Difference between revisions of "Java/C3/Static-Variables/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 250: | Line 250: | ||
|- | |- | ||
||06:56 | ||06:56 | ||
− | || ಇಡೀ ಕ್ಲಾಸ್ | + | || ಇಡೀ ಕ್ಲಾಸ್ ಗೆ ಸಾಮಾನ್ಯವಾಗಿರುವ '''constant''' ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ. |
|- | |- |
Revision as of 11:00, 9 June 2020
Time | Narration |
00:01 | Static Variables ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು Static ವೇರಿಯೇಬಲ್ ಗಳು ಎಂದರೇನು, |
00:10 | Static ವೇರಿಯೇಬಲ್ ಗಳ ರಚನೆ ಮತ್ತು Static ವೇರಿಯೇಬಲ್ ಗಳನ್ನು ಬಳಸುವ ಕುರಿತು ಕಲಿಯಲಿದ್ದೇವೆ |
00:17 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04, JDK 1.7 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇನೆ. |
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:35 | ನೀವು ಕ್ಲಾಸ್ ಗಳು, ಆಬ್ಜೆಕ್ಟ್ ಗಳು ಮತ್ತು Instance ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು. |
00:42 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಗೆ ಭೇಟಿ ನೀಡಿ. |
00:49 | Static ವೇರಿಯೇಬಲ್, ಇಡೀ ಕ್ಲಾಸ್ ಗೆ ಸಂಬಂಧಿಸಿದೆ. |
00:55 | ಇದನ್ನು ಕ್ಲಾಸ್ ವೇರಿಯೇಬಲ್ ಎಂದು ಸಹ ಕರೆಯಲಾಗುತ್ತದೆ. |
00:58 | ಇದನ್ನು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
01:02 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ static ವೇರಿಯೇಬಲ್ ಕುರಿತು ನೋಡಿದ್ದೇವೆ. |
01:08 | ಈ ಟ್ಯುಟೋರಿಯಲ್ ನಲ್ಲಿ ನಾವು ಇದನ್ನು ವಿವರವಾಗಿ ಕಲಿಯಲಿದ್ದೇವೆ. |
01:11 | ನಾವೀಗ ಎಕ್ಲಿಪ್ಸ್ ಗೆ ಬದಲಾಯಿಸೋಣ ಮತ್ತು StaticVariableDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ. |
01:18 | ಈ ಪ್ರಾಜೆಕ್ಟ್ ಒಳಗೆ, Static ವೇರಿಯೇಬಲ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ. |
01:26 | ಇದಕ್ಕಾಗಿ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ. ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ, Enter ಒತ್ತಿ. |
01:37 | ನಾವೀಗ static ವೇರಿಯೇಬಲ್ ಗಳ ಬಳಕೆಯನ್ನು ಉದಾಹರಣೆಯೊಂದಿಗೆ ತೋರಿಸೋಣ. |
01:42 | ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು ರಚಿಸಿರುವ ಕ್ಲಾಸ್ ಒಂದನ್ನು ಪರಿಗಣಿಸಿ. |
01:49 | ಈ ಕ್ಲಾಸು, ದಾಖಲಾದ ವಿದ್ಯಾರ್ಥಿಗಳ name, ID, branch ಮತ್ತು total count ಅನ್ನು ಒಳಗೊಂಡಿದೆ. |
01:56 | ಈಗ, ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿದ ನಂತರ ಏನಾಗುತ್ತದೆ ಎಂದು ಊಹಿಸೋಣ. |
02:02 | ಡಿಫಾಲ್ಟ್ ಆಗಿ Total Count ಇಲ್ಲಿ 0 ಆಗಿದೆ. ಮೊದಲ ವಿದ್ಯಾರ್ಥಿಯ ಹೆಸರು ADIL ಆಗಿದೆ. |
02:09 | Id ಯು IT101 ಮತ್ತು Branch ಇಲ್ಲಿ IT ಆಗಿದೆ. |
02:14 | ಈಗ Total Count ಅನ್ನು 1 ಎಂದು ಅಪ್ಡೇಟ್ ಮಾಡಲಾಗಿದೆ. |
02:18 | ಇದೇ ರೀತಿ ಎರಡನೇ ವಿದ್ಯಾರ್ಥಿ AMAL ದಾಖಲಾದಾಗ, Total Count ಅನ್ನು 2 ಎಂದು, ಅಪ್ಡೇಟ್ ಮಾಡಲಾಗುತ್ತದೆ. |
02:25 | ಮೂರನೇ ವಿದ್ಯಾರ್ಥಿ CAROL ದಾಖಲಾದಾಗ Total Count 3 ಎಂದು ಅಪ್ಡೇಟ್ ಮಾಡಲಾಗುತ್ತದೆ. |
02:32 | ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುವ ವೇರಿಯೇಬಲ್ Total Count, ಒಂದೇ ವ್ಯಾಲ್ಯೂ ವನ್ನು ಹೊಂದಿದೆ ಎಂದು ನಾವೀಗ ನೋಡಬಹುದು. |
02:40 | ಹೀಗಾಗಿ, ವೇರಿಯೇಬಲ್ Total Count ಅನ್ನು Static ವೇರಿಯೇಬಲ್ ಎನ್ನಬಹುದು. |
02:45 | Name, Id, ಮತ್ತು Branch – ಈ ವೇರಿಯೇಬಲ್ ಗಳು ಪ್ರತಿ ಅಬ್ಜೆಕ್ಟ್ ಗಳಿಗೆ ತನ್ನದೇ ಆದ ನಕಲುಗಳನ್ನು ಹೊಂದಿವೆ. |
02:54 | ಹಾಗೂ ಅವು ಪ್ರತಿಯೊಂದು ಅಬ್ಜೆಕ್ಟ್ ಗೆ ನಿರ್ದಿಷ್ಟ ಮೌಲ್ಯಗಳನ್ನು ಹೊಂದಿವೆ ಎಂದು ನಾವು ನೋಡಬಹುದು. |
02:59 | ಹೀಗೆ, ಈ ವೇರಿಯೇಬಲ್ ಗಳನ್ನು Instance ವೇರಿಯೇಬಲ್ ಗಳಾಗಿ ಪರಿಗಣಿಸಬಹುದು. |
03:04 | ಈಗ, Student Enroll class ಅನ್ನು ಪ್ರತಿನಿಧಿಸುವ ಕೋಡ್ ಅನ್ನು ನೋಡೋಣ. |
03:09 | instance ವೇರಿಯೇಬಲ್ ಗಳನ್ನು id, name ಮತ್ತು branch ಗಳಾಗಿ ಡಿಕ್ಲೇರ್ ಮಾಡಲಾಗಿದೆ. |
03:16 | ವೇರಿಯೇಬಲ್ count ಅನ್ನು static ಆಗಿ ಡಿಕ್ಲೇರ್ ಮಾಡಲಾಗಿದೆ, ಏಕೆಂದರೆ ಇದು ಇಡೀ ಕ್ಲಾಸಿಗೆ ಒಂದೇ ಆಗಿದೆ. |
03:22 | ಕ್ಲಾಸ್ ಅನ್ನು ಲೋಡ್ ಮಾಡಿದಾಗ, static ವೇರಿಯೇಬಲ್, ಒಂದು ನಿಗದಿತ ಮೆಮರಿ ಸ್ಥಳವನ್ನು ವ್ಯಾಪಿಸುತ್ತದೆ. |
03:28 | ಆದರೆ ಪ್ರತಿ ಅಬ್ಜೆಕ್ಟ್ ನ Instance ವೇರಿಯೇಬಲ್, ಪ್ರತ್ಯೇಕ ಮೆಮರಿ ಸ್ಥಳಗಳನ್ನು ವ್ಯಾಪಿಸುತ್ತದೆ. |
03:35 | ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿಕೊಳ್ಳಿ. |
03:41 | ತಯಾರಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ. |
03:45 | id, name ಮತ್ತು branch ಫೀಲ್ಡ್ ಗಳ ವ್ಯಾಲ್ಯೂಗಳನ್ನು ಈ ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಲ್ಲದು. |
03:51 | ಪ್ರತಿ ಸಂದರ್ಭದಲ್ಲಿ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ವೇರಿಯೇಬಲ್ count ನ ವ್ಯಾಲ್ಯೂವನ್ನು ನಾವು ಹೆಚ್ಚಿಸಬೇಕು. |
03:59 | ಇದಕ್ಕಾಗಿ ಕನ್ಸ್ಟ್ರಕ್ಟರ್ ನ ಒಳಗೆ ಹೀಗೆ ಟೈಪ್ ಮಾಡಿ: count ++ semicolon. |
04:05 | ನಾವೀಗ ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ showData( ) ಮೆಥಡ್ ಅನ್ನು ಸೇರಿಸಲಿದ್ದೇವೆ. |
04:13 | ಹೀಗಾಗಿ public void showData( ) ಎಂದು ಟೈಪ್ ಮಾಡಿ. ಆವರಣ ಚಿಹ್ನೆಗಳೊಳಗೆ id, name, branch ಗಳ ವ್ಯಾಲ್ಯೂಗಳು ಮತ್ತು ದಾಖಲಿಸಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ. |
04:27 | ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ. New > Class ಮೇಲೆ ಕ್ಲಿಕ್ ಮಾಡಿ, ಹೆಸರನ್ನು Demo ಎಂದು ಟೈಪ್ ಮಾಡಿ. |
04:36 | ಈ ಕ್ಲಾಸ್ ನ ಒಳಗಡೆ main() ಮೆಥಡ್ ಇರುವುದು. |
04:39 | ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು main() ಮೆಥಡ್ ರಚಿಸುವುದಕ್ಕಾಗಿ ctrl+space ಒತ್ತಿ. |
04:46 | ನಾವೀಗ Student Enrollment data ವನ್ನು ಪ್ರಿಂಟ್ ಮಾಡಬೇಕು. |
04:50 | ವಿದ್ಯಾರ್ಥಿಗಳ ದಾಖಲಾತಿಯನ್ನು ಸೂಚಿಸಲು ನಾವು StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಲಿದ್ದೇವೆ. |
04:57 | ಇದಕ್ಕಾಗಿ ಇಲ್ಲಿ ಕೊಟ್ಟಿರುವ ಕೋಡ್ ಅನ್ನು ಟೈಪ್ ಮಾಡಿ: StudentEnroll s1 equals new StudentEnroll. |
05:04 | ನಾವೀಗ ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ಪಾಸ್ ಮಾಡಬಹುದು. |
05:08 | ಬ್ರ್ಯಾಕೆಟ್ಸ್ ಒಳಗೆ IT101 ಅನ್ನು id ಆಗಿ, ADIL ಅನ್ನು name ಆಗಿ ಮತ್ತು IT ಅನ್ನು branch ಆಗಿ ಟೈಪ್ ಮಾಡಿ. |
05:17 | ಈಗ ನಾವು ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData ವನ್ನು ಇನ್ವೋಕ್ ಮಾಡೋಣ. |
05:22 | ಇದಕ್ಕಾಗಿ s1.showData( ) ಎಂದು ಟೈಪ್ ಮಾಡಿ. ಈಗ Demo ಪ್ರೋಗ್ರಾಂ ಅನ್ನು ರನ್ ಮಾಡಿ. |
05:29 | ಈಗ, s1 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು. |
05:36 | ಅಲ್ಲದೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯು 1 ಆಗಿರುವುದನ್ನು ಗಮನಿಸಿ. |
05:42 | ಇದು ಏಕೆಂದರೆ ನಾವು ಕೇವಲ 1 ಅಬ್ಜೆಕ್ಟ್ ಮಾತ್ರ ರಚಿಸಿದ್ದೇವೆ. |
05:47 | ಈಗ, ಇನ್ನೊಂದು ಅಬ್ಜೆಕ್ಟ್ s2 ಅನ್ನು ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
05:52 | ಇನ್ನೊಮ್ಮೆ s2 ಅನ್ನು ಬಳಸಿ showData ಮೆಥಡ್ ಅನ್ನು ಕಾಲ್ ಮಾಡಬಹುದು. |
05:56 | ಇನ್ನೊಮ್ಮೆ Demo ಪ್ರೋಗ್ರಾಂ ಅನ್ನು ರನ್ ಮಾಡಿ. |
05:59 | s2 ಗೆ ಅನುರೂಪವಾದ instance ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಗಮನಿಸಬಹುದು. |
06:06 | ಅಲ್ಲದೆ, s1 ಮತ್ತು s2 ಎರಡರಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂ 2ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ. |
06:14 | ಈಗ ಇನ್ನೊಂದು ಅಬ್ಜೆಕ್ಟ್ s3 ಅನ್ನು ರಚಿಸಿ. |
06:18 | ಮತ್ತೊಮ್ಮೆ s3 ಬಳಸಿ ನಾವು showData ಮೆಥಡ್ ಅನ್ನು ಇನ್ವೋಕ್ ಮಾಡೋಣ. |
06:23 | ಮತ್ತೊಮ್ಮೆ Demo ಪ್ರೋಗ್ರಾಂ ಅನ್ನು ರನ್ ಮಾಡಿ. |
06:26 | ಈಗ, s3 ಗೆ ಅನುರೂಪವಾದ instance ವೇರಿಯೇಬಲ್ ಗಳ ವ್ಯಾಲ್ಯೂಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು. |
06:32 | ಅಲ್ಲದೆ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ವ್ಯಾಲ್ಯೂವನ್ನು ಎಲ್ಲಾ ಕ್ಲಾಸುಗಳಲ್ಲಿ 3ಕ್ಕೆ ಅಪ್ಡೇಟ್ ಆಗಿರುವುದನ್ನು ಗಮನಿಸಿ. |
06:41 | ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯು ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುತ್ತದೆ ಎಂದು ಈಗ ನಾವು ಹೇಳಬಹುದು. |
06:48 | ಈಗ ಸ್ಲೈಡ್ ಗಳಿಗೆ ಮರಳಿ. |
06:51 | static modifier ಅನ್ನು final modifier ಜೊತೆಗೆ ಬಳಸಬಹುದು. |
06:56 | ಇಡೀ ಕ್ಲಾಸ್ ಗೆ ಸಾಮಾನ್ಯವಾಗಿರುವ constant ಅನ್ನು ಡಿಫೈನ್ ಮಾಡಲು ಇದನ್ನು ಮಾಡಲಾಗುತ್ತದೆ. |
07:01 | ಸಾಂಪ್ರದಾಯಿಕವಾಗಿ, ಇಂತಹ constant ವೇರಿಯೇಬಲ್ ಗಳ ಹೆಸರುಗಳನ್ನು ದೊಡ್ಡಕ್ಷರಗಳಲ್ಲಿ ಬರೆಯಲಾಗುತ್ತದೆ. |
07:08 | ಈಗ eclipse ಗೆ ಮರಳಿ. |
07:11 | StudentEnroll ಕ್ಲಾಸ್ ಅನ್ನು ತೆರೆಯಿರಿ. variable declaration ಅನ್ನು public static final String ORG_NAME = “IITB”; ಎಂದು ಟೈಪ್ ಮಾಡಿ. |
07:23 | ಉದಾಹರಣೆಗೆ, ಒಂದುವೇಳೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಂಸ್ಥೆ IITB ಯಲ್ಲಿ ದಾಖಲಾಗುತ್ತಿದ್ದಾರೆ ಎಂದುಕೊಳ್ಳಿ. |
07:31 | ಇದನ್ನು ORG_NAME ಎನ್ನುವ constant static ವೇರಿಯೇಬಲ್ ಬಳಸಿ ಸೂಚಿಸಬಹುದು. |
07:38 | ಒಂದುವೇಳೆ ಹೆಸರು ಒಂದಕ್ಕಿಂತ ಹೆಚ್ಚು ಪದಗಳನ್ನು ಹೊಂದಿದ್ದರೆ, ಪದಗಳನ್ನು ಅಂಡರ್ ಸ್ಕೋರ್ ಮೂಲಕ ಪ್ರತ್ಯೇಕಿಸಬಹುದು. |
07:44 | ಸಾಮಾನ್ಯವಾಗಿ ನಾವು ಇಂತಹ constant ಗಳನ್ನು public ವಿಸಿಬಿಲಿಟಿ ಯ ಜೊತೆ ಡಿಕ್ಲೇರ್ ಮಾಡುತ್ತೇವೆ. |
07:49 | ಈಗ Demo ಕ್ಲಾಸ್ ಗೆ ಹೋಗಿ ಹಾಗೂ ಈ ಕೋಡ್ ಅನ್ನು ಟೈಪ್ ಮಾಡಿ. |
07:55 | ಇಲ್ಲಿ, ORG_NAME ಅನ್ನು StudentEnroll ಎನ್ನುವ ಕ್ಲಾಸ್ ಹೆಸರು ಬಳಸಿ ಆಕ್ಸೆಸ್ ಮಾಡಬಹುದು. |
08:03 | ಈಗ Demo ಪ್ರೋಗ್ರಾಂ ಅನ್ನು ರನ್ ಮಾಡಿ. |
08:06 | ಆರ್ಗನೈಸೇಶನ್ ಹೆಸರು IITB ಆಗಿ ಪ್ರಿಂಟ್ ಆಗುತ್ತಿರುವುದನ್ನು ನಾವಿಲ್ಲಿ ನೋಡಬಹುದು. |
08:11 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: |
08:17 | static ವೇರಿಯೇಬಲ್ ಅಂದರೆ ಏನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ, |
08:21 | static ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳನ್ನು ಕಲಿತೆವು. |
08:25 | ಅಸೈನ್ಮೆಂಟ್ ಗಾಗಿ, ಕಾರ್ ಸರ್ವಿಸ್ ಸ್ಟೇಷನ್ ಒಂದನ್ನು ಪ್ರತಿನಿಧಿಸಲು CarService ಎನ್ನುವ ಕ್ಲಾಸ್ ಅನ್ನು ರಚಿಸಿ. |
08:32 | ಈ ಕ್ಲಾಸ್, ಈ ಕೆಳಗಿನ ವಿವರಗಳನ್ನು ಪ್ರತಿನಿಧಿಸಲು ವೇರಿಯೇಬಲ್ ಗಳನ್ನು ಹೊಂದಿರಬೇಕು: ಸರ್ವಿಸ್ ಸ್ಟೇಷನ್ ನ Name, |
08:39 | ಸರ್ವಿಸ್ ಗೆ ಬಂದಿರುವ ಕಾರ್ ನ make, model, ಮತ್ತು register number, |
08:44 | ಸರ್ವಿಸ್ ಗಾಗಿ ಬಂದಿರುವ ಕಾರ್ ಗಳು: No. of Cars in |
08:47 | instance ವೇರಿಯೇಬಲ್ ಗಳು ಮತ್ತು static ವೇರಿಯೇಬಲ್ ಗಳನ್ನು ಗುರುತಿಸಿ. |
08:51 | ಸೂಕ್ತ ಕೀವರ್ಡ್ ಗಳನ್ನು ಬಳಸಿ ಅವುಗಳನ್ನು ಡಿಕ್ಲೇರ್ ಮಾಡಿ. |
08:55 | ಕಾರ್ make, model, ಮತ್ತು register number ಗೆ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಅನ್ನು ಡಿಫೈನ್ ಮಾಡಿ. |
09:01 | ಎಲ್ಲಾ ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು show( ) ಎಂಬ ಮೆಥಡ್ ಅನ್ನು ಡಿಫೈನ್ ಮಾಡಿ. |
09:07 | ಅಲ್ಲದೆ, ಫಲಿತಾಂಶಗಳನ್ನು ನೋಡಲು main ಮೆಥಡ್ ಅನ್ನು ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. ಅಂದರೆ CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ. |
09:16 | ಈ ಅಬ್ಜೆಕ್ಟ್ ಗಳನ್ನು ಬಳಸಿ show( ) ಮೆಥಡ್ ಅನ್ನು ಜಾರಿಗೊಳಿಸಿ. |
09:20 | ಅಲ್ಲದೆ, ಕ್ಲಾಸ್ ಹೆಸರನ್ನು ಬಳಸಿ static ವೇರಿಯೇಬಲ್ ಗಳನ್ನು ನೇರವಾಗಿ ಆಕ್ಸೆಸ್ ಮಾಡಿ. |
09:25 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
09:32 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. |
09:41 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
09:45 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
09:51 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
09:56 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
10:03 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |