Difference between revisions of "Moodle-Learning-Management-System/C2/Question-bank-in-Moodle/Kannada"

From Script | Spoken-Tutorial
Jump to: navigation, search
 
Line 178: Line 178:
 
|-  
 
|-  
 
| 05:53
 
| 05:53
| ನಾನು ಇಲ್ಲಿ ಮಾಡಿರುವಂತೆ, ಉಳಿದ '''choices''' ಮತ್ತು '''grades''' ಗಳನ್ನು ಭರ್ತಿಮಾಡಿ.  
+
| ನಾನು ಇಲ್ಲಿ ಮಾಡಿರುವಂತೆ, ಉಳಿದ '''choice''' ಮತ್ತು '''grade''' ಗಳನ್ನು ಭರ್ತಿಮಾಡಿ.  
 
|-  
 
|-  
 
| 06:01
 
| 06:01

Latest revision as of 12:49, 27 January 2020

Time Narration
00:01 ಮೂಡಲ್ ನಲ್ಲಿ Question bank ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank,
00:12 ಪ್ರಶ್ನೆಗಳ ವಿಧಗಳು (Categories) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:26 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:34 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:44 Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:52 ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ ಮತ್ತು
01:03 ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿದ್ದೀರಿ ಎಂದು ಭಾವಿಸುತ್ತೇನೆ.
01:09 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:16 ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ.
01:24 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಹೊಂದಿರುವ ಒಂದು ಟೆಕ್ಸ್ಟ್ ಫೈಲ್ ಅನ್ನು ನಾನು Code files ಲಿಂಕ್ ನಲ್ಲಿ ಒದಗಿಸಿದ್ದೇನೆ.

Mytextfile.txt” ಎಂಬ ಫೈಲ್ ಅನ್ನು ನಿಮ್ಮ ಮಶಿನ್ ನಲ್ಲಿ ಡೌನ್ಲೋಡ್ ಮಾಡಿ, ಅದನ್ನು ತೆರೆಯಿರಿ.

01:40 ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:45 ಈಗ ಕ್ವಶ್ಚನ್ ಬ್ಯಾಂಕ್ ಗಳ ಬಗ್ಗೆ ತಿಳಿದುಕೊಳ್ಳೋಣ.
01:49 Question bank (ಕ್ವಶ್ಚನ್ ಬ್ಯಾಂಕ್), ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹವಾಗಿದೆ.
01:55 ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಮತ್ತೆ ಮತ್ತೆ ಬಳಸಬಹುದು.
02:01 ಪ್ರತಿಯೊಂದು ಶೈಕ್ಷಣಿಕ ವರ್ಷಕ್ಕಾಗಿ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗಾಗಿ, ವಿಭಿನ್ನವಾದ ಕ್ವಿಝ್ ಗಳನ್ನು ತಯಾರಿಸಲು ಇದು ಸಹಾಯಕವಾಗಿದೆ.
02:09 ಬ್ರೌಸರ್ ಗೆ ಹಿಂದಿರುಗಿ.
02:11 ಮೇಲೆ ಬಲಗಡೆಯಿರುವ ಗೇರ್ ಐಕಾನ್ ಮೇಲೆ, ಆನಂತರ ಕೊನೆಯಲ್ಲಿರುವ More… ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
02:18 ನಾವು ಈಗ Course Administration ಪೇಜ್ ಗೆ ಬಂದಿದ್ದೇವೆ.
02:22 ಕೆಳಕ್ಕೆ ಸ್ಕ್ರೋಲ್ ಮಾಡಿ, Question bank ವಿಭಾಗವನ್ನು ಗುರುತಿಸಿ.
02:27 ಈ ವಿಭಾಗದಲ್ಲಿ, Categories ಲಿಂಕ್ ಅನ್ನು ಕ್ಲಿಕ್ ಮಾಡಿ.
02:30 Add category ವಿಭಾಗವನ್ನು ನೋಡಿ.
02:34 Parent category ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.
02:37 Top ಇಲ್ಲಿ, ಈ ಕೋರ್ಸ್ ಗಾಗಿ ಮೇಲ್ಮಟ್ಟದ ಕ್ಯಾಟೆಗರಿ (top level category) ಆಗಿದೆ.
02:42 ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆ ಆಗಿರದಿದ್ದರೆ, Default for Calculus ಅನ್ನು ಆಯ್ಕೆಮಾಡಿ.
02:49 Name ಫೀಲ್ಡ್ ನಲ್ಲಿ Basic Calculus ಎಂದು ಟೈಪ್ ಮಾಡಿ.
02:54 ಪೇಜ್ ನ ಕೆಳಗೆ ಇರುವ Add Category ಬಟನ್ ಅನ್ನು ಕ್ಲಿಕ್ ಮಾಡಿ.

ಹೀಗೆಯೇ, ನಾವು ಇನ್ನೂ ಹೆಚ್ಚು ಕ್ಯಾಟೆಗರಿ ಗಳನ್ನು ಸೇರಿಸಬಹುದು.

03:04 ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗಾಗಿ ಕ್ಯಾಟೆಗರಿ ಗಳ ಒಂದು ಶ್ರೇಣಿಯನ್ನು (hierarchy) ರಚಿಸಿ.
03:11 Questions ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ತಯಾರಿಸುವ ಪೇಜ್ ಗೆ ಹೋಗಿ.
03:17 ಕೆಳಗಿರುವ Create a new question ಬಟನ್ ಅನ್ನು ಕ್ಲಿಕ್ ಮಾಡಿ.
03:22 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
03:25 ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ.
03:29 ಬಲಭಾಗದಲ್ಲಿ, ಪ್ರಶ್ನೆಯ ವಿಧದ ಕುರಿತು ವಿಸ್ತಾರವಾದ ವಿವರಣೆ ಕಾಣಿಸುತ್ತದೆ.
03:35 ನಾನು Multiple choice ಅನ್ನು ಆಯ್ಕೆಮಾಡುವೆನು.
03:39 ಪಾಪ್-ಅಪ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
03:43 ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ category ಯನ್ನು ಆಯ್ಕೆ ಮಾಡಿ.

ನಾನು Evolutes ಅನ್ನುಆಯ್ಕೆಮಾಡುವೆನು.

03:51 Question name ಫೀಲ್ಡ್ ನಲ್ಲಿ, MCQ with single correct answer ಎಂದು ಟೈಪ್ ಮಾಡಿ.
03:57 Question text ಜಾಗದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.

Mytextfile.txt ಫೈಲ್ ನಿಂದ ನೀವು ಕಾಪಿ ಮಾಡಿ, ಪೇಸ್ಟ್ ಮಾಡಬಹುದು.

04:07 Default Mark ಅನ್ನು 1 ಎಂದು ಸೆಟ್ ಮಾಡಲಾಗಿದೆ. ನಾನು ಇದನ್ನು ಹಾಗೇ ಇಡುವೆನು.
04:12 ಮುಂದಿನ ಆಯ್ಕೆ General feedback ಆಗಿದೆ. ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ, ಇಲ್ಲಿಯ ಟೆಕ್ಸ್ಟ್ಅನ್ನು ವಿದ್ಯಾರ್ಥಿಗೆ ತೋರಿಸಲಾಗುತ್ತದೆ.
04:23 ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಇದನ್ನು ಬಳಸಬಹುದು.

ನಾನು ಇಲ್ಲಿ ಮಾಡಿರುವಂತೆ, ಟೆಕ್ಸ್ಟ್ ಅನ್ನು ಟೈಪ್ ಮಾಡಿ ಅಥವಾ ಕಾಪಿ-ಪೇಸ್ಟ್ ಮಾಡಿ.

04:34 ಈಗ One or multiple answers ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ.
04:39 ಇಲ್ಲಿ ನಾವು Multiple answers allowed ಮತ್ತು

One answer only ಎಂಬ ಎರಡು ಆಯ್ಕೆಗಳನ್ನು ನೋಡಬಹುದು.

04:46 ಈ ಆಯ್ಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ನಾನು ತೋರಿಸುವೆನು.
04:49 ಮೊದಲಿಗೆ ನಾನು One answer only ಅನ್ನು ಆಯ್ಕೆಮಾಡುತ್ತೇನೆ.
04:53 ಡಿಫಾಲ್ಟ್ ಆಗಿ, Shuffle the choices ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿದೆ. ಪ್ರತಿ ಬಾರಿಯ ಕ್ವಿಝ್ ನಲ್ಲಿ, ಪ್ರಶ್ನೆಯ ಉತ್ತರದ ಆಯ್ಕೆಗಳ ಸ್ಥಾನವು ಬದಲಾಗಿರುವುದನ್ನು ಇದು ಖಚಿತ ಪಡಿಸುತ್ತದೆ.
05:06 Answers ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.
05:10 ಗಮನಿಸಿ, ಇಲ್ಲಿಯ ಪ್ರತಿಯೊಂದು ಆಯ್ಕೆಯು ಒಂದು grade ಮತ್ತು feedback ಗಳಿಗೆ ಸಂಬಂಧಿಸಿದೆ.
05:17 ಇಲ್ಲಿ ತೋರಿಸಿರುವಂತೆ Choice 1 ಎಂದು ಟೈಪ್ ಮಾಡಿ.
05:20 ಈ ಪ್ರಶ್ನೆಗೆ , Choice 1 ಸರಿಯಾದ ಉತ್ತರವಾಗಿದೆ.
05:25 ಆದ್ದರಿಂದ ನಾನು Grade ನಲ್ಲಿ 100% ಅನ್ನು ಆಯ್ಕೆಮಾಡುವೆನು.
05:30 Grade ಡ್ರಾಪ್-ಡೌನ್ ನಲ್ಲಿ, ಪ್ರತಿಯೊಂದು ಆಯ್ಕೆಗೆ ನಾವು ಭಾಗಶಃ ಅಂಕ ಅಥವಾ ಋಣಾತ್ಮಕ ಅಂಕವನ್ನು ಕೊಡಬಹುದು.
05:38 ಮೂಡಲ್ ಅನ್ನು ಚೆನ್ನಾಗಿ ಕಲಿತ ನಂತರ ನೀವು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು.
05:43 ಈ ಉತ್ತರವನ್ನು ಆಯ್ಕೆಮಾಡಿದ ವಿದ್ಯಾರ್ಥಿಗಳಿಗಾಗಿ, ಫೀಡ್-ಬ್ಯಾಕ್ ಅನ್ನು Feedback ಟೆಕ್ಸ್ಟ್- ಏರಿಯಾದಲ್ಲಿ ಬರೆಯಬಹುದು. ನಾನು “Correct” ಎಂದು ಟೈಪ್ ಮಾಡುವೆನು.
05:53 ನಾನು ಇಲ್ಲಿ ಮಾಡಿರುವಂತೆ, ಉಳಿದ choice ಮತ್ತು grade ಗಳನ್ನು ಭರ್ತಿಮಾಡಿ.
06:01 ಈಗ ಕೆಳಗೆ ಸ್ಕ್ರೋಲ್ ಮಾಡಿ. Multiple Tries ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
06:08 ಗಮನಿಸಿ: Penalty for each incorrect try ಫೀಲ್ಡ್ ಅನ್ನು ಡಿಫಾಲ್ಟ್ ಆಗಿ 33.33% ಎನ್ನಲಾಗಿದೆ.
06:18 ಎಂದರೆ, ವಿದ್ಯಾರ್ಥಿಯ ಪ್ರತಿಯೊಂದು ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.
06:24 ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು.
06:31 ನಾನು 0% ಅನ್ನು ಆಯ್ಕೆ ಮಾಡುವೆನು. ಏಕೆಂದರೆ ತಪ್ಪು ಉತ್ತರಗಳಿಗಾಗಿ ವಿದ್ಯಾರ್ಥಿಗಳನ್ನು ದಂಡಿಸಲು ನಾನು ಬಯಸುವುದಿಲ್ಲ.
06:39 ನಂತರ ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
06:46 ನಮ್ಮ ಪ್ರಶ್ನೆಯು Question Bank ಗೆ ಸೇರಿರುವುದನ್ನು ನೋಡಬಹುದು.
06:51 ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ.
06:57 ಇವು ಪ್ರಶ್ನೆಯನ್ನು edit, duplicate, preview ಮತ್ತು delete ಮಾಡಲು ಇರುತ್ತವೆ.
07:06 ಕ್ವಿಝ್ ನಲ್ಲಿ ಪ್ರಶ್ನೆಯು ಹೇಗೆ ಕಾಣುತ್ತವೆ ಎಂದು ನೋಡಲು, Preview ಐಕಾನ್ ಅನ್ನು ಕ್ಲಿಕ್ ಮಾಡಿ.
07:13 ಆಯ್ಕೆ ಮಾಡಿದ ಪ್ರಶ್ನೆ ಮತ್ತು ಅದರ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊ ದಲ್ಲಿ ತೆರೆದುಕೊಳ್ಳುತ್ತವೆ.
07:19 Fill in correct responses ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ.
07:29 Submit and finish ಬಟನ್ ಅನ್ನು ಕ್ಲಿಕ್ ಮಾಡಿ.
07:32 ಪ್ರಶ್ನೆಗೆ ಉತ್ತರಿಸಿದ ಮೇಲೆ ವಿದ್ಯಾರ್ಥಿಯು ನೋಡುವ ಫೀಡ್-ಬ್ಯಾಕ್ ಅನ್ನು ಇದು ತೋರಿಸುತ್ತದೆ.
07:38 ಒಂದು ಹೊಸ ಪ್ರಶ್ನೆಯನ್ನು ಸೇರಿಸಿದಾಗಲೆಲ್ಲ, ಅದನ್ನು ಮತ್ತೆ ಪರೀಕ್ಷಿಸಲು ನೀವು ಪ್ರಿವ್ಯೂ ವನ್ನು ನೋಡಿ.
07:44 ಈ ಪಾಪ್-ಅಪ್ ವಿಂಡೋ ವನ್ನು ಮುಚ್ಚಲು, Close preview ಬಟನ್ ಅನ್ನು ಕ್ಲಿಕ್ ಮಾಡಿ.
07:49 ಒಂದಕ್ಕಿಂತ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ MCQ ಅನ್ನು ಈಗ ರಚಿಸೋಣ.
07:54 ಹಿಂದಿನ ಹಂತಗಳನ್ನು ಅನುಸರಿಸಿ, ಒಂದು MCQ ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಸಹ ಹೀಗೆಯೆ ಮಾಡಿ.
08:01 One or multiple answers ಡ್ರಾಪ್-ಡೌನ್ ನಲ್ಲಿ ನಾನು ಈ ಬಾರಿ Multiple answers allowed ಅನ್ನು ಆಯ್ಕೆಮಾಡುವೆನು.
08:10 choice 1 ಹಾಗೂ 2 ಮತ್ತು ಅವುಗಳ Grade ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.

ಇಲ್ಲಿ ನಾನು ಎರಡಕ್ಕೂ Grade ಅನ್ನು 50% ಎಂದು ಆಯ್ಕೆಮಾಡಿದ್ದೇನೆ.

08:20 ಒಂದು ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಯು ಅರ್ಧ ಅಂಕವನ್ನು ಮತ್ತು
08:26 ಎರಡೂ ಉತ್ತರಗಳನ್ನು ಸರಿಯಾಗಿ ಕೊಡುವ ವಿದ್ಯಾರ್ಥಿಯು 1 ಅಂಕವನ್ನು ಪಡೆಯುತ್ತಾನೆ.
08:32 choice 3 ಹಾಗೂ 4 ಮತ್ತು ಅವುಗಳ Grade ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.
08:38 ನಾನು Penalty for each incorrect try ಫೀಲ್ಡ್ ಅನ್ನು 0% ಎಂದು ಇಡುವೆನು.
08:44 ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
08:49 ನಂತರ, ಒಂದು Short answer ಪ್ರಶ್ನೆಯನ್ನು ಸೇರಿಸೋಣ.
08:53 ಇಲ್ಲಿ ವಿದ್ಯಾರ್ಥಿಯು, ಪ್ರಶ್ನೆಗೆ ಒಂದು ಶಬ್ದ ಅಥವಾ ವಾಕ್ಯಾಂಶವನ್ನು (phrase) ಉತ್ತರವಾಗಿ ಟೈಪ್ ಮಾಡಬೇಕು.
09:00 Create a new question ಬಟನ್ ನ ಮೇಲೆ ಕ್ಲಿಕ್ ಮಾಡಿ. ನಂತರ Short answer ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.
09:08 ಇಲ್ಲಿ ತೋರಿಸಿದಂತೆ ಪ್ರಶ್ನೆಯನ್ನು ರಚಿಸಿ.
09:11 Case sensitivity ಡ್ರಾಪ್-ಡೌನ್ ನಲ್ಲಿ, No, case is unimportant ಅನ್ನು ಆಯ್ಕೆ ಮಾಡಿ.
09:18 ಈ ಪ್ರಶ್ನೆಗೆ ಸರಿಯಾದ ಉತ್ತರ “same logarithmic spiral” ಎಂದಾಗಿದೆ.
09:24 “same spiral” ಅಥವಾ “same logarithmic spiral” ಎಂದು ಉತ್ತರಿಸಿದ ವಿದ್ಯಾರ್ಥಿಗೆ ನಾನು ಪೂರ್ಣ ಅಂಕವನ್ನು ಕೊಡಲು ಬಯಸುತ್ತೇನೆ.
09:35 ಆದರೆ, ವಿದ್ಯಾರ್ಥಿಯು “logarithmic spiral” ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.
09:43 ಕೆಳಗೆ Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ.
09:46 ಇಲ್ಲಿ ತೋರಿಸಿದಂತೆ, Answer 1 ಮತ್ತು 2 ಹಾಗೂ ಅವುಗಳ grade ಗಳನ್ನು ನಮೂದಿಸಿ.
09:52 Answer 1 ಟೆಕ್ಸ್ಟ್ ನಲ್ಲಿರುವ ಆಸ್ಟೆರಿಸ್ಕ್ ಅನ್ನು (ನಕ್ಷತ್ರ ಚಿಹ್ನೆ) ಗಮನಿಸಿ.

ಇದನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.

10:02 ಉದಾಹರಣೆಗೆ, ವಿದ್ಯಾರ್ಥಿಯು The evolute of a logarithmic spiral is the same logarithmic spiral ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.
10:15 ಇಲ್ಲಿ ತೋರಿಸಿದಂತೆ, Answer 3 ಮತ್ತು ಅದರ Grade ಅನ್ನು ನಮೂದಿಸಿ.
10:20 ಗಮನಿಸಿ, ಇಲ್ಲಿ ಉತ್ತರದ ಮೊದಲು ಆಸ್ಟೆರಿಸ್ಕ್ ಚಿಹ್ನೆ ಇಲ್ಲ.
10:24 ಉದಾಹರಣೆಗೆ, ವಿದ್ಯಾರ್ಥಿಯು The evolute of a logarithmic spiral is not the same logarithmic spiral ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲಾಗುವುದಿಲ್ಲ.
10:37 ಇಲ್ಲಿ ತೋರಿಸಿದಂತೆ Answer 4 ಮತ್ತು ಅದರ Grade ಅನ್ನು ನಮೂದಿಸಿ.
10:43 ಈ ಉತ್ತರಕ್ಕೆ ನಾನು 50% ಅಂಕವನ್ನು ಮಾತ್ರ ಕೊಟ್ಟಿರುವುದನ್ನು ಗಮನಿಸಿ.
10:48 ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ ಹೀಗೆ ಟೈಪ್ ಮಾಡಿ:

“You need to specify that it’s the same spiral and not any spiral”.

10:57 ಈ ವಿವರಣೆಯನ್ನು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಎಂದು ತೋರಿಸಲಾಗುತ್ತದೆ.
11:02 ಇನ್ನೊಮ್ಮೆ, ನಾನು Penalty for each incorrect try ಫೀಲ್ಡ್ ನಲ್ಲಿ 0% ಎಂದೇ ಇಡುವೆನು.
11:09 ನಂತರ ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
11:14 ಈಗ ಒಂದು Numerical ಪ್ರಶ್ನೆಯನ್ನು ಸೇರಿಸೋಣ.
11:18 Create a new question ಬಟನ್ ಅನ್ನು ಕ್ಲಿಕ್ ಮಾಡಿ. ನಂತರ Numerical ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.
11:26 ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ.
11:29 ಈ ಪ್ರಶ್ನೆಗೆ ಸರಿಯಾದ ಉತ್ತರ 5 mm ಎಂದಾಗಿದೆ.

ಆದರೆ, ವಿದ್ಯಾರ್ಥಿಯು 4.5mm ಮತ್ತು 5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ನನಗೆ ಒಪ್ಪಿಗೆ ಇದೆ.

11:41 ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ.
11:45 ಕೆಳಗೆ Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ.
11:48 ಇಲ್ಲಿ ತೋರಿಸಿದಂತೆ Answers, Error ಮತ್ತು Grade ಗಳನ್ನು ನಮೂದಿಸಿ.
11:53 Unit handling ವಿಭಾಗವನ್ನು ವಿಸ್ತರಿಸಿ.

Unit handling ಡ್ರಾಪ್-ಡೌನ್ ನಲ್ಲಿ ಮೂರು ಆಯ್ಕೆಗಳಿವೆ.

12:00 ನಾನು The unit must be given, and will be graded ಆಯ್ಕೆಯನ್ನು ಆರಿಸಿಕೊಳ್ಳುವೆನು.
12:07 ಡಿಫಾಲ್ಟ್ ಆಗಿ, Unit penalty field, 0.1 ಅನ್ನು ತೋರಿಸುತ್ತಿದೆ. ನಾನು ಅದನ್ನು 0.5 ಎನ್ನುತ್ತೇನೆ.
12:16 ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಮಾತ್ರ ಬರೆದಿದ್ದರೆ, ಅರ್ಧದಷ್ಟು ಅಂಕಗಳನ್ನು ಪಡೆಯುವನು.
12:23 Units are input using ಡ್ರಾಪ್-ಡೌನ್ ನಲ್ಲಿ, ನಾನು the text input element ಅನ್ನು ಆಯ್ಕೆಮಾಡುವೆನು.
12:31 ಎಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಬೇಕು.
12:37 Units ವಿಭಾಗವನ್ನು ವಿಸ್ತರಿಸಿ.
12:40 ಯುನಿಟ್ ಅನ್ನು mm ಎಂದು, multiplier ಅನ್ನು 1 ಎಂದೂ ನಮೂದಿಸಿ. ಎಂದರೆ, ಉತ್ತರದ ಆಯ್ಕೆಗಳು mm ನಲ್ಲಿರಬೇಕು.
12:50 ಇನ್ನೊಮ್ಮೆ ನಾನು, Penalty for each incorrect try ಫೀಲ್ಡ್ ಅನ್ನು 0% ಎಂದೇ ಇಡುವೆನು.
12:57 ನಂತರ ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
13:02 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

13:08 ಈ ಟ್ಯುಟೋರಿಯಲ್ ನಲ್ಲಿ ನಾವು ಮೂಡಲ್ ನಲ್ಲಿ: Question bank,
13:14 ಪ್ರಶ್ನೆಗಳ ಕ್ಯಾಟೆಗರಿ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.
13:22 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.
13:28 ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.
13:34 ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಮಾಡಿ ಮುಗಿದ ಮೇಲೆ ಮತ್ತೆ ಮುಂದುವರೆಸಿ.
13:38 ಈ ಕ್ವಶ್ಚನ್ ಬ್ಯಾಂಕ್ ನಲ್ಲಿ ಈಗ ನಾವು 10 ಪ್ರಶ್ನೆಗಳನ್ನು ಹೊಂದಿರಬೇಕು.

ಅವುಗಳಲ್ಲಿ 6 ಪ್ರಶ್ನೆಗಳು Evolutes ನಲ್ಲಿ ಮತ್ತು 4 ಪ್ರಶ್ನೆಗಳು Involutes ಸಬ್- ಕ್ಯಾಟೆಗರಿಯಲ್ಲಿ ಇರುತ್ತವೆ.

13:51 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14