Difference between revisions of "LibreOffice-Suite-Base/C3/Create-Subforms/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 ||'''Time''' || '''Narration''' |- ||00:00 || ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗ...") |
Sandhya.np14 (Talk | contribs) |
||
(One intermediate revision by the same user not shown) | |||
Line 274: | Line 274: | ||
|- | |- | ||
||06:37 | ||06:37 | ||
− | || ನಂತರ, ‘MemberId’ ಕಾಲಂ ಮೇಲೆ ರೈಟ್ - | + | || ನಂತರ, ‘MemberId’ ಕಾಲಂ ಮೇಲೆ ರೈಟ್-ಕ್ಲಿಕ್ ಮಾಡಿ, ‘Hide column’ ಆಯ್ಕೆಯನ್ನು ಆರಿಸಿಕೊಂಡು ಅದನ್ನು ಮರೆಮಾಡೋಣ. |
|- | |- | ||
Line 347: | Line 347: | ||
|- | |- | ||
||08:44 | ||08:44 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 11:22, 7 April 2020
Time | Narration
|
00:00 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:07 | ಸಬ್-ಫಾರ್ಮ್ ಅನ್ನು ರಚಿಸಲು ಕಲಿಯುವೆವು. |
00:09 | ಇದಕ್ಕಾಗಿ ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್ ಉದಾಹರಣೆಯೊಂದಿಗೆ ಮುಂದುವರಿಯೋಣ. |
00:15 | ನಾವು ಈ ಕೆಳಗಿನ ಸಂದರ್ಭವನ್ನು ಪರಿಗಣಿಸಲಿದ್ದೇವೆ: |
00:18 | ಲೈಬ್ರರಿಯ ಎಲ್ಲಾ ಸದಸ್ಯರನ್ನು ನಾವು ಹೇಗೆ ಪಟ್ಟಿ ಮಾಡಬಹುದು? |
00:22 | ಮತ್ತು, ಪ್ರತಿಯೊಬ್ಬ ಸದಸ್ಯನು ಇನ್ನೂ ಹಿಂದಿರುಗಿಸದ ಪುಸ್ತಕಗಳನ್ನು ಮಾತ್ರ ನಾವು ಹೇಗೆ ನೋಡಬಹುದು? |
00:31 | ಒಂದು ವಿಧಾನವೆಂದರೆ, ಲೈಬ್ರರಿಯ ಎಲ್ಲಾ ಸದಸ್ಯರನ್ನು ಪಟ್ಟಿ ಮಾಡಿ ಒಂದು ಫಾರ್ಮ್ ರಚಿಸುವುದು. |
00:36 | ನಂತರ, ಸದಸ್ಯರು ಇನ್ನೂ ಹಿಂದಿರುಗಿಸದ ಪುಸ್ತಕಗಳನ್ನು ಪಟ್ಟಿ ಮಾಡಲು, ಇದರ ಕೆಳಗೆ ಒಂದು ಸಬ್-ಫಾರ್ಮ್ ರಚಿಸುವುದು. |
00:44 | ಈ ಫಾರ್ಮ್ ಅನ್ನು ಡಿಸೈನ್ ಮಾಡಿದ ನಂತರ, ನಾವು ಅದನ್ನು ನವೀಕರಿಸಬಹುದು (update). |
00:49 | ಉದಾಹರಣೆಗೆ, ಸದಸ್ಯನು ಪುಸ್ತಕವನ್ನು ಹಿಂದಿರುಗಿಸಿದಾಗ, ನಾವು ಈ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು. |
00:55 | ಮತ್ತು, ನಾವು ಡಿಸೈನ್ ಮಾಡಲಿರುವ ಫಾರ್ಮ್ ನ ಮಾದರಿ ಸ್ಕ್ರೀನ್-ಶಾಟ್ ಇಲ್ಲಿದೆ. |
01:01 | ಗಮನಿಸಿ, ಇದು ಕೆಳಗೆ ಒಂದು ಸಬ್-ಫಾರ್ಮ್ ಅನ್ನು ಸಹ ತೋರಿಸುತ್ತದೆ. |
01:06 | ಈಗ ನಮ್ಮ “ಲೈಬ್ರರಿ” ಡೇಟಾಬೇಸ್ ತೆರೆಯೋಣ. |
01:09 | ನಮ್ಮ ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು ‘History of Books Issued to Members’ ಎಂಬ ಕ್ವೆರಿಯನ್ನು ರಚಿಸಿದ್ದೆವು. |
01:17 | ಈಗ ನಾವು ಈ ಕ್ವೆರಿಯನ್ನು ಮತ್ತು Members ಟೇಬಲ್ ಅನ್ನು ನಮ್ಮ ಹೊಸ ಫಾರ್ಮ್ ರಚಿಸುವುದಕ್ಕಾಗಿ ಬಳಸಲಿದ್ದೇವೆ. |
01:25 | ಮೊದಲಿಗೆ ಕ್ವೆರಿ ಹೆಸರಿನ ಮೇಲೆ ರೈಟ್- ಕ್ಲಿಕ್ ಮಾಡಿ ಅದನ್ನು ಕಾಪಿ ಮಾಡೋಣ. ನಂತರ ‘Paste’ ಮೇಲೆ ಕ್ಲಿಕ್ ಮಾಡೋಣ. |
01:34 | ಪಾಪ್- ಅಪ್ ವಿಂಡೋ ನಲ್ಲಿ, ಕ್ವೆರಿ ಹೆಸರಿಗಾಗಿ ಹೊಸ ಹೆಸರನ್ನು ಹೀಗೆ ಟೈಪ್ ಮಾಡೋಣ: ‘Books Not Returned’. |
01:42 | ಈಗ ‘Books Not Returned’ ಕ್ವೆರಿಯನ್ನು, ಎಡಿಟ್ ಮೋಡ್ ನಲ್ಲಿ ತೆರೆಯೋಣ. |
01:48 | ‘Query Design’ ವಿಂಡೋದಲ್ಲಿ, ಚೆಕ್- ಇನ್ ಆಗಿರದ ಪುಸ್ತಕಗಳನ್ನು ಮಾತ್ರ ತೋರಿಸಲು ನಾವು ಒಂದು ಕ್ರೈಟಿರಿಯನ್ (ಒರೆಗಲ್ಲು) ಸೇರಿಸೋಣ. |
01:58 | ಇದಕ್ಕಾಗಿ, ನಾವು ‘CheckedIn’ ಅಡಿಯಲ್ಲಿ, ‘Criterion’ ಕಾಲಂನಲ್ಲಿ ‘equals 0’ ಎಂದು ಟೈಪ್ ಮಾಡಿ, |
02:06 | ‘Enter’ ಅನ್ನು ಒತ್ತೋಣ. |
02:09 | ಈಗ ಈ ಕ್ವೆರಿಯನ್ನು ಸೇವ್ ಮಾಡಿ, ವಿಂಡೋಅನ್ನು ಮುಚ್ಚೋಣ. |
02:13 | ಮುಖ್ಯ ಬೇಸ್ ವಿಂಡೋದಲ್ಲಿ, ಎಡ ಪ್ಯಾನಲ್ ನಲ್ಲಿರುವ ‘Forms’ ಐಕಾನ್ ಮೇಲೆ, |
02:20 | ನಂತರ ‘Use Wizard to create Form’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
02:25 | ಈಗ Form ವಿಜಾರ್ಡ್ ಅನ್ನು ನಾವು ನೋಡಬಹುದು. |
02:28 | ನಮ್ಮ ಫಾರ್ಮ್ ಅನ್ನು ರಚಿಸಲು, ಎಡಭಾಗದಲ್ಲಿರುವ 8 ಹಂತಗಳನ್ನು ಅನುಸರಿಸೋಣ. |
02:34 | ‘step 1. field selection’ ನಲ್ಲಿ, ನಾವು ‘Table: Members’ ಅನ್ನುಆರಿಸಿಕೊಳ್ಳೋಣ. |
02:40 | ನಂತರ ಎಲ್ಲಾ ಫೀಲ್ಡ್ ಗಳನ್ನು ಬಲಗಡೆಗೆ ಸರಿಸಿ, |
02:46 | ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
02:49 | ಈಗ ‘Step 2. Setup a subform’ ನಲ್ಲಿ ಇದ್ದೇವೆ. |
02:54 | ಇಲ್ಲಿ, ‘Add subform’ ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ, |
02:59 | ನಂತರ ‘Subform based on manual selection of fields’ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
03:07 | ಈಗ ‘Step 3. Add subform fields’ ಗೆ ಹೋಗೋಣ. |
03:11 | ಇಲ್ಲಿ, ಕೆಲವು ನಿಮಿಷಗಳ ಹಿಂದೆ ತಯಾರಿಸಿದ ನಮ್ಮ ಹೊಸ ಕ್ವೆರಿಯನ್ನು ಕಾಲ್ ಮಾಡೋಣ. |
03:18 | ‘Tables or Queries’ ಎಂಬ ಡ್ರಾಪ್-ಡೌನ್ ನಿಂದ, ‘Query: Books Not Returned’ ಅನ್ನು ಆಯ್ಕೆಮಾಡೋಣ. |
03:26 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ, ಲಭ್ಯವಿರುವ ಪಟ್ಟಿಯಿಂದ ಆಯ್ದ ಫೀಲ್ಡ್ ಗಳನ್ನು ನಾವು ಬಲಭಾಗಕ್ಕೆ ಸರಿಸುವೆವು. <pause> |
03:37 | ‘Next’ ಮೇಲೆ ಕ್ಲಿಕ್ ಮಾಡೋಣ. |
03:39 | ‘Step 4. Get joined fields’. |
03:43 | ಇಲ್ಲಿ, ನಾವು ಮೇಲಿನ ಎರಡು ಡ್ರಾಪ್- ಡೌನ್ ಗಳಿಂದ ‘MemberId’ ಫೀಲ್ಡ್ ಅನ್ನು ಆಯ್ಕೆ ಮಾಡುವೆವು. ಏಕೆಂದರೆ ಇದು ಮಾತ್ರ ಸಂಬಂಧಿತ ಫೀಲ್ಡ್ ಆಗಿದೆ. |
03:53 | ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
03:57 | ‘Step 5. Arrange Controls’. |
04:00 | ಇಲ್ಲಿ, ನಾವು ಫಾರ್ಮ್ ಮತ್ತು ಸಬ್- ಫಾರ್ಮ್ ಗಾಗಿ, ಮೂರನೇ ಆಯ್ಕೆಯಾದ Data sheet ಅನ್ನು ಆಯ್ಕೆಮಾಡಿ, |
04:08 | Next ಬಟನ್ ಮೇಲೆ ಕ್ಲಿಕ್ ಮಾಡುವೆವು. |
04:11 | ‘Step 6. Set data entry’. |
04:15 | ಇಲ್ಲಿ, ನಾವು ಆಯ್ಕೆಗಳನ್ನು ಹಾಗೆಯೇ ಬಿಟ್ಟು Next ಮೇಲೆ ಕ್ಲಿಕ್ ಮಾಡುತ್ತೇವೆ. |
04:22 | ‘Step 7. Apply Styles’. |
04:26 | ಇಲ್ಲಿ ನಾವು ಫಾರ್ಮ್ ನ ಹಿನ್ನೆಲೆಗಾಗಿ Grey ಯನ್ನು ಆಯ್ಕೆಮಾಡೋಣ. |
04:29 | ನಂತರ ಕೊನೆಯ ಹಂತಕ್ಕೆ ಸಾಗೋಣ. |
04:32 | ‘Step 8. Set Name’. |
04:36 | ಇಲ್ಲಿ, ನಮ್ಮ ಫಾರ್ಮ್ ಗೆ ‘Members Who Need to Return Books’ ಎಂಬ ಒಂದು ವಿವರಣಾತ್ಮಕ ಹೆಸರನ್ನು ಕೊಡೋಣ: |
04:45 | ನಾವು ಇನ್ನಷ್ಟು ಬದಲಾವಣೆಗಳನ್ನು ಮಾಡಲಿದ್ದೇವೆ. ಆದ್ದರಿಂದ Modify form ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
04:53 | ಈಗ ‘Finish’ ಬಟನ್ ಮೇಲೆ ಕ್ಲಿಕ್ ಮಾಡೋಣ. |
04:56 | ‘Form Design’ ವಿಂಡೋದಲ್ಲಿ, ಎರಡು ಟ್ಯಾಬುಲರ್ ಡೇಟಾ-ಶೀಟ್ ಜಾಗಗಳು ಇರುವುದನ್ನು ಗಮನಿಸಿ. |
05:04 | ಮೇಲಿನದು ಫಾರ್ಮ್ ಮತ್ತು ಕೆಳಗೆ ಇರುವುದು ಸಬ್-ಫಾರ್ಮ್ ಆಗಿವೆ. |
05:11 | ನಾವೀಗ ಫಾರ್ಮ್ ಮೇಲ್ಗಡೆ ಒಂದು ಲೇಬಲ್ ಅನ್ನು ಸೇರಿಸೋಣ. |
05:15 | ಮೇಲ್ತುದಿಯಲ್ಲಿಯ Form Controls ಟೂಲ್ ಬಾರ್ ನಲ್ಲಿ, Label ಐಕಾನ್ ಮೇಲೆ ಕ್ಲಿಕ್ ಮಾಡಿ ಅದನ್ನು ಫಾರ್ಮ್ ನಲ್ಲಿ ಎಳೆಯೋಣ. |
05:25 | ಲೇಬಲ್ ಮೇಲೆ ಡಬಲ್-ಕ್ಲಿಕ್ ಮಾಡಿದರೆ, ಅದು ತನ್ನ ಪ್ರಾಪರ್ಟೀಸ್ ತೋರಿಸುತ್ತದೆ. |
05:31 | ಇಲ್ಲಿ, ಲೇಬಲ್ ಗಾಗಿ ‘Members of the Library’ ಎಂದು ಟೈಪ್ ಮಾಡಿ, |
05:37 | ಫಾಂಟ್ ಶೈಲಿಯನ್ನು ‘Arial, Bold’ ಮತ್ತು ‘Size 12’ ಎಂದು ಬದಲಾಯಿಸುವೆವು. <pause> |
05:47 | ಇದೇ ರೀತಿ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ, ಸಬ್-ಫಾರ್ಮ್ ಮೇಲ್ಗಡೆ ಎರಡನೇ ಲೇಬಲ್ ಸೇರಿಸೋಣ. |
05:55 | ಇದನ್ನು ‘List of Books to be returned by the member’ ಎಂದು ಹೆಸರಿಸೋಣ. <pause> |
06:00 | ನಂತರ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಫಾರ್ಮ್ ನ ಉದ್ದವನ್ನು ಕಡಿಮೆ ಮಾಡೋಣ. |
06:07 | ಮತ್ತು ಇಲ್ಲಿ Name ಫೀಲ್ಡ್ ನ ಉದ್ದವನ್ನು ನಾವು ಹೆಚ್ಚಿಸೋಣ. <pause> |
06:13 | ಹೀಗೆಯೇ, ಸಬ್-ಫಾರ್ಮ್ ನಲ್ಲಿ ‘Book title’ ಫೀಲ್ಡ್ ನ ಉದ್ದವನ್ನು ಹೆಚ್ಚಿಸೋಣ. |
06:21 | ಇಲ್ಲಿ, ನಾವು ಫಾಂಟ್ ಅನ್ನು ‘Arial, Bold’ ಮತ್ತು ‘Size 8’ ಎಂದು ಬದಲಾಯಿಸೋಣ. |
06:28 | ಫಾರ್ಮ್ ಗಾಗಿ ಬಿಳಿ ಮತ್ತು ಸಬ್-ಫಾರ್ಮ್ ಗಾಗಿ ‘Blue 8’ ಅನ್ನು ಹಿನ್ನೆಲೆ ಬಣ್ಣವಾಗಿ ಬಳಸೋಣ. <pause> |
06:37 | ನಂತರ, ‘MemberId’ ಕಾಲಂ ಮೇಲೆ ರೈಟ್-ಕ್ಲಿಕ್ ಮಾಡಿ, ‘Hide column’ ಆಯ್ಕೆಯನ್ನು ಆರಿಸಿಕೊಂಡು ಅದನ್ನು ಮರೆಮಾಡೋಣ. |
06:47 | ಸರಿ, ನಮ್ಮ ಕೆಲಸ ಮುಗಿಯಿತು. ಈಗ ಫಾರ್ಮ್ ವಿನ್ಯಾಸವನ್ನು ಸೇವ್ ಮಾಡಿ, ಅದನ್ನು ಪರೀಕ್ಷಿಸೋಣ. |
06:54 | ಮುಖ್ಯ ಬೇಸ್ ವಿಂಡೋದಲ್ಲಿ, ನಾವು ‘Members Who Need to Return Books’ ಫಾರ್ಮ್ ಮೇಲೆ ಡಬಲ್-ಕ್ಲಿಕ್ ಮಾಡಿ ಅದನ್ನು ತೆರೆಯೋಣ. |
07:03 | ಆ ಫಾರ್ಮ್ ಇಲ್ಲಿದೆ. |
07:05 | ಅಪ್ ಅಥವಾ ಡೌನ್ ಆರೋ ಕೀಗಳನ್ನು ಬಳಸಿ ಅಥವಾ ವಿವಿಧ ಸದಸ್ಯರ ಹೆಸರಿನ ಮೇಲೆ ಹಾಗೇ ಕ್ಲಿಕ್ ಮಾಡಿ, |
07:12 | ಸದಸ್ಯರ ಪಟ್ಟಿಯಲ್ಲಿ ಬ್ರೌಸ್ ಮಾಡೋಣ. |
07:16 | ಗಮನಿಸಿ,ಕೆಳಗಿನ ಸಬ್-ಫಾರ್ಮ್ ರಿಫ್ರೆಶ್ ಆಗುತ್ತಿದೆ ಮತ್ತು ಹಿಂದಿರುಗಿಸಬೇಕಾದ ಪುಸ್ತಕಗಳನ್ನು ತೋರಿಸುತ್ತಿದೆ. |
07:23 | ಸಬ್ ಫಾರ್ಮ್ ನಲ್ಲಿ, ನಾವು ಯಾವುದೇ ರೆಕಾರ್ಡ್ ಅನ್ನು ಆರಿಸೋಣ. |
07:27 | ‘ActualReturnDate’ ಫೀಲ್ಡ್ ನಲ್ಲಿ, ‘12/7/11’ ಎಂದು ಟೈಪ್ ಮಾಡೋಣ. ‘CheckedIn’ ಫೀಲ್ಡ್ ಅನ್ನು ಚೆಕ್ ಮಾಡೋಣ. |
07:41 | ಮತ್ತು, ‘Enter’ ಅನ್ನು ಒತ್ತೋಣ. |
07:45 | ಈಗ, ಕೆಳಗಡೆ ಇರುವ ಫಾರ್ಮ್ ನ್ಯಾವಿಗೇಶನ್ ಟೂಲ್-ಬಾರ್ ನಲ್ಲಿ ‘Refresh’ ಐಕಾನ್ ಮೇಲೆ ಕ್ಲಿಕ್ ಮಾಡಿ, ಫಾರ್ಮ್ ಅನ್ನು ರಿಫ್ರೆಶ್ ಮಾಡೋಣ. |
07:56 | ಈಗಷ್ಟೇ ನಾವು ಎಡಿಟ್ ಮಾಡಿದ ರೆಕಾರ್ಡ್, ಇಲ್ಲಿ ಪಟ್ಟಿಯಾಗಿಲ್ಲ ಎಂಬುದನ್ನು ಗಮನಿಸಿ. |
08:02 | ಅಂದರೆ, ಪುಸ್ತಕವನ್ನು ಹಿಂದಿರುಗಿಸಲಾಗಿದೆ ಅಥವಾ ಚೆಕ್-ಇನ್ ಮಾಡಲಾಗಿದೆ ಎಂದರ್ಥ. |
08:07 | ಹೀಗೆ, ಇಲ್ಲಿ ಸಬ್-ಫಾರ್ಮ್ ನೊಂದಿಗೆ ನಮ್ಮ ಫಾರ್ಮ್ ಇದೆ. |
08:11 | ಇಲ್ಲಿಗೆ ನಾವು ಲಿಬರ್ ಆಫಿಸ್ ಬೇಸ್ ನಲ್ಲಿ, ಸಬ್ ಫಾರ್ಮ್ ಗಳ ಕುರಿತ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:17 | ಸಂಕ್ಷಿಪ್ತವಾಗಿ ನಾವು, |
08:20 | ಸಬ್-ಫಾರ್ಮ್ ಅನ್ನು ರಚಿಸಲು ಕಲಿತೆವು. |
08:23 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
08:44 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |