Difference between revisions of "PHP-and-MySQL/C4/User-Registration-Part-4/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 237: | Line 237: | ||
|- | |- | ||
|09:26 | |09:26 | ||
− | |ಈಗ ನನ್ನ ಡಾಟಾಬೇಸ್ ಅನ್ನು ಪರಿಶೀಲಿಸುವೆನು. ಅದಕ್ಕಾಗಿ '''Browse | + | |ಈಗ ನನ್ನ ಡಾಟಾಬೇಸ್ ಅನ್ನು ಪರಿಶೀಲಿಸುವೆನು. ಅದಕ್ಕಾಗಿ '''Browse''' ಅನ್ನು ಕ್ಲಿಕ್ ಮಾಡಿ. ಇಲ್ಲಿ ನಾವು "Alex Garret" ಎಂದೂ, "id" ಯನ್ನು 3 ಎಂದೂ, ನನ್ನ "username" ಅನ್ನು "alex" ಎಂದೂ ಪಡೆದಿದ್ದೇವೆ. |
|- | |- | ||
|09:36 | |09:36 |
Revision as of 12:57, 24 June 2020
Time | Narration |
---|---|
00:00 | User Registration ಟ್ಯುಟೋರಿಯಲ್ ನ ನಾಲ್ಕನೇ ಭಾಗಕ್ಕೆ ಸ್ವಾಗತ. |
00:03 | ನಾವು ಈ ಕ್ರಿಯೆಗಳನ್ನು ಇದರಲ್ಲಿ ಕೂಲಂಕಷವಾಗಿ ನೋಡುವೆವು. |
00:06 | ನಮ್ಮ "username" ಮತ್ತು "password" ಗಳಿಗಾಗಿ ಸೆಕ್ಯುರಿಟಿ ಚೆಕ್ ಗಳನ್ನು ಬಳಸುವೆವು. |
00:11 | ನಿಮಗೆ ಗೊಂದಲವಾಗುತ್ತಿದ್ದರೆ, ನನಗೆ ತಿಳಿಸಿ. ಇ-ಮೇಲ್ ಅನ್ನು ಕಳುಹಿಸಿ ಅಥವಾ "youtube" ನಲ್ಲಿ ಕಮೆಂಟ್ ಮಾಡಿ. |
00:19 | ಈಗ "registering our user" ಪ್ರಕ್ರಿಯೆಯನ್ನು ನೋಡೋಣ. |
00:22 | ಮೊದಲಿಗೆ ನಾವು ನಮ್ಮ ಡಾಟಾಬೇಸ್ ಅನ್ನು ಸಂಪರ್ಕಿಸಬೇಕು. |
00:25 | ನಮ್ಮ table ಅನ್ನು ತೆರೆದು, ವ್ಯಾಲ್ಯುಗಳನ್ನು ಸೇರಿಸಬಹುದು. |
00:29 | ಇದು ತುಂಬ ಸರಳವಾಗಿದೆ. |
00:33 | ಮೊದಲಿಗೆ ನಾನು "Success" ಎಂಬ ಮೆಸೇಜ್ ಅನ್ನು ಬರೆಯುವೆನು. |
00:38 | ನಮ್ಮ ಪೇಜ್ ಗೆ ಹಿಂದಿರುಗೋಣ. ಇದಕ್ಕೆ ಹೋಗಿ, ಮೊದಲಿಗೆ ನಾನು ರಚಿಸಿದ ಎಲ್ಲ ಚೆಕ್ ಗಳನ್ನು ಪರೀಕ್ಷಿಸುವೆನು. |
00:47 | "Register" ಅನ್ನು ಕ್ಲಿಕ್ ಮಾಡಿ. ಇದು "Please fill in all the fields!" ಎಂದು ತೋರಿಸುವುದು. |
00:54 | ನಾನು ಒಂದನ್ನು ಬಿಟ್ಟು ಉಳಿದ ಎಲ್ಲ ಫೀಲ್ಡ್ ಗಳನ್ನು ಭರ್ತಿ ಮಾಡಿ, Register ಅನ್ನು ಕ್ಲಿಕ್ ಮಾಡಿದರೆ, ಇದು ಅದೇ ಮೆಸೇಜ್ ಅನ್ನು ತೋರಿಸುವುದು. |
01:03 | ಈಗ "alex" ಎಂದು ಟೈಪ್ ಮಾಡುವೆನು ಮತ್ತು username ಅನ್ನು ಆಯ್ಕೆ ಮಾಡುವೆನು. |
01:09 | "full name" ಅನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು "abc" ಎಂದು ಟೈಪ್ ಮಾಡುವೆನು. |
01:15 | ಮುಂದಿನದ್ದನ್ನು ಯಾವ್ಯಾವುದೋ ಅಕ್ಷರಗಳನ್ನು ಟೈಪ್ ಮಾಡುವೆನು. |
01:19 | ಹಾಗಾಗಿ ಈಗ Register ಅನ್ನು ಕ್ಲಿಕ್ ಮಾಡಿದರೆ, ಅದು "Your passwords do not match" ಎಂದು ತೋರಿಸುತ್ತದೆ. |
01:25 | ಮತ್ತೆ ಅಲ್ಲಿಗೆ ಹಿಂದಿರುಗೋಣ. |
01:28 | ಇಲ್ಲಿ "Alex Garrett" ಎಂದು ಟೈಪ್ ಮಾಡುವೆನು. |
01:32 | "username" ಅನ್ನು ಆಯ್ಕೆ ಮಾಡಿಕೊಳ್ಳೋಣ. ಪಾಸ್ವರ್ಡ್ ಅನ್ನು "abc" ಎಂದು ಟೈಪ್ ಮಾಡುವೆನು. |
01:39 | ಇದು 6 ಅಕ್ಷರಗಳಿಗಿಂತ ಕಡಿಮೆ ಇರುವುದರಿಂದ, ನಾನು "Register" ಅನ್ನು ಕ್ಲಿಕ್ ಮಾಡಿದಾಗ- "Passwords must be between 6 and 25 characters" ಎಂದು ಹೇಳುತ್ತದೆ. ಇದು ಕೂಡ ಕಾರ್ಯನಿರ್ವಹಿಸುತ್ತಿದೆ. |
01:52 | ಈಗ ನನ್ನ "fullname" ಅನ್ನು "xxxx …….Alex Garrett …ttt" ಎಂದೂ, 'username' ಅನ್ನು "alex" ಎಂದೂ ಟೈಪ್ ಮಾಡುವೆನು. |
02:00 | ಪಾಸ್ವರ್ಡ್ ನಿರ್ದಿಷ್ಟ ಅಳತೆಯದ್ದಾಗಿರಲಿ. |
02:05 | ಅಂದರೆ 6 ಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಿರಲಿ. "Register" ಅನ್ನು ಕ್ಲಿಕ್ ಮಾಡುವೆನು. - "Length of the username or fullname is too long!" ಎಂಬ ಮೆಸೇಜ್ ಅನ್ನು ನೋಡಬಹುದು. |
02:15 | ನೀವು ಈ ಪರಿಶೀಲನೆಗಳನ್ನು ನಿಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು. ಅದನ್ನು ನಿಮಗೆ ಬಿಡುವೆನು. |
02:20 | ಹಾಗಾಗಿ ಈಗ ನಮ್ಮ ಫಾರ್ಮ್ ವ್ಯಾಲಿಡೇಷನ್ ಅನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. |
02:26 | ಈಗ ಬಳಕೆದಾರರನ್ನು ರೆಜಿಸ್ಟರ್ ಮಾಡುವುದನ್ನು ಮುಂದುವರಿಸೋಣ. |
02:31 | ಈಗ ನಮ್ಮ ಈ form validation ಸರಿಯಾಗಿಲ್ಲ. ಪ್ರತಿ ಬಾರಿ ಎರರ್ ಬಂದಾಗ, ಈ ಫೀಲ್ಡ್ ನ ಎಲ್ಲಾ ವ್ಯಾಲ್ಯುಗಳು ಅಳಿಸಿಹೋಗುತ್ತವೆ. |
02:40 | ಮತ್ತು ಪ್ರತಿ ಬಾರಿ ಬಳಕೆದಾರ ಪುನಃ ಟೈಪ್ ಮಾಡಬೇಕು. |
02:43 | ಈಗ fullname, username ಮತ್ತು password ವೇರಿಯೇಬಲ್ ಗಳನ್ನು ಹೊಂದಿದ್ದೇವೆ. |
02:50 | ಈ ಪಿ.ಎಚ್.ಪಿ. ಪೇಜ್ ನಲ್ಲಿಯ ಈ ಪಿ.ಎಚ್.ಪಿ ಯನ್ನು ಇಲ್ಲಿ ಈ html code ನಲ್ಲಿ ಸೇರಿಸೋಣ. |
02:57 | fullname ನಲ್ಲಿ, value, ಬಾಕ್ಸ್ ನಲ್ಲಿರುವ ವ್ಯಾಲ್ಯುವಿಗೆ ಸಮವಾಗಿರಬೇಕು. ಅದಕ್ಕಾಗಿ ಇಲ್ಲಿ php tag ತೆರೆದು, |
03:06 | ಇದೊರಳಗೆ php tag ಅನ್ನು ಮುಚ್ಚುವೆನು. ಇಲ್ಲಿ ನಾನು 'username' ಅಲ್ಲ.. ಕ್ಷಮಿಸಿ '$fullname' ಅನ್ನು ಎಕೊ ಮಾಡುವೆನು. |
03:12 | ನಮ್ಮ 'username' ಗೂ ಇದೇ ರೀತಿಯಾಗಿ ಮಾಡುವೆನು. |
03:16 | ಅದಕ್ಕಾಗಿ, value equals open php tags, close php tags and echo 'username' ಎಂದು ಟೈಪ್ ಮಾಡುವೆನು. |
03:23 | ಲೈನ್ ಟರ್ಮಿನೇಟರ್ ಅನ್ನು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ. |
03:27 | ಈಗ ಏನಾಗುವುದೆಂದು ನೋಡೋಣ, ಇಲ್ಲಿ ಉದ್ದೇಶಪೂರ್ವಕವಾಗಿಯೇ ಉದ್ದದ ಹೆಸರನ್ನು ಟೈಪ್ ಮಾಡಿ, username ಇದು "alex" ಆಗಿರಲಿ. |
03:36 | ನಮಗೆ ಪಾಸ್ವರ್ಡ್ ಗಳು ಸ್ಟೋರ್ ಆಗುವುದು ಬೇಡ. ಹಾಗಾಗಿ ಅದನ್ನು ಬಳಕೆದಾರರಿಗೆ ಟೈಪ್ ಮಾಡಲು ಬಿಡೋಣ. |
03:43 | ನಾನು ಉದ್ದನೆಯ ಫುಲ್-ನೇಮ್ ಅನ್ನು ಹೊಂದಿದ್ದೇನೆ. ಹಾಗಾಗಿ ಇದು ಮತ್ತೆ ಎರರ್ ಅನ್ನು ಕೊಡಬೇಕು. |
03:49 | ನಾನು Register ಅನ್ನು ಕ್ಲಿಕ್ ಮಾಡಿದಾಗ, ಈ ಬಾರಿ ನಮ್ಮ fullname ಮತ್ತು username ಗಳು ಹಾಗೇ ಇವೆ. |
03.54 | ಇದು ನಿಯಮವಾಗಿದೆ. ನೀವು ಎರರ್ ಅನ್ನು ಪಡೆದರೆ, ನಿಮ್ಮ ಯೂಸರ್ ನೇಮ್, ಫುಲ್ ನೇಮ್, ಪಾಸ್ವರ್ಡ್ , ಫಸ್ಟ್ ನೇಮ್, ಮಿಡಲ್ ನೇಮ್, ಸರ್ನೇಮ್.. ಹೀಗೆ.. ನಿಮ್ಮ ಫಾರ್ಮ್ ಎಷ್ಟು ಫೀಲ್ಡ್ ಗಳನ್ನು ಹೊಂದಿದೆಯೋ ಎಲ್ಲವನ್ನೂ ಪುನಃ ಟೈಪ್ ಮಾಡಬೇಕಾಗುತ್ತದೆ. |
04:10 | ಹೆಸರನ್ನು ಮತ್ತೆ ಮತ್ತೆ ಟೈಪ್ ಮಾಡುವುದು ಬೇಸರತರಿಸುತ್ತದೆ. |
04:13 | ಹಾಗಾಗಿ ಇದನ್ನು ಬಳಸಿ, ಅಂದರೆ ಪಿ.ಎಚ್.ಪಿ. ಟ್ಯಾಗ್ ನೊಳಗೆ, ಪಿ.ಎಚ್.ಪಿ ಎಕೋ ಕಮಾಂಡ್ ಅನ್ನು html input type ನ ವ್ಯಾಲ್ಯುವಿನೊಳಗೆ ಬಳಸುವುದು ತುಂಬ ಉಪಯುಕ್ತವಾಗಿದೆ. ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ಬಳಸಲು ಸರಳವಾಗಿರುತ್ತದೆ. |
04:28 | ಇಲ್ಲವಾದರೆ, echo "Success!!" ಎನ್ನೋಣ. ನಾನು ಯಶಸ್ವಿಯಾದಾಗ ತೋರಿಸಬೇಕಾದ ಫಾರ್ಮ್ ಅನ್ನು ಇನ್ನೂ ತೋರಿಸಿಲ್ಲ. |
04:34 | ಈಗ ಇಲ್ಲಿ "Alex Garret" ಎಂದು ಟೈಪ್ ಮಾಡುವೆನು ಮತ್ತು ಪಾಸ್ವರ್ಡ್ ಅನ್ನು 6 ಅಕ್ಷರಗಳಿಂದ 25 ಅಕ್ಷರಗಳ ಮಿತಿಯಲ್ಲಿಯೇ ಟೈಪ್ ಮಾಡುವೆನು. |
04:43 | "Register" ಅನ್ನು ಕ್ಲಿಕ್ ಮಾಡಿ. ಓಹ್! ಎರರ್ ಮೆಸೇಜ್ ಬಂದಿದೆ. ಏನೆಂದು ನೋಡೋಣ. |
04:49 | ಮತ್ತೆ ಎರರ್ ಬಂದಿದೆ.... - "if the string length of the password is greater than 25 |
04:55 | ...or the string length of the password is lesser than 6".... echo password – ಸರಿಯಾಗಿದೆ .... ಆದರೂ ನಮಗೆ ಅದೇ ಎರರ್ ಬರುತ್ತಿದೆ. |
05:04 | ಈಗ ನನಗೆ ಅರ್ಥವಾಯಿತು - ನಾನು ನನ್ನ ಪಾಸ್ವರ್ಡ್ ನ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಬಳಸಿದ್ದೇನೆ ಮತ್ತು md5 ಎನ್ಕ್ರಿಪ್ಟ್ ಆದ ಸ್ಟ್ರಿಂಗ್ ದೊಡ್ಡದಾಗಿರುತ್ತದೆ. ಇದು 25 ಅಕ್ಷರಗಳಿಗಿಂತ ಹೆಚ್ಚು ಉದ್ದವಾಗಿರುತ್ತದೆ. |
05:18 | ಅದಕ್ಕಾಗಿ ನಾನು ಮತ್ತೆ ಈ ಕೋಡ್ ಬ್ಲಾಕ್ ಅನ್ನು, ಅಂದರೆ ಎನ್ಕ್ರಿಪ್ಟ್ ಮಾಡುವ ಭಾಗವನ್ನು ಕಟ್ ಮಾಡಿ, "register the user" ನ ಕೆಳಗೆ ಇಡುತ್ತೇನೆ. |
05:30 | ಈ ರೀತಿಯ ವಿಷಯಗಳ ಕ್ರಮಾಂಕ ಅತ್ಯಂತ ಮುಖ್ಯವಾಗಿರುತ್ತದೆ. ನೀವು ಈ ರೀತಿಯಾದ ಎರರ್ ಗಳನ್ನು ಪಡೆದರೆ, ನಿಮ್ಮ ಕೋಡ್ ಅನ್ನು ಸಂಪೂರ್ಣವಾಗಿ ನೋಡಿ, ನೀವು ಏನು ಮಾಡುತ್ತಿರುವಿರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. |
05:42 | ಡಿಬಗ್ ಪ್ರಕ್ರಿಯೆಯ ಭಾಗವಾಗಿ ಕೋಡ್ ಗಳ ಮಧ್ಯೆ echo ಸ್ಟೇಟ್ಮೆಂಟ್ ಗಳನ್ನು ಬಳಸಿ. |
05:48 | ಈಗ ನನ್ನ ಫಾರ್ಮ್ ಗೆ ಹಿಂದಿರುಗಿ, ಸರಿಯಾಗಿ ಸ್ವೀಕರಿಸಬಹುದಾದ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. |
05:55 | "Register" ಅನ್ನು ಕ್ಲಿಕ್ ಮಾಡಿ, ನಾವು "Success" ಮೆಸೇಜ್ ಅನ್ನು ಪಡೆದಿದ್ದೇವೆ. |
06:02 | ನಿಮ್ಮ ಕೋಡ್ ಅನ್ನು ಗಮನವಿಟ್ಟು ನೋಡಿದರೆ, ಅದು ಯಾವುದಾದರೂ ಸಮಸ್ಯೆಯಿದೆಯೇ ಎಂದು ನೋಡಲು ಸಹಾಯ ಮಾಡುತ್ತದೆ. |
06:07 | ನಾನು ಇವುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಚುರುಕಾಗಿದ್ದೇನೆ. ಕೆಲವು ಸಲ ವಿಡಿಯೋವನ್ನು ನಿಲ್ಲಿಸಿ, ಕೋಡ್ ಅನ್ನು ನೋಡಿ, ನಂತರ ವಿಡಿಯೋ ವನ್ನು ಪುನಃ ಆರಂಭಿಸಬೇಕಾಗುತ್ತದೆ. ವೀಕ್ಷಕರನ್ನು ಕಾಯಿಸುವುದು ನನಗೆ ಇಷ್ಟವಿಲ್ಲ. |
06:19 | ನೀವು ಬೇಗ ತಪ್ಪುಗಳನ್ನು ತಿಳಿದುಕೊಳ್ಳುವಿರಿ. ನಾವು ಈಗ "Success" ಮೆಸೇಜ್ ಅನ್ನು ಪಡೆದಿದ್ದೇವೆ. ಈಗ "open our database" ಎಂದು ಕಮೆಂಟ್ ಮಾಡೋಣ. |
06:28 | ಇದನ್ನು ಮಾಡಲು ನಮಗೆ " connect" ವೇರಿಯೇಬಲ್ ಬೇಕು. ನಾನು "sql connect()" ಎಂದು ಟೈಪ್ ಮಾಡುವೆನು. |
06:36 | ನಾನು ನನ್ನ "local host" ಸರ್ವರ್ ಅಂದರೆ ನನ್ನ ಕಂಪ್ಯೂಟರ್ ಅನ್ನೇ ಸಂಪರ್ಕಿಸುತ್ತಿದ್ದೇನೆ. ಇದು "root" ಆಗಿರಲಿ ಮತ್ತು ನನ್ನ ಪಾಸ್ವರ್ಡ್ ಇಲ್ಲ. |
06:44 | ಈಗ ನಾನು "mySQL select db()" ಎಂದು ಟೈಪ್ ಮಾಡುವೆನು. ಇದು ಡಾಟಾಬೇಸ್ ಅನ್ನು ಆಯ್ಕೆಮಾಡಿಕೊಳ್ಳುವುದು. ಅದಕ್ಕಾಗಿ ಇಲ್ಲಿ "select data base" ಎಂದು ಕಮೆಂಟ್ ಮಾಡೋಣ. |
06:55 | ಇದು ಖಂಡಿತವಾಗಿ "php login" ಆಗಿದೆ ಮತ್ತು ಇಲ್ಲಿ ಕ್ವೈರಿಯನ್ನು ಕೊಡೋಣ. |
07:03 | " "query register" equal to "mysql_query()"" ಎಂದು ಟೈಪ್ ಮಾಡಿ. |
07:10 | ಇದು ಟ್ಯುಟೋರಿಯಲ್ ನ ಬಹುಮುಖ್ಯ ಭಾಗವಾಗಿದೆ. ಇಲ್ಲಿಯೇ ನಾವು ನಮ್ಮ ವ್ಯಾಲ್ಯುಗಳನ್ನು ಇನ್ಪುಟ್ ಮಾಡುತ್ತಿದ್ದೇವೆ ಮತ್ತು ನಮ್ಮ ಯೂಸರ್ ನೇಮ್ ಅನ್ನು ದಾಖಲು ಮಾಡುತ್ತಿದ್ದೇವೆ. |
07:18 | ಈಗ ಇದನ್ನು ಸ್ವಲ್ಪ ಕೆಳಕ್ಕೆ ತರೋಣ ಮತ್ತು ಇಲ್ಲಿ "INSERT INTO users" ಎಂದು ಟೈಪ್ ಮಾಡೋಣ. |
07:24 | ಈಗ ಹಿಂದಕ್ಕೆ ಬಂದು ನೋಡಿದರೆ, ಇದು "php login" ಆಗಿದೆ ಮತ್ತು ಇದು ನಾವು ಆಯ್ಕೆ ಮಾಡಿದ ಟೇಬಲ್ ಆಗಿದೆ. ಹಾಗಾಗಿ "mySQL select db php login" ಇದು ಸರಿಯಾಗಿದೆ. |
07:38 | ನಾವು "users" ಗೆ ವ್ಯಾಲ್ಯುಗಳನ್ನು ಸೇರಿಸುತ್ತಿದ್ದೇವೆ. ಇದು ಡಾಟಾಬೇಸ್ ನಲ್ಲಿರುವ ಟೇಬಲ್ ಆಗಿದೆ. |
07:44 | ಈಗ "VALUES" ಎಂದು ಟೈಪ್ ಮಾಡಿ. ಬ್ರ್ಯಾಕೆಟ್ ನಲ್ಲಿ, ಟೇಬಲ್ ನ ಪ್ರತಿ ವ್ಯಾಲ್ಯು , ಅಂದರೆ ಟೇಬಲ್ ನಲ್ಲಿರುವ ಪ್ರತಿ ಫೀಲ್ಡ್ ಗೆ ಸ್ಥಳವನ್ನು ಸಿದ್ಧಮಾಡಿ. |
07:51 | ಈಗ ಹಿಂದಿರುಗಿ, Browse ಅಥವಾ Structure ಅನ್ನು ಕ್ಲಿಕ್ ಮಾಡಿದರೆ – ಇಲ್ಲಿ id, name, username, password, date ಗಳಿವೆ, ಅಂದರೆ ಒಟ್ಟು 1, 2, 3, 4, 5 ಫೀಲ್ಡ್ ಗಳಿವೆ. |
08:04 | ಇಲ್ಲಿಯೂ ಕೂಡ ನಮಗೆ 1, 2, 3, 4, 5 ಬೇಕು. id ಯು ಆಟೋ ಇನ್ಕ್ರಿಮೆಂಟ್ ಆಗಿದೆ. ಇದನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದ್ದೇನೆ. |
08:13 | ನಮಗೆ ಇಲ್ಲಿ ಇದು ಬೇಕು ಅಷ್ಟೆ. ಕ್ರಮಾಂಕವು ತುಂಬ ಮುಖ್ಯವಾಗಿದೆ. |
08:18 | ಇಲ್ಲಿ "name, username, password, date" ಗಳಿವೆ. ಹಾಗಾಗಿ ನಮಗೆ 'name', 'username'. |
08:24 | ಮತ್ತು ಇದು 'password' ಇವಿಷ್ಟು ಬೇಕು. "repeat password" ಬೇಡ, ಇದು ಕೇವಲ ಪರಿಶೀಲಿಸಲು ಮಾತ್ರ ಬೇಕಾಗಿತ್ತು. ಇದು 'date' ಆಗಿರುವುದು. |
08:33 | ಈ ವೇರಿಯೇಬಲ್ ಗಳು ಇಲ್ಲಿವೆ. ನಿಮಗೆ ಖಚಿತತೆಯಿಲ್ಲದಿದ್ದರೆ ಒಮ್ಮೆ ಮೇಲೆ ಅಂದರೆ ಇಲ್ಲಿ ನೋಡಿ. 'fullname', 'username', 'password' ಮತ್ತು 'date' ಎಂದಿದೆ. |
08:43 | ಹಾಗಾಗಿ ಇದನ್ನು 'fullname' ಎಂದು ಬದಲಿಸಿ. ಈಗ ಇದು ಕಾರ್ಯನಿರ್ವಹಿಸಬೇಕು. ಇವೆಲ್ಲವೂ ಆದ ಮೇಲೆ "You have been registered" ಎಂದು ಟೈಪ್ ಮಾಡುವೆನು. ಇದನ್ನು die() ಫಂಕ್ಷನ್ ನ ಒಳಗೆ ಇಡುವೆನು. |
08:56 | "You have been registered. Return to login page" ಎಂದು ಸೇರಿಸುವೆನು. |
09:02 | ಈಗ ಇದನ್ನು ಹಿಂದಕ್ಕೆ ಅಂದರೆ 'index page' ಹೋಗುವ ಹಾಗೆ ಲಿಂಕ್ ಮಾಡೋಣ. ಅಲ್ಲಿ ಬಳಕೆದಾರ ಲಾಗಿನ್ ಆಗಬಹುದು. |
09:08 | ಇದು ಒಂದು ಸೆಕೆಂಡ್ ನಲ್ಲಿ ಎಕ್ಸಿಕ್ಯೂಟ್ ಆಗುವುದನ್ನು ನೀವು ನೋಡಬಹುದು. ಇದು ನನ್ನ ಹಿಂದಿನ ಪೇಜ್ ಆಗಿದೆ. |
09:15 | ಈಗ ಇದನ್ನು "Alex Garret" ಎಂದೂ, "username" ಅನ್ನು "alex" ಎಂದೂ ಮತ್ತು ಇದನ್ನು ನನ್ನ ಪಾಸ್ವರ್ಡ್ ಆಗಿಯೂ ಆಯ್ಕೆ ಮಾಡುವೆನು. "You have been registered!". Return to login page" ಎಂಬ ಮೆಸೇಜ್ ಬರುತ್ತದೆ. |
09:26 | ಈಗ ನನ್ನ ಡಾಟಾಬೇಸ್ ಅನ್ನು ಪರಿಶೀಲಿಸುವೆನು. ಅದಕ್ಕಾಗಿ Browse ಅನ್ನು ಕ್ಲಿಕ್ ಮಾಡಿ. ಇಲ್ಲಿ ನಾವು "Alex Garret" ಎಂದೂ, "id" ಯನ್ನು 3 ಎಂದೂ, ನನ್ನ "username" ಅನ್ನು "alex" ಎಂದೂ ಪಡೆದಿದ್ದೇವೆ. |
09:36 | ನನ್ನ ಪಾಸ್ವರ್ಡ್ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಆಗಿದೆ ಮತ್ತು ನನ್ನ "date" ಇದಾಗಿದೆ. |
09:41 | ಮುಂದಿನ ಭಾಗದಲ್ಲಿ ಕೆಲವು ವಿಷಯಗಳನ್ನು ಅಚ್ಚುಕಟ್ಟಾಗಿ ಮಾಡಲು ಮತ್ತು ಲಾಗಿನ್ ಪ್ರಕ್ರಿಯೆಯನ್ನು ಪರೀಕ್ಷಿಸಲು ಕಲಿಸುತ್ತೇನೆ. |
09:49 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |