Difference between revisions of "Java/C3/Static-Variables/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 250: Line 250:
 
|-
 
|-
 
||06:56
 
||06:56
|| ಇಡೀ ಕ್ಲಾಸ್ ಗೆಗೆ ಸಾಮಾನ್ಯವಾಗಿರುವ '''constant''' ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ.
+
|| ಇಡೀ ಕ್ಲಾಸ್ ಗೆ ಸಾಮಾನ್ಯವಾಗಿರುವ '''constant''' ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ.
  
 
|-
 
|-
Line 370: Line 370:
 
||10:03
 
||10:03
 
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.
 
|-
 
|-

Latest revision as of 11:00, 9 June 2020

Time Narration
00:01 Static Variables ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು Static ವೇರಿಯೇಬಲ್ ಗಳು ಎಂದರೇನು,
00:10 Static ವೇರಿಯೇಬಲ್ ಗಳ ರಚನೆ ಮತ್ತು Static ವೇರಿಯೇಬಲ್ ಗಳನ್ನು ಬಳಸುವ ಕುರಿತು ಕಲಿಯಲಿದ್ದೇವೆ
00:17 ಈ ಟ್ಯುಟೋರಿಯಲ್ ಗಾಗಿ ನಾನು:

ಉಬಂಟು 12.04, JDK 1.7 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:35 ನೀವು ಕ್ಲಾಸ್ ಗಳು, ಆಬ್ಜೆಕ್ಟ್ ಗಳು ಮತ್ತು Instance ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು.
00:42 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್‌ ಗೆ ಭೇಟಿ ನೀಡಿ.
00:49 Static ವೇರಿಯೇಬಲ್, ಇಡೀ ಕ್ಲಾಸ್ ಗೆ ಸಂಬಂಧಿಸಿದೆ.
00:55 ಇದನ್ನು ಕ್ಲಾಸ್ ವೇರಿಯೇಬಲ್ ಎಂದು ಸಹ ಕರೆಯಲಾಗುತ್ತದೆ.
00:58 ಇದನ್ನು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
01:02 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ static ವೇರಿಯೇಬಲ್ ಕುರಿತು ನೋಡಿದ್ದೇವೆ.
01:08 ಈ ಟ್ಯುಟೋರಿಯಲ್ ನಲ್ಲಿ ನಾವು ಇದನ್ನು ವಿವರವಾಗಿ ಕಲಿಯಲಿದ್ದೇವೆ.
01:11 ನಾವೀಗ ಎಕ್ಲಿಪ್ಸ್ ಗೆ ಬದಲಾಯಿಸೋಣ ಮತ್ತು StaticVariableDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
01:18 ಈ ಪ್ರಾಜೆಕ್ಟ್ ಒಳಗೆ, Static ವೇರಿಯೇಬಲ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ.
01:26 ಇದಕ್ಕಾಗಿ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ. ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ, Enter ಒತ್ತಿ.
01:37 ನಾವೀಗ static ವೇರಿಯೇಬಲ್ ಗಳ ಬಳಕೆಯನ್ನು ಉದಾಹರಣೆಯೊಂದಿಗೆ ತೋರಿಸೋಣ.
01:42 ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು ರಚಿಸಿರುವ ಕ್ಲಾಸ್ ಒಂದನ್ನು ಪರಿಗಣಿಸಿ.
01:49 ಈ ಕ್ಲಾಸು, ದಾಖಲಾದ ವಿದ್ಯಾರ್ಥಿಗಳ name, ID, branch ಮತ್ತು total count ಅನ್ನು ಒಳಗೊಂಡಿದೆ.
01:56 ಈಗ, ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿದ ನಂತರ ಏನಾಗುತ್ತದೆ ಎಂದು ಊಹಿಸೋಣ.
02:02 ಡಿಫಾಲ್ಟ್ ಆಗಿ Total Count ಇಲ್ಲಿ 0 ಆಗಿದೆ. ಮೊದಲ ವಿದ್ಯಾರ್ಥಿಯ ಹೆಸರು ADIL ಆಗಿದೆ.
02:09 Id ಯು IT101 ಮತ್ತು Branch ಇಲ್ಲಿ IT ಆಗಿದೆ.
02:14 ಈಗ Total Count ಅನ್ನು 1 ಎಂದು ಅಪ್ಡೇಟ್ ಮಾಡಲಾಗಿದೆ.
02:18 ಇದೇ ರೀತಿ ಎರಡನೇ ವಿದ್ಯಾರ್ಥಿ AMAL ದಾಖಲಾದಾಗ, Total Count ಅನ್ನು 2 ಎಂದು, ಅಪ್ಡೇಟ್ ಮಾಡಲಾಗುತ್ತದೆ.
02:25 ಮೂರನೇ ವಿದ್ಯಾರ್ಥಿ CAROL ದಾಖಲಾದಾಗ Total Count 3 ಎಂದು ಅಪ್ಡೇಟ್ ಮಾಡಲಾಗುತ್ತದೆ.
02:32 ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುವ ವೇರಿಯೇಬಲ್ Total Count, ಒಂದೇ ವ್ಯಾಲ್ಯೂ ವನ್ನು ಹೊಂದಿದೆ ಎಂದು ನಾವೀಗ ನೋಡಬಹುದು.
02:40 ಹೀಗಾಗಿ, ವೇರಿಯೇಬಲ್ Total Count ಅನ್ನು Static ವೇರಿಯೇಬಲ್ ಎನ್ನಬಹುದು.
02:45 Name, Id, ಮತ್ತು Branch – ಈ ವೇರಿಯೇಬಲ್ ಗಳು ಪ್ರತಿ ಅಬ್ಜೆಕ್ಟ್ ಗಳಿಗೆ ತನ್ನದೇ ಆದ ನಕಲುಗಳನ್ನು ಹೊಂದಿವೆ.
02:54 ಹಾಗೂ ಅವು ಪ್ರತಿಯೊಂದು ಅಬ್ಜೆಕ್ಟ್ ಗೆ ನಿರ್ದಿಷ್ಟ ಮೌಲ್ಯಗಳನ್ನು ಹೊಂದಿವೆ ಎಂದು ನಾವು ನೋಡಬಹುದು.
02:59 ಹೀಗೆ, ಈ ವೇರಿಯೇಬಲ್ ಗಳನ್ನು Instance ವೇರಿಯೇಬಲ್ ಗಳಾಗಿ ಪರಿಗಣಿಸಬಹುದು.
03:04 ಈಗ, Student Enroll class ಅನ್ನು ಪ್ರತಿನಿಧಿಸುವ ಕೋಡ್ ಅನ್ನು ನೋಡೋಣ.
03:09 instance ವೇರಿಯೇಬಲ್ ಗಳನ್ನು id, name ಮತ್ತು branch ಗಳಾಗಿ ಡಿಕ್ಲೇರ್ ಮಾಡಲಾಗಿದೆ.
03:16 ವೇರಿಯೇಬಲ್ count ಅನ್ನು static ಆಗಿ ಡಿಕ್ಲೇರ್ ಮಾಡಲಾಗಿದೆ, ಏಕೆಂದರೆ ಇದು ಇಡೀ ಕ್ಲಾಸಿಗೆ ಒಂದೇ ಆಗಿದೆ.
03:22 ಕ್ಲಾಸ್ ಅನ್ನು ಲೋಡ್ ಮಾಡಿದಾಗ, static ವೇರಿಯೇಬಲ್, ಒಂದು ನಿಗದಿತ ಮೆಮರಿ ಸ್ಥಳವನ್ನು ವ್ಯಾಪಿಸುತ್ತದೆ.
03:28 ಆದರೆ ಪ್ರತಿ ಅಬ್ಜೆಕ್ಟ್ ನ Instance ವೇರಿಯೇಬಲ್, ಪ್ರತ್ಯೇಕ ಮೆಮರಿ ಸ್ಥಳಗಳನ್ನು ವ್ಯಾಪಿಸುತ್ತದೆ.
03:35 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿಕೊಳ್ಳಿ.
03:41 ತಯಾರಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
03:45 id, name ಮತ್ತು branch ಫೀಲ್ಡ್ ಗಳ ವ್ಯಾಲ್ಯೂಗಳನ್ನು ಈ ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಲ್ಲದು.
03:51 ಪ್ರತಿ ಸಂದರ್ಭದಲ್ಲಿ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ವೇರಿಯೇಬಲ್ count ನ ವ್ಯಾಲ್ಯೂವನ್ನು ನಾವು ಹೆಚ್ಚಿಸಬೇಕು.
03:59 ಇದಕ್ಕಾಗಿ ಕನ್ಸ್ಟ್ರಕ್ಟರ್ ನ ಒಳಗೆ ಹೀಗೆ ಟೈಪ್ ಮಾಡಿ: count ++ semicolon.
04:05 ನಾವೀಗ ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ showData( ) ಮೆಥಡ್ ಅನ್ನು ಸೇರಿಸಲಿದ್ದೇವೆ.
04:13 ಹೀಗಾಗಿ public void showData( ) ಎಂದು ಟೈಪ್ ಮಾಡಿ. ಆವರಣ ಚಿಹ್ನೆಗಳೊಳಗೆ id, name, branch ಗಳ ವ್ಯಾಲ್ಯೂಗಳು ಮತ್ತು ದಾಖಲಿಸಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
04:27 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ. New > Class ಮೇಲೆ ಕ್ಲಿಕ್ ಮಾಡಿ, ಹೆಸರನ್ನು Demo ಎಂದು ಟೈಪ್ ಮಾಡಿ.
04:36 ಈ ಕ್ಲಾಸ್ ನ ಒಳಗಡೆ main() ಮೆಥಡ್ ಇರುವುದು.
04:39 ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು main() ಮೆಥಡ್ ರಚಿಸುವುದಕ್ಕಾಗಿ ctrl+space ಒತ್ತಿ.
04:46 ನಾವೀಗ Student Enrollment data ವನ್ನು ಪ್ರಿಂಟ್ ಮಾಡಬೇಕು.
04:50 ವಿದ್ಯಾರ್ಥಿಗಳ ದಾಖಲಾತಿಯನ್ನು ಸೂಚಿಸಲು ನಾವು StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಲಿದ್ದೇವೆ.
04:57 ಇದಕ್ಕಾಗಿ ಇಲ್ಲಿ ಕೊಟ್ಟಿರುವ ಕೋಡ್ ಅನ್ನು ಟೈಪ್ ಮಾಡಿ: StudentEnroll s1 equals new StudentEnroll.
05:04 ನಾವೀಗ ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ಪಾಸ್ ಮಾಡಬಹುದು.
05:08 ಬ್ರ್ಯಾಕೆಟ್ಸ್ ಒಳಗೆ IT101 ಅನ್ನು id ಆಗಿ, ADIL ಅನ್ನು name ಆಗಿ ಮತ್ತು IT ಅನ್ನು branch ಆಗಿ ಟೈಪ್ ಮಾಡಿ.
05:17 ಈಗ ನಾವು ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData ವನ್ನು ಇನ್ವೋಕ್ ಮಾಡೋಣ.
05:22 ಇದಕ್ಕಾಗಿ s1.showData( ) ಎಂದು ಟೈಪ್ ಮಾಡಿ. ಈಗ Demo ಪ್ರೋಗ್ರಾಂ ಅನ್ನು ರನ್ ಮಾಡಿ.
05:29 ಈಗ, s1 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
05:36 ಅಲ್ಲದೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯು 1 ಆಗಿರುವುದನ್ನು ಗಮನಿಸಿ.
05:42 ಇದು ಏಕೆಂದರೆ ನಾವು ಕೇವಲ 1 ಅಬ್ಜೆಕ್ಟ್ ಮಾತ್ರ ರಚಿಸಿದ್ದೇವೆ.
05:47 ಈಗ, ಇನ್ನೊಂದು ಅಬ್ಜೆಕ್ಟ್ s2 ಅನ್ನು ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
05:52 ಇನ್ನೊಮ್ಮೆ s2 ಅನ್ನು ಬಳಸಿ showData ಮೆಥಡ್ ಅನ್ನು ಕಾಲ್ ಮಾಡಬಹುದು.
05:56 ಇನ್ನೊಮ್ಮೆ Demo ಪ್ರೋಗ್ರಾಂ ಅನ್ನು ರನ್ ಮಾಡಿ.
05:59 s2 ಗೆ ಅನುರೂಪವಾದ instance ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಗಮನಿಸಬಹುದು.
06:06 ಅಲ್ಲದೆ, s1 ಮತ್ತು s2 ಎರಡರಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂ 2ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ.
06:14 ಈಗ ಇನ್ನೊಂದು ಅಬ್ಜೆಕ್ಟ್ s3 ಅನ್ನು ರಚಿಸಿ.
06:18 ಮತ್ತೊಮ್ಮೆ s3 ಬಳಸಿ ನಾವು showData ಮೆಥಡ್ ಅನ್ನು ಇನ್ವೋಕ್ ಮಾಡೋಣ.
06:23 ಮತ್ತೊಮ್ಮೆ Demo ಪ್ರೋಗ್ರಾಂ ಅನ್ನು ರನ್ ಮಾಡಿ.
06:26 ಈಗ, s3 ಗೆ ಅನುರೂಪವಾದ instance ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
06:32 ಅಲ್ಲದೆ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂವನ್ನು ಎಲ್ಲಾ ಕ್ಲಾಸುಗಳಲ್ಲಿ 3ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ.
06:41 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯು ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುತ್ತದೆ ಎಂದು ಈಗ ನಾವು ಹೇಳಬಹುದು.
06:48 ಈಗ ಸ್ಲೈಡ್ ಗಳಿಗೆ ಮರಳಿ.
06:51 static modifier ಅನ್ನು final modifier ಜೊತೆಗೆ ಬಳಸಬಹುದು.
06:56 ಇಡೀ ಕ್ಲಾಸ್ ಗೆ ಸಾಮಾನ್ಯವಾಗಿರುವ constant ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ.
07:01 ಸಾಂಪ್ರದಾಯಿಕವಾಗಿ, ಇಂತಹ constant ವೇರಿಯೇಬಲ್ ಗಳ ಹೆಸರುಗಳನ್ನು ದೊಡ್ಡಕ್ಷರಗಳಲ್ಲಿ ಬರೆಯಲಾಗುತ್ತದೆ.
07:08 ಈಗ eclipse ಗೆ ಮರಳಿ.
07:11 StudentEnroll ಕ್ಲಾಸ್ ಅನ್ನು ತೆರೆಯಿರಿ. variable declaration ಅನ್ನು public static final String ORG_NAME = “IITB”; ಎಂದು ಟೈಪ್ ಮಾಡಿ.
07:23 ಉದಾಹರಣೆಗೆ, ಒಂದುವೇಳೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಂಸ್ಥೆ IITB ಯಲ್ಲಿ ದಾಖಲಾಗುತ್ತಿದ್ದಾರೆ ಎಂದುಕೊಳ್ಳಿ.
07:31 ಇದನ್ನು ORG_NAME ಎನ್ನುವ constant static ವೇರಿಯೇಬಲ್ ಬಳಸಿ ಸೂಚಿಸಬಹುದು.
07:38 ಒಂದುವೇಳೆ ಹೆಸರು ಒಂದಕ್ಕಿಂತ ಹೆಚ್ಚು ಪದಗಳನ್ನು ಹೊಂದಿದ್ದರೆ, ಪದಗಳನ್ನು ಅಂಡರ್ ಸ್ಕೋರ್ ಮೂಲಕ ಪ್ರತ್ಯೇಕಿಸಬಹುದು.
07:44 ಸಾಮಾನ್ಯವಾಗಿ ನಾವು ಇಂತಹ constant ಗಳನ್ನು public ವಿಸಿಬಿಲಿಟಿ ಯ ಜೊತೆ ಡಿಕ್ಲೇರ್ ಮಾಡುತ್ತೇವೆ.
07:49 ಈಗ Demo ಕ್ಲಾಸ್ ಗೆ ಹೋಗಿ ಹಾಗೂ ಈ ಕೋಡ್ ಅನ್ನು ಟೈಪ್ ಮಾಡಿ.
07:55 ಇಲ್ಲಿ, ORG_NAME ಅನ್ನು StudentEnroll ಎನ್ನುವ ಕ್ಲಾಸ್ ಹೆಸರು ಬಳಸಿ ಆಕ್ಸೆಸ್ ಮಾಡಬಹುದು.
08:03 ಈಗ Demo ಪ್ರೋಗ್ರಾಂ ಅನ್ನು ರನ್ ಮಾಡಿ.
08:06 ಆರ್ಗನೈಸೇಶನ್ ಹೆಸರು IITB ಆಗಿ ಪ್ರಿಂಟ್ ಆಗುತ್ತಿರುವುದನ್ನು ನಾವಿಲ್ಲಿ ನೋಡಬಹುದು.
08:11 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
08:17 static ವೇರಿಯೇಬಲ್ ಅಂದರೆ ಏನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ,
08:21 static ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳನ್ನು ಕಲಿತೆವು.
08:25 ಅಸೈನ್ಮೆಂಟ್ ಗಾಗಿ, ಕಾರ್ ಸರ್ವಿಸ್ ಸ್ಟೇಷನ್ ಒಂದನ್ನು ಪ್ರತಿನಿಧಿಸಲು CarService ಎನ್ನುವ ಕ್ಲಾಸ್ ಅನ್ನು ರಚಿಸಿ.
08:32 ಈ ಕ್ಲಾಸ್, ಈ ಕೆಳಗಿನ ವಿವರಗಳನ್ನು ಪ್ರತಿನಿಧಿಸಲು ವೇರಿಯೇಬಲ್ ಗಳನ್ನು ಹೊಂದಿರಬೇಕು: ಸರ್ವಿಸ್ ಸ್ಟೇಷನ್ ನ Name,
08:39 ಸರ್ವಿಸ್ ಗೆ ಬಂದಿರುವ ಕಾರ್ ನ make, model, ಮತ್ತು register number,
08:44 ಸರ್ವಿಸ್ ಗಾಗಿ ಬಂದಿರುವ ಕಾರ್ ಗಳು: No. of Cars in
08:47 instance ವೇರಿಯೇಬಲ್ ಗಳು ಮತ್ತು static ವೇರಿಯೇಬಲ್ ಗಳನ್ನು ಗುರುತಿಸಿ.
08:51 ಸೂಕ್ತ ಕೀವರ್ಡ್ ಗಳನ್ನು ಬಳಸಿ ಅವುಗಳನ್ನು ಡಿಕ್ಲೇರ್ ಮಾಡಿ.
08:55 ಕಾರ್ make, model, ಮತ್ತು register number ಗೆ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಅನ್ನು ಡಿಫೈನ್ ಮಾಡಿ.
09:01 ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು show( ) ಎಂಬ ಮೆಥಡ್ ಅನ್ನು ಡಿಫೈನ್ ಮಾಡಿ.
09:07 ಅಲ್ಲದೆ, ಫಲಿತಾಂಶಗಳನ್ನು ನೋಡಲು main ಮೆಥಡ್ ಅನ್ನು ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. ಅಂದರೆ CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ.
09:16 ಈ ಅಬ್ಜೆಕ್ಟ್ ಗಳನ್ನು ಬಳಸಿ show( ) ಮೆಥಡ್ ಅನ್ನು ಜಾರಿಗೊಳಿಸಿ.
09:20 ಅಲ್ಲದೆ, ಕ್ಲಾಸ್ ಹೆಸರನ್ನು ಬಳಸಿ static ವೇರಿಯೇಬಲ್ ಗಳನ್ನು ನೇರವಾಗಿ ಆಕ್ಸೆಸ್ ಮಾಡಿ.
09:25 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
09:32 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ.
09:41 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
09:45 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
09:51 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
09:56 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:03 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14