Difference between revisions of "KTouch/S1/Getting-Started-with-Ktouch/Kannada"

From Script | Spoken-Tutorial
Jump to: navigation, search
(Created page with '{| border=1 !Time !Narration |- |00.00 |ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮ…')
(No difference)

Revision as of 11:28, 29 January 2014

Time Narration
00.00 ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.04 ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ.
00.10 ನೀವು ಇಲ್ಲಿ,
00.11 ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು.
00.18 ನೀವು,
00.20 ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು.
00.24 ಕೆಟಚ್ ಎಂದರೇನು?
00.27 ಕೆಟಚ್ ಎನ್ನುವುದೊಂದು ಟೈಪಿಂಗ್ ಬೊಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ.
00.33 ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು.
00.36 ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು.
00.43 ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ.
00.50 ಇಲ್ಲಿ ನಾವು ಉಬಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ.
00.59 ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು.
01.03 ಉಬಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ.
01.11 ಈಗ ಕೆಟಚ್ ಒಪನ್ ಮಾಡೋಣ.
01.13 ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ.
01.21 ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ.
01.24 ಅಲ್ಲಿ KTouch ಎಂದು ಟೈಪ್ ಮಾಡಿ.
01.28 ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ.
01.34 ಕೆಟಚ್ ನ ವಿಂಡೋಸ್ ಕಾಣುತ್ತದೆ.
01.36 ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು.
01.41 ಟರ್ಮಿನಲ್ಲನ್ನು ಒಪನ್ ಮಾಡಲು CTRL, ALT ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ.
01.47 ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ.
01.55 ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ.
01.59 ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ.
02.06 ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ.
02.11 ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ.
02.14 ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ.
02.19 Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ.
02.27 Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ.
02.32 Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ.
02.39 New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.
02.47 Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ.
02.51 Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ.
02.58 ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ.
03.02 ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು backspace ಇವೆ.
03.09 ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ.
03.13 ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ.
03.20 ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ.
03.28 ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ.
03.33 ದೊಡ್ಡ ಅಕ್ಷರಗಳಿಗಾಗಿ caps lock ಕೀಯನ್ನು ಒತ್ತಿ.
03.37 ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು shift ಕೀಗಳು ಇವೆ.
03.45 ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು shift ನ ಜೊತೆಗೆ ಒತ್ತಿ.
03.52 ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ.
03.59 ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.

ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ.

04.11 ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ.
04.20 ಈಗ ನಾವು KTouch ನ ಕೀಬೋರ್ಡ್, laptop ಕೀಬೋರ್ಡ್ ಹಾಗೂ desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ.
04.29 ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ desktops ಹಾಗೂ laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು.
04.36 ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ.
04.41 ಈ ಸ್ಲೈಡನ್ನು ನೋಡಿ.
04.42 ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ.
04.46 ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ -

ಕಿರುಬೆರಳು (Little finger),

04.51 ಅನಾಮಿಕ ಬೆರಳು (Ring finger),

ಮಧ್ಯದ ಬೆರಳು (Middle finger),

04.54 ತೋರ್ಬೆರಳು (Index finger) ಹಾಗೂ

ಹೆಬ್ಬೆರಳು

04.59 ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ.
05.03 ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05.07 ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ,
05.10 ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ,
05.13 ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು.
05.17 ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ.
05.20 ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05.25 ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ,
05.28 ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ,
05.30 ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು.
05.34 ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ.
05.37 ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ.
05.44 ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ.
05.51 ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ.
05.57 ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು.
06.02 ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ.
06.07 ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ.
06.12 Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.
06.17 ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -

Root->usr->share->kde4->apps->Ktouch

06.31 english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ.
06.36 ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ.
06.41 ಈಗ ಟೈಪಿಂಗ್ ಅನ್ನು ಆರಂಭಿಸೋಣ.
06.43 ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ.
06.49 ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ.
06.55 cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ.
06.58 ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.


07.09 ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ.
07.14 ಈಗ ವೇಗಸ್ಥಾನವನ್ನು ಗಮನಿಸಿ.
07.16 ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ.
07.22 ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ.
07.25 ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ.
07.31 Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು.
07.34 ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು.
07.40 ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ.
07.56 ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ.
08.02 ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ.
08.07 Student’s line ಎನ್ನುವುದು ಖಾಲಿಯಾಗಿದೆ.
08.11 ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ.
08.14 Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ.
08.23 ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ.
08.26 ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ.
08.31 ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು.
08.37 ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ.
08.40 Start New Session ಎಂಬಲ್ಲಿ ಕ್ಲಿಕ್ ಮಾಡಿ.
08.42 Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ.
08.50 ನೀವೇನು ನೋಡುತ್ತಿರುವಿರಿ?


08.52 ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ.
08.55 Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ.
09.00 ಈಗ ಟೈಪಿಂಗ್ ಆರಂಭಿಸೋಣ.
09.05 ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು.
09.09 ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ?
09.12 pause session ಎಂಬಲ್ಲಿ ಕ್ಲಿಕ್ ಮಾಡಿ.
09.14 ಈಗ ನೋಡಿ, ವೇಗವು ಕಡಿಮೆಯಾಗಿಲ್ಲ.
09.17 ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ.
09.23 ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ.
09.39 ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ.
09.46 ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ.
09.50 ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು.
09.59 Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ.
10.04 ಇಲ್ಲಿ ನಿಮಗೊಂದು ಕೆಲಸವಿದೆ.
10.06 ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ.
10.13 ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ.
10.18 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
10.24 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10.28 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10.37 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10.43 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
10.47 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10.55 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
11.06 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Gaurav, Pratik kamble, Vasudeva ahitanal