Difference between revisions of "PHP-and-MySQL/C2/Common-Errors-Part-2/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 !Time !Narration |- |00:00 | ಎರರ್ ಗಳನ್ನು ಕಂಡು ಹಿಡಿದು ಅವುಗಳನ್ನು ಸರಿಪಡಿಸುವುದು ಹ...") |
Sandhya.np14 (Talk | contribs) |
||
Line 142: | Line 142: | ||
|- | |- | ||
|05:12 | |05:12 | ||
− | | ಇದು ಸಾಮಾನ್ಯವಾಗಿ ಕಾಣಿಸದ ಎರರ್ ಗಳನ್ನು ನೋಡಲು ನಮ್ಮನ್ನು ಬಿಡುತ್ತದೆ. ನೀವು ವೆಬ್ಸೈಟ್ ಅನ್ನು ಪ್ರಾರಂಭಿಸುವುದಾದರೆ ಇದನ್ನು ಬಳಸಬಾರದು. ಆದರೆ ಇದು ಟ್ಯುಟೋರಿಯಲ್ ಆಗಿರುವುದರಿಂದ ನೀವು ನೋಡಬೇಕು. |- | + | | ಇದು ಸಾಮಾನ್ಯವಾಗಿ ಕಾಣಿಸದ ಎರರ್ ಗಳನ್ನು ನೋಡಲು ನಮ್ಮನ್ನು ಬಿಡುತ್ತದೆ. ನೀವು ವೆಬ್ಸೈಟ್ ಅನ್ನು ಪ್ರಾರಂಭಿಸುವುದಾದರೆ ಇದನ್ನು ಬಳಸಬಾರದು. ಆದರೆ ಇದು ಟ್ಯುಟೋರಿಯಲ್ ಆಗಿರುವುದರಿಂದ ನೀವು ನೋಡಬೇಕು. |
+ | |- | ||
|05:25 | |05:25 | ||
|ಇದು '''"get post"''' ಎರರ್ ಆಗಿದೆ. | |ಇದು '''"get post"''' ಎರರ್ ಆಗಿದೆ. |
Latest revision as of 15:34, 13 April 2020
Time | Narration |
---|---|
00:00 | ಎರರ್ ಗಳನ್ನು ಕಂಡು ಹಿಡಿದು ಅವುಗಳನ್ನು ಸರಿಪಡಿಸುವುದು ಹೇಗೆ ಎಂದು ತೋರಿಸುವ ಎರರ್ ಟ್ಯುಟೋರಿಯಲ್ ನ ಎರಡನೇ ಭಾಗಕ್ಕೆ ಸ್ವಾಗತ. |
00:08 | ನಾನು ಇದನ್ನು "extrachar ಡಾಟ್ php" ಎಂದು ಕರೆಯುತ್ತೇನೆ. ಈಗ ಇದನ್ನು ರನ್ ಮಾಡೋಣ, ಹಿಂದಿರುಗಿ, "extrachar" ಅನ್ನು ಕ್ಲಿಕ್ ಮಾಡೋಣ, ನಾವು "Parse error in..." ಎಂಬ ಎರರ್ ಆರನೇ ಸಾಲಿನಲ್ಲಿ ಇದೆ ಎಂಬ ಸಂದೇಶವನ್ನು ನೋಡುತ್ತೇವೆ. |
00:23 | ಇಲ್ಲಿ ಏನನ್ನು ನಿರೀಕ್ಷಿಸುತ್ತೇವೆ, ಏನನ್ನು ನಿರೀಕ್ಷಿಸುತ್ತಿಲ್ಲ ಅಥವ ಈ ರೀತಿಯ ಯಾವುದೇ ಮಾಹಿತಿಯನ್ನು ನಮಗೆ ಕೊಡಲಾಗಿಲ್ಲ. |
00:32 | ಈಗ ನಾವು ಆರನೇ ಸಾಲಿಗೆ ಹೋಗೋಣ, ಮೊದಲ ನೋಟಕ್ಕೆ ಇಲ್ಲಿ ಎಲ್ಲವೂ ಸರಿಯಾಗಿಯೇ ಕಾಣುತ್ತಿದೆ. |
00:37 | ಆದರೆ ನಾವು ಇಲ್ಲಿ ಒಂದು ಹೆಚ್ಚುವರಿ ಬ್ರ್ಯಾಕೆಟ್ ಅನ್ನು ಹೊಂದಿದ್ದೇವೆ, ಈಗ ಅದನ್ನು ಅಳಿಸಿದರೆ ಇದು ಕಾರ್ಯನಿರ್ವಹಿಸುವುದನ್ನು ನೀವು ನೋಡಬಹುದು. |
00:44 | ಇದನ್ನು ಹುಡುಕುವುದು ಸ್ವಲ್ಪ ಸುಲಭವಾಗಿದೆ. |
00:47 | ಆದರೆ ನೀವು ಗಣಿತದ ಲೆಕ್ಕಗಳನ್ನು ಮಾಡುವಾಗ, ಉದಾಹರಣೆಗೆ ಸಂಕಲನ, ಹೋಲಿಕೆ ಮುಂತಾವುಗಳನ್ನು ಮಾಡುವಾಗ, ನೀವು ಈ ರೀತಿಯ ಕ್ಲಿಷ್ಟಕರವಾದ ಗಣಿತದ ಲೆಕ್ಕಗಳನ್ನು ಮಾಡುವಾಗ ನೀವು ನಿಮ್ಮ ಬ್ರ್ಯಾಕೆಟ್ ಗಳ ಜಾಡು ಹಿಡಿಯುವುದು ಕಷ್ಟವಾಗಬಹುದು. |
01:09 | ಕೆಲವೊಮ್ಮೆ ಇದನ್ನು ಪರಿಹರಿಸುವುದು ತುಂಬ ಸುಲಭವಾಗಿರುತ್ತದೆ. ನಾವು ಇದನ್ನು ರನ್ ಮಾಡಿದಾಗ, ಇಲ್ಲಿ ಏನೂ ಬರುವುದಿಲ್ಲ ಏಕೆಂದರೆ ಇವೆರಡೂ ಒಂದಕ್ಕೊಂದು ಸಮವಾಗಿಲ್ಲ. |
01:18 | ಇದು ಯಾವುದೇ ಎರರ್ ಅನ್ನು ಕೊಡುವುದಿಲ್ಲ. |
01:20 | ಆದರೆ ನಾನು ಇಲ್ಲಿ ಒಂದು ಹೆಚ್ಚು ಬ್ರ್ಯಾಕೆಟ್ ಅನ್ನು ಹಾಕಿದರೆ, "Parse error" ಬರುವುದು. |
01:28 | ನೀವು ಸಂಕೀರ್ಣವಾದ if ಸ್ಟೇಟ್ಮೆಂಟ್ ಗಳು ಅಥವಾ ಗಣಿತದ ಕ್ರಿಯೆಗಳನ್ನು ಪರಿಹರಿಸುವಾಗ ಬ್ರ್ಯಾಕೆಟ್ ಗಳು ಹೊಂದಿಕೆಯಾಗುತ್ತವೆಯೇ ಎಂದು ಪರೀಕ್ಷಿಸಿ. |
01:36 | ನೀವು ಎಲ್ಲ ಬ್ರ್ಯಾಕೆಟ್ ಗಳನ್ನು ಮತ್ತು ಇನ್ಯಾವುದಾದರೂ ಹೆಚ್ಚಿನ ಅಕ್ಷರಗಳು ಸೇರಿಕೊಂಡಿವೆಯೇ ಎಂದು ಸರಿಯಾಗಿ ಪರೀಕ್ಷಿಸಿ. |
01:48 | ಉದಾಹರಣೆಗೆ ಇದರ ಮುಂದೆ ಒಂದು "a" ಯನ್ನು ಹಾಕಿದರೆ, |
01:52 | ನೀವು ಹಿಂದಿರುಗಿ ನೋಡಿದರೆ ಒಂದು "Parse error" ಎರರ್ ಅನ್ನು ಪಡೆಯುವಿರಿ. |
01:56 | ಈಗ ಇದನ್ನು ಪರಿಹರಿಸೋಣ. Refresh ಮಾಡಿ, ಇನ್ನೂ "Parse error" ಬರುತ್ತಿದೆ. |
02:00 | ಹಾಗಾಗಿ ನೀವು ಏನನ್ನೋ ಟೈಪ್ ಮಾಡಿರಬಹುದು. ಈಗ ಅದನ್ನು ತೆಗೆದುಹಾಕೋಣ. |
02:04 | ಈಗ ನಾನು ನಿಮಗೆ "missing page" ಅನ್ನು ತೋರಿಸುವೆನು. |
02:08 | ಈಗ ಇದರ ಎರರ್ ಗಳನ್ನು ತೋರಿಸುವೆನು. "missing.php" ಯನ್ನು ಕ್ಲಿಕ್ ಮಾಡಿ. ನಾವು ಒಂಬತ್ತನೇ ಸಾಲಿನಲ್ಲಿ Parse error ಗಳಿರುವುದನ್ನು ನೋಡಬಹುದು. |
02:17 | ಕೆಳಕ್ಕೆ ಹೋಗಿ ಒಂಬತ್ತನೇ ಸಾಲು ಎಲ್ಲಿದೆ ಎಂದು ನೋಡೋಣ. ಸೆಮಿಕೋಲನ್. |
02:23 | ಕ್ಷಮಿಸಿ ನಾನು ಇದನ್ನು ಉದ್ದೇಶಿತವಾಗಿ ಮಾಡಿಲ್ಲ. ಇದನ್ನು ಇನ್ನೊಮ್ಮೆ refresh ಮಾಡೋಣ. |
02:28 | ಸರಿ. ನಾವು 18 ನೆಯ ಸಾಲಿನಲ್ಲಿ "Parse error" ಅನ್ನು ಹೊಂದಿದ್ದೇವೆ. |
02:33 | ಈಗ 18 ನೆಯ ಸಾಲಿಗೆ ಹೋಗೋಣ. |
02:37 | ಸರಿ 18 ನೆಯ ಸಾಲು ಇಲ್ಲಿದೆ ಅದನ್ನು ನಾನು ಇಲ್ಲಿ ತೋರಿಸುತ್ತಿದ್ದೇನೆ. |
02:47 | 18 ನೆಯ ಸಾಲಿನಲ್ಲಿ ಏನು ತಪ್ಪಿದೆ? |
02:49 | 18 ಸಾಲಿನಲ್ಲಿ ಖಂಡಿತವಾಗಿಯೂ ಏನೂ ಇಲ್ಲವೇ ಇಲ್ಲ. ಹಾಗಾದರೆ ಎರರ್ ಇರಲು ಹೇಗೆ ಸಾಧ್ಯ? |
02:54 | ಇದಕ್ಕೆ ಕಾರಣ ನಾನು ಮೊದಲೇ ಹೇಳಿದಂತೆ ಇದರ ಸುತ್ತ ಮುತ್ತ ಪರೀಕ್ಷಿಸಬೇಕು. |
03:00 | ಹಾಗಾಗಿ ನಾವು ಕೆಲವು ಸಾಲು ಮೇಲೆ ನೋಡಬೇಕು. ಅಂದರೆ 4 ಅಥವಾ 5 ಸಾಲುಗಳಷ್ಟು ಮೇಲೆ ನೋಡಬೇಕು. |
03:06 | ಇಲ್ಲಿ ನಾವು "if" ಸ್ಟೇಟ್ಮೆಂಟ್ ಅನ್ನು ಹೊಂದಿದ್ದೇವೆ. ಇದರಲ್ಲಿ- "if $postedusername equals (==) 'Alex'", echo "You own PHP Academy" else echo "Hello $name" ಎಂದಿದೆ. |
03:17 | ಇಲ್ಲಿ ನಾವು ಈ "if" ಸ್ಟೇಟ್ಮೆಂಟ್ ಗೆ ಪ್ರಾರಂಭಿಕ ಕರ್ಲಿ ಬ್ರ್ಯಾಕೆಟ್ ಅನ್ನೂ ಮತ್ತು ಕೊನೆಯ ಕರ್ಲಿ ಬ್ರ್ಯಾಕೆಟ್ ಅನ್ನು ಹೊಂದಿದ್ದೇವೆ ಎಂದು ಹೇಳಬಹುದು. |
03:24 | ಹಾಗಾದರೆ ಇದು ಯಾಕೆ ಕಾರ್ಯ ನಿರ್ವಹಿಸುತ್ತಿಲ್ಲ? ಏಕೆಂದರೆ ನಾವು ಇಲ್ಲಿ ಮೇಲೆ ಈಗಾಗಲೇ "if" ಸ್ಟೇಟ್ಮೆಂಟ್ ಅನ್ನು ಪ್ರಾರಂಭಿಸಿದ್ದೇವೆ. |
03:30 | ಇದುವೇ indentation ನ ಪ್ರಾಮುಖ್ಯತೆ ಮತ್ತು ಉದ್ದೇಶವಾಗಿದೆ. |
03:36 | ನನಗೆ ಇದನ್ನು ನನ್ನ ಅನುಭವದಿಂದ ನೋಡಿದಾಗ, ಈ ಬ್ರ್ಯಾಕೆಟ್ ಇಲ್ಲಿ ಇಂಡೆಂಟ್ ಆಗಿದೆ ಎಂದು ತಿಳಿದಿದ್ದೇನೆ, ಈ ಬ್ರ್ಯಾಕೆಟ್ ಇಲ್ಲಿ ಇದೇ ಸಾಲಿನಲ್ಲಿ ಇಂಡೆಂಟ್ ಆಗಬೇಕಾಗಿತ್ತು ಎಂದು ತಿಳಿದಿದ್ದೇನೆ. |
03:45 | ಹಾಗಾಗಿ ಇದು ತಪ್ಪಿ ಹೋಗಿದೆ. ಇದು ಅಲ್ಲಿ ಇದ್ದಿದ್ದರೆ ಮತ್ತು ಅದು ಇಲ್ಲಿ ಇಂಡೆಂಟ್ ಆಗಿದ್ದರೆ, ಆಗ ಮೇಲಿನ "if" ಸ್ಟೇಟ್ಮೆಂಟ್ ನದ್ದಾಗಿದೆ ಎಂದು ತಿಳಿಯುತ್ತಿತ್ತು. ಇದರ ಬ್ಲಾಕ್ ಇಲ್ಲಿ ಪ್ರಾರಂಭವಾಗಿ, ಇಲ್ಲಿ ಮುಗಿಯುತ್ತದೆ. |
03:59 | ಆದರೆ ಇಲ್ಲಿ ಬ್ಲಾಕ್ ಪ್ರಾರಂಭಬಾಗುತ್ತದೆ ಆದರೆ ಕೊನೆಗೊಳ್ಳುವ ಬ್ರ್ಯಾಕೆಟ್ ಇಲ್ಲ. |
04:03 | ನಾನು ಅದನ್ನು ಇಲ್ಲಿ ಹಾಕಿ ರನ್ ಮಾಡುವೆನು. ಈಗ ಇದು ಕಾರ್ಯನಿರ್ವಹಿಸುತ್ತದೆ. |
04:08 | ಹಾಗಾಗಿ ನಿಮ್ಮ ಕೋಡ್ ನಲ್ಲಿ ಅಕ್ಷರಗಳು ತಪ್ಪಿ ಹೋದರೆ ನೀವು ಅಸಂಬದ್ಧವಾದ ಜಾಗದಲ್ಲಿ ಎರರ್ ಗಳನ್ನು ಪಡೆಯುವಿರಿ. |
04:14 | ಆದರೆ ಇದು ಎರರ್ ಗೆ ವಿಲಕ್ಷಣವಾದ ಜಾಗವಲ್ಲ, ಏಕೆಂದರೆ ಇಲ್ಲಿ "else", ಬ್ಲಾಕ್ ನ ಆರಂಭ ಮತ್ತು ಇಲ್ಲಿ ಬ್ಲಾಕ್ ಕೊನೆಯಾಗುತ್ತದೆ. |
04:20 | ನಾವು ಇಲ್ಲಿ ಈ ಬ್ಲಾಕ್ ನ ಕೊನೆಯನ್ನು ನಿರೀಕ್ಷಿಸುತ್ತಿದ್ದೇವೆ ಏಕೆಂದರೆ ಈ ಬ್ಲಾಕ್ ಇಲ್ಲಿ ಬ್ರ್ಯಾಕೆಟ್ ನೊಂದಿಗೆ ಕೊನೆಯಾಗಿಲ್ಲ. |
04:28 | ಇಲ್ಲಿ ಯಾವುದೇ ತಪ್ಪಿಲ್ಲದಿದ್ದರೂ, ನಾವು ಇಲ್ಲಿ ಎರರ್ ಅನ್ನು ಪಡೆಯುತ್ತೇವೆ ಏಕೆಂದರೆ ಇಲ್ಲಿಯೇ ನಾವು ನಮ್ಮ ಬ್ಲಾಕ್ ಅನ್ನು ಕೊನೆಗೊಳಿಸಬೇಕು. |
04:35 | ಈಗ ಇದು ಕಾರ್ಯನಿರ್ವಹಿಸುತ್ತಿದೆ ಅಲ್ಲವೇ? |
04:38 | ಹಾಗಾಗಿ ಒಂದೆರಡು ಸಾಲುಗಳನ್ನು ಮೇಲೆ ಮತ್ತು ಕೆಳಗೆ ನೋಡಿ. ಇಲ್ಲಿ ನೀವು ಕೊನೆ ಇಲ್ಲದಿರುವ else ಅನ್ನೋ, ಅಥವಾ ಯಾವುದಾದರೂ ಅಕ್ಷರತಪ್ಪಿಹೋಗಿದೆಯೋ ಅಥವಾ ಇನ್ಯಾವುದಾದರೂ ಅವಶ್ಯವಿರುವ ಅಂಶಗಳು ತಪ್ಪಿಹೋಗಿದೆಯೋ ಎಂದು ನೋಡಿ. |
04:49 | ಈಗ "getpost dot php" ಪೇಜ್ ಗೆ ಹೋಗೋಣ. |
04:53 | ಇದನ್ನು ವಿವರಿಸಲು ನಾನು error_reporting(E_ All) ಅನ್ನು ಬಳಸಿದ್ದೇನೆ. |
04:58 | ಇದು ಕೇವಲ ವಿವರಣೆ ಮಾಡಲು. ಈ ರೀತಿಯ ಎರರ್ ಗಳು ರಿಪೋರ್ಟ್ ಆಗುತ್ತವೆ. |
05:03 | ಇದರ ಅರ್ಥ "all errors" (ಎಲ್ಲ ಎರರ್ ಗಳು) ಎಂದಲ್ಲ. ಇದು ರಿಪೋರ್ಟ್ ಮಾಡಬಹುದಾದ ಎಲ್ಲಾ ಎರರ್ ಗಳ ಸಮಗ್ರ ಪಟ್ಟಿಯಲ್ಲ. |
05:10 | ಇದು ಕೇವಲ ಈ ಫಂಕ್ಷನ್ ಗೆ ಪ್ಯಾರಾಮೀಟರ್ ಆಗಿದೆ. |
05:12 | ಇದು ಸಾಮಾನ್ಯವಾಗಿ ಕಾಣಿಸದ ಎರರ್ ಗಳನ್ನು ನೋಡಲು ನಮ್ಮನ್ನು ಬಿಡುತ್ತದೆ. ನೀವು ವೆಬ್ಸೈಟ್ ಅನ್ನು ಪ್ರಾರಂಭಿಸುವುದಾದರೆ ಇದನ್ನು ಬಳಸಬಾರದು. ಆದರೆ ಇದು ಟ್ಯುಟೋರಿಯಲ್ ಆಗಿರುವುದರಿಂದ ನೀವು ನೋಡಬೇಕು. |
05:25 | ಇದು "get post" ಎರರ್ ಆಗಿದೆ. |
05:28 | ಈಗ ಇಲ್ಲಿಗೆ ಹೋಗೋಣ. ನಾವು "data" ಎಂಬ ವೇರಿಯೇಬಲ್ ಅನ್ನು ಹೊಂದಿದ್ದೇವೆ. |
05:33 | ಇದು "name" ಎನ್ನುವ GET ವೇರಿಯೇಬಲ್ ಆಗಿದೆ. |
05:38 | ನಮ್ಮ ಕೋಡ್ : ಈ data ವೇರಿಯೇಬಲ್ ಅಸ್ತಿತ್ವದಲ್ಲಿದ್ದರೆ ಆಗ, echo $data ಎಂದು ಹೇಳುತ್ತದೆ. ಇದು ತುಂಬ ಸಹಜ ಪ್ರೋಗ್ರಾಂ ನಂತೆ ಕಾಣಿಸುತ್ತದೆ. |
05:47 | ಇಲ್ಲಿ ನಿಜವಾಗಿಯೂ ಎರರ್ ಇಲ್ಲ. |
05:49 | ಇಲ್ಲಿ ನಾವು ವೇರಿಯೇಬಲ್ ಅನ್ನು ತೆಗೆದುಕೊಂಡಿದ್ದೇವೆ ಮತ್ತು ಎಲ್ಲವೂ ಕಾರ್ಯನಿರ್ವಹಿಸುತ್ತಿದೆ, ಇಲ್ಲಿ ಯಾವುದೆ 'ಲೈನ್ ಬ್ರೇಕ್ ಎರರ್' ಇಲ್ಲ ಮತ್ತು 'ಲೈನ್ ಟರ್ಮಿನೇಟಿಂಗ್ ಎರರ್' ಕೂಡ ಇಲ್ಲ. |
06:07 | ನಾವು ಏನನ್ನೂ ಬಿಟ್ಟಿಲ್ಲ ಮತ್ತು ನಾವು ಇಲ್ಲಿ ಇನ್ನೇನನ್ನೂ ಇಡಬೇಕಿಲ್ಲ. |
06:15 | ಆದರೂ ಈ ಪೇಜ್ ಅನ್ನು ರನ್ ಮಾಡಿದಾಗ ನಾವು ಒಂದು ಸೂಚನೆ ಕಾಣುತ್ತದೆ. |
06:18 | ಇದು ನಾವು ಮೊದಲು ನೋಡಿದ "Parse error" ಅಲ್ಲ. ಇದು ಒಂದು Notice ಆಗಿದೆ. |
06:27 | ಈ ಎರರ್ ಇದ್ದಾಗ ಈ ಪೇಜ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. |
06:33 | ಈಗ ನಾನು ನಿಮಗೆ ತೋರಿಸುವೆನು -ಇಲ್ಲಿ "name equals alex" ಎಂದು ಟೈಪ್ ಮಾಡುವೆನು ಮತ್ತು ಈ ಎರರ್ ಕಾಣೆಯಾಗುವುದು. |
06:41 | ಇದು ನಮ್ಮ ಕೋಡ್ ನಲ್ಲಿ ಏನೂ ತಪ್ಪಿಲ್ಲ ಎಂದು ತೋರಿಸುತ್ತದೆ. ಆದರೆ ತೊಂದರೆ ಇದ್ದದ್ದು ಮೊದಲನೆ ಸ್ಥಾನದಲ್ಲಿ, ಅಂದರೆ ಈ data ಎನ್ನುವ ವೇರಿಯೇಬಲ್ ಕಂಡಿಷನ್ ಅನ್ನು ಪೂರೈಸುತ್ತಿಲ್ಲ. |
06:51 | ಇದು "data equals absolutely nothing" ಎಂಬುದಕ್ಕೆ ಸಮನಾಗಿದೆ. |
06:58 | ಇಲ್ಲಿ ನಾನು echo ವೇರಿಯೇಬಲ್ alex ಎಂದು ಟೈಪ್ ಮಾಡುವೆನು ಮತ್ತು ಇದು 5 ನೆಯ ಸಾಲಿನಲ್ಲಿದೆ. |
07:05 | ಈಗ refresh ಮಾಡೋಣ. "Undefined variable alex, Undefined index name" ಎಂದು ಬರುತ್ತದೆ. |
07:11 | ಈಗ ನಾನು ಏನು ಮಾಡವುನೆಂದರೆ, ಮೊದಲಿನಿಂದಲೇ ಪ್ರಾರಂಭಿಸೋಣ. |
07:19 | header ನಲ್ಲಿ ನೇಮ್ ಅನ್ನು ಸೂಚಿಸದೇ ಇದ್ದರೆ, ಇದು ಪೂರ್ಣಗೊಳ್ಳುವುದಿಲ್ಲ. |
07:23 | ಹಾಗಾಗಿ ಡಾಟಾ "ನಲ್" ಆಗಿರುವುದು. ಮತ್ತು ನಾವು ಡಿಫೈನ್ ಆಗದೇ ಇರುವ ವೇರಿಯೇಬಲ್ ಅನ್ನು ಎಕೋ ಮಾಡಿದಾಗ "Undefined variable" ಎಂಬ ಎರರ್ ನಂತೆ, "Undefined index" ಎಂಬ ಎರರ್ ಅನ್ನು ಪಡೆಯುವೆವು. |
07:35 | ಹಾಗಾಗಿ ನಾವು ಇಲ್ಲಿ ಡಾಟಾವನ್ನು ಕೊಡುತ್ತಿದ್ದಂತೆಯೇ ಎರರ್ ಮಾಯವಾಗುವುದು. |
07:39 | refresh ಮಾಡೋಣ. |
07:41 | ನೀವು ಈ ಪ್ರಾರಂಭಿಕ ಎರರ್ ನಿಂದ ತಪ್ಪಿಸಿಕೊಳ್ಳಲು ಬಯಸುವುದಾದರೆ, ನೀವು ಮಧ್ಯದಲ್ಲಿ ಅಥವ ಈ ಸಾಲಿನ ಪ್ರಾರಂಭದಲ್ಲಿ ಒಂದು "@ (at)" ಚಿಹ್ನೆಯನ್ನು ಹಾಕಬೇಕು. |
07:50 | ನಾವು refresh ಮಾಡಿದಾಗ, ನಾವು ಏನನ್ನು ಪಡೆಯುವುದಿಲ್ಲ ಏಕೆಂದರೆ, ಯಾವುದೇ ಎರರ್ ಇಲ್ಲ. |
07:55 | get ವೇರಿಯೇಬಲ್ ಸೆಟ್ ಆಗಿಲ್ಲ. ನಾವು "name equals alex" ಎಂದು ಟೈಪ್ ಮಾಡಿದ ತಕ್ಷಣ ಕೋಡ್ ನಲ್ಲಿ ಸೂಚಿಸಿದಂತೆ name ಎಕೋ ಆಗುವುದು. |
08:04 | ನೀವು if data ಅಸ್ತಿತ್ವದಲ್ಲಿದೆಯೇ ಎಂದು ಪರೀಕ್ಷಿಸಿದರೂ, ಇಲ್ಲಿ ಏನನ್ನೂ ಟೈಪ್ ಮಾಡದಿದ್ದರೆ ಇದು ತಾಂತ್ರಿಕವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಹಾಗಾಗಿ ಅವುಗಳನ್ನು ನೋಡುತ್ತದೆ. |
08:14 | ಈಗ ಇಲ್ಲಿಗೆ ಮುಗಿಸೋಣ. ಮುಂದಿನ ಭಾಗದಲ್ಲಿ ಮುಂದಿನ ಎರಡು ಸಾಮಾನ್ಯ ಎರರ್ ಗಳ ಕುರಿತು ನೋಡೋಣ, ಮತ್ತೆ ಸಿಗೋಣ. |
08:20 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |