Difference between revisions of "Java/C3/Static-Variables/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 ||'''Time''' || '''Narration''' |- ||00:01 || ಸ್ಟಾಟಿಕ್ ವೇರಿಯೇಬಲ್ ಗಳ ಕುರಿತ ಸ್ಪೋಕನ್ ಟ್ಯುಟೋ...") |
Sandhya.np14 (Talk | contribs) |
||
Line 364: | Line 364: | ||
||09:20 | ||09:20 | ||
|| ಇದರೊಂದಿಗೆ, ನೇರವಾಗಿ ಕ್ಲಾಸ್ ಹೆಸರನ್ನು ಬಳಸಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಿ. | || ಇದರೊಂದಿಗೆ, ನೇರವಾಗಿ ಕ್ಲಾಸ್ ಹೆಸರನ್ನು ಬಳಸಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಿ. | ||
− | + | |- | |
||09:25 | ||09:25 | ||
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
Revision as of 17:03, 4 April 2020
Time | Narration |
00:01 | ಸ್ಟಾಟಿಕ್ ವೇರಿಯೇಬಲ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ಸ್ಟಾಟಿಕ್ ವೇರಿಯೇಬಲ್ ಗಳು ಎಂದರೇನು, |
00:10 | ಸ್ಟಾಟಿಕ್ ವೇರಿಯೇಬಲ್ ಗಳ ರಚನೆ ಮತ್ತು ಸ್ಟಾಟಿಕ್ ವೇರಿಯೇಬಲ್ ಗಳನ್ನು ಬಳಸುವ ಕುರಿತು ಕಲಿಯಲಿದ್ದೇವೆ |
00:17 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04 ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ |
00:27 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. |
00:35 | ನೀವು ಕ್ಲಾಸುಗಳು, ಅಬ್ಜೆಕ್ಟ್ ಗಳು ಮತ್ತು ಇನ್ಸ್ಟನ್ಸ್ ವೇರಿಯೇಬಲ್ ಗಳ ಜ್ಞಾನವನ್ನು ಹೊಂದಿರಬೇಕು. |
00:42 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ. |
00:49 | ಸ್ಟಾಟಿಕ್ ವೇರಿಯೇಬಲ್ ಎನ್ನುವುದು ಇಡೀ ಕ್ಲಾಸ್ ಜೊತೆ ಒಡಗೂಡುವ ವೇರಿಯೇಬಲ್ ಆಗಿದೆ. |
00:55 | ಇದನ್ನು ಕ್ಲಾಸ್ ವೇರಿಯೇಬಲ್ ಎಂದು ಸಹ ಕರೆಯಲಾಗುತ್ತದೆ. |
00:58 | ಇದನ್ನು static ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ. |
01:02 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ ಸ್ಟಾಟಿಕ್ ವೇರಿಯೇಬಲ್ ಕುರಿತು ನೋಡಿದ್ದೇವೆ. |
01:08 | ಈ ಟ್ಯುಟೋರಿಯಲ್ ನಲ್ಲಿ ನಾವು ಇದನ್ನು ವಿವರವಾಗಿ ಕಲಿಯಲಿದ್ದೇವೆ. |
01:11 | ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು StaticVariableDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ. |
01:18 | ಈ ಪ್ರಾಜೆಕ್ಟ್ ಒಳಗೆ, ಸ್ಟಾಟಿಕ್ ವೇರಿಯೇಬಲ್ ಗಳ ಬಳಕೆಯನ್ನು ತೋರಿಸಲು ನಾವು ಅಗತ್ಯ ಕ್ಲಾಸುಗಳನ್ನು ರಚಿಸಲಿದ್ದೇವೆ. |
01:26 | ಇದಕ್ಕಾಗಿ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ ಮತ್ತು ಮತ್ತು ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:37 | ನಾವೀಗ ಸ್ಟಾಟಿಕ್ ವೇರಿಯೇಬಲ್ ಗಳ ಬಳಕೆಯನ್ನು ಉದಾಹರಣೆಯೊಂದಿಗೆ ತೋರಿಸೋಣ. |
01:42 | ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಪ್ರತಿನಿಧಿಸಲು ರಚಿಸಿರುವ ಕ್ಲಾಸ್ ಒಂದನ್ನು ಪರಿಗಣಿಸಿ. |
01:49 | ಈ ಕ್ಲಾಸು, ದಾಖಲಾದ ವಿದ್ಯಾರ್ಥಿಗಳ ನೇಮ್, ಐ.ಡಿ, ಬ್ರಾಂಚ್ ಮತ್ತು ಟೋಟಲ್ ಕೌಂಟ್ ಅನ್ನು ಒಳಗೊಂಡಿದೆ. |
01:56 | ಈಗ, ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿದಾಗ ಏನಾಗುತ್ತದೆ ಎಂಬುದನ್ನು ಕಲ್ಪಿಸೋಣ. |
02:02 | ಡಿಫಾಲ್ಟ್ ಆಗಿ ಟೋಟಲ್ ಕೌಂಟ್ ಇಲ್ಲಿ 0 ಆಗಿದೆ. ಮೊದಲ ವಿದ್ಯಾರ್ಥಿಯ ಹೆಸರು ADIL ಆಗಿದೆ. |
02:09 | ಐ.ಡಿ ಯು IT101 ಮತ್ತು ಬ್ರಾಂಚ್ ಇಲ್ಲಿ IT ಆಗಿದೆ. |
02:14 | ಈಗ ಟೋಟಲ್ ಕೌಂಟ್ ಅನ್ನು 1 ಆಗಿ ಪರಿಷ್ಕರಿಸಲಾಗಿದೆ. |
02:18 | ಇದೇ ರೀತಿ ಎರಡನೇ ವಿದ್ಯಾರ್ಥಿ AMAL ದಾಖಲಾದಾಗ, ಟೋಟಲ್ ಕೌಂಟ್ ಅನ್ನು 2 ಆಗಿ ಪರಿಷ್ಕರಣೆಯಾಗುತ್ತದೆ. |
02:25 | ಮೂರನೇ ವಿದ್ಯಾರ್ಥಿ CAROL ದಾಖಲಾದಾಗ ಟೋಟಲ್ ಕೌಂಟ್ 3 ಆಗಿ ಪರಿಷ್ಕರಣೆಯಾಗುತ್ತದೆ. |
02:32 | ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುವ ವೇರಿಯೇಬಲ್ ಟೋಟಲ್ ಕೌಂಟ್ ಏಕ ಮೌಲ್ಯವನ್ನು ಹೊಂದಿದೆ ಎಂಬುದನ್ನು ನಾವೀಗ ಗುರುತಿಸಬಹುದು. |
02:40 | ಹೀಗೆ, ವೇರಿಯೇಬಲ್ ಟೋಟಲ್ ಕೌಂಟ್ ಅನ್ನು ಸ್ಟಾಟಿಕ್ ವೇರಿಯೇಬಲ್ ಆಗಿ ಪ್ರತಿನಿಧಿಸಬಹುದು. |
02:45 | ನೇಮ್, ಐ.ಡಿ, ಮತ್ತು ಬ್ರಾಂಚ್ – ಈ ವೇರಿಯೇಬಲ್ ಗಳು ಪ್ರತಿ ಅಬ್ಜೆಕ್ಟ್ ಗಳಿಗೆ ತನ್ನದೇ ಆದ ನಕಲುಗಳನ್ನು ಹೊಂದಿವೆ ಎಂಬುದನ್ನು ನಾವು ನೋಡಬಹುದು. |
02:54 | ಹಾಗೂ ಅವು ಪ್ರತಿ ಅಬ್ಜೆಕ್ಟ್ ಗೆ ನಿರ್ದಿಷ್ಟ ಮೌಲ್ಯಗಳನ್ನು ಹೊಂದಿವೆ. |
02:59 | ಹೀಗೆ, ಈ ವೇರಿಯೇಬಲ್ ಗಳನ್ನು ಇನ್ಸ್ಟೆನ್ಸ್ ವೇರಿಯೇಬಲ್ ಗಳಾಗಿ ಪರಿಗಣಿಸಬಹುದು. |
03:04 | ಈಗ, ಸ್ಟೂಡೆಂಟ್ ಎನ್ರೋಲ್ ಕ್ಲಾಸ್ ಅನ್ನು ಪ್ರತಿನಿಧಿಸುವ ಕೋಡ್ ಅನ್ನು ನೋಡೋಣ. |
03:09 | ಇನ್ಸ್ಟೆನ್ಸ್ ವೇರಿಯೇಬಲ್ ಗಳನ್ನು ಐ.ಡಿ, ನೇಮ್ ಮತ್ತು ಬ್ರಾಂಚ್ ಗಳಾಗಿ ಘೋಷಿಸಲಾಗಿದೆ. |
03:16 | ವೇರಿಯೇಬಲ್ ಕೌಂಟ್ ಅನ್ನು ಸ್ಟಾಟಿಕ್ ಆಗಿ ಘೋಷಿಸಲಾಗಿದೆ, ಏಕೆಂದರೆ ಇದು ಇಡೀ ಕ್ಲಾಸಿಗೆ ಸಾಮಾನ್ಯವಾಗಿದೆ. |
03:22 | ಕ್ಲಾಸ್ ಅನ್ನು ಲೋಡ್ ಮಾಡಿದಾಗ, ಸ್ಟಾಟಿಕ್ ವೇರಿಯೇಬಲ್, ಬಿಡಿಯಾದ ಸ್ಥಿರ ಮೆಮೊರಿ ಸ್ಥಳವನ್ನು ವ್ಯಾಪಿಸುತ್ತದೆ. |
03:28 | ಆದರೆ ಪ್ರತಿ ಅಬ್ಜೆಕ್ಟ್ ನ ಇನ್ಸ್ಟೆನ್ಸ್ ವೇರಿಯೇಬಲ್, ಪ್ರತ್ಯೇಕ ಮೆಮೊರಿ ಸ್ಥಳಗಳನ್ನು ವ್ಯಾಪಿಸುತ್ತದೆ. |
03:35 | ಈಗ Source > ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ. |
03:41 | ರಚನೆಯಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ. |
03:45 | ಐ.ಡಿ, ನೇಮ್ ಮತ್ತು ಬ್ರಾಂಚ್ ಫೀಲ್ಡ್ ಗಳ ಮೌಲ್ಯಗಳನ್ನು ಈ ಕನ್ಸ್ಟ್ರಕ್ಟರ್ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಬಲ್ಲದು. |
03:51 | ಪ್ರತಿ ಸಂದರ್ಭದಲ್ಲಿ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ವೇರಿಯೇಬಲ್ ಕೌಂಟ್ ನ ಮೌಲ್ಯವನ್ನು ನಾವು ಹೆಚ್ಚಿಸಬೇಕು. |
03:59 | ಇದಕ್ಕಾಗಿ ಕನ್ಸ್ಟ್ರಕ್ಟರ್ ನ ಒಳಗೆ ಈ ರೀತಿ ಟೈಪ್ ಮಾಡಿ: count ++ ಅರ್ಧವಿರಾಮ. |
04:05 | ನಾವೀಗ ಎಲ್ಲಾ ವೇರಿಯೇಬಲ್ ಗಳ ಮೌಲ್ಯಗಳನ್ನು ಪ್ರಿಂಟ್ (ಮುದ್ರಿಸು) ಮಾಡಲು ಈ ಕ್ಲಾಸ್ ಗೆ showData( ) ವಿಧಾನಗಳನ್ನು ಸೇರಿಸಲಿದ್ದೇವೆ. |
04:13 | ಹೀಗಾಗಿ public void showData( ) ಎಂದು ಟೈಪ್ ಮಾಡಿ ಮತ್ತು ಐ.ಡಿ, ನೇಮ್, ಬ್ರಾಂಚ್ ಗಳ ಮೌಲ್ಯಗಳು ಮತ್ತು ದಾಖಲಿಸಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಪ್ರಿಂಟ್ ಮಾಡುವುದಕ್ಕಾಗಿ ಈ ಕೋಡ್ ಅನ್ನು ಆವರಣ ಚಿಹ್ನೆಗಳೊಳಗೆ ಟೈಪ್ ಮಾಡಿ. |
04:27 | ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಟೈಪ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. |
04:36 | ಈ ಕ್ಲಾಸ್ ನ ಒಳಗಡೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ. |
04:39 | ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸುವುದಕ್ಕಾಗಿ ctrl+space ಒತ್ತಿ. |
04:46 | ನಾವೀಗ ಸ್ಟೂಡೆಂಟ್ ಎನ್ರೋಲ್ ಮೆಂಟ್ ಡೇಟಾವನ್ನು ಪ್ರಿಂಟ್ ಮಾಡಬೇಕು. |
04:50 | ವಿದ್ಯಾರ್ಥಿಗಳ ದಾಖಲಾತಿಯನ್ನು ಪ್ರತಿನಿಧಿಸಲು ನಾವು ಸ್ಟೂಡೆಂಟ್ ಎನ್ರೋಲ್ ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಲಿದ್ದೇವೆ. |
04:57 | ಇದಕ್ಕಾಗಿ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ: StudentEnroll s1 equals new StudentEnroll. |
05:04 | ನಾವೀಗ ವಿವಿಧ ಆರ್ಗ್ಯುಮೆಂಟ್ ಗಳ ಮೌಲ್ಯಗಳನ್ನು ಅಂಗೀಕರಿಸಬಹುದು. |
05:08 | ಆವರಣ ಚಿಹ್ನೆಗಳೊಳಗೆ IT101 ಅನ್ನು id ಆಗಿ, ADIL ಅನ್ನು name ಆಗಿ ಮತ್ತು IT ಅನ್ನು branch ಆಗಿ ಟೈಪ್ ಮಾಡಿ. |
05:17 | ಈಗ ನಾವು ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData ವನ್ನು ಇನ್ವೋಕ್ (ಜಾರಿಗೊಳಿಸು) ಮಾಡೋಣ. |
05:22 | ಇದಕ್ಕಾಗಿ s1.showData( ) ಎಂದು ಟೈಪ್ ಮಾಡಿ. ಈಗ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ. |
05:29 | ಈಗ, s1 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ಮೌಲ್ಯಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು. |
05:36 | ಅಲ್ಲದೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯ ಮೌಲ್ಯವು 1 ಆಗಿರುವುದನ್ನು ಗಮನಿಸಿ. |
05:42 | ಇದು ಏಕೆಂದರೆ ನಾವು ಕೇವಲ 1 ಅಬ್ಜೆಕ್ಟ್ ಮಾತ್ರ ರಚಿಸಿದ್ದೇವೆ. |
05:47 | ಈಗ, ಇನ್ನೊಂದು ಅಬ್ಜೆಕ್ಟ್ s2 ಅನ್ನು ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
05:52 | ಇನ್ನೊಮ್ಮೆ s2 ಅನ್ನು ಬಳಸಿ showData ವಿಧಾನವನ್ನು ಜಾರಿಗೊಳಿಸಬಹುದು. |
05:56 | ಇನ್ನೊಮ್ಮೆ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ. |
05:59 | s2 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ಮೌಲ್ಯಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ಗಮನಿಸಬಹುದು. |
06:06 | ಅಲ್ಲದೆ, s1 ಮತ್ತು s2 ಎರಡರಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ಮೌಲ್ಯವನ್ನು 2ಕ್ಕೆ ಪರಿಷ್ಕೃತಗೊಂಡಿರುವುದನ್ನು ಗಮನಿಸಿ. |
06:14 | ಈಗ ಇನ್ನೊಂದು ಅಬ್ಜೆಕ್ಟ್ s3 ಅನ್ನು ರಚಿಸಿ. |
06:18 | ಮತ್ತೊಮ್ಮೆ s3 ಬಳಸಿ ನಾವು showData ವಿಧಾನವನ್ನು ಇನ್ವೋಕ್ ಮಾಡೋಣ. |
06:23 | ಮತ್ತೊಮ್ಮೆ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ. |
06:26 | ಈಗ, s3 ಗೆ ಅನುರೂಪವಾದ ಇನ್ಸ್ಟನ್ಸ್ ವೇರಿಯೇಬಲ್ ಗಳ ಮೌಲ್ಯಗಳು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು. |
06:32 | ಅಲ್ಲದೆ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ಮೌಲ್ಯವನ್ನು ಎಲ್ಲಾ ಕ್ಲಾಸುಗಳಲ್ಲಿ 3ಕ್ಕೆ ಪರಿಷ್ಕೃತಗೊಳಿಸಿರುವುದನ್ನು ಗಮನಿಸಿ. |
06:41 | ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯ ಮೌಲ್ಯವು ಎಲ್ಲಾ ಅಬ್ಜೆಕ್ಟ್ ಗಳಿಗೆ ಸಾಮಾನ್ಯವಾಗಿರುತ್ತದೆ ಎಂಬುದನ್ನು ನಾವೀಗ ಅರಿತುಕೊಳ್ಳಬಹುದು. |
06:48 | ಈಗ ಸ್ಲೈಡ್ ಗಳಿಗೆ ಮರಳಿ. |
06:51 | ಸ್ಟಾಟಿಕ್ ಮೋಡಿಫಯರ್ ಅನ್ನು ಫೈನಲ್ ಮೋಡಿಫಯರ್ ಜೊತೆಗೆ ಬಳಸಬಹುದು. |
06:56 | ಇಡೀ ಕ್ಲಾಸಿಗೆ ಸಾಮಾನ್ಯವಾಗಿರುವ ಕಾನ್ಸ್ಟಂಟ್ ಅನ್ನು ನಿರೂಪಿಸಲು ಇದನ್ನು ಮಾಡಲಾಗುತ್ತದೆ. |
07:01 | ಸಾಂಪ್ರದಾಯಿಕವಾಗಿ, ಇಂತಹ ಕಾನ್ಸ್ಟಂಟ್ ವೇರಿಯೇಬಲ್ ಗಳ ಹೆಸರುಗಳನ್ನು ಅಪ್ಪರ್ ಕೇಸ್ ಲೆಟರ್ ಗಳಿಂದ ಉಚ್ಛರಿಸಲಾಗುತ್ತದೆ. |
07:08 | ಈಗ ಎಕ್ಲಿಪ್ಸ್ ಗೆ ಮರಳಿ. |
07:11 | ಸ್ಟೂಟೆಂಟ್ ಎನ್ರೋಲ್ ಕ್ಲಾಸ್ ಅನ್ನು ತೆರೆಯಿರಿ ಮತ್ತು ವೇರಿಯೇಬಲ್ ಡಿಕ್ಲೆರೇಶನ್ ಅನ್ನು public static final String ORG_NAME = “IITB”; ಎಂದು ಟೈಪ್ ಮಾಡಿ. |
07:23 | ಉದಾಹರಣೆಯಾಗಿ, ಒಂದುವೇಳೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಂಸ್ಥೆಗೆ ದಾಖಲಾದಲ್ಲಿ IITB ಎಂದು ಹೇಳಿ. |
07:31 | ಇದನ್ನು ORG_NAME ಎನ್ನುವ ಕಾನ್ಸ್ಟಂಟ್ ಸ್ಟಾಟಿಕ್ ವೇರಿಯೇಬಲ್ ಬಳಸಿ ಪ್ರತಿನಿಧಿಸಬಹುದು. |
07:38 | ಒಂದುವೇಳೆ ಹೆಸರು ಒಂದಕ್ಕಿಂತ ಹೆಚ್ಚು ಪದಗಳನ್ನು ಹೊಂದಿದ್ದರೆ, ಪದಗಳನ್ನು ಅಂಡರ್ ಸ್ಕೋರ್ ಮೂಲಕ ಪ್ರತ್ಯೇಕಿಸಬಹುದು. |
07:44 | ಸಾಮಾನ್ಯವಾಗಿ ನಾವು ಇಂತಹ ಕಾನ್ಸ್ಟಂಟ್ ಗಳನ್ನು ಪಬ್ಲಿಕ್ ವಿಸಿಬಿಲಿಟಿ ಯ ಜೊತೆ ಘೋಷಿಸುತ್ತೇವೆ. |
07:49 | ಈಗ ಡೆಮೋ ಕ್ಲಾಸ್ ಗೆ ಹೋಗಿ ಹಾಗೂ ಈ ಕೋಡ್ ಅನ್ನು ಟೈಪ್ ಮಾಡಿ. |
07:55 | ಇಲ್ಲಿ, ORG_NAME ಅನ್ನು StudentEnroll ಎನ್ನುವ ಕ್ಲಾಸ್ ಹೆಸರು ಬಳಸಿ ಆಕ್ಸೆಸ್ ಮಾಡಬಹುದು. |
08:03 | ಈಗ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡಿ. |
08:06 | ಆರ್ಗನೈಸೇಶನ್ ಹೆಸರು IITB ಆಗಿ ಪ್ರಿಂಟ್ ಆಗುತ್ತಿರುವುದನ್ನು ನಾವಿಲ್ಲಿ ನೋಡಬಹುದು. |
08:11 | ಈಗ ಸಂಕ್ಷೇಪಿಸೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, |
08:17 | ಸ್ಟಾಟಿಕ್ ವೇರಿಯೇಬಲ್ ಅಂದರೆ ಏನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ, |
08:21 | ಸ್ಟಾಟಿಕ್ ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಎಂಬುದನ್ನು ಕಲಿತೆವು. |
08:25 | ಅಸೈನ್ ಮೆಂಟ್ ಆಗಿ, ಕಾರ್ ಸರ್ವಿಸ್ ಸ್ಟೇಷನ್ ಒಂದನ್ನು ಪ್ರತಿನಿಧಿಸಲು CarService ಎನ್ನುವ ಕ್ಲಾಸ್ ಅನ್ನು ವಿನ್ಯಾಸಗೊಳಿಸಿ. |
08:32 | ಈ ಕ್ಲಾಸು, ಈ ಕೆಳಗಿನ ವಿವರಗಳನ್ನು ಪ್ರತಿನಿಧಿಸಲು ವೇರಿಯೇಬಲ್ ಗಳನ್ನು ಹೊಂದಿರಬೇಕು: ಸರ್ವಿಸ್ ಸ್ಟೇಷನ್ ನ ಹೆಸರು, |
08:39 | ಸರ್ವಿಸ್ ಗೆ ಬಂದಿರುವ ಕಾರ್ ಮೇಕ್, ಮಾಡೆಲ್, ಮತ್ತು ರಿಜಿಸ್ಟರ್ ನಂಬರ್. |
08:44 | ಸರ್ವಿಸ್ ಗಾಗಿ No. of Cars in |
08:47 | ಇನ್ಸ್ಟೆನ್ಸ್ ವೇರಿಯೇಬಲ್ ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ ಗಳನ್ನು ಗುರುತಿಸಿ. |
08:51 | ಸೂಕ್ತ ಕೀವರ್ಡ್ ಗಳನ್ನು ಬಳಸಿ ಅವುಗಳನ್ನು ಘೋಷಿಸಿ. |
08:55 | ಕಾರ್ ಮೇಕ್, ಮಾಡೆಲ್, ಮತ್ತು ರಿಜಿಸ್ಟರ್ ನಂಬರ್ ಗೆ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಅನ್ನು ನಿರೂಪಿಸಿ. |
09:01 | ಎಲ್ಲಾ ವೇರಿಯೇಬಲ್ ಗಳಿಗೆ ಮೌಲ್ಯಗಳನ್ನು ಪ್ರಿಂಟ್ ಮಾಡಲು show( ) ವಿಧಾನವನ್ನು ನಿರೂಪಿಸಿ. |
09:07 | ಅಲ್ಲದೆ, ಫಲಿತಾಂಶಗಳನ್ನು ದೃಢೀಕರಿಸಲು ಮೇನ್ ಮೆಥಡ್ ಅನ್ನು ಹೊಂದಿರುವ ಡೆಮೋ ಕ್ಲಾಸ್ ಒಂದನ್ನು ರಚಿಸಿ, ಅಂದರೆ CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ. |
09:16 | ಈ ಅಬ್ಜೆಕ್ಟ್ ಗಳನ್ನು ಬಳಸಿ show( ) ವಿಧಾನವನ್ನು ಜಾರಿಗೊಳಿಸಿ. |
09:20 | ಇದರೊಂದಿಗೆ, ನೇರವಾಗಿ ಕ್ಲಾಸ್ ಹೆಸರನ್ನು ಬಳಸಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಿ. |
09:25 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
09:32 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. |
09:41 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
09:45 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
09:51 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
09:56 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
10:03 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |