Difference between revisions of "LibreOffice-Suite-Impress/C3/Slide-Creation/Kannada"
From Script | Spoken-Tutorial
(Created page with "{| border=1 || '''Time''' || '''Narration''' |- || 00.00 || '''LibreOffice Impress''' ನಲ್ಲಿ '''Slide Creation''' ಎಂಬ ಸ್ಪೋಕನ್ ಟ್ಯುಟೋ...") |
|||
Line 296: | Line 296: | ||
|| 09.09 | || 09.09 | ||
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||
− | + | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | |
− | + | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | |
|- | |- | ||
|| 09.18 | || 09.18 | ||
Line 309: | Line 309: | ||
|- | |- | ||
|| 09.48 | || 09.48 | ||
− | || ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | + | || ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |
− | ಧನ್ಯವಾದಗಳು. | + | |
|- | |- | ||
|} | |} |
Latest revision as of 15:02, 23 February 2017
Time | Narration |
00.00 | LibreOffice Impress ನಲ್ಲಿ Slide Creation ಎಂಬ ಸ್ಪೋಕನ್ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00.06 | ಈ ಟ್ಯುಟೋರಿಯಲ್-ನಲ್ಲಿ, Slide Shows, Slide Transitions ಮತ್ತು Automatic Shows ನ ಬಗ್ಗೆ ನಾವು ಕಲಿಯಲಿದ್ದೇವೆ. |
00.16 | ನೀವು ಪ್ರೇಕ್ಷಕರ ಮುಂದೆ ಸ್ಲೈಡ್ಸ್-ಅನ್ನು ಪ್ರಸ್ತುತಪಡಿಸಲು Slide Shows-ಅನ್ನು ಉಪಯೋಗಿಸುತ್ತೀರಿ. |
00.21 | ಸ್ಲೈಡ್ ಶೋಗಳನ್ನು ಡೆಸ್ಕ್-ಟಾಪ್ ಅಥವಾ ಪ್ರೊಜೆಕ್ಟರ್ ಗಳಲ್ಲಿ ತೋರಿಸಬಹುದು. |
00.25 | ಸ್ಲೈಡ್ ಶೋಗಳು ಕಂಪ್ಯೂಟರ್ ಪರದೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತವೆ. |
00.30 | ಸ್ಲೈಡ್ ಶೋ ಮೋಡ್-ನಲ್ಲಿ ಪ್ರೆಸೆಂಟೇಶನ್-ಗಳನ್ನು (ಪ್ರಸ್ತುತಿಗಳನ್ನು) ಪರಿಷ್ಕರಿಸಲಾಗುವುದಿಲ್ಲ. |
00.34 | ಸ್ಲೈಡ್ ಶೋ-ಗಳು ಕೇವಲ ಪ್ರದರ್ಶನಕ್ಕಾಗಿ ಇವೆ. |
00.38 | 'Sample-Impress.odp' ಎಂಬ ಪ್ರೆಸೆಂಟೇಶನ್ ಅನ್ನು ತೆರೆಯಿರಿ. |
00.43 | ನಾವು ಪ್ರೆಸೆಂಟೇಶನ್-ಅನ್ನು Slide Show ಆಗಿ ನೋಡೋಣ. |
00.47 | Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ, ಅನಂತರ Slide Show settingsಮೇಲೆ ಕ್ಲಿಕ್ ಮಾಡಿ. |
00.53 | ಪರ್ಯಾಯವಾಗಿ, ಸ್ಲೈಡ್ ಶೋವನ್ನು ಆರಂಭಿಸಲು ನೀವು function key 'F5' ಅನ್ನು ಉಪಯೋಗಿಸಬಹುದು. |
01.00 | ಪ್ರೆಸೆಂಟೇಶನ್, ಸ್ಲೈಡ್ ಶೋ ಆಗಿ ಪ್ರದರ್ಶಿತಗೊಳ್ಳುತ್ತದೆ. |
01.04 | ನೀವು ನಿಮ್ಮ ಕೀಬೋರ್ಡ್-ನಲ್ಲಿ arrow ಬಟನ್ ಗಳನ್ನು ಬಳಸಿ ಸ್ಲೈಡ್-ಗಳ ನಡುವೆ ನ್ಯಾವಿಗೇಟ್ ಮಾಡಬಹುದು. |
01.10 | ಪರ್ಯಾಯವಾಗಿ, mouseನಲ್ಲಿ context menu ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Next ಅನ್ನು ಆಯ್ಕೆ ಮಾಡಿ. |
01.16 | ಇದು ನಿಮ್ಮನ್ನು ಮುಂದಿನ ಸ್ಲೈಡ್-ಗೆ ಕರೆದೊಯ್ಯುತ್ತದೆ. |
01.20 | ಸ್ಲೈಡ್ ಶೋನಿಂದ ಹೊರಬರಲು, mouseನಲ್ಲಿ context menu ಗಾಗಿ ರೈಟ್-ಕ್ಲಿಕ್ ಮಾಡಿ. ಇಲ್ಲಿEnd Showಅನ್ನು ಸೆಲೆಕ್ಟ್ ಮಾಡಿ. |
01.28 | ಹೊರಬರುವ ಮತ್ತೊಂದು ವಿಧಾನವೆಂದರೆ Escape ಬಟನ್-ಅನ್ನು ಒತ್ತುವುದು. |
01.33 | Mouse pointer as pen ಆಯ್ಕೆಯನ್ನು ಉಪಯೋಗಿಸಿ ಕೂಡ ನೀವು ಪ್ರೇಕ್ಷಕರೊಂದಿಗೆ ಸಂವಹನ ನಡೆಸಬಹುದು. |
01.40 | ಈ ಆಯ್ಕೆಯನ್ನು ಸಕ್ರಿಯಗೊಳಿಸಿ, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ. |
01.45 | Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ. ಅನಂತರ Slide Show settings ಮೇಲೆ ಕ್ಲಿಕ್ ಮಾಡಿ. |
01.51 | Slide Show ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01.54 | Options ನ ಕೆಳಗೆ, Mouse pointer visible ಮತ್ತು Mouse pointer as pen ಬಾಕ್ಸ್ ಗಳನ್ನು ಚೆಕ್ ಮಾಡಿ. |
02.02 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು OK ಕ್ಲಿಕ್ ಮಾಡಿ. |
02.06 | ಮತ್ತೆ, Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ. ಅನಂತರ Slide Show ಮೇಲೆ ಕ್ಲಿಕ್ ಮಾಡಿ. |
02.13 | ಕರ್ಸರ್ ಈಗ ಪೆನ್ ಆಗಿ ಬದಲಾಗಿದೆಯೆಂಬುದನ್ನು ಗಮನಿಸಿ. |
02.17 | ಪ್ರೆಸೆಂಟೇಶನ್ ಎಂಬುದು ಸ್ಲೈಡ್-ಶೋ ಮೋಡ್ ನಲ್ಲಿದ್ದಾಗ, ಈ ಆಯ್ಕೆಯು ಪ್ರಸ್ತುತಿಯ ಮೇಲೆ ಬರೆಯಲು ಅಥವಾ ಚಿತ್ರಿಸಲು ಸಹಕರಿಸುತ್ತದೆ. |
02.24 | ನೀವು ಎಡ ಮೌಸ್ ಬಟನ್-ಅನ್ನು ಒತ್ತಿದಾಗ, ನೀವು ಪೆನ್ ಬಳಸಿ ರೇಖಾಚಿತ್ರವನ್ನು ಬರೆಯಬಹುದು. |
02.29 | ಮೊದಲ ಪಾಯಿಂಟ್ ನ ಮೇಲೆ ಒಂದು ಟಿಕ್ ಮಾರ್ಕ್ ಮಾಡೋಣ. |
02.34 | ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ. |
02.38 | Impress ಸ್ಲೈಡ್ ನ ಮೇಲೆ ಒಂದು ಚಿಕ್ಕ ಚಿತ್ರವನ್ನು ರಚಿಸಲು ಸ್ಕೆಚ್ ಪೆನ್-ಅನ್ನು ಉಪಯೋಗಿಸಿ. |
02.47 | ಈಗ mouse button ನ ಮೇಲೆ ಲೆಫ್ಟ್-ಕ್ಲಿಕ್ ಮಾಡಿ. ಮುಂದಿನ ಸ್ಲೈಡ್ ಪ್ರದರ್ಶಿಸಲ್ಪಡುವುದು. |
02.52 | ನೀವು Space bar ಅನ್ನು ಒತ್ತಿದಾಗ ಕೂಡ ಮುಂದಿನ ಸ್ಲೈಡ್ ಗೆ ಹೋಗಬಹುದು. |
02.57 | ಸ್ಲೈಡ್ ಶೋನಿಂದ ಹೊರಬರೋಣ. context menu ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು End Show ಮೇಲೆ ಕ್ಲಿಕ್ ಮಾಡಿ. |
03.05 | ನಂತರ, Slide Transitions ಬಗ್ಗೆ ಕಲಿಯೋಣ. |
03.09 | Slide Transitions ಎಂದರೇನು? |
03.12 | Transitions ಎಂದರೆ, ಪ್ರೆಸೆಂಟೇಶನ್ ನಲ್ಲಿ ಒಂದು ಸ್ಲೈಡ್ ನಿಂದ ಮುಂದಿನ ಸ್ಲೈಡ್ ಗೆ ನಾವು ಸ್ಥಾನಾಂತರಿಸುವಾಗ, ಸ್ಲೈಡ್ ಗೆ ಅನ್ವಯ ಮಾಡುವ ಪರಿಣಾಮ(ಪ್ರಭಾವ)ಗಳು. |
03.22 | Main ಪೇನ್-ನಿಂದ, Slide Sorter ಟ್ಯಾಬ್-ನ ಮೇಲೆ ಕ್ಲಿಕ್ ಮಾಡಿ. |
03.26 | ಪ್ರಸ್ತುತಿಯ ಎಲ್ಲಾ ಸ್ಲೈಡ್-ಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. |
03.31 | ಈ ದೃಶ್ಯದಲ್ಲಿ, ನೀವು ಒಂದು ಪ್ರಸ್ತುತಿಯಲ್ಲಿರುವ ಸ್ಲೈಡ್ ಗಳ ಕ್ರಮವನ್ನು ಸುಲಭವಾಗಿ ಬದಲಾಯಿಸಬಹುದು. |
03.37 | ನಾವು slide 1ಅನ್ನು ಆಯ್ಕೆ ಮಾಡೋಣ. |
03.40 | ಈಗ ಎಡ ಮೌಸ್ ಬಟನ್ ಅನ್ನು ಒತ್ತಿ. ಈ ಸ್ಲೈಡ್ ಅನ್ನು ಮೂರನೇ ಮತ್ತು ನಾಲ್ಕನೇ ಸ್ಲೈಡ್-ಗಳ ನಡುವೆ ಡ್ರ್ಯಾಗ್ ಮತ್ತು ಡ್ರಾಪ್ ಮಾಡಿ. |
03.48 | ಸ್ಲೈಡ್-ಗಳು ಪುನಃ ಸಂಯೋಜಿಸಲ್ಪಟ್ಟಿವೆ. |
03.52 | ಈ ಕಾರ್ಯವನ್ನು undo ಮಾಡಲು Ctrl+Z ಕೀಯನ್ನು ಒತ್ತಿ. |
03.57 | ನೀವು ಪ್ರತಿಯೊಂದು ಸ್ಲೈಡ್-ಗೆ ಬೇರೆ ಬೇರೆ ಟ್ರಾನ್ಸಿಶನ್-ಗಳನ್ನು ಒಂದೇ ಬಾರಿ ಜೋಡಿಸಬಹುದು. |
04.02 | Slide Sorter ವ್ಯೂ ನಿಂದ ಮೊದಲನೆಯ ಸ್ಲೈಡ್ ಅನ್ನು ಆಯ್ಕೆ ಮಾಡಿ. |
04.06 | ಈಗ, Task ಪೇನ್-ನಿಂದ, Slide Transitionsನ ಮೇಲೆ ಕ್ಲಿಕ್ ಮಾಡಿ. |
04.13 | Apply to selected slidesನ ಕೆಳಗೆ, ಸ್ಕ್ರಾಲ್ ಮಾಡಿ Wipe Upಅನ್ನು ಆಯ್ಕೆ ಮಾಡಿ. |
04.19 | ಮೇನ್ ಪೇನ್-ನಲ್ಲಿ ಟ್ರಾನ್ಸಿಶನ್ ನ ಪರಿಣಾಮ ಪ್ರದರ್ಶಿತವಾಗುವುದನ್ನು ಗಮನಿಸಿ. |
04.24 | Speed ಎಂಬ drop-down ಮೆನುವಿನಿಂದ option ಗಳನ್ನು ಆರಿಸಿ ನೀವು ಟ್ರಾನ್ಸಿಶನ್ ನ ವೇಗವನ್ನು ನಿಯಂತ್ರಿಸಬಹುದು. |
04.31 | Modify Transitions ನ ಕೆಳಗೆ, Speed drop-down ಬಾಕ್ಸ್ ಮೇಲೆ ಕ್ಲಿಕ್ ಮಾಡಿ. Medium ಅನ್ನು ಕ್ಲಿಕ್ ಮಾಡಿ. |
04.39 | ಈಗ, ಟ್ರಾನ್ಸಿಶನ್-ಗೆ ಧ್ವನಿಯನ್ನು ಸೆಟ್ ಮಾಡೋಣ. |
04.43 | Modify Transitionsನಲ್ಲಿ Sound ಎಂಬ drop-down ಬಾಕ್ಸ್ ಮೇಲೆ ಕ್ಲಿಕ್ ಮಾಡಿ. beam ಅನ್ನು ಆಯ್ಕೆ ಮಾಡಿ. |
04.52 | ಇದೇ ರೀತಿ, ಎರಡನೆಯ ಸ್ಲೈಡ್ ಅನ್ನು ಆಯ್ಕೆ ಮಾಡೋಣ. |
04.56 | Task ಪೇನಿನಲ್ಲಿ, Slide Transitions ನ ಮೇಲೆ ಕ್ಲಿಕ್ ಮಾಡಿ. |
05.00 | Apply to selected slides ನ ಕೆಳಗೆ, Wheel Clockwise, 4 Spokes ಅನ್ನು ಆಯ್ಕೆ ಮಾಡಿ. |
05.08 | ಈಗ Speed ಎಂಬ drop-down ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. Medium ಅನ್ನು ಆಯ್ಕೆ ಮಾಡಿ. |
05.13 | ಅನಂತರ, Sound ಎಂಬ ಡ್ರಾಪ್-ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. applause ಅನ್ನು ಆಯ್ಕೆ ಮಾಡಿ. |
05.21 | ಈಗ, ನಾವು ಮಾಡಿರುವ ಟ್ರಾನ್ಸಿಷನ್ ಪ್ರಭಾವದ ಪ್ರಿವ್ಯೂ (ಮುನ್ನೋಟ) ಅನ್ನು ನೋಡೋಣ. |
05.25 | Play ಅನ್ನು ಕ್ಲಿಕ್ ಮಾಡಿ. |
05.28 | ಈಗ ನಾವು, ಒಂದು ಸ್ಲೈಡ್ ಟ್ರಾನ್ಸಿಷನ್-ಗೆ animate ಹೇಗೆ ಮಾಡುವುದು ಎಂಬುದನ್ನು, ಮತ್ತು ಧ್ವನಿ ಪ್ರಭಾವವನ್ನು ಕೂಡಿಸುವುದನ್ನು ಕಲಿತಿದ್ದೇವೆ. |
05.35 | ಸ್ವಯಂ (ಸಹಜವಾಗಿಯೇ) ಪ್ರಸ್ತುತಗೊಳ್ಳುವ ಪ್ರಸ್ತುತಿಯನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಈಗ ಕಲಿಯೋಣ. |
05.42 | Tasks ಪೇನ್ ನಿಂದ, Slide Transitions ಮೇಲೆ ಕ್ಲಿಕ್ ಮಾಡಿ. |
05.46 | “ಟ್ರಾನ್ಸಿಷನ್ ಟೈಪ್”ನಲ್ಲಿ Checkerboard Down ಅನ್ನು ಆಯ್ಕೆ ಮಾಡಿ. |
05.50 | Speed ಡ್ರಾಪ್-ಡೌನ್ ನಲ್ಲಿ, Medium ಅನ್ನು ಆಯ್ಕೆ ಮಾಡಿ. |
05.55 | Sound ಡ್ರಾಪ್-ಡೌನ್ ನಿಂದ, Gong ಅನ್ನು ಆರಿಸಿ. |
06.00 | Loop until next sound ಅನ್ನು ಚೆಕ್ ಮಾಡಿ. |
06.04 | Automatically after ಎನ್ನುವ ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ. |
06.09 | ಸಮಯವನ್ನು 1 sec ಆಗಿ ಆಯ್ಕೆ ಮಾಡಿ. |
06.14 | Apply to All Slides ಮೇಲೆ ಕ್ಲಿಕ್ ಮಾಡಿ. |
06.18 | Apply to All Slides ಬಟನ್ ನ ಮೇಲೆ ಕ್ಲಿಕ್ ಮಾಡುವುದರಿಂದ, ಒಂದೇ ಟ್ರಾನ್ಸಿಷನ್ ಎಲ್ಲಾ ಸ್ಲೈಡ್ಸ್-ಗಳಿಗೆ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ. |
06.25 | ಈ ರೀತಿಯಾಗಿ, ಪ್ರತಿ ಸ್ಲೈಡ್-ಗಳಿಗೂ ನಾವು ಪ್ರತ್ಯೇಕವಾಗಿ ಟ್ರಾನ್ಸಿಷನ್ ಗಳನ್ನು ಜೋಡಿಸಬೇಕಾಗಿಲ್ಲ. |
06.31 | Main ಮೆನುವಿನಿಂದ, Slide Show ಮೇಲೆ, ಕ್ಲಿಕ್ ಮಾಡಿ. ನಂತರ Slide Show ಮೇಲೆ ಕ್ಲಿಕ್ ಮಾಡಿ. |
06.38 | ಸ್ಲೈಡ್-ಗಳು ಸ್ವಯಂಚಾಲಿತವಾಗಿ ಮುಂದುವರೆಯುತ್ತವೆ ಎಂಬುದನ್ನು ಗಮನಿಸಿ. |
06.49 | ಪ್ರಸ್ತುತಿಯಿಂದ ಹೊರಬರಲು Escape ಕೀಯನ್ನು ಒತ್ತೋಣ. |
06.54 | ಈಗ, ಸ್ವಯಂ ಚಾಲಿತವಾಗಿ ಪ್ರಸ್ತುತಗೊಳ್ಳುವ, ಆದರೆ ಪ್ರತಿಯೊಂದು ಸ್ಲೈಡ್-ಗೂ ಬೇರೆ ಬೇರೆ ಪ್ರದರ್ಶನ ಸಮಯಗಳನ್ನು ಹೊಂದಿರುವ ಪ್ರಸ್ತುತಿಯನ್ನು ಹೇಗೆ ನಿರ್ಮಿಸುವುದು ಎಂಬುದನ್ನು ನಾವು ಕಲಿಯೋಣ. |
07.03 | ಕೆಲವು ಸ್ಲೈಡ್-ಗಳ ವಿಷಯವು ದೀರ್ಘವಾಗಿದ್ದಾಗ ಅಥವಾ ಕ್ಲಿಷ್ಟಕರವಾಗಿದ್ದಾಗ ಇದು ಉಪಯುಕ್ತವಾಗುತ್ತದೆ. |
07.13 | Main ಪೇನಿನಿಂದ, ಮೊದಲು Slide Sorter ಟ್ಯಾಬ್-ನ ಮೇಲ್ ಕ್ಲಿಕ್ ಮಾಡಿ. |
07.18 | ಎರಡನೇ ಸ್ಲೈಡ್-ಅನ್ನು ಆಯ್ಕೆ ಮಾಡಿ. |
07.21 | Tasks ಪೇನಿಗೆ ಹೋಗಿ. |
07.24 | Slide Transition ನ ಕೆಳಗೆ, Advance slide ಆಯ್ಕೆಗೆ ಹೋಗಿ. |
07.29 | Automatically after ಫೀಲ್ಡ್-ನಲ್ಲಿ, ಸಮಯವನ್ನು 2 seconds ಎಂದು ನಿಗದಿ ಮಾಡಿ. |
07.37 | Main ಪೇನಿನಿಂದ, ಮೂರನೇ ಸ್ಲೈಡ್-ಅನ್ನು ಆಯ್ಕೆ ಮಾಡಿ. |
07.42 | Tasks ಪೇನಿಗೆ ಹೋಗಿ. |
07.44 | Slide Transition ನ ಕೆಳಗೆ, Advance slide ಆಯ್ಕೆಗೆ ಹೋಗಿ. |
07.49 | Automatically after ಫೀಲ್ಡ್-ನಲ್ಲಿ, ಸಮಯವನ್ನು 3 seconds ಎಂದು ನಿಗದಿ ಮಾಡಿ. |
07.57 | ನಾಲ್ಕನೇ ಸ್ಲೈಡ್ ಅನ್ನು ಆಯ್ಕೆ ಮಾಡೋಣ. ಮತ್ತು ಹಿಂದಿನ ಸ್ಲೈಡ್ಸ್-ಗಳಿಗೆ ಅನುಸರಿಸಿದ ಕ್ರಮಗಳನ್ನೇ ಅನುಸರಿಸಿ. ಮತ್ತು ಸಮಯವನ್ನು 4 ಸೆಕೆಂಡ್ ಗಳಿಗೆ ಬದಲಾಯಿಸಿ. |
08.08 | Main ಮೆನುವಿನಿಂದ, Slide Show ಮೇಲೆ ಕ್ಲಿಕ್ ಮಾಡಿ. ನಂತರ Slide Show ಮೇಲೆ ಕ್ಲಿಕ್ ಮಾಡಿ. |
08.13 | ಪ್ರತಿಯೊಂದು ಸ್ಲೈಡ್ ಕೂಡ ಭಿನ್ನ ಸಮಯದಲ್ಲಿ ಪ್ರದರ್ಶಿತವಾಗುತ್ತಿರುವುದನ್ನು ಗಮನಿಸಿ. |
08.19 | ಪ್ರಸ್ತುತಿಯಿಂದ ಹೊರಬರಲು Escape ಕೀಯನ್ನು ಒತ್ತೋಣ. |
08.24 | ಇದರೊಂದಿಗೆ ಈ ಟ್ಯುಟೋರಿಯಲ್ ಅಂತ್ಯಗೊಳ್ಳುತ್ತದೆ. ಈ ಟ್ಯುಟೋರಿಯಲ್ ನಲ್ಲಿ ನಾವು Slide shows, Slide Transitions ಮತ್ತು Automatic show ಗಳ ಬಗ್ಗೆ ಕಲಿತಿದ್ದೇವೆ. |
08.37 | ಇಲ್ಲಿ ನಿಮಗೊಂದು ಅಸೈನ್-ಮೆಂಟ್ ಇದೆ. |
08.40 | ಹೊಸ ಪ್ರಸ್ತುತಿಯನ್ನು ನಿರ್ಮಿಸಿ. |
08.42 | Wheel Clockwise ಅನ್ನು , |
08.46 | ಎರಡು ಮತ್ತು ಮೂರನೇ ಸ್ಲೈಡ್-ಗಳಿಗೆ, gong ಧ್ವನಿಯೊಂದಿಗೆ medium ವೇಗದಲ್ಲಿ 2 spoke transition ಅನ್ನು ಜೋಡಿಸಿ. |
08.54 | ಸ್ವಯಂಚಾಲಿತ ಸ್ಲೈಡ್ ಶೋ ಅನ್ನು ರಚಿಸಿ. |
08.58 | ಈ ಲಿಂಕ್-ನಲ್ಲಿ ಸಿಗುವ ವಿಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
09.04 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
09.09 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
09.18 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
09.25 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
09.37 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro . |
09.48 | ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |