Difference between revisions of "Advanced-Cpp/C2/Constructor-And-Destructor/Kannada"
From Script | Spoken-Tutorial
(Created page with "{| border = 1 |'''Time''' |'''Narration''' |- | 00:01 | C++ ನಲ್ಲಿ Constructors and Destructors (ಕನ್ಸ್ಟ್ರಕ್ಟರ್ಸ್ ಮತ್ತು ಡಿ...") |
PoojaMoolya (Talk | contribs) |
||
Line 10: | Line 10: | ||
|- | |- | ||
| 00:09 | | 00:09 | ||
− | | ಕನ್ಸ್ಟ್ರಕ್ಟರ್ಸ್, | + | | ಕನ್ಸ್ಟ್ರಕ್ಟರ್ಸ್, ಕನ್ಸ್ಟ್ರಕ್ಟರ್ಸ್ ನ ಪ್ರಕಾರಗಳು, |
− | + | ||
− | + | ||
− | + | ||
|- | |- | ||
| 00:12 | | 00:12 | ||
− | | ಹಾಗೂ ಡಿಸ್ಟ್ರಕ್ಟರ್ಸ್ ಗಳನ್ನು ನಾವು ಕಲಿಯುವೆವು, | + | | ಹಾಗೂ ಡಿಸ್ಟ್ರಕ್ಟರ್ಸ್ ಗಳನ್ನು ನಾವು ಕಲಿಯುವೆವು, ಇದನ್ನು ನಾವು ಕೆಲವು ಉದಾಹರಣೆಗಳ ಸಹಾಯದಿಂದ ಮಾಡುವೆವು. |
− | + | ||
− | + | ||
− | + | ||
|- | |- | ||
| 00:17 | | 00:17 | ||
Line 52: | Line 46: | ||
|- | |- | ||
| 00:49 | | 00:49 | ||
− | | ಕಾಪಿ ಕನ್ಸ್ಟ್ರಕ್ಟರ್ಸ್, | + | | ಕಾಪಿ ಕನ್ಸ್ಟ್ರಕ್ಟರ್ಸ್, ಮತ್ತು ಡೀಫಾಲ್ಟ್ ಕನ್ಸ್ಟ್ರಕ್ಟರ್ಸ್ ಎಂದು ಇರುತ್ತದೆ. |
− | + | ||
− | + | ||
− | + | ||
|- | |- | ||
| 00:53 | | 00:53 | ||
Line 271: | Line 262: | ||
|- | |- | ||
| 05:09 | | 05:09 | ||
− | | Enter ಅನ್ನು ಒತ್ತಿರಿ. | + | | Enter ಅನ್ನು ಒತ್ತಿರಿ. ./def (ಡಾಟ್ ಸ್ಲ್ಯಾಷ್ def) ಎಂದು ಟೈಪ್ ಮಾಡಿರಿ. |
− | + | ||
− | + | ||
− | + | ||
|- | |- | ||
| 05:12 | | 05:12 |
Latest revision as of 12:37, 17 March 2017
Time | Narration |
00:01 | C++ ನಲ್ಲಿ Constructors and Destructors (ಕನ್ಸ್ಟ್ರಕ್ಟರ್ಸ್ ಮತ್ತು ಡಿಸ್ಟ್ರಕ್ಟರ್ಸ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, |
00:09 | ಕನ್ಸ್ಟ್ರಕ್ಟರ್ಸ್, ಕನ್ಸ್ಟ್ರಕ್ಟರ್ಸ್ ನ ಪ್ರಕಾರಗಳು, |
00:12 | ಹಾಗೂ ಡಿಸ್ಟ್ರಕ್ಟರ್ಸ್ ಗಳನ್ನು ನಾವು ಕಲಿಯುವೆವು, ಇದನ್ನು ನಾವು ಕೆಲವು ಉದಾಹರಣೆಗಳ ಸಹಾಯದಿಂದ ಮಾಡುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:20 | Ubuntu ವರ್ಷನ್ 11.10 ಎನ್ನುವ ಆಪರೇಟಿಂಗ್ ಸಿಸ್ಟಮ್, |
00:23 | g++ Compiler ವರ್ಷನ್ 4.6.1 ಗಳನ್ನು ನಾನು ಬಳಸುತ್ತಿದ್ದೇನೆ. |
00:28 | ಕನ್ಸ್ಟ್ರಕ್ಟರ್ಸ್ ಎನ್ನುವುದರ ಪರಿಚಯದೊಂದಿಗೆ ನಾವು ಆರಂಭಿಸೋಣ. |
00:31 | constructor ಎನ್ನುವುದು ಒಂದು ಮೆಂಬರ್ ಫಂಕ್ಶನ್ ಆಗಿದೆ. |
00:33 | ಇದಕ್ಕೆ ಕ್ಲಾಸ್ ನ ಹೆಸರೇ ಇರುತ್ತದೆ. |
00:37 | ಕನ್ಸ್ಟ್ರಕ್ಟರ್ಸ್ ವ್ಯಾಲ್ಯೂಗಳನ್ನು ರಿಟರ್ನ್ ಮಾಡಲು ಸಾಧ್ಯವಿಲ್ಲ. |
00:40 | ಇದು, ಒಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಿದಾಗ ತಾನಾಗಿಯೇ ಕರೆಯಲ್ಪಡುತ್ತದೆ. |
00:44 | ಕನ್ಸ್ಟ್ರಕ್ಟರ್ಸ್ ನಲ್ಲಿಯ ವಿಧಗಳು: |
00:46 | ಪ್ಯಾರಾಮೀಟರೈಸ್ಡ್ ಕನ್ಸ್ಟ್ರಕ್ಟರ್ಸ್, |
00:49 | ಕಾಪಿ ಕನ್ಸ್ಟ್ರಕ್ಟರ್ಸ್, ಮತ್ತು ಡೀಫಾಲ್ಟ್ ಕನ್ಸ್ಟ್ರಕ್ಟರ್ಸ್ ಎಂದು ಇರುತ್ತದೆ. |
00:53 | ನಾವು ಡಿಸ್ಟ್ರಕ್ಟರ್ಸ್ ನೆಡೆಗೆ ನಡೆಯೋಣ. |
00:56 | ಡಿಸ್ಟ್ರಕ್ಟರ್ಸ್, ಮೆಮೊರಿಯನ್ನು ಡೀಅಲೊಕೇಟ್ ಮಾಡಲು ಬಳಸಲ್ಪಡುತ್ತವೆ. |
00:59 | ಒಂದು ಒಬ್ಜೆಕ್ಟ್ ಅನ್ನು ನಾಶ (ಡಿಸ್ಟ್ರಾಯ್) ಮಾಡಿದಾಗ ಇವುಗಳು ಕರೆಯಲ್ಪಡುತ್ತವೆ. |
01:02 | ಡಿಸ್ಟ್ರಕ್ಟರ್ ಎನ್ನುವುದು ಆರ್ಗ್ಯುಮೆಂಟುಗಳನ್ನು ತೆಗೆದುಕೊಳ್ಳುವದಿಲ್ಲ ಮತ್ತು ರಿಟರ್ನ್ ಟೈಪ್ ಗಳನ್ನು ಹೊಂದಿಲ್ಲ. |
01:07 | ಕನ್ಸ್ಟ್ರಕ್ಟರ್ಸ್ ಮತ್ತು ಡಿಸ್ಟ್ರಕ್ಟರ್ಸ್ ನ ಒಂದು ಉದಾಹರಣೆಯನ್ನು ನಾವು ನೋಡೋಣ. |
01:11 | ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ, ಅದನ್ನು ತೆರೆಯುತ್ತೇನೆ. |
01:15 | ನಮ್ಮ ಫೈಲ್ ನೇಮ್ ‘cons ಹೈಫನ್ dest ಡಾಟ್ cpp’ ಆಗಿದೆ ಎನ್ನುವುದನ್ನು ಗಮನಿಸಿರಿ. |
01:20 | ನಾವು ಈ ಪ್ರೋಗ್ರಾಂನಲ್ಲಿ, ಕನ್ಸ್ಟ್ರಕ್ಟರ್ ಅನ್ನು ಬಳಸಿ ಎರಡು ಸಂಖ್ಯೆಗಳ ಸ೦ಕಲನವನ್ನು ಮಾಡಿ ತೋರಿಸುವೆವು. |
01:25 | ನಾನು ಕೋಡ್ ಅನ್ನು ಈಗ ವಿವರಿಸುತ್ತೇನೆ. |
01:27 | ಇದು iostream ಎನ್ನುವ ನಮ್ಮ ಹೆಡರ್ ಫೈಲ್ ಆಗಿದೆ. |
01:30 | ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ. |
01:33 | ಆಮೇಲೆ ನಾವು Addition ಎನ್ನುವ ಕ್ಲಾಸ್ ಅನ್ನು ಹೊಂದಿದ್ದೇವೆ. 'a' ಮತ್ತು 'b', ಇವುಗಳು ಇಂಟೀಜರ್ ವೇರಿಯಬಲ್ ಗಳಾಗಿವೆ. |
01:38 | ಇವುಗಳು Addition ಎನ್ನುವ ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳಾಗಿವೆ. |
01:42 | ಇಲ್ಲಿ ನಾವು ಈ public ಎನ್ನುವ ಸ್ಪೆಸಿಫೈಯರನ್ನು ಹೊಂದಿದ್ದೇವೆ. |
01:44 | ಆಮೇಲೆ Addition ಎನ್ನುವ ಕನ್ಸ್ಟ್ರಕ್ಟರ್ ಅನ್ನು ಹೊಂದಿದ್ದೇವೆ. |
01:47 | ಈ ಕನ್ಸ್ಟ್ರಕ್ಟರ್ನ ಹೆಸರು ಕ್ಲಾಸ್ನ ಹೆಸರೇ ಆಗಿರುತ್ತದೆ. |
01:52 | ನಾವು ಇಲ್ಲಿ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ. |
01:54 | ಈಗ ನಾವು Destructor ಎನ್ನುವುದನ್ನು ಡಿಫೈನ್ ಮಾಡಿದ್ದೇವೆ. |
01:57 | ಇದಕ್ಕಾಗಿ ನಾವು ಡಿಸ್ಟ್ರಕ್ಟರ್ ನ ಹೆಸರಿನ ಹಿಂದೆ ಟಿಲ್ಡ್ (~) ಚಿಹ್ನೆಯನ್ನು ಬಳಸುತ್ತೇವೆ. |
02:02 | ಇದು add ಎನ್ನುವ ಪಬ್ಲಿಕ್ ಫಂಕ್ಶನ್ ಆಗಿದೆ. |
02:05 | ಇದು ’a’ ಮತ್ತು ‘b’ ಗಳ ಮೊತ್ತವನ್ನು ರಿಟರ್ನ್ ಮಾಡುತ್ತದೆ. |
02:08 | ಇಲ್ಲಿ ನಾವು ‘ಸ್ಕೋಪ್ ರೆಸಲ್ಯೂಶನ್ ಆಪರೇಟರ’ ಎನ್ನುವುದನ್ನು ಬಳಸಿ ಕನ್ಸ್ಟ್ರಕ್ಟರನ್ನು ಆಕ್ಸೆಸ್ ಮಾಡುತ್ತೇವೆ. |
02:12 | a ಮತ್ತು b ಗಳು ಪ್ರೈವೇಟ್ ಮೆಂಬರ್ ಗಳಾಗಿವೆ. |
02:15 | ಪ್ರೈವೇಟ್ ಮೆಂಬರ್ ಗಳನ್ನು ಆಕ್ಸೆಸ್ ಮಾಡಲು ನಾವು x ಮತ್ತು y ಗಳನ್ನು ಬಳಸುತ್ತೇವೆ. |
02:19 | ಆಮೇಲೆ ನಾವು ಡಿಸ್ಟ್ರಕ್ಟರನ್ನು ಆಕ್ಸೆಸ್ ಮಾಡುತ್ತೇವೆ. |
02:21 | ಇದರಲ್ಲಿ ನಾವು Memory Deallocation ಎಂದು ಪ್ರಿಂಟ್ ಮಾಡುತ್ತೇವೆ. |
02:25 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:28 | ಇಲ್ಲಿ ನಾವು Addition ಎನ್ನುವ ಕ್ಲಾಸ್ ನಲ್ಲಿ obj ಎನ್ನುವ ಒಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುತ್ತೇವೆ. |
02:32 | ಆಮೇಲೆ ನಾವು 3 ಮತ್ತು 4, ಈ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡುತ್ತೇವೆ. |
02:36 | 3 ಅನ್ನು 'x' ನಲ್ಲಿ ಹಾಗೂ 4 ಅನ್ನು 'y' ನಲ್ಲಿ ಸ್ಟೋರ್ ಮಾಡಲಾಗುವದು. |
02:40 | ’a’ ದ ವ್ಯಾಲ್ಯೂ, 3 ಮತ್ತು 'b' ದ ವ್ಯಾಲ್ಯೂ, 4 ಆಗಿದೆ ಎಂದು ಇದರ ಅರ್ಥ. |
02:45 | ಆರ್ಗ್ಯುಮೆಂಟುಗಳನ್ನು ಹೊಂದಿದ ಕನ್ಸ್ಟ್ರಕ್ಟರನ್ನು ಪ್ಯಾರಾಮೀಟರೈಸ್ಡ್ ಕನ್ಸ್ಟ್ರಕ್ಟರ್ ಎಂದು ಕರೆಯಲಾಗುತ್ತದೆ. |
02:50 | ಆದ್ದರಿಂದ ಇದೊಂದು prameterized constructor ಆಗಿದೆ. |
02:53 | ಇಲ್ಲಿ obj ಎನ್ನುವ ಒಬ್ಜೆಕ್ಟ್ಅನ್ನು ಬಳಸಿ, ನಾವು add ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
02:58 | ಮತ್ತು ನಾವು ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. |
03:00 | ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:02 | ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ. |
03:05 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ. |
03:12 | ಕಂಪೈಲ್ ಮಾಡಲು, g++ ಸ್ಪೇಸ್ cons ಹೈಫನ್ dest ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ cons ಎಂದು ಟೈಪ್ ಮಾಡಿರಿ. |
03:21 | Enter ಅನ್ನು ಒತ್ತಿರಿ. |
03:23 | ./cons (ಡಾಟ್ ಸ್ಲ್ಯಾಷ್ cons) ಎಂದು ಟೈಪ್ ಮಾಡಿರಿ. |
03:25 | Enter ಅನ್ನು ಒತ್ತಿರಿ. |
03:27 | ಔಟ್ಪುಟ್ ಹೀಗೆ, |
03:29 | Sum is 7 ಮತ್ತು Memory Deallocation ಎಂದು ತೋರಿಸಲ್ಪಡುತ್ತದೆ. |
03:33 | ಈಗ Default constructors ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ. |
03:37 | ನಮ್ಮ ಪ್ರೋಗ್ರಾಂಗೆ ಹಿಂದಿರುಗಿರಿ. |
03:39 | ನಾನು ಕೋಡನ್ನು ಈಗಾಗಲೇ ಟೈಪ್ ಮಾಡಿದ್ದೇನೆ. |
03:41 | ನಮ್ಮ ಫೈಲ್ ನ ಹೆಸರು default dot cpp ಆಗಿದೆ ಎನ್ನುವುದನ್ನು ಗಮನಿಸಿರಿ. |
03:45 | ಒಂದು ವೇಳೆ ಕನ್ಸ್ಟ್ರಕ್ಟರನ್ನು ಕ್ಲಾಸ್ ನಲ್ಲಿ ಡಿಕ್ಲೇರ್ ಮಾಡಿರದಿದ್ದರೆ, |
03:48 | ಆಗ ಕಂಪೈಲರ್, ಕ್ಲಾಸ್ ಗಾಗಿ ಒಂದು ಡೀಫಾಲ್ಟ್ ಕನ್ಸ್ಟ್ರಕ್ಟರನ್ನು ಊಹಿಸುತ್ತದೆ. |
03:53 | ನಾನು ಕೋಡ್ ಅನ್ನು ವಿವರಿಸುತ್ತೇನೆ. |
03:55 | ಇದು ನಮ್ಮ iostream ಎನ್ನುವ ಹೆಡರ್ ಫೈಲ್ ಆಗಿದೆ. |
03:58 | ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ. |
04:02 | ಆಮೇಲೆ, ನಾವು Subtraction ಎನ್ನುವ ಕ್ಲಾಸ್ ಅನ್ನು ಹೊಂದಿದ್ದೇವೆ. |
04:04 | ಆಮೇಲೆ, ನಾವು ಪಬ್ಲಿಕ್ ಎಂದು ಡಿಕ್ಲೇರ್ ಮಾಡಲಾದ 'a' ಮತ್ತು 'b' ಇವುಗಳನ್ನು ಹೊಂದಿದ್ದೇವೆ. |
04:08 | ಇಲ್ಲಿ sub ಎನ್ನುವ ಫಂಕ್ಶನ್ ಇರುತ್ತದೆ. |
04:10 | int a ಮತ್ತು int b ಎನ್ನುವ ಎರಡು ಆರ್ಗ್ಯುಮೆಂಟುಗಳನ್ನು ನಾವು ಪಾಸ್ ಮಾಡಿದ್ದೇವೆ. |
04:15 | ಇದು 'a' ಮತ್ತು 'b' ಗಳ ವ್ಯತ್ಯಾಸವನ್ನು ರಿಟರ್ನ್ ಮಾಡುತ್ತದೆ. |
04:19 | ಇದು ಡೀಫಾಲ್ಟ್ ಕನ್ಸ್ಟ್ರಕ್ಟರ್ ಆಗಿದೆ. |
04:22 | ಇಲ್ಲಿ, ನಾವು 'ಸ್ಕೋಪ್ ರೆಸಲ್ಯೂಶನ್ ಆಪರೇಟರ'ನ್ನು ಬಳಸಿ ಡೀಫಾಲ್ಟ್ ಕನ್ಸ್ಟ್ರಕ್ಟರನ್ನು ಆಕ್ಸೆಸ್ ಮಾಡುತ್ತೇವೆ. |
04:27 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
04:29 | ಇದರಲ್ಲಿ ನಾವು 'x' ಎನ್ನುವ ಒಂದು ವೇರಿಯಬಲ್ ಅನ್ನು ಡಿಫೈನ್ ಮಾಡಿದ್ದೇವೆ. |
04:34 | ಇಲ್ಲಿ, subtraction ಎನ್ನುವ ಕ್ಲಾಸ್ ನ, 's' ಎನ್ನುವ ಒಂದು ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
04:39 | ಆಮೇಲೆ, s ಎನ್ನುವ ಒಬ್ಜೆಕ್ಟ್ ಅನ್ನು ಬಳಸಿ, ನಾವು sub ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
04:42 | ಮತ್ತು 8 ಹಾಗೂ 4, ಈ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡುತ್ತೇವೆ. |
04:47 | ಆಗ ಇದರ ಫಲಿತಾಂಶವು 'x' ಎನ್ನುವ ವೇರಿಯಬಲ್ ನಲ್ಲಿ ಸ್ಟೋರ್ ಆಗುತ್ತದೆ. |
04:51 | ಮತ್ತು ನಾವು ವ್ಯತ್ಯಾಸವನ್ನು ಇಲ್ಲಿ ಪ್ರಿಂಟ್ ಮಾಡುತ್ತೇವೆ. |
04:54 | ಇದು ನಮ್ಮ ರಿಟರ್ನ್ ಸ್ಟೇಟಮೆಂಟ್ ಆಗಿದೆ. |
04:56 | ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ. |
04:58 | ನಮ್ಮ ಟರ್ಮಿನಲ್ ಗೆ ಹಿಂದಿರುಗಿರಿ. |
05:01 | ನಾವು ಕಂಪೈಲ್ ಮಾಡೋಣ. g++ ಸ್ಪೇಸ್ default ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ def ಎಂದು ಟೈಪ್ ಮಾಡಿರಿ. |
05:09 | Enter ಅನ್ನು ಒತ್ತಿರಿ. ./def (ಡಾಟ್ ಸ್ಲ್ಯಾಷ್ def) ಎಂದು ಟೈಪ್ ಮಾಡಿರಿ. |
05:12 | Enter ಅನ್ನು ಒತ್ತಿರಿ. |
05:14 | ಔಟ್ಪುಟ್, |
05:16 | Difference is 4 ಎಂದು ರಿಟರ್ನ್ ಆಗುತ್ತದೆ. |
05:18 | ನಮ್ಮ ಪ್ರೊಗ್ರಾಂಗೆ ಹಿಂದಿರುಗಿರಿ. |
05:20 | ಇಲ್ಲಿ ನಾವು ಫಂಕ್ಶನ್ ನ ವ್ಯಾಪ್ತಿಯೊಳಗೆ ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ ಎನ್ನುವುದನ್ನು ನೀವು ನೋಡಬಹುದು. |
05:25 | ಮತ್ತು ನಮ್ಮ ಹಿಂದಿನ ಉದಾಹರಣೆಯಲ್ಲಿ, ನಾವು ಒಬ್ಜೆಕ್ಟ್ ನ ವ್ಯಾಪ್ತಿಯೊಳಗೆ ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ. |
05:30 | ಮತ್ತು ಇಲ್ಲಿ ಒಬ್ಜೆಕ್ಟ್ ಅನ್ನು ಬಳಸಿಕೊಂಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ. |
05:34 | ನಾವು ಈಗ ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
05:38 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, |
05:41 | ಕನ್ಸ್ಟ್ರಕ್ಟರ್ಸ್, ಉದಾ. Addition |
05:43 | ಪ್ಯಾರಾಮೀಟರೈಸ್ಡ್ ಕನ್ಸ್ಟ್ರಕ್ಟರ್, ಉದಾ. Addition obj(3, 4); |
05:48 | ಡಿಸ್ಟ್ರಕ್ಟರ್ಸ್, ಉದಾ. ~Addition |
05:52 | ಡೀಫಾಲ್ಟ್ ಕನ್ಸ್ಟ್ರಕ್ಟರ್, ಉದಾ. Subtraction, ಇವುಗಳನ್ನು ಕಲಿತಿದ್ದೇವೆ. |
05:55 | ಒಂದು ಅಸೈನ್ಮೆಂಟ್ ಎಂದು, Division ಎನ್ನುವ ಕ್ಲಾಸ್ ಅನ್ನು ಕ್ರಿಯೇಟ್ ಮಾಡಿರಿ. |
05:59 | ಈ ಕ್ಲಾಸ್ ಗಾಗಿ ಒಂದು ಕನ್ಸ್ಟ್ರಕ್ಟರನ್ನು ಕ್ರಿಯೇಟ್ ಮಾಡಿರಿ. |
06:01 | ಕೊಟ್ಟಿರುವ ಎರಡು ಸಂಖ್ಯೆಗಳನ್ನು ಭಾಗಿಸುವ divide ಎನ್ನುವ ಫಂಕ್ಶನ್ ಒಂದನ್ನು ಕ್ರಿಯೇಟ್ ಮಾಡಿರಿ. |
06:06 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
06:09 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
06:11 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
06:16 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
06:21 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:25 | ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ. |
06:27 | contact [at] spoken ಹೈಫನ್ tutorial ಡಾಟ್ org contact@spoken-tutorial.org |
06:31 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
06:36 | ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
06:42 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
06:47 | ಇದರ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |