Difference between revisions of "PHP-and-MySQL/C2/Embedding-PHP/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 |ಇದೊಂದು ಎಚ್.ಟಿ.ಎಮ್.ಎಲ್ ಕೋಡ್ ನೊಳಗೆ ಪಿ.ಎಚ್.ಪಿ ಕೋಡ್...")
 
(No difference)

Latest revision as of 12:58, 13 April 2020

Time Narration
00:00 ಇದೊಂದು ಎಚ್.ಟಿ.ಎಮ್.ಎಲ್ ಕೋಡ್ ನೊಳಗೆ ಪಿ.ಎಚ್.ಪಿ ಕೋಡ್ ಅನ್ನು ಸೇರಿಸುವುದನ್ನು ಕಲಿಸುವ ಚಿಕ್ಕ ಟ್ಯುಟೋರಿಯಲ್ ಆಗಿದೆ. ಇದು ಅನೇಕ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ.
00:14 ಉದಾಹರಣೆಗೆ , ನಾನು ಪಿ.ಎಚ್.ಪಿ ಟ್ಯಾಗ್ ಗಳನ್ನು ರಚಿಸಿ, ನನ್ನ ಹೆಸರನ್ನು ಇಲ್ಲಿ ಎಕೋ ಮಾಡುಬೇಕು ಎಂದುಕೊಳ್ಳೋಣ.
00:23 ಈ ಫೈಲ್ ಅನ್ನು ಕ್ಲಿಕ್ ಮಾಡಿ, ಇದನ್ನು ರನ್ ಮಾಡಿದರೆ ನಾವು "Alex" ಎಂದು ಪಡೆಯುತ್ತೇವೆ.
00:30 ಈಗ ಉದಾಹರಣೆಗೆ, ಇದರ ಒಳಗೆ ನಾನು ಎಚ್.ಟಿ.ಎಮ್.ಎಲ್. ಕೋಡ್ ಅನ್ನು ಸೇರಿಸಬಹುದು ಮತ್ತು"Alex" ಅನ್ನು ದಪ್ಪ (ಬೋಲ್ಡ್) ಅಕ್ಷರದಲ್ಲಿ echo ಮಾಡಬಹುದು.
00:38 ನಾನು ಇದನ್ನು ಇನ್ನೊಂದು ರೀತಿಯಲ್ಲಿ ಕೂಡ ಮಾಡಬಹುದು.
00:45 ಈಗ ಇನ್ನೊಮ್ಮೆ ಆರಂಭಿಸೋಣ. ಒಂದು ಎಚ್.ಟಿ.ಎಮ್.ಎಲ್ ಪೇಜ್ ಅನ್ನು ರಚಿಸೋಣ. ನಾನು ಈ ಉದಾಹರಣೆಯನ್ನು ಬಳಸುವೆನು.
00:52 ನಾನು ಇಲ್ಲಿ Php ಯ ಟ್ಯಾಗ್ ಅನ್ನು ಇಲ್ಲಿ ಸೇರಿಸುವೆನು. ಅದರಲ್ಲಿ "Alex" ಎಂದು echo ಮಾಡುವೆನು ನಂತರ Php tag ಗೂ ಮೊದಲು ನಾನು bold() ಅನ್ನೂ, Php tag ನ ನಂತರ bold end() ಅನ್ನೂ ಸೇರಿಸುವೆನು.
01:13 ಇದು ಅದೇ ಫಲಿತಾಂಶವನ್ನು ಕೊಡುತ್ತದೆ. ನಾನು ಪೇಜ್ ಅನ್ನು ರಿಫ್ರೆಶ್ ಮಾಡಿದರೂ ಎನೂ ಬದಲಾವಣೆಯಾಗಿಲ್ಲ.
01:20 ಹಾಗಾಗಿ ನಾವು ಇದನ್ನು underline ಎಂದು ಬದಲಿಸಿ "Alex" ಎಂಬ ಪದಕ್ಕೆ ಅಡಿಗೆರೆ ಬಂದಿರುವುದನ್ನು ನೋಡಬಹುದು.
01:26 ನೀವು ಇವೆರಡು ವಿಧಾನಗಳಲ್ಲಿ ಯಾವುದನ್ನಾದರೂ ಬಳಸಬಹುದು. echo' ಸ್ಟೇಟ್ಮೆಂಟ್ ನ ಒಳಗೆ HTML code ಅನ್ನು ಬಳಸುವುದು ನಿಮ್ಮ ನಿರ್ಧಾರವಾಗಿದೆ. ಆದರೆ ಇದು ಇನ್ನೂ ಹೆಚ್ಚು ಉಪಯೋಗಗಳನ್ನು ಹೊಂದಿದೆ.
01:39 ನಿಮಗೆ ಎಚ್.ಟಿ.ಎಮ್.ಎಲ್. ಗೊತ್ತಿದ್ದರೆ, input tag- ಇದೊಂದು ಟೆಂಪ್ಲೇಟ್ ಟ್ಯಾಗ್ ಆಗಿರುತ್ತದೆ ಎಂದು ನೀವು ತಿಳಿದಿರುತ್ತೀರಿ.
01:48 ಹಾಗಾಗಿ, ಈಗ ಇದನ್ನು 'text' ಎಂದೂ, name ಅನ್ನು 'name' ಎಂದೂ ಮತ್ತು value ವನ್ನು'Alex' ಎಂದೂ ಟೈಪ್ ಮಾಡೋಣ.
01:56 ಇದನ್ನು refresh ಮಾಡೋಣ. ಮತ್ತು ಇಲ್ಲಿ , ಒಳಗೆ "Alex" ಎಂದು ಇರುವ ಒಂದು text box ಅನ್ನು ಪಡೆದಿದ್ದೇವೆ. ಈಗ ನಾನು get ವೇರಿಯೇಬಲ್ ಹೆಡರ್ ಅನ್ನು ಥಟ್ಟನೆ ತೆಗೆದುಕೊಳ್ಳಲು Php ಯನ್ನು ಬಳಸಲು ಬಯಸುವೆನು. ಮತ್ತು ಈ ವ್ಯಾಲ್ಯುವಿನಲ್ಲಿ ನಮ್ಮ ಇನ್ಪುಟ್ ವ್ಯಾಲ್ಯುವನ್ನು ಇಡಲು ಬಯಸುವೆನು.
02:14 ಇದು ಫಾರ್ಮ್ ಅನ್ನು ಸಲ್ಲಿಸುವಾಗ ಮತ್ತು ಎರರ್ ಅನ್ನು ಪರೀಕ್ಷಿಸುವ ಸಂದರ್ಭಗಳಲ್ಲಿ ತುಂಬಾ ಉಪಯುಕ್ತವಾಗಿದೆ. ಇವೆರಡೂ ಸಂದರ್ಭದಲ್ಲೂ ನಾವು ಪೋಸ್ಟ್ ಮಾಡಿದ ವೇರಿಯೇಬಲ್ ಗಳು ಪ್ರತಿ ಟೆಕ್ಸ್ಟ್ ಬಾಕ್ಸ್ ನಲ್ಲಿ ಹಾಗೆ ಇರಲು ಬಯಸುತ್ತೇವೆ.
02:30 ನೀವು ಈಗಾಗಲೇ GET ಟ್ಯುಟೋರಿಯಲ್ ಅನ್ನು ನೋಡದೇ ಇದ್ದಲ್ಲಿ, ಅದನ್ನು ನೋಡಿ.
02:38 ಈಗ ಇದನ್ನು ಎರಡು ಸಾಲುಗಳಷ್ಟು ಕೆಳಕ್ಕೆ ತನ್ನಿ, ಖಂಡಿತವಾಗಿಯೂ ನಾವು ಈಗಲೂ ಈ ಕೋಡ್ ಅನ್ನು ರನ್ ಮಾಡಬಹುದು ಏಕೆಂದರೆ ಇದು ಬೇರೆ ಸಾಲಿನಲ್ಲಿಯೂ ಹಾಗೆ ಕಾರ್ಯ ನಿರ್ವಹಿಸುತ್ತದೆ.
02:48 ಹಾಗಾಗಿ ನೀವು ಇಲ್ಲಿ ಅದರಂತೆಯೇ ಔಟ್ಪುಟ್ ಅನ್ನು ನೋಡುವಿರಿ, ಇನ್ನು ಸ್ವಲ್ಪ ಕೆಳಕ್ಕೆ ತರಬೇಕು ಏಕೆಂದರೆ ಇಲ್ಲಿ ನಾನು Php text ಅನ್ನು ಬರೆಯುವೆನು.
02:58 ಇದು ಕಂದು ಬಣ್ಣದಲ್ಲಿ ಕಾಣುತ್ತದೆ ಏಕೆಂದರೆ ನಾವು ಇಲ್ಲಿ ಪಿ.ಎಚ್.ಪಿ ಹೈಲೈಟಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಮತ್ತು ಇದು ಈ ರೀತಿಯಾದ ಹೈಲೈಟಿಂಗ್ ಅನ್ನು ಗುರುತಿಸುವುದಿಲ್ಲ.
03:08 ಸರಿ ನಾನು ಇಲ್ಲಿ "Alex" ಎಂದು echo ಮಾಡಲು ಹೊರಟಿರುವೆನು.
03:12 ಇದು ಒಂದು ಸಾಲಿನಲ್ಲಿ ಕಾರ್ಯ ನಿರ್ವಹಿಸುವುದರಿಂದ, ಇವುಗಳನ್ನೆಲ್ಲ ಮೇಲೆ ಒಂದೇ ಸಾಲಿಗೆ ತನ್ನಿ. ಈಗ ನಾನು ಇದನ್ನು ಇದರೊಳಗೆ ಸೇರಿಸಿದ್ದೇನೆ(ಎಂಬೆಡ್ ಮಾಡಿದ್ದೇನೆ). ಈಗ ನಿಮ್ಮ ಎಂಬೆಡಿಂಗ್ ಇಲ್ಲಿ ಮುಗಿದಿದೆ.
03:25 ಇದನ್ನು ರಿಫ್ರೆಷ್ ಮಾಡಿದಾಗ "Alex" ಎಂಬ ವ್ಯಾಲ್ಯುವನ್ನು ಪಡೆಯುವೆವು. ಈಗ ನಾವು ಎಚ್.ಟಿ.ಎಮ್.ಎಲ್ ವ್ಯಾಲ್ಯುವಿನಲ್ಲಿ ಪಿ.ಎಚ್.ಪಿ. ಯನ್ನು ಎಕೋ ಮಾಡಿದ್ದೇವೆ.
03:35 ಹಾಗಾಗಿ ನಾವು ಇಲ್ಲಿ ನಮ್ಮ value ವಿನೊಳಗೆ, Php code ಅನ್ನು ಬಳಸುವೆನು.
03:40 ಈಗ ಡಾಲರ್ ($) ಅಂಡರ್ಸ್ಕೋರ್ (_) GET ಎಂದು ಟೈಪ್ ಮಾಡಿ, ಸಿಂಗಲ್ ಕೋಟ್ ಅನ್ನು ಬಳಸುವುದನ್ನು ನೆನಪಿಡಿ.
03:50 ನಾನು ಇಲ್ಲಿ 'name' ಎಂದು ಟೈಪ್ ಮಾಡಿ ನಂತರ refresh ಮಾಡುವೆನು.
03:55 ಇಲ್ಲಿ ಏನೂ ಆಗಿಲ್ಲ. ಹಾಗಾಗಿ ಇಲ್ಲಿ name=alex ಎಂದು ಟೈಪ್ ಮಾಡಿ, ಇದು ಅದರೊಳಗೆ "alex" ಎಂದು ಕೊಡುತ್ತದೆ.
04:04 ಇಲ್ಲಿ name=kyle ಎಂದು ಟೈಪ್ ಮಾಡಿ, ಇದು ಅದರೊಳಗೆ "kyle" ಎಂದು ಕೊಡುತ್ತದೆ.
04:11 ನೀವು ನಿಮಗೆ ಬೇಕಾದ ಪಿ.ಎಚ್.ಪಿ. ಕೋಡ್ ಅನ್ನು ಅದರಲ್ಲಿ ಎಂಬೆಡ್ ಮಾಡಬಹುದು.
04:16 echo Php info() ಎಂದು ಟೈಪ್ ಮಾಡಿ ಪ್ರಯತ್ನಿಸಿ ಮತ್ತು ನೀವು ಮೋಜಿನ ಫಲಿತಾಂಶವನ್ನು ಪಡೆಯುವಿರಿ.
04:28 ಇದು Php info ಡಾಕ್ಯುಮೆಂಟ್ ನ ಎಚ್.ಟಿ.ಎಂ.ಎಲ್ ಕೋಡ್ ಆಗಿದೆ.
04:33 ನೀವು ಇಲ್ಲಿ ಬಹಳಷ್ಟು ದೊಡ್ಡ ಕೋಡ್ ಇರುವುದನ್ನು ನೋಡಬಹುದು.
04:37 ಇಲ್ಲಿ ನಾವು ಒಳಗಡೆ ಪಿ.ಎಚ್.ಪಿ. ಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ನೀವು ಸಿಂಗಲ್ ಕೋಟ್ ಮತ್ತು ಡಬಲ್ ಕೋಟ್ ಗಳ ಬಗ್ಗೆ ಗಮನವಹಿಸಬೇಕು.
04:46 ಇದು embedding Php code inside HTML code ನ ಕುರಿತು ಒಂದು ಚಿಕ್ಕ ಟ್ಯುಟೋರಿಯಲ್ ಆಗಿತ್ತು.
04:53 ನಾನು ಇದು ಉಪಯುಕ್ತವಾಗಿದೆ ಎಂದುಕೊಳ್ಳುವೆನು. ಧನ್ಯವಾದಗಳು.
04:56 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14