Difference between revisions of "Introduction-to-Computers/C2/Compose-Options-for-Email/Kannada"

From Script | Spoken-Tutorial
Jump to: navigation, search
 
(One intermediate revision by one other user not shown)
Line 37: Line 37:
 
|-
 
|-
 
|00:45
 
|00:45
| ನಾವು ಪ್ರಾರಂಭಿಸೋಣ.
+
| ನಾವು ಪ್ರಾರಂಭಿಸೋಣ. ನಿಮ್ಮ ‘ವೆಬ್ ಬ್ರೌಸರ್’ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'http://gmail.com'
|-
+
|00:46
+
| ನಿಮ್ಮ ‘ವೆಬ್ ಬ್ರೌಸರ್’ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'http://gmail.com'
+
 
|-
 
|-
 
|00:55
 
|00:55
Line 331: Line 328:
 
|-
 
|-
 
|09:27
 
|09:27
| ನಾವು ನಮ್ಮ ಕಂಪ್ಯೂಟರ್ ನಿಂದ ಅಥವಾ ಇಮೇಜ್ ನ ‘ವೆಬ್ಸೈಟ್ ಅಡ್ರೆಸ್’ ನಿಂದ
+
| ನಾವು ನಮ್ಮ ಕಂಪ್ಯೂಟರ್ ನಿಂದ ಅಥವಾ ಇಮೇಜ್ ನ ‘ವೆಬ್ಸೈಟ್ ಅಡ್ರೆಸ್’ ನಿಂದ ಫೋಟೋಗಳನ್ನು ಅಪ್ಲೋಡ್ ಮಾಡಬಹುದು.
ಫೋಟೋಗಳನ್ನು ಅಪ್ಲೋಡ್ ಮಾಡಬಹುದು.
+
 
|-
 
|-
 
|09:34
 
|09:34
Line 339: Line 335:
 
|09:38
 
|09:38
 
|ಹೀಗಾಗಿ, ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುವೆನು.
 
|ಹೀಗಾಗಿ, ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುವೆನು.
|- |09:41
+
|-  
 +
|09:41
 
|ಈ ಆಯ್ಕೆಯನ್ನು ನೀವು ನಿಮ್ಮಷ್ಟಕ್ಕೆ ಕಲಿತುಕೊಳ್ಳಬಹುದು.  
 
|ಈ ಆಯ್ಕೆಯನ್ನು ನೀವು ನಿಮ್ಮಷ್ಟಕ್ಕೆ ಕಲಿತುಕೊಳ್ಳಬಹುದು.  
 
|-
 
|-

Latest revision as of 17:34, 17 March 2017

Time
Narration
00:01 Compose Options for Emails ಎಂಬ ‘ಸ್ಪೋಕನ್ ಟ್ಯುಟೋರಿಯಲ್’ ಗೆ (Spoken Tutorial) ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು-
00:10 * ‘ಇಮೇಲ್’ ಪಡೆಯುವವರ ಬಗ್ಗೆ, ಅರ್ಥಾತ್- 'To, Cc, Bcc'
00:16 * ‘ಇಮೇಲ್’ನ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡುವುದು
00:19 * ‘ಇಮೇಲ್’ಗಳಿಗೆ ಫೈಲ್ ಗಳನ್ನು ಲಗತ್ತಿಸುವುದು
00:22 * ಫೈಲ್ ಗಳನ್ನು 'Google Drive' ಮುಖಾಂತರ ಹಂಚಿಕೊಳ್ಳುವುದು (share)
00:25 * ‘ಇಮೇಲ್’ನಲ್ಲಿ ಫೋಟೋ ಅಥವಾ ಲಿಂಕ್ ಅನ್ನು ಸೇರಿಸುವುದು ಮತ್ತು
00:29 * 'Compose' ವಿಂಡೋದ ಆಯ್ಕೆಗಳ ಬಗ್ಗೆ ಕಲಿಯುವೆವು.
00:33 ಈ ಟ್ಯುಟೋರಿಯಲ್ ಗಾಗಿ, ನಿಮಗೆ ‘ಇಂಟರ್ನೆಟ್’ನ ಸಂಪರ್ಕ
00:38 ಮತ್ತು ‘ವೆಬ್ ಬ್ರೌಸರ್’ ಬೇಕಾಗುವುದು.
00:40 ನಿಮಗೆ ಇಲ್ಲಿ ಮಾಡಿತೋರಿಸಲು, ನಾನು ‘Firefox’ (ಫೈರ್ಫಾಕ್ಸ್) ‘ವೆಬ್ ಬ್ರೌಸರ್’ಅನ್ನು ಬಳಸುತ್ತಿರುವೆನು.
00:45 ನಾವು ಪ್ರಾರಂಭಿಸೋಣ. ನಿಮ್ಮ ‘ವೆಬ್ ಬ್ರೌಸರ್’ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'http://gmail.com'
00:55 'Login' (ಲಾಗ್-ಇನ್) ಪೇಜ್ ತೆರೆದುಕೊಳ್ಳುತ್ತದೆ.
00:58 ‘ಯೂಸರ್ ನೇಮ್’ ಮತ್ತು ‘ಪಾಸ್ವರ್ಡ್’ ಗಳನ್ನುಆಯಾ ಟೆಕ್ಸ್ಟ್-ಬಾಕ್ಸ್ ಗಳಲ್ಲಿ ಎಂಟರ್ ಮಾಡಿ.
01:04 ಒಂದುವೇಳೆ ಲಾಗ್-ಇನ್ ಪೇಜ್, ‘ಯೂಸರ್ ನೇಮ್’ನೊಂದಿಗೆ ಓಪನ್ ಆದರೆ, ನೀವು ಈಗಾಗಲೇ ನಿಮ್ಮ ಮಷಿನ್ ನಿಂದ ಈ ಅಕೌಂಟ್ ಅನ್ನು ಆಕ್ಸೆಸ್ ಮಾಡಿದ್ದೀರಿ ಎಂದು ಇದರ ಅರ್ಥ.
01:12 ಪಾಸ್ವರ್ಡ್ ಅನ್ನು ಎಂಟರ್ ಮಾಡಿ
01:15 ಮತ್ತು 'Sign in' ಬಟನ್ ನ ಮೇಲೆ ಕ್ಲಿಕ್ ಮಾಡಿ.
01:18 ನಾವು ನಮ್ಮ 'Gmail ಪೇಜ್'ನಲ್ಲಿ ಇದ್ದೇವೆ.
01:21 ಈಗ, ನಾವು ‘ಇಮೇಲ್’ ಬರೆಯಲು ಲಭ್ಯವಿರುವ ಆಯ್ಕೆಗಳತ್ತ ನೋಡೋಣ.
01:26 ಹೀಗೆ, ಮೊದಲು ನಾವು 'Compose' ಬಟನ್ ನ ಮೇಲೆ ಕ್ಲಿಕ್ ಮಾಡೋಣ.
01:31 'Compose' ವಿಂಡೋ ತೆರೆದುಕೊಳ್ಳುತ್ತದೆ.
01:34 'To' ಎಂಬ ಭಾಗದಲ್ಲಿ ನಾವು ಇಮೇಲ್ ಪಡೆಯುವವರನ್ನು ಸೂಚಿಸುತ್ತೇವೆ.
01:38 ಇದು ‘To, Cc’ ಮತ್ತು ‘Bcc’ ಎಂಬ 3 ಆಯ್ಕೆಗಳನ್ನು ಹೊಂದಿದೆ.
01:44 'Cc', 'Carbon Copy' (ಕಾರ್ಬನ್ ಕಾಪಿ) ಯನ್ನು ಸೂಚಿಸುತ್ತದೆ ಮತ್ತು 'Bcc', 'Blind Carbon Copy' ಯನ್ನು ಸೂಚಿಸುತ್ತದೆ.
01:51 ನಾವು ಯಾರಿಗೆ ‘ಇಮೇಲ್’ ಕಳಿಸಬೇಕಾಗಿದೆಯೋ ಆ ವ್ಯಕ್ತಿಯ ‘ಇಮೇಲ್’ ಅಡ್ರೆಸ್ ಅನ್ನು 'To' ಎಂಬ ಫೀಲ್ಡ್ ನಲ್ಲಿ ಸೇರಿಸಬೇಕು.
01:58 ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ.
02:01 ನಮಗೆ ಒಂದೇ ‘ಇಮೇಲ್’ಅನ್ನು ಒಂದಕ್ಕಿಂತ ಹೆಚ್ಚು ಜನರಿಗೆ ಕಳಿಸಬೇಕಾಗಿದ್ದರೆ, ಸುಮ್ಮನೆ 'To' ಫೀಲ್ಡ್ನಲ್ಲಿ ‘ಇಮೇಲ್-id’ ಗಳನ್ನು ಸೇರಿಸಿ.
02:09 ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ.
02:12 ‘ಇಮೇಲ್’ನ ಪ್ರತಿಯನ್ನು, ಬೇರೆಯವರಿಗೆ ಎಂದು ಗುರುತು ಮಾಡಲು 'Cc' ಆಯ್ಕೆಯನ್ನು ಬಳಸಿ.
02:18 'To' ಮತ್ತು 'Cc' ಫೀಲ್ಡ್ ಗಳಲ್ಲಿ ಗುರುತಿಸಲ್ಪಟ್ಟ ಇಮೇಲ್ ಪಡೆಯುವವರು, ಇನ್ನುಳಿದ ಈ ಇಮೇಲ್ ಪಡೆಯುವವರನ್ನು ನೋಡಬಹುದು.
02:25 ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ.
02:28 ‘ಇಮೇಲ್’ನ ‘ಬ್ಲೈಂಡ್ ಕಾಪಿ’ಯನ್ನು ಬೇರೆಯವರಿಗೆ ಎಂದು ಗುರುತು ಮಾಡಲು, ನಾವು 'Bcc' ಆಯ್ಕೆಯನ್ನುಸಹ ಬಳಸಬಹುದು.
02:34 ಈ ಆಯ್ಕೆಯಲ್ಲಿ, 'To' ಮತ್ತು 'Cc' ಗಳಲ್ಲಿ ಇರುವ ಇಮೇಲ್ ಪಡೆಯುವವರು 'Bcc'ಯಲ್ಲಿ ಸೇರಿಸಿದ ಇಮೇಲ್ ಪಡೆಯುವವರನ್ನು ನೋಡಲು ಸಾಧ್ಯವಿಲ್ಲ.
02:42 'Bcc' ಯಲ್ಲಿ ಇರುವ ಇಮೇಲ್ ಪಡೆಯುವವನು/ಳು, 'To' ಮತ್ತು 'Cc' ಪಡೆಯುವವರನ್ನು ನೋಡಲು ಸಾಧ್ಯವಿದೆ
02:47 ಆದರೆ ಉಳಿದ 'Bcc' ಪಡೆಯುವವರನ್ನು ಮಾತ್ರ ಅಲ್ಲ.
02:51 ಮೇಲ್ ಕಳಿಸುವವರು, ಇಮೇಲ್ ಅನ್ನು ಪಡೆಯುತ್ತಿರುವವರ ಪೂರ್ತಿ ಲಿಸ್ಟ್ ಅನ್ನು ನೋಡಬಹುದು.
02:55 ಇಲ್ಲಿ ಒಂದು ‘ಸ್ಕ್ರೀನ್ ಶಾಟ್’ ಇದೆ.
02:58 ಮುಖ್ಯವಾದ ಸೂಚನೆ:
03:00 'To, Cc' ಮತ್ತು 'Bcc' ಎಂಬ ಇಮೇಲ್ ಪಡೆಯುವವರ ಫೀಲ್ಡ್ ಗಳಲ್ಲಿ, ನಾವು ಎಷ್ಟು ‘ಇಮೇಲ್’-id ಗಳನ್ನು ಬೇಕಾದರೂ ಸೇರಿಸಬಹುದು.
03:08 ಆದರೆ ಗರಿಷ್ಠ ಮಿತಿ, ಒಂದು ದಿನದಲ್ಲಿ 500 ಇಮೇಲ್ ಪಡೆಯುವವರು ಎಂದು ಆಗಿದೆ.
03:13 ಪ್ರತಿಯೊಂದು ‘ಮೇಲ್-id’ ಯನ್ನು ಸ್ಪೇಸ್ ಅಥವಾ ‘ಕಾಮಾ’ ಅಥವಾ ‘ಕೋಲನ್’ನಿಂದ ಬೇರ್ಪಡಿಸಬೇಕು.
03:20 ಈಗ ನಾವು ನಮ್ಮ ‘Gmail Compose’ ಎಂಬ ವಿಂಡೋ ಗೆ ಹಿಂದಿರುಗೋಣ.
03:25 ಡೀಫಾಲ್ಟ್ ಆಗಿ, ಕರ್ಸರ್, 'To' ಎಂಬ ಫೀಲ್ಡ್ ನಲ್ಲಿದೆ.
03:29 ಇಮೇಲ್ ಪಡೆಯುವವರ ಅಡ್ರೆಸ್ ಗಳನ್ನು ನಾವು ಹೀಗೆ ಎಂಟರ್ ಮಾಡೋಣ -
03:33 'To' ಎಂಬ ಫೀಲ್ಡ್ ನಲ್ಲಿ, ‘ಇಮೇಲ್-id’ ಯನ್ನು “ray.becky.0808@gmail.com”,
03:46 'Cc' ಎಂಬ ಫೀಲ್ಡ್ ನಲ್ಲಿ, 0808iambecky@gmail.com ಹಾಗೂ
03:55 'Bcc' ಎಂಬ ಫೀಲ್ಡ್ ನಲ್ಲಿ, "stlibreoffice@gmail.com" ಮತ್ತು "info@spoken-tutorial.org" ಎಂದು ನಾವು ಕೊಡೋಣ.
04:10 'Subject' ಎಂಬ ಸಾಲಿನಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ‘ಇಮೇಲ್’ಗಾಗಿ ಸಣ್ಣ ವಿವರಣೆಯನ್ನು ಎಂಟರ್ ಮಾಡಿ.
04:15 ನಾನು ಹೀಗೆ ಟೈಪ್ ಮಾಡುವೆನು: “Partner with us”.
04:19 ‘ಕಂಟೆಂಟ್ಸ್ ಏರಿಯಾ’ನಲ್ಲಿ, ನಾವು ಈ ಮೆಸೇಜನ್ನು ಟೈಪ್ ಮಾಡೋಣ:
04:24 “Spoken Tutorial Project is helping to bridge the digital divide”.
04:29 ‘ಜಿ ಮೇಲ್’, ನಮ್ಮ ‘ಇಮೇಲ್’ನಲ್ಲಿ, ಟೆಕ್ಸ್ಟ್ ಗೆ ‘ಬೇಸಿಕ್ ಫಾರ್ಮ್ಯಾಟಿಂಗ್’ಅನ್ನು ಮಾಡಲು ನಮಗೆ ಅನುಮತಿಸುತ್ತದೆ.
04:35 ಡೀಫಾಲ್ಟ್ ಆಗಿ, ಇದನ್ನು 'Compose' ವಿಂಡೋದ ಕೆಳಗಡೆ ತೋರಿಸಲಾಗಿದೆ.
04:41 ಇಲ್ಲದಿದ್ದರೆ, ‘ಫಾರ್ಮ್ಯಾಟಿಂಗ್ ಟೂಲ್ ಬಾರ್’ಅನ್ನು ಆಕ್ಸೆಸ್ ಮಾಡಲು, 'Formatting options' ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
04:47 ಇಲ್ಲಿ, ನಮಗೆ 'Font, Size, Bold, Italic, Underline, Text color, Align, Numbered' ಹಾಗೂ 'Bulleted lists' ಮತ್ತು 'Indentation' ಗಳಂತಹ ವಿವಿಧ ಆಯ್ಕೆಗಳಿವೆ.
05:03 ಈ ಆಯ್ಕೆಗಳು, ಯಾವುದೇ 'ವರ್ಡ್ ಪ್ರೊಸೆಸರ್ ಅಪ್ಲಿಕೇಶನ್’ನಲ್ಲಿ ಇರುವಹಾಗೆಯೇ ಕರಾರುವಾಕ್ಕಾಗಿ ಇರುತ್ತವೆ.
05:08 ನೀವು ನಿಮ್ಮಷ್ಟಕ್ಕೆ ಈ ಆಯ್ಕೆಗಳನ್ನು ಕಲಿತುಕೊಳ್ಳಬಹುದು.
05:12 ನಾನು ನನ್ನ ಟೆಕ್ಸ್ಟ್ ಅನ್ನು ಹೀಗೆ ಫಾರ್ಮ್ಯಾಟ್ ಮಾಡಿದ್ದೇನೆ.
05:16 ‘ಫಾರ್ಮ್ಯಾಟಿಂಗ್ ಟೂಲ್ ಬಾರ್’ಅನ್ನು ಮರೆಮಾಡಲು, 'Formatting options' ಬಟನ್ ನ ಮೇಲೆ ಕ್ಲಿಕ್ ಮಾಡಿ.
05:22 'Compose' ವಿಂಡೋನಲ್ಲಿ, ‘ಫೈಲ್’ಗಳು, ಫೋಟೋಗಳು, ಲಿಂಕ್ ಗಳು ಮತ್ತು ಇಮೋಟಿಕಾನ್ ಗಳನ್ನು ಲಗತ್ತಿಸಲು ಆಯ್ಕೆಗಳಿವೆ.
05:32 ಫೈಲ್ ಗಳನ್ನು ಅಥವಾ ಡಾಕ್ಯೂಮೆಂಟ್ ಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಲು,
05:35 'Attach files' ಅಥವಾ ‘Insert files using Drive’ ಆಯ್ಕೆಗಳನ್ನು ನಾವು ಬಳಸಬಹುದು.
05:41 ಎಲ್ಲ 'Mail' ಪೂರೈಕೆದಾರರು, ಫೈಲ್ ಗಳನ್ನು 'ಅಟ್ಯಾಚ್ಮೆಂಟ್' ನಂತೆ ಕಳಿಸಲು ಅನುಮತಿಸುತ್ತಾರೆ.
05:46 ಸೈಜ್ ನಲ್ಲಿ 25 ಮೆಗಾಬೈಟ್ (MB) ಗಳವರೆಗೆ ನೀವು ಲಗತ್ತಿಸಬಹುದು.
05:51 ಇದಕ್ಕಿಂತ ದೊಡ್ಡ ಗಾತ್ರದ ಫೈಲ್ ಗಳನ್ನು ಕಳಿಸಲು, ನೀವು 'Insert files using Drive' ಆಯ್ಕೆಯನ್ನು ಬಳಸಬಹುದು.
05:59 ಮೊದಲು, ಗಾತ್ರದಲ್ಲಿ 1Mb ಗಿಂತ ಕಡಿಮೆಯಿರುವ ಒಂದು 'pdf ' ಫೈಲನ್ನು ನಾವು ಲಗತ್ತಿಸೋಣ.
06:04 ‘ಪೇಪರ್ ಕ್ಲಿಪ್’ನ ಹಾಗೆ ಕಾಣುವ 'Attach file' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
06:09 ಇದು ಫೈಲ್ ಬ್ರೌಸರ್ ಅನ್ನು ಓಪನ್ ಮಾಡುವುದು.
06:12 ನಿಮಗೆ ‘ಮೇಲ್’ ಮುಖಾಂತರ ಕಳಿಸಬೇಕಾಗಿರುವ ಫೈಲನ್ನು ಬ್ರೌಸ್ ಮಾಡಿ ಹಾಗೂ ಆಯ್ಕೆಮಾಡಿ.
06:16 ಡೆಸ್ಕ್ಟಾಪ್ ನಿಂದ, ನಾನು "myscript.pdf" ಅನ್ನು ಆಯ್ಕೆ ಮಾಡಿ, 'Open' ನ ಮೇಲೆ ಕ್ಲಿಕ್ ಮಾಡುವೆನು.
06:23 ನಮ್ಮ ಫೈಲ್, ಮೇಲ್ ಗೆ ಲಗತ್ತಿಸಿರುವುದನ್ನು ನಾವು ನೋಡಬಹುದು.
06:27 ಇದೇ ‘ಮೇಲ್’ಗೆ, 'Attach files' ಆಯ್ಕೆಯನ್ನು ಬಳಸಿ, ಅನೇಕ ಫೈಲ್ ಗಳನ್ನು ಸಹ ಲಗತ್ತಿಸಬಹುದು.
06:34 ಒಂದು ಮೆಸೇಜ್ ಗೆ ಲಗತ್ತಿಸಿದ ಫೈಲನ್ನು ತೆಗೆದುಹಾಕಲು, ಫೈಲ್ ನ ಹೆಸರಿನ ಬಲಭಾಗದಲ್ಲಿ ಇರುವ 'x' ಗುರುತಿನ ಮೇಲೆ ಕ್ಲಿಕ್ ಮಾಡಿ.
06:41 ಈಗ, ಸುಮಾರು 30Mb ಗಳಷ್ಟಿರುವ ಒಂದು ಫೈಲನ್ನು ನಾವು ಲಗತ್ತಿಸೋಣ.
06:46 ನನ್ನ ಹತ್ತಿರ ಡೆಸ್ಕ್ಟಾಪ್ ನ ಮೇಲೆ, ಫೈಲ್ ಸೈಜ್ ಸುಮಾರು 30Mb ಗಳಷ್ಟುಇರುವ ಒಂದು 'ಝಿಪ್ ಫೈಲ್' ಇದೆ.
06:52 'Attach files' ಎಂಬ ಐಕಾನ್ ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
06:56 30Mb 'ಝಿಪ್ ಫೈಲ್'ಅನ್ನು ಬ್ರೌಸ್ ಮಾಡಿ ಹಾಗೂ ಆಯ್ಕೆಮಾಡಿ ಮತ್ತು 'Open' ನ ಮೇಲೆ ಕ್ಲಿಕ್ ಮಾಡಿ.
07:02 ನಮಗೆ ಪಾಪ್-ಅಪ್ ಮೆಸೇಜ್ ಸಿಗುವುದು:
07:04 “The file you are trying to send exceeds the 25mb attachment limit”
07:09 ಮತ್ತು ಇದು ‘Send using Google drive’ ಎಂಬ ಆಯ್ಕೆಯನ್ನು ನಮಗೆ ಕೊಡುತ್ತದೆ.
07:14 'Send using google drive' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
07:18 ಒಂದು ಕ್ಷಣ ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
07:21 'Insert files using Drive' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡುವುದು ಸಹ ನಮ್ಮನ್ನು ಮೊದಲಿನಂತೆ ಅದೇ ವಿಂಡೋ ಗೆ ಕರೆದೊಯ್ಯುತ್ತದೆ.
07:28 ಇಲ್ಲಿ ನಾವು,
07:31 ‘My Drive, Shared with me’ ಹಾಗೂ ‘Upload’ ಎಂಬ 3 ಟ್ಯಾಬ್ ಗಳನ್ನು ನೋಡಬಹುದು.
07:36 ಡೀಫಾಲ್ಟ್ ಆಗಿ, ಈಗಾಗಲೇ ಅಪ್ಲೋಡ್ ಮಾಡಿದ ಫೈಲ್ ಗಳು, 'My Drive' ಎಂಬ ಟ್ಯಾಬ್ ನ ಅಡಿಯಲ್ಲಿ ಲಭ್ಯವಿರುತ್ತವೆ.
07:43 ಇಲ್ಲಿ ನೀವು ಫೈಲನ್ನು ನೋಡಬಹುದು.
07:46 ಇದನ್ನು, ಅಕೌಂಟ್ ಅನ್ನು ಕ್ರಿಯೇಟ್ ಮಾಡುವ ಸಮಯದಲ್ಲಿ Google Team (ಗೂಗಲ್ ಟೀಮ್) ನಿಂದ ‘ಶೇರ್’ ಮಾಡಲಾಗಿದೆ.
07:51 ನಾವು ‘Shared with me’' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
07:55 ಇಲ್ಲಿ ನಾವು, "No one's shared any files with you yet!" ಎಂಬ ಮೆಸೇಜನ್ನು ನೋಡುತ್ತೇವೆ.
08:00 ನಿಮ್ಮ ಜೊತೆ ಯಾರಾದರೂ ಫೈಲನ್ನು ‘ಶೇರ್’ ಮಾಡಿದರೆ, ಅದು ‘Shared with Me’ ಟ್ಯಾಬ್ ನ ಅಡಿಯಲ್ಲಿ ಲಭ್ಯವಿರುತ್ತದೆ.
08:06 ಈಗ, ಒಂದು ಹೊಸ ಫೈಲನ್ನು ಅಪ್ಲೋಡ್ ಮಾಡಲು, ‘Upload’ ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:12 ‘Select files from your computer’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
08:16 ನಿಮ್ಮ ಮಷಿನ್ ನಿಂದ, ನಿಮಗೆ ಅಪ್ಲೋಡ್ ಮಾಡಬೇಕಾಗಿರುವ ಫೈಲನ್ನು ಬ್ರೌಸ್ ಮಾಡಿ ಹಾಗೂ ಆಯ್ಕೆಮಾಡಿ ಮತ್ತು ‘Open’ ನ ಮೇಲೆ ಕ್ಲಿಕ್ ಮಾಡಿ.
08:23 ನಿಮಗೆ ಇನ್ನೂ ಹೆಚ್ಚು ಫೈಲ್ ಗಳನ್ನು ಸೇರಿಸಬೇಕಾಗಿದ್ದರೆ, ‘Add more files’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
08:27 ನಾನು ಸಧ್ಯಕ್ಕೆ ಇದನ್ನು ಬಿಟ್ಟು ಒಂದೇ ಫೈಲ್ ನ ಅಪ್ಲೋಡ್ ನೊಂದಿಗೆ ಮಾತ್ರ ಮುಂದುವರಿಯುವೆನು.
08:33 ಫೈಲನ್ನು ಸೇರಿಸಿದ ನಂತರ, ನಮ್ಮ ಮೇಲ್ ನಲ್ಲಿ ಅದನ್ನು ಹೇಗೆ ಸೇರಿಸಬೇಕೆಂದು ನಾವು ಹೇಳಬೇಕು.
08:40 ಕೆಳಗೆ ಬಲಭಾಗದಲ್ಲಿ,
08:44 'Insert as Drive link' ಮತ್ತು
08:46 'Attachment' ಎಂದು ಹೇಳುವ 2 ಬಟನ್ ಗಳನ್ನು ಗಮನಿಸಿ.
08:48 ಡೀಫಾಲ್ಟ್ ಆಗಿ, ‘Insert as Drive link’ ಆಯ್ಕೆಯಾಗಿದೆ.
08:52 ನಾವು ‘Attachment’ ಎಂಬುದನ್ನು ಆಯ್ಕೆಮಾಡಿದರೆ ಆಗ ಫೈಲನ್ನು ಒಂದು ‘ಅಟ್ಯಾಚ್ಮೆಂಟ್’ನಂತೆ ಸೇರಿಸಲಾಗುವುದು.
08:57 ನಾವು ಅದನ್ನುಇದ್ದ ಹಾಗೆಯೇ ಇಡುವೆವು.
09:00 ಸ್ಕ್ರೀನ್ ನ ಕೆಳಗೆ ಎಡಭಾಗದಲ್ಲಿರುವ ‘Upload’ ಬಟನ್ ನ ಮೇಲೆ ಕ್ಲಿಕ್ ಮಾಡಿ.
09:05 ಇದು ಅಪ್ಲೋಡ್ ಆಗಲು ಆರಂಭಿಸುವುದು. ಆದರೆ ಇದು ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಸಾರವಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
09:11 ಒಮ್ಮೆ ಪೂರ್ತಿಗೊಂಡರೆ, ಇಲ್ಲಿ, ‘ಕಂಟೆಂಟ್ ಏರಿಯಾ’ದಲ್ಲಿ ನಾವು ಅಪ್ಲೋಡ್ ಆದ ಫೈಲ್ ಗೆ ಒಂದು ಲಿಂಕ್ ಅನ್ನು ನೋಡಬಹುದು.
09:17 ಈಗ ನಾವು ‘ಇಮೇಲ್’ನಲ್ಲಿ ಇಮೇಜ್ ಗಳನ್ನು ಸೇರಿಸಲು, ‘Insert Photo’ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
09:24 'Upload Photos' ವಿಂಡೋ ತೆರೆದುಕೊಳ್ಳುವುದು.
09:27 ನಾವು ನಮ್ಮ ಕಂಪ್ಯೂಟರ್ ನಿಂದ ಅಥವಾ ಇಮೇಜ್ ನ ‘ವೆಬ್ಸೈಟ್ ಅಡ್ರೆಸ್’ ನಿಂದ ಫೋಟೋಗಳನ್ನು ಅಪ್ಲೋಡ್ ಮಾಡಬಹುದು.
09:34 ಸಧ್ಯಕ್ಕೆ, ನನಗೆ ಯಾವ ಇಮೇಜನ್ನೂ ಅಪ್ಲೋಡ್ ಮಾಡುವುದು ಬೇಕಾಗಿಲ್ಲ.
09:38 ಹೀಗಾಗಿ, ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುವೆನು.
09:41 ಈ ಆಯ್ಕೆಯನ್ನು ನೀವು ನಿಮ್ಮಷ್ಟಕ್ಕೆ ಕಲಿತುಕೊಳ್ಳಬಹುದು.
09:44 ಮುಂದಿನ ಆಯ್ಕೆ, 'Insert Link' ಎಂಬುದು ಆಗಿದೆ. ನಾವು ಇದರ ಮೇಲೆ ಕ್ಲಿಕ್ ಮಾಡೋಣ.
09:49 'Edit Link' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
09:53 'Text to display' ಎಂಬ ಫೀಲ್ಡ್ ನಲ್ಲಿ, ನಿಮಗೆ ಲಿಂಕ್ ಎಂದು ಬೇಕಾಗಿರುವ ಟೆಕ್ಸ್ಟ್ ಅನ್ನು ಟೈಪ್ ಮಾಡಿ.
09:58 ನಾನು 'Spoken Tutorial' ಎಂದು ಟೈಪ್ ಮಾಡುವೆನು.
10:02 'Link to' ವಿಭಾಗದಲ್ಲಿ, ಡೀಫಾಲ್ಟ್ ಆಗಿ, 'Web address' ಆಯ್ಕೆಯನ್ನು ಆರಿಸಲಾಗಿದೆ.
10:08 ಟೆಕ್ಸ್ಟ್ ಫೀಲ್ಡ್ ನಲ್ಲಿ, url ಅನ್ನು 'http://spoken-tutorial.org' ಎಂದು ಟೈಪ್ ಮಾಡಿ
10:20 ಮತ್ತು 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ.
10:23 ಈಗ, ‘ಕಂಟೆಂಟ್ ಏರಿಯಾ’ದಲ್ಲಿ, ನೀವು 'Spoken Tutorial' ಎಂಬ ಟೆಕ್ಸ್ಟ್ ಅನ್ನು ನೋಡಬಹುದು ಮತ್ತು ಇದನ್ನು ಹೈಪರ್-ಲಿಂಕ್ ಮಾಡಲಾಗಿದೆ.
10:29 ನಾನು ಹೈಪರ್-ಲಿಂಕ್ ಮಾಡಲಾದ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
10:32 ಟೆಕ್ಸ್ಟ್ ನ ಕೆಳಗೆ ಒಂದು ಸಣ್ಣ ಪಾಪ್-ವಿಂಡೋ ತೆರೆದುಕೊಳ್ಳುತ್ತದೆ.
10:35 ಇದು 'Go to link:' ಎಂದು ಹೇಳುತ್ತದೆ.
10:38 ಇಲ್ಲಿ ತೋರಿಸಲಾದ URL ನ ಮೇಲೆ ಮಾಡಿದ ಕ್ಲಿಕ್, ನಿಮ್ಮನ್ನು Spoken Tutorial ವೆಬ್ಸೈಟ್ ನ 'Homepage' ಗೆ ಕರೆದೊಯ್ಯುತ್ತದೆ.
10:45 URL ಅನ್ನು ಬದಲಾಯಿಸಲು ಅಥವಾ 'link'ಅನ್ನು ತೆಗೆದುಹಾಕಲು, ನಾವು ಕ್ರಮವಾಗಿ 'Change' ಅಥವಾ 'Remove' ಆಯ್ಕೆಗಳ ಮೇಲೆ ಕ್ಲಿಕ್ ಮಾಡಬಹುದು.
10:53 ಈ ‘ಇಮೋಟಿಕಾನ್’ ಐಕಾನ್ ದ ಸಹಾಯದಿಂದ ನಾವು ವಿವಿಧ ಚಿತ್ರಸಹಿತವಾದ ನಿರೂಪಣೆಗಳನ್ನು ಸಹ ಸೇರಿಸಬಹುದು.
10:59 ಈ ವೈಶಿಷ್ಟ್ಯವನ್ನು ನಿಮ್ಮ ‘ಇಮೇಲ್’ನ ಸಂಪರ್ಕದಲ್ಲಿ ಅವಶ್ಯವಿದ್ದಲ್ಲಿ ಬಳಸಿ.
11:04 'Trash' ಐಕಾನ್ ನ ಮೊದಲು ಇರುವ “Saved” ಎಂಬ ಟೆಕ್ಸ್ಟ್ ಅನ್ನು ಗಮನಿಸಿ.
11:08 ನಾವು ವಿಷಯವನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ, ನಮ್ಮ ‘ಇಮೇಲ್’, ಡೀಫಾಲ್ಟ್ ಆಗಿ ನಮ್ಮ'Drafts' ಫೋಲ್ಡರ್ ನಲ್ಲಿ ತಾನಾಗಿಯೇ ಸೇವ್ ಮಾಡಲ್ಪಡುವುದು
11:16 ವಿದ್ಯುತ್ ಕಡಿತ ಅಥವಾ ಇಂಟರ್ನೆಟ್ ಸಂಪರ್ಕದಲ್ಲಿ ಕಡಿತ ಉಂಟಾದಾಗ, ನಮ್ಮ ಟೈಪ್ ಮಾಡಿದ ಮೆಸೇಜನ್ನು ಮರಳಿ ಪಡೆಯಲು ಇದು ತುಂಬಾ ಸಹಾಯವಾಗುವುದು.
11:24 ಒಂದುವೇಳೆ ನಮಗೆ ಈ ಮೆಸೇಜನ್ನು ತ್ಯಜಿಸಬೇಕಾಗಿದ್ದರೆ, 'Trash' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
11:28 ಈ ಕ್ರಿಯೆಯು ‘ಇಮೇಲ್’ಅನ್ನು 'Drafts' ಫೋಲ್ಡರ್ ನಿಂದ ಸಹ ತೆಗೆದುಹಾಕುವುದು.
11:34 'Trash' ಐಕಾನ್ ನ ಬದಿಗೆ ಇರುವ 'More options' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
11:39 'Default to full-screen' ಆಯ್ಕೆಯು 'Compose' ವಿಂಡೋಅನ್ನು ದೊಡ್ಡದನ್ನಾಗಿಸುವುದು.
11:44 'Label' – ಈ ವೈಶಿಷ್ಟ್ಯದ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುವೆವು.
11:49 'Plain text mode' ಆಯ್ಕೆಯು, ನಾವು ಮೊದಲು ಮಾಡಿದ ಎಲ್ಲ ಫಾರ್ಮ್ಯಾಟ್ ಅನ್ನು ತೆಗೆದುಹಾಕುವುದು ಮತ್ತು ಮೇಲ್ ಅನ್ನು ಸರಳ ಟೆಕ್ಸ್ಟ್ ಗೆ ಪರಿವರ್ತಿಸುವುದು.
11:57 'Print' ಆಯ್ಕೆಯು, ‘ಕಂಪೋಸ್’ ಮಾಡಿದ ‘ಮೇಲ್’ಅನ್ನು ಡೀಫಾಲ್ಟ್ ಆಗಿ ಕಾನ್ಫಿಗರ್ ಮಾಡಿದ ಪ್ರಿಂಟರ್ ಗೆ ಕಳಿಸುವುದು.
12:03 'Check Spelling', ಟೈಪ್ ಮಾಡಿದ ವಿಷಯದ ಸ್ಪೆಲ್-ಚೆಕ್ ಅನ್ನು ಮಾಡುವುದು.
12:07 ನಾವು ಈಗ ನಮ್ಮ ‘ಮೇಲ್’ಅನ್ನು ಕಳಿಸಲು ಸಿದ್ಧರಿದ್ದೇವೆ.
12:09 'Send' ಬಟನ್ ನ ಮೇಲೆ ಕ್ಲಿಕ್ ಮಾಡಿ.
12:12 ನಮಗೆ ಸ್ಕ್ರೀನ್ ಮೇಲೆ ಈ ಕೆಳಗಿನ ಮೆಸೇಜ್ ಸಿಗುತ್ತದೆ.
12:15 “This Drive file isn't shared with all recipients”.
12:19 ಇದು ಏಕೆಂದರೆ, ಈ ‘ಇಮೇಲ್’ನಲ್ಲಿ ಗುರುತಿಸಲಾದ ಜನರೊಂದಿಗೆ ನಾವು ಫೈಲನ್ನು ‘ಶೇರ್’ ಮಾಡಲಿಲ್ಲ.
12:25 'Share & Send' ಬಟನ್ ನ ಮೇಲೆ ಕ್ಲಿಕ್ ಮಾಡಿ.
12:29 ಸ್ಕ್ರೀನ್ ನ ಮೇಲೆ, ಈ ಎರಡರಲ್ಲಿ ಒಂದು ಮೆಸೇಜನ್ನು ನಾವು ನೋಡುವೆವು:
12:32 ನಿಮ್ಮ ಮೆಸೇಜನ್ನು ಕಳಿಸಲಾಗುತ್ತಿದೆ - "sending"
12:34 ಅಥವಾ "Your message has been sent".
12:38 ಕಳಿಸಿದ ‘ಮೇಲ್’ಅನ್ನು ನೋಡಲು, 'View Message' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
12:43 ನಾವು ಇಲ್ಲಿ ಕಳಿಸಿದ ‘ಇಮೇಲ್’ನ ವಿಷಯವನ್ನು ನೋಡಬಹುದು.
12:47 ನಾವು ಒಂದೊಂದಾಗಿ ‘ಕ್ರಾಸ್ ಚೆಕ್’ಮಾಡೋಣ.
12:50 ಇಲ್ಲಿ ‘ಅಟ್ಯಾಚ್ಮೆಂಟ್’ಗಳಿವೆ
12:52 ಮತ್ತು ಇಲ್ಲಿ 'URL link' ಇದೆ.
12:55 ‘ಮೇಲ್ ಅಡ್ರೆಸ್’ನ ಕೆಳಗೆ, ಇಲ್ಲಿ, ‘ಹೆಡರ್’ನ ವಿವರಗಳನ್ನು ತೋರಿಸುವ ಒಂದು ತಲೆಕೆಳಗಾದ ತ್ರಿಕೋನವಿದೆ.
13:00 ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
13:03 ಎಲ್ಲ ಮೇಲ್ ಪಡೆಯುವವರ ‘ಇಮೇಲ್-id’ ಗಳನ್ನು, 'To, Cc' ಮತ್ತು 'Bcc' ಫೀಲ್ಡ್ ಗಳಲ್ಲಿ ನಾವು ನೋಡಬಹುದು.
13:11 ‘ಇಮೇಲ್’ ಪಡೆಯುವವರಿಗೆ ಅದು ಹೇಗೆ ಕಾಣಿಸುವುದು ಎಂಬುದನ್ನು ನಾವು ನೋಡೋಣ.
13:16 ಇದು 'Cc'ಯಲ್ಲಿ ಗುರುತಿಸಿದ, ಇಮೇಲ್ ಪಡೆಯುವವರ 'ಮೇಲ್-id' ಆಗಿದೆ.
13:21 ಈಗ ಕಳಿಸಿದ ಮೆಸೇಜನ್ನು ನೀವು ನೋಡಬಹುದು. ಓದಲಿಕ್ಕಾಗಿ ನಾನು ಇದನ್ನು ಓಪನ್ ಮಾಡುತ್ತೇನೆ.
13:27 'Show Details' ಎಂಬುದರ ಮೇಲೆ ಕ್ಲಿಕ್ ಮಾಡಿ.
13:29 ಅದು 'To' ಮತ್ತು 'Cc' ಪಡೆಯುವವರನ್ನು ತೋರಿಸುತ್ತದೆ. ಆದರೆ 'Bcc' ಯವರನ್ನು ಅಲ್ಲ.
13:35 ಇದು, 'Bcc' ಯಲ್ಲಿ ಗುರುತಿಸಲಾದ ಇಮೇಲ್ ಪಡೆಯುವವರಲ್ಲಿ, ಒಬ್ಬರ ಮೇಲ್- id ಆಗಿದೆ.
13:41 ನೀವು ಈಗ ಕಳಿಸಿದ ಮೆಸೇಜನ್ನು ನೋಡಬಹುದು.
13:43 ಓದಲು, ನಾನು ಇದನ್ನು ಓಪನ್ ಮಾಡುತ್ತೇನೆ.
13:46 'Show Details' ಎಂಬುದರ ಮೇಲೆ ಕ್ಲಿಕ್ ಮಾಡಿ.
13:49 'To, Cc' ಮತ್ತು 'Bcc' ಪಡೆಯುವವರ ವಿವರಗಳನ್ನು ನೀವು ನೋಡಬಹುದು.
13:55 ನಾನು ಕಳಿಸುವವರ (sender) ‘ಜಿಮೇಲ್ ಅಕೌಂಟ್’ ಗೆ ಹಿಂದಿರುಗುತ್ತೇನೆ.
13:59 ಇಲ್ಲಿ ನೋಡಿ, 'Bcc' ಯಲ್ಲಿ ನಾವು ಇಬ್ಬರು ಇಮೇಲ್ ಪಡೆಯುವವರನ್ನು ನಮೂದಿಸಿದ್ದೇವೆ.
14:04 ಆದರೆ, ಇಲ್ಲಿ ನಾವು ಒಂದೇ ಒಂದು ‘ಇಮೇಲ್ id’ ಯನ್ನು ನೋಡಬಹುದು. ಇನ್ನೊಂದು ಕಾಣುತ್ತಿಲ್ಲ.
14:10 'Bcc' ಎಂಬ ವೈಶಿಷ್ಟ್ಯವು ಹೀಗೆ ಕೆಲಸ ಮಾಡುತ್ತದೆ.
14:13 ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿದೆ ಎಂದು ನಾನು ಆಶಿಸುತ್ತೇನೆ.
14:17 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
14:20 ಸಂಕ್ಷಿಪ್ತವಾಗಿ,
14:22 ಈ ಟ್ಯುಟೋರಿಯಲ್ ನಲ್ಲಿ, ನಾವು:
14:25 * ‘ಇಮೇಲ್’ಅನ್ನು ಪಡೆಯುವವರು, ಅರ್ಥಾತ್ 'To, Cc, Bcc'
14:30 * ‘ಇಮೇಲ್’ಗಳ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡುವುದು
14:33 * ‘ಇಮೇಲ್’ಗಳಿಗೆ ಫೈಲ್ ಗಳನ್ನು ಲಗತ್ತಿಸುವುದು
14:36 * 'Google Drive' ಮುಖಾಂತರ ಫೈಲ್ ಗಳನ್ನು ‘ಶೇರ್’ ಮಾಡುವುದು
14:39 * ‘ಇಮೇಲ್’ನಲ್ಲಿ ಫೋಟೋ ಅಥವಾ ಲಿಂಕ್ ಅನ್ನು ಸೇರಿಸುವುದು ಮತ್ತು
14:43 * 'Compose' ವಿಂಡೋದ ಆಯ್ಕೆಗಳ ಬಗ್ಗೆ ಕಲಿತಿದ್ದೇವೆ.
14:47 ಈ ಲಿಂಕ್ ನಲ್ಲಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
14:52 ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:55 ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ.
15:01 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
15:04 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
15:11 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
15:16 ಈ ಸ್ಕ್ರಿಪ್ಟ್, Spoken Tutorial Team, IIT Bombay ಅವರ ಕೊಡುಗೆಯಾಗಿದೆ.
15:21 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. .

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal