Difference between revisions of "PHP-and-MySQL/C2/Logical-Operators/Kannada"

From Script | Spoken-Tutorial
Jump to: navigation, search
 
Line 127: Line 127:
 
|-
 
|-
 
|05:14
 
|05:14
|ನಾವು ಅದನ್ನು ಪರಿಶಿಲಿಸೋಣ. ಅದು ಹಾಗೇ ಇದೆ.
+
|ನಾವು ಅದನ್ನು ಪರಿಶೀಲಿಸೋಣ. ಅದು ಹಾಗೇ ಇದೆ.
 
|-
 
|-
 
|05:18
 
|05:18
Line 142: Line 142:
 
|-
 
|-
 
|05:41
 
|05:41
|ಒಂದುವೇಳೆ username ಇದ್ದರೆ, username "True" ಎಂದು ಆಗಿದೆ..
+
|ಒಂದುವೇಳೆ '''username''' ಇದ್ದರೆ, '''username "True"''' ಎಂದು ಆಗಿದೆ.
 
|-
 
|-
 
|05:45
 
|05:45
|ಸಧ್ಯಕ್ಕೆ ಇಲ್ಲಿ ಯಾವ ವ್ಯಾಲ್ಯೂ ಇಲ್ಲ – ಹೀಗಾಗಿ ಇದು "False" ಆಗಿದೆ.  
+
|ಸಧ್ಯಕ್ಕೆ ಇಲ್ಲಿ ಯಾವ ವ್ಯಾಲ್ಯೂ ಇಲ್ಲ – ಹೀಗಾಗಿ ಇದು '''"False"''' ಆಗಿದೆ.  
 
|-
 
|-
 
|05:48
 
|05:48
|ಅಥವಾ password "true" ಎಂದಾದರೆ – ಎಂದರೆ ಅದಕ್ಕೊಂದು ವ್ಯಾಲ್ಯೂ ಇದ್ದರೆ, ಸಧ್ಯಕ್ಕೆ ಇಲ್ಲ, ಹೀಗಾಗಿ ಇದು "False" ಆಗಿದೆ.  
+
|ಅಥವಾ '''password "true"''' ಎಂದಾದರೆ – ಎಂದರೆ ಅದಕ್ಕೊಂದು ವ್ಯಾಲ್ಯೂ ಇದ್ದರೆ, ಸಧ್ಯಕ್ಕೆ ಇಲ್ಲ, ಹೀಗಾಗಿ ಇದು "False" ಆಗಿದೆ.  
 
|-
 
|-
 
|05:56
 
|05:56
Line 181: Line 181:
 
|-
 
|-
 
|06:37
 
|06:37
|ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ..........
+
|ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Latest revision as of 12:30, 29 April 2020

Time Narration
00:00 ನಮಸ್ಕಾರ. Logical Operators ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಇದೊಂದು ಬಹಳ ಸಂಕ್ಷಿಪ್ತವಾದ ಟ್ಯುಟೋರಿಯಲ್ ಆಗಿದೆ.
00:09 ಮತ್ತೊಮ್ಮೆ ನಾನು "if" ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ಬಳಸುವೆನು. ಏಕೆಂದರೆ ಸಧ್ಯಕ್ಕೆ ನನ್ನ ಹತ್ತಿರ ಇದ್ದದ್ದು ಅದೊಂದೇ.
00:18 'ಲಾಜಿಕಲ್ ಆಪರೇಟರ್' (logical operator) ಎಂದರೇನು? ಇದು AND ಅಥವಾ OR ಆಪರೇಟರ್ ಆಗಿದೆ.
00:27 ಈಗ, "if" ಸ್ಟೇಟ್ಮೆಂಟ್ ಗಾಗಿ ನಾನು ಬೇಸಿಕ್ ಲೇಔಟ್ ಅನ್ನು ರಚಿಸುವಾಗ, ನೀವು ಇವುಗಳೊಂದಿಗೆ ಏನು ಮಾಡಬಹುದೆಂದು ತೋರಿಸುತ್ತೇನೆ.
00:43 ಈ ಮೊದಲು ನಮ್ಮ ಹತ್ತಿರ ಇದ್ದ '1 is greater than 1' ನಂತಹ ಉದಾಹರಣೆಯು ಸಧ್ಯಕ್ಕೆ False ಅನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ).
00:54 ನಾವು ಎಲ್ಲಿದ್ದೇವೆ ಎಂದು ನೋಡಲು, ಅದನ್ನು ನಾವು ನೊಡೋಣ..... ಸರಿ! ಅದು "False" ಎಂದಿದೆ.
01:04 ಈಗ, ನಾನು "if 1 is greater than 1 or equals 1" ಎಂದು ಹೇಳಿದರೆ ಏನಾಗುತ್ತದೆ?
01:18 ನಾವು ಇದನ್ನು 'OR' ಎಂದು ಬರೆಯುವುದಿಲ್ಲ. ಆದರೆ ಎರಡು ಲಂಬ ರೇಖೆಗಳನ್ನು ಅಥವಾ ಎರಡು ಪೈಪ್ ಗಳನ್ನು ಬರೆಯುತ್ತೇವೆ.
01:26 ನನ್ನ ಕೀಬೋರ್ಡ್ ನಲ್ಲಿ ಮಾತ್ರ ಇದು shift ಕೀ ಯ ಪಕ್ಕದಲ್ಲಿದೆ. ಎರಡು ಲಂಬ ರೇಖೆಗಳು ಎಂದರೆ 'OR' ಎಂದರ್ಥ.
01:38 ನಾವು ಇದನ್ನು ಕಂಪೈಲ್ ಮಾಡಿದರೆ, ಏನು ಫಲಿತಾಂಶ ಬರಬಹುದು?
01:43 ಈಗ ಒಮ್ಮೆ ಇದನ್ನು ನೋಡೋಣ- if 1 is greater than 1 - "false". ಆದ್ದರಿಂದ ನಾವು "false" ಎಂದು ಬರೆದಿದ್ದೇವೆ. OR 1 is equal to 1.
01:54 1 equals to 1 ಇದು "true" ಎಂದು ನಮಗೆ ತಿಳಿದಿದೆ. ಇಲ್ಲಿ ನಾವು OR 1 is equal to 1 ಎಂದು ಹೇಳುತ್ತಿದ್ದೇವೆ, AND ಎಂದು ಅಲ್ಲ; ಏಕೆಂದರೆ, ನಾವು AND ಎಂದು ಹೇಳಿದರೆ, ಆಗ ಎರಡೂ "true" ಆಗಿರಬೇಕು.
02:09 OR- ಇದಕ್ಕಾಗಿ, ಈ ಎರಡರಲ್ಲಿ ಒಂದಾದರೂ "true" ಎಂದು ಇರಬೇಕು.
02:12 ಔಟ್ಪುಟ್ ನಮಗೆ "true" ಸಿಗುತ್ತದೆ ಎಂದು ಆಶಿಸುತ್ತೇನೆ.
02:16 ಸರಿ, OR ಹೀಗಿದೆ.
02:18 ಮೂಲತಃ ಅದು ನಿಮಗೆ ಎರಡು ಹೋಲಿಕೆಗಳನ್ನು ಮಾಡಲು ಅನುಮತಿಸುತ್ತದೆ. ಅವುಗಳನ್ನು ನಿಮ್ಮ if ಸ್ಟೇಟ್ಮೆಂಟ್ ನಲ್ಲಿ ತೋರಿಸಲು ಮತ್ತು ಅವುಗಳಲ್ಲಿ ಯಾವುದೇ ಒಂದು "true" ಎಂದಾದರೆ, ಆಗ ಅದು ಒಂದು "either" ಆಪರೇಟರ್ ನ ಹಾಗೆ ಆಗುತ್ತದೆ.
02:30 ಅವುಗಳಲ್ಲಿ ಯಾವುದೇ ಒಂದು "true" ಎಂದಾದರೆ, ನಿಮಗೆ "true" ಎಂದು ಸಿಗುತ್ತದೆ.
02:34 AND ಆಪರೇಟರ್ ಸ್ವಲ್ಪ ಬೇರೆಯಾಗಿದೆ.
02:39 AND ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಲು ಈ ಎರಡೂ "true" ಆಗಿರುವುದು ಅವಶ್ಯಕ.
02:46 ಹೀಗಾಗಿ ಇಲ್ಲಿ ನಾವು "false" ಅನ್ನು ಪಡೆದಿದ್ದೇವೆ. ಏಕೆಂದರೆ 1 is not greater than 1.
02:51 ನಾವು ನಮ್ಮ ಹೋಲಿಸುವ ಆಪರೇಟರ್ ಗಳಿಗೆ (comparison operators) ಹಿಂದಿರುಗೋಣ. ಮತ್ತು if 1 is greater than 1 or equal to 1 AND (&&) 1 equal 1 ಎನ್ನುತ್ತೇವೆ. ಇಲ್ಲಿ ನಾವು "true" ಅನ್ನು ಪಡೆಯುತ್ತೇವೆ.
03:04 ಈಗ, ಈ ಟೆಸ್ಟ್ ನಲ್ಲಿ ನಾನು ಕೆಲವು ವೇರಿಯೇಬಲ್ ಗಳನ್ನು ಸೇರಿಸಬೇಕು ಎಂದುಕೊಂಡಿದ್ದೇನೆ.
03:10 ಇಲ್ಲಿಯವರೆಗೆ ನನ್ನ ಉಳಿದ ಟ್ಯುಟೋರಿಯಲ್ ಗಳನ್ನು ಅಭ್ಯಸಿಸಿ, ನೀವು ವೇರಿಯೇಬಲ್ ಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬಹುದು.
03:17 ಇವು ಎರಡು 'ಲಾಜಿಕಲ್ ಆಪರೇಟರ್' (logical operators) ಗಳಾಗಿವೆ.
03:20 ಇವು ಬಹಳ ಉಪಯುಕ್ತವಾಗಿವೆ. ಇದು ಒಂದು ಒಳ್ಳೆಯ ಉದಾಹರಣೆ ಆಗಿದೆ. ಇದನ್ನು ನೀವು ನನ್ನ ಒಂದು ಪ್ರೊಜೆಕ್ಟ್ ನಲ್ಲಿ ನೋಡುತ್ತೀರಿ.
03:30 ಇದೊಂದು "login" ಫಾರ್ಮ್ ಆಗಿದೆ. ಒಬ್ಬ ಬಳಕೆದಾರನಿಗೆ (user) ಒಂದು ವೆಬ್ಸೈಟ್ ನಲ್ಲಿ ಲಾಗ್-ಇನ್ ಮಾಡಬೇಕಾಗಿದೆ ಎಂದುಕೊಳ್ಳಿ.
03:35 ಈಮೊದಲು ನೀವು ಒಂದು ವೆಬ್ಸೈಟ್ ನಲ್ಲಿ ಲಾಗ್-ಇನ್ ಮಾಡಿರಬಹುದು. ಅದು ನಿಮ್ಮ "username" ಮತ್ತು "password" ಗಳನ್ನು ನಮೂದಿಸಲು ಹೇಳಿರುತ್ತದೆ. ಈಗ ಇಲ್ಲಿಯೂ ಹಾಗೆಯೇ ಇದೆ.
03:43 ಬಳಕೆದಾರರು "username" ಮತ್ತು "password" ಗಳನ್ನು ನಮೂದಿಸಿದ್ದಾನೆಯೇ ಎಂದು ನಾವು ನೋಡಬೇಕು.
03:48 ಅವರು ಇನ್ನೂ ಮಾಡಿರದಿದ್ದರೆ, "username" ಅನ್ನು "password" ಗೆ ಹೋಲಿಸುವುದರಲ್ಲಿ ಅರ್ಥವಿಲ್ಲ.
03:52 ಉದಾಹರಣೆಗೆ ನಾವು ಹೀಗೆ ಹೆಳಬಹುದು:
03:54 ನಾನು '$username' ಅನ್ನು "alex" ಮತ್ತು ನನ್ನ '$password' ಅನ್ನು"abc"ಗೆ ಸಮ ಆಗಿವೆ ಎನ್ನುತ್ತೇನೆ.
04:04 ಈಗ, ಇವುಗಳನ್ನು ಇಲ್ಲಿ ಸೇರಿಸುತ್ತೆನೆ. ನಾನು "username" AND (&&) "password" ಎಂದು ಹೇಳಬಹುದು.
04:11 ಸಧ್ಯಕ್ಕೆ ಇದು "True" ಎಂದು ಹೇಳುತ್ತದೆ.
04:15 ಇದನ್ನು ನಾನು ಬದಲಿಸುತ್ತೇನೆ. "OK" ಅಥವಾ "you forgot to fill out a field" ಎನ್ನುತ್ತೇನೆ. ಏಕೆಂದರೆ, ಕೊನೆಯಲ್ಲಿ ಇಲ್ಲಿ HTML ಫೀಲ್ಡ್ ಗಳಿರುತ್ತವೆ.
04:27 ಇದು ಸರಿಯಾಗಿರುತ್ತದೆ. ಏಕೆಂದರೆ, ನಾವು ಎರಡೂ ವ್ಯಾಲ್ಯೂಗಳನ್ನು ಪಡೆದಿದ್ದೇವೆ.
04:32 ಹೀಗಾಗಿ ನಾವು ಇದನ್ನು ಪ್ರಯತ್ನಿಸೋಣ. ಹೌದು!! ಅದು "OK" ಎನ್ನುತ್ತಿದೆ.
04:37 ಈಗ, ನಾನು ನನ್ನ ಪಾಸ್ವರ್ಡ್ ಅನ್ನು ಇಲ್ಲಿ ಟೈಪ್ ಮಾಡಲು ಮರೆತರೆ ಏನಾಗುತ್ತದೆ? ಸಧ್ಯಕ್ಕೆ ಇಲ್ಲಿ ಏನೂ ಇಲ್ಲ. ಸ್ಪೇಸ್ ಇಲ್ಲ. ಅದನ್ನೂ ತೆಗೆದುಬಿಡೋಣ.
04:48 "You forgot to fill out a field".
04:50 ಇವು ಯೂಸರ್ ನಿಂದ ಬರುತ್ತವೆ ಎಂದು ನೀವು ಊಹಿಸಿದರೆ- ನೀವು ನಿಮ್ಮ "username" ಮತ್ತು "password" ಗಳನ್ನು ಟೈಪ್ ಮಾಡಿದ ಹಾಗೆ ಇವುಗಳನ್ನು ಸಬ್ಮಿಟ್ ಮಾಡಲಾಗಿದೆ.
05:00 ನಾವು "username" ಮತ್ತು "password" ಎನ್ನುತ್ತಿದ್ದೇವೆ; ಮೂಲತಃ "username" ಇದೆ. ಆದ್ದರಿಂದ ಇದು "true" ಆಗಿದೆ.
05:07 ಇದು ಇಲ್ಲಿ ಒಳಗೆ ಇದ್ದರೆ, ಅದು ಸಹ ಪರವಾಗಿಲ್ಲ; ಅದೂ "true" ಇರುತ್ತದೆ.
05:14 ನಾವು ಅದನ್ನು ಪರಿಶೀಲಿಸೋಣ. ಅದು ಹಾಗೇ ಇದೆ.
05:18 ನಮ್ಮ ಹತ್ತಿರ "username" ಮತ್ತು "password" ಎರಡೂ ಇರುವುದರಿಂದ ಇದು ಸರಿಯಾಗಿದೆ.
05:23 ಆದರೆ 'OR' ಗಾಗಿ, ಇದು ನಿಜವಾಗಿಯೂ ಸರಿಯಾಗುವುದಿಲ್ಲ ಮತ್ತು ಏನಾಗುತ್ತದೆ ಎಂಬುದನ್ನು ನೀವು ಊಹಿಸಬಹುದು.
05:29 ಸಧ್ಯಕ್ಕೆ, ಇದು "true" ಎಂದಾಗಿದೆ. ಏಕೆಂದರೆ, ನಾವು ಎರಡೂ ವ್ಯಾಲ್ಯೂಗಳನ್ನು ಪಡೆದಿದ್ದೇವೆ. ಹೀಗಾಗಿ ಇದು "OK" ಆಗಿದೆ.
05:36 ಈಗ ಈ ಎರಡನ್ನೂ ಒಟ್ಟಿಗೇ ನೋಡೋಣ.
05:41 ಒಂದುವೇಳೆ username ಇದ್ದರೆ, username "True" ಎಂದು ಆಗಿದೆ.
05:45 ಸಧ್ಯಕ್ಕೆ ಇಲ್ಲಿ ಯಾವ ವ್ಯಾಲ್ಯೂ ಇಲ್ಲ – ಹೀಗಾಗಿ ಇದು "False" ಆಗಿದೆ.
05:48 ಅಥವಾ password "true" ಎಂದಾದರೆ – ಎಂದರೆ ಅದಕ್ಕೊಂದು ವ್ಯಾಲ್ಯೂ ಇದ್ದರೆ, ಸಧ್ಯಕ್ಕೆ ಇಲ್ಲ, ಹೀಗಾಗಿ ಇದು "False" ಆಗಿದೆ.
05:56 ಆದ್ದರಿಂದ, ನಾವು "You forgot to fill out a field" ಎಂದು ಹೇಳುತ್ತೇವೆ.
06:00 ನಾನು ಇಲ್ಲಿ "Nothing" ಎಂದು ಬರೆಯುತ್ತೇನೆ. ಏಕೆಂದರೆ, ಸಧ್ಯಕ್ಕೆ ಇದಕ್ಕೆ ಏನೂ ಅರ್ಥವಿಲ್ಲ.
06:05 ರಿಫ್ರೆಶ್ ಮಾಡಿ. "Nothing" ಎಂದಿದೆ.
06:08 ಅನೇಕ php applications ಗಳಲ್ಲಿ, ಇವುಗಳು ಎಷ್ಟು ಉಪಯುಕ್ತವಾಗಿವೆ ಎಂದು ನಾನು ಈಗಾಗಲೇ ವಿವರಿಸಿದ್ದೇನೆ.
06:17 ಉದಾಹರಣೆಗೆ – ಯಾರಾದರೂ ತುಂಬಬಹುದಾದ ಒಂದು ಫಾರ್ಮ್. ಅದಕ್ಕಾಗಿ ಹಲವಾರು ಇತರ ಬಳಕೆದಾರರನ್ನು ನೀವು ನೋಡುತ್ತೀರಿ.
06:22 ಅದು ಇಲ್ಲಿದೆ.
06:24 ಎರಡು ಲಾಜಿಕಲ್ ಆಪರೇಟರ್ ಗಳಿವೆ.
06:27 ಅವುಗಳನ್ನು ಪ್ರಯತ್ನಿಸಿ ಮತ್ತು ನೀವು ಅವುಗಳೊಂದಿಗೆ ಏನೆಲ್ಲ ಮಾಡಬಹುದು ಎಂಬುದನ್ನು ನೋಡಿ.
06:31 ಶೀಘ್ರದಲ್ಲಿಯೇ ನಾನು ಇವುಗಳನ್ನು ನನ್ನ ಪ್ರೊಜೆಕ್ಟ್ ನಲ್ಲಿ ಖಂಡಿತವಾಗಿ ಬಳಸುವವನಿದ್ದೇನೆ.
06:35 ಧನ್ಯವಾದಗಳು.
06:37 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14