Difference between revisions of "Health-and-Nutrition/C2/Non-vegetarian-recipes-for-lactating-mothers/Kannada"
Sandhya.np14 (Talk | contribs) (Created page with "{|border=1 | <center>Time</center> |<center>Narration</center> |- | 00:00 | '''Non-vegetarian recipes for Lactating mothers''' ಎಂಬ ಸ್ಪೋಕನ್ ಟ್ಯುಟ...") |
Sandhya.np14 (Talk | contribs) |
||
| Line 298: | Line 298: | ||
| 07:26 | | 07:26 | ||
| 1 ಟೀಚಮಚ ಮೆಣಸಿನ ಪುಡಿ, | | 1 ಟೀಚಮಚ ಮೆಣಸಿನ ಪುಡಿ, | ||
| − | + | ½ ಟೀಚಮಚ ಅರಿಶಿನ ಪುಡಿ, | |
|- | |- | ||
|07:31 | |07:31 | ||
Latest revision as of 17:21, 6 December 2019
| |
|
| 00:00 | Non-vegetarian recipes for Lactating mothers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
| 00:07 | ಈ ಟ್ಯುಟೋರಿಯಲ್ ನಲ್ಲಿ, ನಾವು:
ಹಾಲುಣಿಸುವ ಅವಧಿಯಲ್ಲಿ ಪೌಷ್ಠಿಕಾಂಶದ ಮಹತ್ವ, |
| 00:13 | ಹಲವು ಮಾಂಸಾಹಾರಿ ಪಾಕವಿಧಾನಗಳ ತಯಾರಿಕೆ –
ನುಗ್ಗೆಕಾಯಿ ಮತ್ತು ಚಿಕನ್ ಕರಿ, |
| 00:20 | ಚಿಕನ್ ಕಡಲೆಕಾಯಿ ಬೆಳ್ಳುಳ್ಳಿ ಮಸಾಲಾ, |
| 00:24 | ಮೀನು -ತೆಂಗಿನಕಾಯಿ ಕರಿ,
ಮೊಟ್ಟೆ ಹಾಗೂ ಮಿಶ್ರ ತರಕಾರಿಗಳ ಪಲ್ಯ ಮತ್ತು ಮೀನು - ಪಾಲಕ ಸೊಪ್ಪಿನ ಪಲ್ಯ ಇವುಗಳ ಬಗ್ಗೆ ಕಲಿಯುತ್ತೇವೆ. |
| 00:31 | ಹಾಲುಣಿಸುವ ಅವಧಿಯಲ್ಲಿ, ತಾಯಿಗೆ ಹಾಲನ್ನು ಉತ್ಪಾದಿಸಲು, ಬೆಳೆಯುತ್ತಿರುವ ಶಿಶುವಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಲು |
| 00:38 | ಮತ್ತು ಅವಳ ದೈನಂದಿನ ಅಗತ್ಯಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶದ ಅಗತ್ಯವಿರುತ್ತದೆ. |
| 00:45 | ಹಾಲುಣಿಸುವ ಅವಧಿಯಲ್ಲಿ ಅಗತ್ಯವಿರುವ ಪೋಷಕಾಂಶಗಳು ಹೀಗಿವೆ:
ಜೀವಸತ್ವಗಳು (Vitamins), ಖನಿಜಗಳು, |
| 00:51 | 'ಒಮೆಗಾ 3 ಫ್ಯಾಟಿ ಆಸಿಡ್'ಗಳು ಮತ್ತು ಕೋಲೀನ್. |
| 00:54 | ಪೋಷಕಾಂಶಗಳ ಜೊತೆಗೆ, ನಾವು ಗ್ಯಾಲಕ್ಟೋಗೊಗ್ಸ್ ಬಗ್ಗೆ ಸಹ ಕಲಿಯುತ್ತೇವೆ. |
| 00:59 | 'ಗ್ಯಾಲಕ್ಟೋಗೊಗ್ಸ್', ಹಾಲಿನ ಉತ್ಪಾದನೆಗೆ ಸಹಾಯ ಮಾಡುವ ವಸ್ತುಗಳಾಗಿವೆ. |
| 01:04 | ತಾಯಿಯು ಆಹಾರದಲ್ಲಿ ಬೆಳ್ಳುಳ್ಳಿ, |
| 01:08 | ಮೆಂತ್ಯದ ಬೀಜಗಳು ಮತ್ತು ಸೊಪ್ಪು, |
| 01:10 | ಸೋಂಪು ಕಾಳುಗಳು, |
| 01:12 | ಅಳವಿ (ಗಾರ್ಡನ್ ಕ್ರೆಸ್) ಬೀಜಗಳು, ನುಗ್ಗೆ ಎಲೆಗಳು, |
| 01:15 | ಸಬ್ಬಸಿಗೆ ಸೊಪ್ಪು ಮತ್ತು ಓಂ ಕಾಳು (ಅಜವಾನ /ಕ್ಯಾರಮ್) ಇವುಗಳನ್ನು ಸೇರಿಸುವ ಮೂಲಕ ಅದನ್ನು ಪಡೆಯಬಹುದು. |
| 01:19 | ಗಮನಿಸಿ: ಹಾಲುಣಿಸುವ ತಾಯಂದಿರಿಗಾಗಿ ಪೌಷ್ಠಿಕಾಂಶಗಳ ಬಗ್ಗೆ ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
| 01:28 | ಹಾಲುಣಿಸುವ ಅವಧಿಯಲ್ಲಿ ಪೋಷಕಾಂಶಗಳ ಮಹತ್ವವನ್ನು ತಿಳಿದ ನಂತರ, ನಾವು ಕೆಲವು ಪಾಕವಿಧಾನಗಳನ್ನು ನೋಡುತ್ತೇವೆ. |
| 01:37 | ನಮ್ಮ ಮೊದಲನೆಯ ಪಾಕವಿಧಾನ, ನುಗ್ಗೆಕಾಯಿ ಮತ್ತು ಚಿಕನ್ ಪಲ್ಯ. |
| 01:43 | ಇದನ್ನು ತಯಾರಿಸಲು, ನಮಗೆ:
100 ಗ್ರಾಂ ಚಿಕನ್, |
| 01:47 | 2 ತುಂಡು ನುಗ್ಗೆಕಾಯಿ,
ಕೆಲವು ಕರಿಬೇವಿನ ಎಲೆಗಳು, |
| 01:51 | 1 ಟೀಚಮಚ ಕರಿಮೆಣಸಿನ ಕಾಳು,
1 ಸಣ್ಣಗೆ ಹೆಚ್ಚಿದ ಈರುಳ್ಳಿ, |
| 01:55 | 4 ಎಸಳು ಬೆಳ್ಳುಳ್ಳಿ,
ರುಚಿಗೆ ತಕ್ಕಷ್ಟು ಉಪ್ಪು, |
| 02:00 | ½ ಟೀಚಮಚ ಅರಿಷಿಣ ಪುಡಿ,
½ ಟೀಚಮಚ ಮೆಣಸಿನಕಾಯಿ ಪುಡಿ, |
| 02:05 | 1 ಹಸಿರು ಮೆಣಸಿನಕಾಯಿ,
1 ಹಿಡಿ ಕೊತ್ತಂಬರಿ ಸೊಪ್ಪು, 2 ಟೀಚಮಚ ಎಣ್ಣೆ ಇವುಗಳು ಬೇಕಾಗುತ್ತವೆ. |
| 02:11 | ಬಾಣಲೆಯಲ್ಲಿ 1 ಟೀಚಮಚ ಎಣ್ಣೆಯನ್ನು ಕಾಯಿಸಿ.
ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಮೆಣಸು ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ. |
| 02:19 | ಇದನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಈಗ ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು ಸೇರಿಸಿ, 2-3 ಸೆಕೆಂಡುಗಳ ಕಾಲ ಹುರಿಯಿರಿ. |
| 02:27 | ಇದು ತಣ್ಣಗಾದ ನಂತರ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. |
| 02:32 | ಈಗ ನುಗ್ಗೆಕಾಯಿ ತುಂಡುಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಅಥವಾ ಹಾಗೆಯೇ ಬೇಯಿಸಿ. |
| 02:36 | ಬಾಣಲೆಯಲ್ಲಿ 1 ಟೀಚಮಚ ಎಣ್ಣೆಯನ್ನು ಕಾಯಿಸಿ. ತಯಾರಿಸಿದ ಪೇಸ್ಟ್ ಅನ್ನು ಸೇರಿಸಿ 2 ನಿಮಿಷ ಬೇಯಿಸಿ. |
| 02:42 | ಇದಕ್ಕೆ, ಎಲ್ಲಾ ಮಸಾಲೆ ಮತ್ತು ಚಿಕನ್ ಸೇರಿಸಿ. ಈಗ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. |
| 02:50 | ಮುಚ್ಚಳ ಹಾಕಿ ಚಿಕನ್ ಮೃದುವಾಗುವವರೆಗೆ ಬೇಯಿಸಿ. |
| 02:53 | ಇದಕ್ಕೆ, ಬೇಯಿಸಿದ ನುಗ್ಗೆಕಾಯಿಯನ್ನು ಸೇರಿಸಿ. ಇದನ್ನು 2-4 ನಿಮಿಷ ಬೇಯಿಸಿ. |
| 02:59 | ನುಗ್ಗೆಕಾಯಿ ಮತ್ತು ಚಿಕನ್ ಪಲ್ಯ ಸಿದ್ಧವಾಗಿದೆ. |
| 03:03 | ಎರಡನೇ ಪಾಕವಿಧಾನವು “ಚಿಕನ್ ಕಡಲೆಕಾಯಿ ಬೆಳ್ಳುಳ್ಳಿ ಮಸಾಲಾ” ಆಗಿದೆ. |
| 03:08 | ಇದನ್ನು ತಯಾರಿಸಲು ನಮಗೆ: 100 ಗ್ರಾಂ ಚಿಕನ್,
2 ಟೇಬಲ್ ಚಮಚ ಕಡಲೆಕಾಯಿ ಬೀಜ, |
| 03:14 | 5 ಎಸಳು ಬೆಳ್ಳುಳ್ಳಿ,
1 ಸಣ್ಣಗೆ ಹೆಚ್ಚಿದ ಟೊಮ್ಯಾಟೋ, |
| 03:18 | 1 ಸಣ್ಣಗೆ ಹೆಚ್ಚಿದ ಈರುಳ್ಳಿ,
1/2 ಟೀಚಮಚ ಅರಿಷಿಣಪುಡಿ, |
| 03:21 | ರುಚಿಗೆ ತಕ್ಕಷ್ಟು ಉಪ್ಪು,
1 ಟೀಚಮಚ ಕೆಂಪುಮೆಣಸಿನಕಾಯಿ ಪುಡಿ, |
| 03:25 | 2 ಟೀಚಮಚ ಎಣ್ಣೆ ಇವುಗಳು ಬೇಕಾಗುತ್ತವೆ. |
| 03:27 | ಕಡಲೆಕಾಯಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸಲು:
ಪ್ಯಾನ್ ನಲ್ಲಿ ಕಡಲೆಕಾಯಿಯನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ. |
| 03:34 | ಹುರಿಯುವಾಗ ನಿರಂತರವಾಗಿ ಕಲಕುತ್ತಾ ಇರಿ. ಇದನ್ನು ತಣ್ಣಗಾಗಲು ಬಿಡಿ. |
| 03:39 | ಸಿಪ್ಪೆಯನ್ನು ತೆಗೆಯಲು ಈ ಕಡಲೆಕಾಯಿಯನ್ನು ನಿಮ್ಮ ಅಂಗೈಗಳ ನಡುವೆ ಉಜ್ಜಿ. |
| 03:45 | ಈಗ, ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಕಾಯಿಸಿ. ಈರುಳ್ಳಿ, ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ. ಟೊಮೆಟೊ ಮೃದುವಾಗುವವರೆಗೆ ಹುರಿಯಿರಿ. |
| 03:54 | ಮಿಶ್ರಣವು ತಣ್ಣಗಾಗಲು ಬಿಡಿ. ನಂತರ ಇದನ್ನು ಕಡಲೆಕಾಯಿಯೊಂದಿಗೆ ಬೆರೆಸಿ. |
| 03:59 | ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. |
| 04:03 | ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಕಾಯಿಸಿ. |
| 04:05 | ಈಗ ಕಡಲೆಕಾಯಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ 2 ನಿಮಿಷ ಬೇಯಿಸಿ.
ನಂತರ, ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. |
| 04:15 | ಇದರಲ್ಲಿ ಚಿಕನ್ ಸೇರಿಸಿ 2 ನಿಮಿಷ ಬೇಯಿಸಿ. ಈಗ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೆರೆಸಿ. |
| 04:21 | ಬಾಣಲೆಯನ್ನು ಮುಚ್ಚಿ, ಚಿಕನ್ ಮೃದುವಾಗುವವರೆಗೆ ಬೇಯಿಸಿ. |
| 04:25 | ಚಿಕನ್ ಕಡಲೆಕಾಯಿ ಬೆಳ್ಳುಳ್ಳಿ ಮಸಾಲಾ ಸಿದ್ಧವಾಗಿದೆ. |
| 04:28 | ಮೂರನೆಯ ಪಾಕವಿಧಾನ “ಮೀನು ತೆಂಗಿನಕಾಯಿ ಕರಿ” ಆಗಿದೆ. |
| 04:32 | ಇದಕ್ಕಾಗಿ ನಿಮಗೆ:
100 ಗ್ರಾಂ ರೋಹು, ½ ಕಪ್ ತೆಂಗಿನಕಾಯಿ ತುರಿ, 4 ಕೆಂಪು ಮೆಣಸಿನಕಾಯಿ, |
| 04:38 | ½ ಟೀಚಮಚ ಅರಿಶಿನ,
ರುಚಿಗೆ ತಕ್ಕಂತೆ ಉಪ್ಪು, |
| 04:42 | 4 ಎಸಳು ಬೆಳ್ಳುಳ್ಳಿ,
1 ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು, |
| 04:47 | 1 ಹೆಚ್ಚಿದ ಈರುಳ್ಳಿ,
½ ಟೀಚಮಚ ಮೆಂತ್ಯ, |
| 04:51 | ½ ಟೀಚಮಚ ಜೀರಿಗೆ,
1 ಟೀಚಮಚ ಎಣ್ಣೆ ಇಷ್ಟು ಬೇಕು. |
| 04:56 | ರೋಹು ಸಿಗದಿದ್ದರೆ ನೀವು ಮ್ಯಾಕೆರೆಲ್, ಪೊಮ್ಫ್ರೆಟ್ ಅಥವಾ ಬಾಂಬೆ-ಡಕ್ ಇವುಗಳಲ್ಲಿ ಯಾವುದೇ ಒಂದನ್ನು ಬಳಸಬಹುದು. |
| 05:06 | ಮೀನನ್ನು ಚೊಕ್ಕಟ ಮಾಡಿ, 2 ಚಿಟಿಕೆ ಉಪ್ಪು ಸೇರಿಸಿ 10 ನಿಮಿಷ ಹಾಗೇ ಬಿಡಿ. |
| 05:11 | ಕೆಂಪು ಮೆಣಸಿನಕಾಯಿ, ಮೆಂತ್ಯ, ಜೀರಿಗೆ ಎಲ್ಲವನ್ನೂ ಒಂದೆರಡು ನಿಮಿಷ ಒಣದಾಗಿ ಹುರಿಯಿರಿ. |
| 05:17 | ಹುರಿದ ಪದಾರ್ಥಗಳನ್ನು ತೆಂಗಿನಕಾಯಿ, ಹುಣಸೆಹಣ್ಣು ಮತ್ತು ಬೆಳ್ಳುಳ್ಳಿಯೊಂದಿಗೆ ಸೇರಿಸಿ ಪೇಸ್ಟ್ ಮಾಡಿ. |
| 05:25 | ಬಾಣಲೆಯಲ್ಲಿ 1 ಟೀಚಮಚ ಎಣ್ಣೆ ಕಾಯಿಸಿ. |
| 05:29 | ಈಗ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. |
| 05:33 | ಇದಕ್ಕೆ ರುಬ್ಬಿದ ಪೇಸ್ಟ್ ಸೇರಿಸಿ 5-6 ನಿಮಿಷ ಬೇಯಿಸಿ. ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. |
| 05:42 | ಇದಕ್ಕೆ, ಮ್ಯಾರಿನೇಟ್ ಮಾಡಿದ ಮೀನು ಸೇರಿಸಿ 10 ನಿಮಿಷ ಬೇಯಿಸಿ.
‘ಮೀನು ಮತ್ತು ತೆಂಗಿನಕಾಯಿಯ ಕರಿ’ ಸಿದ್ಧವಾಗಿದೆ. |
| 05:49 | ಈಗ “ಮಿಶ್ರ ತರಕಾರಿ ಮತ್ತು ಬೇಯಿಸಿದ ಮೊಟ್ಟೆಯ ಕರಿ” ತಯಾರಿಸುವುದನ್ನು ನೋಡೋಣ. |
| 05:53 | ಇದನ್ನು ತಯಾರಿಸಲು, ನಮಗೆ:
2 ಬೇಯಿಸಿದ ಮೊಟ್ಟೆಗಳು, 2 ತುಂಡು ಹೂಕೋಸು, |
| 05:59 | 1 ಮಧ್ಯಮ ಗಾತ್ರದ ಈರುಳ್ಳಿ,
2 ಸಣ್ಣಗೆ ಹೆಚ್ಚಿದ ಫ್ರೆಂಚ್ ಬೀನ್ಸ್, |
| 06:02 | 1 ಮಧ್ಯಮ ಗಾತ್ರದ ಹೆಚ್ಚಿದ ಟೊಮೆಟೊ,
½ ಸಣ್ಣಗೆ ಹೆಚ್ಚಿದ ದೊಣ್ಣ ಮೆಣಸಿನಕಾಯಿ, |
| 06:07 | 1 ಟೇಬಲ್-ಚಮಚ ಎಳ್ಳು,
1 ಟೀಚಮಚ ಮೆಣಸಿನ ಪುಡಿ, |
| 06:12 | ರುಚಿಗೆ ತಕ್ಕಷ್ಟು ಉಪ್ಪು,
½ ಚಮಚ ಅರಿಶಿನ ಪುಡಿ, |
| 06:16 | 1 ಟೇಬಲ್-ಚಮಚ ಗಸಗಸೆ,
½ ಟೀಚಮಚ ಅಳವಿ ಬೀಜಗಳ ಪುಡಿ, |
| 06:21 | 1 ಟೀಚಮಚ ಎಣ್ಣೆ ಇವುಗಳು ಬೇಕಾಗುತ್ತವೆ. |
| 06:24 | ಬಾಣಲೆಯಲ್ಲಿ ಎಳ್ಳು ಮತ್ತು ಗಸಗಸೆ ಬೀಜಗಳನ್ನು ಹುರಿಯಿರಿ. ಇದನ್ನು ತಣ್ಣಗಾಗಲು ಬಿಡಿ. |
| 06:29 | ನಂತರ, ಅರ್ಧ ಟೀಚಮಚ ಎಣ್ಣೆಯಲ್ಲಿ ಟೊಮ್ಯಾಟೊ ಅನ್ನು ಹುರಿಯಿರಿ. |
| 06:35 | ಇದು ತಣ್ಣಗಾದ ನಂತರ ಟೊಮ್ಯಾಟೊ ಮತ್ತು ಹುರಿದ ಬೀಜಗಳನ್ನು ಮಿಕ್ಸರ್ ನಲ್ಲಿ ರುಬ್ಬಿ. |
| 06:41 | ಬಾಣಲೆಯಲ್ಲಿ 1 ಟೀಚಮಚ ಎಣ್ಣೆಯನ್ನು ಕಾಯಿಸಿ. ಇದರಲ್ಲಿ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. |
| 06:48 | ಈಗ ಟೊಮೆಟೊ ಪೇಸ್ಟ್ ಅನ್ನು ಸೇರಿಸಿ 5 ನಿಮಿಷ ಬೇಯಿಸಿ. ಉಪ್ಪು, ಅರಿಶಿನ, ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕೆದಕಿ. |
| 06:57 | ಈಗ ಸ್ವಲ್ಪ ನೀರು ಮತ್ತು ತರಕಾರಿಗಳನ್ನು ಸೇರಿಸಿ. |
| 07:01 | ತರಕಾರಿಗಳು ಮೃದುವಾಗುವವರೆಗೆ ಮುಚ್ಚಳ ಹಾಕಿ ಬೇಯಿಸಿ. |
| 07:04 | ಬೇಯಿಸಿದ ಮೊಟ್ಟೆಗಳನ್ನು 2 ಭಾಗಗಳಾಗಿ ಕತ್ತರಿಸಿ ಪಲ್ಯಕ್ಕೆ ಸೇರಿಸಿ. ಮತ್ತೆ ಒಂದು ನಿಮಿಷ ಬೇಯಿಸಿ. |
| 07:10 | ಮಿಶ್ರ ತರಕಾರಿ ಹಾಗೂ ಬೇಯಿಸಿದ ಮೊಟ್ಟೆಯ ಕರಿ ಸಿದ್ಧವಾಗಿದೆ. |
| 07:14 | ನಮ್ಮ ಕೊನೆಯ ಪಾಕವಿಧಾನ “ಪಾಲಕ ಹಾಗೂ ಮೀನಿನ ಕರಿ” ಆಗಿದೆ. |
| 07:19 | ಇದನ್ನು ತಯಾರಿಸಲು, ನಮಗೆ:
2 ತುಂಡು ಸಾಲ್ಮನ್ ಮೀನು, |
| 07:22 | 4 - 5 ಪಾಲಕ ಎಲೆಗಳು,
ರುಚಿಗೆ ತಕ್ಕಷ್ಟು ಉಪ್ಪು, |
| 07:26 | 1 ಟೀಚಮಚ ಮೆಣಸಿನ ಪುಡಿ,
½ ಟೀಚಮಚ ಅರಿಶಿನ ಪುಡಿ, |
| 07:31 | 1 ಟೀಚಮಚ ಅಗಸೆ ಬೀಜದ ಪುಡಿ,
1 ಟೀಚಮಚ ತುಪ್ಪ ಅಥವಾ ಎಣ್ಣೆ, |
| 07:36 | 1 ಬೊಗಸೆ ಕೊತ್ತಂಬರಿ ಸೊಪ್ಪು,
1 ಟೀಚಮಚ ನಿಂಬೆ ರಸ, |
| 07:41 | 1 ಹಸಿರು ಮೆಣಸಿನಕಾಯಿ,
1 ಟೀಚಮಚ ಗರಂ ಮಸಾಲ ಪುಡಿ ಇವುಗಳು ಬೇಕು. |
| 07:45 | ಮೀನಿನ ತುಂಡುಗಳನ್ನು ತೊಳೆಯಿರಿ. ಇದಕ್ಕೆ ಸ್ವಲ್ಪ ಉಪ್ಪು ಮತ್ತು ಅರಿಶಿನವನ್ನು ಉಜ್ಜಿ ಬದಿಯಲ್ಲಿರಿಸಿ. |
| 07:52 | ಪಾಲಕವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಒಂದು ಬಾಣಲೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಪಾಲಕವನ್ನು ಸೇರಿಸಿ 5 ನಿಮಿಷ ಬೇಯಿಸಿ. |
| 08:01 | ಈಗ ನೀರನ್ನು ಬಸಿದು ಇದನ್ನು ಆರಲು ಬಿಡಿ. ಪಾಲಕ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ ಮಾಡಿ. |
| 08:09 | ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಇದರಲ್ಲಿ ಮೀನನ್ನು ಬೇಯುವವರೆಗೆ ಹುರಿಯಿರಿ. |
| 08:15 | ಮತ್ತೊಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಅಥವಾ ತುಪ್ಪವನ್ನು ಕಾಯಿಸಿ. |
| 08:22 | ಪಾಲಕ ಪೇಸ್ಟ್ ಮತ್ತು ಸ್ವಲ್ಪ ನೀರನ್ನು ಸೇರಿಸಿ. ಇದನ್ನು 5 ನಿಮಿಷ ಬೇಯಲು ಬಿಡಿ.
ಇದಕ್ಕೆ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. |
| 08:30 | ಈಗ ಹುರಿದ ಮೀನಿನ ತುಂಡುಗಳನ್ನು ಸೇರಿಸಿ ಮತ್ತು ಮೀನಿಗೆ ಮಸಾಲೆ ಹತ್ತುವವರೆಗೆ ಬೇಯಿಸಿ. |
| 08:37 | ಗರಂ ಮಸಾಲ ಮತ್ತು ಅಗಸೆ ಬೀಜದ ಪುಡಿಯನ್ನು ಸೇರಿಸಿ 2 ನಿಮಿಷ ಬೇಯಿಸಿ. |
| 08:42 | ಒಲೆಯನ್ನು ಆರಿಸಿ. ನಿಂಬೆ ರಸ ಸೇರಿಸಿ. ಮೀನು ಮತ್ತು ಪಾಲಕ ಕರಿ ಸಿದ್ಧವಾಗಿದೆ. |
| 08:49 | ಮೇಲಿನ ಎಲ್ಲಾ ಪಾಕವಿಧಾನಗಳು
ಪ್ರೋಟೀನ್, |
| 08:54 | ವಿಟಮಿನ್ B12 |
| 08:57 | ಉತ್ತಮ ಕೊಬ್ಬುಗಳು, |
| 09:00 | ಕಬ್ಬಿಣ, |
| 09:02 | ಫೋಲೇಟ್, |
| 09:04 | ಪೊಟ್ಯಾಸಿಯಮ್, |
| 09:06 | ವಿಟಮಿನ್ A, |
| 09:08 | ವಿಟಮಿನ್ ಡಿ, |
| 09:12 | ಸತುವು, |
| 09:14 | ಮೆಗ್ನೀಸಿಯಮ್ ಇವುಗಳಲ್ಲಿ ಸಮೃದ್ಧವಾಗಿವೆ. |
| 09:17 | ಈ ಪೋಷಕಾಂಶಗಳು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ, |
| 09:22 | ತಾಯಿಯಲ್ಲಿ ಹಾಲಿನ ಉತ್ಪಾದನೆ ಮತ್ತು ಅವಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. |
| 09:27 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಧನ್ಯವಾದಗಳು. |