Difference between revisions of "PERL/C2/for-for-each-loops/Kannada"

From Script | Spoken-Tutorial
Jump to: navigation, search
 
Line 25: Line 25:
 
|-
 
|-
 
|00:33
 
|00:33
| ಇಲ್ಲದಿದ್ದರೆ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ನ ಮೇಲೆ ನೋಡಿ.
+
| ಇಲ್ಲದಿದ್ದರೆ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನಮ್ಮ ವೆಬ್ಸೈಟ್ ನಲ್ಲಿ ನೋಡಿ.
 
|-
 
|-
 
|00:40
 
|00:40
Line 337: Line 337:
 
|-
 
|-
 
|09:34
 
|09:34
| '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
| '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
 
|-
 
|-
 
|09:36
 
|09:36
 
| ವಂದನೆಗಳು.
 
| ವಂದನೆಗಳು.
 
|}
 
|}

Latest revision as of 18:36, 8 July 2016

Time Narration
00:01 Perlನಲ್ಲಿ for and foreach Loops ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ‘for’ ಲೂಪ್ ಹಾಗೂ
00:11 ‘foreach’ ಲೂಪ್ ಗಳ ಬಗ್ಗೆ ಕಲಿಯುವೆವು.
00:13 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಉಪಯೋಗಿಸುತ್ತಿದ್ದೇನೆ.
00:21 ನಾನು gedit ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
00:25 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:29 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್’ ಮತ್ತು ‘ಕಾಮೆಂಟ್’ಗಳ ಬಗ್ಗೆ ಪರಿಚಯವಿರುವುದು ಅವಶ್ಯಕ.
00:33 ಇಲ್ಲದಿದ್ದರೆ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನಮ್ಮ ವೆಬ್ಸೈಟ್ ನಲ್ಲಿ ನೋಡಿ.
00:40 ವಿವಿಧ ವ್ಯಾಲ್ಯೂಗಳಿಗಾಗಿ, ಒಂದು ಕಂಡಿಶನ್ ಅನ್ನು ನಾವು ಮತ್ತೆಮತ್ತೆ ಪರೀಕ್ಷಿಸಬಹುದಾದ ಒಂದು ಯಾಂತ್ರಿಕ ವ್ಯವಸ್ಥೆಯನ್ನು ಪರ್ಲ್, ಒದಗಿಸುತ್ತದೆ. ‘ಲೂಪ್’ಗಳನ್ನು ಬಳಸಿ ಇದನ್ನು ಮಾಡಲಾಗುವುದು.
00:49 ಪರ್ಲ್ ನಲ್ಲಿ ವಿವಿಧ ಪ್ರಕಾರದ ಲೂಪ್ ಗಳಿವೆ:
00:52 * ‘for’ ಲೂಪ್
00:53 * ‘foreach’ ಲೂಪ್
00:54 * ‘while’ ಲೂಪ್ ಮತ್ತು
00:55 * ‘do-while’ ಲೂಪ್.
00:56 ಈ ಟ್ಯುಟೋರಿಯಲ್ ನಲ್ಲಿ, ನಾವು for ಹಾಗೂ foreach ಲೂಪ್ ಗಳನ್ನು ಕಲಿಯುವೆವು.
01:01 ಪರ್ಲ್ ನಲ್ಲಿ, ಕೋಡ್ ನ ಒಂದು ಭಾಗವನ್ನು ನಿರ್ದಿಷ್ಟ ಸಲ ಎಕ್ಸಿಕ್ಯೂಟ್ ಮಾಡಲು for ಲೂಪ್ ಅನ್ನು ಬಳಸಬಹುದು.
01:07 ‘for’ ಲೂಪ್ ನ ಸಿಂಟ್ಯಾಕ್ಸ್ ಹೀಗಿದೆ:
01:10 ‘for ಸ್ಪೇಸ್ ಓಪನ್ ಬ್ರಾಕೆಟ್ ವೇರಿಯೆಬಲ್ ಇನಿಷಿಯಲೈಸೇಷನ್ ಸೆಮಿಕೋಲನ್ ಕಂಡಿಶನ್ ಸೆಮಿಕೋಲನ್ ಇನ್ಕ್ರಿಮೆಂಟ್
01:20 ಕ್ಲೋಸ್ ಬ್ರಾಕೆಟ್’. Enter ಅನ್ನು ಒತ್ತಿ.
01:22 ಓಪನ್ ಕರ್ಲಿ ಬ್ರಾಕೆಟ್ಸ್,
01:24 ಅನೇಕ ಸಲ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ,
01:28 ಕ್ಲೋಸ್ ಕರ್ಲಿ ಬ್ರಾಕೆಟ್ಸ್.
01:30 ಈಗ ನಾವು, ‘for’ ಲೂಪ್ ನ ಒಂದು ಉದಾಹರಣೆಯನ್ನು ನೋಡೋಣ.
01:33 ‘ಟರ್ಮಿನಲ್’ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: gedit forLoop.pl ಸ್ಪೇಸ್ & (ಆಂಪರ್ಸಂಡ್)
01:42 ಮತ್ತು Enter ಅನ್ನು ಒತ್ತಿ.
01:43 ಇದು gedit ನಲ್ಲಿ ‘forLoop.pl’ ಎಂಬ ಫೈಲನ್ನು ಓಪನ್ ಮಾಡುವುದು.
1:48 ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ: ಹ್ಯಾಶ್ ಎಕ್ಸ್ಕ್ಲಾಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl.
01:58 Enter ಅನ್ನು ಒತ್ತಿ.
02:00 ‘for ಸ್ಪೇಸ್ ಓಪನ್ ಬ್ರಾಕೆಟ್ ಡಾಲರ್ i ಇಕ್ವಲ್ಸ್ ಟು ಝೀರೋ (0) ಸೆಮಿಕೋಲನ್ ಸ್ಪೇಸ್ ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್ (4) ಸೆಮಿಕೋಲನ್ ಸ್ಪೇಸ್ ಡಾಲರ್ i ಪ್ಲಸ್ ಪ್ಲಸ್ ಕ್ಲೋಸ್ ಬ್ರಾಕೆಟ್’
02:18 ಸ್ಪೇಸ್
02:19 ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ.
02:21 ಹೀಗೆ ಟೈಪ್ ಮಾಡಿ: print ಸ್ಪೇಸ್ ಡಬಲ್ ಕೋಟ್ಸ್ Value of i ಕೋಲನ್ < ಸ್ಪೇಸ್ > ಡಾಲರ್ i ಬ್ಯಾಕ್ ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್’
02:35 ಮತ್ತು Enter ಅನ್ನು ಒತ್ತಿ.
02:36 ಈಗ ಕರ್ಲಿ ಬ್ರಾಕೆಟ್ಸ್ ಅನ್ನು ಮುಚ್ಚಿ.
02:39 ಫೈಲನ್ನು ಸೇವ್ ಮಾಡಲು ‘Ctrl+S’ ಒತ್ತಿ.
02:42 ‘for ಲೂಪ್’ ಏನು ಮಾಡುತ್ತದೆ ಎಂಬುದನ್ನು ನಾನು ವಿವರಿಸುತ್ತೇನೆ.
02:46 ವೇರಿಯೆಬಲ್ 'i' ಅನ್ನು ಸೊನ್ನೆಯಿಂದ ಆರಂಭಿಸಲಾಗುತ್ತದೆ.
02:50 ಆಮೇಲೆ, ಕಂಡಿಷನ್ ಅನ್ನು ಪರಿಶೀಲಿಸಲಾಗುತ್ತದೆ.
02:53 ಈ ಸಂದರ್ಭದಲ್ಲಿ, ಕಂಡಿಷನ್, ‘i ಲೆಸ್ ದ್ಯಾನ್ ಆರ್ ಇಕ್ವಲ್ ಟು 4' (i <= 4) ಎಂದು ಆಗಿದೆ.
02:59 ಈ ಕಂಡಿಷನ್ ‘true’ (ನಿಜ) ಆಗಿದ್ದರೆ, ಕರ್ಲಿ ಬ್ರಾಕೆಟ್ಸ್ ನಲ್ಲಿಯ ಕೋಡ್ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
03:05 ಎಂದರೆ, ಮೊದಲನೆಯ ಪ್ರಿಂಟ್ ಸ್ಟೇಟ್ಮೆಂಟ್ "Value of i: 0" (ವ್ಯಾಲ್ಯೂ ಆಫ್ i ಕೋಲನ್ ಝೀರೋ) ಅನ್ನು
03:11 ‘ಟರ್ಮಿನಲ್’ನ ಮೇಲೆ ತೋರಿಸಲಾಗುವುದು.
03:14 ಇದಾದ ಮೇಲೆ, ವೇರಿಯೆಬಲ್ 'i' ಅನ್ನು ಒಂದರಿಂದ ಹೆಚ್ಚಿಸಲಾಗುವುದು.
03:18 ಮತ್ತು ‘for ಲೂಪ್’ನ ಕಂಡಿಷನ್ ಅನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ.
03:23 'i' ನ ವ್ಯಾಲ್ಯೂ, 4 (ನಾಲ್ಕು) ಕ್ಕಿಂತ ಹೆಚ್ಚಾದಾಗ ಲೂಪ್ ನಿರ್ಗಮಿಸುವುದು.
03:29 ಈ ಸಂದರ್ಭದಲ್ಲಿ, ‘for ಲೂಪ್’ ಅನ್ನು, i = 0, 1, 2, 3, ಮತ್ತು 4 ಗಳಿಗಾಗಿ
03:38 ಎಂದರೆ ಒಟ್ಟು 5 ಬಾರಿ ಎಕ್ಸಿಕ್ಯೂಟ್ ಮಾಡಲಾಗುವುದು.
03:41 ಈಗ, ‘ಟರ್ಮಿನಲ್’ಗೆ ಬದಲಾಯಿಸಿ.
03:44 ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ಕಂಡುಹಿಡಿಯಲು ಈ ಕೆಳಗಿನಂತೆ ಟೈಪ್ ಮಾಡಿ:
03:48 ‘perl ಹೈಫನ್ c forLoop ಡಾಟ್ pl’
03:54 ಮತ್ತು Enter ಅನ್ನು ಒತ್ತಿ.
03:56 ಇಲ್ಲಿ, ಇದು ಈ ಕೆಳಗಿನ ಮೆಸೇಜನ್ನು (message) ತೋರಿಸುತ್ತದೆ.
03:58 “forLoop.pl syntax OK”
04:01 ಆದ್ದರಿಂದ, ಇದರಲ್ಲಿ ‘ಎರರ್’ ಗಳಿಲ್ಲ.
04:03 ಈಗ ನಾವು ಪರ್ಲ್-ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡೋಣ. ಇದಕ್ಕಾಗಿ, ಹೀಗೆ ಟೈಪ್ ಮಾಡಿ: ‘perl forLoop ಡಾಟ್pl’ ಮತ್ತು Enter ಅನ್ನು ಒತ್ತಿ.
04:11 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
04:16 ಈಗ ನಾವು ‘foreach’ ಲೂಪನ್ನು ನೋಡೋಣ.
04:19 ‘ಆರೇ’ಗಾಗಿ ಒಂದು ಕಂಡಿಷನ್ ಅನ್ನು ನಮಗೆ ‘ಇಟರೇಟ್’ ಮಾಡಬೇಕಾದಾಗ, ನಾವು foreach ಲೂಪನ್ನು ಉಪಯೋಗಿಸಬಹುದು.
04:25 ಇದರ ಸಿಂಟ್ಯಾಕ್ಸ್ ಹೀಗಿದೆ: ‘foreach ಸ್ಪೇಸ್ ಡಾಲರ್ variable ಸ್ಪೇಸ್’ ಬ್ರಾಕೆಟ್ಸ್ ನ ಒಳಗಡೆ ‘ಆಟ್ ದ ರೇಟ್ (@) array ಸ್ಪೇಸ್’
04:35 ಓಪನ್ ಕರ್ಲಿ ಬ್ರಾಕೆಟ್ಸ್
04:37 ‘ಆರೇ’ ದ ಪ್ರತಿಯೊಂದು ಎಲಿಮೆಂಟ್ ನ ಮೇಲೆ ಕ್ರಿಯೆಯನ್ನು ಕೈಗೊಳ್ಳಿ. Enter ಅನ್ನು ಒತ್ತಿ.
04:42 ಕರ್ಲಿ ಬ್ರಾಕೆಟ್ಸ್ ಅನ್ನು ಮುಚ್ಚಿ.
04:44 ದಯವಿಟ್ಟು ಗಮನಿಸಿ: ‘ಆರೇ’, ‘ಆರೇ ಇನಿಷಿಯಲೈಸೇಷನ್’ ಮತ್ತು ‘ಆರೇ’ಯನ್ನು ಡಿಫೈನ್ ಮಾಡುವುದನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು.
04:52 ಈಗ ನಾವು, foreach ಲೂಪ್ ನ ಒಂದು ಉದಾಹರಣೆಯನ್ನು ನೋಡೋಣ.
04:56 ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: gedit foreachLoop ಡಾಟ್ pl ಸ್ಪೇಸ್ ಆಂಪರ್ಸಂಡ್(&)’ ಮತ್ತು Enter ಅನ್ನು ಒತ್ತಿ.
05:08 ಇದು, gedit ನಲ್ಲಿ ‘foreachLoop.pl’ ಎಂಬ ಫೈಲನ್ನು ಓಪನ್ ಮಾಡುವುದು.
05:12 ಈ ಕೆಳಗೆ ತೋರಿಸಿದ ಕೋಡ್ ನ ಭಾಗವನ್ನು ಟೈಪ್ ಮಾಡಿ:
05:15 ‘ಹ್ಯಾಶ್ ಎಕ್ಸ್ಕ್ಲಾಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl’ ಮತ್ತು Enter ಅನ್ನು ಒತ್ತಿ.
05:25 ‘ಆಟ್ ದ ರೇಟ್ myarray ಸ್ಪೇಸ್ ಇಕ್ವಲ್ ಟು ಸ್ಪೇಸ್ ಓಪನ್ ಬ್ರಾಕೆಟ್ 10 ಕಾಮಾ 20 ಕಾಮಾ 30 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್’
05:39 Enter ಅನ್ನು ಒತ್ತಿ.
05:41 ‘foreach ಸ್ಪೇಸ್ ಡಾಲರ್ var ಸ್ಪೇಸ್ ಓಪನ್ ಬ್ರಾಕೆಟ್ ಆಟ್ ದ ರೇಟ್ myarray ಕ್ಲೋಸ್ ದ ಬ್ರಾಕೆಟ್ ಸ್ಪೇಸ್’
05:52 ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:
05:56 ‘print ಸ್ಪೇಸ್ ಡಬಲ್ ಕೋಟ್ಸ್ Element of an array is ಕೋಲನ್ ಡಾಲರ್ var ಬ್ಯಾಕ್ ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್’
06:13 Enter ಅನ್ನು ಒತ್ತಿ ಮತ್ತು ಕರ್ಲಿ ಬ್ರಾಕೆಟ್ ಅನ್ನು ಕ್ಲೋಸ್ ಮಾಡಿ.
06:17 ಫೈಲನ್ನು ಸೇವ್ ಮಾಡಲು ‘Ctrl+S’ ಒತ್ತಿ.
06:20 ಈ ‘ಕೋಡ್’ ಏನು ಮಾಡುತ್ತದೆ ಎಂಬುದನ್ನು ನಾನು ವಿವರಿಸುತ್ತೇನೆ. ‘myarray’ ಎನ್ನುವ ಒಂದು ‘ಆರೇ’ಯನ್ನು ಡಿಕ್ಲೇರ್ ಮಾಡಲಾಗಿದೆ.
06:27 ಇದು 10, 20 ಮತ್ತು 30, ಈ ಮೂರು ಎಲಿಮೆಂಟ್ ಗಳನ್ನು ಹೊಂದಿದೆ.
06:33 ‘foreach’ ಲೂಪ್ ನ ಪ್ರತಿಯೊಂದು ಪುನರಾವರ್ತನೆಯಲ್ಲಿ (ಇಟರೇಶನ್), 'ಡಾಲರ್ var' ($var), ‘ಆರೇ’ಯ ಒಂದೇ ಒಂದು ಎಲಿಮೆಂಟ್ ಅನ್ನು ಹೊಂದಿರುವುದು.
06:40 ‘foreach’ ಕೀವರ್ಡ್, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ಗಾಗಿ ಈ ಲೂಪನ್ನು ಪುನರಾವರ್ತಿಸುವುದು.
06:47 ಎಂದರೆ, ಕರ್ಲಿ ಬ್ರಾಕೆಟ್ ನ ಒಳಗಿರುವ ಕೋಡ್ಅನ್ನು, ‘myarray’ ಯ ಪ್ರತಿಯೊಂದು ಎಲಿಮೆಂಟ್ ಗಾಗಿ ಎಕ್ಸಿಕ್ಯೂಟ್ ಮಾಡಲಾಗುವುದು.
06:55 ಬ್ಯಾಕ್-ಸ್ಲ್ಯಾಶ್ n (\n), ಪ್ರಾಂಪ್ಟ್ ಅನ್ನು ಹೊಸ ಲೈನ್ ಮೇಲೆ ಇರಿಸುವುದು.
07:00 ಇದರ ಅರ್ಥ, ಮೊದಲನೆಯ ಎಲಿಮೆಂಟ್ 10 (ಹತ್ತು) ಅನ್ನು ‘ಟರ್ಮಿನಲ್’ನ ಮೇಲೆ ತೋರಿಸಲಾಗುವುದು.
07:06 ಆಮೇಲೆ 20 (ಇಪ್ಪತ್ತು) ಮತ್ತು ಹೀಗೆಯೇ ಎಲ್ಲ ಎಲಿಮೆಂಟ್ ಗಳು ಪ್ರಿಂಟ್ ಆಗುವವರೆಗೆ ತೋರಿಸಲಾಗುವುದು.
07:12 ‘myarray’ ಯಲ್ಲಿಯ ಎಲ್ಲ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡಿದ ಮೇಲೆ ಈ ಲೂಪ್ ನಿರ್ಗಮಿಸುವುದು.
07:17 ಈಗ, ‘ಟರ್ಮಿನಲ್’ ಗೆ ಬದಲಾಯಿಸಿ ಮತ್ತು ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ನೋಡಲು ಈ ಕೆಳಗೆ ತೋರಿಸಿರುವುದನ್ನು ಟೈಪ್ ಮಾಡಿ:
07:24 ‘perl ಹೈಫನ್ c foreachLoop ಡಾಟ್ pl’ ಮತ್ತು Enter ಅನ್ನು ಒತ್ತಿ.
07:32 ‘ಟರ್ಮಿನಲ್’ನ ಮೇಲೆ ಈ ಕೆಳಗಿನ ಸಾಲನ್ನು ತೋರಿಸಲಾಗುವುದು.
07:36 “There are no compilation or syntax errors”.
07:38 ಆದ್ದರಿಂದ, ನಾವು Perl ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡೋಣ.
07:41 ಹೀಗೆ ಟೈಪ್ ಮಾಡಿ: ‘perl foreachLoop ಡಾಟ್ pl’ ಮತ್ತು Enter ಅನ್ನು ಒತ್ತಿ.
07:48 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
07:54 ಹೀಗೆ, ಇದು ‘for’ ಲೂಪ್ ಮತ್ತು ‘for-each’ ಲೂಪ್ ಗಳ ಬಗ್ಗೆ ಆಗಿತ್ತು.
07:57 ಸಂಕ್ಷಿಪ್ತವಾಗಿ -
07:59 ಈ ಟ್ಯುಟೋರಿಯಲ್ ನಲ್ಲಿ ನಾವು,
08:02 ಕೆಲವು ಮಾದರಿಯ ಪ್ರೊಗ್ರಾಂಗಳನ್ನು ಉಪಯೋಗಿಸಿ
08:06 Perl ನ ‘for’ ಲೂಪ್ ಮತ್ತು ‘for-each’ ಲೂಪ್ ಗಳ ಬಗ್ಗೆ ಕಲಿತಿದ್ದೇವೆ.
08:07 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
08:10 'Spoken Tutorial' ಎಂಬ ಒಂದು ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿ
08:13 ಮತ್ತು ಇದನ್ನು ೫ (ಐದು) ಸಲ ಪ್ರಿಂಟ್ ಮಾಡಿ.
08:16 ‘ಕಲರ್’ ಗಳ ಒಂದು ಆರೇಯನ್ನು ಹೀಗೆ ಡಿಕ್ಲೇರ್ ಮಾಡಿ. @colorArray = ಓಪನ್ ಬ್ರಾಕೆಟ್ ಸಿಂಗಲ್ ಕೋಟ್ಸ್ ನಲ್ಲಿ red ಕಾಮಾ white ಕಾಮಾ blue ಬ್ರಾಕೆಟ್ ಮುಚ್ಚಿ ಮತ್ತು
08:32 ‘foreach’ ಲೂಪನ್ನು ಬಳಸಿ ‘ಆರೇ’ಯ ಎಲಿಮೆಂಟ್ ಅನ್ನು ಪ್ರಿಂಟ್ ಮಾಡಿ.
08:36 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:40 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:43 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:48 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:55 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:59 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:07 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
09:12 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:20 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. spoken hyphen tutorial dot org slash NMEICT hyphen Intro.
09:31 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
09:34 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
09:36 ವಂದನೆಗಳು.

Contributors and Content Editors

Sandhya.np14, Vasudeva ahitanal