Difference between revisions of "LibreOffice-Suite-Base/C2/Modify-a-Report/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 ||'''Time''' || '''Narration''' |- ||00:02 || ‘ಲಿಬರ್ ಆಫೀಸ್ ಬೇಸ್’ ನ ಸ್ಪೋಕನ್-ಟ್ಯುಟೋರಿಯಲ್ ಗ...") |
Sandhya.np14 (Talk | contribs) |
||
Line 330: | Line 330: | ||
|- | |- | ||
||09:48 | ||09:48 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Revision as of 16:26, 8 April 2020
Time | Narration |
00:02 | ‘ಲಿಬರ್ ಆಫೀಸ್ ಬೇಸ್’ ನ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ರಿಪೋರ್ಟ್ ನ ಲೇಔಟ್, ಅದು ಇರುವ ಹಾಗೂ ಕಾಣುವ ಬಗೆಯನ್ನು ಕಸ್ಟಮೈಸ್ ಮಾಡಿ ಅದನ್ನು ಮಾರ್ಪಡಿಸಲು ಕಲಿಯಲಿದ್ದೇವೆ. |
00:16 | ಇದಕ್ಕಾಗಿ ನಾವು, ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್ ನ ಉದಾಹರಣೆಯನ್ನು ತೆಗೆದುಕೊಳ್ಳೋಣ. |
00:23 | ಕಳೆದ ಟ್ಯುಟೋರಿಯಲ್ ನಲ್ಲಿ, ನಾವು ರಿಪೋರ್ಟ್ ಅನ್ನು ತಯಾರಿಸಲು ಕಲಿತೆವು. |
00:28 | ಹಾಗೂ ‘Books Issued to Members: Report History’ ಎಂಬ ರಿಪೋರ್ಟ್ ಅನ್ನು ತಯಾರಿಸಿದೆವು. ನಾವೀಗ ಈ ರಿಪೋರ್ಟ್ ಅನ್ನು ಮಾರ್ಪಡಿಸಲು ಕಲಿಯುವೆವು. |
00:40 | 'Library' ಡೇಟಾಬೇಸ್ ನಲ್ಲಿ, |
00:42 | ಎಡ ಪ್ಯಾನಲ್ ನಲ್ಲಿ, ‘Reports’ ಐಕಾನ್ ಮೇಲೆ ನಾವು ಕ್ಲಿಕ್ ಮಾಡೋಣ. |
00:47 | ಬಲ ಪ್ಯಾನೆಲ್ ನಲ್ಲಿ, ‘Reports’ ಲಿಸ್ಟ್ ನಲ್ಲಿ ನಾವು ‘Books Issued to Members: Report History’ ಎಂಬ ರಿಪೋರ್ಟ್ ಅನ್ನು ಕಾಣಬಹುದು. |
00:57 | ಇದರ ಮೇಲೆ ರೈಟ್ ಕ್ಲಿಕ್ ಮಾಡೋಣ. ರಿಪೋರ್ಟ್ ಅನ್ನು ಮಾರ್ಪಡಿಸಲು ಅಥವಾ ಎಡಿಟ್ ಮಾಡಲು ಅದನ್ನು ತೆರೆಯುವುದಕ್ಕಾಗಿ ‘Edit’ ಮೇಲೆ ಕ್ಲಿಕ್ ಮಾಡೋಣ. |
01:08 | ನಾವೀಗ ‘Report Builder’ ಎಂಬ ಒಂದು ಹೊಸ ವಿಂಡೋವನ್ನು ನೋಡುತ್ತೇವೆ. |
01:14 | ಈ ಸ್ಕ್ರೀನ್, ಮೂರು ಮುಖ್ಯ ವಿಭಾಗಗಳನ್ನು ಹೊಂದಿದೆ. |
01:19 | ಪೇಜ್-ಹೆಡರ್ ಮತ್ತು ಫೂಟರ್ ವಿಭಾಗಗಳು ಕ್ರಮವಾಗಿ ಮೇಲ್ತುದಿಯಲ್ಲಿ ಮತ್ತು ಕೆಳಭಾಗದಲ್ಲಿ ಬರುತ್ತವೆ. |
01:26 | ಜೊತೆಗೆ ಹೆಡರ್ ವಿಭಾಗ |
01:29 | ಹಾಗೂ ಡಿಟೇಲ್ ವಿಭಾಗಗಳನ್ನು ಕಾಣಬಹುದು. |
01:34 | ಮೇನ್ ಸ್ಕ್ರೀನ್ ಮೇಲೆ ಬಿಳಿ ಭಾಗದಲ್ಲಿ ರೈಟ್-ಕ್ಲಿಕ್ ಮಾಡಿ, |
01:40 | ಮತ್ತು ‘Insert Report Header/Footer’ ಮೇಲೆ ಕ್ಲಿಕ್ ಮಾಡುವ ಮೂಲಕ ನಾವು ರೆಕಾರ್ಡ್ ಹೆಡರ್ ಮತ್ತು ಫೂಟರ್ ವಿಭಾಗಗಳನ್ನು ಸೇರಿಸಬಹುದು. |
01:51 | ಸ್ಕ್ರೀನ್ ನ ಎಡಭಾಗದಲ್ಲಿ, ಕಿತ್ತಳೆ ಬಣ್ಣದ ಜಾಗದ ಮೇಲೆ ಡಬಲ್-ಕ್ಲಿಕ್ ಮಾಡಿ ನಾವು ಈ ವಿಭಾಗಗಳನ್ನು ಚಿಕ್ಕದು ಅಥವಾ ದೊಡ್ಡದು ಮಾಡಬಹುದು. |
02:00 | ಮುಂದುವರಿಯುವ ಮೊದಲು, ಇಲ್ಲಿರುವ ರಿಪೋರ್ಟ್ ಡಿಸೈನ್ ವಿಂಡೋದ ಸ್ಕ್ರೀನ್-ಶಾಟ್ ಅನ್ನು ನೋಡೋಣ. |
02:06 | ನಮ್ಮ ರಿಪೋರ್ಟ್ ಡಿಸೈನ್ ಈ ರೀತಿ ಕಾಣುವಂತೆ ನಾವು ಅದನ್ನು ಮಾರ್ಪಡಿಸುವೆವು. |
02:11 | ಕೆಲವು ಟೆಕ್ಸ್ಟ್-ಲೇಬಲ್ ಗಳು, ಫಾಂಟ್ ಗಳು, ಫಾರ್ಮಾಟಿಂಗ್ ಅನ್ನು ನಾವು ಸೇರಿಸುವೆವು ಮತ್ತು ವಿವಿಧ ವಿಭಾಗ ಗಳ ನಡುವಿನ ಅಂತರವನ್ನು ಹೊಂದಿಸುವೆವು. |
02:20 | ಸರಿ, ನಾವೀಗ ಕೆಲವು ರಿಪೋರ್ಟ್ ಹೆಡರ್ ಗಳು ಮತ್ತು ಫೂಟರ್ ಗಳನ್ನು ಸೇರಿಸೋಣ. |
02:27 | ಇದನ್ನು ಮಾಡಲು, ಮೇಲ್ತುದಿಯ ಮೆನು-ಬಾರ್ ಕೆಳಗೆ ಇರುವ |
02:31 | “Report Controls” ಟೂಲ್ ಬಾರ್ ನಲ್ಲಿ, “Label Field “ ಐಕಾನ್ ಮೇಲೆ ಕ್ಲಿಕ್ ಮಾಡೋಣ. |
02:40 | ಈಗ ತೋರಿಸಿರುವಂತೆ ಇದನ್ನು Report Header ಜಾಗದ ಮೇಲೆ ಎಳೆಯೋಣ |
02:48 | ಮತ್ತು ಇದರ ಪ್ರಾಪರ್ಟಿಗಳನ್ನು ಬಲಕ್ಕೆ ತರಲು Label ಮೇಲೆ ಡಬಲ್-ಕ್ಲಿಕ್ ಮಾಡೋಣ. |
02:55 | ಇಲ್ಲಿ, ‘Label ‘ಗಾಗಿ "Books Issued to Members: |
03:00 | Report History" ಎಂದು ಟೈಪ್ ಮಾಡಿ ‘Enter’ ಅನ್ನು ಒತ್ತೋಣ. |
03:07 | ಫಾಂಟ್ ಶೈಲಿಯನ್ನು ಸಹ ನಾವು ಬದಲಾಯಿಸೋಣ; ‘Arial Black, Bold’ ಮತ್ತು ‘Size 12’ ಅನ್ನು ನಾವು ಆಯ್ಕೆಮಾಡಿ |
03:17 | OK ಬಟನ್ ಮೇಲೆ ಕ್ಲಿಕ್ ಮಾಡೋಣ. |
03:21 | ನಂತರ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ, ‘Report Footer’ ಗೆ ಇನ್ನೊಂದು ಲೇಬಲ್ ಸೇರಿಸೋಣ. <pause> |
03:31 | ಉದಾಹರಣೆಗೆ, ಈ ರೀತಿ ಟೈಪ್ ಮಾಡೋಣ: "Report Prepared by Assistant Librarian" <pause> |
03:42 | ಮತ್ತು ಫಾಂಟ್ ಶೈಲಿಯನ್ನು ‘Arial, Bold, Italic’ ಮತ್ತು ‘Size 8’ ಎಂದು ಬದಲಾಯಿಸೋಣ. <pause> |
03:51 | ಈಗ, ‘Page Footer’ ಜಾಗದಲ್ಲಿ ಒಂದು ಲೇಬಲ್ ಅನ್ನು ಸೇರಿಸಲು ಇದೇ ಹಂತಗಳನ್ನು ಪುನರಾವರ್ತಿಸೋಣ. <pause> |
03:59 | ಈ ಬಾರಿ, ಲೇಬಲ್ ಗಾಗಿ ನಾವು : "Nehru Library, New Delhi" ಎಂದು ಟೈಪ್ ಮಾಡುವೆವು. |
04:09 | ಫಾಂಟ್ ಶೈಲಿಯನ್ನು ‘Arial, Bold, Italic’ ಮತ್ತು ‘Size 8’ ಎಂದು ಬದಲಾಯಿಸುವೆವು. <pause> |
04:20 | ನಾವೀಗ ಇವುಗಳ ಜಾಗವನ್ನು ಹೊಂದಿಸೋಣ. |
04:24 | ಮೊದಲಿಗೆ, ಪೇಜ್-ಹೆಡರ್ ಮತ್ತು ರಿಪೋರ್ಟ್-ಹೆಡರ್ ನಡುವಿನ ಬೂದು ಬಣ್ಣದ ಗೆರೆಯ ಮೇಲೆ ಡಬಲ್- ಕ್ಲಿಕ್ ಮಾಡಿ, ಪೇಜ್-ಹೆಡರ್ ಸ್ಥಳವನ್ನು ಕಡಿಮೆ ಮಾಡೋಣ. |
04:37 | ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ವಿಧಾನವನ್ನು ಬಳಸಿ, ನಾವು ಇದನ್ನು ಮೇಲ್ತುದಿಗೆ ಸರಿಸುವೆವು. |
04:47 | ನಂತರ, ರಿಪೋರ್ಟ್-ಹೆಡರ್ ಮತ್ತು ಹೆಡರ್ ನಡುವಿನ ಬೂದು ಬಣ್ಣದ ಗೆರೆಯ ಮೇಲೆ |
04:52 | ಡಬಲ್-ಕ್ಲಿಕ್ ಮಾಡಿ, ರಿಪೋರ್ಟ್-ಹೆಡರ್ ಸ್ಥಳವನ್ನು ಕಡಿಮೆ ಮಾಡೋಣ. <pause> |
05:01 | ರಿಪೋರ್ಟ್-ಫೂಟರ್ ಮತ್ತು ಪೇಜ್-ಫೂಟರ್ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹ ಇದೇ ಹಂತಗಳನ್ನು ಪುನರಾವರ್ತಿಸುವೆವು. <pause> |
05:13 | ನಂತರ, ಹೆಡರ್ ಲೇಬಲ್ ಗಳನ್ನು ಮಧ್ಯದಲ್ಲಿ ತರೋಣ (centre). |
05:18 | ಇದನ್ನು ಮಾಡಲು, ಮೊದಲು ‘Book Title’ ಮೇಲೆ ಕ್ಲಿಕ್ ಮಾಡಿ, ಎಲ್ಲಾ ಲೇಬಲ್ ಗಳನ್ನು ಆಯ್ಕೆ ಮಾಡುವೆವು. |
05:26 | ನಂತರ ‘’Shift’ ಕೀಯನ್ನು ಒತ್ತಿ ಹಿಡಿದು, ಇಲ್ಲಿ ತೋರಿಸಿರುವಂತೆ ಉಳಿದ ಲೇಬಲ್ ಗಳ ಮೇಲೆ ಕ್ಲಿಕ್ ಮಾಡುವೆವು. |
05:35 | ಈಗ, ಇವುಗಳನ್ನು ಮಧ್ಯದಲ್ಲಿ ತರಲು, ನಾವು ಅಪ್ – ಆರೋ ಕೀಯನ್ನು ಬಳಸೋಣ. |
05:41 | ಹೆಡರ್ ಗೆ ನಾವು ತಿಳಿ-ನೀಲಿ ಬಣ್ಣದ ಹಿನ್ನೆಲೆಯನ್ನು ಕೊಡೋಣ. |
05:47 | ಇದನ್ನು ಮಾಡಲು, ನಾವು ‘Properties’ ಗೆ ಹೋಗಿ, ‘Background transparent’ ಅನ್ನು ‘NO’ ಎಂದು ಬದಲಾಯಿಸುವೆವು. |
05:55 | ನಂತರ ‘Background colour’ ಗಾಗಿ ಲಿಸ್ಟ್ ನಿಂದ ‘Blue 8 ‘ ಅನ್ನುಆರಿಸಿಕೊಳ್ಳುವೆವು. |
06:03 | Detail ವಿಭಾಗಕ್ಕಾಗಿಯೂ ಸಹ ನಾವು ಇದನ್ನೇ ಮಾಡುವೆವು. <pause> |
06:09 | ಇದಕ್ಕಾಗಿ, ನಾವು ಮೊದಲಿಗೆ ‘Detail’ ಮತ್ತು’ Report footer’ ವಿಭಾಗಗಳ ನಡುವಿನ ಅಂತರವನ್ನು ಹೆಚ್ಚಿಸುವೆವು. |
06:20 | ನಂತರ ಫೀಲ್ಡ್ ಗಳನ್ನು ಮಧ್ಯದಲ್ಲಿ ತರುವೆವು. <pause> |
06:24 | ಇಲ್ಲಿ ತೋರಿಸಿರುವಂತೆ, ‘Detail’ ವಿಭಾಗಕ್ಕಾಗಿ ನಾವು ತಿಳಿ-ಬೂದು ಬಣ್ಣದ ಹಿನ್ನೆಲೆಯನ್ನು ಆರಿಸುವೆವು. <pause> |
06:32 | ನಂತರ, ‘Checked In’ ಫೀಲ್ಡ್ ನ ಡೇಟಾ ಫಾರ್ಮಾಟಿಂಗ್ ಅನ್ನು ಬದಲಾಯಿಸುವೆವು. |
06:39 | ಇದು ಬೂಲಿಯನ್ ವ್ಯಾಲ್ಯೂಗಳಾದ 1 ಅಥವಾ 0 ಯನ್ನು ಹೊಂದಿರುವುದರಿಂದ, “True” ಅಥವಾ “False “ ಎಂದು ತೋರಿಸುತ್ತದೆ. |
06:47 | ಇದನ್ನು ನಾವು “ Yes” ಅಥವಾ “No” ಎಂದು ಬದಲಾಯಿಸುವೆವು. |
06:53 | ಇದಕ್ಕಾಗಿ ನಾವು, ‘Detail’ ಸೆಕ್ಷನ್ ನಲ್ಲಿ ಬಲಗಡೆ ಇರುವ ‘CheckedIn’ ಫೀಲ್ಡ್ ಮೇಲೆ ಡಬಲ್-ಕ್ಲಿಕ್ ಮಾಡಲಿದ್ದೇವೆ. |
07:01 | ಈಗ, ಬಲಗಡೆಗೆ ‘properties’ ನಲ್ಲಿ, ಮೊದಲು ‘Data’ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ. |
07:08 | ‘Data’ ಫೀಲ್ಡ್ ನ ಪಕ್ಕದಲ್ಲಿರುವ ‘CheckedIn’ ಎಂಬ ಬಟನ್ ಮೇಲೆ ಕ್ಲಿಕ್ ಮಾಡೋಣ. |
07:15 | ಇದು ‘Function wizard’ ಎಂಬ ಒಂದು ಹೊಸ ಪಾಪ್-ಅಪ್ ವಿಂಡೋ ಅನ್ನು ತೆರೆಯುತ್ತದೆ. |
07:20 | ಇಲ್ಲಿ, ಮೊದಲಿಗೆ ನಾವು ಕೆಳಗೆ ಬಲಗಡೆಯಲ್ಲಿ ‘Formula’ ಟೆಕ್ಸ್ಟ್-ಬಾಕ್ಸ್ ಅನ್ನು ಖಾಲಿ ಮಾಡೋಣ. |
07:27 | ನಂತರ ‘Category’ ಎಂಬ ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡೋಣ. ಆನಂತರ ‘IF’ ಮೇಲೆ ಡಬಲ್-ಕ್ಲಿಕ್ ಮಾಡೋಣ. |
07:35 | ಬಲಗಡೆಯಲ್ಲಿ ಈಗ ನಾವು ಹೊಸ ಕಂಟ್ರೋಲ್ ಗಳನ್ನು ನೋಡಬಹುದು. |
07:40 | ಮೊದಲನೆಯ ಟೆಕ್ಸ್ಟ್-ಬಾಕ್ಸ್ ನ ಪಕ್ಕದಲ್ಲಿ, ಬಲಕ್ಕೆ ಇರುವ ‘Select’ ಐಕಾನ್ ಮೇಲೆ ನಾವು ಕ್ಲಿಕ್ ಮಾಡೋಣ. |
07:49 | ಇಲ್ಲಿ ನಾವು ‘CheckIn’ ಮೇಲೆ ಡಬಲ್-ಕ್ಲಿಕ್ ಮಾಡುವೆವು. |
07:53 | ನಂತರ, ಎರಡನೇ ಟೆಕ್ಸ್ಟ್-ಬಾಕ್ಸ್ ನಲ್ಲಿ, ಡಬಲ್-ಕೋಟ್ಸ್ ಒಳಗೆ “Yes” ಎಂದು ಟೈಪ್ ಮಾಡುವೆವು. |
08:01 | ಹಾಗೂ ಮೂರನೇ ಟೆಕ್ಸ್ಟ್- ಬಾಕ್ಸ್ ನಲ್ಲಿ,” No” ಎಂದು ಟೈಪ್ ಮಾಡುವೆವು. <pause> |
08:12 | ಈಗ ‘Properties’ ವಿಭಾಗದಲ್ಲಿ, ‘General’ ಟ್ಯಾಬ್ ಗೆ ಹೋಗಿ, |
08:18 | ಕೆಳಗೆ ಇರುವ ‘Formatting’ ನ ಬದಿಯ ಬಟನ್ ಅನ್ನು ಕ್ಲಿಕ್ ಮಾಡುವೆವು. |
08:24 | ಇಲ್ಲಿ ನಾವು, ‘Category’ ಲಿಸ್ಟ್ ನಲ್ಲಿ ‘Text’ ಮೇಲೆ ಕ್ಲಿಕ್ ಮಾಡಿ, |
08:28 | ನಂತರ ‘OK’ ಬಟನ್ ಮೇಲೆ ಕ್ಲಿಕ್ ಮಾಡುವೆವು. |
08:32 | ಈಗ ರಿಪೋರ್ಟ್ ಅನ್ನು ನಾವು ಸೇವ್ ಮಾಡುವೆವು. |
08:36 | ಸರಿ, ಮಾರ್ಪಡಿಸಿದ ರಿಪೋರ್ಟ್ ಅನ್ನು ಈಗ ರನ್ ಮಾಡೋಣ. |
08:41 | ಇದಕ್ಕಾಗಿ, ನಾವು ಮೇಲ್ಗಡೆಯ Edit ಮೆನು ಮೇಲೆ, ನಂತರ ‘Execute Report’ ಮೇಲೆ ಕ್ಲಿಕ್ ಮಾಡೋಣ. |
08:50 | ಹಾಗೂ ಇಲ್ಲಿ "Books issued to the Library membersʼʼ ನಲ್ಲಿ ಸೊಗಸಾದ ರಿಪೋರ್ಟ್ ಹಿಸ್ಟರಿ ಇದೆ. |
08:57 | ಸ್ಪೇಸಿಂಗ್, ಹೆಡರ್ ಗಳು, ಫೂಟರ್ ಗಳು, ಫಾಂಟ್ ಗಳು ಮತ್ತು |
09:01 | 'Yes' ಅಥವಾ 'No' ಎಂದು ಹೇಳುವ ‘CheckedIn’ ಫೀಲ್ಡ್ ಅನ್ನು ಗಮನಿಸಿ. |
09:06 | ಇಲ್ಲಿಗೆ ನಮ್ಮ ರಿಪೋರ್ಟ್ ಅನ್ನು ಮಾರ್ಪಡಿಸುವ ಕೆಲಸ ಮುಗಿಯಿತು. |
09:11 | ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ, ರಿಪೋರ್ಟ್ ಅನ್ನು ಮಾರ್ಪಡಿಸುವ ಬಗ್ಗೆ ಇರುವ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:17 | ಸಂಕ್ಷಿಪ್ತವಾಗಿ ನಾವು: |
09:20 | ರಿಪೋರ್ಟ್ ನ ಲೇಔಟ್, ಅದು ಇರುವ ಹಾಗೂ ಕಾಣುವ ಬಗೆಯನ್ನು ಕಸ್ಟಮೈಸ್ ಮಾಡಿ, ಅದನ್ನು ಮಾರ್ಪಡಿಸಲು ಕಲಿತೆವು. |
09:26 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
09:48 | ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |