಫೋರಿಯರ್ ಸ್ಪೆಕ್ಟ್ರಮ್' ಅನ್ನು (Fourier spectrum) ಉತ್ಪತ್ತಿ ಮಾಡುತ್ತದೆ.
06:20 Setting Squarewaves ನ ಅಡಿಯಲ್ಲಿ, ಅನೇಕ ಇನ್ಪುಟ್ ಹಾಗೂ ಚೆಕ್-ಬಾಕ್ಸ್ ಗಳಿವೆ.
06:26 ನಾವು ಈ ಇನ್ಪುಟ್-ಬಾಕ್ಸ್ ನಲ್ಲಿ, ತರಂಗದ (wave) ಫ್ರಿಕ್ವೆನ್ಸಿಯನ್ನು Hertz (ಹರ್ಟ್ಜ್) ಗಳಲ್ಲಿ ಬದಲಾಯಿಸಬಹುದು.
06:33 ಇದು, ಫೇಜ್ ಡಿಫರನ್ಸ್ - dphi ಅನ್ನು , ಪರ್ಸೆಂಟೇಜ್ ನಲ್ಲಿ (%) ಬದಲಾಯಿಸಲು ಇರುತ್ತದೆ.
06:38 Set PVS= ಇನ್ಪುಟ್-ಬಾಕ್ಸ್ ನಲ್ಲಿ, ನಾವು 0 ಯಿಂದ 5V ಗಳ ವರೆಗಿನ ಇಚ್ಛಿತ ವೋಲ್ಟೇಜ್ ವ್ಯಾಲ್ಯೂಅನ್ನು ನಮೂದಿಸಬಹುದು. ವ್ಯಾಲ್ಯೂಅನ್ನು ಸೆಟ್ ಮಾಡಲು 'Enter' ಅನ್ನು ಒತ್ತಿ.
06:52 ಫ್ರಿಕ್ವೆನ್ಸಿಯನ್ನು ಸಕ್ರಿಯಗೊಳಿಸಲು, SQR1, SQR2 ಹಾಗೂ BOTH ಚೆಕ್-ಬಾಕ್ಸ್ ಗಳನ್ನು ಬಳಸಲಾಗುವುದು. ಸ್ಲೈಡರ್ ಅನ್ನು ಬಳಸಿ ಫ್ರಿಕ್ವೆನ್ಸಿಯನ್ನು ಬದಲಾಯಿಸಬಹುದು.
07:04 OD1 ಮತ್ತು CCS ಗಳನ್ನು ನಿಯಂತ್ರಿಸಲು, Set State ಚೆಕ್-ಬಾಕ್ಸ್ ಗಳನ್ನು ಬಳಸಲಾಗುವುದು.
07:11 Measure C on IN1 ಬಟನ್ ಅನ್ನು, 'ಕ್ಯಪ್ಯಾಸಿಟನ್ಸ್' ಅನ್ನು ಅಳೆಯಲು ಬಳಸಲಾಗುತ್ತದೆ.
07:16 Measure R on SEN ಬಟನ್ ಅನ್ನು, 'ರೆಜಿಸ್ಟನ್ಸ್' ಅನ್ನು ಅಳೆಯಲು ಬಳಸಲಾಗುತ್ತದೆ.
07:21 ಬಟನ್ ಗಳ ಕೆಳಗಡೆ, ಪೈಥನ್ ಕೋಡನ್ನು ಟೈಪ್ ಮಾಡಲು ಒಂದು ಕಮಾಂಡ್ ವಿಂಡೋ ಇದೆ. ಮುಂದೆ ಬರುವ ಟ್ಯುಟೋರಿಯಲ್ ಗಳಲ್ಲಿ ನಾವು ಪೈಥನ್ ಕೋಡ್ ನ ಬಗ್ಗೆ ಚರ್ಚಿಸುವೆವು.
07:31 ಟ್ರೇಸ್ ಗಳನ್ನು ".txt" ಫೈಲ್ ಗಳ ಹಾಗೆ ಸೇವ್ ಮಾಡಲು Save Traces to ಬಟನ್ ಅನ್ನು, ಬಳಸಲಾಗುತ್ತದೆ.
07:37 ನಾವು LOOP ಚೆಕ್-ಬಾಕ್ಸ್, SCAN ಹಾಗೂ XMG ಬಟನ್ ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸುವೆವು.
07:45 EXPERIMENTS ಬಟನ್, ಪ್ರಯೋಗಗಳ ಲಿಸ್ಟ್ ಅನ್ನು ಪ್ರದರ್ಶಿಸುತ್ತದೆ. ವಿಂಡೋಅನ್ನು ಕ್ಲೋಸ್ ಮಾಡಲು Quit ಬಟನ್ ಅನ್ನು ಬಳಸಲಾಗುತ್ತದೆ.
07:53 ಈಗ ನಾನು ಈ ಸಾಧನವನ್ನು ಮತ್ತು ಅದರ ಇಂಟರ್ಫೇಸನ್ನು ಬಳಸಿ Ohm ನ ನಿಯಮವನ್ನು ಮಾಡಿತೋರಿಸುವೆನು.
07:59 ಈ ಪ್ರಯೋಗದಲ್ಲಿ ನಾವು, ರೆಜಿಸ್ಟರ್ ನ ಮೇಲೆ ವೋಲ್ಟೇಜ್ ನ ಅವಲಂಬನೆಯನ್ನು ತೋರಿಸುವೆವು ಹಾಗೂ Ohm ನ ನಿಯಮವನ್ನು ಪರೀಕ್ಷಿಸುವೆವು.
08:09 ಈ ಸಾಧನವನ್ನು ಸಿಸ್ಟಂಗೆ ಜೋಡಿಸಲಾಗಿದೆ.
08:12 ಈ ಪ್ರಯೋಗದಲ್ಲಿ, PVS ಅನ್ನು 2.2 KΩ (ಕಿಲೋ ಓಂ) ರೆಜಿಸ್ಟನ್ಸ್ ಮೂಲಕ IN1 ಗೆ ಜೋಡಿಸಲಾಗಿದೆ. IN1 ಅನ್ನು 1KΩ (ಕಿಲೋ ಓಂ) ಮೂಲಕ ಗ್ರೌಂಡ್ ಗೆ (GND) ಜೋಡಿಸಲಾಗಿದೆ.
08:25 ಇದು, ಈ ಕನೆಕ್ಷನ್ ನ ಸರ್ಕೀಟ್ ಡೈಗ್ರಾಮ್ ಆಗಿದೆ.
08:30 ಸಾಫ್ಟ್ವೇರ್ ಇಂಟರ್ಫೇಸನ್ನು ಅನ್ನು ತೆರೆಯಿರಿ.
08:32 ಪ್ಲಾಟ್ ವಿಂಡೋದಲ್ಲಿ, ವೋಲ್ಟೇಜ್ ಅನ್ನು ಅಳೆಯಲು IN1 ನ ಮೇಲೆ ಕ್ಲಿಕ್ ಮಾಡಿ.
08:37 PVS=1 Volt ಗೆ ಅನುಗುಣವಾದ 'IN1' ನ ವ್ಯಾಲ್ಯೂ, 0.309 Volt ಆಗಿದೆ.

PVS=2V ಗಾಗಿ 'IN1' ನ ವ್ಯಾಲ್ಯೂ, 0.619V ಮತ್ತು PVS=3V ಗಾಗಿ 'IN1' ನ ವ್ಯಾಲ್ಯೂ, 0.928V ಆಗಿದೆ.

09:01 ಒಂದು ಅಸೈನ್ಮೆಂಟ್-

PVS ವ್ಯಾಲ್ಯೂಗಳನ್ನು 0 ಯಿಂದ 5 volt ಗಳಿಗೆ ಬದಲಾಯಿಸಿ ಮತ್ತು ಅವುಗಳಿಗೆ ಅನುಗುಣವಾದ IN1 ವ್ಯಾಲ್ಯೂಗಳನ್ನು ನೋಡಿ.

09:10 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಅನ್ನು ಪರೀಕ್ಷಿಸಲು, ನಾವು ಒಂದು ಪ್ರಯೋಗವನ್ನು ಮಾಡೋಣ.
09:16 ಈ ಪ್ರಯೋಗದಲ್ಲಿ ನಾವು, ರೆಜಿಸ್ಟರ್ ಗಳನ್ನು ಸರಣಿಯಲ್ಲಿ ಜೋಡಿಸಿದಾಗ ಇರುವ ವೋಲ್ಟೇಜ್ ಅನ್ನು ತೋರಿಸುವೆವು.
09:23 ಈ ಪ್ರಯೋಗದಲ್ಲಿ -

'IN1' ಅನ್ನು 'CCS' ಗೆ ಜೋಡಿಸಲಾಗಿದೆ. 'CCS' ಅನ್ನು ಒಂದು ರೆಜಿಸ್ಟರ್ ನ ಮೂಲಕ ಗ್ರೌಂಡ್ ಗೆ ಜೋಡಿಸಲಾಗಿದೆ.

09:33 ಪ್ಲಾಟ್ ವಿಂಡೋದ ಮೇಲೆ, CCS ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ. ವೋಲ್ಟೇಜ್ ಅನ್ನು ತೋರಿಸಲು IN1 ನ ಮೇಲೆ ಕ್ಲಿಕ್ ಮಾಡಿ.
09:42 ಇದು, ಈ ಕನೆಕ್ಷನ್ ನ ಸರ್ಕಿಟ್ ಡೈಗ್ರಾಮ್ ಆಗಿದೆ.
09:45 CCS ಹಾಗೂ GND ಗಳಿಗೆ 1 KΩ (ಕಿಲೋ ಓಂ) ರೆಜಿಸ್ಟರ್ ಅನ್ನು ಜೋಡಿಸಿದಾಗ, ಅಳೆಯಲಾದ ವೋಲ್ಟೇಜ್ 0.979 V ಆಗಿದೆ.
09:54 ಹಾಗೆಯೇ, 560 Ω (ohms) ರೆಜಿಸ್ಟನ್ಸ್ ನ ಅಳೆಯಲಾದ ವೋಲ್ಟೇಜ್, 0.543 V ಆಗಿದೆ.
10:02 1 KΩ (ಕಿಲೋ ಓಮ್) ಹಾಗೂ 560 Ω (ಓಮ್ಸ್) ರೆಜಿಸ್ಟನ್ಸ್ ಗಳ 'ಸಿರೀಜ್' ಸಂಯೋಜನೆಯಲ್ಲಿ, ಅಳೆಯಲಾದ ವೋಲ್ಟೇಜ್ 1.524 V ಆಗಿದೆ.
10:14 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಅನ್ನು ಕಂಡುಹಿಡಿಯಲು ನಾವು ಒಂದು ಪ್ರಯೋಗವನ್ನು ಮಾಡೋಣ.
10:21 ಈ ಪ್ರಯೋಗದಲ್ಲಿ ನಾವು, ರಿಜಿಸ್ಟರ್ ಗಳನ್ನು 'ಪ್ಯಾರಲಲ್' (parallel) ಆಗಿ ಜೋಡಿಸಿದಾಗ ಇರುವ ವೋಲ್ಟೇಜ್ ಅನ್ನು ತೋರಿಸುವೆವು.
10:28 ಈ ಪ್ರಯೋಗದಲ್ಲಿ, IN1 ಅನ್ನು CCS ಗೆ ಮತ್ತು CCS ಅನ್ನು ಒಂದು ರೆಜಿಸ್ಟರ್ ಮೂಲಕ ಗ್ರೌಂಡ್ ಗೆ (GND) ಜೋಡಿಸಲಾಗಿದೆ.
10:38 ಇದು, ಈ ಕನೆಕ್ಷನ್ ನ ಸರ್ಕಿಟ್ ಡೈಗ್ರಾಮ್ ಆಗಿದೆ.
10:40 ಪ್ಲಾಟ್ ವಿಂಡೋದ ಮೇಲೆ, CCS ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ. ವೋಲ್ಟೇಜ್ ಅನ್ನು ತೋರಿಸಲು IN1 ನ ಮೇಲೆ ಕ್ಲಿಕ್ ಮಾಡಿ.
10:49 ಈ ಪ್ರಯೋಗವನ್ನು ಮೊದಲು 1000 Ω (ಓಮ್ಸ್) ರೆಜಿಸ್ಟರ್ ನೊಂದಿಗೆ, ಆಮೇಲೆ 'ಪ್ಯಾರಲಲ್' ಸಂಯೋಜನೆಯಲ್ಲಿ ಎರಡು1000 Ω (ಓಮ್ಸ್) ರೆಜಿಸ್ಟರ್ ಗಳೊಂದಿಗೆ ಮಾಡಲಾಗುತ್ತದೆ.
11:01 ಇದು, 1000 Ω (ಓಮ್) ರೆಜಿಸ್ಟರ್ ಗಳು 'ಪ್ಯಾರಲಲ್' ಸಂಯೋಜನೆಯಲ್ಲಿ ಇರುವ ಸರ್ಕಿಟ್ ಡೈಗ್ರಾಮ್ ಆಗಿದೆ. IN1 ನ ಅಳೆಯಲಾದ ವ್ಯಾಲ್ಯೂ 0.952 V ಆಗಿದೆ.
11:11 ಇದು, ಎರಡು 1000 Ω (ಓಮ್ಸ್) ರೆಜಿಸ್ಟರ್ ಗಳ 'ಪ್ಯಾರಲಲ್' ಸಂಯೋಜನೆಯ ಸರ್ಕಿಟ್ ಡೈಗ್ರಾಮ್ ಆಗಿದೆ. IN1 ನ ಅಳೆಯಲಾದ ವ್ಯಾಲ್ಯೂ 0.474 V ಆಗಿದೆ.
11:25 ಮತ್ತೆ, ಈ ಪ್ರಯೋಗವನ್ನು ಮೊದಲು 2.2 KΩ (ಕಿಲೋ ಓಮ್ಸ್) ರೆಜಿಸ್ಟರ್ ನೊಂದಿಗೆ, ನಂತರ ಎರಡು 2.2 KΩ (ಕಿಲೋ ಓಮ್ಸ್) ರೆಜಿಸ್ಟರ್ ಗಳ 'ಪ್ಯಾರಲಲ್' ಸಂಯೋಜನೆಯೊಂದಿಗೆ ಮಾಡಲಾಗಿದೆ.
11:38 ಇದು, 2.2 K Ω (ಕಿಲೋ ಓಮ್ಸ್) ರೆಜಿಸ್ಟನ್ಸ್ ಗಾಗಿ ಸರ್ಕಿಟ್ ಡೈಗ್ರಾಮ್ ಆಗಿದೆ. IN1 ನ ಅಳೆಯಲಾದ ವ್ಯಾಲ್ಯೂ 2.132 V ಆಗಿದೆ.
11:48 ಇದು, ಎರಡು 2.2 KΩ (ಕಿಲೋ ಓಮ್ಸ್) ರೆಜಿಸ್ಟರ್ ಗಳ 'ಪ್ಯಾರಲಲ್' ಸಂಯೋಜನೆಯ ಸರ್ಕಿಟ್ ಡೈಗ್ರಾಮ್ ಆಗಿದೆ. IN1ನ ಅಳೆಯಲಾದ ವ್ಯಾಲ್ಯೂ 1.063 V ಆಗಿದೆ.
12:03 ಸಂಕ್ಷಿಪ್ತವಾಗಿ,
12:05 ಈ ಟ್ಯುಟೋರಿಯಲ್ ನಲ್ಲಿ, ನಾವು:
  • ಪ್ಯಾನೆಲ್ ನ ಮೇಲಿನ ವಿವಿಧ ಟರ್ಮಿನಲ್ ಗಳು
  • ಪರಿಕರಗಳ ಸೆಟ್ (Accessory set) ಹಾಗೂ
  • ಸಾಫ್ಟ್ವೇರ್ ಇಂಟರ್ಫೇಸ್ ಇವುಗಳನ್ನು ಕಲಿತಿದ್ದೇವೆ.
12:14 ನಾವು:
  • 'ಓಂ' ನ ನಿಯಮ (Ohm's law)
  • ಸರಣಿಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್
  • ಸಮಾಂತರದಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಹಾಗೂ
  • ಮೇಲಿನ ಪ್ರಯೋಗಗಳ ಸರ್ಕಿಟ್ ಡಯಾಗ್ರಾಮ್ ಗಳನ್ನು ಮಾಡಿತೋರಿಸಲು ಸಹ ಕಲಿತಿದ್ದೇವೆ.
12:29 ಒಂದು ಅಸೈನ್ಮೆಂಟ್ -

'ಸಿರೀಸ್' ಹಾಗೂ 'ಪ್ಯಾರಲಲ್ ರೆಜಿಸ್ಟರ್'ಗಳ ಸಂಯೋಜನೆಯನ್ನು ಬಳಸಿ ಇಫೆಕ್ಟಿವ್ ರೆಜಿಸ್ಟನ್ಸ್ ಅನ್ನು ಅಳೆಯಿರಿ.

12:37 ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:47 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
12:55 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
13:02 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14