Difference between revisions of "Inkscape/C2/Text-tool-features/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 1: Line 1:
 
{| border =1
 
{| border =1
|(Time(
+
| Time
|(Narration(
+
| Narration
  
 
|-
 
|-
Line 11: Line 11:
 
|-
 
|-
 
|00:09
 
|00:09
|* ಮಾನ್ಯುಯಲ್ ಕರ್ನಿಂಗ್(Manual kerning)
+
| ಮಾನ್ಯುಯಲ್ ಕರ್ನಿಂಗ್(Manual kerning)ಸ್ಪೆಲ್ ಚೆಕಿಂಗ್ (Spell checking)
|-
+
|00:10
+
|* ಸ್ಪೆಲ್ ಚೆಕಿಂಗ್ (Spell checking)
+
 
|-
 
|-
 
|00:12
 
|00:12
|* ಸೂಪರ್ ಸ್ಕ್ರಿಪ್ಟ್ (Super-script)
+
| ಸೂಪರ್ ಸ್ಕ್ರಿಪ್ಟ್ (Super-script)ಸಬ್ ಸ್ಕ್ರಿಪ್ಟ್ (Sub-script)
|-
+
|00:13
+
|* ಸಬ್ ಸ್ಕ್ರಿಪ್ಟ್ (Sub-script)
+
  
 
|-
 
|-
Line 222: Line 216:
 
|-
 
|-
 
|05:24
 
|05:24
|* ಮಾನ್ಯುಯಲ್ ಕರ್ನಿಂಗ್(Manual kerning)
+
|ಮಾನ್ಯುಯಲ್ ಕರ್ನಿಂಗ್(Manual kerning)ಸ್ಪೆಲ್ ಚೆಕಿಂಗ್ (Spell checking)
|-
+
|05:25
+
|* ಸ್ಪೆಲ್ ಚೆಕಿಂಗ್ (Spell checking)
+
 
|-
 
|-
 
|05:26
 
|05:26
|* ಸೂಪರ್ ಸ್ಕ್ರಿಪ್ಟ್ (Super-script)
+
| ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script)
|-
+
|05:27
+
|* ಸಬ್ ಸ್ಕ್ರಿಪ್ಟ್ (Sub-script)
+
 
|-
 
|-
 
|05:29
 
|05:29

Latest revision as of 11:32, 20 March 2017

Time Narration
00:01 ನಮಸ್ಕಾರ, ಟೆಕ್ಸ್ಟ್ ಟೂಲ್ ಫೀಚರ್ಸ್ ಎನ್ನುವ ಇಂಕ್-ಸ್ಕೇಪ್-ನ ಸ್ಪೋಕನ್ ಟ್ಯುಟೋರಿಯಲ್-ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು :
00:09 ಮಾನ್ಯುಯಲ್ ಕರ್ನಿಂಗ್(Manual kerning), ಸ್ಪೆಲ್ ಚೆಕಿಂಗ್ (Spell checking)
00:12 ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script)
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:24 ಈ ಟ್ಯುಟೋರಿಯಲ್-ನಲ್ಲಿ ಬಳಸುವ ಎಲ್ಲಾ ಟೂಲ್-ಗಳಿಗೆ ಉಪಯೋಗವಾಗಲೆಂದು, ಗರಿಷ್ಠ ರೆಸೊಲ್ಯುಶನ್-ನಲ್ಲಿ ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲಾಗಿದೆ
00:33 ಇಂಕ್ ಸ್ಕೇಪ್ ಅನ್ನು ಓಪನ್ ಮಾಡೋಣ.
00:35 ಈ ಸರಣಿಯಲ್ಲಿ ಹಿಂದೆ, ಟೆಕ್ಸ್ಟ್ ಟೂಲ್ ಅನ್ನು ಬಳಸಿ, ಟೆಕ್ಸ್ಟ್ ಅನ್ನು ರಚಿಸಲು ಮತ್ತು ಫಾರ್ಮ್ಯಾಟ್ ಮಾಡಲು ಕಲಿತಿದ್ದೆವು.
00:40 ಈಗ, ಟೆಕ್ಸ್ಟ್ ಟೂಲ್ ನ ಕೆಲವು ಮುಖ್ಯ ವೈಶಿಷ್ಟ್ಯಗಳನ್ನು ಕಲಿಯೋಣ. ಅದನ್ನು ಕ್ಲಿಕ್ ಮಾಡಿ.
00:45 ಮ್ಯಾನ್ಯುಯಲ್ ಕರ್ನಿಂಗ್ ನಿಂದ ಆರಂಭಿಸೋಣ.
00:48 ಹಾರಿಜಾಂಟಲ್ ಕರ್ನಿಂಗ್ (Horizontal kerning), ವರ್ಟಿಕಲ್ ಶಿಫ್ಟ್ (Vertical shift) ಮತ್ತು ಕ್ಯಾರಕ್ಟರ್ ರೊಟೇಶನ್ (Character rotation), ಇವುಗಳಿಗೆ ಮ್ಯಾನ್ಯುಯಲ್ ಕರ್ನಿಂಗ್ ಎನ್ನುತ್ತಾರೆ(manual kerns).
00:54 ಸ್ಪೋಕನ್ ಎಂದು ಟೈಪ್ ಮಾಡಿ.
00:58 S ನ ನಂತರ ಕರ್ಸರ್ ಅನ್ನು ಇಡಿ.
01:01 Horizontal kerning, ಆಯ್ಕೆಯಾದ ಅಕ್ಷರದ ನಂತರ ಅಂತರವನ್ನು ಸೃಷ್ಟಿಸುತ್ತದೆ.
01:05 S ಮತ್ತು p ಅಕ್ಷರಗಳ ನಡುವಿನ ಅಂತರವನ್ನು ಹೆಚ್ಚಿಸಲು ಅಥವಾ ತಗ್ಗಿಸಲು, ಮೇಲೆ ಮತ್ತು ಕೆಳಗಿನ ಆರೋಗಳನ್ನು ಕ್ಲಿಕ್ ಮಾಡಿ .
01:13 S ಮತ್ತು p ಅಕ್ಷರಗಳ ನಡುವಿನ ಅಂತರ ಮಾತ್ರ ಹೆಚ್ಚಿರುವುದನ್ನು ಗಮನಿಸಿ.
01:19 Horizontal kerning ಪ್ಯಾರಾಮೀಟರ್ ಅನ್ನು ಮೂರು ಎಂದಿರಿಸೋಣ.
01:24 ಮುಂದಿನ ಐಕಾನ್, Vertical shift. ಇದು, ಆಯ್ಕೆಯಾದ ಅಕ್ಷರದ ಮುಂದಿನ ಅಕ್ಷರಗಳನ್ನು ಮೇಲೆ ಅಥವಾ ಕೆಳಗೆ ಸರಿಸುತ್ತದೆ.
01:30 ಮೇಲೆ ಮತ್ತು ಕೆಳಗಿನ ಆರೋಗಳನ್ನು ಕ್ಲಿಕ್ ಮಾಡಿ.
01:34 ಕರ್ಸರ್ ನ ಮುಂದಿರುವ ಅಕ್ಷರಗಳು ಮೇಲೆ ಅಥವಾ ಕೆಳಗೆ ಸರಿದಿರುವುದನ್ನು ಗಮನಿಸಿ.
01:39 ಈ ಪ್ಯಾರಾಮೀಟರ್ ಅನ್ನು ಹದಿನೈದು ಎಂದಿರಿಸಿ.
01:42 ನಂತರ, ನಮ್ಮ ಅಕ್ಷರಗಳನ್ನು ಕ್ಯಾರೆಕ್ಟರ್ ರೊಟೇಶನ್(Character rotation) ಬಳಸಿ ತಿರುಗಿಸೋಣ.
01:47 ಈ ಐಕಾನ್, ಕರ್ಸರ್ ನ ಬಲಭಾಗಕ್ಕಿರುವ ಒಂದೇ ಅಕ್ಷರವನ್ನು ತಿರುಗಿಸುತ್ತದೆ.
01:51 ಹಾಗಾಗಿ, e ಅಕ್ಷರದ ಹಿಂದೆ ಕರ್ಸರ್ ಅನ್ನು ಇಡಿ.
01:55 ಕ್ಯಾರೆಕ್ಟರ್ ರೊಟೇಶನ್ (Character rotation) ನ ಮೇಲೆ ಮತ್ತು ಕೆಳಗಿನ ಆರೋಗಳ ಮೇಲೆ ಕ್ಲಿಕ್ ಮಾಡಿ ಮತ್ತು e ಅಕ್ಷರ ತಿರುಗುವುದನ್ನು ನೀವು ನೋಡಬಹುದು.
02:02 ಒಂದಕ್ಕಿಂತ ಹೆಚ್ಚು ಅಕ್ಷರಗಳಿಗೆ ಕರ್ನ್ ಗಳನ್ನು ಅಳವಡಿಸಲು, ಮೊದಲು ಅಕ್ಷರಗಳನ್ನು ಆಯ್ಕೆ ಮಾಡಿ, ನಂತರ ಮೌಲ್ಯಗಳನ್ನು ನೀಡಿ.
02:09 p ಮತ್ತು o ಅಕ್ಷರಗಳನ್ನು ಆಯ್ಕೆ ಮಾಡುತ್ತೇನೆ ಮತ್ತು Horizontal kerning ಪ್ಯಾರಾಮೀಟರ್ ಗೆ ಐದು ಎಂದು ಮೌಲ್ಯ ಕೊಡುತ್ತೇನೆ.
02:17 Vertical shift ಪ್ಯಾರಾಮೀಟರ್ ಗೆ ಹತ್ತು ಮತ್ತು Character rotation ಪ್ಯಾರಾಮೀಟರ್ ಗೆ ಇಪ್ಪತ್ತು ಎಂದು ಮೌಲ್ಯಗಳನ್ನು ಕೊಡುತ್ತೇನೆ.
02:24 ಬದಲಾವಣೆಗಳನ್ನು ಗಮನಿಸಿ.
02:26 ಕರ್ನ್ ಆನು ತೆಗೆಯಲು, ಟೆಕ್ಸ್ಟ್ ಮೆನುವಿನಲ್ಲಿ
02:29 ರಿಮೂವ್ ಮ್ಯಾನ್ಯುಯಲ್ ಕರ್ನ್ಸ್ ಅನ್ನು ಕ್ಲಿಕ್ ಮಾಡಿ.
02:32 ಮ್ಯಾನ್ಯುಯಲ್ ಕರ್ನ್ ಗಳು ರೆಗ್ಯುಲರ್ ಟೆಕ್ಸ್ಟ್ ಗಳಿಗೆ ಮಾತ್ರ ಬಳಸಬಹುದು.
02:35 ಫ್ಲೋಡ್ ಟೆಕ್ಸ್ಟ್ ಗಳಿಗೆ ಈ ಆಯ್ಕೆಗಳು ನಿಷ್ಕ್ರಿಯವಾಗಿರುತ್ತವೆ.
02:39 ಇದನ್ನು ಪರೀಕ್ಷಿಸಲು, ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ.
02:43 ಈಗ ಮ್ಯಾನ್ಯುಯಲ್ ಕರ್ನ್ ಆಯ್ಕೆಗಳು ನಿಷ್ಕ್ರಿಯವಾಗಿರುವುದನ್ನು ಗಮನಿಸಿ.
02:47 ಇದನ್ನು undo ಮಾಡಲು Ctrl ಮತ್ತು Z ಕೀಗಳನ್ನು ಒತ್ತಿ.
02:51 ನಂತರ, ಸ್ಪೆಲ್ ಚೆಕ್ ವೈಶಿಷ್ಟ್ಯವನ್ನು ಕಲಿಯೋಣ.
02:54 ಸ್ಪೆಲ್ ಚೆಕ್ ವೈಶಿಷ್ಟ್ಯವನ್ನು ವಿವರಿಸಲು, ಈಗಾಗಲೇ ಸೇವ್ ಮಾಡಿರುವ ಲಿಬರೆ ಆಫೀಸ್ ರೈಟರ್ ನಿಂದ ಟೆಕ್ಸ್ಟ್ ಅನ್ನು ಕಾಪಿ ಮಾಡುತ್ತೇನೆ.
03:01 ಎಲ್ಲಾ ಟೆಕ್ಸ್ಟ್ ಅನ್ನು ಆಯ್ಕೆ ಮಾಡಲು Ctrl ಮತ್ತು A ಕೀಗಳನ್ನು ಒತ್ತಿ, ಕಾಪಿ ಮಾಡಲು Ctrl ಮತ್ತು C ಕೀಗಳನ್ನು ಒತ್ತಿ.
03:08 ಇಂಕ್ ಸ್ಕೇಪ್ ಗೆ ಹಿಂತಿರುಗಿ.
03:10 ಕ್ಯಾನ್ವಾಸ್ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟ್ ಅನ್ನು ಪೇಸ್ಟ್ ಮಾಡಲು Ctrl ಮತ್ತು V ಒತ್ತಿ.
03:15 ಟೆಕ್ಸ್ಟ್ ಮೆನುವಿನಲ್ಲಿ ಚೆಕ್ ಸ್ಪೆಲ್ಲಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ.
03:19 ಒಂದು ಹೊಸ ಡೈಲಾಗ್ ಬಾಕ್ಸ್ ಕಾಣುತ್ತದೆ.
03:22 ಆಯ್ಕೆಯಾದ ಮತ್ತು ಆಯ್ಕೆಯಾಗದ ಟೆಕ್ಸ್ಟ್ ಗಳೂ ಪರೀಕ್ಷಿಸಲ್ಪಡುತ್ತವೆ.
03:27 ಶಂಕಿತ ಶಬ್ದಗಳು ಕೆಂಪು ಬಣ್ಣದ ಬಾಕ್ಸ್ ನಿಂದ ಗುರುತಿಸಲ್ಪಡುತ್ತವೆ ಮತ್ತು ಆ ಟೆಕ್ಸ್ಟ್ ನ ಹಿಂದೆ ಕರ್ಸರ್ ಇರುತ್ತದೆ.
03:33 ಹೆಚ್ ಟಿ ಟಿ ಪಿ(http) ಎಂಬ ಶಬ್ದಕ್ಕೆ ಕೆಲವು ಸಲಹೆಗಳು ಕಾಣುತ್ತವೆ.
03:37 ಸ್ಪೆಲ್ಲಿಂಗ್ ಸರಿಯಾಗಿರುವುದರಿಂದ ಈ ಶಬ್ದವನ್ನು ನಿಘಂಟಿಗೆ ಸೇರಿಸೋಣ.
03:41 ಇದಕ್ಕಾಗಿ, ಆಡ್ ಟು ಡಿಕ್ಷನರಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
03:45 ಇದರಿಂದಾಗಿ, ಸ್ಪೆಲ್ ಚೆಕರ್ ಈ ಶಬ್ದವನ್ನು ಯಾವಾಗಲೂ ಸರಿಯಾಗಿದೆ ಎಂದು ಪರಿಗಣಿಸುತ್ತದೆ.
03:50 ನಂತರ, ಟ್ಯಟೋರಿಯಲ್ ಎಂಬ ಶಬ್ದವು ಗುರುತಿಸಲ್ಪಟ್ಟಿದೆ.
03:53 ಸ್ಪೆಲ್ಲಿಂಗ್ ತಪ್ಪಾಗಿರುವುದರಿಂದ, ಸಲಹೆಯ ಪಟ್ಟಿಯಿಂದ, ಸರಿಯಾಗಿರುವ ಟ್ಯುಟೋರಿಯಲ್ ಶಬ್ದವನ್ನು ಆಯ್ಕೆ ಮಾಡಿ.
03:59 ಈಗ ಅಕ್ಸೆಪ್ಟ್ ಬಟನ್ ಅನ್ನು ಕ್ಲಿಕ್ ಮಾಡಿ.
04:02 ಇಗ್ನೋರ್ ಅನ್ನು ಕ್ಲಿಕ್ ಮಾಡಿದರೆ, ಇದೇ ರೀತಿ ಬರೆಯಲ್ಪಟ್ಟ ಈ ಫೈಲ್ ನ ಎಲ್ಲ ಶಬ್ದಗಳೂ ನಿರ್ಲಕ್ಷಿಸಲ್ಪಡುತ್ತವೆ.
04:08 ಇಗ್ನೋರ್ ಒನ್ಸ್ ಅನ್ನು ಕ್ಲಿಕ್ ಮಾಡಿದರೆ, ಆ ಶಬ್ದವು ಒಂದು ಬಾರಿ ಅಂದರೆ ಮೊದಲ ಬಾರಿ ಮಾತ್ರ ನಿರ್ಲಕ್ಷಿಸಲ್ಪಡುತ್ತದೆ.
04:14 ಸ್ಪೆಲ್ ಚೆಕಿಂಗ್ ಅನ್ನು ನಿಲ್ಲಿಸಬೇಕಾದರೆ, ಸ್ಟಾಪ್ ಅನ್ನು ಕ್ಲಿಕ್ ಮಾಡಿ.
04:18 ಪುನಃ ಆರಂಭಿಸಲು, ಸ್ಟಾರ್ಟ್ ಬಟನ್ ಅನ್ನು ಕ್ಲಿಕ್ ಮಾಡಿ.
04:22 ಸ್ಪೆಲ್ ಚೆಕಿಂಗ್ ಮೇಲಿನ ಬಲ ಮೂಲೆಯಲ್ಲಿರುವ ಟೆಕ್ಸ್ಟ್ ಇಂದ ಆರಂಭವಾಗಿ ಕ್ಯಾನ್ವಾಸ್ ನ ಕೆಳಗಿನವರೆಗೂ ಆಗುತ್ತದೆ.
04:27 ಈ ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ, ಈ ಟೆಕ್ಸ್ಟ್ ಅನ್ನು ಪಕ್ಕಕ್ಕಿರಿಸೋಣ.
04:32 ನಂತರ, ಸೂಪರ್ ಸ್ಕ್ರಿಪ್ಟ್ ಮತ್ತು ಸಬ್ ಸ್ಕ್ರಿಪ್ಟ್ ಬರೆಯುವುದನ್ನು ಕಲಿಯೋಣ.
04:36 ಈ ಗಣಿತ ಸೂತ್ರವನ್ನು ಟೈಪ್ ಮಾಡಿ. a ಪ್ಲಸ್ b ಹೋಲ್ ಸ್ಕ್ವೇರ್ ಈಸ್ ಈಕ್ವಲ್ ಟು a ಸ್ಕ್ವೇರ್ ಪ್ಲಸ್ b ಸ್ಕ್ವೇರ್ ಪ್ಲಸ್ ಟು a b ((a+b)2 = a2+b2+2ab)
04:44 ಅಂಕೆ ಎರಡನ್ನು ಮೂರು ಜಾಗದಲ್ಲಿ ಸ್ಕ್ವೇರ್ ಎಂದು ಬದಲಾಯಿಸಬೇಕು.
04:48 ಮೊದಲ ಎರಡನ್ನು ಆಯ್ಕೆ ಮಾಡಿ. ಟೂಲ್ ಕಂಟ್ರೋಲ್ ಬಾರ್ ನಲ್ಲಿ, ಟಾಗಲ್ ಸೂಪರ್ ಸ್ಕ್ರಿಪ್ಟ್ ಐಕಾನ್ ಅನ್ನು ಕ್ಲಿಕ್ ಮಾಡಿ.
04:56 ಉಳಿದ ಎರಡೂ ಜಾಗದಲ್ಲಿ ಎರಡನ್ನು ಹೀಗೆಯೇ ಬದಲಾಯಿಸಿ.
04:59 ನಂತರ, ಸಬ್ ಸ್ಕ್ರಿಪ್ಟ್ ಅನ್ನು ಬಳಸಿ, ಒಂದು ರಾಸಾಯನಿಕ ಸೂತ್ರವನ್ನು ಬರೆಯೋಣ.
05:04 ಹೆಚ್ ಎರಡು ಎಸ್ ಒ ನಾಲ್ಕು(H2SO4) ಎಂದು ಟೈಪ್ ಮಾಡಿ.
05:07 ಇಲ್ಲಿ, ಎರಡು ಮತ್ತು ನಾಲ್ಕನ್ನು ಸಬ್ ಸ್ಕ್ರಿಪ್ಟ್ ಆಗಿ ಬರೆಯಬೇಕು.
05:11 ಮೊದಲು, ಎರಡನ್ನು ಆಯ್ಕೆ ಮಾಡಿ. ಟೂಲ್ ಕಂಟ್ರೋಲ್ ಬಾರ್ ನಲ್ಲಿ, ಟಾಗಲ್ ಸಬ್ ಸ್ಕ್ರಿಪ್ಟ್ ಐಕಾನ್ ಅನ್ನು ಕ್ಲಿಕ್ ಮಾಡಿ.
05:17 ಹೀಗೆಯೇ, ನಾಲ್ಕನ್ನೂ ಬದಲಾಯಿಸಿ.
05:19 ಸಾರಾಂಶ ತಿಳಿಯೋಣ.
05:21 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು:
05:24 ಮಾನ್ಯುಯಲ್ ಕರ್ನಿಂಗ್(Manual kerning), ಸ್ಪೆಲ್ ಚೆಕಿಂಗ್ (Spell checking)
05:26 ಸೂಪರ್ ಸ್ಕ್ರಿಪ್ಟ್ (Super-script), ಸಬ್ ಸ್ಕ್ರಿಪ್ಟ್ (Sub-script)
05:29 ನಿಮಗಾಗಿ ಎರಡು ಅಸೈನ್ಮೆಂಟ್ ಗಳು ಇಲ್ಲಿವೆ -
05:31 ಹೌ ಆರ್ ಯು ಎಂದು ಟೆಕ್ಸ್ಟ್ ಅನ್ನು ಟೈಪ್ ಮಾಡಿ ಮತ್ತು ಫಾಂಟ್ ಸೈಸ್ ಅನ್ನು ಎಪ್ಪತ್ತೈದು ಎಂದು ಬದಲಾಯಿಸಿ.
05:36 w ನ ನಂತರ ಕರ್ಸರ್ ಇಡಿ. Horizontal kerning ಪ್ಯಾರಾಮೀಟರ್ ಅನ್ನು ಮೈನಸ್ ಇಪ್ಪತ್ತು ಎಂದು ಬದಲಾಯಿಸಿ.
05:42 ಆರ್ ಶಬ್ದವನ್ನು ಆಯ್ಕೆ ಮಾಡಿ. ವರ್ಟಿಕಲ್ ಶಿಫ್ಟ್ ಪ್ಯಾರಮೀಟರ್ ಅನ್ನು ನಲವತ್ತು ಎಂದು ಬದಲಾಯಿಸಿ.
05:47 ಯು ಶಬ್ದವನ್ನು ಆಯ್ಕೆ ಮಾಡಿ. ಕ್ಯಾರೆಕ್ಟರ್ ರೊಟೇಶನ್ ಪ್ಯಾರಾಮೀಟರ್ ಅನ್ನು ಮೂವತ್ತು ಎಂದು ಬದಲಾಯಿಸಿ.
05:52 ಈ ಕೆಳಗಿನ ಸೂತ್ರಗಳನ್ನು ಸಬ್ ಸ್ಕ್ರಿಪ್ಟ್ ಮತ್ತು ಸೂಪರ್ ಸ್ಕ್ರಿಪ್ಟ್ ಅನ್ನು ಬಳಸಿ ಬರೆಯಿರಿ.
05:57 ಸಿಲ್ವರ್ ಸಲ್ಫೇಟ್ - ಎ ಜಿ ಟು ಎಸ್ ಒ ಫೋರ್
06:00 ಎ ಸ್ಕ್ವೇರ್ ಮೈನಸ್ ಬಿ ಸ್ಕ್ವೇರ್ ಈಸ್ ಈಕ್ವಲ್ ಟು ಎ ಮೈನಸ್ ಬಿ ಇಂಟು ಎ ಪ್ಲಸ್ ಬಿ
06:06 ನಿಮ್ಮ ಅಸೈನ್ಮೆಂಟ್ ಈ ರೀತಿ ಕಾಣಬೇಕು.
06:09 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ನೀವು ಇದನ್ನು ನೋಡಬಹುದು.
06:15 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
06:22 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
06:24 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
06:30 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
06:34 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:36 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ರಾಕೇಶ. ಧನ್ಯವಾದಗಳು.

Contributors and Content Editors

Chetana, PoojaMoolya, Rakeshkkrao, Vasudeva ahitanal