Difference between revisions of "FrontAccounting-2.4.7/C2/Setup-in-FrontAccounting/Kannada"
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || FrontAccounting ನಲ್ಲಿ ಸೆಟಪ್ ಕುರಿತು ಸ್ಪೋಕನ್ ಟ್ಯುಟೋರಿ...") |
Melkamiyar (Talk | contribs) |
||
Line 172: | Line 172: | ||
||03:33 | ||03:33 | ||
|| ನಾವೀಗ ಕಂಪನಿ ಸೆಟಪ್ ಪೇಜ್ ಗೆ ಹೋಗೋಣ. | || ನಾವೀಗ ಕಂಪನಿ ಸೆಟಪ್ ಪೇಜ್ ಗೆ ಹೋಗೋಣ. | ||
− | + | ಇದಕ್ಕಾಗಿ ಮೇಲ್ಗಡೆಯ ಮೆನುವಿನಲ್ಲಿರುವ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ. | |
|- | |- |
Revision as of 12:39, 23 April 2020
Time | Narration
|
00:01 | FrontAccounting ನಲ್ಲಿ ಸೆಟಪ್ ಕುರಿತು ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ನಲ್ಲಿ ನಾವು FrontAccounting ಇಂಟರ್ಫೇಸ್, |
00:12 | ಸೆಟಪ್ ಟ್ಯಾಬ್ ನಲ್ಲಿ ವಿವಿಧ ಮಾಡ್ಯುಲ್ ಗಳನ್ನು ಕಲಿಯಲಿದ್ದೇವೆ. |
00:15 | ಜತೆಗೆ ನಾವು ನಮ್ಮದೇ ಆದ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಲು, |
00:21 | ಯೂಸರ್ ಅಕೌಂಟ್ಗಳ ಸೆಟಪ್ ಮಾಡಲು, |
00:24 | ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು
ಡಿಸ್ಪ್ಲೈ ಸೆಟಪ್ ಮಾಡಲು ಕಲಿಯಲಿದ್ದೇವೆ. |
00:29 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:37 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:41 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ನ ಜ್ಞಾನ ಹೊಂದಿರಬೇಕು. |
00:50 | FrontAccounting ಇಂಟರ್ಫೇಸ್ ಮೇಲೆ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ. |
00:56 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:00 | localhost slash account ಬ್ರೌಸರ್ ತೆರೆಯಿರಿ ಮತ್ತು ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:07 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:10 | ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ರಚಿಸಿದ್ದನ್ನು ನೆನಪಿಸಿ. |
01:16 | admin ಅನ್ನು ಯೂಸರ್ನೇಮ್ ಆಗಿ ಮತ್ತು spoken ಅನ್ನು ಪಾಸ್ವರ್ಡ್ ಆಗಿ ಟೈಪ್ ಮಾಡಿ. |
01:22 | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:25 | ಈಗ FrontAccounting ವಿಂಡೋ ತೆರೆದುಕೊಳ್ಳುತ್ತದೆ. |
01:28 | FrontAccounting ನಲ್ಲಿ ಸ್ಟಾಂಡರ್ಡ್ ಮಾಡ್ಯುಲ್ಗಳನ್ನು ಒದಗಿಸಲಾಗಿದೆ. |
01:32 | ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ
ಸೇಲ್ ಗಳು ಮತ್ತು ಪರ್ಚೇಸ್ ಗಳು, |
01:38 | ಐಟಂಗಳು ಮತ್ತು ಇನ್ವೆಂಟರಿ, |
01:40 | ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಮಾಡ್ಯುಲ್ ಗಳ ಸೆಟಪ್ ಕಲಿಯಲಿದ್ದೇವೆ. |
01:47 | ನಾವೀಗ FrontAccounting ನಲ್ಲಿ Setup ಟ್ಯಾಬ್ ನಿಂದ ಪ್ರಾರಂಭಿಸೋಣ. |
01:51 | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ ಗೆ ಬಳಸಲಾಗುತ್ತದೆ. |
01:57 | ನಾವೀಗ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲಿದ್ದೇವೆ. |
02:04 | Name ಫೀಲ್ಡ್ನಲ್ಲಿ, ಡಿಫಾಲ್ಟ್ ಆಗಿ, ನಾವು ಕಂಪನಿಯ ಹೆಸರನ್ನು 'ST Company Pvt Ltd' ಆಗಿ ಕಾಣಬಹುದು. |
02:12 | ಇದು ಏಕೆಂದರೆ ಅಳವಡಿಕೆಯ ಸಂದರ್ಭದಲ್ಲಿ ನಾವು ಈ ಹೆಸರನ್ನು ನೀಡಿದ್ದೇವೆ. |
02:17 | ಆದರೆ, ರಿಪೋರ್ಟ್ಗಳಲ್ಲಿ ನೀವು ಅದು ಹೇಗೆ ಕಾಣಬೇಕೆಂದು ಬಯಸುತ್ತೀರೋ, ಅದೇ ರೀತಿಯನ್ನು ನೀವು ಹೆಸರನ್ನು ಬದಲಾಯಿಸಬಹುದು. |
02:23 | ನಾನು ಅದೇ ಹೆಸರನ್ನು ಇಡುತ್ತೇನೆ.
ಕೆಳಕ್ಕೆ ಸ್ಕ್ರಾಲ್ ಮಾಡಿ. |
02:28 | Home currency ಫೀಲ್ಡ್ ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
02:32 | ಆಯ್ಕೆಗಳ ಪಟ್ಟಿಯೊಂದು ಕಾಣಿಸಿಕೊಳ್ಳುತ್ತದೆ. |
02:35 | ಆದರೆ Indian Rupees ಪಟ್ಟಿಯಲ್ಲಿ ಲಭ್ಯವಿಲ್ಲ. |
02:39 | ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಲಿದ್ದೇವೆ. |
02:45 | ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂಬುದನ್ನು ನಾವೀಗ ಕಲಿಯೋಣ. |
02:50 | ಮೇಲ್ಗಡೆಯ ಮೆನುವಿನಲ್ಲಿ Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:55 | Maintenance ಪ್ಯಾನೆಲ್ನಲ್ಲಿ Currencies ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ. |
03:03 | Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಟೈಪ್ ಮಾಡಿ. |
03:11 | Currency Name ಫೀಲ್ಡ್ ನಲ್ಲಿ 'Indian Rupees' ಟೈಪ್ ಮಾಡಿ. |
03:15 | Hundredths Name ಫೀಲ್ಡ್ ನಲ್ಲಿ ‘Paise’ ಮತ್ತು Country ಫೀಲ್ಡ್ ನಲ್ಲಿ 'India' ಟೈಪ್ ಮಾಡಿ. |
03:23 | ಈಗ ವಿಂಡೋವಿನ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ. |
03:28 | ನಾವೀಗ 'New currency has been added' ಎಂಬ ಸಕ್ಸಸ್ ಮೆಸೇಜ್ ಕಾಣಬಹುದು. |
03:33 | ನಾವೀಗ ಕಂಪನಿ ಸೆಟಪ್ ಪೇಜ್ ಗೆ ಹೋಗೋಣ.
ಇದಕ್ಕಾಗಿ ಮೇಲ್ಗಡೆಯ ಮೆನುವಿನಲ್ಲಿರುವ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:43 | ನಂತರ ಕಂಪನಿಯ ವಿಳಾಸ, |
03:47 | ಡಾಮಿಸೈಲ್ (ನಿವಾಸ), ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು
ಇಲ್ಲಿ ತೋರಿಸಿರುವ ಸಂಬಂಧಿತ ಫೀಲ್ಡ್ ಗಳಲ್ಲಿ ಟೈಪ್ ಮಾಡಿ. |
03:58 | ಈಗ Home Currency ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
04:02 | 'Indian Rupees' ಆರಿಸಿ. |
04:05 | ನಾವೀಗ ಫಿಸ್ಕಲ್ ಯೀಯರ್ ಕುರಿತು ಕಲಿಯಲಿದ್ದೇವೆ. |
04:09 | ಡಿಫಾಲ್ಟ್ ಆಗಿ ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಕ್ಲೋಸ್ಡ್ ಆಗಿ ತೋರಿಸಲಾಗುತ್ತದೆ. |
04:18 | ಈ ಟ್ಯುಟೋರಿಯಲ್ ನ ರೆಕಾರ್ಡಿಂಗ್ ಮಾಡುವ ವೇಲೆ ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ. |
04:24 | ನೀವು ಅಭ್ಯಸಿಸುವಾಗ ಇದು ಬದಲಾಗಬಹುದು. |
04:28 | ದಿನಾಂಕವು MMDDYYYY ನಮೂನೆಯಲ್ಲಿರುವುದನ್ನು ಗಮನಿಸಿ. |
04:35 | ಫಿಸ್ಕಲ್ ಯೀಯರ್ ಎಂದರೇನು? |
04:37 | ಇದು, ಕಂಪನಿಯು ಅಕೌಂಟಿಂಗ್ ಉದ್ದೇಶಗಳು ಮತ್ತು ಹಣಕಾಸು ವಿವರಣಾ ಪಟ್ಟಿಯನ್ನು ತಯಾರಿಸಲು ಬಳಸುವ ಅವಧಿಯಾಗಿದೆ. |
04:47 | ಫಿಸ್ಕಲ್ ಯೀಯರ್ ಸೆಟಪ್
FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಯೀಯರ್ ಅನ್ನು ಸರಿಯಾಗಿ ರೂಪಿಸಬೇಕು. |
04:56 | ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಯೀಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ. |
05:03 | ಇದು ಭಾರತದ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಕ್ತವಲ್ಲ. |
05:08 | ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಯೀಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು. |
05:15 | ಇದು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಗಳ ಪ್ರಕಾರವಾಗಿದೆ. |
05:19 | ನಾವೀಗ FrontAccounting ಇಂಟರ್ಫೇಸ್ ನತ್ತ ಸಾಗೋಣ. |
05:23 | ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಎಂಟ್ರಿಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ. |
05:28 | ನಾವೀಗ Company setup has been updated ಎಂಬ ಸಂದೇಶವನ್ನು ನೋಡಬಹುದು. |
05:33 | ನಾವೀಗ ಫಿಸ್ಕಲ್ ಯೀಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಯೀಯರ್ ಆಗಿ ಬದಲಾಯಿಸಲಿದ್ದೇವೆ. |
05:38 | FrontAccounting ನ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:42 | Fiscal Years ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:45 | ಡಿಫಾಲ್ಟ್ ಆಗಿ ಫಿಸ್ಕಲ್ ಯೀಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ಇರುವುದನ್ನು ನಾವು ಕಾಣಬಹುದು. |
05:55 | ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸಲಿದ್ದೇವೆ. |
06:05 | ಡಮ್ಮಿ ಅವಧಿ ಯಾಕೆ ಬೇಕು? ಇದು ಏಕೆಂದರೆ ಫಿಸ್ಕಲ್ ಯೀಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಯೀಯರ್ ನ ನಡುವಿನ ಅಂತರವನ್ನು ನಾವು ತುಂಬಬೇಕು. |
06:20 | ಈ ಟ್ಯುಟೋರಿಯಲ್ ಅಭ್ಯಸಿಸುವಾಗ ನೀವು ಬೇರೆಯೇ ಹಣಕಾಸು ವರ್ಷದಲ್ಲಿ ಇರಬಹುದು. |
06:25 | ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಂದ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಯೀಯರ್ ಅನ್ನು ರೂಪಿಸಬೇಕು. |
06:33 | ನಿಮ್ಮ ಅರ್ಥೈಸುವಿಕೆಗಾಗಿ ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ. |
06:38 | ಮೊದಲಿಗೆ 01 ಜನವರಿ 2019 ರಿಂದ 31 ಮಾರ್ಚ್ 2019ರ ನಡುವಿನ 3 ತಿಂಗಳ ಡಮ್ಮಿ ಅವಧಿಯನ್ನು ಆರಿಸಿ. |
06:47 | ಈಗ Add New ಬಟನ್ ಮೇಲೆ ಕ್ಲಿಕ್ ಮಾಡಿ. |
06:51 | ಈಗ ಡಮ್ಮಿ ಪೀರಿಯಡ್ ರಚನೆಯಾಗಿದೆ. |
06:53 | “New Fiscal year has been added” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. |
06:58 | ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಯೀಯರ್ ಕಾಣಬಹುದು. |
07:07 | “Is closed” ಆಯ್ಕೆಯನ್ನು“No” ಆಗಿ ಇಡಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ. |
07:15 | ಮತ್ತೊಮ್ಮೆ Add new ಬಟನ್ ಮೇಲೆ ಕ್ಲಿಕ್ ಮಾಡಿ. |
07:19 | ಇಲ್ಲಿ ಫೈನಾನ್ಶಿಯಲ್ ಯೀಯರ್ ರಚನೆಯಾಗಿರುವುದನ್ನು ನೀವು ನೋಡಬಹುದು. |
07:24 | 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಯೀಯರ್ ಮುಚ್ಚಿರುವುದನ್ನು ನಾವು ನೋಡಬಹುದು. |
07:32 | ನಾವು 1ನೇ ಜನವರಿ 2019ರಿಂದ 31ನೇ ಮಾರ್ಚ್ 2019ರ ವರೆಗಿನ ಡಮ್ಮಿ ಅವಧಿಯನ್ನು ರಚಿಸಿದ್ದೇವೆ. |
07:39 | ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ.
Edit icon ಮೇಲೆ ಕ್ಲಿಕ್ ಮಾಡಿ. |
07:46 | Is Closed ಡ್ರಾಪ್ ಡೌನ್ ಮೆನುವಿನಲ್ಲಿ Yes ಆರಿಸಿ. |
07:50 | ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದೆ ಇದ್ದರೆ ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ. |
07:57 | Update ಬಟನ್ ಮೇಲೆ ಕ್ಲಿಕ್ ಮಾಡಿ. |
08:00 | “Selected fiscal year has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. |
08:05 | ಇದೇ ರೀತಿ ನೀವು ಬದಲಾವಣೆಗಳನ್ನು ಮಾಡಲು Edit ಬಟನ್ ಅನ್ನು ಬಳಸಬಹುದು. |
08:10 | (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ.
ಸದ್ಯ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ. |
08:17 | ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ ನಲ್ಲಿ ಪರಿಷ್ಕರಿಸಬೇಕು. |
08:22 | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:28 | Fiscal year ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
08:32 | current Financial Year ಅನ್ನು, active ಆಗಿ ತೋರಿಸಿರುವ 1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2020 ಆಗಿ ಆರಿಸಿ. |
08:41 | ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ. |
08:46 | ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ. |
08:53 | Update ಬಟನ್ ಮೇಲೆ ಕ್ಲಿಕ್ ಮಾಡಿ. |
08:56 | ನಂತರ ನಾವು ಯೂಸರ್ ಅಕೌಂಟ್ ಗಳ ಸೆಟಪ್ ಮಾಡಲಿದ್ದೇವೆ. |
09:00 | ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:03 | User Accounts Setup ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
09:06 | ನಾವು Full Name, Email, Access Level ಮುಂತಾದ
ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು. |
09:15 | ಈ ಮಾಹಿತಿಯನ್ನು ಅಳವಡಿಕೆಯ ಸಂದರ್ಭದಲ್ಲಿ ನಮೂದು ಮಾಡಿದ್ದನ್ನು ನೆನಪಿಸಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ. |
09:22 | ನಾನು ಇಲ್ಲಿ ತೋರಿಸಿರುವಂತೆ ಹೊಸ ಯೂಸರ್ ವಿವರಗಳನ್ನು ಟೈಪ್ ಮಾಡಿದ್ದೆನೆ.
ಇದೇ ರೀತಿ ನಿಮ್ಮ ಹೊಸ ಯೂಸರ್ ವಿವರಗಳನ್ನು ನಮೂದಿಸಿ. |
09:30 | Access Level ಫೀಲ್ಡ್ ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಆರಿಸಿ. |
09:36 | Language ಫೀಲ್ಡ್ನಲ್ಲಿ ಡಿಫಾಲ್ಟ್ ಆಗಿ ಡ್ರಾಪ್ ಡೌನ್ ಮೆನು ಆಯ್ಕೆಯು English ಆಗಿರುತ್ತದೆ. |
09:42 | ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ.
ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಉಳಿಸಿಕೊಳ್ಳುತ್ತೇವೆ. |
09:49 | Printing option ಡ್ರಾಪ್ ಡೌನ್ ಮೆನುವಿನಲ್ಲಿ ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ. |
09:56 | ನಂತರ, ಡಿಫಾಲ್ಟ್ ಆಗಿ ಚೆಕ್ಬಾಕ್ಸ್ ಅನ್ನು reports ಆಯ್ಕೆಗಾಗಿ, popup ವಿಂಡೋಗಾಗಿ ಪರೀಕ್ಷಿಸಲಾಗುತ್ತದೆ. |
10:03 | Add new ಬಟನ್ ಮೇಲೆ ಕ್ಲಿಕ್ ಮಾಡಿ.
ನಾವೀಗ ‘A new user has been addedʼ ಎಂಬ ಸಂದೇಶವನ್ನು ನೋಡಬಹುದು. |
10:10 | ಅಡ್ಮಿನ್ ನ ಕೆಳಗಿನ ಪ್ಯಾನೆಲ್ ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು. |
10:16 | ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
10:20 | ನಂತರ ನಾವು ಆಕ್ಸೆಸ್ ಸೆಟಪ್ ನೋಡೋಣ. |
10:23 | Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಆರಿಸಿ. |
10:28 | Sub Admin ಗೆ ಬಳಸಲು ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು.
ಕೆಳಕ್ಕೆ ಸ್ಕ್ರಾಲ್ ಮಾಡಿ. |
10:35 | Sub Admin ಗೆ ಅನುಮತಿ ಲಭ್ಯವಿರುವುದನ್ನು ನಾವು ನೋಡಬಹುದು. |
10:39 | Sub Admin ಗೆ ಬಳಸಲು ಬೇಕಾದಂತೆ ಬಾಕ್ಸ್ಗಳನ್ನು ಚೆಕ್ ಅಥವಾ ಅನ್ ಚೆಕ್ ಮಾಡಬಹುದು. |
10:46 | Save Role ನಂತರ ಬಟನ್ ಮೇಲೆ ಕ್ಲಿಕ್ ಮಾಡಿ. |
10:49 | “Security role has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. |
10:54 | ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಅನುಮತಿಯನ್ನು ನೀಡಬಹುದು. |
11:01 | ಪುನಃ Setup ಟ್ಯಾಬ್ ಮೇಲೆ ಮತ್ತು Display Setup ಲಿಂಕ್ ಮೇಲೆ ಕ್ಲಿಕ್ ಮಾಡಿ. |
11:07 | Display Setup ಅನ್ನು, ಡೆಸಿಮಲ್ ಪ್ಲೇಸ್ ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸಪರೇಟರ್ ಗಳು ಮತ್ತು ಇತರ ಪ್ಯಾರಾಮೀಟರ್ ಗಳನ್ನು ಬದಲಾಯಿಸಲು ಬಳಸಲಾಗುತ್ತದೆ. |
11:16 | ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ ಗಳಿಗೆ ಡೆಸಿಮಲ್ ಪ್ಲೇಸ್ ಗಳ ಸಂಖ್ಯೆಯನ್ನು ನಾವು ನೋಡಬಹುದು. |
11:27 | ಡ್ರಾಪ್ ಡೌನ್ ಮೆನು ಆರಿಸಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್ ಗಳನ್ನು ಬದಲಾಯಿಸಬಹುದು. |
11:33 | ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸಲಿದ್ದೇವೆ. |
11:41 | ನಾವು ವಿವಿಧ ಮಿಸಲೇನಿಯಸ್ ಸೆಟ್ಟಿಂಗ್ಗಳನ್ನು ಸಹ ನೋಡಬಹುದು. |
11:45 | ಬದಲಾವಣೆಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ. |
11:49 | ನಾವು “Display settings have been updated” ಎಂಬ ಸಂದೇಶವನ್ನು ನೋಡಬಹುದು. |
11:54 | ನಾವೀಗ ಫಿಸ್ಕಲ್ ಯೀಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ.
Setup tab ಗೆ ಹೋಗಿ. |
12:01 | Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
12:06 | ಡೇಟ್ ಫಾರ್ಮ್ಯಾಟ್, DDMMYYYY ಫಾರ್ಮ್ಯಾಟ್ಗೆ ಬದಲಾಗಿರುವುದನ್ನು ನಾವು ನೋಡಬಹುದು. |
12:14 | ಆರಂಭಿಕವಾಗಿ ನಾವು ಫಿಸ್ಕಲ್ ಯೀಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿ. |
12:23 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
12:28 | ಈ ಟ್ಯುಟೋರಿಯಲ್ನಲ್ಲಿ ನಾವು
FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ ಗಳನ್ನು ಕಲಿತೆವು. |
12:36 | ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು, |
12:42 | ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಅನುಮತಿಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಮಾಡಲು ಕಲಿತೆವು. |
12:50 | ಅಸೈನ್ಮೆಂಟ್ ಆಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಿ ಹೊಸ ಯೂಸರ್ ಸೇರಿಸಿ. |
12:55 | ಆಕ್ಸೆಸ್ ಲೆವೆಲ್ ಅನ್ನು ಅಕೌಂಟಂಟ್ ಆಗಿ ನೀಡಿ. |
12:59 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
13:06 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
13:15 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
13:19 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
|
13:24 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |