Difference between revisions of "Health-and-Nutrition/C2/Feeding-expressed-breastmilk-to-babies/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 | <center>Time</center> |<center>Narration</center> |- |00:01 | '''Feeding expressed breastmilk to babies''' ಎಂಬ 'ಸ್ಪೋಕನ್ ಟ್ಯುಟ...") |
Sandhya.np14 (Talk | contribs) |
||
Line 75: | Line 75: | ||
|- | |- | ||
| 02:47 | | 02:47 | ||
− | | ಮಣಿಕಟ್ಟಿನ ಮೇಲೆ ಸ್ವಲ್ಪ ಹಾಲನ್ನು ಹಾಕಿ ಅದು ಎಷ್ಟು ಬೆಚ್ಚಗಾಗಿದೆ ಎಂಬುದನ್ನು ಪರೀಕ್ಷಿಸಿ. | + | | ಮಣಿಕಟ್ಟಿನ ಮೇಲೆ ಸ್ವಲ್ಪ ಹಾಲನ್ನು ಹಾಕಿ ಅದು ಎಷ್ಟು ಬೆಚ್ಚಗಾಗಿದೆ ಎಂಬುದನ್ನು ಪರೀಕ್ಷಿಸಿ. ಅದು ಬೆಚ್ಚಗಾಗಿದ್ದರೆ ಸಾಕು. |
− | ಅದು ಬೆಚ್ಚಗಾಗಿದ್ದರೆ ಸಾಕು. | + | |
|- | |- | ||
| 02:56 | | 02:56 | ||
Line 100: | Line 99: | ||
|- | |- | ||
| 03:49 | | 03:49 | ||
− | | ಮೊದಲು, ಪೋಷಕಳು ಆಯ್ದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು. | + | | ಮೊದಲು, ಪೋಷಕಳು ಆಯ್ದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು. ನಂತರ ಅದನ್ನು ಗಾಳಿಯಲ್ಲಿ ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಚೆನ್ನಾಗಿ ಒಣಗಿಸಬೇಕು. |
− | ನಂತರ ಅದನ್ನು ಗಾಳಿಯಲ್ಲಿ ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಚೆನ್ನಾಗಿ ಒಣಗಿಸಬೇಕು. | + | |
|- | |- | ||
| 04:02 | | 04:02 | ||
Line 221: | Line 219: | ||
|- | |- | ||
| 08:32 | | 08:32 | ||
− | | ನೆನಪಿಡಿ: | + | | ನೆನಪಿಡಿ: ಕೈಗಳು ಮತ್ತು ಪಾತ್ರೆಗಳನ್ನು ಶುಚಿಯಾಗಿಡುವುದು, ಮಗುವಿಗೆ ಬೇಕಾದಾಗ ಹಾಲು ಕುಡಿಸುವುದು ಮತ್ತು ಸರಿಯಾಗಿ ಸಂಗ್ರಹಿಸುವುದರ ಮೂಲಕ ಎದೆಹಾಲನ್ನು ಸುರಕ್ಷಿತವಾಗಿರಿಸಿ. |
− | ಕೈಗಳು ಮತ್ತು ಪಾತ್ರೆಗಳನ್ನು ಶುಚಿಯಾಗಿಡುವುದು, | + | |
− | ಮಗುವಿಗೆ ಬೇಕಾದಾಗ ಹಾಲು ಕುಡಿಸುವುದು ಮತ್ತು ಸರಿಯಾಗಿ ಸಂಗ್ರಹಿಸುವುದರ ಮೂಲಕ ಎದೆಹಾಲನ್ನು ಸುರಕ್ಷಿತವಾಗಿರಿಸಿ. | + | |
|- | |- | ||
| 08:44 | | 08:44 | ||
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
− | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್. | + | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್. |
+ | |||
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Revision as of 11:13, 23 August 2019
|
|
00:01 | Feeding expressed breastmilk to babies ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ಸಂಗ್ರಹಿಸಿದ ಎದೆಹಾಲನ್ನು ಮಗುವಿಗೆ ಕುಡಿಸಲು ಸಿದ್ಧಪಡಿಸುವುದು |
00:14 | ಮತ್ತು ಅದನ್ನು ಹೇಗೆ ಕುಡಿಸುವುದು ಇವುಗಳ ಬಗ್ಗೆ ಕಲಿಯುವೆವು. |
00:19 | ಎದೆಹಾಲನ್ನು ಹೊರಗೆ ತೆಗೆಯುವುದರಿಂದ ಮಗು ಮತ್ತು ತಾಯಿಗೆ ಅನೇಕ ಪ್ರಯೋಜನಗಳಿವೆ. |
00:26 | ಎದೆಹಾಲನ್ನು ಹೊರತೆಗೆದು ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದರ ಬಗ್ಗೆ ಬೇರೆ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗಿದೆ. |
00:34 | ಈಗ, ಸಂಗ್ರಹಿಸಿದ ಎದೆಹಾಲನ್ನು ಮಗುವಿಗೆ ಕುಡಿಸಲು ಹೇಗೆ ಅಣಿಗೊಳಿಸಬೇಕೆಂದು ಕಲಿಯೋಣ. |
00:42 | ಎದೆಹಾಲನ್ನು ನಿರ್ವಹಿಸುವ ಮೊದಲು, ಪೋಷಕರು ಸಾಬೂನು ಮತ್ತು ನೀರಿನಿಂದ ತಮ್ಮ ಕೈಗಳನ್ನು ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು. |
00:52 | ನೆನಪಿಡಿ, ಎಲ್ಲಕ್ಕಿಂತ ಮೊದಲು ಸಂಗ್ರಹಿಸಿದ ಎದೆಹಾಲನ್ನು ಮೊದಲು ಬಳಸಬೇಕು. |
00:59 | ಘನೀಕರಿಸಿದ ಎದೆಹಾಲನ್ನು ಬಳಸುವಾಗ, ಅದನ್ನು ರಾತ್ರಿಯಿಡೀ ಫ್ರಿಜ್‌ನ ಎಲ್ಲಕ್ಕಿಂತ ಕೆಳಗಿನ ಶೆಲ್ಫ್ ನಲ್ಲಿರಿಸಿ ಡಿಫ್ರಾಸ್ಟ್ ಮಾಡುವುದು ಒಳ್ಳೆಯದು. |
01:08 | ಮತ್ತು, ಈ ಡಿಫ್ರಾಸ್ಟ್ ಮಾಡಿದ ಹಾಲನ್ನು ಮುಂದಿನ 24 ಗಂಟೆಗಳ ಒಳಗೆ ಬಳಸಬೇಕು. |
01:15 | ಆದರೆ ಘನೀಕರಿಸಿದ ಎದೆಹಾಲು ತ್ವರಿತವಾಗಿ ಅಗತ್ಯವಿದ್ದರೆ, ಮೊದಲು ಅದನ್ನು ಫ್ರಿಜ್‌ನ ಹೊರಗೆ ಒಂದು ತಣ್ಣೀರಿನ ಪಾತ್ರೆಯಲ್ಲಿ ಇರಿಸಿ. |
01:25 | ಆನಂತರ ಅದನ್ನು ಬೆಚ್ಚಗಿನ ನೀರಿನ ಪಾತ್ರೆಯಲ್ಲಿ ಇರಿಸಿ ಡಿಫ್ರಾಸ್ಟ್ ಮಾಡಿ. |
01:31 | ಬೆಚ್ಚಗಿನ ನೀರಿನಲ್ಲಿಟ್ಟು ಡಿಫ್ರಾಸ್ಟ್ ಮಾಡುವಾಗ, ಎದೆಹಾಲು ಇರುವ ಪಾತ್ರೆಯನ್ನು ಒಮ್ಮೊಮ್ಮೆ ನಿಧಾನವಾಗಿ ಅಲ್ಲಾಡಿಸಿ. |
01:38 | ಅದನ್ನು ತೀವ್ರವಾಗಿ ಮತ್ತು ನಿರಂತರವಾಗಿ ಅಲ್ಲಾಡಿಸಬೇಡಿ. |
01:42 | ಬಳಸುವ ಮುನ್ನ, ಎದೆಹಾಲು ಇರುವ ಪಾತ್ರೆಯ ಹೊರಭಾಗವನ್ನು ಶುಚಿಯಾದ ಬಟ್ಟೆಯಿಂದ ಒಣಗಿಸಿ. |
01:48 | ಈ ಡಿಫ್ರಾಸ್ಟ್ ಮಾಡಿದ ಎದೆಹಾಲನ್ನು 2 ಗಂಟೆಗಳ ಒಳಗೆ ಬಳಸಿ ಮತ್ತು ಬಳಕೆಯಾಗದ ಹಾಲನ್ನು ಎಸೆದುಬಿಡಿ. |
01:56 | ಡಿಫ್ರಾಸ್ಟ್ ಮಾಡಿದ ಎದೆಹಾಲು, ತಾಜಾ ಎದೆಹಾಲಿಗಿಂತ ಭಿನ್ನವಾದ ವಾಸನೆ ಮತ್ತು ರುಚಿಯನ್ನು ಹೊಂದಿರಲು ಸಾಧ್ಯವಿದೆ. |
02:03 | ಮಗು ಅದನ್ನು ಕುಡಿಯಲು ಸಮ್ಮತಿಸಿದರೆ ಏನೂ ಸಮಸ್ಯೆಯಿಲ್ಲ. |
02:08 | ಮಗುವಿಗೆ ಈ ಎದೆಹಾಲನ್ನು ಕುಡಿಸುವ ಮೊದಲು, ಪೋಷಕಳು ಯಾವಾಗಲೂ ಅದರ ವಾಸನೆಯನ್ನು ನೋಡಬೇಕು. |
02:16 | ಹಾಲಿಗೆ ಹುಳಿ ವಾಸನೆ ಇದ್ದರೆ ಅದನ್ನು ಬಳಸಬಾರದು. |
02:20 | ದಯವಿಟ್ಟು ನೆನಪಿಡಿ - ಎದೆಹಾಲನ್ನು ಸಂಗ್ರಹಿಸಿದಾಗ, ಹಾಲಿನಿಂದ ಕೆನೆ ಬೇರೆಯಾಗಿ ಮೇಲಕ್ಕೆ ಬರುತ್ತದೆ. |
02:28 | ಇದು ಸಹಜವಾಗಿದೆ. ಬಳಸುವ ಮೊದಲು ಕೆನೆಯನ್ನು ಮತ್ತೆ ಹಾಲಿಗೆ ಬೆರೆಸಲು ನಿಧಾನವಾಗಿ ಅಲ್ಲಾಡಿಸಿ. |
02:36 | ಮಗುವಿಗೆ ಕುಡಿಸುವ ಮೊದಲು ಎದೆಹಾಲನ್ನು ಬೆಚ್ಚಗಾಗಿಸಲು, ಎದೆಹಾಲು ಇರುವ ಕಂಟೇನರ್ ಅನ್ನು 20 ರಿಂದ 30 ನಿಮಿಷಗಳ ಕಾಲ ಬೆಚ್ಚಗಿನ ನೀರಿರುವ ಪಾತ್ರೆಯಲ್ಲಿ ಇರಿಸಿ. |
02:47 | ಮಣಿಕಟ್ಟಿನ ಮೇಲೆ ಸ್ವಲ್ಪ ಹಾಲನ್ನು ಹಾಕಿ ಅದು ಎಷ್ಟು ಬೆಚ್ಚಗಾಗಿದೆ ಎಂಬುದನ್ನು ಪರೀಕ್ಷಿಸಿ. ಅದು ಬೆಚ್ಚಗಾಗಿದ್ದರೆ ಸಾಕು. |
02:56 | ಎದೆಹಾಲನ್ನು ಬೆಚ್ಚಗಾಗಿಸಲು ಬಿಸಿನೀರನ್ನು ಬಳಸಬೇಡಿ. ಸಂಗ್ರಹಿಸಿದ ಎದೆ ಹಾಲನ್ನು ಫ್ರಿಜ್‌ನಿಂದ ತೆಗೆದು ಹಾಗೇ ಬಳಸಲು ಪ್ರಯತ್ನಿಸಿ. |
03:05 | ಅತಿಯಾಗಿ ಬಿಸಿಯಾಗುವ ಅಥವಾ ಸುಟ್ಟುಹೋಗುವುದನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. |
03:12 | ಎದೆಹಾಲನ್ನು ನೇರವಾಗಿ ಒಲೆಯ ಮೇಲೆ ಅಥವಾ ಮೈಕ್ರೊವೇವ್‌ನಲ್ಲಿ ಇರಿಸಿ ಬಿಸಿ ಮಾಡಬೇಡಿ. |
03:19 | ನೇರವಾದ ಶಾಖವು ಎದೆಹಾಲಿನಲ್ಲಿರುವ ಅನೇಕ ಸೋಂಕು-ನಿವಾರಕಗಳನ್ನು ನಾಶಪಡಿಸುತ್ತದೆ. |
03:27 | ಎದೆಹಾಲು ಸಿದ್ಧವಾದಾಗ ಮಗುವಿಗೆ ಅದನ್ನು ಕುಡಿಸಿ. |
03:32 | ಇದಕ್ಕಾಗಿ ಪಲಡೈ, ಸಣ್ಣ ಕಪ್, ಚಮಚ ಅಥವಾ ನಿಫ್ಟಿ ಕಪ್ ಇವುಗಳನ್ನು ಬಳಸಬಹುದು. |
03:42 | ಇವುಗಳಲ್ಲಿ, ಮಗುವಿಗೆ ಹಾಲುಣಿಸಲು ಚಮಚ ಅಥವಾ ಕಪ್ ಅನ್ನು ಬಳಸುವುದು ಯೋಗ್ಯವಾಗಿದೆ. |
03:49 | ಮೊದಲು, ಪೋಷಕಳು ಆಯ್ದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು. ನಂತರ ಅದನ್ನು ಗಾಳಿಯಲ್ಲಿ ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಚೆನ್ನಾಗಿ ಒಣಗಿಸಬೇಕು. |
04:02 | ನಂತರ, ಪೋಷಕರು ತಮ್ಮ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. |
04:10 | ಆಯ್ದ ಪಾತ್ರೆಯಲ್ಲಿ, ಅರ್ಧದಷ್ಟು ಅಥವಾ 2/3 ನಷ್ಟು (two 3rd) ಎದೆಹಾಲನ್ನು ತುಂಬಿಸಬೇಕು. |
04:16 | ನಂತರ, ಅವರು ಮಗುವನ್ನು ತಮ್ಮ ತೊಡೆಯ ಮೇಲೆ ಹೆಚ್ಚು ಕಡಿಮೆ ನಿಂತಿರುವ ಹಾಗೆ ಹಿಡಿದುಕೊಳ್ಳಬೇಕು. |
04:23 | ಅವರ ಕೈ, ಮಗುವಿನ ತಲೆ ಮತ್ತು ಕುತ್ತಿಗೆಯನ್ನು ಆಧರಿಸಿ ಹಿಡಿದಿರಬೇಕು. |
04:28 | ಮಗುವಿಗೆ ಹಾಲುಣಿಸಲು ಪಲಡೈ ಅನ್ನು ಬಳಸುತ್ತಿದ್ದರೆ, ಪಲಡೈನ ತುದಿಯನ್ನು ಮಗುವಿನ ಬಾಯಿಯ ಮೂಲೆಯೊಳಗೆ ಇಡಬೇಕು. |
04:39 | ಇದನ್ನು ಮಗುವಿನ ತುಟಿಗಳ ನಡುವೆ ಹಗುರವಾಗಿ ಹಿಡಿದಿರಬೇಕು. |
04:45 | ಪಲಡೈನ ತುದಿ, ಮಗುವಿನ ಮೇಲಿನ ತುಟಿಯನ್ನು ಲಘುವಾಗಿ ಸ್ಪರ್ಶಿಸಬೇಕು. |
04:50 | ಈ ಸ್ಥಾನದಲ್ಲಿ, ಹಾಲು ಪಲಡೈನ ಕೊಕ್ಕಿನ ಅಂಚಿನಲ್ಲಿರಬೇಕು. |
04:58 | ಮಗು ಹಾಲನ್ನು ಹೀರುತ್ತಿದ್ದಂತೆ, ಪೋಷಕಳು ಹಾಲನ್ನು ಅಂಚಿನಲ್ಲಿ ಇರಿಸಲು, ಪಲಡೈ ಅನ್ನು ಸ್ವಲ್ಪ ಓರೆಯಾಗಿಸಬೇಕು. |
05:07 | ಮಗುವಿಗೆ ಹಾಲು ಕುಡಿಸಲು ಪೋಷಕಳು ಸಣ್ಣ ಕಪ್ ಅನ್ನು ಬಳಸುತ್ತಿದ್ದರೆ, ಅವಳು ಮಗುವಿನ ತುಟಿಗಳ ನಡುವೆ ಕಪ್ ಅನ್ನು ಲಘುವಾಗಿ ಹಿಡಿದಿರಬೇಕು. |
05:17 | ಕಪ್ ನ ಅಂಚು ಮಗುವಿನ ಮೇಲಿನ ತುಟಿಯನ್ನು ಹಗುರವಾಗಿ ಸ್ಪರ್ಶಿಸಬೇಕು. |
05:22 | ಹಾಲು ಕಪ್ ನ ಮೇಲ್ತುದಿಯನ್ನು ಮುಟ್ಟುವ ತನಕ ಅವರು ಕಪ್ ಅನ್ನು ಸ್ವಲ್ಪ ಓರೆಯಾಗಿಸಬೇಕು. |
05:28 | ಇದರಿಂದ ಮಗುವಿಗೆ ಕಪ್‌ನ ಅಂಚಿನಿಂದ ಹಾಲನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ. |
05:33 | ಮಗುವಿಗೆ ಹಾಲು ಕುಡಿಸಲು ಪೋಷಕರು ಚಮಚವನ್ನು ಬಳಸುತ್ತಿದ್ದರೆ, ಅವರು ಚಮಚವನ್ನು ಮಗುವಿನ ತುಟಿಗಳ ನಡುವೆ ಹಿಡಿಯಬೇಕು. |
05:42 | ಚಮಚದ ಅಂಚು ಮಗುವಿನ ಮೇಲಿನ ತುಟಿಯನ್ನು ಹಗುರವಾಗಿ ಸ್ಪರ್ಶಿಸಬೇಕು. |
05:47 | ನಂತರ, ಹಾಲು ಚಮಚದ ತುದಿಯಲ್ಲಿ ಬರುವ ತನಕ ಅವರು ಚಮಚವನ್ನು ಸ್ವಲ್ಪ ಓರೆಯಾಗಿಸಬೇಕು. |
05:54 | ಹುಟ್ಟಿದ ನಂತರ ಮೊದಲ ಕೆಲವು ದಿನಗಳವರೆಗೆ ಚಮಚದಿಂದ ಹಾಲು ಕುಡಿಸುವುದು ಒಳ್ಳೆಯದು. |
05:59 | ಏಕೆಂದರೆ, ಈ ದಿನಗಳಲ್ಲಿ ಹಾಲು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬೇಕಾಗುತ್ತದೆ. |
06:07 | ಮಗುವಿಗೆ ಹಾಲು ಕುಡಿಸಲು ಪೋಷಕರು ನಿಫ್ಟಿ ಕಪ್ ಅನ್ನು ಬಳಸುತ್ತಿದ್ದರೆ, ಅವರು ನಿಫ್ಟಿ ಕಪ್‌ನ ಸಣ್ಣ reservoir ಅನ್ನು ಮಗುವಿನ ಬಾಯಿಯೊಳಗೆ ಇಡಬೇಕು. |
06:19 | ಮಗು ಹಾಲನ್ನು ಕುಡಿಯುತ್ತಿದ್ದಂತೆ, ಕಪ್ ಅನ್ನು ಸ್ವಲ್ಪ ಮೇಲಕ್ಕೆ ಬಾಗಿಸಬೇಕು. ಹೀಗೆ ಮಾಡಿದಾಗ, reservoir ಖಾಲಿಯಾದ ಹಾಗೆಲ್ಲ ಹಾಲು ಅಲ್ಲಿಗೆ ಬರುತ್ತಿರುತ್ತದೆ. |
06:31 | ಹೊರತೆಗೆದ ಎದೆಹಾಲನ್ನು ಮಗುವಿಗೆ ಕುಡಿಸುವಾಗ, ಮಗುವಿನ ಬಾಯಿಯಲ್ಲಿ ಹಾಲನ್ನು ಎಂದಿಗೂ ಸುರಿಯಬೇಡಿ. |
06:38 | ಇದು ಮಗುವಿಗೆ ಉಸಿರುಗಟ್ಟುವಂತೆ ಮಾಡಬಹುದು. |
06:40 | ಬದಲಾಗಿ, ಹಾಲನ್ನು ಅಂಚಿನ ಹತ್ತಿರ ಇರಿಸಿ ಮತ್ತು ಕುಡಿಸುವ ಪೂರ್ಣ ಅವಧಿಯಲ್ಲಿ ಅದನ್ನು ಹಾಗೇ ಇಡಿ. |
06:47 | ಮಗುವು ಪೂರ್ತಿ ಎಚ್ಚರವಾಗಿದೆ ಮತ್ತು ಹಾಲು ಕುಡಿಯಲು ಆಸಕ್ತಿ ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ. |
06:54 | ಅಗತ್ಯವಿದ್ದರೆ, ಮಗು ಹಾಲು ಕುಡಿಸುವವರ ಕೈಯಿಂದ ಕಪ್ ಅನ್ನು ನೂಕದಂತೆ ಅವಳನ್ನು ಸುತ್ತಿಡಿ. |
07:03 | ಯಾವಾಗಲೂ ಮಗುವಿಗೆ ತನ್ನದೇ ಆದ ಗತಿಯಲ್ಲಿ ಹಾಲು ಕುಡಿಯಲು ಬಿಡಿ. |
07:08 | ಮಗು ಸಾಕಷ್ಟು ಹಾಲು ಕುಡಿದಿದೆ ಎಂದು ತೋರಿಸುವ ಚಿಹ್ನೆಗಳಾದ - |
07:13 | ತನ್ನ ಕೈಗಳನ್ನು ಎತ್ತಿ ಹಿಡಿಯುವುದು, |
07:16 | ತೂಕಡಿಸುವುದು ಅಥವಾ ಬಾಯಿಯನ್ನು ಮುಚ್ಚುವುದು ಇವುಗಳನ್ನು ಗಮನಿಸುತ್ತಿರಿ. |
07:21 | ನೆನಪಿಡಿ, ಮಗುವಿನ ಕೆಳತುಟಿಯ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ. |
07:28 | ಯಾವಾಗಲೂ ಕಪ್ ನ ಅಂಚು ಮಗುವಿನ ಮೇಲಿನ ತುಟಿಯನ್ನು ಲಘುವಾಗಿ ಸ್ಪರ್ಶಿಸುವಂತೆ ಇರಬೇಕು. |
07:34 | ಮಗುವಿನ ಬಾಯಿಯಲ್ಲಿ ಕಪ್, ಪಲಡೈ ಅಥವಾ ಚಮಚವನ್ನು ಬಹಳ ಒಳಗೆ ಇಡಬೇಡಿ. |
07:41 | ಅಡ್ಡ ಮಲಗಿರುವಾಗ ಮಗುವಿಗೆ ಎಂದಿಗೂ ಹಾಲು ಕುಡಿಸಬೇಡಿ. |
07:45 | ಹೊರತೆಗೆದ ಎದೆಹಾಲನ್ನು ಮಗುವಿಗೆ ಕುಡಿಸಲು ಫೀಡಿಂಗ್ ಬಾಟಲ್ ಅನ್ನು ಬಳಸಬೇಡಿ. |
07:51 | ಮಗುವಿಗೆ ಹಾಲು ಕುಡಿಸಿದ ನಂತರ ಕಪ್, ಪಲಡೈ ಅಥವಾ ಚಮಚವನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ಮತ್ತು, ಅದು ಪೂರ್ತಿಯಾಗಿ ಒಣಗಲು ಬಿಡಿ. |
08:04 | ಹೊರತೆಗೆದ ಎದೆಹಾಲನ್ನು ಕೆಲವರು ಕುಡಿಸಿದಾಗ, ಆರಂಭದಲ್ಲಿ ಕೆಲವು ಶಿಶುಗಳು ಕುಡಿಯಲು ಇಷ್ಟಪಡುವುದಿಲ್ಲ. |
08:12 | ಅದನ್ನೇ ಬೇರೊಬ್ಬರು ಕುಡಿಸಿದಾಗ ಅವರು ಈ ಹಾಲನ್ನು ಕುಡಿಯಬಹುದು. |
08:17 | ಹೊರತೆಗೆದ ಹಾಲನ್ನು ಕುಡಿಯಲು ಮಗು ನಿರಾಕರಿಸಿದರೆ, ಚಿಂತಿಸದಿರಿ. |
08:22 | ತಾಯಿಯು ಕೆಲಸದಿಂದ ಹಿಂದಿರುಗಿದ ನಂತರ, ಮಗು ಹೆಚ್ಚು ಸಲ ಅಥವಾ ಹೆಚ್ಚು ಸಮಯದವರೆಗೆ ಹಾಲು ಕುಡಿಯುತ್ತದೆ. |
08:32 | ನೆನಪಿಡಿ: ಕೈಗಳು ಮತ್ತು ಪಾತ್ರೆಗಳನ್ನು ಶುಚಿಯಾಗಿಡುವುದು, ಮಗುವಿಗೆ ಬೇಕಾದಾಗ ಹಾಲು ಕುಡಿಸುವುದು ಮತ್ತು ಸರಿಯಾಗಿ ಸಂಗ್ರಹಿಸುವುದರ ಮೂಲಕ ಎದೆಹಾಲನ್ನು ಸುರಕ್ಷಿತವಾಗಿರಿಸಿ. |
08:44 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |